ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಡಿಯೋ

ಶ್ರೀ ಬಿ.ಎಸ್.ಚಂದ್ರಶೇಖರ್ ವಿರಚಿತ ಸುಂದರ ಸಾನೆಟ್ “ಆಷಾಢದ ಗಾಳಿ” ಅನ್ನು ಶ್ರೀ ಚಂದ್ರಶೇಖರ್ ಪೋತಲ್ಕರ್ ಅವರು ಓದಿ, ಕೆಲ ಹೊತ್ತಿನಲ್ಲೇ ರಾಗ ಸಂಯೋಜಿಸಿ ಹಾಡಿ ಪ್ರಸ್ತುತಪಡಿಸಿದ್ದಾರೆ.

ಚಂದ್ರಶೇಖರ್ ಪೊತಲಕರ್ ಅವರದ್ದು ಬಹುಮುಖ ಪ್ರತಿಭೆ. ವೃತ್ತಿಯಲ್ಲಿ …ಕಳೆದ ಮೂರು ವರ್ಷದಿಂದ ಸಂಗೀತ ಕಲಿಯುತ್ತಿದ್ದಾರೆ. ಮೂರು ದಶಕದಿಂದ ಸ್ವಿಡನ್ ನಲ್ಲಿ ನೆಲೆಸಿರೋ, ರಾಷ್ಟ್ರ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಸಿತಾರ್ Maestro ಪಂಡಿತ್ ಹರವಿಂದರ್ ಸಿಂಗ್ ಅವರು ಇವರ ಸಂಗೀತ ಗುರು. ಕನ್ನಡದ ಖ್ಯಾತ ಚಿತ್ರ ಸಾಹಿತಿ ಹೃದಯಶಿವ ಅವರ ಕವಿತೆಗೆ ರಾಗ ಸಂಯೋಜಿಸಿ ಹಾಡಿದವರು ಚಂದ್ರಶೇಖರ್ ಪೋತಲಕರ್…
ಈ ಸುಂದರ ಭಾವಗೀತೆ ನಿಮಗಾಗಿ…?

ಕೋರೊನಾದ ಆರ್ಭಟ ಜೋರಾಗಿಯೇ ಇದೆ..ಐವತ್ತು ಸಾವಿರಕ್ಕೂ ಹೆಚ್ಚು ಸೋಂಕಿತರ ನಡುವಲ್ಲಿ, ಇವತ್ತಿಗೂ ಅನಾವಶ್ಯಕ ಮನೆಯಿಂದ ಹೊರಬರುವುದನ್ನು ಕಮ್ಮಿ ಮಾಡಬೇಕಾದ ಅವಶ್ಯಕತೆ ಇದೆ ಎಂಬ ಸಂದೇಶ ಸಂಗೀತದ ಮೂಲಕ…ಮನೆಯಿಂದಲೇ ಹಾಡಿ ಕಳಿಸಿದವರು ಮಮತಾ ಮನ್ವಾಚಾರ್.
ಕೊರೋನಾ ಸಂದೇಶದ ಕ್ರಿಯೇಟಿವ್ ಹಾಡು ಹಾಗೂ ಸಾಹಿತ್ಯ ಮಮತಾ ಅವರದ್ದು.
ರಾಗ : ದರ್ಬಾರಿ ಕಾನ್ಹಾಡ ತಾಳ :ಭಜನ್ ಟೇಕ್