ಇತ್ತೀಚಿನ ಬರಹಗಳು: ಮಂಜುವಾಣಿ ಎಸ್. ಡಿ. (ಎಲ್ಲವನ್ನು ಓದಿ)
- ಬೋಧಿ ವೃಕ್ಷ - ಡಿಸಂಬರ್ 20, 2020
- ಉತ್ತುಂಗ - ಜೂನ್ 19, 2020
- ಬದಲಾಗಲಿ ಏಕೆ? - ಮೇ 31, 2020
ಬಾಯ ಬಂದೀಖಾನೆಯಿಂದ
ಬಿಡುಗಡೆಯಾಗಿ
ಅವರಿವರ ಕಿವಿಯ ಕದವ ತಟ್ಟಿ
ಹೃದಯದ ಹೊಸ್ತಿಲನು ಮೆಟ್ಟಿ
ನೇರ ಮತ್ತು ಸ್ಪಷ್ಟ
ಅರ್ಥವನು ತೊರೆದು
ಅಪಾರ್ಥದ ಅಪಘಾತಕ್ಕೀಡಾಗುತ್ತಾ
ಒಂದು ನಾಲಿಗೆಯಿಂದ
ಮತ್ತೊಂದು ನಾಲಿಗೆಗೆ ನೆಗೆದು
ಎಲ್ಲೆ ಮೀರಿ ಅಲೆದು ಬರುವ
‘ಅಲೆಮಾರಿ ಮಾತು’ಗಳಿಗಿಂತ,
ಒಳಮನೆಯ ಕೋಣೆಯಲಿ
ತಟಸ್ಥ ಮಣೆಯೇರಿ ಕೂತ
‘ಸ್ಥಾವರ ಮೌನ’
ಬಲು ಕ್ಷೇಮ.




ಹೆಚ್ಚಿನ ಬರಹಗಳಿಗಾಗಿ
ಮುಂದುವರೆಯುವುದು ಮತ್ತು ಉದ್ದಾರ ಎನ್ನುವ ಎರಡು ಕವಿತೆಗಳು
ಅನಿರೀಕ್ಷಿತ
ಹೂರಣವಿಲ್ಲದ ಹೋಳಿಗೆ