- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
ಅಂಕಣಕ್ಕೆ ಸ್ವಾಗತ.
ಅಭಿಜ್ಞಾನ ಶಾಕುಂತಲದ ಎರಡನೆಯ ಅಂಕವನ್ನು ಪ್ರವೇಶಿಸುತ್ತಿದ್ದೇವೆ.
ದುಷ್ಯಂತ ಶಕುಂತಲೆಯರ ಮಧ್ಯ ಪ್ರೇಮದ ಬೀಜ ಅಂಕುರವಾದದ್ದನ್ನು ಮೊದಲನೇ ಅಂಕದ ಕೊನೆಯಲ್ಲಿ ಕಾಣುತ್ತೇವೆ. ಎರಡನೇಯ ಅಂಕ ಇವರಿಬ್ಬರ ನಡುವಿನ ಸೇತುವೆಯಂತೆ ಇದೆ. ಇಬ್ಬರೂ ಮಿಲನದ ಅಭಿಲಾಷಿಗಳಾಗಿದ್ದಾರೆ.
ಎರಡನೇ ಅಂಕ ವಿದೂಷಕನ ಪ್ರವೇಶದಿಂದ ಪ್ರಾರಂಭವಾಗುವುದು.
ಸಂಸ್ಕೃತ ನಾಟಕಗಳಲ್ಲಿ, ವಿದೂಷಕನ ಪಾತ್ರ ಬಹಳ ಮಹತ್ವದ್ದು . ಇವನು ರಾಜನ ಆಪ್ತ ಮಿತ್ರ. ರಾಜನ ಸುಖ ದು:ಖಗಳಲ್ಲಿ ಯೋಗ್ಯ ಸಲಹೆ ಕೊಡುವವನು. ಅವನ ಬಲಗೈ ಇದ್ದಹಾಗೆ. ತಮಾಷೆ ಮಾತಿನಿಂದ ಅರಸನ ಮನಸಿಗೆ ಮುದವನ್ನೂ ಕೊಡುವವನು.
ನಿಟ್ಟುಸಿರು ಬಿಡುತ್ತಾ ರಂಗ ಪ್ರವೇಶ
ಮಾಡುವನು ವಿದೂಷಕ.
” ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ
ಅಂಬುಜಕೆ ಭಾನುವಿನ ಉದಯದ ಚಿಂತೆ
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ
ಎನಗೆ ನಮ್ಮ ಕೂಡಲಸಂಗನ ಶರಣರ ನೆನೆವುದೆ ಚಿಂತೆ.”
ಬಸವಣ್ಣನವರು ಹೇಳುವಂತೆ ಒಬ್ಬೊಬ್ಬರಿಗೆ ಒಂದೊಂದು ಚಿಂತೆ ಅಲ್ಲವೇ ! ಅದರಂತೆ ಈ ವಿದೂಷಕನಿಗೆ ಊಟ ,ಪಾನೀಯದ ಚಿಂತೆ.
ಆದರೆ ರಾಜನಿಗೆ ಬೇಟೆಯ ಚಿಂತೆ!!
” ಈ ರಾಜನಿಗೋ ಬೇಟೆಯ ಚಪಲ. ಒಂದು ವನದಿಂದ ಇನ್ನೊಂದು ವನಕ್ಕೆ ಸಂಚರಿಸುತ್ತಲೇ ಇದ್ದಾನೆ. ನನಗೋ ಈ ವನದಲ್ಲಿ ಕುಡಿಯಲು ನೀರಿಲ್ಲ, ಸರಿಯಾದ ಆಹಾರ, ನಿದ್ರೆ ಇಲ್ಲ “
ಎಂದು ರಾಜನ ಬೇಟೆಯ ಹವ್ಯಾಸದಿಂದ ಬೇಸತ್ತಿದ್ದಾನೆ, ಗ್ರೀಷ್ಮ ಋತುವಿನ ಬಿಸಿಲಲ್ಲಿ ಬಳಲಿದ್ದಾನೆ. ಬೇಟೆಯ ಹಿಂದೆ ಬೆನ್ನಟ್ಟಿ ಆಶ್ರಮದೊಳಗೆ ಹೊಕ್ಕ ದುಷ್ಯಂತ ಇನ್ನೂ ತಿರುಗಿ ಬಂದಿಲ್ಲ ಎಂದು ಚಿಂತಿತನಾಗಿದ್ದಾನೆ ವಿದೂಷಕ.
ತಿರುಗಿ ಹೋಗುವ ಮಾತೇ ಇಲ್ಲವಲ್ಲ ಎಂದು ಚಿಂತಿತನಾದನು. ನಗರಗಮನದ ಮಾತೇ ಇಲ್ಲ. ರಾಜ ಶಕುಂತಲೆಯ ಚಿಂತೆಯಲ್ಲಿ ಮುಳುಗಿದಂತಿದೆ ಎಂದು ವಿದೂಷಕ ಆಲೋಚಿಸುತ್ತಿರುವಾಗ ರಾಜಾ ದುಷ್ಯಂತ ಪ್ರವೇಶಿಸುವನು.
ತಾವು ಬೇಟೆಗೆ ಬಂದದ್ದು ನಿಜ. ಆದರೆ ಆಶ್ರಮದ ಪವಿತ್ರ ವಾತಾವರಣವನ್ನು ಕಲುಷಿತ ಮಾಡುವದು ಉಚಿತ ಅಲ್ಲ. ಅಲ್ಲಿಯ ನಿವಾಸಿಗಳಿಗೆ ಪೀಡೆ ಆಗದಂತೆ ಇರಲು ತನ್ನ ಪರಿವಾರಕ್ಕೆಲ್ಲ ಆದೇಶ ಕೊಡುತ್ತಿದ್ದಾನೆ ದು಼ಷ್ಯಂತ.


ಶಕುಂತಲೆ ತನ್ನತ್ತ ತಿರುಗಿ ನೋಡುತ್ತ ಹೋದುದನ್ನು ಗಮನಿಸಿ, ಅವಳೂ ತನ್ನಲ್ಲಿ ಅನುರಕ್ತಳಾಗಿರುವಳೆಂದು ಭಾವಿಸುವನು. ಪ್ರೀತಿಸಿದ್ದನ್ನು ಹೊಂದುವದು ಅಷ್ಟು ಸುಲಭವಲ್ಲ ಎಂದರಿತರೂ ದುಷ್ಯಂತನ ಮನಸು ಅವಳನ್ನು ಬಯಸುತ್ತದೆ.
” ಕಾಮೀ ಸ್ವತಾಂ ಪಶ್ಯತಿ “
ಪ್ರೇಮೀ ಎಲ್ಲೆಡೆ ತನ್ನ ಆತ್ಮವನ್ನೇ ಕಾಣುವನು.
” ಜಯತು ಜಯತು ಭವಾನ್ ” ಎಂದು ವಿದೂಷಕ ಅಭಿನಂದಿಸುವನು. ಮೊದಲ ಭೇಟಿಯಲ್ಲಿ ತಾನು ಶಕುಂತಲೆಯಲ್ಲಿ ಅನುರಕ್ತನಾದದ್ದನ್ನು ವಿಸ್ತರಿಸಿ, ಹೇಗಾದರೂ ಮಾಡಿ ತಾನು ಇನ್ನೂ ಕೆಲವು ದಿನ ಆಶ್ರಮದೊಳಗೆ ಇರುವ ಬಯಕೆಯನ್ನು ವ್ಯಕ್ತಪಡಿಸುವನು ದುಷ್ಯಂತ. ಇವರಿಬ್ಬರು ಹೀಗೆ ಮಾತು ಕತೆಯಲ್ಲಿ ಇದ್ದಾಗ ಸೇನಾಪತಿಯ ಆಗಮನ ಆಯಿತು.
ವಿದೂಷಕನನ್ನು ಮಾಧವ್ಯ ಎಂದು ಕರೆಯುತ್ತಾ ಈ ಮಾಧವ್ಯ ನನ್ನ ಬೇಟೆಯ ಹವ್ಯಾಸವನ್ನು ವಿರೋಧಿಸುತ್ತಾ ಇರುವನೆಂದು ರಾಜ, ಸೇನಾಪತಿಯಲ್ಲಿ ದೂರು ಹೇಳುವನು. ಆಗ ಸೇನಾಪತಿ ಬೇಟೆಯ ಹವ್ಯಾಸದ ಲಾಭವನ್ನು ವಿವರಿಸಿದ್ದಾನೆ.
“ಬೇಟೆಯಾಡುವುದರಿಂದ ಶರೀರದ ತೂಕ ಕಡಿಮೆ ಆಗಿ, ಮನುಷ್ಯ ಕ್ರಿಯಾಶೀಲ ಆಗುವನು. ದೇಹದ ಕೊಬ್ಬು ಕರಗುವದು. ಭಯಭೀತ ಆದ ಪ್ರಾಣಿಗಳ ಹೃದಯದ ಅರಿವು ಆಗುವದು.
“ಮಿಥ್ಯಾ ಏವ ವ್ಯಸನಂ ವದಂತಿ ಮೃಗಯಾ ಈದೃಶ ವಿನೋದ: ಕುತ:”
ಬೇಟೆಯೂ ಒಂದು ವಿನೋದವೇ ಎಂಬುದು ಸೇನಾಪತಿಯ ಅಭಿಪ್ರಾಯ. ಬೇಟೆಯಲ್ಲಿ ಆನೇಕ ದೋಷಗಳು ಇದ್ದರೂ ಬೇಟೆಯ ನೆಪದಲ್ಲಿ ನಿವಾಸಿಗಳಿಗೆ ಪ್ರಮಾದಕರವಾದ ಪ್ರಾಣಿಗಳನ್ನು ಕೊಲ್ಲುವದೂ ಕರ್ತವ್ಯವೇ ಎನಿಸುವದು. ಶರತ್ ಹಾಗೂ ಗ್ರೀಷ್ಮ ಋತುಗಳು ಬೇಟೆಗೆ ಪ್ರಶಸ್ತ ಸಮಯ.ಚಿಗರೆಗಳ ಸಂಖ್ಯೆ ಜಾಸ್ತಿಯೂ ಆಗ ಬಾರದು. ಬೇಟೆಯಿಂದ ಪ್ರಾಣಿಗಳ ಸ್ವಭಾವ ಪರಿಚಯ ಆಗುವದು. ಪ್ರಾಣಿಗಳ ದಾಳಿ ಹೇಗೆ ಎದುರಿಸಬೇಕು ಎಂಬುದರ ಅನುಭವ ಬಂದು ಯುದ್ಧಭೂಮಿಯಲ್ಲಿ ಶತ್ರುಗಳನ್ನು ಎದುರಿಸುವ ಧೈರ್ಯ,ಸಾಹಸ, ನೈಪುಣ್ಯ ಬರುತ್ತದೆ. ಹೀಗೆ ಬೇಟೆ ಕೇವಲ ವ್ಯಸನ ಅಲ್ಲ, ಅದರಲ್ಲಿಯೂ ಸಕಾರಾತ್ಮಕ (positive) ಗುಣಗಳು ಅಡಗಿವೆ ಎಂದು ಸೇನಾಪತಿ ತಿಳಿಸುವನು.
ಆಗ ವಿದೂಷಕ ಅವನನ್ನು ದೂರುತ್ತಾ,
” ರಾಜನು ತನ್ನ ಕರ್ತವ್ಯಗಳನ್ನು ನಿಭಾಯಿಸಲು ರಾಜಧಾನಿಗೆ ಹಿಂತಿರುಗ ಬೇಕು,ನೀನು ಬೇಕಾದರೆ ಯಾವದೋ ಒಂದು ಮುದಿ ಕರಡಿಯ ಬಾಯಿಗೆ ಬೀಳು “
ಎಂದು ಹಾಸ್ಯ ಮಾಡುತ್ತ ದುಷ್ಯಂತನಿಗೆ ಅವನ ಕರ್ತವ್ಯಗಳನ್ನು ನೆನಪಿಸುವನು. ಆಗ ದುಷ್ಯಂತನು ಸೇನಾಪತಿಗೆ ಆಜ್ಞಾಪಿಸುವನು.
” ಶಮ ಪ್ರಧಾನೇಷು ತಪೋಧನೇಷು
ಗೂಢಂ ಹಿ ದಾಹಾತ್ಮಕಮ್ ಅಸ್ತಿ ತೇಜ:
ಸ್ಪರ್ಶಾನುಕೂಲಾ ಇವಸೂರ್ಯಕಾಂತಾಸ್ತದನ್ಯ ತೇಜೋ ಅಭಿಭವಾದ್ವಮಂತಿ. “
ಈ ಆಶ್ರಮದ ತಪಸ್ವಿಗಳಲ್ಲಿ ಆಗಾಧ ಶಕ್ತಿ ಸಂಚಯವಾಗಿರುತ್ತದೆ. ಸೂರ್ಯಕಾಂತ ಮಣಿಯಂತೆ ಅವರು ತಂಪನ್ನೂ ಕೊಡಬಲ್ಲರು.
ಇನ್ನು ಬೇಟೆಗೆ ವಿರಾಮ. ಪ್ರಾಣಿಗಳೆಲ್ಲ ವಿಶ್ರಾಂತಿ ತೆಗೆದುಕೊಳ್ಳಲಿ. ವಿಶ್ರಬ್ಧಂ.
ವರಾಹಗಳು ಗಡ್ಡೆ ತಿನ್ನಲಿ.
ಜಿಂಕೆಗಳು ಹುಲ್ಲು ಮೇಯಲಿ.
ದನಗಳು ನೀರಲ್ಲಿ ಮೀಯಲಿ.
ತಪಸ್ವಿಗಳು ನಿರಾತಂಕವಾಗಿರಲಿ.
ಈ ರೀತಿ ದುಷ್ಯಂತ ಆಜ್ಞಾಪಿಸುವನು.
” ಮಹಾಸ್ವಾಮಿಗಳ ಚಿತ್ತ ,ಹಾಗೇ ಆಗಲೀ “
ಎಂದು ಹೇಳುತ್ತ ಸೇನಾಪತಿ ನಿರ್ಗಮಿಸಿದನು.
ಹೆಚ್ಚಿನ ಬರಹಗಳಿಗಾಗಿ
דירות דיסקרטיות בקריות במיקום מרכזי And The Mel Gibson Effect
The Secret For נערות ליווי בבאר שבע למסיבות פרטיות Revealed in Seven Simple Steps
What The Pope Can Teach You About ליווי בחינם בירושלים עם תמונות אמיתיות