ಇತ್ತೀಚಿನ ಬರಹಗಳು: ರಶ್ಮಿ ಭಟ್ಟ (ಎಲ್ಲವನ್ನು ಓದಿ)
- ಮರುಹುಟ್ಟು ಯೌವನಕೆ - ನವೆಂಬರ್ 19, 2022
ಸುಕ್ಕಾದ ಚರ್ಮ ನಿಮಿಷಕ್ಕೊಂದು ಕೆಮ್ಮು
ಓಡಾಡಲು ಬೇಕು ಕೋಲಿನಾಸರೆ
ಬದುಕಿನ ಅಂಚಿನ ದಿನಗಳ
ಎಣಿಸುತಿಹಳೇ ಈ ನೀರೇ?
ಇದು ಜಗತ್ತು ನನ್ನ ಬದುಕ ನೋಡೋ ವಾಸ್ತವ
ನಾಳೆಗಳಿಗೂ ಇದೆ ಅಂದ
ಇಂದಿಗೂ ಬದುಕೊಂದು
ಸುಮಧುರ ಗಂಧ
ಸದಾ ಯೌವನೆ ನನ್ನಂತರಂಗ
ಇದು ನಾ ನೋಡೋ ನನ್ನಾತ್ಮ ವಾಸ್ತವ
ಬದುಕಲಿ ಹೊಸ ಹೊಸ ಕನಸು ಬತ್ತಿಲ್ಲ
ಕಣ್ಣಲಿ ಬದುಕ ಬೆರಗಾಗಿ
ನೋಡೋ ಸೊಬಗು ಸತ್ತಿಲ್ಲ
ನಿತ್ಯವೂ ಮರುಹುಟ್ಟು ಯೌವನಕೆ
ಸತ್ಯವೂ ಬದುಕುಂಟು ಅನುಭೂತಿಗೆ
ವಯಸ್ಸೂ ಆಯಸ್ಸೂ ಎಲ್ಲವೂ ಮಿಥ್ಯ
ಈ ಬೆಳಕ ಬದುಕಿಗೆ ಈ ಬದುಕ ಚೆಲುವಿಗೆ
ಈ ಆತ್ಮದ ಚಿಲುಮೆಗೆ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ