- ಗುಂಪಿನಲ್ಲಿ ಗಾಂಪರಾಗುವ ಮನಸ್ಥಿತಿ - ಅಕ್ಟೋಬರ್ 30, 2024
- ಕಾನ್ ಬಾನ್ - ನವೆಂಬರ್ 12, 2020
- ನಾಳೆ ಶನಿವಾರ…! - ಸೆಪ್ಟೆಂಬರ್ 18, 2020
ವಿಷಯದ ಆಳಕ್ಕಿಳಿಯುವ ಮೊದಲು ನಾವೆಲ್ಲರೂ ಸಣ್ಣದೊಂದು ಪರೀಕ್ಷೆಗೊಳಾಗುವ.ಸುಮಾರು ಐದರಿಂದ ಹತ್ತು ಜನರಿರುವ ಸಂದರ್ಭದಲ್ಲಿ ಈ ಪರೀಕ್ಷೆಯನ್ನು ಮಾಡಿದರೆ ಈ ವಿಷಯವು ಸ್ಪಷ್ಟವಾಗುವುದು. ಕೆಳಗೆ ಕೊಟ್ಟಿರುವ ಸಿಲಿಂಡರ್ ಗಳಲ್ಲಿ ʼAʼ ಗೆ ಸಮನಾದ ʼA1ʼ, ʼA2ʼ ಮತ್ತು ʼA3ʼ ಸಿಲೆಂಡರ್ ಗಳಲ್ಲಿ ಯಾವುದು (ಎತ್ತರ-ಅಗಲ) ಕಾಣುತ್ತಿದೆ?
ಮೇಲಿನ ಪರೀಕ್ಷೆಗೆ ಬಹುತೇಕ ಉತ್ತರವು ಸಿಲಿಂಡರ್ʼAʼ ಗೆ ಸಮನಾಗಿರುವುದು ಸಿಲೆಂಡರ್ ʼA2ʼ ಎಂದೆ ಹೇಳಲಾಗಿರುತ್ತದೆ.( ಆದರೆ ವಾಸ್ತವದಲ್ಲಿ ಸಿಲಿಂಡರ್ʼAʼ ಗೆ ಸಮನಾಗಿರುವುದು ಸಿಲೆಂಡರ್ ʼA1) .ಆದರೆ ಇಲ್ಲಿ ಒಂದು ಸೂಕ್ಷ್ಮವಿದೆ.ಮೊದಲಿನ ನಾಲ್ಕಾರು ಜನರು ಏನನ್ನಾದರೂ ಹೇಳಿದರೆ ಉಳಿದವರು ಸಹಾ ಅದನ್ನೆ ಅನುಸರಿಸುತ್ತಾರೆ.– ಇದೆ ‘Mob Psychology’.ಕನ್ನಡಕ್ಕೆ ʼಗುಂಪಿನಲ್ಲಿ ಗಾಂಪರಗುವ ಮನಸ್ಥಿತಿʼ ಎಂದು ಕರೆಯಬಹುದು.ಇದೆʼ Mob Psychology’ ಮುಂದಿನ ಹಂತದಲ್ಲಿ ʼಅನುಸರಣೆಗೆʼ ಕಾರಣವಾಗುತ್ತದೆ. ಅನುಸರಣೆ ಎನ್ನುವುದು ಒಂದು ಸಮಾಜಿಕ ಪ್ರಭಾವದ ಪ್ರಕ್ರಿಯೆ : “ವರ್ತನೆಗಳ ಬದಲಾವಣೆಯೊಂದಿಗೆ ವ್ಯಕ್ತಿಯು ತನ್ನ ದೃಷ್ಟಿಕೋನ ಅಥವಾ ವರ್ತನೆಗಳನ್ನು ಬದಲಾಯಿಸಕೊಂಡು ಸಮಾಜಿಕ ರೂಡಿಯೊಳಗೆ ಒಂದಾಗಿರುವುದನ್ನೇ ಅನುಸರಣೆ ಎನ್ನಬಹುದು” . ಈಗ ಅನುಸರಣೆಯ ಮೂಲಕ ‘Mob Psychology’ ಅರ್ಥಮಾಡಿಕೊಳ್ಳಲು ಪ್ರಯುತ್ನಿಸೋಣ.ಸಹಜವಾಗಿ ನಾವೆಲ್ಲರೂ ಇದನ್ನು ಗಮನಿಸಿರುತ್ತೇವೆ.ಯಾವುದಾದರೊಂದು ಸಭೆಯಲ್ಲಿರುವಾಗ ಕೆಲವು ಸಭಿಕರು ತಮಗರಿವಿಲ್ಲದಂತೆ ಬೇರೆ ಸಭಿಕರು ಕರತಾಡನ ಮಾಡಿದ್ದನ್ನು ಗಮನಿಸಿ ತಾವು ಕರತಾಡನ ಮಾಡಿರುತ್ತಾರೆ ಅಂದರೆ ಅನುಸರಿಸುತ್ತಾರೆ. ನಮ್ಮ ಜಾನಪದರಲ್ಲಿ ಒಂದು ಮಾತಿದೆ “ಹತ್ತರ ಕೂಟ ಹನ್ನೊಂದು ಪರಿಸೆ ಕೂಟ ಗೋವಿಂದ” ಅಂದರೆ ಹತ್ತು ಜನರೊಳಗೆ ಒಬ್ಬರಾಗಿ ಜಾತ್ರೆಯ ಗುಂಪಿನಲ್ಲಿ ಗೋವಿಂದ ಎಂದು ಬಿಟ್ಟರೆ ಸಾಕು ಯಾವ ತಕರಾರು,ವಾದ,ವಿವಾದಗಳು ತಲೆ ಮೇಲೆ ಬರುವುದಿಲ್ಲ.ಗುಂಪಿನಲ್ಲಿ ಉಳಿದವರ ಜೊತೆ ಅನಸುರಿಸಿ ನಡೆದರೆ (ನಮಗರಿವಿಲ್ಲದಂತೆ ಅಥವಾ ಕೆಲವೊಮ್ಮೆ ಪ್ರಜ್ಞಾ ಪೂರ್ವಕವಾಗಿಯೂ) ಸಾಕು!
ಈ ಅನುಸರಣೆಯಲ್ಲಿ ಪ್ರಮುಖವಾಗಿ ಎರಡು ತೆರೆನಾದ ಸಿದ್ದಾಂತಗಳನ್ನು ಕಾಣುತ್ತೇವೆ:
ಮಾಹಿತಿಯ ಪ್ರಭಾವ ಮತ್ತು ರೂಢಿಗತ ಪ್ರಭಾವ
ಮಾಹಿತಿಯ ಪ್ರಭಾವ: ಇದು ಒಂದು ತೆರೆನಾದ ಅನುಸರಣೆ.ಎಲ್ಲಿ ನಮಗೆ ಬೇರೆಯವರನ್ನು(ಮೂರನೆಯವರನ್ನು) ಮಾಹಿತಿಯ ಗಣಿಯನ್ನಾಗಿ ನಾವು ನೋಡಿರುತ್ತೇವೆ ಅಲ್ಲದೆ ಗೊಂದಲದ ಪರಿಸ್ಥಿತಿಯಲ್ಲಿ ಮೂರನೆಯವರು ಕೊಡುವ ವ್ಯಖ್ಯಾನ ಮತ್ತು ಅವರ ಅಭಿಪ್ರಾಯಗಳಿಗೆ ನಾವು ಮಣೆ ಹಾಕುತ್ತೇವೆ.
ಮಾಹಿತಿಯ ಪ್ರಭಾವಕ್ಕೆ ನಾವು ಈ ಕೆಳಗಿನ ಸಂದರ್ಭಗಳಲ್ಲಿ ಒಳಗಾಗುತ್ತೇವೆ:
- ನಮಗೆ ಗೊಂದಲ ಉಂಟಾದಾಗ
- ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ
- ಕೊನೆಯದಾಗಿ ನಮ್ಮೆದುರಿನ ವ್ಯಕ್ತಿ ವಿಷಯಗಳಲ್ಲಿ ನೈಪುಣ್ಯತೆಯನ್ನು ಹೊಂದಿದ್ದರೆ
ರೂಢಿಗತ ಪ್ರಭಾವ: ಇದು ಒಂದು ತೆರೆನಾದ ಅನುಸರಣೆ.ಮೇಲೆ ಉಲ್ಲೆಖಿಸಿಸುರವ ಉದಾಹರಣೆಯನ್ನು ಮತ್ತೊಮ್ಮೆ ಗಮನಿಸಿ,ಅಲ್ಲಿ ಸಭಿಕರು ಗಣ್ಯಮಾನ್ಯರ ಮಾತಿಗೆ ತಮ್ಮ ಕರ ತಾಡನವನ್ನು ಮಾಡಿ ಮೆಚ್ಚುಗೆ ಸೂಚಿಸುತಿದ್ದಾರೆ.ಆದರೆ ಆಗಲೆ ಸಭೆಗೆ ಬೆನ್ನು ತೋರಿಸಿರುವ(ಅಕ್ಷರಶಃ) ಸಭಿಕರೊಬ್ಬರು ಸಹ ಸಭಿಕರ ಜೊತೆಗೂಡಿ ತಾವು ಸಹ ಕರತಾಡನ ಮಾಡಿದರು.(ವಾಸ್ತವವಾಗಿ ಅವರು ಸಭೆಯಲ್ಲಿ ಮಾತುಗಳನ್ನು ಆ ಕ್ಷಣದಲ್ಲಿ ಕೇಳಿಸಿಕೊಂಡಿಯೆ ಇರಲಿಲ್ಲ),ಇಲ್ಲಿ ಸಭೆಗೆ ಬೆನ್ನು ತೋರಿಸಿ ಹೊರ ಹೋಗುತ್ತಿರುವ ಸಭಿಕರು ಸಭೆಯ ರೂಢಿಗೆ ಒಳಗಾಗಿದ್ದಾರೆ.ಅಂದರೆ ಸಭೆಯ ಒಂದು ʼಗಿರಕಿಗೆʼ ಸಿಕ್ಕು ಬಿದ್ದು ತಾವು ಸಹ ಚಪ್ಪಾಳೆ ತಟ್ಟಿ ಇನ್ನಿತರೆ ಸಭಿಕರೊಂದಿಗೆ ಒಂದಾಗಿದ್ದಾರೆ, ಅಷ್ಟೆ.ಇಲ್ಲಿ ಒಂದು ಸೂಕ್ಷ್ಮವಿದೆ ನಾವು ರೂಢಿಗತವಾಗಿ ಪ್ರಭಾವಕ್ಕೆ ಒಳಗಾಗಿರುತ್ತೇವೆ ಅದು ಏಕೆ ಎಂದು ಗಮನಿಸಿದರೆ ನಾವು ಒಂದು ತಂಡದ ಸದಸ್ಯರಾಗಿ ಮುಂದುವರೆಯಲು ಮತ್ತು ಆ ಗುಂಪು ನಮ್ಮನ್ನು ತಮ್ಮೊಳಗಿನ ಒಬ್ಬ ಸದಸ್ಯನೆಂದು ಪರಿಗಣಿಸುವುದಕ್ಕಾಗಿ ರೂಢಿಗತ ಪ್ರಭಾವಕ್ಕೆ ಒಳಗಾಗುವುದು ಆ ಕ್ಷಣಕ್ಕೆ ಅನಿವಾರ್ಯವೆನ್ನಿಸಿರುತ್ತದೆ. ಇದಿಷ್ಟರ ಹಿನ್ನೆಲೆಯಲ್ಲಿ ಮತ್ತೊಮ್ಮೆ ‘Mob Psychology’ ಕಡೆ ಹೊರಳಿದರೆ ಅಲ್ಲಿ ಸ್ಪಷ್ಟವಾಗುವುದು ʼಅನುಸರಣೆʼ.
“ ಈ ‘Mob Psychology’ ಎನ್ನುವುದರಲ್ಲಿ ಜನ ಸಮೂಹವು ಯಾವುದೆ ತರ್ಕವಿಲ್ಲದೆ ಕಣ್ಣು ಮುಚ್ಚಿಕೊಂಡು ಗುಂಪಿನಲ್ಲಿರುವ ಇನ್ನಿತರೆ ಸದಸ್ಯರೆಲ್ಲರೂ ನಡೆದಂತೆಯೇ ತಾವು ಅವರನ್ನು ಅನುಸುರಿಸಿ ಅವರ ಹೆಜ್ಜೆಗಳ ಮೇಲೆ ಹೇಜ್ಜೆಗಳನ್ನಿಟ್ಟು ಹೋಗುತ್ತಾರೆ” . ಈಗ ನಮ್ಮೆಲ್ಲರ ಮನಸ್ಸು ʼStrikeʼ ಮತ್ತು ʼBundhʼ ಗಳ ಕಡೆಯೆ ಹರಿದಿದೆ.ಹೌದು ಅನುಮಾನವೇ Strikeʼ ಮತ್ತು ʼBundhʼ ಸಂದರ್ಭಗಳಲ್ಲಿ ಆ ಉನ್ಮತ್ತ ಸಮುದಾಯವು ʼMob Psychology’ ಪ್ರಭಾವಕ್ಕೊಳಗಾಗಿರುತ್ತದೆ.ಈ ‘Mob Psychology’ ಎನ್ನುವ ಪರಿಕಲ್ಪನೆಯು ಮೊಟ್ಟಮೊದಲಬಾರಿಗೆ ಚಲಾವಣೆಗೆ ಬಂದಿದ್ದು ೧೮೦೦ ರಲ್ಲಿ ಗೇಬ್ರಿಯಲ್ ಟರ್ಡೆ ಮತ್ತು ಗುಸ್ತಾವೊ ಲೇ ಬಾನ್ ಎನ್ನುವ ಸಮಾಜಿಕ ಮನಃಶಾಸ್ತ್ರಜ್ಞ.ಇನ್ನೂ ಈ ‘Mob Psychology’ ನಲ್ಲಿ ಮೂರು ವಿಧಗಳನ್ನು ಕಾಣುತ್ತೇವೆ:
೧) ಆಕ್ರಮಣಕಾರಿಯಾದ ಜನಸಮೂಹ:- ಈಗಾಗಲೆ ಮೇಲೆ ತಿಳಿಸದಂತೆ Strikeʼ ಮತ್ತು ʼBundhʼ ಸಂದರ್ಭಗಳಲ್ಲಿ ಉದೇಕ ಜನಸಮೂಹವು ತಮ್ಮ ವಿವೇಚನೆಯನ್ನು ಕಳೆದುಕೊಂಡು ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುತ್ತ ಹುಚ್ಚರಂತೆ ವರ್ತಿಸುತ್ತಾರೆ.
೨) ಪಲಾಯನವಾದ ಜನಸಮೂಹ:ಒಂದು ಪರಿಸ್ಥಿತಯನ್ನು ಉಹಿಸಿಕೊಳ್ಳಿ , ನಾವೆಲ್ಲರೂ ಒಂದು ಸಿನಿಮಾ ಥೆಟರ್ ನಲ್ಲಿದ್ದೇವೆ ಆಕಸ್ಮಕವಾಗಿ ಬಾಂಬ ಇಡಲಾಗಿದೆ ಎನ್ನುವ ಸುದ್ದಿ ಹಬ್ಬಿದಾಗ ನಾವೆಲ್ಲರೂ ತಪ್ಪಿಸಿಕೊಳ್ಳಲು ಓಡಾಡುತ್ತೇವೆ ಇದೆ ಪಲಾಯನವಾದ
೩) ಅಭಿವ್ಯಕ್ತಿಸುವ ಜನಸಮೂಹ: ವಯುಕ್ತಿಕ ಭಾವನೆಗಳಿಗನುಸಾರವಾಗಿ ಸಮಾನ ಮನಸ್ಥಿತಿಯವರು ಒಟ್ಟಾಗಿ ಸೇರುವುದು.ಉದಾಹರಣೆಗೆ ಮದುವೆ ಹಾಗು ಇನ್ನಿತರೆ ಶುಭ ಸಮಾರಂಭಗಳಾಗಿರಬಹುದು ಅಥವಾ ಸಾವು-ನೋವಿನ ಪರಿಸ್ಥಿತಿಗಳೇ ಆಗಿರಬಹುದು.
ಕೊನೆಯದಾಗಿ ಮುಗಿಸುವುದಕ್ಕೂ ಮೊದಲು ಈ ‘Mob Psychology’ ಜನಸಮೂಹವು ಮೂರನೆಯವರ (ಇನ್ನೊಬ್ಬರ )ಪ್ರಭಾವಕ್ಕೊಳಗಾಗಿ ವರ್ತಿಸುವುದನ್ನು ಕಾಣುತ್ತೇವೆ.
ಇದಿಷ್ಟು ‘Mob Psychology’ !!!
ಹೆಚ್ಚಿನ ಬರಹಗಳಿಗಾಗಿ
ಹೊನ್ನಾವರದಲ್ಲೀಗ ಮೆಲುನಗುವ ಶ್ರೀ ಚನ್ನಕೇಶವಾ
ಅರ್ಧ ವರ್ಷದಲ್ಲಿ ಶಾಲೆಗೆ ಸೇರಿದ ಹುಡುಗ
ಕೆ. ಸತ್ಯನಾರಾಯಣರ ನಾಲ್ಕು ಸಣ್ಣ ಕಥೆಗಳು