ಇತ್ತೀಚಿನ ಬರಹಗಳು: ನಂದಿನಿ ಹೆದ್ದುರ್ಗ (ಎಲ್ಲವನ್ನು ಓದಿ)
- ಕ್ಯಾಮೆರಾ ಮನ್.. - ಡಿಸಂಬರ್ 31, 2021
- ಯುದ್ಧ ಗೆದ್ದ ನಂತರ - ಜುಲೈ 20, 2021
- ಪುಸ್ತಕ ದಿನ ಮತ್ತು ಚೆಕ್ ರೋಲ್ ಸಾಹಿತ್ಯ - ಏಪ್ರಿಲ್ 23, 2021
ಯುದ್ಧ ಗೆದ್ದ
ನಂತರ
ರಾಜಬೀದಿಗಳಲಿ ಹಾಡುವ
ಸುಖದ ಆಲಾಪಗಳಲ್ಲಿ
ಸೊಗಡು
ಹುಡುಕಹೋಗಿ
ವೃಥಾ ಸೋಲಬೇಡಿ
ಉದುರಿರುವುದು
ಹುಡಿ ಕುಂಕುಮ,
ಕೆಂಪುಹಾಸೆಂದು
ಮೋಸ ಹೋಗಬೇಡಿ
ನಿಟ್ಟುಸಿರಿನ
ಹಬೆಯ ಬೆಟ್ಟ
ನೋಡುತ್ತಾ
ಗಿರಿಮುಗಿಲಿನ
ಪ್ರೇಮ ಹಾಡಬೇಡಿ
ಕಪ್ಪು ಮೊಗ್ಗೆಗಳು
ಅರಳಿರಬಹುದು
ಗಿಡದ ಬುಡದಲ್ಲಿ
ಕುಳಿತು ಕಾರಣ
ಹುಡುಕಬೇಡಿ
ಕಂಡ ತುಸು ಬೆಳಕನ್ನೇ
ಎಂದೋ ಚೆಲ್ಲಿದ್ದ ನಗೆಯ
ಕುರುಹುಗಳೆಂದು
ಹಂಬಲಿಸಬೇಡಿ
ಹಸಿನೆತ್ತರಿನ ಉಪ್ಪು
ವಾಸನೆಗೆ
ಕಡಲ ಪರಿಮಳ
ಹೊಡೆದು
ಮೂಗರಳಿಸಬೇಡಿ
ಕಣ್ಕಟ್ಟುಗಳ ಲೋಕವಿದು
ನೋಡಿ ಕೂಡಿ
ಮುಟ್ಟಿ ಮೂಸಿಗಳ
ಗಳ ನಂತರವೂ ಎಲ್ಲಕ್ಕೂ
ಮತ್ತೊಂದು ಮುಖವಿದೆ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ