ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನೂರು ನೂರು ತರಹ

ಡಾ. ಅಜಿತ್ ಹರಿಶಿ
ಇತ್ತೀಚಿನ ಬರಹಗಳು: ಡಾ. ಅಜಿತ್ ಹರಿಶಿ (ಎಲ್ಲವನ್ನು ಓದಿ)

ಬಾ ಬೆಳಗ ತೋರುವೆನಿಲ್ಲಿ

ಮುಂಜಾವಿನ ಈ ಹನಿಯ ನೋಡು
– ಭಾರ ಪರ್ಣದಲಿ
ನಭದಲಿ ಎಲೆಗೆ ಕಿರುಬೆರಳು ಸೋಕಿ
ಕಂಪಿಸಿ ತುದಿಗುಂಟ ಜಾರಿ
ಬಿಂದುವಾಗಿ ಬುವಿಯ ಮೇಲೆ ನಿಂದ
ನನ್ನಧರದ ಮೇಲೆ ಪ್ರೀತಿ ಹನಿದು ಬಿಂದುವಾಗಿ
ಕರಗಿ ನೀರಾಗಿ
ಎದೆಯೊಳಗಿಳಿದು ವಿರಹವಾಗಿ ಧರಿತ್ರಿಯೊಳಗಿಳಿವಾಗ​
ಅಂತಿಮವೆಂಬಂತೆ ಕೈಬೀಸಿದ್ದ
ನೋಡಲು ಬಂದೆ
ದಿನಕರನ ಅಸ್ತದ ಸಮಯದಿ
ಸಂಧ್ಯೆ

ರಾಧೆಯೊಡಲ ಪ್ರೇಮ ಸಾಗರದದಿನಾರು
ಸಾವಿರ ತೆರೆಗಳು

ನವನೀತ ಚೋರ ವಿರಹದುತ್ಪಾದಕ
ಕಾಪಿಡುವ ವಿರಹದಲಿ
ಪ್ರಿಯರ ಸುಖವ ಕೊನೆತನಕ