ಇತ್ತೀಚಿನ ಬರಹಗಳು: ಪ್ರೇಮಶೇಖರ (ಎಲ್ಲವನ್ನು ಓದಿ)
- ಇಂದು ಇಲ್ಲದಿದ್ದರೂ ಇಂದು… - ಅಕ್ಟೋಬರ್ 22, 2022
- ಗೋಧ್ರಾ ಇನ್ನೆಷ್ಟು ದೂರ? - ಮೇ 26, 2022
- ಒಂದು ಯುದ್ಧ, ಒಬ್ಬ ಖೈದಿ ಮತ್ತು ಆಕೆ - ಮಾರ್ಚ್ 4, 2022
ಗೊತ್ತೇ ಇತ್ತು ಇವಳಪ್ಪ
ಟ ಗಾಂಧಿ
ವಾದಿಯೆಂದು
ಅರಿವೂ ಇತ್ತು ಚೂರೇ
ಚೂರು ರುಚಿ
ಗೆ ತಕ್ಕಷ್ಟು ಬಜಾರಿಯೆಂದು
ನಿಮಗೂ ಗೊತ್ತೇ
ಇರಬೇಕು ಗಾಂಧಿಬಜಾರಿ
ನ ಪುಸ್ತಕದಂ
ಗಡಿಗೆ ಅಡಿ
ಗಡಿಗೆ ಹೋಗುವವಳೆಂದು.
ಬೆಳ್ಳಂಬೆಳಿಗ್ಗೆ ನನ್ನ
ಮುಂದೆ ಗೆಳತಿಯರೆಲ್ಲ
ರನು ವಾಚಾಮಗೋಚರ ಬೈದು
ಮನಸೋಇಚ್ಚೆ ಮಾನ ತೆಗೆದು
ಕಿವಿತುಂಬ ಕಿಟಿಕಿಟಿ ಅಂದು
ನನ್ನ ತಲೆಯನೆಲ್ಲ
ಲಗಾಡಿ ತೆಗೆದು
ಮಧ್ಯಾಹ್ನ ಎಲ್ಲ
ರನು ಮನೆಗೆ ಕರೆದು
ಮೂವತ್ತೆರಡೂ ಹಲ್ಲು ಕಿರಿದು
ಅತ್ತಿಂದಿತ್ತ ನಗಾಡಿ ನೆಗೆದು
ತಟ್ಡೆಗೆ ಹೋಳಿಗೆ ಪುಳಿಯೋಗರೆ
ಮೊಸರನ್ನ ಉಪ್ಪು ಉಪ್ಪಿ
ನಕಾಯಿ ಧಾರಾಳ ಸುರಿದು
ಬೀಡಾವನೂ ಇತ್ತು ಒಂದು
ಕಿಟಿ ಪಾರ್ಟಿಯೆಂದು
ಸಂ
ಭ್ರಮಿಸಿ
ದಾಗ
ಗೊತ್ತಾಯಿತು ಇಂದು
ಇವಳು ಗಾಂಧಿಬಜಾರಿಯೆಂದೂ.
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ