ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)
- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
- ಗಣೇಶನ ಕೈಯಲ್ಲಿಯ ಲಾಡು - ಸೆಪ್ಟೆಂಬರ್ 22, 2024
- ನೋ ಪಾರ್ಕಿಂಗ್ - ಆಗಸ್ಟ್ 29, 2024
ನಿನ್ನ ಸುಂದರ ಮುಖದ ಮೇಲೆ
ಎಂದೂ ಕಾಣುತ್ತಿದ್ದ
ಅಂದದ ನಗೆ ಇನ್ನು ನೆನಪೇ
ಎಂಥ ನೀರಸ ಘಳಿಗೆಗೂ
ಹುರುಪ ತುಂಬಿಸಿ ಸಜೀವಗೊಳಿಸುತ್ತಿದ್ದ
ಅಂದದ ನಗೆ ಇನ್ನು ನೆನಪೇ
ಒಬ್ಬಳೇ ಇರಲು ಬೇಸರವೆನಿಸಿ
ಗುಂಪುಕಟ್ಟಿ ನಕ್ಕು ನಲಿಸುತ್ತಿದ್ದ
ಅಂದದ ನಗೆ ಇನ್ನು ನೆನಪೇ
ಜೀವನದ ಕಹಿಯನ್ನು ಗುಟುಕುಹಾಕಿ
ಮುಗುಳ್ನಗೆಯ ಮಾತ್ರ ತೋರುತ್ತಿದ್ದ
ಅಂದದ ನಗೆ ಇನ್ನು ನೆನಪೇ
ಕಳೆಗಟ್ಟಿದ ಸಮಾಜದ ಕೆಳ ಜನರಿಗೆ
ಅಳಿಲು ಸೇವೆ ಮಾಡುತ್ತ ತೃಪ್ತಿ ಸೂಸಿದ
ಅಂದದ ನಗೆ ಇನ್ನು ನೆನಪೇ
ಅದೇನು ಆತರವೆನಿಸತೋ ಮತ್ತೆ
ಅಲ್ಲಿಯವರಿಗೂ ಹಂಚಲು ಕೊಂಡುಹೋದ
ಅಂದದ ನಗೆ ಇನ್ನು ನೆನಪೇ!
ಮತ್ತೆ ಮತ್ತೆ ನೆನೆಯಲು ನಮಗೆ
ಹಲವಾರು ಕ್ಷಣಗಳನ್ನು ಬಿಟ್ಟು ಮರೆಯಾದ
ಅಂದದ ನಗೆ ಇನ್ನು ನೆನಪೇ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ