ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರ ವಂದೇಸಂಸ್ಕೃತಿ ವಂದೇಗುರು ಪರಂಪರಾಮ್’ ಕೃತಿ ಲೋಕಾರ್ಪಣೆ…
ಜ್ಞಾನವಿಜ್ಞಾನ, ಪ್ರಜ್ಞಾನಗಳನ್ನು ಧಾರೆಯೆರೆದ ನವಚೈತನ್ಯದ ಜಲಪಾತವೇ ಗುರು’
ಪ್ರೊ. ಮಲ್ಲೇಪುರಂ ಜಿ ವೆಂಕಟೇಶ
ಇದು ಪ್ರೊ. ಮಲ್ಲೇಪುರಂ ಜಿ ವೆಂಕಟೇಶ ಅವರ ಅಭಿಮತ.
ಪ್ರಣವ ಮೀಡಿಯಾ ಹೌಸ್ ಪ್ರಕಾಶನ ಪ್ರಕಟಪಡಿಸಿರುವ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರ ವಂದೇ ಗುರು ಪರಂಪರಾಮ್’ ಕೃತಿಯನ್ನು ಶಾಸ್ತ್ರಚೂಡಾಮಣಿ, ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ ರವರು ರಾಘವೇಂದ್ರಸ್ವಾಮಿಗಳ 349ನೇ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಪ್ರೊ. ವೆಂಕಟೇಶ ಅವರು ಡಾ. ಗುರುರಾಜ ಪೋಶೆಟ್ಟಿಹಳ್ಳಿ ಬಗ್ಗೆ ಮಾತನಾಡುತ್ತಾ ಅವರು ನಮ್ಮ ನಡುವಿನ ಸಾತ್ವಿಕ ಸಾಹಿತ್ಯ ವಕ್ತಾರರಾಗಿದ್ದಾರೆ. ಸಂಸ್ಕೃತಿ ಮಾಲೆಯ ಪುಸ್ತಕ ಸೊಗಸಿಗೆ ತೋರಣವಾಗಿ ವಂದೇ ಗುರುಪರಂಪರಾಮ್’ ಸ್ವಂತ ಪ್ರಕಟನೆಯ ಸಾಹಸದಲ್ಲಿ ತೊಡಗಿ, ವೃತ್ತಿ ಪಥದಲ್ಲಿ ಅಂಬೆಗಾಲು ಇಟ್ಟಿರುವ ಅನನ್ಯ ಅಕ್ಷರ ಪ್ರೇಮಿಯೂ ಹೌದು. ಸಾಂಸ್ಕೃತಿಕ ಕಾಳಜಿ ಇಟ್ಟುಕೊಂಡು ತಮ್ಮ ಬರಹಗಳಿಂದ ಪ್ರಸಿದ್ಧ ವಿದ್ವಜ್ಜನರ ವ್ಯಾಪ್ತಿಯಲ್ಲಿ ಕಿರಿಯ ವಯಸ್ಸಿಗೆ ಸೇರ್ಪಟ್ಟು ಜ್ಞಾನ ಸಾಂಗತ್ಯದಿಂದ ಓದುಗರಿಗೆ ಚಿರಪರಿಚಿತರಾಗಿದ್ದಾರೆ ಎಂದು ಹೇಳಿದ್ದಾರೆ.
ಆಚಾರ್ಯ, ಶಿಕ್ಷಕ, ಅಧ್ಯಾಪಕ, ಉಪಾಧ್ಯಾಯ ಮುಂತಾದ ಹೆಸರುಗಳು ಏನೇ ಇದ್ದರೂ, ತಮ್ಮ ಜ್ಞಾನದ ಜ್ಯೋತಿಯನ್ನು ಹಚ್ಚಿ, ನೂರಾರು ಪರಂಜ್ಯೋತಿಗಳನ್ನು ನಿರ್ಮಿಸುವ ಕ್ರಿಯಾಶಕ್ತಿಗಳೇ ಗುರುಗಳು. ತ್ಯಾಗ, ತಪಸ್ಸುಗಳ ತಂಪನ್ನು ಶಿಷ್ಯರಿಗೆ ಧಾರೆಯೆರೆಯುವವರೇ ಗುರುಗಳು. ಸತ್ವಗುಣದಲ್ಲಿ ನೆಲೆಯೂರಿರುವವರು. ತತ್ವಸಿದ್ಧಾಂತದಲ್ಲಿ ಮುಳುಗಿರುವವರು, ಎಲ್ಲ ಶಿಷ್ಯರನ್ನು ಸಮಾನದೃಷ್ಟಿಯಿಂದ ನೋಡುವವರು, ಭಗವದನುಭವದ ಹೊಳಹು ಸುಳಿವುಗಳನ್ನು ಅದ್ಭುತವಾಗಿ ಕೊಡುವವರೇ ಗುರುಗಳು ಎಂದು ತಿಳಿಸಿದರು.
ಹೆಚ್ಚಿನ ಬರಹಗಳಿಗಾಗಿ
ಹಾಲಾಡಿಯಲ್ಲಿ ಹಾರುವ ಓತಿ
ದೂರ ಸಮೀಪಗಳ ನಡುವೆ…
ಬದುಕಿನ ನೆಲೆ ಶೋಧಿಸುವ ʼಕಡಿದ ದಾರಿʼ