- ಪುಸ್ತಕ ಪ್ರೇಮಿಯ ಸ್ವಗತ - ಜುಲೈ 31, 2024
- ಒಲವೆ ನಮ್ಮ ಬದುಕು – ೩೩ - ಜುಲೈ 25, 2021
- ಒಲವೆ ನಮ್ಮ ಬದುಕು-೩೨ - ಜುಲೈ 4, 2021
ಪುಸ್ತಕ ದಿನದ ಆಚರಣೆ ಮುಗಿದರೂ ಮಸ್ತಕದಲ್ಲಿ
ಅದರ ಗುಂಗು ಇನ್ನೂ ಇದೆ.
ನಿನ್ನೆ ಲೈಬ್ರರಿಯಲ್ಲಿ ಕುಳಿತಿದ್ದೆ
” ನಿನ್ನೆ ಇಂದಾದದ್ದು ” ಗಮನಕ್ಕೆ ಬರಲಿಲ್ಲ
ಇಂದು ಯಾವ “ದಿನ” ವೋ ಗೊತ್ತಿಲ್ಲ
ನಿನ್ನೆ ಓದಿದ ಪುಸ್ತಕ ಮೆಲಕು
ಹಾಕುತ್ತಿರುವೆ
ಇಂದು ಹೊಸ ಪುಸ್ತಕದ ಪುಟಗಳನ್ನು ತಿರುವುತ್ತಿರುವೆ
ಹೊರ ಲೋಕ ಹೊರೆಯಾಗಿ
ಹಗುರಾಗಲು
ಮೊರೆ ಹೊಕ್ಕಿರುವೆ
ಪುಸ್ತಕ ಪ್ರಪಂಚ!
ಎಲ್ಲಿರುವನೋ ಎಂಬುದು
ತಿಳಿಯದ ತಾದಾತ್ಮ್ಯತೆ
” ಲೈಬ್ರರಿ ಕಟ್ಟಡದೊಳಗೊ , ಕಟ್ಟಡವು ಲೈಬ್ರರಿ ಒಳಗೋ
ಕಟ್ಟಡ ಲೈಬ್ರರಿಗಳೆರಡು ಕ್ಯಾಂಪಸ್ಸಿನೊಳಗೊ
ಕ್ಯಾಂಪಸ್ ನಲಿ ಊರೋ
ಊರೊಳಗೆ ಕ್ಯಾಂಪಸ್ಸೊ
ಕ್ಯಾಂಪಸ್ ಊರುಗಳೆರಡು
ದೇಶದೊಳಗೊ
ದೇಶದೊಳು ಪೃಥ್ವಿಯೋ
ಪೃಥ್ವಿಯೊಳು ದೇಶವೊ
ದೇಶ ಪೃಥ್ವಿಗಳೆರಡು ಬ್ರಹ್ಮಾಂಡದೊಳಗೋ”
ಎಲ್ಲಾ ಅಯೋಮಯ!
ಈ ಪ್ರಪಂಚವನು ಮುಚ್ಚಿಕೊಂಡ ಬಾಗಿಲು
ತೆರೆಯಲು ಮಂತ್ರ
ಮರೆತಿಹೆನೊ
ಅಥವಾ ಅರಿತೂ ಪಠಿಸಲು
ಮನಸಿಲ್ಲವೋ!
” ಸೇಸಮ್ಮ ಸೇಸಮ್ಮ ಬಾಗಿಲು ತೆಗೆ” ಎಂದು ಯಾರೋ ಅಂದಂತಾಯಿತು
ಬಾಗಿಲು ತೆರೆದುಕೊಂಡಿತು
ಮತ್ತೆ ಹೊರ ಜಗತ್ತಿಗೆ ” ಅಡಿಯಿಟ್ಟೆ
ಮಗುವಿನ ಮುಗ್ಧ ವಿಸ್ಮಯ ಮೂಡಿ
ಓದಿದ್ದನ್ನು ತಾಳೆ ಹಾಕಿ ನೋಡಿದರೆ
ಎಲ್ಲವೂ ನಿಚ್ಚಳ!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪೊರೆವ ತಂದೆ
ರೆಕ್ಕೆ ಇದ್ದರೆ ಚೆನ್ನಾಗಿತ್ತು