- ನೋಮ್ ಚಾಮ್ಸ್ಕಿ: ಒಬ್ಬ ರಾಡಿಕಲ್ ಚಿಂತಕನಾದ ಕಥೆ! - ಮೇ 31, 2020
ನೋಮ್ ಚಾಮ್ಸ್ಕಿಯು 1928 ರಲ್ಲಿ ಫಿಲಡೆಲ್ಫಿಯಾದಲ್ಲಿ ಜನಸಿದನು. ಇವನ ತಂದೆ-ತಾಯಿಗಳು ರಷ್ಯಾದಿಂದ ಅಮೇರಿಕಕ್ಕೆ ವಲಸಿ ಬಂದವರು. ನೋಮ್ ಚಾಮ್ಸ್ಕಿಯು ಬೆಳದಿದ್ದೆಲ್ಲ ಪಕ್ಕಾ ಐರಿಶ್ ಮತ್ತು ಜರ್ಮನ್ ಪರಿಸರವಾಗಿತ್ತು. ಇವನನ್ನು ತುಂಬಾ ಎಳೆ ವಯಸ್ಸಿನಲ್ಲಿಯೇ ಡೆವೆಯೈಟ್ ಪ್ರಾಯೋಗಿಕ ಸ್ಕೂಲ್ಗೆ ಸೇರಿಸಿಲಾಗಿತ್ತು. ಈ ಸ್ಕೂಲ್ನಲ್ಲಿ ಮಕ್ಕಳ ಕಲಿಕೆಗಾಗಿಯೇ ಕಲಿಕೆಯನ್ನು ಉತ್ತೇಜಿಸುತ್ತಿದ್ದರು. ನೋಮ್ ಚಾಮ್ಸ್ಕಿಯು ಪ್ರತಿಯೊಂದಕ್ಕೂ ಬಹಳ ಅದ್ಭುತವಾಗಿ ಪ್ರತಿಕ್ರಿಯಿಸುತ್ತಿದ್ದನು. ಇವನು ತನ್ನ ಹತ್ತನೆಯ ವಯಸ್ಸಿನಲ್ಲಿಯೇ ಸ್ಪ್ಯಾನಿಶ್ ಸಿವಿಲ್ ವಾರ್ನ್ನು ಕುರಿತು ಒಂದು ದೀರ್ಘ ಲೇಖನ ಬರೆದು ತನ್ನ ಸ್ಕೂಲ್ ದಿನ ಪತ್ರಿಕೆಯಲ್ಲಿ ಪ್ರಕಟಿಸಿದ್ದನು ಎನ್ನುವುದು ಗಮನಾರ್ಹ.
ಕೆಲವೇ ವರ್ಷಗಳಲ್ಲಿಯೇ ಚಾಮ್ಸ್ಕಿಯು ತನ್ನ ಕಾರ್ಯಕ್ಷೇತ್ರವನ್ನು ರಾಜಕೀಯ ದಿಗಂತಕ್ಕೂ ವಿಸ್ತರಿಸಿಕೊಂಡನು. ಇವನು ನ್ಯೂಯಾರ್ಕಿನ ತನ್ನ ತಾಯಿಯ ಸಂಬಂಧಿಕರ ಮನೆಗೆ ನಿರಂತರವಾಗಿ ಹೋಗುತ್ತಿದ್ದನು. ಇಲ್ಲಿ ಇವನ ಒಬ್ಬ ಅಂಕಲ್ ನ್ಯೂಸ್ ಪೇಪರ್ ಅಂಗಡಿಯನ್ನು ಕಿಯೋಸ್ಕ್ ಬೀದಿಯಲ್ಲಿ ಇಟ್ಟುಕೊಂಡಿದ್ದನು. ಸ್ವದೇಶದಿಂದ ಬಹಿಷ್ಕಾರಕ್ಕೆ ಒಳಗಾಗಿ ಇಲ್ಲಿಗೆ ವಲಸೆ ಬಂದ ಎಲ್ಲ Radical ಚಿಂತಕರು ಹಾಗೂ ಜ್ಯೂಯಿಶ್ ಆನ್ಯಾರ್ಕಿ-ಸಿಂಡಿಕಲಿಸ್ಟ್ರು ನಿತ್ಯವೂ ಇಲ್ಲಿ ಸೇರುತ್ತಿದ್ದರು. ಇವರು “Freie Arbeiter Stimme”ಎನ್ನುವ ಪ್ರಗತಿಪರ ದಿನಪತ್ರಿಕೆಯೊಂದನ್ನು ತರುತ್ತಿದ್ದರು. ಸುಪ್ರಸಿದ್ಧ ಆನ್ಯಾರ್ಕಿಸ್ಟ್ ಬರಹಗಾರ ಮತ್ತು ಆಕ್ಟಿವಿಸ್ಟ್ ಆಗಿದ್ದ ರೂಡಾಲ್ಫ ರಾಕರ್ ಇತನು ತನ್ನ ಲೇಖನಗಳನ್ನು ಈ ಪತ್ರಿಕೆಯಲ್ಲಿ ಬರೆಯುತ್ತಿದ್ದನು. ಇಂತಹ ಬರಹ ಮತ್ತು ಅವುಗಳ ಕುರಿತ ಚರ್ಚೆ-ಸಂವಾದಗಳು ಚಾಮ್ಸ್ಕಿಯ ತಿಳಿವಳಿಕೆಯನ್ನು ವಿಸ್ತರಿಸಿದವು. ರಾಜಕೀಯ ಚಿಂತನೆಯಲ್ಲಿ ತೊಡಗಿಕೊಳ್ಳುವ ಈತನ ಆಸಕ್ತಿಗೆ ಇದುವೇ ಪ್ರೇರಣೆಯಾಗಿತ್ತು. ಪರಿಣಾಮವಾಗಿ ಚಾಮ್ಸ್ಕಿಯು ತನ್ನ ರಾಜಕೀಯ ತಾತ್ವಿಕತೆ ಮತ್ತು ಚಿಂತನೆಯನ್ನು ಅತ್ಯಂತ ಪ್ರಖರವಾಗಿ ರೂಪಿಸಿಕೊಂಡನು. ಆದರೆ ಚಾಮ್ಸ್ಕಿಗೆ ಜೀವನವದ ಬಗ್ಗೆ ಗಾಭರಿ ಉಂಟಾಗಿದ್ದು ಸ್ಥಳೀಯ ಹೈಸ್ಕೂಲ್ಗೆ ಸೇರಿಕೊಂಡಾಗ. ಏಕೆಂದರೆ ಇಲ್ಲಿಯ ಸಾಂಪ್ರದಾಯಿಕ ಹಿತಾಸಕ್ತಿ ಹಾಗೂ ಸಂಕುಚಿತ ಆಲೋಚನ ಕ್ರಮಕ್ಕೆ ಸೀಮಿತಗೊಂಡ ಶಿಕ್ಷಣ ಕ್ರಮವನ್ನು ಕಂಡು ವಿಚಲಿತನಾಗಿದ್ದ. ಆದರೆ ಇದಕ್ಕೆ ಎದೆಗುಂದದೆ ಚಾಮ್ಸ್ಕಿಯು ಇದೆಲ್ಲವನ್ನೂ ಮೀರಿ, ಇದರಿಂದ ಯಾವುದೇ ಬಗೆಯಲ್ಲಿ ಬಾಧಿತನಾಗದೆ ತನ್ನ ಹದಿನಾರನೇ ವಯಸ್ಸಿನಲ್ಲಿ ಆ ಶಾಲೆಯಿಂದ ಶಿಕ್ಷಣವನ್ನು ಮುಗಿಸಿಕೊಂಡು ಹೊರಬಂದನು.
ಎರಡನೇ ಜಾಗತಿಕ ಮಹಾಯುದ್ಧವು ಕೊನೆಗೊಂಡಿದ್ದರೂ, ಹೀರೊಶಿಮಾ ಮತ್ತು ನಾಗಸಾಕಿ ಮೇಲಿನ ಬಾಂಬ್ ದಾಳಿ ಜಗತ್ತಿನ ದೆಸೆಯನ್ನೇ ಬದಲಿಸಿತ್ತು. ಆಗಾಗಲೇ ಬೌದ್ಧಿಕ ಮತ್ತು ತಾತ್ವಿಕ ಸ್ಪಷ್ಟತೆಯನ್ನು ರೂಪಿಸಿಕೊಂಡಿದ್ದ ಈ ನೋಮ್ ಚಾಮ್ಸ್ಕಿಯು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರ, ತರ್ಕಶಾಸ್ತ್ರ ಮತ್ತು ಭಾಷಾಶಾಸ್ತ್ರ ವಿಷಯಗಳಲ್ಲಿ ಜನರಲ್ ಪದವಿಗೆ ಪ್ರವೇಶವನ್ನು ಪಡೆದುಕೊಂಡನು. ಜ್ಯೂಯಿಶ್ ಕಾಲೇಜಿನಲ್ಲಿ ಹೀಬ್ರೂ ಭಾಷೆಯನ್ನು ಕಲಿಸುತ್ತಾ ತನ್ನ ನಿರ್ವಹಣೆಗೆ ಬೇಕಾದ ಹಣವನ್ನು ಈತನು ಸಂಪಾದಿಸಿಕೊಳ್ಳುತ್ತಿದ್ದ. ಪ್ರಖ್ಯಾತ ಹೀಬ್ರೂ ಭಾಷಾ ವಿದ್ವಾಂಸರಾದ ಈತನ ತಂದೆ ಈ ಕಾಲೇಜಿನಲ್ಲಿಯೇ ಪ್ರಾಂಶುಪಾಲರಾಗಿದ್ದರು.
ತರುಣ ಚಾಮ್ಸ್ಕಿಗೆ ಈ ವಿಶ್ವವಿದ್ಯಾನಿಲಯವು ಸಾಕಷ್ಟು ನಿರಾಸೆಯನ್ನು ಹುಟ್ಟಿಸಿತು. ಇಲ್ಲಿಯೂ ಕೂಡ ಹೆಚ್ಚು-ಕಡಿಮೆ ಹೈಸ್ಕೂಲಿನ ಪರಿಸ್ಥಿತಿಯೇ ಮುಂದುವರೆದಿತ್ತು. ಆದರೆ ಇತನ ಕುಟುಂಬವು ಸಾಂಪ್ರದಾಯಿಕವೂ ಹಾಗೂ ವೈಚಾರಿಕವೂ ಆಗಿದ್ದ ಜ್ಯೂಯಿಶ್ ಸಂಸ್ಕೃತಿಯಲ್ಲಿ ಸಂಪೂರ್ಣ ಸಮೀಕರಣಗೊಂಡಿತ್ತು ಎನ್ನುವುದು ಮಾತ್ರ ವಿಶೇಷ. ಚಾಮ್ಸ್ಕಿಯು ಕೂಡ ಇತರೆ ಜ್ಯೂಯಿಶ್ ತರುಣರ ಹಾಗೆ ಪ್ಯಾಲೆಸ್ತೈನ್ಗೆ ಹೋಗಿ ತನ್ನ ರಾಜಕೀಯ ಬಳಗದೊಂದಿಗೆ ಸೇರಿ, ಈ ರಾಷ್ಟ್ರದ ಜ್ಯೂಯಿಶ್ ಮತ್ತು ಅರಬ್ ಸಮೂಹಗಳ ನೆಮ್ಮದಿಯ ಹಾಗೂ ಸಹಬಾಳ್ವೆಯ ಬದುಕನ್ನು ನಡೆಸುವುದಕ್ಕೆ ಪೂರಕವಾಗುವ ಹೊಸ ರಾಷ್ಟ್ರದ ನಿರ್ಮಾಣಕ್ಕೆ ಕೊಡುಗೆ ನೀಡುವ ದಾರಿಯನ್ನು ಈತನು ಗಂಭೀರವಾಗಿಯೇ ಪರಿಗಣಿಸಿದ್ದನು. ಸಾಧ್ಯವಾದರೆ ಇದನ್ನು ತನ್ನ ಆ್ಯನಾರ್ಕಿಸ್ಟ್ ತಾತ್ವಿಕ ಆದರ್ಶದ ನೆಲೆಯಿಂದ ರೂಪಿಸಿಕೊಳ್ಳುವ ದೆಸೆಯಲ್ಲಿದ್ದನು. ಆವಾಗಲೇ ಚಾಮ್ಸ್ಕಿ ಪೆನ್ಸಿಲೇನ್ವಿಯಾ ವಿಶ್ವವಿದ್ಯಾನಿಲಯದ ಭಾಷಾಶಾಸ್ತ್ರದ ಪ್ರಾಧ್ಯಾಪಕ ಝೆಲ್ಲಿಂಗ್ ಹ್ಯಾರಿಸ್ರನ್ನು ಭೇಟಿಯಾದನು. ಈ ಪ್ರಾಧ್ಯಾಪಕನು ಕೂಡ ಜ್ಯೂಯಿಶ್ ವೈಚಾರಿಕ ಸಂಘಟನೆಯ (Avukah) ಪ್ರಭಾವಿ ಚಿಂತಕನಾಗಿದ್ದನು. ಈ ಸಂಘಟನೆಯು ಪ್ಯಾಲೆಸ್ತೈನ್ಗಾಗಿ ಆ್ಯಂಟಿ-ಝೀಯಾನಿಸ್ಟಿಕ್ ಬೆಳವಣೆಗೆಯನ್ನು ಸಮರ್ಥಿಸುವುದಾಗಿತ್ತು. ಆದರೆ ಭಾಷಾಶಾಸ್ತ್ರದ ಅಧ್ಯಯನವು ಚಾಮ್ಸ್ಕಿಯ ಹಣೆಬರಹವನ್ನೇ ಬದಲಿಸಿತು ಎಂದು ಹೇಳಬಹುದು. ಭಾಷೆ ಎಂದರೇನು? ನಾವು ಭಾಷೆಯನ್ನು ಹೇಗೆ ಗ್ರಹಿಸುತ್ತೇವೆ? ಈ ಪ್ರಕ್ರಿಯೆ ಹೇಗಾಗುತ್ತೆ? ಎಂಬಿತ್ಯಾದಿ ತಾತ್ವಿಕ ಜಿಜ್ಞಾಸೆಗಳನ್ನು ಕುರಿತು ಭಾಷಾಶಾಸ್ತ್ರ ಅಧ್ಯಯನ ಮಾಡಲಾರಂಭಿಸಿದ ಚಾಮ್ಸ್ಕಿಗೆ, ಪ್ಯಾಲೆಸ್ತೈನ್ಗೆ ಹೋಗುವ ಇತನ ಉದ್ದೇಶವನ್ನೇ ಮಾರ್ಗಪಲ್ಲಟಗೊಳಿಸಿತು. ಹೌದು ಈ ಕಾರಣಕ್ಕಾಗಿಯೇ ಚಾಮ್ಸ್ಕಿ ತನ್ನ ಬಾಲ್ಯ ಸ್ನೇಹಿತೆ ಕರೊಲ್ ಡೋರಿಸ್ ಶಾಟ್ಜ್ನನ್ನು ಪ್ರೀತಿಸಿ 1949ರಲ್ಲಿ ಮದುವೆಯಾದನು.
ಈ ಜೋಡಿ ತಾವು ಪ್ಯಾಲೆಸ್ತೈನ್ಗೆ ಹೋಗುವ ಉದ್ದೇಶವನ್ನು ಮಾತ್ರ ಕೈ ಬಿಟ್ಟಿರಲಿಲ್ಲ, ಆದರೆ ಇಷ್ಟೊತ್ತಿಗೆ ಚಾಮ್ಸ್ಕಿ ಭಾಷಾಶಾಸ್ತ್ರದ ಅಧ್ಯಯನದಲ್ಲಿ ಆಳವಾಗಿ ಮುಳುಗಿ ಹೋಗಿದ್ದ. ಈ ವಿಷಯವನ್ನೇ ತನ್ನ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಅಧ್ಯಯನದ ಮುಖ್ಯ ವಿಷಯವನ್ನಾಗಿಯೂ ಆಯ್ದುಕೊಂಡನು. ಇವನೊಬ್ಬ ಅಸಾಧಾರಣ ಭಾಷಾಶಾಸ್ತ್ರಜ್ಞನಾಗಿಯೇ ಹುಟ್ಟಿರುವನು ಎಂಬುದೀಗ ಚರಿತ್ರೆ. ಆ ಹೊತ್ತಿಗಾಗಲೇ ವಿದ್ವತ್ ವಲಯದಲ್ಲಿ ಕೆಲವು ವಿದ್ವಾಂಸರು ಇತನ ಪ್ರತಿಭೆಯನ್ನು ಗುರುತಿಸಿದ್ದರು. ಹಾಗಾಗಿ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಚಾಮ್ಸ್ಕಿಗೆ ಫೆಲೋಶಿಪ್ ಸಿಕ್ಕಿತು. ಚಾಮ್ಸ್ಕಿ ಭಾಷಾಶಾಸ್ತ್ರದಲ್ಲಿ ತನ್ನ ಆಸಕ್ತಿಯ ಕ್ಷೇತ್ರಕ್ಕೆ ಸಂಬಂಧಿಸದ ಅಧ್ಯಯನವನ್ನು ಇಲ್ಲಿಯೇ ಅತ್ಯಂತ ಗಂಭೀರವಾಗಿ ಆರಂಭಿಸಿದನು. ಈ ಫಲೋಶಿಪ್ನಲ್ಲಿ ಟ್ರಾವೆಲ್ ಗ್ರ್ಯಾಂಟಿಗೆ ಅವಕಾಶವಿದ್ದದರಿಂದ, 1953 ರಲ್ಲಿ ಚಾಮ್ಸ್ಕಿಯು ತನ್ನ ಹೆಂಡತಿಯೊಂದಿಗೆ ಯೂರೋಪ್ ಮತ್ತು ಇಸ್ರೇಲ್ಗೆ ಭೇಟಿ ಕೊಟ್ಟನು. ಈ ಭೇಟಿಯು ಇವರಿಬ್ಬರ ಮೇಲೆ ಗಾಢ ಪ್ರಭಾವವನ್ನು ಬೀರಿತು. ವಿಶೇಷವಾಗಿ, ಯೂರೋಪ್ ಮತ್ತು ಅಮೇರಿಕ ಹಾಗೂ ಇಸ್ರೇಲ್ಗಳ ನಡುವಿರುವ ಸಂಪತ್ತಿನ ಅಗಾಧ ಅಂತರವನ್ನು ಮತ್ತು ಇಸ್ರೇಲ್ ಒಂದು ಯುದ್ಧದ ರಣರಂಗವಾಗಿದ್ದು ನೋಡಿ ಇವರು ನಲುಗಿ ಹೋಗಿದ್ದರು. ಇವರಿಗೆ ಇಸ್ರೇಲ್ ಜನರ ಸಮೂಹ ಪ್ರಜ್ಞೆ ಬಾಂಧವ್ಯ ಇಷ್ಟವಾಗಿತ್ತು. ಆದರೆ, ಚಾಮ್ಸ್ಕಿಗೆ ತನ್ನ ರಾಜಕೀಯ ಸೂಕ್ಷ್ಮಭಾವನೆಗಳು ಪ್ರತಿವಾದಿ ರಾಜಕೀಯ ತತ್ವಗಳು ಹಾಗೂ ಧಾರ್ಮಿಕ-ಸಾಂಸ್ಕೃತಿ ಅಂಟುವಿಕೆಯಿಂದ ತೀವ್ರವಾಗಿ ಬಾಧಿಸಿದವು. ಅದು ಸ್ಟ್ಯಾಲಿನಿಸಂ ಆಗಿರಬಹುದು ಅಥವಾ ಝೀಯಾನಿಸಂ ಆಗಿರಬಹುದು ಅಥವಾ ಇಲ್ಲಿಯ ಸ್ಥಳೀಯ ಅರಬ್ರ ಜನಾಂಗೀಯ ಪ್ರಾಬಲ್ಯ ಆಗಿರಬಹುದು. ಯಾವುದಾದರೂ ಸರಿ ವಸ್ತುನಿಷ್ಠ ಬದ್ಧತೆಯೇ ಚಾಮ್ಸ್ಕಿಯ ಹಂಬಲವಾಗಿತ್ತು.
ಬೂಸ್ಟನ್ಗೆ ವಾಪಸ್ಸು ಬಂದ ಮೇಲೆ ಜಗತ್ತಿನ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಮೈಸ್ಸಾಚುಸೆಟ್ಸ್ ಇನ್ಸ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕ ಹುದ್ದೆ ಚಾಮ್ಸ್ಕಿಗೆ ಲಬಿಸಿತು. ಇಲ್ಲಿ ಪ್ರಾಯೋಗಿಕ ವಿಜ್ಞಾನ ವಿಭಾಗದಲ್ಲಿ ಚಾಮ್ಸ್ಕಿಗೆ ಸ್ವತಂತ್ರ ಅಧಿಕಾರವನ್ನು ಕೊಡಲಾಗಿತ್ತು. ಚಾಮ್ಸ್ಕಿಗೆ ಭಾಷಾಶಾಸ್ತ್ರ ಮತ್ತು ತತ್ವಶಾಸ್ತ್ರ ವಿಭಾಗವನ್ನು ಇಲ್ಲಿ ಸ್ಥಾಪಿಸಲು ಇದರಿಂದ ಸಾಧ್ಯವಾಯ್ತು. ಕೆಲವೇ ದಿನಗಳಲ್ಲಿ, ಜಗತ್ತಿನಲ್ಲಿಯೇ ಈ ವಿಭಾಗವು ಪ್ರಗತಿಪರ ಮತ್ತು ಹೊಸ ಬದಲಾವಣೆಯ ಭಾಷಾಶಾಸ್ತ್ರದ ಸಂಶೋಧನೆಯ ಕೇಂದ್ರವಾಗಿ ಹೊರಹೊಮ್ಮಿತು.
ಚಾಮ್ಸ್ಕಿ ಮತ್ತು ಈತನ ಸಹೋದ್ಯೋಗಿ (ವಿದ್ಯಾರ್ಥಿಗಳನ್ನು ಒಳಗೊಂಡಂತೆ)ಗಳು ಸೇರಿ ಭಾಷೆಯನ್ನು ಕೇವಲ ವರ್ಣಿಸುವ (Describing) ಕ್ರಮದಿಂದ ಅದನ್ನು ವಿವರಿಸುವ (Explaining) ನೆಲೆಯಲ್ಲಿ, ಭಾಷಾಶಾಸ್ತ್ರವನ್ನು ಆಮೂಲಾಗ್ರವಾಗಿ (ಕ್ರಾಂತಿಕಾರಿಗೊಳಿಸಿದರು) ಬದಲಾಯಿಸಿದರು ಎಂದೇ ಹೇಳಬೇಕು. ಭಾಷಾಶಾಸ್ತ್ರ ಕುರಿತ ಚಾಮ್ಸ್ಕಿಯ ಈ ಪುಸ್ತಕಗಳ ಸರಣಿಯೂ “ಚಾಮ್ಸ್ಕಿಯನ್ ಲಿಂಗ್ವಿಸ್ಟಿಕ್ಸ್” ಎನ್ನುವ ಭಾಷಾಧ್ಯಯನದ ಹೊಸಮಾದರಿಯ ಒಂದು ಹಾಲ್ಮಾರ್ಕ್ನ್ನು ಸ್ಥಾಪಿಸಿದೆ. ಇವನ ಈ ವಿಸ್ತೃತ ಭಾಷಿಕ ಅಧ್ಯಯನವು ವೈಶ್ವಿಕ ವ್ಯಾಕರಣ (Universal Grammar), ಭಾಷೆಯ ಗ್ರಹಿಕೆಯ ನೆಲೆಗಳು ಹಾಗೂ ಜೈವಿಕವಾಗಿ ಅಂತಸ್ಥಗೊಂಡಿರುವ ಸಾಮರ್ಥ್ಯವು ಮಾನವನಿಗೆ ಭಾಷಿಕ ಸಾಮರ್ಥ್ಯವನ್ನು ಪಡಕೊಳ್ಳುವಲ್ಲಿ ಹೇಗೆ ಒಂದು ಅಂತರ್ನಿಹಿತ ಕಸುವು ಆಗಿರುತ್ತೆ ಅನ್ನುವುದನ್ನು ವಿಶ್ಲೇಷಿಸುತ್ತವೆ. ಜಗತ್ತಿನಾದ್ಯಂತವಿರುವ ಸ್ಥಾಪಿತ ಶೈಕ್ಷಣಿಕ ವಲಯವು ಇಂತಹ ಅಸಾಂಪ್ರದಾಯಿಕ ಆಲೋಚನಾ ಮಾದರಿಯನ್ನು ತಮ್ಮ ಶಕ್ತಿ ಮೀರಿ ದಮನ ಮಾಡುವ ಪ್ರಯತ್ನ ಮಾಡಿದವು. ಇದು ಒಂದು ರೀತಿಯಲ್ಲಿ ಗೆಲಿಲೀಯೋನ ಎದುರಾಳಿಗಳು ಅವನ “ಫ್ಯ್ಲಾಟ್ ಅರ್ಥ್”ಸಿದ್ಧಾಂತವನ್ನು ಅಂತಿಮವಾಗಿ ಅಂಗೀಕರಿಸಿದ ಹಾಗೆ, ಚಾಮ್ಸ್ಕಿಯ ಅಧ್ಯಯನದ ಈ ಮಾದರಿಯನ್ನು ಇವರು ಅಂಗೀಕರಿಸಿದರು.
ಈ ಭಾಷಾಶಾಸ್ತ್ರ ಅಧ್ಯಯನದ ನಡುವೆಯೂ ಚಾಮ್ಸ್ಕಿಗೆ ರಾಜಕೀಯ ಕುರಿತ ಅರಿವು ಅಥವಾ ತಿಳಿವಳಿಕೆಯನ್ನು ಪಡೆಯುವ ಹಂಬಲವೇನು ಕಮ್ಮಿಯಾಗಿರಲಿಲ್ಲ. ಮೈಸ್ಸಾಚುಸೆಟ್ಸ್ ಇನ್ಸ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ತನ್ನ ಕೆಲಸವನ್ನು ಆರಂಭಿಸಿದ ಮೇಲೆ ವಿಯೆಟ್ನಾಮ್ ಯುದ್ಧವು ತುಂಬಾ ಗಂಭೀರ ಹಾಗೂ ಹಿಂಸಾತ್ಮಕ ಸ್ವರೂಪವನ್ನು ಪಡೆದುಕೊಂಡಿತ್ತು. ಈ ಯುದ್ಧವನ್ನು ವಿರೋಧಿಸುವ ಮತ್ತು ಈ ಯುದ್ಧ ವಿರೋಧ ನೀತಿಯ ಸಂಘಟನೆಯಲ್ಲಿ ಸಕ್ರಿಯವಾಗಿ ಒಳಗೊಳ್ಳಲು ಚಾಮ್ಸ್ಕಿಯು ರಾಜಕೀಯ ಹೋರಾಟಗಾರ (ಆ್ಯಕ್ಟಿವಿಸ್ಟ್) ಆಗುವ ಮಹತ್ವದ ತೀರ್ಮಾನವನ್ನು ಕೈಗೊಂಡನು. 1967ರಲ್ಲಿ ಎಲ್ಲ ಸಮಾನಮನಸ್ಕರು ಸೇರಿ RESIST ಎನ್ನುವ ಸಂಘಟನೆಯೊಂದನ್ನು ಹುಟ್ಟುಹಾಕಿದರು. ಜೀವಪರ ಕಾಳಜಿ ಇರುವವರೆಲ್ಲರೂ ಈ ಅನೈತಿಕ ಅಧಿಕಾರದ ವಿರುದ್ಧ ಹೋರಾಡುವ ಸಂಘಟೆನೆಯಲ್ಲಿ ಪಾಲುದಾರರಾಗಲು ಈ ಸಂಘಟೆನೆಯಿಂದ ಕರೆ ಕೊಟ್ಟರು. RESIST ಹಾಗೂ ಇನ್ನಿತರ ಸಂಘಟನೆಗಳು ಸೇರಿ ಯುದ್ಧ ವಿರೋಧಿಸಿ ಹಲವಾರು ಜಾಥ ಮತ್ತು ಪ್ರದರ್ಶನಗಳನ್ನು ಮಾಡಿದರು. ಪರಿಣಾಮವಾಗಿ ಚಾಮ್ಸ್ಕಿಯನ್ನು ಬಂಧಿಸಿ ಜೈಲಿಗೆ ಹಾಕಿದರು. ಈ ಸೆರೆವಾಸದಲ್ಲಿ ಚಾಮ್ಸ್ಕಿಯ ಸಹಪಾಠಿಯಾಗಿ ನಾರ್ಮ್ನ್ ಮೈಲರ್ ಕೂಡ ಇದ್ದನು. ಈ ಜೈಲವಾಸದಿಂದ ಎದೆಗುಂದದೆ ನಿರಂತರವಾಗಿ ಯುದ್ಧವಿರೋಧ ರ್ಯಾಲಿಗಳನ್ನು (Rallies) ಸಂಘಟಿಸುತ್ತ ಭಾಷಣಗಳನ್ನು ಮಾಡುತ್ತಿದ್ದನು. ಈತನ ಈ ಎಲ್ಲ ಭಾಷಣಗಳು 1969ರಲ್ಲಿ ಪ್ರಕಟಗೊಂಡ “ಅಮೇರಿಕನ್ ಪವರ್ ಆ್ಯಂಡ್ ದಿ ನ್ಯೂ ಮಂಡೆರಿಯನ್ಸ್” ಎನ್ನುವ ಪುಸ್ತಕದಲ್ಲಿ ದಾಖಲಾಗಿವೆ. ಇವತ್ತಿಗೂ ಈ ಪುಸ್ತಕವು ರಾಜಕೀಯ ಭಿನ್ನಮತೀಯ ಕುರಿತ ಕ್ಲಾಸಿಕ್ ಪಠ್ಯವಾಗಿಯೇ ಉಳದಿದೆ. ಅಧ್ಯಕ್ಷ ನಿಕ್ಸನ್ನ ರಾಜಕೀಯ ವಿರೋಧಿಗಳ ಹಿಟ್ಲಿಸ್ಟ್ನಲ್ಲೂ ಚಾಮ್ಸ್ಕಿಯ ಹೆಸರಿತ್ತು. ಇದಾವುದಕ್ಕೂ ಚಾಮ್ಸ್ಕಿ ಮಣಿಯದೇ ಸತ್ಯವನ್ನು ಬಹಿರಂಗಪಡಿಸುವ ಜವಾಬ್ದರಿಯಲ್ಲಿ ನಿರತನಾಗಿದ್ದಾನೆ. ಇವನು 1970ರಲ್ಲಿ ಹನಯೈಗೆ ಭೇಟಿ ಕೊಟ್ಟಿದ್ದ ಆದರೆ ಜೇನ್ ಫಾಂಡ್ನ ಹಾಗೆ ಇವನು ಯಾವತ್ತು ನಾರ್ಥ್ ವಿಯೆಟ್ನಾಮ್ಸಿಗಳಿಗೆ ನೀಡಿದ ಬೆಂಬಲದ ಬಗ್ಗೆ ಬೇಸರಪಟ್ಟಿದ್ದಿಲ್ಲ.
ಇಂದಿಗೂ ತನ್ನ ತೊಂಭತ್ತೊಂದರ ಹರೆಯದಲ್ಲಿಯೂ ಕೂಡಾ, ಚಾಮ್ಸ್ಕಿಯು ಅಮೇರಿಕ ಪ್ರಭುತ್ವ ವಿದಿಸುವ ವಿದೇಶಾಂಗ ನೀತಿಯ ಕರಾರುಗಳ ಕುರಿತು ಒಂದು ಕಡೆಯಿಂದ ಇನ್ನೊಂದು ಕಡೆ ನಡೆಯುವ ಸಭೆಗಳಿಗೆ ಹೋಗಲು ಯಾವತ್ತೂ ನಿರಾಕರಿಸಿದ್ದಿಲ್ಲ. ಅದು ಕ್ಯೂಬಾ ಇರಬಹುದು ಅಥವಾ ಲೆಬಾನಿನ್ನ ನಾಯಕ ಹೆಝ್ಬೂಲ್ಲಾನ ಜೊತೆಗಿನ ಭೇಟಿ ಆಗಿರಬಹುದು. ಚಾಮ್ಸ್ಕಿಯ ಅಮೇರಿಕದ ವಿದೇಶಾಂಗ ನೀತಿಯ ವಿರುದ್ಧದ ಕಡುವಿಮರ್ಶೆ/ಕಟುವಿಮರ್ಶೆ ಇವತ್ತಿಗೂ ಒಂದು ಲೆಜಂಡ್ಯೇ ಸರಿ. ಚಾಮ್ಸ್ಕಿ ತನ್ನ ಮಹತ್ವದೊಂದು ಪುಸ್ತಕ “ಫೇಲ್ಡ್ ಸ್ಟೇಟ್ಸ್”ನಲ್ಲಿ ಚರ್ಚಿಸಿದಂತೆ, ಅಮೇರಿಕದ ಸರಕಾರ/ಪ್ರಭುತ್ವಗಳು ಸ್ಟೇಟ್ ಟೆರರಿಸಿಮ್ ನಿರಂತರವಾಗಿ ನಡೆಯಲು ಮತ್ತು ಅದನ್ನು ಯಸಶ್ವಿಗೊಳಿಸಲು ಕುಮ್ಮಕ್ಕು ನೀಡಿದೆ ಎನ್ನುವುದನ್ನು ಸಾಬೀತಪಡಸಿದ್ದಾನೆ.
ಯಾರು ಈ ಜಗತ್ತು ಮತ್ತು ಈ ಜನರ ಬಗ್ಗೆ ಕಾಳಜಿಯನ್ನು ಹೊಂದಿದ್ದಾರೋ ಅವರೆಲ್ಲರೂ ಚಾಮ್ಸ್ಕಿಯನ್ನು ಒಬ್ಬ ದಾರ್ಶನಿಕ ಮತ್ತು ಜನಪರ ಚಿಂತಕನೆಂದು ಗುರುತಿಸಿದ್ದಾರೆ. ಚಾಮ್ಸ್ಕಿಯು ಸಾಮಾಜಿಕ ಸರಿ-ತಪ್ಪುಗಳ ವಿವೇಚನೆಯಿರುವ ಒಬ್ಬ ಪ್ರಖ್ಯಾತ ಸಂಶೋಧಕನೂ, ಎಂದಿಗೂ ಬೇಸರವನ್ನರಿಯದ ಶೈಕ್ಷಣಿಕ ವಿದ್ವಾಂಸನೂ ಆಗಿರುವನು. ಅತ್ಯಂತ ಅಪರಿಮಿತ ಒಳನೋಟಗಳಿರುವ ಅಪಾರವಾದ ಅಕಾಡೆಮಿಕ್ ಕೆಲಸವನ್ನು ಇತನು ಮಾಡಿರುತ್ತಾನೆ. ನಿರಿಚ್ಛೆಯಿಂದಲೇ ತನ್ನ ಖಾಸಗಿ ಬದುಕನ್ನು ಜನರ ಕಲ್ಯಾಣ ಮತ್ತು ಜಗತ್ತಿನ ಒಳತಿಗಾಗಿ ತ್ಯಜಿಸಿರುತ್ತಾನೆ. ಈ ಅರ್ಥದಲ್ಲಿ ಇವನೊಬ್ಬ ಸಂರಕ್ಷಕ, ಇದು ಇವನಿಗಿರುವ ನೈಜ ಪರಿಸರ ಕಾಳಜಿಯ ಅಭಿವ್ಯಕ್ತಿಯಾಗಿದೆ, ಇದೆಲ್ಲವನ್ನೂ ಇತನ ಇತ್ತೀಚಿನ ಬರಹಗಳಲ್ಲಿ ಕಾಣಬಹುದು. ರಾಜಕೀಯ ಮತ್ತು ಆರ್ಥಿಕ ಸಾಂಪ್ರದಾಯಿಕವಾದಿಗಳು ಇತನನ್ನು ಸಮಾಜ ವಿರೋಧಿ ನಂಬರ್ ಒಂದು ಎಂದೂ ಬಿಂಬಿಸಿದರೇನೂ ಆಶ್ಚರ್ಯವಿಲ್ಲ. ಆದರೆ ಇದಕ್ಕೆ ಅವರು ಅಪಾರ ಮೊತ್ತವನ್ನು ತೆರಬೇಕಾಗುತ್ತೆ. ಇಂತಹದನ್ನೂ ಹಸನ್ಮುಖಿಯಾಗಿಯೇ ಸ್ವೀಕರಿಸುವ ಹಣೆಬರಹದ ಈ ವ್ಯಕ್ತಿ ನಮಗೆಲ್ಲರಿಗೂ ಪ್ರೇರಣೆಯಾಗಲಿ.
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ