- ರಾಜ ಮಹಾರಾಜ - ಜೂನ್ 27, 2021
- ವಸಂತ ಬಂದ ಸಂತಸ ತಂದ - ಏಪ್ರಿಲ್ 13, 2021
- ಮೀರಾ ಜೋಶಿ ಕವಿತಾ ವಾಚನ - ಮಾರ್ಚ್ 13, 2021
ನೀರಿನಲಿ ಬಿಡಿಸಿದ ಚಿತ್ರ
ಬೇಂದ್ರೆ ಬರದದ್ದೆಂದರೆ ಪಂಚಪ್ರಾಣ
ಕುವೆಂಪು ಅದೆಂತಹ ಜಾಣಾತಿ ಜಾಣ
ಓದಿರುವೆ ನಾನೂ ಮಣ ಮಣ
ಬರೆಯಲಾರದಿರೆನೆ ಅವರ ಒಂದು ಕಣ
ಅನೇಕಾನೇಕ ಅಕ್ಷರಗಳು ಅನಂತಾನಂತ ಶಬ್ದಗಳು
ಮೂಡಲಾರವೆ ಬರೆದೆನೆಂದರೆ ಪದಗಳು
ಬರಲಾರೆವೆ ಬರೆದರೆ ಕವಿತೆಗಳು
ಅಂದುಕೊಳ್ಳುವರೆಲ್ಲ ತಾವೇ ಕವಿಗಳು
ಬರೆದು ಶಬ್ದವೊಂದರಿಂದ ಮೊದಲಾದೆ
ಇನ್ನೊಂದನು ಮುಂದಿಟ್ಟು ನೋಡಿದೆ
ಭಲೆ ಭಲೆರಾ ಎಂದು ಬೀಗಿದೆ
ಮೂರನೆಯ ಶಬ್ದಕೆ ತಡಕಾಡಿದೆ
ಬರುತಿವೆ ನಾ ಮುಂದು ತಾ ಮುಂದೆಂದು
ಗೊಂದಲ ಯಾವುದು ಎಲ್ಲಿಡಲೆಂದು
ಅಂತೂ ಮೂಡಿತು ಪದಪುಂಜವೊಂದು
ಎತ್ತು ಎರೆಗೆಳೆದರೆ ಕೋಣ ಕೆರೆಗೆ ಎಳೆಯುವಲೊಂದು
ಭಾವನೆಗಳ ರಭಸ ಎದೆ ಹೃದಯ ತಟ್ಟಬೇಕು
ನವರಸ ಧಾರೆ ಮನಮುಟ್ಟುವಂತಿರಬೇಕು
ಪದಗಳು ಜುಳು ಜುಳು ಹರಿವ ನೀರಿನಂತಿರಬೇಕು
ಕವಿ ದಡ ಮುಚ್ಟಿಸುವ ನಾವಿಕನಂತಿರಬೇಕು
ಚಿಗುರೊಡೆಯುವುದು ಬಂದಾಗ ಚೈತ್ರ
ದೃಶ್ಯವನು ಹಿಡಿದಿರಬೇಕು ನೇತ್ರ
ಭಾವ ಅಭಿವ್ಯಕ್ತಿಗಿರಬೇಕು ಪದ ಛತ್ರ
ಇಲ್ಲವಾದರದು ಬರೀ ನೀರಿನಲಿ ಬಿಡಿಸಿದ ಚಿತ್ರ
ನಸುಕು.ಕಾಮ್
ಚುಮು ಚುಮು ಎನುವವರ
ಮುಸುಕು ತೆಗೆದು
ನೇಸರನ ಕಿರಣಗಳ ತೋರಿಸುವ
ನಸುಕು
ಮಧ್ಯ ಮಿಹಿರರಂತಿರುವವರ
ಕದಿರುಗಳ ತೋರಿಸಿ
ಮುನ್ನಡೆಸುವ
ನಸುಕು
ಅಳಿಯದ ಹೆಜ್ಜೆಗಳನುಳಿಸಿ ಹೋದವರ
ಪಥವ ತೋರಿಸಿ ಚೈತನ್ಯ ತುಂಬುವ
ನಸುಕು
ಮನೆ ಹೊರದೇಶದಲಿ
ಮನ ಕನ್ನಡಮ್ಮನ ಪದತಲಿ ಇರಿಸಿದ
ನಸುಕು
ಸಪ್ತಾಶ್ವಗಳನೇರಿ ಬರುವ ತರಣಿಯ
ಮಯೂಖಗಳಲಿ ಮೆರೆಯಲಿ
ವಿಜಯದೆಡೆಗೆ ನಡಿಗೆ ಸಾಗಲಿ
ನಸುಕಿನಲಿ ಬೆಳಗಿ
ಮೀರಾ ಜೋಶಿ
ಹೈದರಾಬಾದ
ಮೀರಾ ಜೋಶಿ
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್