ಇತ್ತೀಚಿನ ಬರಹಗಳು: ದೀಪಕ್ ಮೇಟಿ (ಎಲ್ಲವನ್ನು ಓದಿ)
- ಕೀಲಿಮಣೆ ವೀರರು(ಕವಿತೆ) - ಅಕ್ಟೋಬರ್ 18, 2020
- ಶೂನ್ಯ - ಆಗಸ್ಟ್ 11, 2020
- ಕಾಲ - ಜೂನ್ 19, 2020
‘ನಾನು’
ನನ್ನರಿಯಲು
ಮನದೊಳಗೆ
ಇಣುಕಿದೆ.
ದೇವ, ದಾನವ ಭಾವಗಳ
ನಿರಂತರ ಕಾದಾಟದಲಿ
ಮಂದವಾದ ಮನವ, ಚಂದವಾಗಿಸಲು
ಬೇಡದ ಭಾವಗಳ ನೂಕಬೇಕೆಂದೆ…
ಭಾವಗಳೇನು ಋಷಿ, ನದಿಗಳೇ?
ಮೂಲ ಹುಡುಕದಿರಲು;
ಹೊರಟೆ ಭಾವಗಳ ಬೆನ್ನತ್ತಿ
ಮೂಲ ಹುಡುಕಿ ಮೂಲೋತ್ಪಾಟನೆಗೆ…
ದಶಕಗಳು ಉರುಳಿದವು;
ನೆಲೆ ಸಿಗದೆ ಹರುಷವೇ ಇಲ್ಲ.
ಒಂದು ದಿನ “ಹುಡುಕುವುದು” ನಿಲ್ಲಿಸಿ,
“ಕೈ ಚೆಲ್ಲಿ” ಕೂತಾಗ,
ಮಸುಕಾದ ಮಹಲು ಕಂಡಂತಾಯಿತು..
ಗೋಡೆ, ಬಾಗಿಲು, ಕೋಣೆಗಳೆಲ್ಲವು
ಒಂದೊಂದು ಭಾವ.
ಮಹಲಲ್ಲವದು ಭಾವಲೋಕ;
ಎಲ್ಲೋ ನೋಡಿದ ನೆನಪು
ಹೌದು..!! ಅದು ನಾನೇ…!!
ಗಮನಿಸಿದ ಪರಕೀಯಗಳೆಲ್ಲವು
“ತಾನು” ಎಂದು ತಿಳಿದ ಕ್ಷಣ,
ಮನ ಶೂನ್ಯವಾಯಿತು;
“ನಾನು” ಶೂನ್ಯಾಧೀಶನಾದೆ.
ಹೆಚ್ಚಿನ ಬರಹಗಳಿಗಾಗಿ
ಶಿಕಾಗೋ ಸಂದೇಶದ ಭ್ರಾತೃತ್ವ ಕಥನ
.
ಲಕ್ಷ್ಮೀಶ ತೋಳ್ಪಾಡಿ ವಾಕ್ಝರಿ