ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)
- ತೆಲುಗು ಸಾಹಿತ್ಯ ನಡೆದು ಬಂದ ದಾರಿ - ಮಾರ್ಚ್ 17, 2024
- ಅಳಿವಿನಂಚಿನಲ್ಲಿರುವ ಮೀಟರ್ ಗಳು - ಸೆಪ್ಟೆಂಬರ್ 24, 2023
- ನಮ್ಮ ಮೊದಲನೆಯ ಅಮೆರಿಕ ಪ್ರವಾಸ - ಮಾರ್ಚ್ 26, 2023
ನಿನ್ನ ಸುಂದರ ಮುಖದ ಮೇಲೆ
ಎಂದೂ ಕಾಣುತ್ತಿದ್ದ
ಅಂದದ ನಗೆ ಇನ್ನು ನೆನಪೇ
ಎಂಥ ನೀರಸ ಘಳಿಗೆಗೂ
ಹುರುಪ ತುಂಬಿಸಿ ಸಜೀವಗೊಳಿಸುತ್ತಿದ್ದ
ಅಂದದ ನಗೆ ಇನ್ನು ನೆನಪೇ
ಒಬ್ಬಳೇ ಇರಲು ಬೇಸರವೆನಿಸಿ
ಗುಂಪುಕಟ್ಟಿ ನಕ್ಕು ನಲಿಸುತ್ತಿದ್ದ
ಅಂದದ ನಗೆ ಇನ್ನು ನೆನಪೇ
ಜೀವನದ ಕಹಿಯನ್ನು ಗುಟುಕುಹಾಕಿ
ಮುಗುಳ್ನಗೆಯ ಮಾತ್ರ ತೋರುತ್ತಿದ್ದ
ಅಂದದ ನಗೆ ಇನ್ನು ನೆನಪೇ
ಕಳೆಗಟ್ಟಿದ ಸಮಾಜದ ಕೆಳ ಜನರಿಗೆ
ಅಳಿಲು ಸೇವೆ ಮಾಡುತ್ತ ತೃಪ್ತಿ ಸೂಸಿದ
ಅಂದದ ನಗೆ ಇನ್ನು ನೆನಪೇ
ಅದೇನು ಆತರವೆನಿಸತೋ ಮತ್ತೆ
ಅಲ್ಲಿಯವರಿಗೂ ಹಂಚಲು ಕೊಂಡುಹೋದ
ಅಂದದ ನಗೆ ಇನ್ನು ನೆನಪೇ!
ಮತ್ತೆ ಮತ್ತೆ ನೆನೆಯಲು ನಮಗೆ
ಹಲವಾರು ಕ್ಷಣಗಳನ್ನು ಬಿಟ್ಟು ಮರೆಯಾದ
ಅಂದದ ನಗೆ ಇನ್ನು ನೆನಪೇ
ಹೆಚ್ಚಿನ ಬರಹಗಳಿಗಾಗಿ
ರೆಕ್ಕೆ ಇದ್ದರೆ ಚೆನ್ನಾಗಿತ್ತು
ಇದು ಅದಲ್ಲ
ರಾಧೇಭಾವ