- ರಾಜ ಮಹಾರಾಜ - ಜೂನ್ 27, 2021
- ವಸಂತ ಬಂದ ಸಂತಸ ತಂದ - ಏಪ್ರಿಲ್ 13, 2021
- ಮೀರಾ ಜೋಶಿ ಕವಿತಾ ವಾಚನ - ಮಾರ್ಚ್ 13, 2021
ಇದೇನಿದು ಕಲ್ಲಿನಲಿ ಕಂಬನಿ
ಬಂದಳದರೊಳಗಿಂದೊಬ್ಬ ಸುಂದರಿ
ಏಕಮ್ಮ ಈ ರೂಪವ ಬಲಿಕೊಟ್ಟೆ
ಕೊಡಲಿಲ್ಲ ಬಲಿಪಶುವಾಗಿ ನಾ ಕೆಟ್ಟೆ
ತರುಣನವನು ಸುಂದರಾಂಗ
ನಾನವನ ಮನದನ್ನೆ
ನೋಟತಪ್ಪಿಸಿ ಮಾಡುತಿದ್ದ ಕಣ್ಣಸನ್ನೆ
ಕನಸುಗಳು ನೂರುನೂರಾರು
ಬರುವ ದಿನಗಳಲಿ ನನಸಾಗಿಸಲು
ಬಗೆದರೆ ತಾನೊಂದು
ದೈವ ಬಗೆವುದು ಇನ್ನೊಂದು
ಅರಳುತಿರುವ ಹೂವ ಹೊಸಕಿದಂತೆ
ಜವರಾಯ ನನ್ನ ಮನೆಗೆ ಬಂದನೇಕಂತೆ
ಇನ್ನೂ ನೋಡಿರಲಿಲ್ಲ ಮನದುಂಬುವಂತೆ
ಮಾತಾಡಿರಲಿಲ್ಲ ಹೃದಯ ಬೆಸೆಯುಂತೆ
ಮನದಾಳದಿಂದ ಮಾಡುತಿದ್ದರೂ ಪ್ರೇಮ
ಮನವಿರಲಿಲ್ಲ ಆಗಲವನೊಂದಿಗೆ ಹೋಮ
ದಿನಕೊಪ್ಪತ್ತು ಅಶನ
ಕೆಂಪು ಬಣ್ಣದ ವಸನ
ಹೊಳೆಯಿಸಿಕೊಳ್ಳಬೇಕು ತಲೆ
ಭಯವಾದರೂ ನೆನೆದು ಹೊಸ ನೆಲೆ
ಭೀತಿಯಾಯ್ತು ಕಂಡು ಜ್ವಾಲೆ
ನನ್ನವರೆಲ್ಲ ಬಂದರು
ಭಾವನೆಗಳ ಕಣ್ಣಲ್ಲೇ ಹೇಳಿದರು
ಮರಳಿ ತವರು ಸೇರಿಕೊಂಡರೆ ಎಂದುಕೊಂಡರವರು
ಆಸ್ತಿಗೆ ಅಧಿಕಾರ ಬೇಡಿದರೆ ಎಂದುಕೊಂಡರಿವರು
ನೋಟದ ಭರ್ಚಿಯಿಂದ ಚುಚ್ಚಿದರು
ಅಗ್ನಿಸಜ್ಜೆಯಲಿ ನೂಕಿದರು
ಕಾಣಲಿಲ್ಲ ನನಗೆಲ್ಲೂ ಒಬ್ಬ
ರಾಜಾರಾಮ
ಚಿತೆಗೇರಿಸಿದರು ಎನ್ನುತ್ತ ರಾಮರಾಮ
ದೇವರು ಕೊಟ್ಟ ದೇಹವನು
ಯಾವ ಅಧಿಕಾರದಿಂದ ಸುಟ್ಟರು
ಮತ್ತೊಬ್ಬಳನು ಬಲಿಪಶುವಾಗಿಸಲು
ಮಾಸತಿಯ ಪಟ್ಟ ಕಟ್ಟಿ ಕಲ್ಲ ನೆಟ್ಟರು
ಅಂದಿನಿಂದಿನವರೆಗೆ ಕಲ್ಲಿನಲಿ ಕುಳಿತು ಹರಿಸುತಿರುವೆ ಕಂಬನಿಯ ನೆತ್ತರು
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ