- ಷೋರೂಂ ಬೈಕಿನ ಸ್ವಗತಗಳು - ಜುಲೈ 10, 2023
- ಕಾವ್ಯವೆಂದರೆ ಅದೇನದು? - ಫೆಬ್ರುವರಿ 5, 2022
- ಗರುಡ ಗಮನ ; ವೃಷಭ ವಾಹನ - ನವೆಂಬರ್ 28, 2021
ಕಾವ್ಯವೆಂದರೆ ಅದೇನದು?
ಇತ್ತೀಚೆಗೆ ಎಲ್ಲರೂ..
ಗೀಚಲು ಶುರುಮಾಡಿದ್ದಾರಲ್ಲ!!
ಕಾವ್ಯವಿರಬೇಕು ಇಲ್ಲಾ ಕವನವಿರಬೇಕು
ಅದೂ ಅಲ್ಲದಿದ್ದರೆ ಕವಿತೆಯಿರಬೇಕು
ಕಾವ್ಯವೆಂದರೆ,
ಪದಗಳನ್ನು ಒಂದರ ವಕ್ಕಳಕ್ಕೆ
ಮತ್ತೊಂದನ್ನು ಪೋಣಿಸುವುದೇ?
ಪ್ರಾಸಗಳನ್ನು ಆಯ್ದು ಮನೆ ಕಟ್ಟುವುದೇ?
ಎಲ್ಲಿಗೆ ಬೇಕು ಅಲ್ಲಿಗೆ
ಸಾಲುಗಳನ್ನು ತುಂಡರಿಸುವುದೇ?
ನಾಲ್ಕೈದು ಪ್ಯಾರ ಅನಿಸಿಕೆ ಬರೆಯುವುದೇ?
ಇದೊಂದು ಗೊಂದಲದ ಪ್ರಶ್ನೆ
ಇಂತದ್ದೇ ನಿಯಮಗಳೆಂಬುದಿದ್ದರೆ
ಅದನ್ನು ಅನುಸರಿಸಬಹುದಿತ್ತು
ಓದಿದರೆ ಕಾವ್ಯವಾಗಬಲ್ಲುದು
ಮತ್ತೆ ಓದಿದರೆ ಗದ್ಯವಾಗಬಹುದು
ಎಲ್ಲಿಲ್ಲದ ಮಾಂತ್ರಿಕ ಶಕ್ತಿ ಈ ಪ್ರಕಾರಕ್ಕೆ
ಅರ್ಥೈಸಿಕೊಳ್ಳದಿದ್ದರೆ ಗೊಚ್ಚೆ
ಕೆಲವರಿಗೆ ನೇರ ಚಾಟಿ ಏಟು
ತಳ ಸುಡುವ ಹಾಗೆ!
ಇಲ್ಲಿಗೆ ಎಲ್ಲವೂ ಸಲ್ಲಲಿದೆ
ಪುಟಪುಟಗಳಲ್ಲಿ ಹೇಳುವುದನ್ನು
ಕೇವಲ ಎರಡು ಪದಗಳಲ್ಲಿಯೇ ಮುಗಿಸಹುದು!
ನಾಲ್ಕು ಸಾಲಿನಲ್ಲಿ ಪ್ರಪಂಚವೇ ಕಾಂಬುದು
ಅಳುವವರಿಗೆ ನಗುವುದನ್ನೂ
ನಗುವವರಿಗೆ ಸೈರಿಸುವುದನ್ನು
ಹಸಿದವರಿಗೆ ಅನ್ನವನ್ನೂ
ಹೆಚ್ಚಾದವರಿಗೆ ತಲೆತೂಗುವುದನ್ನೂ
ಹೇಳಿಕೊಡುವ ಅದ್ಭುತ ಕಲೆ!
ಒಬ್ಬೊಬ್ಬರದು ಒಂದೊಂದು ಶೈಲಿ
ಮಹನೀಯರಿಂದ ಇಲ್ಲಿಯವರೆಗೆ
ಹನಿಗವನ, ಕಿರುಗವನ, ಖಂಡಕಾವ್ಯ
ಜಾನಪದ, ತತ್ವಪದ, ಗೀಗೀ ಪದ, ಬಂಡಾಯ, ಕ್ರಾಂತಿ
ಕವಿತೆ, ಕವನ, ಕಥನ ಕವನ ಇಲ್ಲೇ ಹುಟ್ಟಿ
ಇಲ್ಲೇ ಸತ್ತುಹೋಗಿವೆ
ಹಾಗಾದರೆ ಇದು ಗದ್ಯಕವಿತೆ ಯಾಕಾಗಬಾರದು??
ಒಪ್ಪಿಕೊಳ್ಳಲು ಕಷ್ಟವಾದೀತು
ಹೊಸತೆಂಬುದು ಅಂಕುಶವಿದ್ದಂತೆ!
ಇಲ್ಲಿಂದ ಗಮನಹರಿಸಬೇಕಿದೆ
ಭಾವವಿರದ, ವಿಚಾರವಿರದ
ರೂಪಕವಿರದ ಅಥವಾ
ಇವುಗಳ ಪ್ರಯೋಗವಿರದೆ
ಸಾಲುಗಳು ಸಪ್ಪೆಯಾಗುವವು
ಆದರೂ..
ಕವಿತೆಯಲ್ಲಿ ಎಲ್ಲವನ್ನೂ ಅಪೇಕ್ಷಿಸುವುದು
ಕಾರ್ಮಿಕನಲ್ಲಿ ಎಲ್ಲಾ ಕೌಶಲ್ಯಳನ್ನು ಹುಡುಕಿದಂತೆ!
ನಾಟಕದಲ್ಲಿರಬೇಕಾದ ಸಂಭಾಷಣೆಗಳು
ಕಥೆ, ಕಾದಂಬರಿಗಳಲ್ಲಿ ಮೂಡುವುದಾದರೆ,
ಕವಿತೆಯಲ್ಲಿ ಯಾಕೆ ಗದ್ಯವಿರಬಾರದು??
ಅಡಿಗರು, ಕುವೆಂಪು ಅವರನ್ನೇ ಕೇಳಬೇಕಿದೆ!!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ