- ಗಾಂಧಿ-ಸಿದ್ಧಾರೂಢರ ಭೇಟಿಗೆ ನೂರಾ ಮೂರು ವರ್ಷ - ನವೆಂಬರ್ 12, 2023
- ಕುವೆಂಪು ಕನಸಿನ ಸಚಿವ ಮಂಡಲ - ಡಿಸಂಬರ್ 29, 2021
- ನಕ್ಷತ್ರಗಳ ನೆಲದ ನಂಟು - ಅಕ್ಟೋಬರ್ 29, 2021
ನಮ್ಮ ಹೆಮ್ಮೆಯ ರಾಷ್ಟ್ರಕವಿ ಕುವೆಂಪುರವರು ತಮ್ಮ ಅಗಾಧವಾದ ಪ್ರತಿಭೆಯಿಂದ ಕನ್ನಡಭಾಷೆಗೆ ವಿಶ್ವ ಪ್ರಜ್ಞೆ ಯ ವಿಶ್ವಮಾನವ ಅನಿಕೇತನ ವಾಗುವ ವಿಶಾಲವಾದ ದೃಷ್ಟಿ ಯನ್ನು ಜಗತ್ತಿಗೆ ಹೇಳಿದ ಋಷಿ ಪ್ರಜ್ಞೆ ಯ ಮಹಾಕವಿ ಕುವೆಂಪುರವರು..ಹೇಳುವಂತೆ ಇಲ್ಲಿ ಯಾವದೂ ಮುಖ್ಯ ವಲ್ಲ ಯಾವದೂ ಅಮುಖ್ಯವಲ್ಲ ಯಾವದೂ ಯಕಶ್ಚಿತಃ ವಲ್ಲ ಎನ್ನುವ ಸಮಷ್ಟಿ ವಿಚಾರ ಗಳು ಮಾನವ ಪರಿಸರ ಸಂಬಂದಗಳು ಮಾನವ ಮಾನವರ ನಡುವಿನ ಸಂಬಂಧ ಕುರಿತಂತೆ ವಿಶ್ವಮಾನವ ನೆಲೆಯವರೆಗೂ ವಿಸ್ತರಿಸಿದ ಜೀವನ ದೃಷ್ಟಿ ಅನುಪಮವಾಗಿದೆ.
ಅವರ ಕನ್ನಡ ಭಾಷೆಯ ಮೇಲಿನ ಪ್ರೀತಿ ಅಭಿಮಾನ ಗಳಿಗೆ ಎಣೆಯೆ ಇಲ್ಲ. ಕನ್ನಡ ಕ್ಕಾಗಿ ಕನ್ನಡಿಗರಿಗೆ ಮಂತ್ರದೀಕ್ಷೆ ಕೈ ಕೊಳ್ಳಲು ಅವರು ಅಣಿಯಾದಂತೆ ಅವರ ಕರ್ನಾಟಕ ಮಂತ್ರದೀಕ್ಷೆ ಇಡಿ ಕನ್ನಡ ನಾಡನ್ನು ಆವರಿಸುತ್ತದೆ..
ದೀಕ್ಷೆ ತೊಡುಇಂದೇ
ಕಂಕಣ ಕಟ್ಟಿಂದೇ
ಕನ್ನಡನಾಡೊಂದೇ
ಇನ್ನೆಂದು ತಾನೊಂದೇ..!
ನೃಪತುಂಗ ನ ದೊರೆ ಮುಡಿ ಸಾಕ್ಷಿ
ಪಂಪನ ಪದ ಧೂಳಿಯ ಸಾಕ್ಷಿ
ಕೂಡಲ ಸಂಗಮನ ಅಡಿ ಸಾಕ್ಷಿ
ಗದುಗಿನ ಕವಿದೇವನ ಸಾಕ್ಷಿ
ಕಂಕಣ ಕಟ್ಟಿಂದೆ ದೀಕ್ಷೆ ಯ ತೊಡು ಇಂದೇ.. !!
ಇಂತಹ ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕಕ್ಕೆ ಅವರು ಉತ್ತಮ ಆಡಳಿತ ಕೊಡುವ ಸಚಿವ ಸಂಪುಟವು ಹೇಗಿರಬೇಕು ..?ಎನ್ನುವುದು ಅವರ ಕನಸಿನ ಕರ್ನಾಟಕ ಕಟ್ಟುವ ಜನರು ಕನ್ನಡಿಗರಿಗೆ ಸೇವೆ ಸಲ್ಲಿಸುವ ಸಚಿವ ಸಂಪುಟ ಹೇಗಿರಬೇಕು..? ಎನ್ನುವದು..ಕನ್ನಡಿಗರ ಆದರ್ಶ ರಾಜಕಾರಣದ ಮೌಲ್ಯ ಗಳನ್ನು ಕಲ್ಪಿಸಿ ಬರೆದ ಅಖಂಡ ಕರ್ನಾಟಕ ಕವಿತೆಯಲ್ಲಿವೆ.
ಅಖಂಡ ಕರ್ನಾಟಕ
ಅಲ್ತೊ ನಮ್ಮ ಕೂಗಾಟದ ರಾಜಕೀಯ ನಾಟಕ
ಹರಸುತಿಹನು ದೇವ ಗಾಂಧಿ
ಅಖಂಡ ಕರ್ಣಾಟಕ
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿ ಯ
ವಜ್ರ ಕುಂಡಲ.
ಅಖಂಡ ಕರ್ನಾಟಕ
ಅಲ್ತೊ ನಮ್ಮ ನಾಲ್ಕುದಿನದ ರಾಜಕೀಯ ನಾಟಕ
ನೃಪತುಂಗ ನೆ ಚಕ್ರವರ್ತಿ
ಪಂಪನಲ್ಲಿ ಮುಖ್ಯ ಮಂತ್ರಿ
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಾಯಣಪ್ಪ
ಸರ್ವಜ್ಞ ಷಡಕ್ಷರ
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ
ಅಖಂಡ ಕರ್ನಾಟಕ
ಅಲ್ತೊ ನಮ್ಮ ಕೀರ್ತಿ ಶನಿ ಯ ರಾಜಕೀಯ ನಾಟಕ
ಬರಿಹೊಟ್ಟೆ ಬಟ್ಟೆಗಲ್ತೊ
ಪಕ್ಷ ಜಾತಿ ಕಲಹಕಲ್ತೊ
ಹಮ್ಮು ಬಿಮ್ಮುಗಲ್ತೊ
ನಮ್ಮ ರಾಜಕೀಯ ನಾಟಕ
ಹೀಗೆ ಅವರ ಈ ಕವಿತೆಯನ್ನು ಓದುತ್ತಾ ಹೋದಂತೆ ಕರ್ನಾಟಕ ರಾಜಕಾರಣದ ಅದೂ ಕುವೆಂಪು ರವರ ಸಮೃದ್ಧ ಅಖಂಡ ಕರ್ನಾಟಕ ದ ಕಲ್ಪನೆಗೆ ಈಗಿನ ಕಾಲದ ಅದೂ ಇಂದಿನ ದಿನಗಳಲ್ಲಿ ಯ ಕರ್ನಾಟಕ ರಾಜಕಾರಣದ ಬಿಭೀತ್ಸವಾದ ಮುಖಗಳು ಎದುರಿಗೆ ಬರುತ್ತವೆ.. ಅವರು ಹೇಳಿದ ಕನ್ನಡಿಗರ ಸ್ವಾಭಿಮಾನ ಅವರ ಬಯಸಿದ ಆದರ್ಶಮಂತ್ರಿ ಮಂಡಲ.. ಈಗ ನಮ್ಮೆದುರಿನ ಕರ್ನಾಟಕದ ಕನ್ನಡ ಜನರ ರಾಜಕಾರಣದ ಅಧಃಪತನದ ದಿನಗಳು ಕಣ್ಣು ಮುಂದೆ
ಬಂದು ವ್ಯಥೆಯಾಗದಿರದು..! ಮಂತ್ರಿ ಗಳ ಅವರ ಅವ್ಯವಹಾರ ಗಳು… ಭೃಷ್ಟಚಾರ..ವ್ಯಭಿಚಾರ ಅಶ್ಲೀಲ ಮಾತು ಕೃತಿಗಳು ಇಡಿ ಕನ್ನಡಿಗರ ಘನತೆ ಗೌರವ ಗಳನು ಕುಗ್ಗಿಸಿವೆ..ರಾಜಕೀಯ ಬೂಟಾಟಿಕೆ ಹೇಸಿ ಭಾವನೆ ಗಳು ಸಹಜವಾಗಿವೆ. ನಾಚಿಗೇಡು..!!
ಅಖಂಡ ಕರ್ನಾಟಕ
ಅಲ್ತೊ ರಾಜಕೀಯ ಬೂಟಾಟದ ನಾಟಕ
ಎನ್ನುವ ಋಷಿ ಪ್ರಜ್ಞೆ ಯ ಕವಿ ಕುವೆಂಪು ರವರ ನುಡಿಗಳು ಆಡಳಿತ ಚುಕ್ಕಾಣಿ ಹಿಡಿದವರನು..ಮತ್ತು ಇವರನ್ನು ಚುನಾಯಿಸಿ ಅಧಿಕಾರ ಗದ್ದುಗೆ ಗೆ ಕೂಡಿಸುವ ಮತದಾರರನ್ನು ಎಚ್ಚರ ಗೊಳಿಸುತಿಲ್ಲವೆನ್ನುವದು ವಿಷಾದಕರ.
ರವೀಂದ್ರನಾಥ ದೊಡ್ಡಮೇಟಿ
9739222210
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ