- ವಿಂಗಡಿಸಿ ನೋಡು - ಅಕ್ಟೋಬರ್ 23, 2022
- ಆ ರಾತ್ರಿ - ಸೆಪ್ಟೆಂಬರ್ 15, 2021
- ಪ್ರಮಾಣ - ಸೆಪ್ಟೆಂಬರ್ 5, 2021
ರೇಶಿಮೆಯ ಗಡ್ಡದ ಹನುಮ ಪಕ್ಕ ನಿಂತಂತೆ
ಕಾಣದ ಕೈ ಕವಿತೆಯಿಂದ
ಆಗಸದಂಗಳದಲ್ಲಿ ಹುಡುಕಲಿಲ್ಲ
ಧ್ರುವ, ಸಪ್ತರ್ಷಿ, ಅರುಂಧತಿಯರೆಡೆ ಬೆರಳು ತೋರಲಿಲ್ಲ
ಮುಕ್ಕೋಟಿ ದೇಹ ದೇಗುಲದಲ್ಲಿ
ಆತ್ಮದ ದೈವ ಸನ್ನಿಧಿ
ನಂಬಿಕೆಯ ಮೊಳಕೆಯೊಡೆದ ದಿವ್ಯ ಘಳಿಗೆ
ಜಟಾಧಾರಿ ಶಿವ ಮೈ ತುಂಬಿಕೊಂಡಂತೆ
ಶಿವೆ ನಕ್ಕಂತೆ
ರೇಶಿಮೆಯ ಗಡ್ಡದ ಹನುಮ ಪಕ್ಕ ನಿಂತಂತೆ
ನಿರಾಭರಣ ಲಕ್ಷ್ಮಿ ನಿದ್ದೆ ಕೆಡಿಸಿದಂತೆ
ಎಲ್ಲ ಮನೆ ತುಂಬಿದರು
ಅಪ್ಪಿ ಬಿಕ್ಕಿದರು ; ನಕ್ಕು ಹರಸಿದರು
ಕಾಯಿ ಕರ್ಪೂರಗಳ ಒಣ ಸಮಾಧಾನ
ಕಷ್ಟಕ್ಕೆ ಮಾತ್ರ ಕರೆಸಿಕೊಂಡವರಲ್ಲ
ಮಗನಂತೆ ಮಾತಾಡುವರು
ಅಮ್ಮನಂತೆ ನೇವರಿಸುವರು
ಅಪ್ಪನಂತೆ ನೊಗ ಹಿಡಿದರು
ಸಿಕ್ಕ ಬದುಕು ಸೂತ್ರ ಆಡಿಸುವವನ ಕೈಯಲ್ಲಿ
ಅನುಭವದ ಸಪ್ತ ಸಾಗರಗಳಲಿ ಅರಿವಿನ ದೋಣಿ
ಅಕ್ಕನ ಬಿಚ್ಚಿದ ಮುಡಿಯಲ್ಲಿ ವಿರಕ್ತಿಯ ಹರಹು
ಅಲ್ಲಮ ಹರಿಸಿದ ನೀರು ಮೈ ತುಂಬ ಕಾಲುಗಳು
ಗೀತೆಯ ಯೋಗಸಾಗರದಲ್ಲಿ ಎದ್ದು ನಿಲ್ಲುವ ಕರ್ಮ
ಬಾಳುವೆಯತ್ತ ಹೊರಳಿಸಿದ ಅಂಬಿಕಾತನಯ
ಹುಡುಕಬೇಕೆನ್ನಿಸುತ್ತಿಲ್ಲ
ತೆರೆದು ನೋಡಬೇಕಿದೆ
ನೋಟ ಒಳ ಇಳಿದಲ್ಲಿ ಶಿವನ ಧ್ಯಾನ
ಬಾಗಿದ ಶಿರದ ಮೇಲೆ ಶಿವೆಯ ಹಸ್ತ
ಬಳಸಿ ಹಿಡಿದ ಸೊಂಡಿಲ ಗಣಪ
ಇಲ್ಲೇ ಎದುರಲ್ಲೇ ಬದಿಯಲ್ಲೇ
ಧನ್ಯ ಧನ್ಯ!
ಹೆಚ್ಚಿನ ಬರಹಗಳಿಗಾಗಿ
ಶಿಕಾಗೋ ಸಂದೇಶದ ಭ್ರಾತೃತ್ವ ಕಥನ
.
ಲಕ್ಷ್ಮೀಶ ತೋಳ್ಪಾಡಿ ವಾಕ್ಝರಿ