ಇತ್ತೀಚಿನ ಬರಹಗಳು: ಜಬೀವುಲ್ಲಾ ಎಂ. ಅಸದ್ (ಎಲ್ಲವನ್ನು ಓದಿ)
- ಮೈಖೇಲ್ ಜಾಕ್ಸನ್ ಎಂಬ ಲೋಕ ಕಂಡ ಮಾಂತ್ರಿಕ - ಡಿಸಂಬರ್ 21, 2021
- ಪ್ರೀತಿ ಹಂಚುತ ಸಾಗು - ನವೆಂಬರ್ 24, 2021
- ನನ್ನ ಕವಿತೆಗಳಿಗೊಂದಷ್ಟು ಜಾಗ ನೀಡಿ - ನವೆಂಬರ್ 3, 2021
ಗಝಲ್….
ಕನ್ನಡಿ ಒಡೆದರೆ ಅಪಶಕುನ ಎಂದು ಮಂದಿ ನಂಬುವರಲ್ಲ ನನ್ನ ಭಾರತದಲ್ಲಿ
ಹೆಣ್ಣಿನ ಮಾನ ಕಳೆದರೆ ಏನೂ ಹೇಳದವರು ಇರುವರಲ್ಲ ನನ್ನ ಭಾರತದಲ್ಲಿ
ಸಂವಿಧಾನದ ವಿಧಿ, ದಂಡ ಸಂಹಿತೆ, ನ್ಯಾಯಾಂಗದ ಅಧಿಕಾರಗಳೆಲ್ಲ ಏನಾಗಿವೆ
ಅರಾಜಕತೆ ಅತ್ಯಾಚಾರ ವೃದ್ಧಿಸಿ ನ್ಯಾಯ ಮರಿಚಿಕೆವಾಗಿದೆಯಲ್ಲ ನನ್ನ ಭಾರತದಲ್ಲಿ
ನಿರ್ಭಿತಿಯ ಹೆಣ್ಣಿನ ಓಡಾಟವೆ ನಿಜ ಅರ್ಥದಲ್ಲಿ ಸ್ವಾತಂತ್ರ್ಯ ಎಂದಿದ್ದರು ಗಾಂಧೀಜಿ
ಈಗ ಹಾಡಹಗಲಲ್ಲೆ ನಡೆದಾಡುವುದು ಕಷ್ಟವಾಗಿದೆಯಲ್ಲ ನನ್ನ ಭಾರತದಲ್ಲಿ
ಬುದ್ಧ-ಬಸವ-ಅಂಬೇಡ್ಕರರ ಸಿದ್ಧಾಂತಗಳನ್ನೆಲ್ಲ ಕೊಂದು ಗೋರಿಕಟ್ಟಲಾಗಿದೆ ಎಂದೋ
ದಲಿತ ಅಸ್ಪೃಷ್ಯನೆಂಬ ಅವಹೇಳನಕ್ಕೆ ಗುರಿಯಾಗಿ ಹೋರಾಡುತ್ತಿದ್ದರಲ್ಲ ನನ್ನ ಭಾರತದಲ್ಲಿ
ನೇತಾಜಿ-ಭಗತ್-ಆಜಾದರು ಪ್ರಾಣತೆತ್ತು ತಂದುಕೊಟ್ಟ ಸ್ವಾತಂತ್ರ ವ್ಯರ್ಥವಾಯಿತೆ ಅಸದ್
ದೇಶವಾಸಿಗಳೆ ಭಾರತಾಂಬೆಗೆ ಕೋಳ ತೋಡಿಸಿ ಮೆರೆಯುತ್ತಿದ್ದಾರಲ್ಲ ನನ್ನ ಭಾರತದಲ್ಲಿ..
***
ಹೆಚ್ಚಿನ ಬರಹಗಳಿಗಾಗಿ
ಹುಣ್ಣಿಮೆ ರಾತ್ರಿ ದೇವರಾಡುವನು
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ