ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರೇಮಕ್ಕೊಂದೇ ಒಲಿವ ಮಾಯಾಕೋರ

ಶಿವಲೀಲಾ ಹುಣಸಗಿ ಅವರು ಬರೆದ ಒಂದು ಲವಲವಿಕೆಯ ಲಹರಿ..
ಶಿವಲೀಲಾ ಹುಣಸಗಿ
ಇತ್ತೀಚಿನ ಬರಹಗಳು: ಶಿವಲೀಲಾ ಹುಣಸಗಿ (ಎಲ್ಲವನ್ನು ಓದಿ)

ಯಾರಿಗೇ ಇಷ್ಟವಿಲ್ಲ ಹೇಳಿ?? ಹಲೋ ಹೇಗಿದಿಯಾ? ಅನ್ನೊ ಮಾರ್ನಿಂಗ್ ಬೆಲ್…ಎಲ್ಲಾ ತಿಳಿದವನಂತೆ.. ಓಹೋ..ಇನ್ನೂ‌ ಎದ್ದಿಲ್ಲೆನೋ ಬಂಗಾರಿ. ನೀ ಇಷ್ಟೊತ್ತು ಮಲಗಿದ್ರೆ ನಾನು ಹೇಗೆ ಎಳೋಕೆ ಸಾಧ್ಯ? ಕಣೇ..

ತುಂಟ ನಗೆಯಲ್ಲಿ‌ ಕಾಡುವ ಅವನ ಸೊಲ್ಲು ನುಡಿ ಹಿತವೆನಿಸಿ ಹಾಗೆ ಕಿವಿಗಂಟಿದ ಮೊಬೈಲ್ ಸಮೇತ ಮಗ್ಗುಲು ಬದಲಾಯಿಸಿದ್ದು,ಅರಿವಾಗಲಿಲ್ಲ ನನಗೆ.ಆದರೂ‌ ಹಿಂಗ ಹೇಳುವುದು ಸರಿಯೇ..? ಅಂದುಕೊಳ್ಳುತ್ತಿರು‌ವಾಗ ಲೇ..ಅವನಿಗೆ ಅರಿವಾಗಿರಬೇಕು ನಾನು ಎಲ್ಲೊ ಹೋದೆಯಂತ…. ಹಲೋ ಎಲ್ಲೊ ಕಳೆದು ಹೋದಂತಿದೆಯಲ್ಲೇ.. ನನಗೀಗಿಗ ಮನೇಲಿ ಹಾಗೂ ಮನಸಲಿ ಹೊತ್ತು ಹೋಗುವುದೇ ಸಮಸ್ಯೆಯಾಗಿದೆ ಕಣೇ…ಎಂಥ ಮಳ್ಳ ಪ್ರಶ್ನೆ ಅನ್ನ ಬೇಡ ನೋಡು…ನಿನ್ನ ನೋಡಿದಾಗಿನಿಂದ ಒಂದು ಸುತ್ತು ಕಡಿಮೆಯಾಗಿದೆಯಂತ ಸ್ನೇಹಿತರು ರೇಗಿಸುತ್ತಾರೆ.

ಹೌದು ಯ್ಯಾಕೆ ವಾಕಿಂಗ್ ಗೆ ಬಂದಿಲ್ಲ. ನಾನೇನಾದರೂ ಬಂದು ಬಿಡತಿನಿ ಅಂತಾ ಭಯಾನಾ? ಅಲ್ಲೆ ಪೆದ್ದಿ.? ನೀನೆತ್ತ ಹೋ‌ದರೂ ನಿನ್ನ ನೆರಳಂತೆ ಅಂತ ಹೇಳಿದ್ದು ತಮಾಷೆಗಲ್ಲ ಕಣಮ್ಮಿ.ನಿಜವಾಗಲೂ ನಿನ್ನ ಆಸುಪಾಸುನೇ ಇದ್ದಿನಿ. ನೋಡು ಒಮ್ಮೆ“ಎಂದಾಗಂತೂ ಎದೆ ಬಡಿತ ಹೆಚ್ಚಾದಂತ ಅನುಭವ ಕಿಟಕಿ,ಬಾಗಿಲು,ರಸ್ತೆ ಬೀದಿಯತ್ತ ಒಂದು ಕಣ್ಣು ಹಾಯಿಸ‌ದಿರಲಿಲ್ಲ.

ಯಪ್ಪಾ..ಇದೆಂತ ಕಿರಿಕಿರಿ ಅನ್ನಿಸಿದರೂ ಮನಸಲ್ಲೆ ನೀನು ಅಂತರಯ್ಯಾಮಿ ಬಿಡು ಅನ್ನಿಸಿತ್ತು.ಬೆಳಿಗ್ಗೆ, ಬೆಳಿಗ್ಗೆ ಪೋನ್ ಮಾಡಿದಿಯಾ? ಎನ್ ಸಮಾಚಾರ? ಅಂತ ಕೇಳಲ್ವೆನೇ ಬುಲ್ ಬುಲ್….ಮಾತಾಡಕಿಲ್ವಾ??

ನನಗೋ ತಲೆಬಿಸಿ ಏನಂತ ಮಾತಾಡೋದು? ಹಿಂಗೆ ಒಂದೇ ಸಮನೆ ಕೇಳತಾ ಇದ್ರೆ ಹೇಂಗೆ?. ಅಲ್ಲ ಕಣೋ ನಿನಗೆ ಬ್ಯಾರೆ ಕೆಲಸಾ ಇಲ್ಲವಾ? ಮೂರು ಹೊತ್ತು ಪೋನು ಮಾಡತಾನೆ ಇರತಿಯಲ್ಲ.ನಾನೇನು ಫ್ರೀ ಇದ್ದಿನಿ,ನಿನ್ನ ಪೋನ್ ಅಟೆಂಡ್ ಮಾಡೋದೆ ಕ್ಯಾಮೆ ಅಂದಕೊಂಡಯ್ಯಾ? ಬೆಳಿಗ್ಗೆ ಬೆಳಿಗ್ಗೆ ತಲೆ ತಿನ್ನಬೇಡಾ ತಿಳಿತಾ? ಇಡು ಪೋನು” ಅಂತ ಸಿಟ್ಟಿನಿಂದ ಪೋನ್ ಕಟ್ ಮಾಡಿದೆ ಅಷ್ಟೇ. ಒಂದು ನಿಮಿಷವಾದರೂ ಪೋನ್ ಬರದಿರುವುದಕ್ಕೆ ಆಶ್ಚರ್ಯ. ಪಾಪ ನಾನು ಹೀಗೆ ಹೇಳಬಾರದಿತ್ತು.ತುಂಬಾ ನೋವಾಯಿತೇನೋ.. ಅಂದುಕೊಳ್ಳುತ್ತಲೇ ಪೋನ್ ಡಯಲ್ ಮಾಡಿ ತಕ್ಷಣ ಕಟ್ ಮಾಡಿಬಿಟ್ಟೆ.ನಾನೇ ಬೈದು,ನಾನೇ ಪೋನ್ ಮಾಡಬಾರದಿತ್ತು ಅನ್ನುತ್ತಿರುವಾಗಲೇ ಒಳ ನಿಲುವು ಅವನೆಂದರೆ ಎನು ಅಂತಾನೇ ಅರ್ಥ ಮಾಡಿಕೊಳ್ಳು ವುದು ಕಷ್ಟವಾಗಿದೆ.ಸ್ಪಷ್ಟ ಉತ್ತರ ಮನಸ್ಸಿಗೂ ಹೊಳೆದಿಲ್ಲ.ಇದೆಲ್ಲ ನನಗೆ ಬೇಕಾ?ಎಂದು ಎದ್ದು‌ ಕೂತು,ಹೊರಳಿದೆ. ಹಲೋ… ವಾಯ್ಸ್್ ಮೇಸೇಜ್.! ನಂಗೊತ್ತಿತ್ತು ನನ್ನಾಕಿಗೆ ನನ್ನ ಕಂಡರೆ‌ ಪಿರುತಿಯಂತ.ಈಗ ಸರಿಯಾಯಿತು ನೋಡು. ನನ್ನ ಹುಡುಗಿ ಶ್ಯಾನೆ ಟಾಪ್ ಅವಳೇ… ಎನೇ ಹೇಳು ಕಣೇ..ನೀ ಬೈದರೆ ನನಗೆ ಪೂಜೆ ಪ್ರಸಾದ ಸಿಕ್ಕಂತೆ.ಹೋದ ಕೆಲಸವೂ ಆದಂತೆ.ಅವ ಹೇಳುವ ಮಾತು ಪದೇ ಪದೇ ಕೇಳಬೇಕು ಅನ್ನಿಸುತ್ತಿತ್ತು.

ಇದ್ಯಾವ ಮೋಹವೊ ನಾ ಕಾಣೆ.ಪ್ರೀತಿಗೂ ಈ ಭಾಷೆಯ ಹೂರಣವಿದೆಯಂತ ಅರಿವಾಗಿದ್ದು ಇವನಿಂದಲೇ ಕೋತಿ ನೀನು,ನಿನ್ನ ನೆನಪಾದರೆ ಎನು ಬೇಡ ಕಣೋ ನಿನ್ನ ಸಹವಾಸ ಬೇಕು ಅನ್ನಿಸಿಬಿಟ್ಟಿದೆ.ನಿನ್ನ ಪರಿಚಯ ಯ್ಯಾಕಾಯಿತು ಎಂಬ ಪ್ರಶ್ನೆಗೆ ಉತ್ತರವಿಲ್ಲ.ನೀನಾವ ಭಾವದೋಳು ಬರುವೆಯೋ ಗೊತ್ತಿಲ್ಲ ನನಗೆ.ಎಲ್ಲವನ್ನು ಬರದಿಟ್ಟಿದಿಯಾ ಅಲ್ವಾ? ಕೆಲವು ದಾಖಲಾಗಬಾರದು ಕಣೋ,ಅವುಗಳ ಸ್ವಪ್ನ ಬಿದ್ದಂತೆಲ್ಲ,ಮತ್ತೆ ಮತ್ತೆ ಅದೇ ವಿರಹದಲ್ಲಿ ನರಳಬೇಕಾಗುತ್ತೆ. ವಿರಹ ವೇದನೆಗಳ ಸಹಿಸುವ ತಾಕತ್ತು ನನಗಿಲ್ಲ. ಎಂದು ಮನವು ಮೌನದತ್ತವಾಲುತ್ತಿತ್ತು.

ಹೇ….ಬುಲ್ ಬುಲ್ ಆ ವಿರಹದ ನೋವೇ ನಿನ್ನ ಹುಚ್ಚ ನಂತೆ ಪ್ರೀತಿಸಲು ಪ್ರೇರೇಪಿಸುತಿದೆ.ನಿನ್ನ ಮರೆತು ಬದುಕುಂಟೆ ? ಈಗ ಹೇಳು ನೀನು ಹೇಗಿದಿಯಾ? ನೆನಪು ದುಃಖ, ವೇದನೆ, ವಿರಹ ಅಂತ ಯಾಕೆ ಚಿಂತಿಸುವೆ ? ನಿನ್ನ ಯಾವ ವೇದನೆಗೂ ಹೆಗಲು ಕೊಡಲಿಲ್ಲವೆಂದು ನನ್ನ ದೂಷಿಸಬೇಡಾ.ನೀ ಹೂಂ ಅಂದು ನೋಡು.ಹೃದಯದಲ್ಲಿಟ್ಟು ಪ್ರೀತಿ ಸುವೆ.ಒಮ್ಮೆಯು ಸನಿಹ ಬರದ ನಿನ್ನ ಸ್ಪರ್ಶಿಸಲಿ ಹೇಗೆ? ಮೂಕವೇದನೆಯಲಿ ನಗುವಿನ ಮುಖವಾಡ ಧರಿಸಿ, ಬಾಯಿ ಮಾತಲ್ಲಿ ಚೆನ್ನಾಗಿದ್ದಿನಿ ಅಂದ್ರೆ ನಂಬಬೇಕಾ ನಾನು? ನನಗೋ ಎಲ್ಲವನ್ನು ಮರೆತು ಹೊಸ ಮನುಷ್ಯಳಾಗಿ ಬದುಕಬೇಕೆಂದು ನಿರ್ಧಾರ ಮಾಡಿರುವೆ‌ ಅಂದಿಯಲ್ಲ, ಅಷ್ಟು ಸುಲಭವೇನೇ? ಮರೆಯುವುದು.ಯಾವುದು ಮರೆಯುವಂಥಾದ್ದು ಹೇಳು ನೋಡೋಣ? ನನ್ನ ಕಣಕಣದಲ್ಲೂ ನೀನೆ ತುಂಬಿರುವೆ.ಆ ನಿನ್ನ ಮಾತುಗಳು? ನಿನ್ನ ಪ್ರೀತಿ ತುಂಬಿದ ಕಂಗಳು? ನಿನ್ನ ಶೃಂಗಾರದ ಮೌನವು? ಜೊತೆಗಿದ್ದರೂ ಸ್ಪರ್ಶಿಸದೆ ನಿಂತು, ಆಕಾಶದ ನಕ್ಷತ್ರಗಳ ದಿಟ್ಟಿಸೋ ಆ ನಿನ್ನ ಅಕ್ಷಿಪಟಲಗಳು ? ನಿನ್ನ ವಯ್ಯಾರದ ಮೈಕಟ್ಟಿಗೆ ಅಂದೆ ತಲೆ ತಿರುಗಿ ನನ್ನ ನಾ ಮರೆತು ಹೋಗಿರುವೆ. ಹೀಗಿರುವಾಗ ಮರೆತು ಬಾಳಲು ಆದಿತಾ ನಿನಗೆ ?ಅವನ ಆಲಾಪಾನೆ ಮುಗಿಯದು….ವಿಚಿತ್ರವಾದರೂ ಸತ್ಯ.

❤️❤️❤️

ಹಲೋ.. ಸ್ವಲ್ಪ ತಡಿಯೋ ಎನೇನೋ ಹೇಳಿ ಮನಸ್ಸನ್ನು ಕೆಡಿಸಬೇಡ.ದೂರ ಇದ್ದಿನಂತ ಗೊತ್ತಿದೆ ತಾನೆ?ಇದ್ದದ್ದೆ ನೆಮ್ಮದಿ ಅಂದ್ಕೊಂಡು ಇರಬಾರದಾ?‌ನನಗ್ಯಾಕೆ ಕಾಡುವಿ? ನಿನ್ನೆಂದೂ ಬೇಡಿಲ್ಲ ನನ್ನೆ ಪ್ರೀತಿಸೆಂದು.ನನ್ನಾ ನಿನ್ನ ಹೆಸರಲ್ಲಿ ಅಂತಾದೇನು ಆಕರ್ಷಣೆ ಇದೆಯೆಂದು ನನಗೂ ಗೊತ್ತಿ ಲ್ಲ. ಆದರೂ ನಾವು ಹಿಂಗ್ಯಾಕ ಅದಿವಿ ಹೇಳು.ಹೆಸರು ಕಟ್ಟಿಕೊಡುವದಾದರೂ ಎನು ಹೇಳು? ತಡಿಯೇ ಮಾರಾಯತಿ? ನನಗೂ ನಿನಗೂ ಒಂದೇ ನಂಟು ಅದು ಓದುದು. ಅಂದ್ರ ಪುಸ್ತಕ ಆಯಾ ಪುಟ ನೋಡಿ ತಿಳಕೋಬೇಕು ಅಂತಾನಾ? ಮಹಾರಸಿಕ ನೀನು.. ಹೋಗಲೋ.. ನನಗೆ ಗೊತ್ತು ಯಾರ ಬಗ್ಗೆನೂ ಬೇಸರವಿಲ್ಲ. ಪ್ರೀತಿ ಅಪರಾಧವೇ ಅಂತಾದರೆ ನಾನು ಗಲ್ಲು ಶಿಕ್ಷೆಗೆ ಅರ್ಹ ಕಣೇ..ಅಷ್ಟೆಲ್ಲ ಪ್ರೀತಿಸಿದ್ದು ನಾನು, ಪ್ರೀತಿಸ್ತಿರೋನು ನಾನು, ವಿನಾಕಾರಣ ಯಾರನ್ನೋ ಕಟಕಟೆಯಲ್ಲಿ ನಿಲ್ಸೋದಿಲ್ಲ. ನನ್ನ ಕಣ್ಣಂಚಿನ ಪಲ್ಲಕ್ಕಿಯಲ್ಲಿ ನಿನ್ನ ಹೊತ್ತು ತಿರುಗುವ ಪ್ರೇಮಿ ನಾನೇ ನೀ ನಿಲ್ಲದೆ ಬದುಕೋ ಶಕ್ತಿ ನನಗಿಲ್ಲವೆನ್ನುವ ಅವನ ಮಾತುಗಳಿಗೆ ಈಗಲೇ ಹೋಗಿ ಮುತ್ತಿಡಬೇಕೆನ್ನಿಸಿ. ಸಾವರಿಸಿಕೊಂಡೆ ಕೈಗೆ ಸಿಗದವನ ಬಯಸುವುದು ಹೇಗೆ?

ನೀನು..ಬದಲಾಗಲ್ಲ ಬಿಡು.ಹುಸಿಗೋಪದಿಂದ ಅಂದೆ. ನೀನು ಕೋಪದಲಿ ಭದ್ರಕಾಳಿ,ಪ್ರೀತಿಯಲಿ ರಾಧೆಯನ್ನು ಮೀರಿಸುವಿ.ಹೀಗಿರುವಾಗ ನಾನ್ಯಾಕೆ ಬದಲಾಗಬೇಕು? ನಿನ್ನೆ ಪ್ರೀತಿಸುವ ಜೀವವಿದು. ನನಗೆ ಟೈಂ ಇಲ್ಲ ಕಣೋ ಹೀಗೆಲ್ಲ ಹೇಳಿ ಮನಸು ಕಸಿವಿಸಿಗೊಳ್ಳುವಂತೆ ಮಾಡಬೇಡಾ. ಕೆಲಸಾ ಸಿಕ್ಕಾ ಪಟ್ಟೆಯಿದೆ.ಕಣ್ಣು ನಿದ್ದೆಗೆ ಜಾರಲು ಹವಣಿ ಸುತ್ತಿತ್ತು..ಸರಿ ಕಣೇ ನನ್ನ ಶ್ಯಾಮವರ್ಣಿ ಚೈ ಬಡಿಯಲು ಹತ್ತಿರವಿಲ್ಲವೆಂದು ನಕ್ಕ ನಗೆಯು ಕಚಗುಳಿಯಿಟ್ಟಂತಾಗಿತ್ತು.

ನೀ ಇದ್ದಲ್ಲೆ ಇರು.ನಾನೆ ಬರತೀನಿ ಓಕೆನಾ? ನೀ ಕರೆದರೆ ನಾ ಬರದೆ ಇರುವೆನೇ.ಕರದು ನೋಡು ಒಮ್ಮೆಯೆಂದು ಗಲ್ಲ ಚಿವುಟಿದಂತಾಗಿ,ಏನೋ ಒಂದು ಖುಷಿ ಮನದೊಳಗೆ. ನೋವ ಹಂಚಿಕೊಳಲು ಒಂದು ಜೀವ ಬೇಕು. ಅದು ಪ್ರತಿ ಪುಟಗಳಲಿ ಅರಳಿ ಬೊಗಸೆಯಲಿ ಅಡಗಿ ನಸು ನಾಚಿ ಕಮಲದಂತ ನಯನಗಳಿಲಿ ಬಂಧಿಯಾಗುವಾಸೆ. ಹೊಸ ಹುರುಪಿನ ಪುಸ್ತಕದ ಅನಾವರಣದ ಸಂಭ್ರಮವಿಗ. ಭಾವ ಸಂಬಂಧಗಳಿಗೆ ಪ್ರೀತಿಯ ಲೇಪನದುಡುಗೊರೆ ಒಪ್ಪಿಬಿಡು. ದುಗುಡ ದುಮ್ಮಾನಗಳ ಸೆರಗಲ್ಲಿ ನಿನ್ನಪ್ಪಿ ಮುದ್ದಿಸುವೆನೆಂಬ ಅವನ ಮಾತೇ ಹಿತವೆನಗೆ ಅವನಾರೆಂದು ಹುಡುಕುವ ಜಾಲ ಸಿ.ಬಿ.ಐಗೆ ವಹಿಸಿರುವೆ.ಸಿಕ್ಕನೆಂದರೆ ಸಿಹಿ‌ಸುದ್ದಿ ಹಂಚದಿರಲಾರೆ ಎಂದು ಒಳಮನಸು ಕೂಗಿ ಹೇಳುತ್ತಿತ್ತು.ಅವನೆಲ್ಲ ತುಂಟಾಟದ,ಹುಸಿಗೋಪದಲಿ ಸಮರ ಸಾರಿದ ಒಲುಮೆಯೆಲ್ಲವ ಹಿಡಿದಿಟ್ಟಿರುವೆ. ಹರೆಯದುತ್ಸಾಹ ಕರಗುವ ಮುನ್ನ ಪ್ರೀತಿಯ ಗೂಡಾರ್ಥವ ಬಯಲು ಮಾಡುವ ಯೋಚನೆ.

ಅವನೆಂದರೆ ನಿಗೂಢ…! ಪ್ರೇಮಕ್ಕೊಂದೇ ಒಲಿವ ಮಾಯಾಕೋರ…!ನಾನೋದಿದ ಪ್ರೇಮ ನಿವೇದನೆಯ ಪುಸ್ತಕ ನನ್ನ ಮಸ್ತಕವನ್ನು ಆವರಿಸಿದ್ದು ಅರಿವಾಗಲೂ ಇಲ್ಲ.ಆ ಕಥೆಯ ನಾಯಕ ಒಲಿದಿದ್ದು ನನ್ನ ಪುಣ್ಯವೇ.ಕಥೆಯೋಳು ಪ್ರೇಯಸಿಯಾಗಿ ಕನವರಿಸಿ ದ ಮಾತುಗಳು ಪ್ರೇಮಲೋಕವನ್ನು ನನ್ನ ಎದೆಯಲ್ಲಿ ಸೃಷ್ಟಿಸಿದ್ದು ಸತ್ಯವೇ…ಇಷ್ಟು ಪ್ರೀತಿಸುವ ಜೀವ ಯಾವ ಹೆಣ್ಣಿಗೆ ಬೇಡ ಹೇಳಿ? ಇದಕಾಗಿ ಹರಕೆ ಹೊತ್ತವರೆಷ್ಟೋ ಅಂತಹ ಪ್ರೀತಿ ಜೊತೆ ಒಂದು ಕ್ಷಣ ಬದುಕಿ ಮರೆಯಾಗು ವುದು ನಶಿಬ್ ಬೇಕು ಅನ್ನಿಸದಿರಲಿಲ್ಲ.