- ಇಂದು ಇಲ್ಲದಿದ್ದರೂ ಇಂದು… - ಅಕ್ಟೋಬರ್ 22, 2022
- ಗೋಧ್ರಾ ಇನ್ನೆಷ್ಟು ದೂರ? - ಮೇ 26, 2022
- ಒಂದು ಯುದ್ಧ, ಒಬ್ಬ ಖೈದಿ ಮತ್ತು ಆಕೆ - ಮಾರ್ಚ್ 4, 2022
-1-
ಕತ್ತಲ ಕೋಣೆಯೊಳಗೆ ಒಂಟಿ
ಯಾಗಿ ಕೂತು ಬಹುತ್ವ
ದ ಬಗ್ಗೆ ಭಾರಿ ಫರಮಾನು.
ಬಾಗಿಲು ತೆರೆ
ಅಂದರೆ ಇಲ್ಲ,
ನೀ ಹೊರಗಣವನು.
ಈ ಉನ್ನತ ಪ್ರಸ್ಥಭೂಮಿಯ
ಟಿಬೆಟನ್ನರು,
ಆ ವಿಶಾಲ ಹುಲ್ಲುಗಾವಲಿನ
ಮಂಗೋಲರು,
ಅತ್ತಲಿನ ರಂಗುರಂಗು ಟೋಪಿ
ಉಯ್ಘರರು,
ಇತ್ತಲಿನ ಹಳದಿಯುಡುಗೆ
ಫಲೂನ್ ಗಾಂಗರು
ಎಲ್ಲರ ಎದೆ ಸೀಳಿ ಅಟ್ಟಹಾಸಗೈದು
‘ಪೀಪಲ್ಸ್ (?) ರಿಪಬ್ಲಿಕ್’ ಕಟ್ಟಿದವನ
ಪಟ್ಟಶಿಷ್ಯರೆಂದರೆ ಹೀಗೇ ಇರಬೇಕು.
ಇದು ಕಟ್ಟಳೆ.
ಅಯ್ಯೋ ಮಾವೋ ತ್ಸೆ ತುಂಗ,
ಹುಟ್ಟುಹಾಕಿದೆಯಲ್ಲ ನೀ ಹೀಗೆ
ಒಳಹೊರಗೆ ನೂರೊಂದು ರಣರಂಗ!
-2-
ಕಂಡಿದ್ದೆವು ಗಡಿಯಾಚೆ
ಯಿಂದ ಬಂದ ಹಣ,
ದಂಡಕಾರಣ್ಯದ ಹೆಣ,
ಜತಗೆ
ಭರತವರ್ಷದ ಟೌನು
ಹಾಲು ಹಾಲಾಹಲವಾದದ್ದನ್ನು.
ಕಾಣುತ್ತಿದ್ದೇವೆ ಗಡಿಯಾಚೆ
ಯಿಂದ ಬಂದ
ಕೊರೋನಾ, ರೋನಾ,
ಹೊಸದಾಗಿ ತೆರೆದಿದೆ ಟೌನಗಲ
ನೂರೊಂದು ಕಾರಸ್ಥಾನ,
ಉಳಿಸಲು ಚೀನೀ ಮಾನ
ಮುಚ್ಚಿಟ್ಟು ಕೊರೋನಾ.
ವಿಚಾಟ್ ಹೋದರೇನು,
ವಾಟ್ಸ್ಆ್ಯಪಿನಲಿ ಬಂದೆ.
ವೀಬೋ ಕಿತ್ತರೇನು,
ಫೇಸುಬುಕ್ಕಿನಲಿ ಕಂಡೆ.
ಟಿಕ್ಟಾಕು ತೆಗೆದರೇನು
ಠಾಕುಠೀಕಾದೆ ಯ್ಯೂಟ್ಯೂಬಿನಲಿ.
ಅದಕ್ಕಾಗಿ ಎಲ್ಲೆಲ್ಲೂ ಕೆಂಪು ಚೀನಾ,
ಸುರಿಯುತ್ತಿಲ್ಲವೇ ಧಂಡಿ ಯುವಾನ.
ಅಯ್ಯೋ ಷಿ ಜಿನ್ಪಿಂಗ
ತಂದಿಟ್ಟೆಯಲ್ಲ ನೀ
ಮನುಕುಲಕೆ ಈ ಪರಿಯ ಭಂಗ!
*ವಿಚಾಟ್ = ಚೀನೀ ಸಾಮಾಜಿಕ ಸಂಪರ್ಕತಾಣ, ವಾಟ್ಸ್ಆ್ಯಪ್ನಂಥದು
*ವೀಬೋ = ಚೀನೀ ಸಾಮಾಜಿಕ ಜಾಲತಾಣ, ಫೇಸ್ಬುಕ್ನಂಥದು
*ಯುವಾನ, ಯುವಾನ್ = ಚೀನೀ ಕರೆನ್ಸಿ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ