- ಶ್ರೀ ಕೇಶವೇಶ್ವರ-ಪ್ರವಾಸಿ ಮಾರ್ಗದರ್ಶಿ ಫಲಕ - ಸೆಪ್ಟೆಂಬರ್ 7, 2025
- ಸಾಂಸ್ಕೃತಿಕ ನಗರಿಯಲ್ಲೊಂದು ಶಿಕ್ಷಣ ಕ್ರಾಂತಿ - ಜೂನ್ 8, 2025
- ಹೊಳಲು ದೇವಾಲಯಕ್ಕೆ ಹೊಳೆಯುವ ಯೋಗ ಎಂದು ?? - ಫೆಬ್ರುವರಿ 8, 2025
ಇತ್ತೀಚೆಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಿಂದ- ತಿಪಟೂರು ಹೆದ್ದಾರಿಯಲ್ಲಿ ಬರುವ “ಅಗ್ರಹಾರ ಬೆಳಗುಲಿ ಕ್ರಾಸ್ “ನಲ್ಲಿ.- ಅಗ್ರಹಾರ ಬೆಳಗುಲಿ ಗ್ರಾಮದಲ್ಲಿನ 13ನೇಶತಮಾನದಲ್ಲಿ -ಹೊಯ್ಸಳ ದೊರೆ ಎರಡನೇ ವಿರಬಲ್ಲಾಳನ ಮಹಾದಂಡನಾಯಕನಾಗಿದ್ದ ಕೇಶಿರಾಜನಿಂದ ನಿರ್ಮಿತವಾಗಿರುವ “ಶ್ರೀ ಕೇಶವೇಶ್ವರ ” ದೇವಾಲಯದ ಬಗ್ಗೆ ಮಾಹಿತಿಯನ್ನು ನೀಡುವ “ಪ್ರವಾಸಿ ಫಲಕದ “ಅನಾವರಣ ಕಾರ್ಯಕ್ರಮವನ್ನು “ಹಾಸನ ಜಿಲ್ಲಾ ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆ”ಹಾಸನ ಆಯೋಜಿಸಿತ್ತು.
ಈ ಫಲಕದ ವಿಶೇಷತೆ ಏನೆಂದರೆ-“ಸ್ವಗ್ರಾಮ್ ಫೌಂಡೇಶನ್ “ಬೆಂಗಳೂರು ಮುಖ್ಯಸ್ಥರಾದ ಮಹೇಶ್ ಇವರು ರೂಪಿಸಿರುವ ಫಲಕದ ವಿಶೇಷ ವಿನ್ಯಾಸ ಮತ್ತು ಸ್ಕ್ಯಾನಿಂಗ್ ವ್ಯವಸ್ಥೆಯಿಂದಾಗಿ ದೇವಾಲಯದ ಇತಿಹಾಸವು ಫೋಟೋಗಳೊಂದಿಗೆ ಸ್ಥಳದಲ್ಲಿಯೇ ಸುಲಭವಾಗಿ ಲಭ್ಯವಾಗುವಂತೆ ಆಗಿದೆ.- ಇದು ಫಲಕದ ಆಕರ್ಷಣೆಯನ್ನು ಹೆಚ್ಚಿಸಿದೆ.
ಅಲ್ಲದೆ ಫಲಕಕ್ಕೆ ಅಳವಡಿಸಿರುವ ರೇಡಿಯಮ್ ಕಾರಣದಿಂದಾಗಿ ರಾತ್ರಿಯ ವೇಳೆಯಲ್ಲಿ ಈ ರಸ್ತೆಯಲ್ಲಿ ಸಂಚರಿಸುವವರ ಗಮನವನ್ನು ಸೆಳೆಯುವಂತಾಗಿದೆ.
ಈ ದೇವಾಲಯವು ಒಂದೇ ದೇವಾಲಯದಲ್ಲಿ ಶಿವನಿಗೆ ಮತ್ತು ಕೇಶವನಿಗೆ ಪ್ರತ್ಯೇಕವಾದ ಗರ್ಭಗುಡಿಯನ್ನು ಹೊಂದಿರುವುದು ವಿಶೇಷವಾಗಿದೆ.
ಈ ಕಾರಣದಿಂದ” ಶಿವಸ್ಯ ಹೃದಯಂ ವಿಷ್ಣುಹು – ವಿಷ್ಣುಚ್ಚ ಹೃದಯಂ ಶಿವಃ”- ಎಂಬ ಮಂತ್ರದಂತೆ ಶಿವ ಮತ್ತು ವಿಷ್ಣುವಿನ ಸಮನ್ವಯತೆ/ ಏಕತೆಯನ್ನು ಸಾರುವ ದೇವಾಲಯವಾಗಿದೆ. ಅಲ್ಲದೇ ದೇವಾಲಯಕ್ಕೆ ಹೊಂದಿಕೊಂಡಂತೆ ಎರಡು ಕೆರೆಗಳಿದ್ದು ಅವುಗಳನ್ನು “ಕೇಶವಸಮುದ್ರ “ಮತ್ತು “ಲಕ್ಷ್ಮಿ ಸಮುದ್ರ “ಎಂದು ಹಾಸನ ಜಿಲ್ಲಾ ಶಾಸನ ಸಂಪುಟ ಸಂಖ್ಯೆ-8 ರಲ್ಲಿ ಉಲ್ಲೇಖಸಲಾಗಿದೆ.
ಈ ಫಲಕದ ಅನಾವರಣ ಸಂದರ್ಭದಲ್ಲಿ ಟಿ. ವಿ. ನಟರಾಜ ಪಂಡಿತ್ ರವರು ಮಾತನಾಡುತ್ತಾ. ಸಂಘದ ಹಾಡು —
” ಚಂದನ ಹೈ ಇಸ್ ದೇಶ್ ಕಿ ಮಾಟಿ.- ತಪೋ ಭೂಮಿ ಹರ್ ಗ್ರಾಮ ಹೈ!
ಹರ್ ಬಾಲಾ ದೇವಿ ಕಿ ಪ್ರತಿಮ. ಬಚ್ಚಾ ಬಚ್ಚಾ ರಾಮ ಹೈ!!
ಎಂಬುದನ್ನು ನೆನೆಯುತ್ತಾ. ಪ್ರತಿಯೊಂದು ಗ್ರಾಮವು ಒಂದು ತಪೋಭೂಮಿ ಆಗಿದೆ. ಒಬ್ಬೊಬ್ಬ ಮಹಾತ್ಮರ ಸಾಧಕರ ಋಷಿಮುನಿಗಳ ಜೀವಿತದೊಂದಿಗೆ ಬೆಸೆದುಕೊಂಡಿದೆ.
ಆದಕಾರಣ ಇಂತಹ ಅಪೂರ್ವ ಕೆತ್ತನೆ ವಿನ್ಯಾಸಗಳನ್ನು ಹೊಂದಿರುವ ಐತಿಹಾಸಿಕ ದೇವಾಲಯಗಳನ್ನು ಸಂರಕ್ಷಿಸುವುದು dಗ್ರಾಮಸ್ಥರ ಮತ್ತು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂಬುದನ್ನು ಮನವರಿಕೆ ಮಾಡಿದರು.
ಒಟ್ಟಿನಲ್ಲಿ ಈ ಫಲಕದ ಅನಾವರಣ ಕಾರ್ಯ ಮತ್ತು ಕಾರ್ಯಕ್ರಮವು- ಕೇವಲ ಸಾಂಸ್ಕೃತಿಕ ಕಾರ್ಯಕ್ರಮ ವಾಗದೇ — ಅಗ್ರಹಾರ ಬೆಳಗುಲಿಯ ಗ್ರಾಮಸ್ಥರಲ್ಲಿ ತಮ್ಮ ಊರಿನ ದೇವಾಲಯದ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಅದರ ಸಂರಕ್ಷಣೆಯ ತುರ್ತು ಅವಶ್ಯಕತೆ ಬಗ್ಗೆ ಹೆಚ್ಚಿನ ಉತ್ಸಾಹ ಆಸಕ್ತಿ ಮೂಡುವಂತೆ ಮಾಡಿದೆ.
ಹಾಸನ ಜಿಲ್ಲಾ ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆಯ ಕಾರ್ಯವು- ನಿರಂತರವಾಗಿ ಹೆಚ್ಚು ಪ್ರಚಾರಕ್ಕೆ ಬರದೆ ಅಜ್ಞಾತವಾಗಿ ಉಳಿದಿರುವ ದೇವಾಲಯಗಳು ಹಾಗೂ ಬಸದಿಗಳನ್ನು ಜನರ ಗಮನಕ್ಕೆ ತರುವುದು ಮತ್ತು ಸಂರಕ್ಷಿಸುವುದೇ ಆಗಿದೆ ಎಂದು ತಿಳಿಸಿದರು. ಮತ್ತು ಈ ಬಗ್ಗೆ ಎಲ್ಲರ ಸಹಕಾರ ಕೋರಿದರು.
I am sure this piece of writing has touched all the
internet users, its really really nice post on building up new web site.