ನಸುಕು.ಕಾಮ್ - ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಾನ್ಸೂನ್ ಡೈರೀಸ್: ಮಳೆ ಬರುವ ಮುನ್ನ ದೋಹಾದಲ್ಲಿರುವ ಕತಾರ ಕಲ್ಚರಲ್ ವಿಲ್ಲೇಜ್ ನ ಒಂದು ವಿಹಂಗಮ ನೋಟ
Photograph : Chaitra Arjunpuri

ಚೈತ್ರಾ ಅರ್ಜುನಪುರಿ

ಮಂಡ್ಯ ಜಿಲ್ಲೆ ಮದ್ದೂರು ಮೂಲ, ಸದ್ಯಕ್ಕೆ ದೋಹಾ-ಕತಾರ್ ನಿವಾಸಿ. ಬರವಣಿಗೆಯ ನಡುವೆ ಛಾಯಾಗ್ರಹಣ, ಅದರಲ್ಲೂ ನೈಟ್ ಫೋಟೋಗ್ರಫಿಯ ಹುಚ್ಚು ಅಂಟಿಸಿಕೊಂಡಿದ್ದಾರೆ. ಇವರು ತೆಗೆದ ಕೆಲವು ಚಿತ್ರಗಳು ನ್ಯಾಷನಲ್ ಜಿಯೋಗ್ರಾಫಿಕ್, ನ್ಯಾಟ್ ಜಿಯೋ ಟ್ರಾವೆಲ್ಲರ್, ಟ್ಯಾಗ್ರೀ ಮ್ಯಾಗಜೀನ್, ಮರಿಕಾ ಮ್ಯಾಗಜೀನ್ ಕಿಡ್ಸ್ ಮುಂತಾದೆಡೆ ಪ್ರಕಟವಾಗಿವೆ.

ಬಿಸಿಲ ಜಳಕ್ಕೆ, ದುಗುಡ ದುಮ್ಮಾನಕ್ಕೆಲ್ಲ ನೀರೇ ವರಸೆ. ಯಾವ ಹಂಗಿಲ್ಲದೆ ಹರಿದು ಹೋಗುವಾಗ, ಕಲ್ಲೇ ಕರಗುವುದಂತೆ, ಹೂವಂತ ನಮ್ಮ ಮನ ಕರಗದೇ, ಹಗುರಾಗದೇ? ಕುಣಿದು ನೋಡಿ ವರ್ಷದ ಮೊದಲ ಮಳೆಯಲ್ಲಿ… ಅದಕ್ಕೆ ಹೇಳಿರಬೇಕು, ತಾಯಿ ಮಾಡದ್ದು ನೀರು ಮಾಡಿತೆಂದು..
Photograph : Radhika Hegde

ರಾಧಿಕಾ ಹೆಗಡೆ

ಶಬ್ದ, ಚಿತ್ತಾರಗಳನ್ನು ಎಲ್ಲಾ ಕಡೆ ಕಾಣುವರು, ಹರಿದ ಕಾಗದ, ಮುರಿದ ಪೆನ್ನು ಹೀಗೆ… ಸಮಯ ಸಿಕ್ಕಾಗ, ಮನಸಾದಾಗ ಪೋಣಿಸುವರು, ಒಂದಿಷ್ಟು ಕನಸುಗಳ ಒಡತಿ, ಪ್ರವಾಸವನ್ನು ಬಹಳ ಇಷ್ಟಪಡುವ ಇವರಿಗೆ ಸಾಹಿತ್ಯ, ಸಿನೆಮಾ, ಇತಿಹಾಸದ ಕುರಿತಾಗಿ ವಿಶೇಷ ಆಸಕ್ತಿ. ಛಾಯಾಗ್ರಹಣ ಇವರಿಗೆ ಬದುಕನ್ನು ಇನ್ನಷ್ಟು ಆಪ್ತವಾಗಿಸುವ ಒಂದು ಮಾಧ್ಯಮ​.

ನಲ್ಲ ನಲ್ಲೇ ನಳಿಸಿ ನಕ್ಕು ಮುತ್ತು ಸುರಿದಳು ಮಲ್ಲೆ, ಮೆಲ್ಲ ಮೆಲ್ಲ ಮಲ್ಲೆ ಮುಡಿದು ನಾಚಿ ನಕ್ಕಳು ನಲ್ಲೆ, ಹಸಿರೇ ಇರಲಿ ಕಪ್ಪೇ ಇರಲಿ, ಏರಿ ಹೊಳೆವಳಿವಳು ಮಲ್ಲೆ.. ಕೋಟಿ ಬಣ್ಣ ತೊಟ್ಟರೂನು ಶ್ವೇತ ಶುಭ್ರ ನಗುವ ನಲ್ಲೆ…
Photograph : Amrutha D Gowda

ಅಮೃತಾ ಡಿ ಗೌಡ​

ದೊಡ್ಡಬೆಳಗೋಡಿನವರಾದ ಇವರು ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಂಡವ ನೃತ್ಯ , Crane fly
Photograph : Krishna Devangamath

ಕೃಷ್ಣ ದೇವಾಂಗಮಠ

ಅಗಸ್ಟ್ ೧೪ ೧೯೯೫ ರಂದು ಜನನ. ಸದ್ಯ ಧಾರವಾಡದಲ್ಲಿ ವಾಸ. ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಕಾಲ ಕೆಲಸ ಮಾಡಿದ ಅನುಭವ. ೨೦೧೪ ರಲ್ಲಿ ಪುಸ್ತಕ ಪ್ರಾಧಿಕಾರದ ಸಹಾಯ ಧನ ಪಡೆದು ‘ನಲ್ಮೆಯ ಭಾವ ಬುತ್ತಿ’ ಎಂಬ ಕವನ ಸಂಕಲನ ಪ್ರಕಟಣೆ.‌ ಫೋಟೋಗ್ರಫಿ, ಪ್ರವಾಸ, ಸಂಗೀತ , ರಂಗಭೂಮಿ, ಸಿನಿಮಾ ಆಸಕ್ತಿಯ ಕ್ಷೇತ್ರಗಳು. ರಾಜ್ಯದ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲೂ ಕವಿತೆ , ಕಥೆ ಮತ್ತು ಬರಹಗಳು ಪ್ರಕಟವಾಗಿವೆ. ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಅಂಕಣ ಬರಹಗಳು ಪ್ರಕಟಗೊಂಡಿವೆ. ಫೋಟೋಗ್ರಫಿ ಮತ್ತು ಕವಿತೆಯ ಕಾರಣಕ್ಕೆ ಕೆಲವು ಪ್ರಶಸ್ತಿಗಳು ಸಂದಿವೆ.

ಗುಡುಗು ಸಿಡಿಲಿಗೂ ನಡುಗದ ಅಚಲೆ ನಾನು!
Photograph : Suchitra U

ಸುಚಿತ್ರಾ ಯು

ವೃತ್ತಿಯಿಂದ ಸಾಫ್ಟ್ವೇರ್ ಎಂಜಿನಿಯರ್. ಪ್ರವಾಸ ಮತ್ತು ಛಾಯಾಗ್ರಹಣ ಇವರ ಹವ್ಯಾಸಗಳು.

ಮೋಡದಿಂದ ವೇಗವಾಗಿ ಹೊರಟ ಹನಿಗಳು ಎಲೆಯ ಮೇಲೆ ನಿಂತು ದಣಿವಾರಿಸಿಕೊಂಡು ನಿಧಾನವಾಗಿ ಭೂಮಿಗೆ ಇಳಿದಾಗ ಜಗವೆಂಥ ಸೊಗಸು…
Plant trees to conserve Soil and Water
Photograph : Sahana Hegde

ಸಹನಾ ಹೆಗಡೆ

ಫೋಟೋಗ್ರಫಿ, ಇವರಿಗೆ ಇತರ ಎಲ್ಲಾ ಹವ್ಯಾಸಗಳಲ್ಲೇ ಅತೀ ಹೆಚ್ಚು ಮನಸ್ಸಿಗೆ ನೆಮ್ಮದಿ ಕೊಡುವ ಹವ್ಯಾಸ. ಸುತ್ತಲಿನ ಪರಿಸರವನ್ನ ಫ್ರೇಮುಗಳ ಮಧ್ಯ ಸೆರೆಹಿಡಿಯುವುದರಲ್ಲಿ ಕಳೆದು ಹೋಗುವ ಅನುಭವ ವಿವರಿಸಲಾಗದ್ದು ಅಂತ ಹೇಳುವ ಇವರಿಗೆ ಪ್ರಕೃತಿಯ ಛಾಯಾಗ್ರಹಣ default ಆಸಕ್ತಿ ಆದ್ರೂ ವಿವಿಧ ಪ್ರಕಾರದ ವಿಷಯಗಳನ್ನ ಸೆರೆಹಿಡಿಯೋ ಪ್ರಯತ್ನ ನಿರಂತರವಾಗಿ ಜಾರಿಯಲ್ಲಿದೆ.