ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಎಲ್ಲರೂ ಮರೆತದ್ದನ್ನು ಕವಿತೆಗಳು ಹುಡುಕಿ ಹುಡುಕಿ ಹೋಗಿ ಕೆದಕುವ ಯತ್ನ ಮಾಡುತ್ತದೆ.. ರಾಮ್ ಬರೆದದ್ದು ಒಬ್ಬ ಮಸಣ ಕಾಯುವವನ ಬಗ್ಗೆ...!
ರಾಮ್‌ ಕುಮಾರ್‌ ಡಿ.ಟಿ.
ಇತ್ತೀಚಿನ ಬರಹಗಳು: ರಾಮ್‌ ಕುಮಾರ್‌ ಡಿ.ಟಿ. (ಎಲ್ಲವನ್ನು ಓದಿ)

ಎಲ್ಲರೂ ಮರೆತದ್ದನ್ನು ಕವಿತೆಗಳು ಹುಡುಕಿ ಹುಡುಕಿ ಹೋಗಿ ಕೆದಕುವ ಯತ್ನ ಮಾಡುತ್ತದೆ.. ರಾಮ್ ಬರೆದದ್ದು ಒಬ್ಬ ಮಸಣ ಕಾಯುವವನ ಬಗ್ಗೆ…!

ಸಂಪಾದಕ

ನೂಕು ನುಗ್ಗಲು ಜಗ, ಮಾತು ಬಂಡವಾಳ
ಕಳೆದು ಹೋದ ಜನ ಜಂಜಾಲ
ಹಾಗೊಂದು ಇಲ್ಲೊಬ್ಬ…ಮಸಣ ಮೌನಿ.

ಹಿಡಿದು ಒಮ್ಮೆ ದರ್ಪಣವೆ, ಎಲ್ಲರೆದುರು…
ಕಾಣುವುದು ಒಂದೇ ಸತ್ಯ..
ಆತ್ಮವಿಲ್ಲದ ಶರೀರವಿವು, ಮಸಣದಲ್ಲೂ ಮನೆ ಇವಕೆ ಸಿಗದು
ಆದರೂ ಹಂಬಲ, ಮನೆ ಮಾಡಿ ಸಾಯುವ ಈ ನೆಲದ ಮೇಲೊಂದು.
ಮಸಣ ಕಂಡು ಮುಕ ತಿರಿಗಿಸುವ ಲೋಕವಿದು
ಇವ ಮನೆ ಮಾಡಿ ನಲಿದ ಈ ಮಸಣದಲ್ಲೊಂದು
ದೇವರಿಗೆ ಕೈ ಮುಗಿಯೋ ಈ ಜನ, ಮಸಣಕ್ಕೂ ಯಾಕೊಂದು
ಕೈ ಜೋಡಿಸರು, ಅನ್ನೊ ಒಂದು ವಿಚಾರ!
ನೀನು ಹೋಗುವುದು ಅಲ್ಲೇ, ನಿನ್ನವರು ಹೋಗುವುದೂ ಅಲ್ಲೇ…
ಈ ಜೀವ ಆ ದೈವನ ಒಂದು ಆಟ, ನಿನದಲ್ಲಾ, ನನದಲ್ಲಾ
ಸಾವು ನಿಶ್ಚಿತ… ಅದುವೂ ನಿನ್ನದಲ್ಲ!!!

ಯಾರ ಎದುರು ತನ್ನ ಗೋಳಿಡಲಿ ಇವನು,
ʼಗುಂಡಿ ತೋಡುವುದಷ್ಟೆ ನಿನ್ನ ಕೆಲಸ … ಹೆಣದ ಮೈಯ ಮುಟ್ಟದಿರುʼ ಎಂಬುವರೆಲ್ಲ…

ದೇವ ಕಾಯುವ ಈ ಜೀವವ, ನಿಜ
ಜೀವವಿರುವ ತನಕ ಎಂದು ಬಾಳೋ ಈ ಜನ…
ಜೀವ ಹೋದ ಮೇಲೂ ಕಾಯುವನೇ?
ಅಥವ ತಾನು ಬರಲಾಗದೇ ಈ ಜೀವವ ಕಳಿಸಿದನೇ?
ನೋಡುವ ಮನ ಬದಲಿಸು ಇವನ ಗೆಳೆಯನೇ,
ಇಲ್ಲೊಂದು ಜೀವವಿದೆ ನಿನ ಕಾಯಲು
ನಿನ ಜೀವ ಕೈ ಕೊಟ್ಟಾಗಲು ….
ನಿನಗೊಂದು ನಮನ ನನ್ನದು, ಮಸಣದ ಮೌನಿ, ಮಸಣ ಮೌನಿ……