ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಜಬೀವುಲ್ಲಾ ಎಂ. ಅಸದ್
ಇತ್ತೀಚಿನ ಬರಹಗಳು: ಜಬೀವುಲ್ಲಾ ಎಂ. ಅಸದ್ (ಎಲ್ಲವನ್ನು ಓದಿ)

ಗಝಲ್….

ಕನ್ನಡಿ ಒಡೆದರೆ ಅಪಶಕುನ ಎಂದು ಮಂದಿ ನಂಬುವರಲ್ಲ ನನ್ನ ಭಾರತದಲ್ಲಿ
ಹೆಣ್ಣಿನ ಮಾನ ಕಳೆದರೆ ಏನೂ ಹೇಳದವರು ಇರುವರಲ್ಲ ನನ್ನ ಭಾರತದಲ್ಲಿ

ಸಂವಿಧಾನದ ವಿಧಿ, ದಂಡ ಸಂಹಿತೆ, ನ್ಯಾಯಾಂಗದ ಅಧಿಕಾರಗಳೆಲ್ಲ ಏನಾಗಿವೆ
ಅರಾಜಕತೆ ಅತ್ಯಾಚಾರ ವೃದ್ಧಿಸಿ ನ್ಯಾಯ ಮರಿಚಿಕೆವಾಗಿದೆಯಲ್ಲ ನನ್ನ ಭಾರತದಲ್ಲಿ

ನಿರ್ಭಿತಿಯ ಹೆಣ್ಣಿನ ಓಡಾಟವೆ ನಿಜ ಅರ್ಥದಲ್ಲಿ ಸ್ವಾತಂತ್ರ್ಯ ಎಂದಿದ್ದರು ಗಾಂಧೀಜಿ
ಈಗ ಹಾಡಹಗಲಲ್ಲೆ ನಡೆದಾಡುವುದು ಕಷ್ಟವಾಗಿದೆಯಲ್ಲ ನನ್ನ ಭಾರತದಲ್ಲಿ

ಬುದ್ಧ-ಬಸವ-ಅಂಬೇಡ್ಕರರ ಸಿದ್ಧಾಂತಗಳನ್ನೆಲ್ಲ ಕೊಂದು ಗೋರಿಕಟ್ಟಲಾಗಿದೆ ಎಂದೋ
ದಲಿತ ಅಸ್ಪೃಷ್ಯನೆಂಬ ಅವಹೇಳನಕ್ಕೆ ಗುರಿಯಾಗಿ ಹೋರಾಡುತ್ತಿದ್ದರಲ್ಲ ನನ್ನ ಭಾರತದಲ್ಲಿ

ನೇತಾಜಿ-ಭಗತ್-ಆಜಾದರು ಪ್ರಾಣತೆತ್ತು ತಂದುಕೊಟ್ಟ ಸ್ವಾತಂತ್ರ ವ್ಯರ್ಥವಾಯಿತೆ ಅಸದ್
ದೇಶವಾಸಿಗಳೆ ಭಾರತಾಂಬೆಗೆ ಕೋಳ ತೋಡಿಸಿ ಮೆರೆಯುತ್ತಿದ್ದಾರಲ್ಲ ನನ್ನ ಭಾರತದಲ್ಲಿ
..

***

ಈ ಗಜಲ್ ಗೆ ಚಿತ್ರ ಬರೆದವರು: ಎ. ಮೊಹಮ್ಮದ್ ರಫೀಕ್
ಕಲಾವಿದರಾದ ಎ. ಮೊಹಮ್ಮದ್ ರಫೀಕ್ ರವರು ಹಲವಾರು ವರ್ಷಗಳಿಂದ ಬಳ್ಳಾರಿಯಲ್ಲಿ ನೆಲೆ ಕಂಡುಕೊಂಡಿದ್ದು ವರ್ಣಚಿತ್ರಕಲೆ, ಕರಕುಶಲ ಕಲೆ ಸಾಹಿತ್ಯ ಹಾಗೂ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಸ್ಥಳೀಯ ಕಲಾಸಕ್ತ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲೆಯ ಶಿಕ್ಷಣವನ್ನು ನೀಡುತ್ತಿದ್ದು ಈ ಕೆಳಕಂಡ ಹಲವು ಪ್ರಶಸ್ತಿಗಳು ಇವರಿಗೆ ಲಭಿಸಿರುತ್ತವೆ.ಶ್ರೀ ಎಸ್.ಎಂ. ಪಂಡಿತ್ ಪ್ರಶಸ್ತಿಹಜರತ್ ಟಿಪ್ಪು ಸುಲ್ತಾನ್ ರಾಜ್ಯ ಪ್ರಶಸ್ತಿಕರ್ನಾಟಕ ರಾಜ್ಯೋತ್ಸವ ಪುರಸ್ಕಾರಸಾಧನ ಕಣ್ಮಣಿ ಪುರಸ್ಕಾರರಾಜ್ಯ ಸರ್ಕಾರದ ಹಂಪಿ ಪುರಸ್ಕಾರಕೃಷ್ಣದೇವರಾಯ ಪ್ರಶಸ್ತಿವರ್ಷದ ಕನ್ನಡಿಗ ಪ್ರಶಸ್ತಿಕನ್ನಡ ಸಾಹಿತ್ಯ ಪರಿಷತ್ತಿನ ಇತ್ಯಾದಿ ಪುರಸ್ಕಾರಗಳೊಂದಿಗೆ ಕಲಾತಪಸ್ವಿ ಹಾಗೂ ಕುಂಚ ಬ್ರಹ್ಮ ಬಿರುದುಗಳನ್ನು ಪಡೆದಿರುತ್ತಾರೆ.
ಗಜಲ್ ರಚನೆ: ಜಬಿವುಲ್ಲಾ ಎಂ. ಅಸದ್