ಡಾ. ಎಚ್.ಎನ್. ಮುರಳೀಧರ
ಬೆಂಗಳೂರಿನ ವಿ.ವಿ.ನ್ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ಎಚ್.ಎನ್. ಮುರಳೀಧರ ಅವರು ದಾಸ ಸಾಹಿತ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿದವರು. ಪುರಂದರದಾಸರ ಬಗ್ಗೆ ’ತಂಬೂರಿ ಮೀಟಿದವ ; ಪುರಂದರದಾಸರ ಅಭಿವ್ಯಕ್ತಿಯ ಅಧ್ಯಯನ’ ಕೃತಿಗಳನ್ನು ರಚಿಸಿದ್ದಾರೆ . ’ಈ ಪರಿಯ ಸೊಬಗು’ ಎಂಬ ದಾಸ ಸಾಹಿತ್ಯ ಅಧ್ಯಯನ ಸಂಪುಟವನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಮಾಡಿಕೊಟ್ಟಿದ್ದಾರೆ.