‘ಬಾ-ಬಾಪು’ 150ನೇ ಜನ್ಮ ವರ್ಷಾಚರಣೆ
ಜಯಶ್ರೀ ಟ್ರಸ್ಟ್ ಪುರಸ್ಕಾರ ಪ್ರದಾನ
ಕೊರೊನಾ ವಾರಿಯರಸ್ಸ್ಗಳಿಗೆ ಸನ್ಮಾನ:
ಪುಸ್ತಕಗಳ ಬಿಡುಗಡೆ
ಆಯೋಜನೆ ; ಕರ್ನಾಟಕ ಗಾಂಧಿ ಸ್ಮಾರಕ ನಿಧಿ
ಗಾಂಧಿ ಜಯಂತಿ ಅಂಗವಾಗಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಂದಾಯ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರಾಷ್ಟ್ರೀಯ ಯುವ ಯೋಜನೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಗಾಂಧಿ ಶಾಂತಿ ಪ್ರತಿಷ್ಠಾನ ಮತ್ತು ಹುತಾತ್ಮ ಮೈಲಾರ ಮಹಾದೇವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾವೇರಿ ಸಂಯುಕ್ತಾಶ್ರಯದಲ್ಲಿ ‘ಬಾ-ಬಾಪು’ 150ನೇ ಜನ್ಮ ವರ್ಷಾಚರಣೆ ಹಾಗೂ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವು ಗಾಂಧಿಭವನದ ಮಹಾದೇವ ಸಭಾಂಗಣದಲ್ಲಿ ಆಯೋಜಿಸಿತ್ತು.
ಹಿರಿಯ ಗಾಂಧಿವಾದಿ ಡಾ.ಎನ್.ಎಸ್. ಸುಬ್ಬರಾವ್ ಅವರು ಉದ್ಘಾಟಿಸಿದ ಸಮಾರಂಭದಲ್ಲಿ ಡಾ. ಎಲ್. ಹನುಮಂತಯ್ಯ ಅವರು ವೇಮಗಲ್ ಸೋಮಶೇಖರ್ ಅವರ ‘ಮಹಾತ್ಮರ ಬಾಳು’ ಕೃತಿಗೆ ಜಯಶ್ರೀ ಟ್ರಸ್ಟ್ ಪುರಸ್ಕಾರ ಪ್ರದಾನ ಮಾಡಿದರು. ಹಾಗೆಯೇ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ‘ಬಾಲ ಮಹಾಭಾರತ’ ಕೃತಿಯನ್ನು ಮಾಜಿ ಸಂಸದ ಎಚ್. ಹನುಮಂತಪ್ಪ ಅವರು ಬಿಡುಗಡೆ ಮಾಡಿದರು. ಡಾ.ವೂಡೇ ಪಿ. ಕೃಷ್ಣ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಪ್ ಕೊಯ್ಯಾರ್ ಮತ್ತು ರಾಸೇಯೋ ಅಧಿಕಾರಿ ಡಾ.ಗಣನಾಥಶೆಟ್ಟಿ ಎಕ್ಕಾರು ಅವರಿಗೆ ರಂಗಕರ್ಮಿ ಪ್ರಸನ್ನ ಅವರು ಗೌರವ ಪುರಸ್ಕಾರ ಪ್ರದಾನ ಮಾಡಿದರು.
ಡಾ. ನಿರಂಜನ ವಾನಳ್ಳಿ ಅವರ ‘ಗಾಂಧಿಯೊಳಗೊಬ್ಬ ಪತ್ರಕರ್ತ’, ಪ್ರೊ, ಸತ್ಯನಾರಾಯಣರಾವ್ ಅಣತಿ ಅವರ ಚರಕ ಸಂಹಿತೆ, ವೇಮಗಲ್ ಸೋಮಶೇಖರ್ ಅವರ ನಂದಿ ಗಿರಿಧಾಮದಲ್ಲಿ ಗಾಂಧಿ, ವನಜಾಕ್ಷಿ ಕೆ. ಅವರ ಸ್ವಚ್ಛಭಾರತಿ, ಡಾ. ವೂಡೇ ಪಿ. ಕೃಷ್ಣ ಅವರ ಗಾಂಧಿ ಮತ್ತು ಅಧ್ಯಾತ್ಮಿಕ ಸುಸ್ಥಿರತೆ ಹಾಗೂ ಎಂ.ಬಸವಯ್ಯ ಅವರ ನನ್ನ ಮನಸಿನ ಭಾರತ ಕೃತಿಗಳು ಬಿಡುಗಡೆಗೊಂಡವು.ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್, ಗಾಂಧಿ ಭವನದ ಸದಸ್ಯ ಎನ್.ಆರ್. ವಿಶುಕುಮಾರ್ , ಎಚ್.ಬಿ. ದಿನೇಶ್ ಉಪಸ್ಥಿತರಿದ್ದರು.ಕ.ಗಾ.ಸ್ಮ.ನಿ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಸ್ವಾಗತಿಸಿದರು, ಸಿಸಿರಾ , ಡಾ.ಪೂರ್ಣಿಮಾ ಜೋಗಿ, ಕೆ.ಸುಮತಿ ಕಾರ್ಯಕ್ರಮ ನಿರ್ವಹಿಸಿದರು.
ಕೊರೊನಾ ವಾರಿಯರ್‍ಸ್‌ಗಳಿಗೆ ಸನ್ಮಾನ: ಎಂ. ಹೇಮಂತಕುಮಾರ್, ಆರ್. ಹರಿಕೃಷ್ಣ, ಕೆ. ಸತ್ಯವತಿ, ಎಂ. ಶೋಭಾ ಕಿಶೋರ್‌ಕುಮಾರ್, ಎನ್.ಎಸ್. ಪ್ರಸಾದ್, ಸಾಕಮ್ಮ, ಜಯಶ್ರೀ ರಾಜು, ಯು.ಸಿ. ಪ್ರವೀಣ್ ಕುಮಾರ್, ನವಮಿ ಸಿಸ್ಟರ್ ಹಾಗೂ ಚಂದ್ರಶೇಖರ್ ಎಂ.ಸಿ, ಜಿ.ವಿ. ನರಸಿಂಹಮೂರ್ತಿ, ಸುನೀಲ್ ಕುಮಾರ್ ಸಾಲಿಯಾನ, ಜಿ. ಮಂಜುನಾಥ, ಮುರುಳಿ, ಶ್ರೀಧರ್ ಎಚ್.ಸಿ. ಹಾಗೂ ವಿನೋದಾ ನಾಗೇಂದ್ರ ಹೀಗೆ ಕೊರೊನಾ ವಾರಿಯರ್‍ಸ್ ಅವರನ್ನು ಸನ್ಮಾನಿಸಲಾಯಿತು.
ಪುಸ್ತಕ ಪ್ರದರ್ಶನ: ಅ. 2 ರಿಂದ ಅ. 5 ರವರೆಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಾದೇಶಿಕ ಜನಸಂಪರ್ಕಕಚೇರಿಯಿಂದ ಗಾಂಧೀಜಿ ವಿಶೇಷ ಛಾಯಾ ಚಿತ್ರ ಪ್ರದರ್ಶನ ಮತ್ತು ಪ್ರಕಾಶನ ವಿಭಾಗದಿಂದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಸ್ವದೇಶಿಯತೆ ಮತ್ತು ಕಾರ್ಮಿಕರ ಸಬಲೀಕರಣ ಚಳವಳಿ ಬೆಂಬಲಿಸುತ್ತ ಗ್ರಾಮ ಸೇವಾ ಸಂಘ, ಕರ್ನಾಟಕ ಇವರ ಗ್ರಾಮೋದ್ಯೋಗ ಉತ್ಪನ್ನಗಳ ಪ್ರದರ್ಶನವು ಗಾಂಧಿ ಭವನದ ಅಂಗಳದಲ್ಲಿ ನಡೆಯಲಿದೆ.
ಹೆಚ್ಚಿನ ಬರಹಗಳಿಗಾಗಿ
ವಿವೇಕ ದರ್ಶನ
ಗಾಂಧಿ ಎಂಬ ಯುಗ-ಜಗ ಚೇತನ..
ಪಂಚ ದ್ರಾವಿಡ ಭಾಷಾ ಅನುವಾದಕರ ಸಂಘ ರಚನೆ