- ನನ್ನಲ್ಲೊಂದು ಕಡಲು - ಏಪ್ರಿಲ್ 11, 2021
- ಅಪರಿಚಿತ - ಏಪ್ರಿಲ್ 5, 2021
- ಆದಿ ಮತ್ತು ಅಂತ್ಯ - ಡಿಸಂಬರ್ 30, 2020
(A day with an Alzheimer patient)
ಒಂದಾದ ಮೇಲೆ ಒಂದು ದಿನ
ಉರುಳುವುದು ಗಮನಿಸಿದರೆ
ಸಮಯಕ್ಕೆ ಪರಿವೆಯೆ ಇಲ್ಲವೊ
ತನ್ನ ಗಮನ ಹರಿಸಲು
ಎಷ್ಟೊಂದು ಕಾರ್ಯ ನಿರತ…!
ಸ್ಡಲ್ಪ ತಡೆ
ಸ್ವಲ್ಪ ಹಿಂದೆ ಹೋಗಲು
ನೀ ಹೇಳಬಾರದೆ
ಹಳೆಯ ಪೆಟ್ಟಿಗೆಯಲಿ
ಮರೆತಿರುವುದೇನೊ ಉಳಿದಿದೆ
ಕೊಂಚ ಸಂಗ್ರಹಿಸಿ ತೆರಳಲೆ..?
ನೆನಪುಗಳ ಹೆಕ್ಕಿ ತರುವುದಿದೆ
ಮರೆವು ಜಾಸ್ತಿ ಇತ್ತೀಚೆಗೇಕೊ
ಚಿಕ್ಕದೇ ಆಸೆ, ಆದರೂ ಅನುಮಾನ
ಸಮಯ ನನ್ನ ಪಕ್ಷವೇ..?
ಪರಿವೆ ಎನಗೆ ಪರರದಿಲ್ಲ
ಸಮಯಕ್ಕೂ ನನ್ನ ಪರಿವೆ
ಇಲ್ಲವೊ ಏನೊ
ನನ್ನ ಮರೆತಿರುವ ಹಾಗಿದೆ
ಯಾರ ಮಾತು ಕೇಳಲಿಚ್ಛಿಸುವುದೋ?
ನೆನಪಿನ ಮಾತು ಕೇಳುವುದೆ ಸಮಯ?
ನೆನಪಿಗೆ ಭೂತ, ಭವಿಷ್ಯದ ಪರಿವೆ ಇರಬಹುದೆ?
ಯಾರ ಅಪ್ಪಣೆ ಬೇಕಿದೆ
ಸುಲಭವಲ್ಲವೆ ಇಚ್ಛೆಯನುಸಾರ
ನಗುವುದು, ಅಳುವುದು
ಏನುಂಟು ನಮ್ಮ ಹಿಡಿತದಲಿ?
ಬ್ರಹ್ಮನ ಹಣೆಬರಹ
ಬರೆದವನು ಇರಬಹುದೆ?
ಅಸಾಧ್ಯವೆ ಸರಿ
ಆದರೂ ಕೇಳುವಾಸೆ
ನೆನಪಿನಂಗಳದಲಿ ನಲಿಯುವಾಸೆ
ನೆರವೇರಿಸದಿರುವೆಯಾ ಈ
ಕೊನೆಯ ಕಂಬನಿಯಾಸೆ?
ಇದರ ನೆನಪೂ, ಅಷ್ಟೆ ತಾನೆ!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ