ರಾಧಿಕಾ ವಿಟ್ಲ
ಬರವಣಿಗೆ ಮತ್ತು ಛಾಯಾಗ್ರಹಣ ಎಂಬೆರಡು ಪುಟ್ಟ ಪುಟ್ಟ ಖುಷಿಗಳನ್ನು ಬೆನ್ನಿಗೆ ಕಟ್ಟಿಕೊಂಡು ತಿರುಗಾಡುವ ಅಲೆಮಾರಿ. ಹೋದ ಜಾಗವಷ್ಟೇ ಅಲ್ಲ, ಆ ಜಾಗದ ಭಾವವೂ, ಬದುಕೂ ಫ್ರೇಮಿನೊಳಗೆ ಇಳಿಸಿಕೊಳ್ಳುವ ಮೋಹದಲ್ಲಿ ಕ್ಯಾಮರಾ ಹಿಡಿದು ಸದಾ ಹುಡುಕಾಟದಲ್ಲಿರುವ ತಿರುಗಾಡಿ. ಸದ್ಯ ದೆಹಲಿ ವಾಸಿ.
ತ್ರಿಕೋನ
Photograph by K V Praveen Iyer
ಕೆ ವಿ ಪ್ರವೀಣ್ ಅಯ್ಯರ್
ಇವರ ಛಾಯಾಗ್ರಹಣದ ಹವ್ಯಾಸ ಶುರುವಾಗಿದ್ದು ಒಂದು ಸಣ್ಣ ಕ್ಯಾಮರಾದಿಂದ. ೨೦೧೩ರಲ್ಲಿ ಇವರು ತಮ್ಮ ಮೊದಲ ಡಿ ಎಸ್ ಎಲ್ ಆರ್ ನಿಕಾನ್ ಡಿ೫೧೦೦ (Nikon D5100) ಖರೀದಿಸಿದರು. ಪಕ್ಷಿ ಮತ್ತು ಇತರೆ ಛಾಯಾಚಿತ್ರಗ್ರಹಣ ಇವರ ಮೆಚ್ಚಿನ ಹವ್ಯಾಸ ಹಾಗೂ ವೃತ್ತಿಯಲ್ಲಿ ಇವರು ೨೦೦೫ರಿಂದ ಹೆಚ್.ಎ.ಎಲ್ ಉದ್ಯೋಗಿ.
ದಿನದ ಓಟದ ಅಭ್ಯಾಸ ಮುಗಿಸಿ ಸಂಜೆಯಾಗುತ್ತಿದ್ದಂತೆಯೇ ಕತಾರಿನ ಅಲ್ ಶಹಾನಿಯಾ ಕ್ಯಾಮೆಲ್ ರೇಸ್ ಟ್ರ್ಯಾಕ್ ನಿಂದ ತನ್ನ ಬಿಡಾರದತ್ತ ಒಂಟೆಗಳೊಡನೆ ಮರಳುತ್ತಿರುವ ಒಂಟೆ ಸವಾರ
Shahaniya, camels, sunset, Qatar. Photograph by Chaitra Arjunpuri
ಚೈತ್ರಾ ಅರ್ಜುನಪುರಿ
ಮಂಡ್ಯ ಜಿಲ್ಲೆ ಮದ್ದೂರು ಮೂಲ, ಸದ್ಯಕ್ಕೆ ದೋಹಾ-ಕತಾರ್ ನಿವಾಸಿ. ಬರವಣಿಗೆಯ ನಡುವೆ ಛಾಯಾಗ್ರಹಣ, ಅದರಲ್ಲೂ ನೈಟ್ ಫೋಟೋಗ್ರಫಿಯ ಹುಚ್ಚು ಅಂಟಿಸಿಕೊಂಡಿದ್ದಾರೆ. ಇವರು ತೆಗೆದ ಕೆಲವು ಚಿತ್ರಗಳು ನ್ಯಾಷನಲ್ ಜಿಯೋಗ್ರಾಫಿಕ್, ನ್ಯಾಟ್ ಜಿಯೋ ಟ್ರಾವೆಲ್ಲರ್, ಟ್ಯಾಗ್ರೀ ಮ್ಯಾಗಜೀನ್, ಮರಿಕಾ ಮ್ಯಾಗಜೀನ್ ಕಿಡ್ಸ್ ಮುಂತಾದೆಡೆ ಪ್ರಕಟವಾಗಿವೆ.
ದಿವ್ಯತೆಯ ತೆಪ್ಪವೊಂದು ತೂರಿಬಂದಂತೆ…
Photograph by Gowreesh Kapani
ಗೌರೀಶ್ ಕಪನಿ
೧೯೮೧ರಲ್ಲಿ ಜನನ. ಭಾರತದ ಪ್ರತಿಷ್ಠಿತ ಕಲಾಶಾಲೆಗಳಲ್ಲಿ ಒಂದಾದ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಕಲಾಭ್ಯಾಸ. ೨೦೦೧ರಲ್ಲಿ ಬಿ ಎಫ್ ಎ (BFA) ಪದವಿ. ವಿದ್ಯಾರ್ಥಿ ದಿನದಿಂದಲೇ ಛಾಯಾಗ್ರಹಣದಲ್ಲಿ ಆಸಕ್ತಿ ಮತ್ತು ಕಲಿಕೆ. ವನ್ಯಜೀವಿ ಛಾಯಾಗ್ರಹಣ ಅಚ್ಚು ಮೆಚ್ಚು. ಈಗ ಇನ್ಫೋಸಿಸ್ ಅಲ್ಲಿ ಯುಎಕ್ಸ್ ಆರ್ಕಿಟೆಕ್ಟ್ (UX Architect) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬದುಕ ದಾರಿಯಲ್ಲಿ ಒಂದನ್ನೊಂದು ಆವರಿಸಿ ಬಾಳುವುದೋ, ಅನುಸರಿಸಿ ಬಾಳುವುದೋ, ಇಲ್ಲಾ, ಒಂದನ್ನೊಂದು ಬೇಟೆಯಾಡಿ ಬಾಳುವುದೋ?
Photography by Radhika Hegde
ರಾಧಿಕಾ ಹೆಗಡೆ
ಪ್ರವಾಸವನ್ನು ಬಹಳ ಇಷ್ಟಪಡುವ ಇವರಿಗೆ ಸಾಹಿತ್ಯ, ಸಿನೆಮಾ, ಇತಿಹಾಸದ ಕುರಿತಾಗಿ ವಿಶೇಷ ಆಸಕ್ತಿ. ಛಾಯಾಗ್ರಹಣ ಇವರಿಗೆ ಬದುಕನ್ನು ಇನ್ನಷ್ಟು ಆಪ್ತವಾಗಿಸುವ ಒಂದು ಮಾಧ್ಯಮ.
ನಕ್ಷತ್ರಗಳ ಕಿತ್ತು ಅದಕೆ ಚಿನ್ನವನು ಲೇಪಿಸಿ ಮುಡಿಸಿದ ಹಾಗೆ…
Photograph by Sahana Hegde
ಸಹನಾ ಹೆಗಡೆ
ಫೋಟೋಗ್ರಫಿ, ಇವರಿಗೆ ಇತರ ಎಲ್ಲಾ ಹವ್ಯಾಸಗಳಲ್ಲೇ ಅತೀ ಹೆಚ್ಚು ಮನಸ್ಸಿಗೆ ನೆಮ್ಮದಿ ಕೊಡುವ ಹವ್ಯಾಸ. ಸುತ್ತಲಿನ ಪರಿಸರವನ್ನ ಫ್ರೇಮುಗಳ ಮಧ್ಯ ಸೆರೆಹಿಡಿಯುವುದರಲ್ಲಿ ಕಳೆದು ಹೋಗುವ ಅನುಭವ ವಿವರಿಸಲಾಗದ್ದು ಅಂತ ಹೇಳುವ ಇವರಿಗೆ ಪ್ರಕೃತಿಯ ಛಾಯಾಗ್ರಹಣ default ಆಸಕ್ತಿ ಆದ್ರೂ ವಿವಿಧ ಪ್ರಕಾರದ ವಿಷಯಗಳನ್ನ ಸೆರೆಹಿಡಿಯೋ ಪ್ರಯತ್ನ ನಿರಂತರವಾಗಿ ಜಾರಿಯಲ್ಲಿದೆ.
ನೀಲಿ ಮಿಂಚುಳ್ಳಿ
Photography by M R Bhagavati
ಎಂ ಆರ್ ಭಗವತಿ
ಹವ್ಯಾಸಿ ಬರಹಗಾರ್ತಿ. ಓದುವುದು, ಬರವಣಿಗೆ ಮತ್ತು ಛಾಯಾಗ್ರಹಣ ಇವರ ನೆಚ್ಚಿನ ಹವ್ಯಾಸ. ಬರವಣಿಗೆ ಮತ್ತು ಛಾಯಾಗ್ರಹಣ ಚಿಕ್ಕಂದಿನಿಂದಲೂ ಬೆಳೆದು ಬಂದ ಹವ್ಯಾಸ. ಸುಮಾರು ವರ್ಷಗಳಿಂದ ವನ್ಯಜೀವಿ ಛಾಯಾಗ್ರಹಣ ಮಾಡುತ್ತಿದ್ದಾರೆ.
ಹೆಚ್ಚಿನ ಬರಹಗಳಿಗಾಗಿ
ಸೀಕ್ರೆಟ್ ಸಂಚಿ
ಅಶ್ರುತಗಾನ
ಋಜುಮಾರ್ಗವನರಸಿ,,,,