- ಕೆ.ವಿ ತಿರುಮಲೇಶರ ‘ಅವ್ಯಯ ಕಾವ್ಯ’ - ನವೆಂಬರ್ 27, 2022
- ತಿರುಮಲೇಶರೊಂದಿಗೆ ಒಂದು ಆಪ್ತ ಸಂವಾದ - ಡಿಸಂಬರ್ 31, 2021
- ಐವತ್ತೊಂದುನೆನಪುಗಳು…. - ಜೂನ್ 23, 2021
ಕವಿತೆಯಾದರೂ ಕನಿಷ್ಟ ಬೇಡುವದೇನು? ಎಲ್ಲರಿಗೂ ಕಾಣಿಸುವ ಹಾಗೆ ಹಾಡು ಹಗಲೇ ಬಹು ದೊಡ್ಡ ಸಾಮಾಜಿಕ ಹಣಾಹಣಿಯಲ್ಲಿ ತೊಡಗುವ ಕ್ರಿಯೆಯನ್ನೆ ಅಥವಾ ಆ ಅಂಥ ಮಹಾಶಕ್ತಿಯೆದುರಿಗೆ ಶರಾಣಾಗುವಿಕೆಯನ್ನೆ !
– ಕೆ.ವಿ. ತಿರುಮಲೇಶ.ಕವಿ ತಿರುಮಲೇಶರದು ಮತ್ತು ನನ್ನದು ಸುಮಾರು ನಾಲ್ಕು ದಶಕಗಳಿಗೂ ಮೀರಿದ ನಂಟು.ನಂಟು ಎನ್ನಲಾರೆ ಅದು ಗುರು-ಶಿಷ್ಯ ಸಂಬಂಧ, ಸ್ಮೇಹ,ಮಾರ್ಗದರ್ಶಕ, ಪ್ರೇರಣಾ ಶಕ್ತಿ ಹೀಗೆ ಯಾವ ಮಾತಿನಿಂದಾದರೂ ಹೇಳಬಹುದು. ಸಾಹಿತ್ಯ ಮಂದಿರ ಒಂದು ಸಾಹಿತ್ಯ ಪತ್ರಿಕೆ ತರಬೇಕೆಂದು ನಿರ್ಣಯಿಸಿದ ದಿನ.ಅಂದು ಸಾಹಿತ್ಯ ಮಂದಿರದ ಅಧ್ಯಕ್ಷರಾಗಿದ್ದ ಡಾ.ಬಿ.ಟಿ.ದೇಸಾಯಿ ಯವರು ಅದರ ಸಂಪಾದಕತ್ವ ದ ಜಾವಾಬುದಾರಿಯನ್ನು ನನಗೆ ವಹಿಸಿಕೊಟ್ಟರು. ನನ್ನೊಂದಿಗೆ ಸರ್ವರೀತಿಯ ಸಹಕಾರ ನೀಡಿದವರು ಶ್ರೀ ಯುತ ರುಗಳಾದ ಪವನಕುಮಾರ ಮಾನ್ವಿ, ಪ್ರಹ್ಲಾದ ಜೋಷಿ, ಅರವಿಂದ ಸಂಗಮ್ ಮತ್ತು ಸಾಹಿತ್ಯ ಮಂದಿರದ ಪದಾಧಿಕಾರಿಗಳು. ಪರಿಚಯ ಎಂದು ನಾಮಕರಣ ಮಾಡಲಾಯಿತು.ಮೊದಲನೆಯದು ಹಸ್ತಪ್ರತಿಯಲ್ಲಿ.ಎರಡು,ಮೂರನೆಯ ಸಂಚಿಕೆಗಳನ್ನು ಕ್ರಮವಾಗಿ ರಾಯಚೂರು ಕಲಬುರ್ಗಿ ಗಳಲ್ಲಿ ಮುದ್ರಿಸಿ ತಂದೆವು.ನಾಲ್ಕನೆಯ ಸಂಚಿಕೆಗೆ ಲೇಖನ ಕ್ಕಾಗಿ ತಿರುಮಲೇಶರ ಮನೆಗೆ ಹೋಗಿದ್ದೆ ನಮ್ಮ ಮೂರು ಸಂಚಕೆಗಳನ್ನು ನೋಡಿದ ಅವರ ಲೇಖನ ಅಲ್ಲ ಪ್ರತಿ ತಿಂಗಳು ಒಂದು ಅಂಕಣ ಬರೆದು ಕೊಡುವ ದಾಗಿ ಹೇಳಿದರು ‘ಅಕ್ಷರ ಲೋಕದ ಅಂಚಿನಲ್ಲಿ’ ಎಂದು ಅವರೇ ಹೆಸರಿಸಿದರು ವಿನ್ಯಾಸ ಸಹ ಅವರೇ ಸೂಚಿಸಿದರು.’ಅಕ್ಷರ ಲೋಕದ…..’ ದಿಂದಾಗಿ ಪರಿಚಯ ಕರ್ನಾಟಕದ ಮನೆ ಮಾತಾಗಿ ಓದುಗರು ‘ಪರಿಚಯ’ಕ್ಕಾಗಿ ಕಾಯುವಂತಾಗಿದ್ದು ಇಂದು ಇತಿಹಾಸ.ಅಂದಿನಿಂದ ಇಂದಿನವರೆಗೆ ಈ ಒಂದು ಸಂಬಂಧ ಅವಿಚ್ಛಿನ್ನ ವಾಗಿ ಸಾಗಿಬಂದ ಈ ಆರ್ದವತೆ, ನನ್ನ ಅನೇಕ ಮರೆಯಲಾರದ ಸಂಗತಿಗಳಲ್ಲಿ, ಯ ಮೇಲಿನ ಸ್ಥರದಲ್ಲಿದೆ. ಸರಳ ಸಜ್ಜನಿಕೆಯ ಮೂರ್ತಿ ತಿರುಮಲೇಶರನ್ನು ನಾನು ಹೆಚ್ಚು ಭೇಟಿಯಾದದ್ದು ಸಿ ಐ ಇ.ಎಫ.ಎಲ್ ನ (ಇಂದಿನ ಇಫ್ಲು ವಿಶ್ವ ವಿದ್ಯಾ ಲಯ) ಗ್ರಂಥಾಲಯದಲ್ಲಿಯೇ.ಅಲ್ಲಿ ಅವರಿಗಾಗಿ ಒಂದು ಪ್ರತ್ಯೇಕ ಕುರ್ಚಿ, ಮೇಜು, ರಾಸಿ ಪುಸ್ತಕಗಳು ಮತ್ತೆ ಯಾವಾಗಲೂ ಅಧ್ಯಯನ ನಿರತ ಕವಿ. ನಾನು ನೇರವಾಗಿ ಅಲ್ಲಿಗೆ ಹೋಗುವ ಸ್ವಾತಂತ್ರ್ಯ ಹೊಂದಿದ್ದೆ. ಲೋಕಾಭಿರಾಮಕ್ಕಿಂತ ಸಾಹಿತ್ತ ಸಂಗತಿಗಳಿಗೆ ಆದ್ಯತೆ. ಆಗಾಗ,ಗೆಳೆಯರುಗಳಾದ, ಶ್ರೀ ರಾಮ್, ಪಲ್ಲಣ್ಣ,ಅಪ್ಪು ನನ್ನ ಜೊತೆಗೆ ಇರುತ್ತಿದ್ದರು.ಮೇಲೆ ಇರುವ ಕ್ಯಾಂಟೀನ್ ನಲ್ಲಿ ಚಹ,ಇಲ್ಲವಾದರೆ ನೇರ ಅವರ ಮನೆಗೆ ಅಲ್ಲಿ ಸಹ ಮಾತು- ಚಹ- ಮಾತು,ಸಾಹಿತ್ಯ. ಹೀಗೆ ಅದೊಂದು ವಿಸ್ಮಯವಾದ ಪರಿಸರ. ನಾ ಹೆಚ್ಚಿನದನ್ನು ಕಲಿತದ್ದು ಅಲ್ಲಿಯೇ,ಅವರಲ್ಲಿರುವ ಪುಸ್ತಕಗಳಿಂದ ಕೆಲವನ್ನು ಅಯ್ದು ಇದನ್ನು ಓದಿ ಎಂದು ಕೊಡುತ್ತಿದ್ದರು. ಕೆಲವನ್ನಂತು ನೀವೇ ಇಟ್ಟು ಕೊಳ್ಳಿಹಿಂದಿರುಗಿ ಸುವುದು ಬೇಡ ಎಂದು ಹೇಳುತಿದ್ದರು.ಅವರ ಹೊಸ ಪುಸ್ತಕ ಬಂದಾಗಲೆಲ್ಲ ನನಗೊಂದು ಪ್ರತಿ ಕೊಡುವದನ್ನು ಎಂದೂ ಮರೆಯುತ್ತಿರಲಿಲ್ಲ.ನನ್ನ ಸಂಗ್ರಹದ ಬಹುಭಾಗ ತಿರುಮಲೇಶರು ಪ್ರೋತ್ಸಾಹ ರೂಪದಲ್ಲಿ ನೀಡಿದ ಬಹುಬೆಲೆಯುಳ್ಳ ಕೃತಿಗಳೇ ! ಸದಾ ಅಧ್ಯಯನ ನಿರತ ಕವಿಯಿಂದಹೆಚ್ವಿನದೇನು ಬಯಸಿಯೇನು ! ನಮ್ಮ ಪ್ರತಿ ಭೇಟಿಯಲ್ಲಿ ಅವರ ಮೊದಲ ಪ್ರಶ್ನೆ, ಏನು ಬರೆದಿದ್ದೀರಿ ? ಏನು ಓದಿದ್ದೀರಿ ? ಎಲ್ಲಿ ಬರೆಯುವದು ಸಾರ್ ಯಾರು ಪ್ರಕಟಿಸುತ್ತಾರೆ ?ಎಂದು ಹೇಳಿ ನುಣುಚಿಕೊಳ್ಳುತ್ತಿದ್ದೆ. ಆಗ,ಅವರ ಈ ಪದ್ಯದ ಸಾಲುಗಳು ನೆನಪಿಗೆ ಬರುತ್ತಿದ್ದವು.ಒಂದು ದಿನ ನಾನೂ ಕೆಲವು ಮಹಾವಾಕ್ಯಗಳ ಬರೆಯುವೆ. ಬರೆದು ಸರ್ಕಸ್ಡೇರೆಗಳ ಸುತ್ತ ಆಡಲು ಬಿಡುವೆ.ಅವುಕಂಡವರ ಮನಸ್ಸು ಗಳು ಸೇರಲಿ ಎನ್ನುವೆ !ಕೆಲವು ಅಲ್ಲೇ ಉಳಿದಾವುಕೆಲವು ವಾಪಸ್ಸು ಬರುತ್ತವೆ ಬಂದಾಗ ಅವಕ್ಕೆ ಗಾಯಗಳಾಗಿರುತ್ತವೆ !!ಕಥಾಸಂಕಲನಗಳನ್ನು,ಕಾದಂಬರಿಗಳನ್ನು,ನಾಟಕಗಳನ್ನು, ವಿಮರ್ಶೆ ಗಳನ್ನು, ಅಂಕಣಬರಹಗಳನ್ಮು, ಅನುವಾದಗಳನ್ನು, ಶಿಶು ಗೀತೆಗಳನ್ನು ತಿರುಮಲೇಶರು ರಚಿಸಿದ್ದರೂ,ಅವರ ಆದ್ಯತೆ ಕಾವ್ಯಕ್ಕೆ ಎನ್ನುವುದು ಎಲ್ಲರೂ ತಿಳಿಯಬೇಕಾದ ಸಂಗತಿ.1968 ರಲ್ಲಿ ಪ್ರಕಟವಾದ ‘ ಮುಖವಾಡಗಳಿಂದ ಪ್ರಾರಂಭವಾದ ಅವರ ಕಾವ್ಯ ರಚನಾ ಕಾರ್ಯ 2011ರ ರಲ್ಲಿ ಬಿಡುಗಡೆಯಾದ ‘ಆಡು ಕನ್ನಡ ಹಾಡು ಕನ್ನಡ ಮಾತಾಡು ಕನ್ನಡ ವೇ’ ವರೆಗೆ ಸಾಗಿ ಬಂದಿದೆ ಅಲ್ಲದೆ ‘ಏನೇನ ತುಂಬಿ,’ ‘ಮೋಜಿನ ಪದ್ಯಗಳು’ಮುಂತಾದ ಪ್ರಯೋಗಗಳನ್ನು ಅವರು ಕೈಕೊಂಡಿದ್ದಾರೆ.ಮಖವಾಡಗಳು,ವಠಾರ,ಮುಖಾಮುಖಿ, ಮಹಾಪ್ರಸ್ಥಾನ ನವ್ಯದ ಛಾಯೆ ಹೊಂದಿದ್ದವು ನಂತರ ಅವರು ತಮ್ಮದೇ ಆದ ಹೊಸ ದಾರಿಯ ಅನ್ವೇಷಣೆ ಯಲ್ಲಿ ನಿರತರಾದರು ‘ಅವಧ’ಕ್ಕೆ ,ನಂತರದ ‘ಪಾಪಿಯೂ’ ಸಂಕಲನಗಳಿಗೆ ಬಂದಾಗ ಅವರು ಹೊಸ ಮಾರ್ಗ ನಿರ್ಮಿಸಿದ್ದರು.ದೇಶ ಸುತ್ತಿ,ಕೋಶವನ್ನೂ ಓದಿದ ಅವರ ಕವಿತೆಗಳ ಆಯ್ಕೆ ಬೆರಗು ಗೊಳಿಸುವುದು ಆಗಿತ್ತು. ಅತುಲಿತ ಮೊದಲಿ,ಮೂನ್ ಮೂನ್ ಸೇನ, ತಾರನಾಕದ ಚೌಕ, ಆಬಿಡ್ಸ ರಸ್ತೆ, ಪೆಂಟಯ‌್ಯನ ಅಂಗಿ,ಭೂಲಚಂದನ ಲೈಟುಗಳು ಮುಂತಾದುವುಗಳನ್ನು ಪ್ರಜ್ಞೆಯ ಭಾಗದ ಬೆಸುಗೆ ಗಳಾಗಿ, ಬೆಸೆಯುವ ಶೈಲಿ ಹೊಸ ಅಲೆಯನ್ನೇ ಹುಟ್ಟು ಹಾಕಿದವು. ಅವರೇ ಹೇಳುವಂತೆ ಛಂದಸ್ನನ್ನು ಮುರಿಯುುುತ್ತ ಛಂದೋ ಗಂಧವನ್ನು ಸೂಸುವಲ್ಲಿ ಅವರ ಕಾವ್ಯ ಲೋಕ ವಿಸ್ತಾರವಾಯಿತು.ನಂತರ ಬಂದ ಅಕ್ಷಯ ಕಾವ್ಯ ( ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ),ಅರಬ್ಬೀ ಸಂಕಲನಗಳು. ಅವರನ್ನು ಮಾಹಕವಿಯಾಗಿಸಿದವು. ಅಕ್ಷಯ ಕಾವ್ಯದ ಕುರಿತಂತೆ ಅವರ ಮಾತಿನಲ್ಲಿ ಹೇಳುವದಾದರೆ,” ಸೂತ್ರ ಬದ್ಧತೆ,ಸುಸಂಬದ್ಧತೆ,ಕ್ರಮಬದ್ಧತೆ ಮುಂತಾದ ಯಾವುದೇ ಬದ್ಧತೆಗಳನ್ನು ಈ ಕಾವ್ಯ ಪರಿಪಾಲಿಸಿದಕ್ಕಿಂತ ಉಲ್ಲಂಘಿಸಿದ್ದೇ ಹೆಚ್ಚು. ಆದ್ದರಿಂದ ಸಾಲು ಸಾಲುಗಳ ನಡುವೆ ಕಂದಕಗಳು ನಿಜವಾದ ಕಂದಕಗಳು.ಆದರೂ ಇಲ್ಲೆಲ್ಲೂ ಅಮಾನುಷ ಪ್ರಪಂಚವಿಲ್ಲ.ಎಲ್ಲವೂ ಮಾನುಷವೇ ಎಲ್ಲರೂ ಮನುಷ್ಯರೇ.ಕಾವ್ಯ ಕ್ರಿಯೆಯ ಒಳಹೊರಗಣ ಸೀಮೆಗಳ ಮಿತಿಗಳ ಸ್ಪರ್ಶಿಸುತ್ತಲು, ಹಿಂತೆಗೆಯುತ್ತಲು.ಮುಗಿಯದ ಕ್ರಿಯೆ.ಸದ್ಯ ಇದೊಂದೇ ಸಾಧ್ಯ.”. ಅರಬ್ಬಿ ಕವನ ಸಂಕಲನದ ನಾಲ್ಕು ಸಾಲು :-ದೀಪದ ಋತುವಿನಲ್ಲಿ ದೀಪಗಾಳಿಯ ಋತುವಿನಲ್ಲಿ ಗಾಳಿಪಟಗಂಗಾನದಿಯ ತಟದಲ್ಲಿ ಇದ್ದೀರೋನಿಮ್ಮೂರ ಹೊಳೆಯ ದಡದಲ್ಲಿ ಇದ್ದಿರೋಎನ್ನುವುದು ಮುಖ್ಯವಲ್ಲಎಲ್ಲ ನೀರಲ್ಲೂ ಬೀಳುತ್ತದೆ ಚಂದ್ರ ಬೀಳುತ್ತವೆ ನಕ್ಷತ್ರಸಿಗುವದಿಲ್ಲವೆಂದು ಗೊತ್ತಿದ್ದು ಸಿಗುವದೆಂದು ಭ್ರಮಿಸುವುದು.
ನವ್ಯದ ಛಾಯೆಯಿಂದ ಹೊರಬಿದ್ದ, ಒಂದು ಪ್ರಸನ್ನತೆ ಅವರ ಕವಿತೆಗಳಲ್ಲಿ ಸಹಜವಾಗಿ ತೋರುತ್ತದೆ.ಓ.ಎಲ್ ನಾಗಭೂಷಣ ಸ್ವಾಮಿಯವರು ಹೇಳುವಂತೆ ” ತಿರುಮಲೇಶರ ಕಾವ್ಯ ಸುಲಭ ವರ್ಗೀಕರಣಕ್ಕೆ ದಕ್ಕುವದಿಲ್ಲ.ಅವರ ಕಾವ್ಯದ ಓದಿಗೆ ಧಾರಣ ಶಕ್ತಿ ಬೇಕಾಗುತ್ತದೆ.”.ಆದರೆ ಅವರ ಪ್ರಕಾರ ಬರೆಯಿರಿ,ಬರೆದುದು ಕವಿತೆ ಯಾಗುವ ಸಾಧ್ಯತೆ ಗಾಗಿ ಕಾಯಿರಿ ‘. ಹಾಗಾದರೆ ಪದ್ಯ ಚನ್ನಾಗಿದೆ ಎಂದು ತಿಳಿಯುವುದು ಹೇಗೆ ? ಎನ್ನುವ ಪ್ರಶ್ನೆಗೆ ಅದನ್ನು ಓದುಗರು ಹೇಳುತ್ತಾರೆ ಎನ್ನುವುದು ಅವರ ಉತ್ತರ ! ಅವರು ವೈಯಕ್ತಿಕ ವಾಗಿ ಹೇಗೆ ನನ್ನನ್ನು ಮುನ್ನಡೆಸಿದರು ಎಂದು ಹೇಳಲು ಒಂದೆರಡು ಸಂಗತಿಗಳನ್ನು ಇಲ್ಲಿ ಹೇಳದೆ ಇರಲಾರೆ.ಹೈದರಾಬಾದಿನ ಮರಾಠಿ ಅಕಾಡೆಮಿ ನಾಟಕಗಳ ಮೇಲೆ ಒಂದು ವಿಚಾರ ಸಂಕಿರಣ ಏರ್ಪಡಸಿತ್ತು ಕನ್ನಡ ನಾಟಕಗಳ ಪರವಾಗಿ ನಾನು ಇಂಗ್ಲಿಷ್ ನಲ್ಲಿ ನನ್ನ ಪೇಪರ್ ಓದಬೇಕಾಗಿತ್ತು. ನನ್ನ ಇಂಗಿ ್ಲಷ ಪಾಂಡಿತ್ಯ ಒಂದು ಸೆಮಿನಾರ ಮಟ್ಟದ್ದು ಅಲ್ಲ ಎಂದು ತಿಳಿದಿದ್ದ ನಾನು ಸೀದಾ ತಿರುಮಲೇಶರ ಹತ್ತಿರ ಹೋಗಿ ಪರಿಸ್ಥಿತಿ ವಿವರಿಸಿದೆ. ಅವರು ಇನ್ನೊಂದು ಮಾತನಾಡದೆ ಕನ್ನಡದಲ್ಲಿ ಬರೆದಿದ್ದ ನನ್ನ ಪ್ರಬಂಧವನ್ನು ನಾನು ಓದುತ್ತ ಹೋದಂತೆ ಅದನ್ನು ಇಂಗ್ಲಿಷ್ ಗೆ ತರ್ಜುಮೆ ಮಾಡುತ್ತ ಹೋಗಿ ಇಡೀ ಪ್ರಬಂಧ ತಯಾರಿಸಲು ನೆರವಾದರು.ಕೇಂದ್ರ. ಸಾಹಿತ್ಯ ಅಕಾಡಮಿ ಬೆಂಗಳೂರಿನಲ್ಲಿ ಅನುವಾದ ಕಮ್ಮಟ ಏರ್ಪಾಟು ಮಾಡಿದಾಗ ತಿರುಮಲೇಶರು ಅದರ ಸಂಪನ್ಮೂಲ ವ್ಯಕ್ತಿ ಯಾಗಿ ನಿಯುಕ್ತರಾಗಿದ್ದರು. ಅದರ ನಿರ್ದೇಶಕ ರಿಗೆ ನನ್ನ ಹೆಸರು ಶಿಫಾರಸು ಮಾಡಿ ಎರಡು ವಾರದ ಕಮ್ಮಟ ದಲ್ಲಿ ನಾನು ಭಾಗವಹಿಸುವಂತೆ ನೋಡಿಕೊಂಡರು.ಆಗಲೇ ನನಗೆ,ಪ್ರಧಾನ ಗುರು ದತ್, ಎಚ್.ಎಸ್ ವೆಂಕಟೇಶ ಮೂರ್ತಿ, ಲಕ್ಷ್ಮಿ ನಾರಾಯಣ ಭಟ್, ರಾಮಚಂದ್ರ ಶರ್ಮ,ಎಸ್.ದಿವಾಕರ ಮುಂತಾದ ಸಾಹಿತ್ಯ ದಿಗ್ಗಜಗಳ ಪರಿಚಯ ವಾದದ್ದು. ‘ಅಕ್ಷರ ಲೋಕದ ಅಂಚಿನಲ್ಲಿ’ ಅಂಕಣವನ್ನು ಅವರು ಬರೆಯುತ್ತಿರುವ ಸಂದರ್ಭದಲ್ಲಿ ಯು.ಆರ್ ಅನಂತಮೂರ್ತಿ ಯವರು ಹೈದರಾಬಾದ್ ಗೆ ಬಂದಿದ್ದರು ಆಗ ತಿರುಮಲೇಶ ನನ್ನನ್ನು ಕರೆಯಿಸಿ ಪರಿಚಯ ಮಾಡಿಸಿದರು ನಾನು ಆಗಲೇ ಅನಂತ ಮೂರ್ತಿಯವರ ರುಜುವಾತು ಪತ್ರಿಕೆಯಲ್ಲಿ ಶ್ರೀ ಶ್ರೀ ಯವರ ಮಹಾ ಪ್ರಸ್ಥಾನದ ಹಲವು ಕವಿತೆಗಳ ಅನುವಾದಗಳನ್ನು ಪ್ರಕಟಿಸಿ ಅವರ ದೃಷ್ಟಿಯಲ್ಲಿದ್ದೆ.ಅವರು ಹೋದನಂತರ, ಪರಿಚಯಕ್ಕೆ ಬರೆಯುತ್ತಿರುವ ಅಂಕಣದ ಲೇಖನಗಳನ್ನು ರುಜುವಾತವಿಗೆ ಕೊಡಿ ಎಂದು, ಅನಂತಮೂರ್ತಿಯವರು ಕೇಳಿದ್ದು,ಇವರು ನಯವಾಗಿ ನಿರಾಕರಿಸಿದ್ದ ಸಂಗತಿಯನ್ನು ನಂತರ ದಿನಗಳಲ್ಲ ಸ್ವತಃ ತಿರುಮಲೇಶರೇ ನನಗೆ ಹೇಳಿದ್ದು.ಅವರಿಗೆ ಪರಿಚಯ ಮತ್ತು ಹೈದರಾಬಾದ್ ನ ಮೇಲಿರುವ ಒಲವು ನನ್ನ ಕಣ್ಣು ತೇವಗೊಳಿಸಿತ್ತು.ಬೇಸಾಯಗಾರನಾಗೆಂದಿತು ನೆಲನನ್ನ ಗುಣ ಕಾಣುವದಕ್ಕೆ,ನನೆಯೆಂದಿತು ಜಲನನ್ನ ಗುಣ ಕಾಣುವದಕ್ಕೆ,ಪ್ರೇಮಿಯಾಗೆಂದಳು ಪ್ರೇಯಸಿನನ್ನ ಗುಣ ಕಾಣುವದಕ್ಕೆ,ಕವಿಯಾಗೆಂದಿತು ಭಾಷೆನನ್ನ ಗುಣ ಕಾಣುವದಕ್ಕೆ.ತಿರುಮಲೇಶರಿಗೆ ಎಂಬಂತ್ತು ತುಂಬಿದ ಈ ಸಂದರ್ಭದಲ್ಲಿ ಅವರಿಗೆ ಹೃದಯ ತುಂಬಿ ಶುಭಾಶಯಗಳನ್ನು ಹೇಳುತ್ತ ಈ ನುಡಿನಮನ. ಅರ್ಪಿಸುತ್ತಿದ್ದೇನೆ.–
ಹೆಚ್ಚಿನ ಬರಹಗಳಿಗಾಗಿ
ಹಣತೆ – ನಸುಕು ಕವಿಗೋಷ್ಠಿ
ತಿರುಮಲೇಶ್ ಮೇಷ್ಟ್ರಿಗೆ
ತಿರುಮಲೇಶ್- ೮೦:ವಿಶೇಷ ಸಂಚಿಕೆ