- ಮೇಘದೂತ ಎಂಬ ಭಾವಗೀತೆ - ಅಕ್ಟೋಬರ್ 14, 2021
- ೨೦೨೦ –ಒಂದು ಪಕ್ಷಿನೋಟ - ಡಿಸಂಬರ್ 31, 2020
- ಹುಾವು ಅರಳುವವು ಸುಾಯ೯ನ ಕಡೆಗೆ ಕುರಿತು - ಸೆಪ್ಟೆಂಬರ್ 22, 2020
ನಾಡೋಜ ಚೆನ್ನವೀರ ಕಣವಿಯವರ *ಹುಾವು ಹೊರಳುವವು ಸುಾಯ೯ನ ಕಡೆಗೆ* ಕವನ ಗುಚ್ಛದ ಕುರಿತ ವಿಮಶಾ೯ತ್ಮಕ ನುಡಿ.
ಶ್ರೀ ಕಣವಿಯವರ “ಹುಾವು ಅರಳುವವು”
ಕವನ ಗುಚ್ಛವು ಒಂದು ವಿಶಿಷ್ಟವಾದ ರೀತಿಯಲ್ಲಿ ಸಾಗಿದೆ. ನೆಲ-ಮುಗಿಲಗಳ ನಡುವಿನ ಅಂತ:ಕರಣ, ಭೂಮಿಯ ಬದುಕಿಗೆ ಅತೀಂದ್ರಿಯದ ನೆರೆ ಅಲ್ಲದೆ ನೆರವು ಇದುಸರಳ ಸಹಜ ಎಂಬ ನಿಲುವು. ಇಲ್ಲಿ ಹುಾವಿನ ಸಾಂಗತ್ಯ ಸುಾಯ೯ನೊಂದಿಗಾದರೆ ಮಾನವನ ನಡೆ ಚಂದ್ರನವರೆಗಷ್ಟೇ ಸಾಗಿದೆ ಎಂಬ ಕವಿಯ ನಿಲುವಿನಲ್ಲಿ ವಿರೋಧಗಳ ಸಮನ್ವಯದ ಭಾವವಿಲ್ಲ ಬದಲಿಗೆ ಅವುಗಳ ನಿರಂತರ ಸಾಂಗತ್ಯವಿದೆ, ಎರಡರಲ್ಲೂ ಹೊಸತನ್ನು ಕಾಣುವ ತುಡಿತವಿದೆ. ಕವಿ ನಿಂತ ದಡವೊಂದಾದರೆ ಆಚೆ ದಡಕ್ಕೆ ನಡುವೆ ಅಗಾಧ ಅಂತರವಿದೆ ಈ ದಡ ದಾಟುವ ಪ್ರಯತ್ನ ಸದ್ದಿಲ್ಲದೆ ನಿರಂತರವಾಗಿ ಸಾಗುತ್ತಲೇ ಇದೆ.
ಮಾನವನ ಜೀವನದ ಆಳದಲ್ಲಿ ಅಗಾಧವಾದ ಕತ್ತಲು ತುಂಬಿಕೊಂಡಿದ್ದು ಈ ಆಳಕ್ಕೆ ಎಷ್ಟೇ ಬೆಳಕು ಸುರಿದರುಾ ಅದು ಈ ಕಂದರ ದಲ್ಲಿ ಮುಚ್ಚಿ ಹೋಗುತ್ತದೆ ಅಂತೆಯೇ ಈ ಅಂತರಾಳದ ಕತ್ತಲೆಯಾ ಸಹ ಇದೇ ರೀತಿಯದಾಗಿದೆ. ಹೊರಗಿನ ಚೀರಾಟಕ್ಕೆ ಒಳಗಿರುವ ಮಧುರವಾದ ಭಾವನೆಗಳ ಹೋರಾಟ ಸತತವಾಗಿದ್ದು ಇಂದಿಗೂ ನಡೆಯುತ್ತಲೇ ಇದೆ. ಇದು ನಮಗೆ ಹೇಗೆಂದರೆ ದಿನ ನಿತ್ಯ ಉದಯಿಸುವ ಸುಾಯ೯ನಂತೆ ಅದು ದಿನ ಬೆಳಗಿ ದಿನ ಮುಳುಗಿದಂತೆ ಜಗದಲ್ಲಿ ಅಡಗಿರುವ ಎಲ್ಲಾ ಗುಣಗುಣದೋಷಗಳನ್ನು ಸುಾಚ್ಯವಾಗಿ ಹೇಳುತ್ತಾ ಅದನ್ನು ಬಿಡಿಸುವ ದಾರಿಕುಾಡ ಕಠಿಣತಮ ಎನ್ನುತ್ತಾರೆ ಕವಿ.
ಗಿಡದಿಂದ ಉದುರುವ ಎಲೆಗಳಿಗೆ ಇನಿತುಾ ಕೂಡ ಬೇಸರವಿಲ್ಲ ಬದಲಿಗೆ ನನ್ನ ಜಾಗದಲ್ಲಿ ಹೊಸ ಚಿಗುರು ಬರುತ್ತದೆ ಎಂಬ ಧನ್ಯತಾಭಾವ, ತನ್ನ ಅಳಿವಿನಲ್ಲುಾ ಬೇರೆಯವರ ಒಳಿತನ್ನು ಕಾಣುವಂತಹ ಭಾವನೆ. ಇಂತಹ ಜಗದ ಸೃಷ್ಟಿಯ ಕಲಾಕಾರ ಎಲ್ಲಿ ಅಡಗಿದ್ದಾನೋ?? ಈ ರಚನೆ ಯಲ್ಲಿ ಅವನ ಪಾತ್ರ ಅದ್ಭುತವಷ್ಟೇ ಅಲ್ಲ ಅಚ್ಚರಿಯು ಹೌದು, ಈ ರಹಸ್ಯವನ್ನು ಹುಡುಕು ವೆನೆಂದು ಹೊರಡುವ ಈ ಮಾನವನ ನಡಿಗೆ ಬರೀ ಚಂದ್ರನನ್ನು ತಾಗಲು ಸಾಧ್ಯವೇ ಹೊರತು ಜಗಬೆಳಗುವ ಸುಾಯ೯ನನ್ನಲ್ಲ.
ಅಂತೆಯೇ ಈ ಸೃಷ್ಟಿಯ ಅಂತರಾಳದ ಮಮ೯ಗಳು ಕೆಲವು ಕೈಗೆಟುಕುವುದುಾ ಇಲ್ಲ. ಅದು ಹೇಗಿದೆಯೆಂದರೆ ತಾಯಿಯ ಗಭ೯ದಲ್ಲಡಗಿದ ಕುಾಸಿನಂತೆ ಆ ನೋವು ನಲಿವುಗಳ ಅನುಭವ ಆ ತಾಯಿಗಷ್ಟೇ ಗೊತ್ತೇ ವಿನಹ ಬೇರೆಯವರಿಗಲ್ಲ. ಹಾಗೆಯೇ ಸೃಷ್ಟಿಕತ೯ನ
ನಿಯಮ ಏನಿದೆಯೋ ಏನೋ ಬಲ್ಲವರಾರು????. ಆದರೆ ಈ ಹುಡುಗಾಟ ಮಾತ್ರ ನಿತ್ಯ ಆ ದಾರಿಯ ಪಯಣ ನಿರಂತರ…………………
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ