- ಕಪ್ಪಿನ ನಂಬಿಕೆ-ಭಾಮಿನಿ ಷಟ್ಪದಿಯ ಪದ್ಯ - ನವೆಂಬರ್ 23, 2023
- ಕರ್ಮದ ಧರ್ಮ - ಅಕ್ಟೋಬರ್ 24, 2023
- 99099 - ನವೆಂಬರ್ 20, 2022
ನಿರೂಪಕ ನಿರೂಪಿಸಿದ : ಪ್ರಿಯ ವೀಕ್ಷಕರೇ , ಈಗ ಮುಂದಿನ ಕಾರ್ಯಕ್ರಮ ಸಾಹಿತ್ಯ, ಸಂಗೀತ, ಕ್ರೀಢೆ, ನಾಟ್ಯ ಕ್ಷೇತ್ರಕ್ಕೆ ತಮ್ಮ ತನು ಮನ ಧನದಿಂದ ಸೇವೆ ಗೈದವರ ಸನ್ಮಾನ ಕಾರ್ಯಕ್ರಮ ” ಎನ್ನುತ್ತಿದ್ದಂತೆ ಈಗ ಸುಲೋಚನಾಳ ಸರದಿ. ತನ್ನ ಬ್ಯಾಗು ಫೋನು ಚಂದ್ರಮತಿಯ ಸುಪರ್ಧಿಗೆ ಒಪ್ಪಿಸಿ : ” ಚಂದ್ರು…ನನ್ನ ಸನ್ಮಾನದ ಫೋಟೋ ಕ್ಲಿಕ್ಕಿಸು ” ಎಂದು ಹೇಳುತ್ತಾ ವೇದಿಕೆ ಏರಿ ಹೋಗಿದ್ದಳು.
ಈ ಕೆಳಗಿನ ಕಥೆಯಿಂದ ಆಯ್ದದ್ದು
ಕಾರು ಓಡುತ್ತಲೇ ಇತ್ತು. ಸುಲೋಚನಾ ಸನ್ಮಾನವನ್ನು ಸ್ವೀಕರಿಸಿ ಮನೆಗೆ ಮರಳುತ್ತಿದ್ದಳು. ಒಂದು ಸಾರೆ ,ಅವಳಿಗೆ ತನ್ನ ಸನ್ಮಾನದಲ್ಲಿ ಚಂದ್ರಮತಿ ಕ್ಲಿಕ್ಕಿಸಿ ಕಳುಹಿಸಿದ ಫೋಟೋ ನೋಡಿಕ್ಕೊಳ್ಳುವ ಮನಸ್ಸಾಯಿತು. ತನ್ನ ಮೊಬೈಲನ್ನು ಓಪನ ಮಾಡಿ ವ್ಯಾಟ್ಸಾಫ ತೆರೆದಳು. ಚಂದ್ರಮತಿ ನಾಲ್ಕು ಫೋಟೋಗಳನ್ನು ಕಳುಹಿಸಿದ್ದಳು. ಅವುಗಳಲ್ಲಿ ಮೊದಲಿನದು – ಸುಲೋಚನೆಯ ಕಪ್ಪು ಮೋರೆ ಮುಖ ವಯಸ್ಸಿಗಿಂತ ಅಧಿಕ ಮುಪ್ಪನ್ನು ಭರಿಸಿತ್ತು ತುಟಿಗಳು ಮತ್ತಷ್ಟು ಮುಂದೆ ಬಂದು ಅಸಹಯ್ಯಕರವಾಗಿದ್ದವು . ಒಂದು ಸಾರೆ ಮನಸ್ಸಿನಲ್ಲಿ ” ಥೂ…..!!” ಎಂದು ಉಗಿದಳು ಮುಖ ಮುದಿ ಕೋತಿ ತರಹ ಮುಂದೆ ಬಾಗಿದೆ. ಅದು ಹ್ಯಾಗೆ ಇದನ್ನು ಹೀಗೆ ತೆಗೆದಳೋ……ಬುದ್ದಿ ಇಲ್ಲದವರ ಹಾಗೆ……ಬುದ್ದಿ ಇದ್ದವಳು……..ಸುಲೋಚನಾಳ ಹೃದಯ ಒಂದು ಸಾರೆ ನರಳಿತು.ಉಳಿದವುಗಳನ್ನು ನೋಡಲು ಟೆಕ್ಸ ಹೊರಳಿಸುತ್ತಿದ್ದಂತೆ…….” ಅವ್ವಾ……ಛೀ……..ಛೀ……..ಅವಳು ಹೀಗೆಯೇ………..!!”. ಎನ್ನುತ್ತಿದ್ದಂತೆ ಅವಳ ನೆನಪು ಅಂದಿನ ಬೆಳಗಿನ ದೃಶ್ಯಗಳ ಮೀಯತೊಡಗಿತು.
**
“ಹಲೋ….., ಹಲೋ………,ತಯಾರಾಗಿದ್ದೀಯಾ.ಚಂದು….??” ಸುಲೋಚನಾ ಆಗ್ರಹಿಸಿದಳು. ಸುಲೋಚನಾ ಸಂಘ ಜೀವಿ .ಒಬ್ಬಳೇ ಕಾರ್ಯಕ್ರಮಕ್ಕೆ ಹೋಗುವ ಬದಲು ಜೊತೆಯಾಗಿ ಹೋದರೆ ಅದರ ರೀತಿಯೇ ಬೇರೆ ಅದು ಇದು ಅಂತಾ ಎಷ್ಟೊಂದು ವಿಷಯಗಳು ಪರಿಚಯವಾಗುತ್ತವೆ. ಒಬ್ಬ ಮನುಷ್ಯನೆಂದರೆ ಒಂದು ಪತ್ರಿಕೆಯಿದ್ದಂತೆ. ಸುಲೋಚನಾ ಪಿಸುಗುಟ್ಟಿಕೊಳ್ಳುತ್ತಲೇ ಕಾರು ಹಳೇ ಬಸ್ಟ್ಯಾಂಡಿನ ಕಡೆ ಓಡುತ್ತಿತ್ತು. ಕವಿಗೋಷ್ಟಿಯಿದೆ ಚಂದ್ರು ಬಂದೇ ಬರುತ್ತಾಳೆ. ಬಸ್ಸಿನಲ್ಲಿ ಹೋಗುವವಳನ್ನು ಕಾರಿನಲ್ಲಿ ಬಾ ಎಂದು ಕೈ ಬೀಸಿ ಕರೆದಂತಾಯಿತು. ಸ್ನೇಹವೇ ಹಾಗೆ ಅಲ್ಲವೇ…..?
ಚಂದ್ರಮತಿ ಮುಖದಲ್ಲಿ ಹನಿ ರಕ್ತಬಾರದವಳು ಉಡುಗೆ ತೊಡುಗೆಯಲ್ಲಿ ಆಧುನಿಕ ಹೆಜ್ಜೆಗಳನ್ನು ಹೋಲುತ್ತಾಳೆ. ಕಡಿಮೆ ರೊಕ್ಕದಲ್ಲಿ ಮಿಂಚುವ ಶೀರೆಗಳು ರೋಡಗೋಡ ಬಳೆ ಕಿವಿಯೋಲೆಗಳು ನೋಡುಗರ ಕಣ್ಣುಬಿಡಿಸುತ್ತವೆ ಬಾಯಿತೆರೆಸುತ್ತಿವೆ.
ಮಹಿಳಾ ಕಾರ್ಯಕ್ರಮವೊಂದರಲ್ಲಿ ಚಂದ್ರಮತಿ ಸುಲೋಚನೆಗೆ ಪರಿಚಯವಾದದ್ದು. ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಚಂದ್ರಮತಿ ಸ್ವಾಗತ ಗೀತೆಗೆ ಆರೆಂಟು ಮಕ್ಕಳನ್ನು ತಯಾರು ಮಾಡಿಕೊಂಡು ಸೀರೆ, ಲಿಫ್ಸಸ್ಟಿಕ್ಕು ಫೌಢರಂತಾ ಹುಡುಕುವ ಮಕ್ಕಳುಗೆ ಹಚ್ಚುವ ಗದ್ದಲದಲ್ಲಿ ಸುಲೋಚನೆಗೆ ಕ್ರಿಯಾಶೀಲಳಾಗಿ ಕಂಡದ್ದರಲ್ಲಿ ಆಶ್ಚರ್ಯವಿಲ್ಲ. ಕಾರ್ಯಕ್ರಮ ನಿರ್ವಹಣೆದಾರರಿಗೂ ಅಷ್ಟೇ ಸಹಾಯ ಉಸಿರು ಬಿಡುವಂತಾಗಿರುತ್ತವೆ. ಅವಳ ಈ ಚಿಕ್ಕನೆರವು ಸಂಯೋಜಕರಲ್ಲಿ ಹರಿದಾಡುವಂತಾಗಿದೆ. ಯಾವುದೇ ಸಾಹಿತ್ಯಕ ಕಾರ್ಯಕ್ರಮವಿರಲಿ ಚಂದ್ರಮತಿಗೆ ಆಮಂತ್ರಣ ಮುಟ್ಟಿರುತ್ತದೆ.
“ಚಂದ್ರು ….. ಚಂದ್ರೂ……ಇಲ್ಲಿ …..ಇಲ್ಲಿ…….ಬಾ” ಎಂದು ಕಾರಿನ ಬಾಗಿಲು ತೆರೆದಳು. ಆಜಾನುಬಾಹುವಿನ ಚಂದ್ರು ಬಗಲಿಗೊಂದು ಬ್ಯಾಗು ಹಾಕಿಕ್ಕೊಂಡು ಮೆಲ್ಲಗೆ ಹೆಜ್ಜೆ ಹಾಕುತ್ತಾ ಕಾರ ಶೀಟಿನಲ್ಲಿ ಆಶೀನಳಾದಳು ಕಾರು ತಿರುವುಗಳನ್ನು ದಾಟಿ ಸರಕಾರಿ ದವಾಖಾನೆ ರಾಯಣ್ನ ಸರ್ಕಲ್ಲಗಳನ್ನು ದಾಟಿ ಡಾಂಬರ ರಸ್ತೆಯಲ್ಲಿ ಓಡತೊಡಗಿತು. ಇಬ್ಬರಿಗೂ ಹಾಯಾದ ಅನುಭವ ಆನಂದದ ಖುಷಿಯಲ್ಲಿದ್ದರು.
ಚಂದ್ರು ಒಂದು ಸಾರೆ ಯಾವುದೋ ನೆಪಮಾಡಿಕೊಂಡು ಸುಲೋಚನಳ ಮನೆಗೆ ಬಂದಿದ್ದಳು. ಸುಲೋಚನಳ ಸೀರೆ ಚೆನ್ನಾಗಿತ್ತೊ….ಇಲ್ಲವೋ …..!!
ಆದರೆ ಚಂದ್ರು ಕೇಳಿದಳು ” ಮೇಡಂ ….ಈ ಶೀರೆ ಎಷ್ಟು ಚೆನ್ನಾಗಿದೆ ನಿಮಗೆ ಒಪ್ಪಿದೆ. “ಎಂದು ಹೇಳಿದಳು. ಶಬ್ದಳಿಗೆ ಜೀವವಿದೆಯೇ…..!!?? ಸುಲೋಚನಾ ಬಾಯಿಬಿಟ್ಟಳು “ಹೌದಾ……!!!……ಇದು ಇಲ್ಲೇ ತಗೊಂಡಿದ್ದು. ಅವಳ ಮುಖದಲ್ಲಿ ಮೋಡಗಳಲ್ಲಿ ತಾನು ತೇಲುತ್ತಿರುವ ಚಿತ್ರಮೂಡಿತು.ಚಂದ್ರಮತಿ ಅವಳ ಮುಖವನ್ನೇ ಓದುತ್ತಿದ್ದವಳು ” ಮೇಡಂ ರಿ ರೂರಲ್ ಡೆವಲಪ್ಮೆಂಟ ಅಂತ ಒಂದ ಸಂಘಟನೆ ಇದೆ ರಿ ಅದಕ ಮೆಂಬರ ಆದರ ಪ್ರತೀ ತಿಂಗ್ಳೂ ಒಂದೊಂದು ಕಾರ್ಯಕ್ರಮ ಇರ್ತಾವರಿ ನೀವು ಅಲ್ಲಿ ಉಪನ್ಯಾಸ. ಕೊಡಬಹುದು ರಿ ” ಎಂದಳು. ಸುಲೋಚನಾಳ ಮುಖ ಅರಳಿಹೋಯಿತು. ಓ ! ಹೌದಾ…!!?? ಚಂದ್ರಮತಿ ಬೇಗನೇ ಮಾತು ಎತ್ತಿಕೊಂಡಳು ” ಮೇಡಂ ಭಾಳ ಏನೂ ಇಲ್ಲ ಬರೀ ೮೦೦ ರೂ ಸದಸ್ಯತ್ವದ ಫೀಜ ಇದೆ ” ಸುಲೋಚನಳಿಗೆ ರೊಕ್ಕದ ಸದಸ್ಯತ್ವ ಅಂದ್ರ ಮೈ ಮುಳ್ಳಾಗಿದ್ದರೂ ಚಂದ್ರಮತಿ ಬೇಲಿಯೊಳಗಿನ ಹೂವು ಕಿತ್ತಿಕೊಂಡಂತೆ ಹಣ ಬಿಡಿಸಿಕೊಂಡು ಆ ಸಂಘಟನೆಯಲ್ಲಿ ಉಪಾಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು. ಮುಂದೆ ನಾಲ್ಕಾರು ತಿಂಗಳಾದ ಮೇಲೆ ಒಂದು ಸಾರೆ ಸಂಘಟನೆಯ ಆಫೀಸಿಗೆ ಹೋದ ಸುಲೋಚನಾಳ ಕಣ್ಣಿಗೆ ಆಫೀಸಿನಲ್ಲಿ ಎದುರಿಗೆ ತೂಗು ಹಾಕಿದ ಪದಾದಿಕಾರಿಗಳ ಬೋರ್ಡ ಕಣ್ಣಿಗೆ ಬಿತ್ತು ಅದನ್ನು ಓದುತ್ತಿದ್ದ ಸುಲೋಚನಾ ಚಂದ್ರಮತಿಯ ಹೆಸರು ಉಪಾಧ್ಯಾಕ್ಷ ಸ್ಥಾನದಲ್ಲಿದ್ದದ್ದು ಕಂಡು ಬೆಚ್ಚಿಬಿದ್ದಳು.” ಓ….. ಹೋ….ಇವಳು ಪ್ರಚಾರಕ್ಕೆ ಬಾಯ್ದೆರೆದವಳೋ……!!…?? “
ಎಂಬ ಉದ್ಘಾರ ಚೆಲ್ಲಿದ ಸುಲೋಚನಾ ಅವಳ ವಯಕ್ತಿಕ ವಿಷಯಕ್ಕೆ ತಾನು ಕೈ ಹಾಕಬಾರದೆಂದು ತನ್ನನ್ನು ತಾನು ಮಿತಿಗೊಳಿಸಿಕೊಂಡು ಮನೆಗೆ ಬಂದಿದ್ದಳು. ಕಾರು ಓಡುತ್ತಲೇ ಇತ್ತು. ಎಡ ಬಲ ಹೊಲಗಳು ಹಸುರಿನಿಂದ ಚೆಲುವಾಗಿದ್ದವು. ಕಡಲಿ ಗಿಡದಲ್ಲಿ ನೀಲಿ ಹೂಗಳು ತುಂಬಾ ಮೋಹಕವಾಗಿ ಕಂಡವು ಸುಲೋಚನಾಳಿಗೆ. ಮುಂದೆ ಇಪ್ಪತ್ತು ನಿಮಿಷದ ಓಟದಲ್ಲಿ ಕಾರು ಸಮ್ಮೇಳನದ ಮುಂದೆಯೇ ನಿಂತಿತು. ಸುಲೋಚನಾ ಚಂದ್ರಮತಿಯರು ಜನ , ಬಣ್ಣದ ಪೆಂಡಾಲ , ನೋಡಿ ಮನ ದನಿ ಆನಂದಿಸಿದರು.ಉದ್ಘಾಟನಾ, ಸ್ವಾಗತಾ, ಅತಿಥಿ ಅಭ್ಯಾಗತರ ಮಾತುಗಳು ಮುಗಿಯುತ್ತಾ ಬಂದವು .ಮುಂದಿನ ಕಾರ್ಯಕ್ರಮವೇ ಕಾವ್ಯವಾಚನ. ಚಂದ್ರಮತಿ ಹೇಳಿದಳು : ” ಮೇಡಮ್ ರಿ ನನ್ನ ಕವನ ವಾಚನಾ ಐತಿ ನನ್ನ ಫೋಟೊ ನಿಮ್ಮ ಮೊಬೈಲ್ನಿಂದಲೇ ತಗೀರಿ” ಆಗ್ರಹಿಸಿದಳು. ಇಷ್ಟು ಹೇಳಿದರೇನಾಯಿತು. ಸುಲೋಚನೆಗೆ ಹಿರೇ ಕುದುರಿ ಬಂದಂಗಾತೋ…..ಬಹುಷ್ಯಾ ಹೌದೆನ್ನಿ..ಮೊಬೈಲ್ ತನ್ನ ಕಾಲದ್ದು ಅಲ್ಲಾ ಎಂಬ ಸಂಗತಿ ತಿಳೀದು ಸುಲೋಚನೆ ಅದರಲ್ಲಿ ತಾ ಮಾಡುವ ತಪ್ಪುಗಳನ್ನು ಅಳೆಯದಾದಳು. ಮೊಬೈಲನಲ್ಲಿ ಫೋಟೊ ಹೇಗೆ ಕ್ಲಿಕ್ಕಿಸಬೇಕು ಅನ್ನೋದು ಗೊತ್ತಿಲ್ಲದ ಸುಲೋಚನಾ ತಾನು ಕುಳಿತ ಜಾಗೆ ಬಿಟ್ಟು ತುಂಬಿದ ಸಭೆಯಲ್ಲಿ ಎದ್ದು ಫೋಟೋ ತೆಗೆಯುವ ಜಾಯಮಾನದಳು ಅಲ್ಲಾ ಎಂಬ ಸಂಗತಿ ತಿಳೀದೂ ತಪ್ಪು ಮಾಡಿದಳು. ತಾನೇನು ಚಿಕ್ಕ ಹುಡುಗಿಯೇ ಎದ್ದು ಕೈಯಲ್ಲಿ ಮೊಬೈಲ್ ಹಿಡಿದು ಆ ಮೊಬೈಲನ್ನ ಎಲ್ಲರಿಗೂ ತೋರಿಸುತ್ತಾ ತನ್ನ ಶ್ಯಾನ್ಯಾತನ ಪ್ರದರ್ಶನ ಮಾಡದೇ ಕುಳಿತಲ್ಲಿಂದಲೇ ಚಂದ್ರಮತಿ ಕಾವ್ಯ ವಾಚನದ ನಾಲ್ಕು ಫೋಟೊ ಕ್ಲಿಕ್ಕಿಸಿದಳು. “ಹೇಳಿ ಮಾಡಿಸಿದ ಹಾಂಗೆ ” ಅನ್ನುವಂತೆ ಚಂದ್ರಮತಿಯ ಕಿರು ಕಪ್ಪನೆಯ ಫೋಟೊಗಳು ಬಂದವು. ಮುಖ ಕಪ್ಪಾಗಿ ಬಂದದ್ದೂ ಅಲ್ಲದೇ ಮುಖದಲ್ಲಿ ಕಳೆಯೇ ಇಲ್ಲದ ಹಾಗೆ ಬಂದದ್ದು ಚಂದ್ರಮತಿ ರೇಗುವ ಹಾಗೆ ಆಗಿತ್ತು. ಅದು ಸುಲೋಚನೆಯ ತಪ್ಪು ಆದರೆ ಆ ತಪ್ಪು ಮಾಡಲು ಒಂದು ಕಾರಣ ಸುಲೋಚನೆ ವಯಸ್ಸಾದವಳು . ವಯಸ್ಸಾದ ಅವಳು ಚಿಕ್ಕ ಮಕ್ಕಳ ತರಹ ಕೈಯಲ್ಲಿ ಫೋನು ಹಿಡಿದುಕೊಂಡು ಫೋನನ್ನು ಒಮ್ಮೆ ಕಣ್ಣ ಎದುರಿಗೆ ಮತ್ತೊಮ್ಮೆ ಮೇಲೆ ಮಗದೊಮ್ಮೆ ಎಡ ಇನ್ನೊಮ್ಮೆ ಬಲ ಯ್ಯಾಂಗಲ್ಲುಗಳಲ್ಲಿ ಫೋಟೋ ಕ್ಲಿಕ್ಕಿಸುವ ವಯೋಮಾನ ಅವಳಲ್ಲಿ ಇಲ್ಲದ್ದನ್ನು ಗುರುತಿಸುವಲ್ಲಿ ಕ್ಷಮೆ ಕೋರಿವಲ್ಲಿ ಚಂದ್ರಮತಿ ಎಡವಿದಳಂತೆ ಕಾಣುತ್ತದೆ.
ನಿರೂಪಕ ನಿರೂಪಿಸಿದ : ಪ್ರಿಯ ವೀಕ್ಷಕರೇ , ಈಗ ಮುಂದಿನ ಕಾರ್ಯಕ್ರಮ ಸಾಹಿತ್ಯ, ಸಂಗೀತ, ಕ್ರೀಢೆ, ನಾಟ್ಯ ಕ್ಷೇತ್ರಕ್ಕೆ ತಮ್ಮ ತನು ಮನ ಧನದಿಂದ ಸೇವೆ ಗೈದವರ ಸನ್ಮಾನ ಕಾರ್ಯಕ್ರಮ ” ಎನ್ನುತ್ತಿದ್ದಂತೆ ಈಗ ಸುಲೋಚನಾಳ ಸರದಿ. ತನ್ನ ಬ್ಯಾಗು ಫೋನು ಚಂದ್ರಮತಿಯ ಸುಪರ್ಧಿಗೆ ಒಪ್ಪಿಸಿ : ” ಚಂದ್ರು…ನನ್ನ ಸನ್ಮಾನದ ಫೋಟೋ ಕ್ಲಿಕ್ಕಿಸು ” ಎಂದು ಹೇಳುತ್ತಾ ವೇದಿಕೆ ಏರಿ ಹೋಗಿದ್ದಳು.
ಸುಲೋಚನಾ ತನ್ನ ಅಕರಾಳ ವಿಕರಾಳ ಫೋಟೊ ನೋಡುತ್ತಿದ್ದಂತೆ ಚಂದ್ರಮತಿಯ ಚಿತ್ರ ಅವಳ ಕನ್ಮುಂದೆ ಬಂದು ನಿಂತಿತು. ತನ್ನನ್ನು ತಾನು ಚಂದ್ರಮತಿಗೆ ಪ್ರೀತಿ ವಿಶ್ವಾಸಗ ಸಿಂಚನ ಉಣಬಡಿಸಿದ್ದರೂ ಅವೆಲ್ಲವೂಗಳನ್ನು ಮೆಟ್ಟಿ ಸುಲೋಚನಾಳ ವಯೋಸಹಜ ದೌರ್ಭಲ್ಯದ ಮೇಲೆ ನಿಂತು ಸುಲೋಚನೆಯನ್ನು ನೋಡಿದ ನೋಟ ಸುಲೋಚನೆಗೆ ಅಸಹಜವಾಗಿ ಕಾಣಿಸಿತು. ಚಿಕ್ಕ ಮಕ್ಕಳ ತರಹ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡ ಅವಳ ಹೃದಯದಲ್ಲಿ ಇಂತಹ ಕಪ್ಪು ಇರುವುದು ಕಂಡು ಸುಲೋಚನೆ ಆಶ್ಚರ್ಯಗೊಂಡಳು “ಪ್ರೀತಿ ಎಂದರೆ ಇದೆಯಾ…..?!! ” ಎಂದು ಉದ್ಘರಿಸಿದಳು.ಚಂದ್ರಮತಿಯ ಆ ಕಪ್ಪು ಅಂದು ಹೊರಬಂದು ಮೊದಲೇ ಕಣ್ಣುಗಳ ಸುತ್ತು ಕಪ್ಪು ಆವರಿಸಿದ ಮೇಲ್ಮೈಯಲೆಲ್ಲಾ ಮತ್ತಷ್ಟು ಮೇಳೈಸಿ ಬಿಸಿಲಿನಲ್ಲಿ ನಿಂತಿದ್ದ ಅವಳ ಕಪ್ಪು ನೆರಳಿಗೆ ಅವಳು ಸಖತ್ತಾಗಿ ಹೋಲಿಕೆಯಾಗಿದ್ದಳು. ಸುಲೋಚನೆಗೆ ಚಂದ್ರಮತಿ ಭಯಾನಕವಾಗಿ ಕಾಣುತ್ತಿದ್ದಂತೆ ಸುಚುಲೋಚನೆ ಕೈಯಲ್ಲಿಯ ಮೊಬೈಲ ಬ್ಯಾಗಿಗೆ ದೊಪ್ಪನೆ ಒಗೆದು ನಿಟ್ಟುಸಿರನೊಂದು ಹೊರಚೆಲ್ಲಿದಳು.
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ