ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನೀತಾ ರಾವ್

ಬೆಳಗಾವಿಯಲ್ಲಿ ಹುಟ್ಟಿ ಬೆಳೆದ ನೀತಾ ರಾವ್, ಎಮ್. ಕಾಂ. ಪಿ.ಎಚ್ಡಿ. ಮಾಡಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಕನ್ನಡ ಸಾಹಿತ್ಯದ ರುಚಿಯನ್ನು ಚಿಕ್ಕಂದಿನಿಂದಲೇ ಬೆಳೆಸಿಕೊಂಡ ನೀತಾ ರಾವ್. "ಅಂತಃಪುರ" ಎನ್ನುವ ಅಂಕಣ ಬರಹಗಳ ಸಂಕಲನ ಹಾಗೂ "ಹತ್ತನೇ ಕ್ಲಾಸಿನ ಹುಡುಗಿಯರು" ಎನ್ನುವ ಪ್ರಬಂಧ ಸಂಕಲನ ಇವೆರಡೂ ಪ್ರಕಟಿತ ಪುಸ್ತಕಗಳು. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಕಥೆಗಳು ಮತ್ತು ಪ್ರಬಂಧಗಳು ಮೇಲಿಂದ ಮೇಲೆ ಪ್ರಕಟಗೊಳ್ಳುತ್ತಿರುತ್ತವೆ. ಪ್ರವಾಸ, ಓದು, ಬರಹ, ಲಘು ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ. ಸಾಹಿತ್ಯಾಸಕ್ತ ಸ್ನೇಹಿತರ ವಾಟ್ಸ್ಯಾಪ್ ಬಳಗಕ್ಕಾಗಿ ಇಪ್ಪತ್ತೊಂದು ಕಂತುಗಳಲ್ಲಿ ಯುರೋಪ ಪ್ರವಾಸ ಲೇಖನಗಳನ್ನು ಬರೆದಿದ್ದಾರೆ.