- ವಿಂಗಡಿಸಿ ನೋಡು - ಅಕ್ಟೋಬರ್ 23, 2022
- ಆ ರಾತ್ರಿ - ಸೆಪ್ಟೆಂಬರ್ 15, 2021
- ಪ್ರಮಾಣ - ಸೆಪ್ಟೆಂಬರ್ 5, 2021
ಹೀಗೆ ಹೇಳುವವರು ಕಸ ಗುಡಿಸುವ ವರು
ಕೇಳಿರಬಹುದು ನೀವೂ.
ಹಸಿ ಬೇರೆ, ಒಣ ಬೇರೆ
ಮಾಡಿದರೆ
ನೆಲಕ್ಕೆ ಹಸಿರು
ಗಾಳಿಗೆ ಉಸಿರು
ಆರ್ಭಟವೇನಿದ್ದರೂ ಗಾಡಿ ತುಂಬುವವರೆಗೆ
ಊರ ಹೊರಗೆ ಚೆಲ್ಲುವವರೆಗೆ
****
ವಿಂಗಡಿಸದಿರಿ ಒಂದಾಗಿರಿ
ಹೇಳುವವರು ಉಳಿದ ಎಲ್ಲರೂ
ಅರಚಿ ಗಂಟಲು ಆರುವವರೆಗೆ
ಒಡೆದು ಹೋಳಾಗುವವರೆಗೆ
ವಿಂಗಡಿಸುವುದು ಮರ್ಮ
ಒಡೆಯುವುದು ಧರ್ಮ
ಕೆಡಹುವುದೇ ಕರ್ಮ
ಇದೀಗ ಧರ್ಮ-ಕರ್ಮಗಳಿಗೆ ಪಂದ್ಯವಂತೆ
ವಿಂಗಡಿಸಿ ಆಡಿಸುತ್ತ
ಮುರಿದು ಮುಕ್ಕಾಗಿಸುತ್ತ
ಕೆರಳಿಸಿ ಕನಲಿಸುತ್ತ
ಬೆಂದ ಬೇಳೆಯ ಹಿಚುಕಿ ನೋಡುತ್ತ
ತುಂಬುವ ಥೈಲಿಯ ಮೇಲೆ ಕೈಯಾಡಿಸುತ್ತ
ಗೆಲುವಲ್ಲದ ಸೋಲೊಲ್ಲದ
ವಿಕ್ಷಿಪ್ತ ಓಲಾಟವಂತೆ
*
ಕೆಡುಕನ್ನು ವಿಂಗಡಿಸಿ
ಒಳಿತನ್ನು ಕೂಡಿಸುವುದು
ಜಾಯಮಾನ
ತಿಳಿದಿರಲಿ ಕಸವೀಗ ಕೆಡುಕಲ್ಲ
ಆದರೂ ವಿಂಗಡಿಸಬೇಕು ಒಳಿತಿಗೆ
ಧರ್ಮ-ಕರ್ಮಗಳೆಂದೂ ಒಳಿತ ಸೋಗ ಮೀರಿಲ್ಲ
ಆದರೂ ಕೂಡಿಸಬೇಕು ಒಳಿತಿಗೆ
ವಿಂಗಡಿಸುವುದೂ ಧರ್ಮ
ಕೂಡಿಸುವುದೂ ಧರ್ಮ
ಬೇಕಾದವರಿಗೆ, ಬೇಕಾದಷ್ಟು, ಬೇಕಾದಂತೆ.
ಹೆಚ್ಚಿನ ಬರಹಗಳಿಗಾಗಿ
ವಿಶ್ವ ವಿಸ್ಮಯ
ಒಂದು ಹಲಸಿನ ಹಣ್ಣಿನ ಹಂಬಲ ಮತ್ತು ಇತರ ಪದ್ಯಗಳು
ಕವಿಯೊಬ್ಬ..