ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗಾಂಧಿಜೀ ಮತ್ತು ಸ್ವಾತಂತ್ರ್ಯ (ಮಕ್ಕಳ ಕವಿತೆ)

ಯಮುನಾ ಕಂಬಾರ
ಇತ್ತೀಚಿನ ಬರಹಗಳು: ಯಮುನಾ ಕಂಬಾರ (ಎಲ್ಲವನ್ನು ಓದಿ)

ತುಂಡು ಬಟ್ಟೆಯ ; ಸರಳ ಜೀವನ,
ದುಡಿಮೆ ಬಾಳಿನ ಕೀರ್ತಿಯು.
ಮಾತು ಮೌನವು ; ಅರಿತು ಆಡಲು,
ಅಸ್ತ್ರ ಮಾಡಿದ ದೀಪ್ತಿಯು.

ಗಿಡವು ಬಾಗದ ; ಹಠದ ನಿಲುವಿಗೆ,
ಸಹನೆ ಮಂತ್ರದ ಪಾಠವು.
ಸರಳ ಚಳುವಳಿ ; ಶಾಂತಿ ಪಥದಲಿ,
ನಡೆಯ ಕೊಲ್ಲುವ ನೀತಿಯು .

ಅಡಿಯು ಮುಡಿಯನು ; ಅರಿಯೆ ಬಿಳಿಯರು,
ಇಲ್ಲ ಸಲ್ಲದ ಕಾಯ್ದೆಯು.
ಹೊಂಚು ಹಾಕುತ ,ನಿಧಿಯ ದೋಚುತ ;
ದಾಸ್ಯ ಬದುಕಿನ ರೀತಿಯು.

ಹಗಲು ಹರಿಯದ ; ರಾತ್ರಿ ಬೆಳಗದ,
ಕೆಂಪು ಮೂತಿಯ ಕಿರುಕುಳ !

ಚಿನ್ನ ನಾಡಲಿ ; ಅನ್ನ ಸಿಗದೇ ,
ಜನರ ಜೀವನ ಥಳಮಳ!!

ನಾಡ ಹಿರಿಯರು ; ನರಳಿ ನವೆದರು
ನಾಡ ದೇವಿಯ ಬೇಡುತ..!
ಹಠದಿ ಛಲದಲಿ ; ಸಹನೆ ತಾಳುತ,
ಅನ್ನ ಋಣಕೆ ಬಾಗುತ….!!

ಲಾಠಿ ಏಟನು ; ಬೂಟ ಒದೆತವ,
ತಿಂದು ನಕ್ಕರು ದೇಶಕೆ….!
ನಾವು ಎಲ್ಲರು ; ಒಂದೇ ಎನ್ನುವ ,
ಶಸ್ತ್ರ ಕೊಟ್ಟರು ಲೋಕಕೆ…..!!