ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಲವ್ಯೂ….. ಚಿನ್ನು..!

ಹೀಗೊಂದು ಹಸೀ ಪ್ರೇಮದ ಕಾವಿಗೆ ಉತ್ತರವಾಗಿ ಧಾರಾಕಾರ ಭಾವಗಳ ಮಳೆ ಸುರಿಸುವಂತೆ ಬರೆಯುತ್ತಾರೆ ಶಿವಲೀಲಾ ಹುಣಸಗಿ ಅವರು.. ಇಲ್ಲಿ ಕಲ್ಪನೆಗಳೂ ವಾಸ್ತವವೇ, ಕನವರಿಕೆಗಳೂ ಮನವರಿಕೆಗಳೇ ಎಂಬಷ್ಟು ನೈಜವಾಗಿ ಚಿತ್ರಿತವಾಗಿದೆ.. ಪ್ರೀತಿಸಿದವರು ಹಾಗೂ ಪ್ರೀತಿಸದೇ ಇರುವವರು ಮಿಸ್ ಮಾಡಿ ಕೊಳ್ಳದೆ ಓದಬೇಕಾದ ನೈಸರ್ಗಿಕ ಒಲವಿನ ಚಿಲುಮೆ ಈ ಲಹರಿ…!
ಶಿವಲೀಲಾ ಹುಣಸಗಿ
ಇತ್ತೀಚಿನ ಬರಹಗಳು: ಶಿವಲೀಲಾ ಹುಣಸಗಿ (ಎಲ್ಲವನ್ನು ಓದಿ)

ಹೀಗೊಂದು ಹಸೀ ಪ್ರೇಮದ ಕಾವಿಗೆ ಉತ್ತರವಾಗಿ ಧಾರಾಕಾರ ಭಾವಗಳ ಮಳೆ ಸುರಿಸುವಂತೆ ಬರೆಯುತ್ತಾರೆ ಶಿವಲೀಲಾ ಹುಣಸಗಿ ಅವರು.. ಇಲ್ಲಿ ಕಲ್ಪನೆಗಳೂ ವಾಸ್ತವವೇ, ಕನವರಿಕೆಗಳೂ ಮನವರಿಕೆಗಳೇ ಎಂಬಷ್ಟು ನೈಜವಾಗಿ ಚಿತ್ರಿತವಾಗಿದೆ.. ಪ್ರೀತಿಸಿದವರು ಹಾಗೂ ಪ್ರೀತಿಸದೇ ಇರುವವರು ಮಿಸ್ ಮಾಡಿ ಕೊಳ್ಳದೆ ಓದಬೇಕಾದ ನೈಸರ್ಗಿಕ ಒಲವಿನ ಚಿಲುಮೆ ಈ ಲಹರಿ…!

ನಸುಕು.ಕಾಮ್

ಹೀಗೊಂದು ಕನವರಿಕೆ….!

ಒಂದು  ಕ್ಷಣ ಅವನ ಜೊತೆ ಮಾತಾಡತಿದ್ರೆ ಸಾಕು,  ಆ ಒಂದು ಕ್ಷಣದಲ್ಲಿ ನಾನು ಎನೋ ಮಾತಿಗಿಳಿದರೆ ಅವನದೆನೇನೋ ಮಾತುಗಳು ನಿರೀಕ್ಷಿಸದೇ ಇರುವ ಪದಗಳವು.ಒಮ್ಮೆ ಕೋಪ ,ಬೇಸರ ಎರಡೂ ಒಟ್ಟಿಗೆ ಆಗೋದು. ಹೊತ್ತಿಲ್ಲದ ಹೊತ್ತಿನಲ್ಲಿ ಏನೇ ಮಾತು ಶುರು ಮಾಡಿದರೂ ಲೆಕ್ಕಕ್ಕಿಲ್ಲ….ನನ್ನ ಮಾತು ಮುಗಿಯುವುದೇ ತಡ ಅವನ ಬೇಡಿಕೆಯ ಮಾತು ಲವ್ಯೂ… ಚಿನ್ನು….ನಾ ಬರಲೇ….

ಅವನಾವ ರೀತಿಯವನೆಂಬುದೇ ಚಿಂತೆ???

ಯಾವಾಗ ನೋಡಿದರೂ ವಿರಹದ ಬೇಗೆಯಲಿ ಬೆಂದಿರುವನಂತೆ,ನನ್ನ ಕಂಡಾಗಲೆಲ್ಲ ಗರಿಗೆದರಿ ಉಲಿಯುವವನು…ಹೇಗೆಂದು ತೀರ್ಮಾನಿಸಲಿ? ಒಳ್ಳೆಯವನಾ?ಕೆಟ್ಟವನಾ? ಇವನ್ಯಾಕೆ ಹೀಗೆ? ಈ ಎಲ್ಲ ಗೊಂದಲದ ನಡುವೆ ತುಂಬಾನೆ ಹತ್ರ ಆಗಿಬಿಟ್ಟನಲ್ಲ..! ತುಂಬಾ ಅಂದ್ರೆ ತುಂಬಾನೇ, ಎಷ್ಟು ಹತ್ರ ಆದ ಅಂದ್ರೆ,ಪೋನಿನ ತುಂಬ ಅವನೇ…  ಅವನನ್ನ ನೋಡಬೇಕು ಅನಿಸುತ್ತೆ, ನೋಡಬೇಕಾ? ಬೇಡ-ಬೇಕು-ಬೇಕು-ಬೇಡ.. ಅಷ್ಟು ದೂರದ ಅವನು ಪ್ರೀತಿಯನ್ನು,ದಾಹವನ್ನು ತಡಕೊಳ್ಳಲಾಗದವನು ಇನ್ನು ಹತ್ತಿರ ಬಂದರೆ? ಮುಂದೇನು? ಗೊಂದಲದ ಬಿಡು.. ಕೆಲವು ವಿಷಯವನ್ನು/ ಕೆಲವರನ್ನ ದೂರವಿಟ್ಟಿರಬೇಕೆಂದು ಎಲ್ಲೋ ಓದಿದ ನೆನಪು..! ಕೂಗಳತೆ ದೂರದಲ್ಲಿ ನಮ್ಮಿಂದ  ದೇವರನ್ನು ದೇವಸ್ಥಾನದಲ್ಲಿ ಇಟ್ಟ ಹಾಗೆ..! ದೇವರ ದರ್ಶನದ ನಂತರ ಮತ್ತೇನೂ ಇರಲ್ಲ,ಅವನೆಂದೂ ನಮ್ಮೊಟ್ಟಿಗೆ ಬರಲಾರನೆಂಬ ಬಲವಾದ ನಂಬಿಕೆ…! ಜೀವಂತಿಕೆ ಕಮ್ಮಿ, ನೀನೆ ನನ್ನ ಜೀವ ಅಂತಾನೆ, ನಿನ್ನ ಹಗಲಿರುಳು ಪ್ರೀತಿಸಬೇಕೆಂಬ ಬಯಕೆ ಹೊತ್ತವನ ಬಗ್ಗೆ ಭಯ ಶುರುವಾಗಿದೆ…! ಮಾತೆತ್ತಿದರೆ ಸಾಕು…..ನಾ ಬರಲೇ ನಿನ್ನ ಬಳಿಯೆಂಬ ವಿರಹಲೇಪಿತ ಮೆಲುಧ್ವನಿ…..ಲವ್ಯೂ… ಚಿನ್ನು…ನಾನೇನು ಹೇಳಿಲ್ಲ ಅಷ್ಟೆ..! ಅದು ಅವನಿಗೆ ಬೇಡದ ವಿಷಯ.ಮೂರುಹೊತ್ತು ಅವನೆದೆಗೊರಗಿದರೆ ಸಾಕೆನ್ನುವ ಜೀವ.ನೆನೆದರೆ ಕಂಪನಗೊಳ್ಳುವುದು ಪುಟ್ಟ ಹೃದಯ..! ದೂರದಿಂದಲೇ ಹೀಗೆ..? ಇನ್ನೂ..ಎದುರಿಗೆ ಬಂದರೆ..? ಬದುಕು-ಬದ್ಕೋದು ಎರಡೂ ಕಷ್ಟವೆನಿಸತ್ತದೆ….ನೂರು ಜನ್ಮಕೂ ನೂರಾರು ಜನ್ಮಕೂ ಯೆಂಬ ಹಾಡಿನ ಸದ್ದು..ಹಾಗೇನೇ ..ನನ್ನ ಹೀರೋ ಕ್ರೇಜಿ ಸ್ಟಾರ್ ಹೇಳಿರೋ ಹಾಗೆನೇ…”ಒಳಗಿರೋದ್  ಒಳಗಿದ್ರೆ ಅಂದ ಚೆಂದಾನೆ ಬಂಗಾರ”ಅನ್ನೋಹಾಗೆ…..ಹುಚ್ಚು ಪ್ರೀತಿಯ ಪೋಲಿ ಹಾಡಲ್ಲೂ ಅಡಗಿದೆ ಆಧ್ಯಾತ್ಮಿಕ ಚಿಂತನೆ.

ನನಗೂ ಬುದ್ದಿಯಿಲ್ಲ ಅನಿಸೋಕೆ ಶುರುವಾಗಿದೆ.

ಅವನಿಗೊಂದು ಗುಡ್ ಮಾರ್ನಿಂಗ್ ಅಂತ ಮೆಸೇಜ್  ಒತ್ತಿ,ಚಹಾ ತುಟಿಯೇರುತ್ತದ್ದಂತೆ, ಬೇಸಿಗೆಯಲ್ಲೂ ಚಳಿಯ ನಡುಕ ನೀ ಬಂದು ಸಂತೈಸಬಾರದೇ… ನಿನ್ನ ತಬ್ಬಿ ಬಿಸಿಯಾಗಬಹುದು ಸಖತ್ ಹಾಟ್ ಚಿನ್ನು…! ಅದೇ ಸಮಯಕ್ಕೆ ಕಾಕತಾಳೀಯವೆಂಬಂತೆ… ರೇಡಿಯೋದಲ್ಲಿ ಜಾಕಿ ಸ್ಪೀಡಿಗೆ ..ಒಂದು ಕ್ಷಣ ಕಂಗಾಲು. ಮೊದಲೇ ಬೆವರಲು ಅನುವಾದ ಹಣೆ, ಚಹಾದ ಹಬೆಗೆ ಸಜ್ಜಾದ ಹನಿಗಳ ಅಲೆಯಿಂದ…. ಲವ್ಯೂ…ಚಿನ್ನು… ಅವನ ರಿಟರ್ನ್ ಮೆಸೇಜಿಗೆ,ಮೈಯಲ್ಲೊಂದು ಬಾಂಬ್ ಸ್ಪೋಟ..! ಥಾಂಕ್ಯೂ ಅಂತ.. ಟೈಪಿಸಿ ಸೆಂಡ್ ಒತ್ತುವಷ್ಟರಲ್ಲಿ ಪುರುಸೊತ್ತಿಲ್ಲದ ಚಿನ್ನು ಲವ್ಯೂ…..ನಿನ್ನ ನೋಡಬೇಕೆನ್ನಿಸಿದೆ….ಕಾಲ್ ಮಾಡಲಾ..??.ಅವನ ತೀವ್ರತೆಗೆ ದೀಪಗಳೆಲ್ಲ ಆರಿ ಬರಿ ಕತ್ತಲು ಮುಸುಕಿದಂತೆ..!ನನಗೂ ಬುದ್ದಿಯಿಲ್ಲಾ ಅನ್ನಿಸದಿರಲಿಲ್ಲ..

ಪ್ರತಿಕ್ಷಣ ನನ್ನ ಸೇರುವ ಬಯಕೆಗೆ ಭಯ…!

ಉಮುರಿನಲ್ಲೂ ಉನ್ಮಾದ ತಂದು ಒಟ್ಟುವ ಅವನ ಟಂಕಿತ ಪದಗಳು ನನ್ನೆದೆಯ ತಲೆಕೆಡಿಸಿರುವಾಗ, ಎದುರಿಗೆ ಬಂದರೆ? ಅವನ ಎದುರಿಗೆ ನಾ ನಿಂತರೇ ?  ತುಸು ಭಯ,ಪ್ರೀತಿಯ ಅಮಲಿನಲ್ಲಿರುವವನ ಬಡಿದೆಬ್ಬಿಸಲಾರದ ಉದ್ವೇಗ… ನೀ ಬೇಕೆಂಬ ಹಟ..!ಇದೊಂದುಥರಾ ಕುಡಿಯದೇ ನಶೆಯೇರಿದಾ ಶರಾಬಿನ ಗುಂಗಿಗೆ ಭಯಪಟ್ಟಿರುವೆ.

ಒಂದ ನಿಮಿಷ ಬಂದೆ ಚಿನ್ನು…

ನಿನ್ನ ಪೋಟೋ ಕಂಡಾಗಿನಿಂದ ನನಗೊಂದು ಥರಾ..ನನ್ನ ಕಾಮನೆಗಳಿಗೆಲ್ಲ ನಿನ್ನಲ್ಲಿದೆ ಉತ್ತರ….ಎಂದೆಲ್ಲ ಪುಸಲಾಯಿಸುತ್ತಾ…ಇವನ ಮಾತಿನ ಮೋಡಿಗೆ ಚಹಾ ಸಪ್ಪೆಯೆನಿಸಿ ಕುಡಿಯೋದು ಸಾಕೆನಿಸಿದೆ. ನಂತರ ಸಿಕ್ತಿನಿ, ಈಗ ಸ್ನಾನ,ಪೂಜೆ ಮಾಡಬೇಕು,ನನಗಾಗಿ ನೀ ಇರುವಾಗ ಬೈ ಎಂದು ಪುನಃ ಲವ್ಯೂ ಚಿನ್ನುಯೆಂದು. ಹೇಳಿ ಹೊರಟು ಹೋದ, ಒರಟ ಅವನು!

ಮಾತು ಕೇಳುತ್ತಿಲ್ಲ…

ಕೊಂಚ ಮಗ್ಗಲು ಬದಲಿಸಿದಾಗ,ಕಂಗಳಿಗಿನ್ನು ನಿದ್ದೆ ಮಂಪರಿಗೆ ಜಾರಿಲ್ಲ…..ಟಕ್ಎನ್ನುವ ಮೆಸೇಜ್….. ಹಾಯ್…. ಚಿನ್ನು ಮಲಗಿದ್ದಿಯಾ??? ನಾ ನೀಲ್ಲದೇ ನಿದ್ದೆ ಬರತ್ತಾ ನಿಂಗೆ…..? ಒಂಟಿಯಾಗಿರೋ ಬದಲು ನನ್ನ ಕರೆದರೆ ನಿನ್ನ ಮುತ್ತಿನ ಹೂ ಮಳೆ ಸುರಿಸಿ, ನೀನೆಂದೂ ಕಾಣದ ಸುಖವ ನೀಡುತ್ತಿದ್ದೆ..ಬರಲಾ ನಿನ್ನ ಎದೆಗೊರಗಲು??? ಎಂದಾಗ ಎಂತ ಪೋಲಿಯಿವನು. ಒಂದು ನಿಮಿಷಾನೂ ಬಿಡದೆ ಬೆನ್ನುಬಿದ್ದವನ ಹೇಗೆ ದೂರ ತಳ್ಳಲೆಂಬುದೇ ತಲೆಬಿಸಿ..ಹಾಳಾದ್ದು ನಿದ್ದೆನು ಬರದು..ಹೊರಳಿದಾಗೆಲ್ಲ ಅವನ ನೆರಳು ಬಳಿಬಂದಂತೆ   “ಅಯ್ಯೋ ದೇವರೇ..ಈಗ ಪೋನ್ ಬಿಟ್ಟು ಎದುರಿಗೂ ಬಂದನಾ”…ಎಂಬ ಕನವರಿಕೆ.ಬರಲಿ ನೋಡೆ ಬಿಡೋಣ ಅವನ ಪ್ರೇಮದ ಉತ್ಕಟ ಬಯಕೆ ಎಂಬ ಮೊಂಡು ನಿರ್ಧಾರಕ್ಕೆ ಒಳ ಮನಸು ಸಿದ್ದವಾಗಿ…ಅವನಿಗೊಂದು ಆವಾಜ್ ಹಾಕ್ತಿನಿ, ಮತ್ತಲಿ ಮುದುಡುವ ಹಾಸಿಗೆಗೆ, ಮತ್ಯಾಕ ಭಯಪಡಲಿ?ಎಂದರೆ… ಕಿಂಚಿತ್ತು ಅಳುಕಿಲ್ಲದೆ. ಬಂದೆ..ನಿನ್ನ ಬಳಿ ಬಂದೆ  ಇರು, ಮಾರುತ್ತರದ ಪೋಲಿ ಮೆಸೇಜ್ಗೇನು ಕಡಿಮೆಯಿಲ್ಲ…! ಎಷ್ಟು ಧೈರ್ಯ ಅವಂಗೆ???ಇಂಥ ಭಂಡ ಧೈರ್ಯಕ್ಕೆನಾ ಪ್ರೀತಿ, ಕಾಮ ಹುಟ್ಟೋದು? ನಮ್ಮಂಥ ಬಡಪಾಯಿಗಳು ಎಲ್ಲಿ ಸಾಯೋದು??

ಏನಾದರೂ ಆಗಲಿ ಗಟ್ಟಿ ಧೈರ್ಯ ಮಾಡೋದೆ..

ಅವನ ಹುಚ್ಚಾಟಕೆ ಮನದ ತುಂಬ ಗೊಂದಲಗಳು. ನನ್ನಿಂದ ತಪ್ಪಾಗಿರಬಹುದಾ?? ಅವನಾವ ಭ್ರಮೆಯಲಿರು ವನು? ಕಾಡುವ,ಬೇಡುವ,ಸಂತೈಸುವ,ಕಾಪಿಡುವ ಉನ್ಮಾದದ ರೂಪದ ವೇಷಧರಿಸಿ ಮೂರೊತ್ತು ಮಿಲನಮಹೋತ್ಸವದ ಕನಸಕಾಣುತ್ತಾನೆ.ಲವ್ಯೂ ಚಿನ್ನು ಎಂದಾಗಲೆಲ್ಲ..ಅವನಿಗೆ ನಾನೆಂದರವನಿಗೆ ಬಯಸಿದೆಲ್ಲವ ನೀಡುವ ಕಾಮಧೇನಾದಂತೆ…! ಮಿಲನಕ್ಕೊಂದು ಜೀವ..!ಎಲ್ಲವೂ ಅವನೇ ನಿಶ್ಚಯಿಸಿದಂತೆ…..ನನ್ನ ಪಾತ್ರವೆನಿಲ್ಲ.ಹೇಳಿದಂತೆ ಸ್ವೀಕರಿಸೊದಷ್ಟೇ…! ಒಮ್ಮೊಮ್ಮೆ ಅವನೇನು ಬರುವನೇ ಇಲ್ಲ…ಬರಿ ಪೋನ್ ಲ್ಲಿ ತಾನೆ..ಎಂಬ ನಿಟ್ಟುಸಿರು.ಅವನಿರೋದು ದೂರಾನೆ ಅಲ್ವಾ? ಅನ್ನೊದು ನನ್ನ ಭ್ರಮೆ… ಅವನೊಂದು ಇಗಾಗಲೇ ದಾರಿ ಹುಡುಕಿಕೊಂಡಿದ್ದ ಇಲ್ಲಿಗೆ ಬರಲು ಅದು “ಕಲ್ಪನೆಯಲೋಕ”ದಲ್ಲಿ ಬಂದ್ರೆ ಹೇಗೆ ಎಂದು ಕಣ್ಣು ಮಿಟುಕಿಸಿ…. ಚಿನ್ನು ಕಣ್ಣ ಮುಚ್ಚು ನಿನ್ನ ಪ್ರೀತಿಸಬೇಕು ಎಂಬ ಮೆಸೇಜ್ ತಲೆಕೆಡಿಸಿತ್ತು ?  ಅವನಿಗೆ ಹೇಗೆ ರಿಪ್ಲೈ ಮಾಡೋದು? ನಂಗೊತ್ತು ನನ್ನ ಅನುಮತಿಗೂ ಕಾಯದೆ,ನನ್ನ ಮೌನವನ್ನು ಸಮ್ಮತಿಯೆಂದು ಅವನ ಸಿಕ್ಸ್ ಸೆನ್ಸಗೂ ಗೊತ್ತಾಗಿರೋ ತರಾ…ನಿನ್ನ ಬಿಟ್ಟಿರಲಾರೆ ವಾಸ್ತವ ದಲ್ಲಿ ಬೇಡ..ಕಲ್ಪನೆಯಲ್ಲಾದರೂ ನನ್ನ ಬಳಿಯಿರು..ವಿರಹವೇದನೆಯ ನೀಗೆಂದು ಕಾಡುವವನು    ‌‌‌‌ಬರಲಿ ಅಂತಲೇ ಸುಮ್ಮನಿರುವೆ. ಎನಾದರಾಗಲಿ ಧೈರ್ಯ ಮಾಡಿ ಕಿವಿ ಹಿಂಡಿ ದೂರ ಹೋಗು ಅಂತಿನಿ ………

ಹೀಗೊಂದು ಹಸೀ ಪ್ರೇಮದ ಕವರಿಕೆಯ ಸುತ್ತ ಧಾರಾಕಾರವಾಗಿ ಭಾವಗಳ ಮಳೆ ಸುರಿಸುವಂತೆ ಬರೆಯುತ್ತಾರೆ ಶಿವಲೀಲಾ ಹುಣಸಗಿ ಅವರು.. ಇಲ್ಲಿ ಕಲ್ಪನೆಗಳೂ ವಾಸ್ತವವೇ..ಕನವರಿಕೆಗಳೂ ಮನವರಿಕೆಗಳೇ ಎಂಬಷ್ಟು ನೈಜವಾಗಿ ಚಿತ್ರಿತವಾಗಿದೆ.. ಪ್ರೀತಿಸಿದವರು ಹಾಗೂ ಪ್ರೀತಿಸದೇ ಇರುವವರು ಮಿಸ್ ಮಾಡಿ ಕೊಳ್ಳದೆ ಓದಬೇಕಾದ ಇದು ನೈಸರ್ಗಿಕ ಒಲವಿನ ಚಿಲುಮೆಯ ಬುಗ್ಗೆ.. ! ಒಂದು ಲಹರಿ...!