ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗಾಂಧಿ ಕುರಿತು ವ್ಯಂಗ್ಯಚಿತ್ರ ಪ್ರದರ್ಶನ

ಅಕ್ಟೋಬರ್ 5 ರಂದು ವ್ಯಂಗ್ಯ ಚಿತ್ರಕಾರ ಎಂ.ವಿ ನಾಗೇಂದ್ರಬಾಬು ರವರ ಗಾಂಧಿ ಕುರಿತು ವ್ಯಂಗ್ಯಚಿತ್ರ ಪ್ರದರ್ಶನ.


ಮೈಸೂರಿನ ಖ್ಯಾತ ವ್ಯಂಗ್ಯಚಿತ್ರಕಾರ ಮತ್ತು ಫುಲ್‍ಬ್ರೈಟರ್ ಎಂ.ವಿ ನಾಗೇಂದ್ರಬಾಬು ರಚಿಸಿರುವ ಗಾಂಧಿ- 150+ ನಡಿಗೆ ಕುರಿತು ವ್ಯಂಗ್ಯಚಿತ್ರ ಪ್ರದರ್ಶನವನ್ನು ಮೈಸೂರಿನ ನಾರಾಯಣ ಶಾಸ್ತ್ರೀ ರಸ್ತೆ, ಹಳೆ ಶಾಂತಲ ಥಿಯೇಟರ್ ಎದುರು, ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಅಕ್ಟೋಬರ್ 5 ಸೋಮವಾರ ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಅಮರ ಬಾಪು ಚಿಂತನ ಪತ್ರಿಕೆಯ ವತಿಯಿಂದ ಏರ್ಪಡಿಸಿದೆ.
ಗಾಂಧಿ ತತ್ವ ಚಿಂತನೆಗಳ ಪ್ರಸರಣಕ್ಕಾಗಿ ಕಳೆದ 8 ವರ್ಷಗಳಿಂದ ದ್ವಿಭಾಷಾ – ದ್ವೈಮಾಸಿಕವಾಗಿ ಹೊರಬರುತ್ತಿರುವ ಅಮರ ಬಾಪು ಚಿಂತನ ಪತ್ರಿಕೆಯು ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಸಹಯೋಗದೊಡನೆ ಈ ಪ್ರದರ್ಶನವನ್ನು ಏರ್ಪಡಿಸಿದೆ.

ಹಿರಿಯ ಗಾಂಧಿವಾದಿ – ಸಮಾಜಸೇವಾ ಧುರೀಣ ಡಾ. ಕೆ. ರಘುರಾಮ ವಾಜಪೇಯಿರವರು ವ್ಯಂಗ್ಯಚಿತ್ರ ಪ್ರದರ್ಶನವನ್ನು ಉದ್ಘಾಟಿಸುವರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಗರ ಪಾಲಿಕೆ ಸದಸ್ಯೆ ಶ್ರೀಮತಿ ಪ್ರಮೀಳಾ ಪರದೇಶ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡಿಕೇರೆ ಗೋಪಾಲ್, ಹಿರಿಯ ಉದ್ಯಮಿ ದೊರೆಸ್ವಾಮಿ ಭಾಗವಹಿಸುವರು. ಅಮರಬಾಪು ಚಿಂತನದ ಉಪಸಂಪಾದಕ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರು ಉಪಸ್ಥಿತರಿರುವರು ಎಂದು ಸಂಪಾದಕ ಜೀರಿಗೆ ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ವಿವರಗಳಿಗೆ 97393 69621
ಈ ಕಾರ್ಯಕ್ರಮಕ್ಕೆ ತಮ್ಮ ಪತ್ರಿಕೆ/ವಾಹಿನಿಯ ಛಾಯಾಚಿತ್ರಕಾರರು ಮತ್ತು ವರದಿಗಾರರನ್ನು ಕಳುಹಿಸಲು ಹಾಗೂ ಕಾರ್ಯಕ್ರಮದ ಪೂರ್ವಭಾವಿ ಪ್ರಚಾರವನ್ನು ನೀಡಲು ಕೋರಿದೆ.
ವಂದನೆಗಳು
ಇಂತಿ ತಮ್ಮ ವಿಶ್ವಾಸಿ,

ಜೀರಿಗೆ ಲೋಕೇಶ್
ಸಂಪಾದಕರು
ಅಮರ ಬಾಪು ಚಿಂತನ