ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿತ್ರ ಕೃಪೆ : https://www.pinterest.com/pin/363665738638674450/

‘ಕಾಲಾ ಪಾನಿ’- ಎಂಬ ಭಾರತೀಯರೆಲ್ಲರ ತೀರ್ಥ ಕ್ಷೇತ್ರ !

ಎಚ್ಚಾರೆಲ್

ಶ್ರೀಧರ್, ತಮ್ಮ ಕಂಪೆನಿಯ ವರ್ಗದ  ‘Transfer Option’ ಬಂದಾಗ ಮೇಲಿನ ಅಧಿಕಾರಿಗಳನ್ನು ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ‘ಟ್ರಾನ್ಸ್ಫರ್ ಮಾಡಿ’ ಎಂದು ಮನವಿಮಾಡಿದರು. ಮೊದಮೊದಲು ಅಲ್ಲಿಗೆ ಹೋಗಲು ಸಂಕೋಚ ಪಡುತ್ತಿದ್ದ ಅವರ ಸಹೋದ್ಯೋಗಿಗಳು ಈಗ ತಾವೂ ಅಲ್ಲಿಗೆ ವರ್ಗವಾಗಿ ಹೋಗಲು ಬೇಡಿಕೆ ಸಲ್ಲಿಸುತ್ತಿದ್ದಾರೆ. ಅದಿರಲಿ ಮದುವೆಯಾದ ನವ ದಂಪತಿಗಳು ಈಗ ಅಂಡಮಾನ್ ಟ್ರಿಪ್ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಈಗ ಅಲ್ಲಿನ ನಾಗರಿಕ ಸೌಲಭ್ಯಗಳು ಅನುಕೂಲತೆಗಳು, ಹೆಚ್ಚುತ್ತಿವೆ. ಅಲ್ಲಿನ ‘ರಾಧಾ ಬೀಚ್’ ವಿಶ್ವದ ೧೦ ಸುಂದರ, ಪರಿಸರ ಪ್ರೇಮಿ,  ಸ್ವಚ್ಛ ಬೀಚ್ ಗಳಲ್ಲಿ ಒಂದೆಂದು ವರದಿಗಳು ಹೇಳುತ್ತಿವೆ. ಶ್ರೀಧರ್ ಆ ದ್ವೀಪಗಳಲ್ಲಿ ಕಳೆದ ೩ ವರ್ಷಗಳ ದಟ್ಟ ಅನುಭವಗಳನ್ನು ನನ್ನ ಜೊತೆಯಲ್ಲಿ ಹಚ್ಚಿಕೊಂಡರು. ಅವರು ಈ ದ್ವೀಪಸಮೂಹಗಳನ್ನು ಕೇವಲ ಪರ್ಯಟನೆಯ ದೃಷ್ಟಿಯಿಂದ ಆಸ್ವಾದಿಸದೆ,  ‘ಸೆಲ್ಯುಲರ್ ಜೈಲ್’ ಎನ್ನುವುದನ್ನು ಒಂದು ‘ಪೂಜಾ ಗೃಹ’ವೆಂದು ಭಾವಿಸಿ ಅಲ್ಲಿಗೆ  ತಪ್ಪದೆ ಭೇಟಿಕೊಡಬೇಕು’ ಎಂದು ಹೇಳುತ್ತಾರೆ. ೧೯೪೩ ರ ಡಿಸೇಂಬರ್  ೩೦ ರಂದು ಸ್ವಾತಂತ್ರ್ಯ ಸೇನಾನಿ ಶ್ರೀ ಸುಭಾಷ್ ಚಂದ್ರ ಬೋಸರು ಈ ದ್ವೀಪಗಳಿಗೆ ಭೆಟ್ಟಿಕೊಟ್ಟಿದ್ದರು.  ನಮ್ಮ ಪ್ರೀತಿಯ ಪ್ರಧಾನಿ, ಶ್ರೀ. ನರೇಂದ್ರ ಭಾಯಿ ಮೋದಿಯವರು, ಪೋರ್ಟ್ ಬ್ಲೇರ್ ಗೆ  ‘ಆಜಾದ್ ಹಿಂದ್ ಫೌಜ್  ನ  ನಾಯಕ’,  ಶ್ರೀ. ಸುಭಾಷ್ ಚಂದ್ರ ಬೋಸ್ ಅಲ್ಲಿಗೆ ಭೇಟಿಕೊಟ್ಟ ೭೫ ನೇ ಸ್ಮರಣ  ವರ್ಷದಲ್ಲಿ ಭಾಗವಹಿಸಲು ಹೋದಾಗ,  ಅಲ್ಲಿನ ೩ ದ್ವೀಪಗಳ ಹೆಸರನ್ನು ಹೊಸದಾಗಿ ನಾಮಕರಣ ಮಾಡಿದರು. ೧ . ರಾಸ್ ದ್ವೀಪಕ್ಕೆ ನೇತಾಜಿ ಸುಭಾಸ್ ಚಂದ್ರ ಬೋಸ್ ದ್ವೀಪವೆಂದು, ೨. ನೀಲ್ ದ್ವೀಪಕ್ಕೆ ಶಹೀದ್ ದ್ವೀಪ,. ೩. ಹ್ಯಾವ್ ಲಾಕ್ ದ್ವೀಪಕ್ಕೆ ಸ್ವರಾಜ್ ದ್ವೀಪವೆಂದೂ ನಾಮಕರಣ ಮಾಡಿದರು.  ೨ ನೆಯ ವಿಶ್ವ ಯುದ್ಧದ ಸಮಯದಲ್ಲಿ ಜಪಾನ್ ದೇಶ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ತನ್ನ ವಶಪಡಿಸಿಕೊಂಡಿತು. ಆಗ ಆಜಾದ್ ಹಿಂದ್ ಫೌಜ್  ನ  ನಾಯಕ, ಜಪಾನ್ ದೇಶಕ್ಕೆ ಒಬ್ಬ ಮಿತ್ರನಾಗಿ ಸೇರಿಕೊಂಡಿದ್ದರು. 

ಶ್ರೀಧರ್, ಮಗಳು, ಮತ್ತು ಪತ್ನಿಯ ಜೊತೆಯಲ್ಲಿ ..

******

ಎಚ್ಚಾರೆಲ್ :
ನಮಸ್ಕಾರ ಶ್ರೀಧರ್, ಎಲ್ಲರೂ ಸಾಮಾನ್ಯವಾಗಿ ಇಷ್ಟಪಡುವುದು ಬಹಳ ಹೆಸರುವಾಸಿಯಾದ ಹಾಲಿಡೇ ರೆಸಾರ್ಟ್ ಗಳ ತರಹದ ಜಾಗಗಳನ್ನು ; ಆದರೆ ನೀವು ಹೋಗಿದ್ದು ‘ಕಾಲಾಪಾನಿ’ ಎಂದು ಕರೆಯುವ ಜೈಲಿನಲ್ಲಿ ಜೀವಾವಧಿ ಶಿಕ್ಷೆಗಳನ್ನು ಅನುಭವಿಸಿದ ಕೈದಿಗಳನ್ನು ಹೊಂದಿರುವ ಸ್ಥಳ. ಈ ದ್ವೀಪಗಳಲ್ಲಿ ಕೆಲಸಮಾಡಲು ಆಯ್ಕೆ ಮಾಡಿದ್ದರ ಹಿಂದಿನ ಉದ್ದಿಶ್ಯವೇನು ?

ಶ್ರೀಧರ್ :
೦೫-೦೭ ೨೦೦೯ ರ ಫೆಬ್ರವರಿ, ೧೩ ಗುರುವಾರ ಬೆಂಗಳೂರಿನಿಂದ ಪೋರ್ಟ್ ಬ್ಲೇರ್ ಗೆ ಹೊರಟೆ. ಅಲ್ಲಿಗೆ ಹೋದಮೇಲೆ ನೋಡಿದ ಅತ್ಯತ್ತುಮ ನಿರ್ಮಲ ಪರಿಸರ, ನಿಸರ್ಗ ಸೌಂದರ್ಯ, ಮುಗ್ಧ ಮತ್ತು ಒಳ್ಳೆಯ ಜನ, ನನಗೆ ಬಹಳ ಪ್ರಿಯವಾಯಿತು. ಸಣ್ಣವನಾಗಿದ್ದಾಗ ಚಂದಮಾಮ ಪತ್ರಿಕೆಯಲ್ಲಿ ಕಥೆಗಳನ್ನು ಓದಿದ್ದೆ. ರತ್ನ ಹವಳದ ಬೆಟ್ಟಗಳು, ಕಾಡು ಮನುಷ್ಯರು ಅವರ ಸರಳ ಸುಂದರ ಜೀವನ, ಎಲ್ಲಕಿನ ಹೆಚ್ಚು ಮುದಕೊಟ್ಟಿದ್ದು ಎಲ್ಲೆಲ್ಲೂ ವ್ಯಾಪಿಸಿರುವ ವಿಶಾಲ ಭೋರ್ಗರೆಯುವ ಅಲೆಗಳ ಸಮುದ್ರವನ್ನು ನೋಡುವ, ಆ ನೀರಿನಲ್ಲಿ ಆಡುವ ಪ್ರಬಲವಾದ ಆಶೆಯಿಂದ . ಈ ಅನುಭವಗಳನ್ನು ಪಡೆಯಲು ಹೋದೆ. ಸಮುದ್ರವನ್ನು ಸಿನಿಮಾಗಳಲ್ಲಿ ನೋಡಿದ್ದೆ. ನಿಜವಾಗಿ ಆ ನೀರಿನಲ್ಲಿ ಇಳಿದು ಆಡಿದಾಗ ಬೇರೆಯೇ ಅನುಭವದ ಭಾಸವಾಯಿತು. ಕಳ್ಳ ಕಾಕರ ಭೀತಿ ಇಲ್ಲದ ನಂಬಿಕೆಯಾದ ಜನಗಳ ಒಡನಾಟ ನನಗೆ ಪ್ರಿಯವಾಯಿತು. ನನಗೆ ಅಲ್ಲಿ ಕಳೆದ ೩ ವರ್ಷಗಳು ಬಹಳ ಮುದಕೊಟ್ಟ ದಿನಗಳು ಕಲಿತದ್ದು ಬಹಳ. ನನಗೆ ದೊರಕಿದ ಈ ಸುಂದರ ಅನುಭವಗಳಿಂದ ವಂಚಿತರಾಗಿದ್ದ ನನ್ನ ಪ್ರೀತಿಯ ಮಗಳು ಮತ್ತು ಪರಿವಾರಕ್ಕೆ ಈ ಅನುಭವಗಳನ್ನು ಉಣಬಡಿಸುವ ಪ್ರಬಲವಾದ ಆಶೆ ನನ್ನನ್ನು ಕಾಡಿತ್ತು !

೧೫ ದಿನ ಕೆಲಸಮಾಡಿದನಂತರ ರಜ ಹಾಕಿ ಬೆಂಗಳೂರಿಗೆ ಹೋದೆ. ಮಾರ್ಚ್, ೨೦೧೯ ನಲ್ಲಿ ಕರೆದುಕೊಂಡು ಬಂದೆ. ಬೆಂಗಾಲಿಗಳೇ ಹೆಚ್ಚು, ನನಗೆ ಗೊತ್ತಿದ್ದ ಚೂರು ಪಾರು ಹಿಂದಿಯಲ್ಲೇ ದಿನಕಳೆದೆ. ಇಂಜಿನಿಯರಿಂಗ್ ವಲಯದಲ್ಲಿ ಅನುಭವವಿರಲಿಲ್ಲ. ಕಲಿತೆ. ಕೋಲ್ಕತ್ತಾ ಚೆನ್ನೈ ಅಷ್ಟೇ ಸಮಯ ವೈಜಾಗ್ ನಿಂದ ಶಿಪ್ ನಲ್ಲಿ ೨ ಅಥವಾ ಮೂರೂವರೇದಿನ. ಶಿಪ್ ನಲ್ಲಿ ರಫ್ ಸೀ ಆದರೆ ೫-೬ ದಿನ. ಬ್ಲೇರ್ ೧೩೫೦ ಕಿಮ್. ಮೀ. ೨ ಗಂಟೆ, ೪೫ ನಿಮಿಷ. ಸಮ್ಮರ್ ಹಾಟ್ ಆಗಿರುತ್ತೆ. ಬೇರೆ ಸಮಯದಲ್ಲೂ ಸೆಖೆಯಿರುತ್ತೆ. ೫-೧೭ ಸೂರ್ಯೋದಯ, ಮುಳುಗುವುದು ೫ ಗಂಟೆ. ನಮ್ಮ ಆಫಿಸ್ ೬೦೦-೭೦೦ ಅಡಿ ಎತ್ತರವಾದ ಸ್ಥಾನದಲ್ಲಿತ್ತು, ಅಕ್ಕಪಕ್ಕದಲ್ಲಿ ಪ್ರಶಾಂತ ವಾತಾವರಣ, ಎಲ್ಲೆಡೆ ದಟ್ಟವಾದ ಮರಗಿಡಗಳಿದ್ದರು ತೆಂಗಿನ ಮರಗಳ ತೋಪು. ಕೆಳಗೆ ಇಳಿದು ಹೊರಟರೆ, ಒಂದು ಸುಂದರವಾದ ಸಮುದ್ರ ತೀರವಿತ್ತು.

ಪ್ರವಾಸೋದ್ಯಮ ಅಲ್ಲಿನ ಪ್ರಮುಖ ಉದ್ಯೋಗ. ಖಾಸಗಿ ಸ್ಕೂಲ್ ಗಳಿವೆ ಒಳ್ಳೆಯ ಕಾಲೇಜುಗಳೂ ಇವೆ. ಮೆಡಿಕಲ್ ಕಾಲೇಜ್ ತೆರೆಯುವ ಸಿದ್ಧತೆ ನಡೆಯುತ್ತಿತ್ತು. ‘ಪಾದೌಕ್’ ಎಂಬ ಹೆಸರಿನ ಮರಗಳು ಬಹಳ ಬೇಡಿಕೆಯಲ್ಲಿವೆ. ಅವು ನಮ್ಮ ತೇಗದ ಜಾತಿಯ ತರಹ ಇವೆ. ಇಲ್ಲಿನ ಸ್ಥಾನೀಯ ಜನ ಬಹಳ ಒಳ್ಳೆಯ ಸ್ವಭಾವದವರು. ಕಳ್ಳತನ ಎಲ್ಲೂ ವರದಿಯಾಗಿರಲಿಲ್ಲ. ಪರ್ಯಟಕರಿಗೋಸ್ಕರ ಯಾವಾಗಲೂ ಕಾಯುತ್ತಿರುತ್ತಾರೆ. ಅಂಡಮಾನ್ ನಿಕೋಬಾರ್ ಐಲೆಂಡ್ ಗಳಲ್ಲಿ ನೋಡಲು ಬೇಕಾದಷ್ಟು ಸ್ಥಳಗಳಿವೆ.

ಎಚ್ಚಾರೆಲ್ :
ಇದನ್ನು ಒಂದು ವಾರ ಒಂದು ತಿಂಗಳು ನೋಡಿ ವಿಷಯವನ್ನು ಮನದಟ್ಟು ಮಾಡಿಕೊಳ್ಳಬಹುದು ಆದರೆ ೩ ವರ್ಷ ಅಲ್ಲಿಯೇ ಉಳಿಯುವ ಧೃಢ ನಿರ್ಧಾರವೇಕೆ ?

ಶ್ರೀಧರ್ :
ಇಲ್ಲಿನ ಪ್ರತಿಯೊಂದು ದ್ವೀಪಗಳೂ ಅವುಗಳದೇ ಆದ ಹಲವಾರು ದಾರುಣ ಕತೆಗಳಿವೆ. ಅಲ್ಲಿಗೆ ಹೋಗಿ ಅಧ್ಯಯನ ಮಾಡಿದರೇನೇ ನೈಜತೆ ಅರಿವಾಗುವುದು. ಅದಕ್ಕಾಗಿ ನಾನು ಆಫಿಸಿನ ಕೆಲಸದ ಸಮಯದ ಬಳಿಕ ಕೆಲವು ಸ್ನೇಹಿತರ ಜೊತೆಯಲ್ಲಿ ದ್ವಿಪದ ಎಲ್ಲಾ ಕಡೆಗಳಲ್ಲೂ ರಾತ್ರಿಯವರೆಗೂ ಸುತ್ತಾಡುತ್ತಿದ್ದೆ. ಅಲ್ಲಿನ ಭೂಗೋಳಿಕ ವಾತಾವರಣ, ಕಾಡು, ನದಿ, ಬೆಟ್ಟ, ಕಾಲುವೆ, ಹವಾಮಾನ, ಜನ ಜೀವನ, ಎಲ್ಲವನ್ನೂ ಸರಿಯಾಗಿ ಅನುಭವಿಸಿಯೇ ಅರ್ಥಮಾಡಿಕೊಳ್ಳಬೇಕೆನ್ನಿಸಿತು. ಅಲ್ಲಿನ ಲೈಬ್ರೆರಿಯಲ್ಲಿ ಅವಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಓದಿದೆ.

(Anthropological studies)

ಮಾನವ ಶಾಸ್ತ್ರದ ಪ್ರಕಾರ, ಮನುಷ್ಯನ ವರ್ತನೆಗಳು ಸಮಯಕ್ಕನುಗಣವಾಗಿ ಬದಲಾಯಿಸಬಹುದಾದರೂ ಅವನು ಬೆಳೆದುಬಂದ ಪರಿಸರ ಮತ್ತು ಪರಿಸ್ಥಿತಿಗಳು ಹೆಚ್ಚಿನ ಮಹತ್ವದ ಪಾತ್ರ ವಹಿಸುತ್ತವೆ. ಇತಿಹಾಸದಲ್ಲಿ ವಿಶ್ವದೆಲ್ಲೆಡೆ ಅಮಾನವೀಯ ದುಷ್ಕೃತ್ಯಗಳು ಜರುಗುತ್ತಲೇ ಬಂದಿವೆ. ಇವೆಲ್ಲಾ ಚರಿತ್ರೆಯ ಪುಟಗಳಲ್ಲಿ ದಾಖಲಿಸಲ್ಪಟ್ಟಿವೆ. ‘ಮ್ಯಾಗ್ನ ಕಾರ್ಟ’ ದಂತಹ ಅತ್ಯುತ್ತಮ ನೀತಿ ಸಂಹಿತೆಯನ್ನು ವಿಶ್ವಕ್ಕೇ ಕೊಟ್ಟ ಈ ಇಂಗ್ಲಿಷರು ಮಾನವತೆಯನ್ನು ಎಷ್ಟು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. (ಮಹಾತ್ಮಾ ಗಾಂಧಿಯವರು ಸಹಿತ ಈ ಪುಸ್ತಕವನ್ನು ಅಧ್ಯಯನ ಮಾಡಿ ಅದರಲ್ಲಿನ ಕೆಲವರು ತತ್ವಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ.)

ಆದರೆ, ಬ್ರಿಟಿಷ್ ಸರ್ಕಾರ ಅಂಡಮಾನ್ ದ್ವೀಪದಲ್ಲಿ ಬಂದಿಯಾಗಿಟ್ಟ ಸ್ವಾತಂತ್ರ್ಯದ ಹೋರಾಟಗಾರರಿಗೆ ಕೊಟ್ಟ ಚಿತ್ರಹಿಂಸೆ ಊಹಿಸಲು ಸಾಧ್ಯವೇ ? ಭಾರತಕ್ಕೆ ಆಗಾಗ ಆಗಮಿಸಿದ ದಾಳಿಕೋರರು ಹಲವಾರು. ಮಂಗೋಲರು, ಮೊಘಲ್ಸ್, ಯುರೋಪಿಯನ್ನರು (ಫ್ರೆಂಚ್, ಡಚ್, ಸ್ಪ್ಯಾನಿಷ್, ಜರ್ಮನ್, ) ಅವರಲ್ಲಿ ಕೊನೆಯವರು ಇಂಗ್ಲೀಷರು ೨೦೦ ವರ್ಷಗಳ ಕಾಲ ಭಾರತವನ್ನು ಆಕ್ರಮಿಸಿದ್ದರು. ಈ ಆಕ್ರಮಣಕಾರರನ್ನು ವಿರೋಧಿಸಿದ ಭಾರತೀಯರ ಸಂಖ್ಯೆ ಕಡಿಮೆ. ‘ವಸುಧೈವ​ ಕುಟುಂಬಕಂ’ ಎಂದು ಎಲ್ಲರನ್ನೂ ಅತಿಥಿಗಳಂತೆ ಕಂಡು ಸತ್ಕರಿಸುವ ಸ್ವಭಾವದವರು ನಮ್ಮ ಭಾರತೀಯರು. ಧರ್ಮವನ್ನು ಅನುಸರಿಸುವವರು. ಯಾರಿಗೂ ಕೆಡಕು ಬಯಸದವರು. ಈ ಅತಿಯಾದ ಸದ್ಗುಣಗಳು ಹೊರಗಿನವರಿಗೆ ಭಾರತೀಯರು ಬಲಹೀನರೆಂದು ನಿಶ್ಚಯಿಸುವಂತಾಗಿ, ನಮ್ಮ ನಾಶಕ್ಕೆ ಹಾಗೂ ಅವನತಿಗೆ ಕಾರಣವಾಯಿತು.

ಭಾರತಕ್ಕೆ ಧಾಳಿಮಾಡಲು ಬಂದ ಅನೇಕ ವಿದೇಶಿಯರಲ್ಲಿ ಮೊಘಲರು ಮತ್ತು ಬ್ರಿಟಿಷರು ಹೆಚ್ಚುಕಾಲ ಕ್ರಮವಾಗಿ ರಾಷ್ಟ್ರದ ಚಕ್ರವರ್ತಿಗಳಾಗಿ, ಗವರ್ನರ್ ಜನರಲ್ ಗಳಾಗಿ ಈ ದೇಶವನ್ನು ಆಳಿ ತಮ್ಮ ಪ್ರಭಾವವನ್ನು ಬಿಟ್ಟಿದ್ದಾರೆ. ಭಾರತದ ಇತಿಹಾಸದಲ್ಲಿ ಇದೇತರಹದ ವಹಿವಾಟುಗಳು ಬ್ರಿಟಿಷರು, ಹೋದೆಡೆಗಳಲ್ಲೆಲ್ಲಾ ಮಾಡಿದ್ದಾರೆ. ಬ್ರಿಟಿಷರು, ಅಮೇರಿಕ ಮತ್ತು ಕೆನಡಾ ರಾಷ್ಟ್ರಗಳಲ್ಲೂ ಅಧಿಕಾರಕ್ಕೆ ಕಾದು ಮಾಡಿರುವ ಬರ್ಬರ ಕೃತ್ಯಗಳನ್ನು ಇಂದಿಗೂ ಇತಿಹಾಸದ ಪುಟಗಳಲ್ಲಿ ನೋಡಬಹುದಾಗಿದೆ. ೧೮೧೩-೧೪ ರಲ್ಲಿ ಬ್ರಿಟಿಷ್ ಸೈನಿಕರ ಪಡೆ ಅಮೇರಿಕಾದ ವಾಷಿಂಗ್ಟನ್ ನಗರಕ್ಕೆ ನುಗ್ಗಿ, ಅಲ್ಲಿನ ಕಟ್ಟಡಗಳಿಗೆ ಬೆಂಕಿ ಹಾಕಿ ಸುಟ್ಟು ನಾಶಮಾಡಿದರು. ಅಮೇರಿಕಾದ ಅಧ್ಯಕ್ಷರ ವಾಸಗೃಹವಾದ White house ನ್ನು ಪೂರ್ತಿಯಾಗಿ ಬೆಂಕಿ ಹಾಕಿ ಸುಟ್ಟರು. ಆಗ ಅಲ್ಲಿ ವಾಸವಾಗಿದ್ದ ೪ ನೆಯ ಅಮೇರಿಕಾದ ಅಧ್ಯಕ್ಷ ಜೇಮ್ಸ್. ಮ್ಯಾಡಿಸನ್ ಅವರಿಗೆ ಮೊದಲೇ ಸುದ್ದಿಯಸುಳಿವು ಸಿಕ್ಕ ಪ್ರಯುಕ್ತ ವೈಟ್ ಹೌಸ್ ನಿಂದ ಒಂದು ದಿನ ಮೊದಲೇ ಪರಾರಿಯಾಗಿ ಎಲ್ಲೋ ಸುರಕ್ಷಿತ ಜಾಗಕ್ಕೆ ಹೋದರು. ಆದರೆ ಅವರ ಕೆಚ್ಚೆದೆಯ ಪತ್ನಿ ರೋಸ್ ಅವರು, ಕೊನೆಯವರೆಗೆ ವೈಟ್ ಹೌಸ್ ನಲ್ಲೆ ಇದ್ದು, ಮಾಜಿ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ರವರ ಬೃಹತ್ ಫೋಟೋವನ್ನು ಸುರಕ್ಷಿತವಾದ ಸ್ಥಳಕ್ಕೆ ಸಾಗಿಸಿ, ಅಲ್ಲಿಂದ ಮರೆಯಾದರು.

ಎಚ್ಚಾರೆಲ್ :
ಎಲ್ಲರಂತೆ ನನಗೂ  ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಗ್ಗೆ ತಿಳಿಯಲು ಮನಸ್ಸಿದೆ. ತಿಳಿಸಿಕೊಡಿ.  ಅಲ್ಲಿನ  ಚಾರಿತ್ರ್ಯಿಕ ಮಹತ್ವದ  ದ್ವೀಪಗಳ ಬಗ್ಗೆ ವಿವರಿಸಿ?

ಶ್ರೀಧರ್ :
ಪೋರ್ಟ್ ಬ್ಲೇರ್ (Port Blair) : ರಾಜಧಾನಿ, ಪೋರ್ಟ್   ಬ್ಲೇರ್ ನಿಂದ  ೩೨ ಕಿಮಿ ದೂರ ರಸ್ತೆಯಲ್ಲಿ  Red skin island, Tar island,  Mugli island, Grab island,  ಮುಂತಾದವು ಟೂರಿಸ್ಟ್  ದ್ವೀಪಗಳಿವೆ . ಕೆಲವಕ್ಕೆ ಅನುಮತಿ ಇರುವುದಿಲ್ಲ . ‘ ರೆಡ್ ಸ್ಕಿನ್’ ಮತ್ತು ‘ಜಾಲಿ ಬಾಯ್’ (Jolly buoy) ದ್ವೀಪಗಳನ್ನು ನೋಡಲು ಅನುಮತಿಯಿದೆ. ಪ್ರತಿ ೬ ತಿಂಗಳು ತೆರೆದಿರುತ್ತದೆ. Jolly buoy ಐಲೆಂಡ್  Mahatma Gandhi National Park, ನ  ವ್ಯಾಪ್ತಿಯಲ್ಲಿದೆ . ಇದು ೧೫ ದ್ವೀಪಗಳಲ್ಲೊಂದು.  ಮೆರೀನ್ ಜೀವನವನ್ನು ಸುರಕ್ಷಿತವಾಗಿ ಇಟ್ಟಿದ್ದಾರೆ.

ಅಂಡಮಾನ್ ಮತ್ತು ನಿಕೋಬಾರ್ ಒಂದು ದ್ವೀಪ ಸಮೂಹವಾಗಿರುವುದರಿಂದ ಕೇವಲ ವಿಮಾನ ಹಾಗೂ ಹಡುಗು ಅಥವಾ ದೋಣಿಯ ಮೂಲಕ ಮಾತ್ರವೆ ತಲುಪಬಹುದಾಗಿದೆ. ಇಲ್ಲಿಗೆ ತಲುಪಲು ದೆಹಲಿ, ಕೊಲ್ಕತ್ತಾ ಹಾಗು ಚೆನ್ನೈಗಳಿಂದ ನಿರಂತರವಾಗಿ ವಿಮಾನಗಳು ಲಭ್ಯವಿರುತ್ತದೆ. ಕೆಲವು ನಿರ್ದಿಷ್ಟ ದಿನಗಳಲ್ಲಿ ಭುವನೇಶ್ವರದಿಂದಲೂ ಸಹ ಇಲ್ಲಿಗೆ ವಿಮಾನ ಲಭ್ಯವಿದೆ. ಹಡಗಿನ ಮೂಲಕ ಪ್ರಯಾಣಿಸಬೇಕಿದ್ದರೆ ಚೆನ್ನೈ, ವಿಶಾಖಪಟ್ಟಣ ಹಾಗು ಕೊಲ್ಕತ್ತಾಗಳಿಂದ ಹಡುಗು ಪ್ರಯಾಣ ಲಭ್ಯವಿದೆ. ಆದರೆ ತಿಂಗಳಲ್ಲಿ ಮೂರು ಅಥವಾ ನಾಲ್ಕು ಬಾರಿ ಮಾತ್ರ ಈ ಪ್ರಯಾಣ ಲಭ್ಯವಿರುತ್ತದೆ. ಅಲ್ಲದೆ ಹಡಗಿನ ಮುಖಾಂತರ ಅಂಡಮಾನಿಗೆ ತೆರಳಲು ಕನಿಷ್ಠ ೬೦ ರಿಂದ ೭೦ ಘಂಟೆಗಳಷ್ಟು ಕಾಲ ತಗಲುತ್ತದೆ. ಪೋರ್ಟ್ ಬ್ಲೇರ್ ಹೆಸರು ಬರಲು ಕಾರಣ ಇಲ್ಲಿಗೆ ೧೭೮೯ ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಮೆರೀನ್ ಅಧಿಕಾರಿಯಾಗಿದ್ದ ಆರ್ಚಿಬ್ಲಾಡ್ ಬ್ಲೈರ್ ನ ಮೇಲಿಡಲಾಗಿದೆ. ಅಂಡಮಾನ್ ನಿಕೋಬಾರ್ ಐಲೆಂಡ್ ಗಳಲ್ಲಿ ಒಟ್ಟಾರೆ, ೫೭೨ ದ್ವೀಪಗಳಿದ್ದು ಅದರಲ್ಲಿ ಕೇವಲ ೩೮ ದ್ವೀಪಗಳಲ್ಲಿ ಜನರು ವಾಸಮಾಡಲು ಯೋಗ್ಯವಾಗಿವೆ. ಅಂಡಮಾನ್ ನಲ್ಲಿ ೩೨೫ ದ್ವೀಪಗಳು : ೬೧೭೦ ಚ. ಕಿ. ಮೀ. (೨,೩೮೨ ಚ. ಮೈಲಿಗಳು) ನಿಕೋಬಾರ್ ಐಲೆಂಡ್ ನಲ್ಲಿ ೨೪೭ ದ್ವೀಪಗಳಿವೆ. ಒಟ್ಟು ವಿಸ್ತೀರ್ಣ : ೧,೭೬೫ ಚ. ಕಿ. ಮೀ (೬೮೧ ಚ. ಮೈಲಿಗಳು)

ಏಕಾಂತ, ಶಾಂತಿಯನ್ನು ಬಯಸುವ ಕಡಲ ತಾಣಗಳ ಸೌಂದರ್ಯ ಹಾಗು ನೆಮ್ಮದಿಯನ್ನು ಆಸ್ವಾದಿಸಬೇಕೆಂದರೆ ನಮ್ಮ ದೇಶದಲ್ಲೇ ಇರುವ ಅಂಡಮನ್ ಹಾಗೂ ನಿಕೋಬಾರ್ ದ್ವೀಪಗಳು ಹೇಳಿಮಾಡಿಸಿದ ಜಾಗಗಳಾಗಿವೆ. ವಿಶ್ವದ ಪ್ರವಾಸಿ ತಾಣಗಳನ್ನು ಕಂಡ ಪರ್ಯಟಕರು ಇದನ್ನು ಅನುಮೋದಿಸುತ್ತಾರೆ. ‘ಟೈಮ್ ಮ್ಯಾಗಜೀನ್’ ಹಾವ್ಲೋಕ್ ದ್ವೀಪದಲ್ಲಿರುವ ರಾಧಾನಗರ ಕಡಲ ತೀರವನ್ನು ಏಷ್ಯಾದಲ್ಲಿಯೇ ಅತ್ಯಂತ ಸುಂದರವಾದ ಕಡಲ ಕಿನಾರೆ ದಾಖಲಿಸಿತ್ತು. ೮೦೦೦ ಚದರ ಕಿಲೋಮೀಟರ್ ಹರಡಿದೆ ಅಂಡ ನಿಕೊ ಪ್ರತ್ಯೇಕ ದ್ವೀಪ ಸಮೂಹ ೧೦ ಡಿಗ್ರಿ ಉತ್ತರ ಅಕ್ಷಾಂಶದಿಂದ ಬೇರ್ಪಟ್ಟಿವೆ . ಇದರ ರಾಜಧಾನಿಯಾದ ಪೋರ್ಟ್ ಬ್ಲೇರ್ ಹೆಚ್ಚು ಜನಸಂಖ್ಯೆಯುಳ್ಳ ನಗರ. ಉತ್ತರದಿಂದ ದಕ್ಷಿಣದ ತನಕ ಸುಮಾರು ೮೦೦ ಕಿಲೋಮೀಟರ್ ನಷ್ಟು ಹಬ್ಬಿದೆ. ಭಾರತದ ಎಲ್ಲಾ ಪ್ರಮುಖ ವಿಮಾನಯಾನ ಕಂಪನಿಗಳು ಭಾರತದ ಕೋಲ್ಕತ್ತಾ, ಭುವನೇಶ್ವರ ಹಾಗೂ ಚೆನ್ನೈ ವಿಮಾನ ನಿಲ್ದಾಣಗಳಿಂದ ಪೋರ್ಟ್ ಬ್ಲೇರ್ ನ ವೀರ್ ಸಾವರ್ಕರ್ ವಿಮಾನ ನಿಲ್ದಾಣಕ್ಕೆ ಸಂಪರ್ಕ ಸಾಧಿಸುತ್ತವೆ. ಭಾರತ ನೌಕಾಯಾನ ನಿಗಮ, ಎಮ್.ವಿ. ನಾನ್ಕೊವ್ರೀ ಎಂಬ ಹೆಸರಿನ ಹಡಗಿನ ಮೂಲಕ ಅಂಡಮಾನ್ ನಿಕೋಬಾರ್ ಗೆ ಸಂಪರ್ಕ ಸಾಧಿಸಬಹುದಾಗಿದೆ. ಇದು ಚೆನ್ನೈನಿಂದ ಪೋರ್ಟ್ ಬ್ಲೇರ್ ಗೆ ತಿಂಗಳಿಗೆ ಎರಡು ಬಾರಿ ಮತ್ತು ವೈಜಾಗ್ ಬಂದರಿನಿಂದ ಪೋರ್ಟ್ ಬ್ಲೇರ್ ಗೆ ತಿಂಗಳಿಗೆ ಮೂರು ಬಾರಿ ಪ್ರಯಾಣವನ್ನು ಆಯೋಜಿಸುತ್ತದೆ. ಪ್ರಶಾಂತ ಪರಿಸರ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸಮುದ್ರ ದಂಡೆಗಳು ನೋಡಲು ವಿಹಂಗಮವಾಗಿವೆ.

ರಾಸ್ ಐಲ್ಯಾಂಡ್ (Ross Island) : ಪೋರ್ಟ್ ಬ್ಲೇರ್ ನಿಂದ ಕೇವಲ ೨ ಕಿ.ಮೀ ಪೂರ್ವಕ್ಕೆ ನೀವು ಇಲ್ಲಿಯವರೆಗೆ ನೋಡಿದ ಎಲ್ಲಾ ಅವಶೇಷಗಳಿಗಿಂತಲೂ ಸುಂದರವಾದ ಅವಶೇಷಗಳಿವೆ. ಬೇರೆ ಬೇರೆ ಕಾಲಾವಧಿಯ ಸುಂದರವಾದ ಅವಶೇಷಗಳನ್ನು ಹೊಂದಿರುವ ‘ರಾಸ್ ದ್ವೀಪ’ ಮುಂದುವರಿಯಿತು. ಆಗಿನ ಕಾಲದಲ್ಲೇ ಈ ದ್ವೀಪದಲ್ಲಿ ಆಸ್ಪತ್ರೆ, ಬೇಕರಿ, ಮಾರುಕಟ್ಟೆ, ಟೆನ್ನಿಸ್ ಅಂಗಣ, ವಸತಿ ಸಮುಚ್ಚಯಗಳು ಹಾಗೂ ಇನ್ನಿತರ ಎಲ್ಲಾ ಅವಶ್ಯಕ ಸವಲತ್ತುಗಳಿದ್ದವು. ಎರಡನೇ ಮಹಾಯುದ್ಧದ ವೇಳೆ ಜಪಾನ್ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹವನ್ನು ವಶಪಡಿಸಿಕೊಂಡಿದ್ದ ಕಾರಣ ಇವೆಲ್ಲವೂ ಇಂದು ಅವಶೇಷಗಳಾಗಿ ಉಳಿದಿವೆ. ಇದರ ಇನ್ನೊಂದು ಅವಳಿ ದ್ವೀಪವಾದ ಸ್ಮಿತ್ ದ್ವೀಪಕ್ಕೆ ಇದು ಹೊಂದಿಕೊಂಡಿದೆ. ಸ್ಮಿತ್ ದ್ವೀಪವು ಕೂಡ ನೋಡಬೇಕಾದ ಜಾಗವೇ !

ಬ್ರಿಟಿಷರು ವಸಾಹತನ್ನು ಸ್ಥಾಪಿಸಿದರು : ೧೭೮೯ ರಲ್ಲಿ ‘ಕ್ಯಾಪ್ಟನ್ ಅರ್ಚಿಬಾಲ್ಡ್ ಬ್ಲೇರ್’ ಎಂಬ ಬ್ರಿಟಿಷ್ ನೇವಿ ಆಫೀಸರ್ ಇಲ್ಲಿ ಬ್ರಿಟಿಷ್ ವಸಾಹತನ್ನು ಸ್ಥಾಪಿಸಿದನು. ಬಹಳಕಾಲ ಈ ದ್ವೀಪಗಳು ದುಷ್ಕರ್ಮಿಗಳ, ಕೊಲೆಪಾತಕಿಗಳ ಮತ್ತು ರಾಜಕೀಯ ಬಂದಿಗಳ ನಿವಾಸವಾಗಿತ್ತು. ೧೮೫೮ರಲ್ಲಿ ಜಾರಿಗೆ ಬಂದ ಬಂದಿಗಳ ರವಾನೆಯ ಕಾನೂನು ೧೯೪೫ ರಲ್ಲಿ ರದ್ದಾಯಿತು. ೧೯೫೬ರಿಂದ ಈಚೆಗೆ ಇದು ಭಾರತದ ಕೇಂದ್ರಾಡಳಿತಕ್ಕೆ ಒಳಪಟ್ಟಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು. ಸುಮಾರು ೨೨೩ ದ್ವೀಪಗಳನ್ನು ಒಳಗೊಂಡಿರುವ ಈ ಸ್ತೋಮ ಬಂಗಾಳಕೊಲ್ಲಿಯ ಪೂರ್ವಭಾಗದಲ್ಲಿದೆ. ಒಟ್ಟು ವಿಸ್ತೀರ್ಣ ೩೨೧೫ ಚದರ ಮೈಲಿಗಳು. ಜನಸಂಖ್ಯೆ-೧,೦೮,೦೫೮.

ದಿಗ್ಲಿ ಪುರ್ (Digli pur) : ದಿಗ್ಲಿಪುರದ ಬಳಿ ೨೦೦ ಕಿಮ್.ಮೀ. ರಾಸ್ ದ್ವೀಪ, ಇದು ಸ್ವರ್ಗದ ತರಹ ಮೆರೆಯುತ್ತಿದೆ. ೩ ಗಂಟೆಯ ನಂತರ ಈ ಜಾಗದಲ್ಲಿರಲು  ಅನುಮತಿ ಇಲ್ಲ. ಬ್ಯಾಕ್ ವಾಟರ್ ಬಂದು ಆವರಿಸುವುದರಿಂದ ಮತ್ತೆ ಬೆಳಿಗ್ಯೆ ತೆರವಾಗುತ್ತದೆ. Holley and Red skin beaches, ೬ ತಿಂಗಳು ಓಪನ್ ಆಗುತ್ತವೆ. Alternately. ಎರಡೂ ಬಹಳ ಪರಿಸರಪ್ರೇಮಿ, ಸುಂದರ ಸ್ವಚ್ಛ ಸ್ಥಳಗಳು ಮೊದಲೇ ಟಿಕೆಟ್ ಬುಕ್ ಮಾಡಬೇಕು ಇಲ್ಲಿ ತಂಗಲು ಅನುಮತಿಯಿಲ್ಲ. ಪೋರ್ಟ್ ಬ್ಲೇರ್ ನಲ್ಲಿ ಬಹಳ ಬೀಚ್ ಗಳಿವೆ. ಕೆಲವಂತೂ ಬಹಳ ಪ್ರಶಾಂತವಾದ ವಾತಾವರಣ. ಜನರೇ ಇಲ್ಲದ ಆದರೆ ಬಹಳ ಸುಂದರವಾಗಿದ್ದವು . ೩೦ ರೂ ಗಳಿಗೊಂದರಂತೆ ದೊರೆಯುವ ಎಳನೀರು ಎಲ್ಲಕಡೆ ದೊರೆಯುತ್ತವೆ, ಒಂದು ಎಳನೀರಿನಲ್ಲಿ  ಅರ್ಧ ಲೀಟರ್  ಸಿಹಿನೀರು ಮತ್ತು ಮೃದುವಾದ  ಸಿಹಿ ಕೊಬ್ಬರಿ ಇರುತ್ತದೆ. 

ವಂಡೂರ್ ಕಡಲ ತೀರ: ದಕ್ಷಿಣ ಅಂಡಮಾನಿನ ದಕ್ಷಿಣದ ತುದಿಯಲ್ಲಿರುವ ವಂಡೂರ್ ಎಂಬ ಗ್ರಾಮದಲ್ಲಿ ಈ ಕಡಲ ತೀರವಿದೆ. ಪೋರ್ಟ್ ಬ್ಲೇರ್ ಪಟ್ಟಣದಿಂದ ರಸ್ತೆಯ ಮೂಲಕ ಸುಮಾರು ೩೦ ಕಿ.ಮೀ ದೂರದಲ್ಲಿ ಈ ಕಡಲ ತೀರವಿದೆ. ಇಲ್ಲಿ ರಾಷ್ಟ್ರೀಯ ಮೆರೀನ್  ಪಾರ್ಕ್ ಸಹ ಇದೆ.

ಕಾರ್ಬೀನ್ಸ್ ಕೋವ್ ಬೀಚ್ : ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿಯಾದ ಪೋರ್ಟ್ ಬ್ಲೇರ್ ಪಟ್ಟಣದಿಂದ ಕೇವಲ ಏಳು ಕಿ.ಮೀ ದೂರದಲ್ಲಿದೆ ಈ ಸುಂದರ ದೃಶ್ಯಾವಳಿಯ ಕಡಲ ತೀರ. ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಉಪಹಾರಗೃಹಗಳು ಹಾಗು ತಂಗಲು ಹೋಟೆಲುಗಳು ಲಭ್ಯವಿದೆ.

ರುತ್‍ ಲ್ಯಾಂಡ್ ದ್ವೀಪ : ೧೦೯.೩ ಚ.ಕಿ.ಮೀ ವಿಸ್ತೀರ್ಣವುಳ್ಳ ಈ ದ್ವೀಪವು ಸುಮಾರು ೬೦ ಕಿ.ಮೀಗಳಷ್ಟು ಉದ್ದವಾದ ಕಡಲ ತೀರವನ್ನು ಹೊಂದಿದೆ. ಹೆಚ್ಚು ಆಳವಿಲ್ಲದ ನೀರನ್ನು ಹೊಂದಿರುವ ಈ ಕಡಲ ತೀರವು ಹವಳದ ದಿಬ್ಬಗಳು,  ಹಾಗು ಹಲವು ಬಣ್ಣ ಬಣ್ಣದ ಮೀನುಗಳಿಂದ ಸಂಪದ್ಭರಿತವಾಗಿದೆ.

ವೈಪರ್ ದ್ವೀಪ: ಪೋರ್ಟ್ ಬ್ಲೇರ್ ಗೆ ಹತ್ತಿರದಲ್ಲಿದೆ ಈ ದ್ವೀಪ. ಅಂಡಮಾನಿನ ಪ್ರಸಿದ್ಧ ಸೆಲ್ಯೂಲರ್ ಜೈಲನ್ನು ನಿರ್ಮಿಸುವ ಮುಂಚೆಯೆ ಈ ದ್ವೀಪದಲ್ಲಿ ಒಂದು ಬಂದಿಖಾನೆಯನ್ನು ತೆರೆಯಲಾಗಿತ್ತು. ಆಗ, ಮೆರೀನ್ ಅಧಿಕಾರಿಯಾಗಿದ್ದ ಆರ್ಚಿಬ್ಲಾಡ್ ಬ್ಲೈರ್ ರನ್ನು ಕರೆತಂದ ಹಡಗಿನ ಮೇಲೆ ಈ ಅಲೆಂದ ನ ಹೆಸರನ್ನು ಇಡಲಾಗಿದೆ. ಬ್ರಿಟಿಷ್ ಆಡಳಿತದಿಂದ ಭಾರತವನ್ನು ಮುಕ್ತಗೊಳಿಸುವ ಉದ್ದೇಶದಿಂದ ಹೋರಾಟಕ್ಕಿಳಿದಿದ್ದ ಭಾರತದ ವೀರ ಹೋರಾಟಗಾರರನ್ನು ಬಂಧಿಸಿ, ಇಲ್ಲಿ ಯಮ ಯಾತನೆಯನ್ನು ನೀಡಲಾಗುತ್ತಿತ್ತು.

ಬ್ರಿಟಿಷರ ಉತ್ಕರ್ಷಕ್ಕೆ ಅವರ ಅತ್ಯುತ್ತಮ ಸಾಹಸೀ ಪ್ರವೃತ್ತಿ, ಮಹದಾಕಾಂಕ್ಷೆ ಹಾಗೂ  ಕುಟಿಲ ಯುದ್ಧನೀತಿಗಳೇ ಕಾರಣವಿರಬಹುದು : ಯೂರೋಪ್ ಖಂಡದ  ಎಲ್ಲ ನಿವಾಸಿಗಳಿಗೆ ಹೋಲಿಸಿದರೆ, ಇಂಗ್ಲಿಷರ,  ಬುದ್ಧಿಮತ್ತೆಯ ಮಟ್ಟ ಅತ್ಯುತ್ತಮವಾಗಿರುದು  ಕಂಡುಬರುತ್ತದೆ.  ಹಲವು ಮೊದಲುಗಳಿಗೆ ಇವರು ಹರಿಕಾರರಾಗಿದ್ದಾರೆ    ಔದ್ಯೋಗಿಕ ಕ್ರಾಂತಿ ಮೊಟ್ಟಮೊದಲು  ನಡೆದದ್ದು ಇಂಗ್ಲೆಂಡ್ ನಲ್ಲಿ. ‘ಮ್ಯಾಗ್ನ ಕಾರ್ಟ’ ದಂತಹ ‘ನೀತಿ ಸಂಹಿತೆ’ಯನ್ನು ರಚಿಸಿದ್ದು ಇಲ್ಲಿ   ಅನೇಕ ಯುರೋಪಿಯನ್ನರು  ಫ್ರೆಂಚ್, ಡಚ್, ಪೋರ್ಚುಗೀಸ್, ಸ್ಪ್ಯಾನಿಷ್, ಜರ್ಮನ್, ಜನಾಂಗದವರು ವಿಶ್ವದ ಬೇರೆ ಭೂಖಂಡಗಳಿಗೆ ವ್ಯಾಪಾರ, ಮತ್ತು  ಕ್ರಿಶ್ಚಿಯನ್ ಮತಪ್ರಚಾರಾಗಿ ಹೋಗಿ ಸಮಯ ಒದಗಿದಾಗ, ಆ ಪ್ರಾಂತ್ಯಗಳನ್ನು ತಮ್ಮ ವಶಕ್ಕೆ ಹೊಂದಿದರು. ಅವರಿಗಿಂತ ಸ್ವಲ್ಪ ತಡವಾಗಿ ಹೋದ ಬ್ರಿಟಿಷರು, ಮೂಲಭೂತವಾಗಿ  ವ್ಯಾಪಾರಿಗಳು.  ತಮ್ಮ ದೇಶ ಭಾಷೆಯನ್ನು ಪ್ರಾಣಕ್ಕಿಂದ ಹೆಚ್ಚು ಪ್ರೀತಿಸುವವರು. ತಮ್ಮ ರಾಜ-ರಾಣಿಯರ ಅಧಿಕಾರವನ್ನು ಮಾನ್ಯತೆ ಮಾಡುವ,  ಮೇಧಾವಿಗಳು. ಕುಟಿಲರೂ ಸಾಹಸಿಗಳು ಅತ್ಯಂತ ಕಷ್ಟ ಸಹಿಷ್ಣುಗಳು ಆಗಿದ್ದರು. ತಮ್ಮ ಮಿಲಿಟರಿ ಬಲಗಳ  ಆಧಾರದಮೇಲೆ  ವಿಶ್ವದ ಬಹುಭಾಗಗಳ ಒಡೆಯರಾಗಿದ್ದರು.

ರಾಧಾ ಐಲ್ಯಾಂಡ್ (Radha Island) : ಶುದ್ಧ ಬಿಳಿ ಮರಳಿನ ಕಡಲ ತೀರಗಳ ಸಮೂಹವಾಗಿದೆ. ‘ಸ್ಕೂಬಾ ಡೈವಿಂಗ್’, ಹಾಗೂ ಸಾಗರದ ಆಳದಲ್ಲಿ ಅನ್ವೇಷಣೆ ನಡೆಸುವುದು, ಮುಂತಾದ ರೋಮಾಂಚನಕಾರಿ ಚಟುವಟಿಕೆಗಳಿಗೆ ಇಲ್ಲಿ ಅವಕಾಶವಿದೆ. ವಿವಿಧ ಪಕ್ಷಿಗಳು  ಹಾಗೂ ಪ್ರಾಣಿ ಸಂಕುಲಗಳನ್ನೊಳಗೊಂಡ ಇಲ್ಲಿನ ಅದ್ಭುತ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಮೂಕ ವಿಸ್ಮಿತರನ್ನಾಗಿ ಮಾಡುತ್ತದೆ.  ಸ್ಥಳೀಯರು, ಪ್ರವಾಸಿಗರಿಗಾಗಿ ನಿರ್ಮಿಸಿರುವ ‘ವಿಶ್ರಾಂತಿ ಧಾಮ’ವನ್ನು ಹೋಗಿಯೇ ನೋಡಬೇಕು. ಈ ಭಾಗದಲ್ಲಿ  ೨೨೦೦ ಪ್ರಭೇದದ ಸಸ್ಯಗಳು ಕಂಡುಬರುತ್ತವೆ.   ಅಲಂಕಾರಿಕ ಚಿಪ್ಪುಮೀನು, ಮತ್ತು ಸಿಂಪಿಗಳ ಒಂದು ಬೃಹತ್ ಮಾರುಕಟ್ಟೆಯನ್ನು ಹೊಂದಿವೆ. 

ಹ್ಯಾವ್ಲಾಕ್ ಬೀಚ್ (Havelock Beach) : ಪ್ರಖ್ಯಾತ  ‘ಹ್ಯಾವ್ ಲಾಕ್’   ಕಡಲ ತೀರವೂ ನೀಲಿಯಾಗಿ ಕಾಣುವ ನೀರಿನಿಂದ ಕೂಡಿದ ಅತ್ಯಂತ ರಮಣೀಯವಾದ ಕಡಲ ಕಿನಾರೆಯಾಗಿದೆ. ಅಂಡಮಾನ್ ಪ್ರವಾಸ ಎಂದ ಕೂಡಲೇ ಹೆಚ್ಚಿನ ಪ್ರವಾಸಿಗರು ‘ಜಾಲಿ ಬಾಯ್’ ಗೆ ಹೋಗಲೇ ಬೇಕು ಎನ್ನುತ್ತಾರೆ. Jolly Buoy, ಇತರ ದ್ವೀಪಗಳಾದ ಹಾವ್ ಲಾಕ್ ದ್ವೀಪ, ಸಿಕ್ಯೂ ದ್ವೀಪಗಳೊಂದಿಗೆ ಸೇರಿಕೊಂಡು ಪ್ರಸಿದ್ಧ ‘ಮಹಾತ್ಮಾ ಗಾಂಧಿ ರಾಷ್ಟ್ರೀಯ ಸಾಗರ ಉದ್ಯಾನ’ವನ್ನು ನಿರ್ಮಿಸಿವೆ. ಇದನ್ನು ‘ವಂದೂರು ಸಾಗರ ಉದ್ಯಾನ’ ವೆಂದೂ ಕರೆಯುತ್ತಾರೆ.

ಮಾಲಿನ್ಯ ತಡೆ, ಮತ್ತು ಕಲಬೆರಕೆ ತಡೆಗಾಗಿ ಸಾಕಷ್ಟು ನಿಗಾವಹಿಸುವ ಮತ್ತು ಪರಿಸರದ ಬಗ್ಗೆ ಸಾಕಷ್ಟು ಕಾಳಜಿ ವಹಿಸುವ ಈ ದ್ವೀಪ ಸಮೂಹದಲ್ಲಿನ ಸಮಶೀತೋಷ್ಣ ಹವಾಮಾನವನ್ನು ಎಲ್ಲರೂ ಇಷ್ಟಪಡುತ್ತಾರೆ.  ಇಲ್ಲಿನ ಸ್ವಚ್ಛವಾದ ಕಡಲ ಕಿನಾರೆಗಳು, ವೈವಿಧ್ಯಮಯ ಜಲಜೀವಿಗಳು, ಇಲ್ಲಿ ಕಂಡುಬರುವ ಸಸ್ಯ ಮತ್ತು ಪ್ರಾಣಿಗಳಿಗೆ ಸಮಾನವಾಗಿರುವ ಪ್ರದೇಶ ಬೇರೊಂದಿಲ್ಲ. ಪ್ರಶಾಂತವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳಿಗೆ ನಿಮ್ಮನ್ನು ಕೊಂಡೊಯ್ಯುವ ದಾರಿಗಳು ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ತಲುಪುವುದು ಕಷ್ಟವೇನಿಲ್ಲ.

ಬ್ರಿಟೀಷ್ ವಸಾಹತು ಕಾಲದಲ್ಲಿ ಜನರಲ್ ಆಗಿದ್ದ ‘ಹೆನ್ರಿ ಹಾವ್ ಲಾಕ್ ‘ಹೆಸರನ್ನು ಈ ದ್ವೀಪಕ್ಕಿಡಲಾಗಿದೆ. ಹಾವ್ ಲಾಕ್ ದ್ವೀಪವು  ಪೋರ್ಟ್ ಬ್ಲೇರ್ ನಿಂದ ೫೫ ಕಿ.ಮೀ ದೂರ ಈಶಾನ್ಯಕ್ಕಿದೆ.  ಅತ್ಯಂತ ಆಕರ್ಷಣೀಯ ತಾಣವೆಂದು ಪ್ರಖ್ಯಾತಿ ಗಳಿಸಿದೆ ಆದ್ದರಿಂದ ವಿಶ್ವದೆಲ್ಲೆಡೆಯಿಂದ  ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿನ ಐದು ಊರುಗಳಾದ ಗೋವಿಂದ ನಗರ, ರಾಧಾ ನಗರ, ಬಿಜೋಯ್ ನಗರ, ಶ್ಯಾಮ್ ನಗರ, ಕೃಷ್ಣ ನಗರ ತಮ್ಮದೆ ಊರಿನ ಹೆಸರಿನ ಕಡಲ ತಡಿಗಳನ್ನು ಹೊಂದಿವೆ. ರಾಧಾನಗರ ಕಡಲ ಕಿನಾರೆ ಇವುಗಳಲ್ಲಿ ಅತ್ಯಂತ ಉತ್ತಮವಾದ ಕಡಲ ಕಿನಾರೆಯಾಗಿದ್ದು ಇದಕ್ಕೆ ‘Time Magazine 2004’ ರಲ್ಲಿಯೇ ಏಷ್ಯಾದ ಅತ್ಯಂತ ಆಕರ್ಷಣೀಯ ಕಡಲ ಕಿನಾರೆ ಎಂಬ ಬಿರುದು ಕೊಟ್ಟಿದೆ.  ಇಲ್ಲಿಗೆ ಪ್ರತಿದಿನ ಎರಡು ಮೂರು ಹಡಗು ಸಂಚಾರವಿರುತ್ತದೆ. ದಿಮ್ಮಿ ತೆಪ್ಪದ, ದೋಣಿಗಳು ಸ್ವಲ್ಪ ದುಬಾರಿಯಾಗಿವೆ ಹಾಗೂ ನಿಮಗೆ ಸಮಯದ  ಅಭಾವವಿದ್ದರೆ, ಪವನ್ ಹಂಸ್ ಹೆಲಿಕಾಪ್ಟರ್ ಗಳನ್ನು ಬಳಸಿ ತಲುಪುವುದು ಸೂಕ್ತ. ಒಮ್ಮೆ ನೀವು  ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ನಡೆದುಕೊಂಡು ಸಾಗುವುದು ಒಳ್ಳೆಯದು.  ಇಲ್ಲಿ ನಡೆಯುತ್ತಾ ನೀವು ಹಲವು ಕಡಲ ಕಿನಾರೆಗಳು ಹಾಗೂ ಮಾರುಕಟ್ಟೆಗಳನ್ನು ಕಾಣಬಹುದು. ‘ರಾಧಾ ನಗರ ಕಡಲ ಕಿನಾರೆ’ ಶುದ್ಧ ಬಿಳಿ ಬಣ್ಣದ ಮರಳು, ಮತ್ತು ಪಚ್ಚೆ ಬಣ್ಣದ ಬಂಡೆಗಳನ್ನು ಹೊಂದಿದ್ದು, ಸಂಜೆಯ ವೇಳೆಯನ್ನು ಕಳೆಯಲು ಅತ್ಯಂತ ಸೂಕ್ತವಾದ ಸ್ಥಳವಾಗಿದೆ. ‘ಎಲಿಫೆಂಟ್ ಬೀಚ್’ ಎಂಬ ಮೊತ್ತೊಂದು ಬೀಚ್, ‘ರಾಧಾನಗರ ಬೀಚ್’ ನಿಂದ ನಡೆದುಕೊಂಡು ಹೋಗಬಹುದಾದಷ್ಟು ದೂರದಲ್ಲಿದೆ; ಹಾಗೂ ಈ ಪ್ರಯಾಣ ಅವಿಸ್ಮರಣೀಯ. ಆಟೋ ಸೌಲಭ್ಯವೂ ಇಲ್ಲಿ ಲಭ್ಯವಿದ್ದು ೨ ಅಮೇರಿಕನ್ ಡಾಲರ್ ಅಥವಾ ಭಾರತೀಯ ರೂಪಾಯಿಗಳಲ್ಲಿ ೧೦೦ ರೂಪಾಯಿಗಳಾಗುತ್ತದೆ.(ಆಗ)  ಅಥವಾ ಒಂದು ಕ್ಯಾಬ್ ಬಾಡಿಗೆ ಪಡೆಯಬಹುದು ಅಥವಾ ಒಂದು ದ್ವಿಚಕ್ರ ವಾಹನವನ್ನು ಒಂದು ದಿನಕ್ಕೆ ಬಾಡಿಗೆಗೆ ಪಡೆಯುವ ಅವಕಾಶವೂ ಇಲ್ಲಿದ್ದು ಇದು ೪ ಅಮೇರಿಕನ್ ಡಾಲರ್ ಅಥವಾ ೨೦೦ (ಆಗ) ರೂಪಾಯಿಗಳಿಗಿಂತ ಹೆಚ್ಚಾಗುವುದಿಲ್ಲ.

ರಾಧಾನಗರ್ ಬೀಚ್ ಗೆ ನಮ್ಮ ಪ್ರಧಾನಿ, ಮೋದಿಯವರು  ಅಂಡಮಾನ್ ದ್ವೀಪಗಳಿಗೆ  ಭೇಟಿ ನೀಡಿದ ಸಮಯದಲ್ಲಿ  ‘ಸ್ವರಾಜ್ಯ ದ್ವೀಪ’ವೆಂದು ನಾಮಕರಣಮಾಡಿದ್ದಾರೆ. ಈ ಸ್ವರಾಜ್ಯ ದ್ವೀಪ, ಸ್ವರ್ಗಸಮಾನವಾದ ಶುಭ್ರ ಸ್ಪಟಿಕದ ಹರಳಿನ ಧೂಳಿನ  ತರಹದ ಮರಳು ಕೋರಲ್ ರಿಫ್ಸ್ ಹಚ್ಚ ಹಸುರಿನ ಅರಣ್ಯದ ಪರಿಸರ, ಅತಿಹೆಚ್ಚು ಜನಸಂದಣಿಯ ದ್ವೀಪ ಅಂಡಮಾನ್ ದ್ವೀಪಸಮೂಹದಲ್ಲಿ ೧೧೩ ಚದರ  ಕಿಮೀ ಪೋರ್ಟ್ ಬ್ಲೇರ್  ನಿಂದ ೩೯ ಕಿ,ಮೀ ಉತ್ತರ ಪೂರ್ವದಲ್ಲಿದೆ. ಸ್ಕೂಬಾ ಡೈವಿಂಗ್ ಇಲ್ಲಿನ ಅತ್ಯಂತ ಆಕರ್ಷಕ ಚಟುವಟಿಕೆಯಾಗಿದ್ದು ಅಂಡಮಾನ್ ದ್ವೀಪಗಳಲ್ಲಿ Speed boats ಮತ್ತು Recompression Chamber, ಅಷ್ಟೊಂದು ಉತ್ತಮ ಸೌಲಭ್ಯವನ್ನು ಹೊಂದಿಲ್ಲ. ಎಲ್ಲಾ ವರ್ಗದವರಿಗೂ ಎಲ್ಲಾ ರೀತಿಯ ಆಸಕ್ತಿಗಳಿಗೂ ಇಲ್ಲಿ ಸ್ಕೂಬಾ ಡೈವಿಂಗ್ ಅವಕಾಶಗಳಿವೆ.  ಸಾಗರದ ಸಸ್ಯ ಮತ್ತು ಪ್ರಾಣಿ ಜೀವಗಳನ್ನು ಅನ್ವೇಷಿಸಲು ಇದು ಅತ್ಯಂತ ಉತ್ತಮವಾದ ಸ್ಥಳವಾಗಿದೆ. ಸ್ಕೂಬಾ ಡೈವಿಂಗ್ ಹೊರತು ಪಡಿಸಿ ಚಾರಣ ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆಯಾಗಿದೆ.

ಹಲವಾರು ಪರಿಣಿತ ಚಾರಣಿಗರು ಇಲ್ಲಿ ನಿಮ್ಮ ಸಹಾಯಕ್ಕಾಗಿ ಸಿಗುತ್ತಾರೆ. ಬೇರೆ ದ್ವೀಪಗಳಲ್ಲಿ ಇಲ್ಲದ ಇಲ್ಲಿನ ಇನ್ನೊಂದು ಮುಖ್ಯ ಆಕರ್ಷಣೆ ಎಂದರೆ ವಸತಿ ಸೌಕರ್ಯ. ಅಂಡಮಾನ್ ನಿಕೋಬಾರ್ ದ್ವೀಪಗಳ ಬಹುತೇಕ ಎಲ್ಲೆಡೆ ಎಲ್ಲಾ ರೀತಿಯ ದರಗಳಲ್ಲಿ ಉತ್ತಮ ಎನ್ನಬಹುದಾದ ವಸತಿ ವ್ಯವಸ್ಥೆ ಇಲ್ಲಿದೆ. ಕೆಫೆ ಡೆಲ್ ಮಾರ್ ಮತ್ತು ವೈಲ್ಡ್ ಆರ್ಕಿಡ್ ಸೂಚಿಸಬಹುದಾದಂತಹ ಎರಡು ಸ್ಥಳಗಳಾಗಿವೆ. ಈ ಕಡಲ ತೀರದಲ್ಲಿ ಸಾಕಷ್ಟು ಸಮಯ ಕಳೆದಾದ ಮೇಲೆ ಮುಂದಿನ ಹಳ್ಳಿ, ಹಳ್ಳಿ ಸಂಖ್ಯೆ ೩ ಕ್ಕೆ ಭೇಟಿ ನೀಡಬಹುದು. ಇದು ಮಾರುಕಟ್ಟೆಗೆ ಹೆಸರು ವಾಸಿಯಾಗಿದ್ದು ಇಲ್ಲಿ ಹಲವಾರು ಹಸ್ತಕೃತಿಗಳು ಮತ್ತು ಭಾಗಗಳು ದೊರೆಯುತ್ತವೆ. ಇಲ್ಲಿ ದೊರಕುವ ಶುದ್ಧವಾದ ಎಳನೀರನ್ನು ಕುಡಿಯಲು ಮರೆಯದಿರಿ. ಸಾಮಾನ್ಯವಾಗಿ ಎಲ್ಲಾ ರೆಸ್ಟಾರೆಂಟುಗಳಲ್ಲಿ ಬೀರು ಮತ್ತು ಮದ್ಯಪಾನ ಲಭ್ಯವಿದೆ. ಇದು ಕೇಂದ್ರಾಡಳಿತ ಪ್ರದೇಶವಾಗಿರುವ ಕಾರಣ ಅತಿ ಕಡಿಮೆ ಬೆಲೆಗೆ ದೊರೆಯುತ್ತವೆ.

ಇಂದಿರಾ ಪಾಯಿಂಟ್ (Indira point) : ಈ ಪ್ರದೇಶವು ತನ್ನಲ್ಲಿರುವ ವಿಶಿಷ್ಟ ಸಸ್ಯಗಳು, ಪ್ರಾಣಿಗಳು, ಜಲಜೀವಿಗಳು, ಅನನ್ಯ ಪ್ರಭೇದದ ಹಕ್ಕಿಗಳು ಮತ್ತು ಹೂವುಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಕೃತಿ ಇಲ್ಲಿನ ಪ್ರಮುಖ ಆಕರ್ಷಣೆ ಹಾಗೂ ಮಧುಚಂದ್ರಕ್ಕೆ ಹೇಳಿ ಮಾಡಿಸಿನ ಸ್ಥಳ. ಪವನ್ ಹಂಸ್ ಹೆಲಿಕಾಪ್ಟರ್ ಮತ್ತು ದೋಣಿ ಸೌಲಭ್ಯಗಳ ಮೂಲಕ ಇಲ್ಲಿಗೆ ತಲುಪುವುದು ಅಷ್ಟೇನು ಕಷ್ಟವಲ್ಲ. ದೋಣಿಯಲ್ಲಿ ಪ್ರಯಾಣಿಸುವುದು ನಿಮ್ಮ ನಿರ್ಧಾರವಾಗಿದ್ದಲ್ಲಿ ದಾರಿಯುದ್ದಕ್ಕೂ ಹಲವು ಮನೋಹರವಾದ ಸ್ಥಳಗಳಿವೆ. ಕ್ಯಾಂಬೆಲ್   ಬೇ, ರಾಷ್ಟ್ರೀಯ ಉದ್ಯಾನ, ಇಂದಿರಾ ಪಾಯಿಂಟ್, ಬಳಿಕ ಅತ್ಯಂತ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣವಾಗಿದೆ. ಇಲಿನ ವಿಶಿಷ್ಟ ಹಕ್ಕಿ ತಳಿಗಳಾದ ನಿಕೋಬಾರ್ ಸ್ಕ್ರಬ್ ಫ್ಲೋ, ಮತ್ತು ನಿಕೋಬಾರ್ Megapode, ಪಕ್ಷಿ ಪ್ರೀಯರ ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ. ಇದು ಛಾಯಾಚಿತ್ರಗ್ರಾಹಕರ ಮೆಚ್ಚಿನ ತಾಣವೂ ಆಗಿದೆ. ಇದೊಂದು  ‘Wild Fund For Nature’ ನಿಂದ ಗುರುತಿಸಲಾದ ದ್ವೀಪವೂ ಆಗಿದೆ. ನಿಕೋಬಾರ್ ದ್ವೀಪದ ಅತ್ಯಂತ ದಕ್ಷಿಣಕ್ಕೆ ಇರುವ ಸ್ಥಳವಾಗಿದೆ. ಇದು ಭಾರತ ಗಣರಾಜ್ಯದ ಅತ್ಯಂತ ದಕ್ಷಿಣದ ತುದಿಯೂ ಆಗಿರುವ ಕಾರಣ ಮುಖ್ಯವಾಗಿ ಭಾರತೀಯರಲ್ಲಿ ಹೆಚ್ಚಿನ ಆಸಕ್ತಿ ಕೆರಳಿಸಿದೆ. ೧೯೭೨ ರ ನಂತರ, ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಹೆಸರನ್ನು ನೀಡಲಾದ ಈ ತುತ್ತತುದಿಗೆ ಭೇಟಿ ನೀಡುವುದು ಹೆಚ್ಚಾಗಿದೆ. ಇಲ್ಲಿ ಭಾರತದ ಅತ್ಯಂತ ದೊಡ್ಡ ಹಾಗೂ ಆಕರ್ಷಕ ದ್ವೀಪಸ್ತಂಭವಿದೆ. ಕೆಂಪು ಮತ್ತು ಬಿಳಿಯ ಬಣ್ಣದ ಪಟ್ಟಿಗಳಿಂದ ಕೂಡಿರುವ ಟಾವರಿನಲ್ಲಿ ಹೆಲಿಪ್ಯಾಡ್ ವ್ಯವಸ್ಥೆಯೂ ಇದೆ.  ೨೦೦೪ ರಲ್ಲಿ ಬಂದ ಸುನಾಮಿ ಇದನ್ನು ಭಾಗಶಃ ಕೆಡವಿತ್ತು. ದುರಸ್ಥಿ ಮಾಡಿದ್ದಾರೆ.  ಮಲೇಷ್ಯಾ – ಮಲಕ್ಕಾ – ಭಾರತ ದಾರಿಯಲ್ಲಿ ಹಡಗುಗಳು ಸಾಗುತ್ತವೆ. ಇದು ಸುಮಾರು ೧೬ ನಾವಿಕ ಮೈಲಿ ವಿಸ್ತಾರವನ್ನು ಹೊಂದಿದ್ದು ಪ್ರವಾಸಿಗರಿಗೆ ಪ್ರವೇಶವಿರುವ ಏಕೈಕ ದ್ವೀಪಸ್ತಂಭವಾಗಿದೆ.  ಮೇಲಿನಿಂದ ಕಾಣುವ ದೃಶ್ಯಾವಳಿಗಳು ರುದ್ರರಮಣೀಯವಾಗಿವೆ.

ವೈಪರ್ ಐಲ್ಯಾಂಡ್ (Viper Island) : ೧೯೦೬ ರಲ್ಲಿ ಸ್ಥಾಪನೆಗೊಂಡ  ಈ ದ್ವೀಪ  ಸೆಲ್ಯುಲರ್ ಜೈಲಿಗಿಂತಲೂ ಮುಂಚೆ ಬಳಸಲಾಗುತ್ತಿದ್ದ ಜೈಲಿನ ಕಾರಣದಿಂದ ಈ ದ್ವೀಪ ಕುಖ್ಯಾತ/ಪ್ರಖ್ಯಾತವಾಗಿದೆ. ಇದು ಪೋರ್ಟ್ ಬ್ಲೇರ್ ಗೆ ಸುಮಾರು ೮ ಕಿ.ಮೀ ವಾಯವ್ಯಕ್ಕೆ ಇದೆ.  ದೋಣಿಯ ಮೂಲಕ ತಲುಪಬಹುದಾಗಿದೆ. ಈ ದ್ವೀಪದ ಹೆಸರು.ಪ್ರಕಾರ ೧೭೮೯ ರಲ್ಲಿ ಆರ್ಚಿಬ್ಲಾಡ್ ಬ್ಲೈರ್ ರನ್ನು ಕರೆತಂದ ಹಡಗಿನ ಮೇಲೆ ಇಡಲಾಗಿದೆ. ವೈಪರ್  ಹಾವುಗಳ ಕಾರಣದಿಂದ ಈ ಹೆಸರನ್ನು ಪಡೆದಿದೆ ಎಂದು ಕೆಲವು  ದಾಖಲೆಗಳು ಹೇಳುತ್ತವೆ.  ಭಾರತದಲ್ಲಿ ಬ್ರಿಟೀಷ್ ಆಡಳಿತವನ್ನು ಕೊನೆಗೊಳಿಸಲು ಪಾಲ್ಗೊಂಡಿದ್ದಕ್ಕಾಗಿ ಅಂದಿನ ಭಾರತದ  ಸಾಮಾನ್ಯ ಪ್ರಜೆಗಳನ್ನು ವಿವಿಧ ಹಿಂಸೆಗಳಿಗೆ ಇಲ್ಲಿನ ಜೈಲಿನಲ್ಲಿ ಒಳಪಡಿಸಲಾಗಿತ್ತು. ಇಂದು ಹಳೆಯ ಮತ್ತು ಅವಶೇಷಾವಸ್ಥೆಯಲ್ಲಿರುವ ‘ಫಿನಿಕ್ಸ್ ಬೇ’ ಎಂಬ ಹೆಸರಿನ  ಜೈಲು ಉತ್ತಮ ಪಿಕ್ನಿಕ್ ಸ್ಥಳವೂ ಆಗಿದೆ.  ದೋಣಿಯ ಮೂಲಕ ಇಲ್ಲಿಗೆ ೨೦ ನಿಮಿಷಗಳಲ್ಲಿ ತಲುಪಬಹುದಾಗಿದೆ. ಇಲ್ಲಿನ ಹಲವು ಮೋಟಾರು ಬೋಟ್ ಗಳು ಪ್ರವಾಸಿಗರಿಗೆ ದ್ವೀಪದ ಸುತ್ತಲೂ ಇರುವ ಪ್ರವಾಸಿ ತಾಣಗಳನ್ನು ತೋರಿಸಿ ಜೈಲನ್ನೂ ತೋರಿಸುವ ಸೌಲಭ್ಯವನ್ನು ಹೊಂದಿವೆ.

ಬ್ಯಾರನ್ ಐಲ್ಯಾಂಡ್ (Barren Island) : ಹೆಸರೇ ಸೂಚಿಸುವಂತೆ,  ಬಂಜರು ಭೂಮಿ ಜನವಸತಿ ಇಲ್ಲ ಹಾಗೂ ಕೇವಲ ಕೆಲವೆ ಕೆಲವು ಪ್ರಾಣಿಗಳು ಇಲ್ಲಿ ಕಂಡುಬರುತ್ತವೆ. ಪೋರ್ಟ್ ಬ್ಲೇರ್ ನ ಈಶಾನ್ಯಕ್ಕೆ ಸುಮಾರು ೮೪ ಮೈಲು ದೂರದಲ್ಲಿರುವ ಸಣ್ಣ ದ್ವೀಪವಾಗಿದೆ. ಇದು ದಕ್ಷಿಣ ಏಷ್ಯಾ ಮತ್ತು ಭಾರತದಲ್ಲಿ ಇರುವ ‘ಏಕಮಾತ್ರ ಜ್ವಲಂತ ಜ್ವಾಲಾಮುಖಿ’ಯ ಸ್ಥಳವಾಗಿದೆ. ಹಲವಾರು ವರ್ಷಗಳ ಹಿಂದೆ ಸಮುದ್ರಯಾನ ಮಾಡಿದ ಯಾರೊ ಅಜ್ಞಾತರೊಬ್ಬರು ಬಿಟ್ಟು ಹೋಗಿದ್ದಾರೆ ಎನ್ನಲಾಗಿರುವ ‘ಫೆರೆಲ್ ಆಡು’ ಇಲ್ಲಿನ ವಿಶೇಷವಾದ ಸಂತತಿಗಳ ಪೈಕಿ ಒಂದು. ಅಂದಿನಿಂದ ಇಂದಿನ ತನಕ ಈ ಪ್ರಾಣಿ ಪ್ರಭೇದ ತನ್ನ ಇರುವಿಗಾಗಿ ಸಮುದ್ರದ ಉಪ್ಪು ನೀರಿನ ಮೇಲೆ ಅವಲಂಬಿತವಾಗಿ ಕಷ್ಟದ ಪರಿಸ್ಥಿತಿಗಳಲ್ಲೂ ಜೀವಂತವಾಗಿವೆ.  ಇಲ್ಲಿ ಹಾರುವ ನರಿ ಮತ್ತು ಕೆಲವು ಪ್ರಭೇದಗಳ ದಂಶಕಗಳೂ ಕಾಣಸಿಗುತ್ತವೆ. ಇಲ್ಲಿ ೧೯೯೪ ಮತ್ತು ೨೦೦೫ ರಲ್ಲಿ ಕ್ರಮವಾಗಿ ಎರಡು ಸ್ಫೋಟಗಳು ಸಂಭವಿಸಿದ್ದು ಅವುಗಳಲ್ಲಿ ಎರಡನೆಯದು ಹಿಂದೂ ಮಹಾಸಾಗರದಲ್ಲಿ ಎದ್ದಿದ್ದ ‘Tsunami ‘ಯ ಪರಿಣಾಮವಾಗಿ ಸಂಭವಿಸಿದೆ ಎಂದು ನಂಬಲಾಗಿದೆ.

‘Great nicobar islands’  ನಿಕೋಬಾರ್ ದ್ವೀಪ ಸಮೂಹದಲ್ಲಿ ಅತ್ಯಂತ ದೊಡ್ಡ ದ್ವೀಪವಾಗಿದೆ. ಇದು ಎಲ್ಲಾ ದ್ವೀಪಗಳಿಂದ  ದಕ್ಷಿಣಕ್ಕೆ  ಇಂದಿರಾ ಪಾಯಿಂಟ್ ಬಳಿಯೆ ಇದೆ. ಈ ಪ್ರದೇಶವು ತನ್ನಲ್ಲಿರುವ ವಿಶಿಷ್ಟ ಸಸ್ಯಗಳು, ಪ್ರಾಣಿಗಳು, ಜಲಜೀವಿಗಳು, ಅನನ್ಯ ಪ್ರಭೇದದ ಹಕ್ಕಿಗಳು ಮತ್ತು ಹೂವುಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಕೃತಿ ಇಲ್ಲಿನ ಪ್ರಮುಖ ಆಕರ್ಷಣೆ ಹಾಗೂ ಮಧುಚಂದ್ರಕ್ಕೆ ಹೇಳಿ ಮಾಡಿಸಿನ ಸ್ಥಳ.  ದೋಣಿಯಲ್ಲಿ ಪ್ರಯಾಣಿಸುವುದು ನಿಮ್ಮ ನಿರ್ಧಾರವಾಗದಿದ್ದಲ್ಲಿ ದಾರಿಯುದ್ದಕ್ಕೂ ಹಲವು ಮನೋಹರವಾದ ಸ್ಥಳಗಳಿವೆ. ‘ಕಾಂಪೆಲ್ ಬೇ’ ರಾಷ್ಟ್ರೀಯ ಉದ್ಯಾನ ‘ಇಂದಿರಾ ಪಾಯಿಂಟ್’ ಬಳಿಕ ಅತ್ಯಂತ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣವಾಗಿದೆ. ಇಲ್ಲಿನ ವಿಶಿಷ್ಟ ಹಕ್ಕಿ ತಳಿಗಳಾದ ‘ನಿಕೋಬಾರ್ ಸ್ಕ್ರಬ್ ಫ್ಲೋ’ ಮತ್ತು ‘ನಿಕೋಬಾರ್ ಮೆಗಾ ಪೋಡ್ ಪಕ್ಷಿ’  ಪ್ರೀಯರ ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ. ಇದು ಛಾಯಾಚಿತ್ರಗ್ರಾಹಕರ ಮೆಚ್ಚಿನ ತಾಣವೂ ಆಗಿದೆ. ಇದೊಂದು ‘Wild Fund for Nature’  ನಿಂದ ಗುರುತಿಸಲಾದ ದ್ವೀಪವೂ ಆಗಿದೆ.

ಎಚ್ಚಾರೆಲ್ :
ಇಂತಹ ಸುಂದರ ಅತ್ಯಾಕರ್ಷಕ, ಶುದ್ಧ ತಿಳಿನೀರಿನ ಹೆಚ್ಚು ಆಳವಿಲ್ಲದ ಕಡಲ ನೀರು, ನೀರಿನ ಆಟಗಳಿಗೆ ಮತ್ತು   ನಿಮಗೆ ಬಹಳ ಹಿಡಿಸಿರಬಹುದು. ಇದಲ್ಲದೆ ಇದು ಈಗ ಒಂದು ಪರ್ಯಟಕ ಸ್ಥಳವಾಗಿ ಮಾರ್ಪಟ್ಟಿದೆ. ಭಾರತೀಯರಿಗೆ ಅಲ್ಲಿಗೆ ಹೋಗಲು ಅನುಮತಿ ಇದೆ. ಆದರೆ ದಶಕಗಳ ಹಿಂದೆ ಇದೊಂದು ಬೃಹದ್ ಕಾರಾಗೃಹ ಕಾಲಾಪಾನಿ ಶಿಕ್ಷೆಗೆ ಸೀಮಿತವಾಗಿತ್ತು. ಒಂದುಕಡೆ ಮಾನವತಾ ವಾದಿಗಳೆಂಬ ಸೋಗು ಹಾಕುವ, ಇಲ್ಲಿ ತಮ್ಮಂತೆ ತಮ್ಮ  ದೇಶದಲ್ಲಿ ಸ್ವತಂತ್ರ್ಯವಾಗಿ ಬದುಕಲು ಆಶಿಸುವ ಭಾರತೀಯರ ಆಶೋತ್ತರಗಳಿಗೆ ಮುಟ್ಟು ಗೋಲು  ಹಾಕಿ ಅವರಿಗೆ ನರಕಯಾತನೆಯನ್ನು ಕೊಟ್ಟ ಬ್ರಿಟಿಷ್ ಸರಕಾರದ  ಬಗ್ಗೆ  ನಿಮ್ಮ ಅಭಿಪ್ರಾಯವೇನು ?

ಶ್ರೀಧರ್ :
ಬ್ರಿಟಿಷರ ಅಧಿಕಾರ ದಾಹ ಕೇವಲ ಭಾರತಕ್ಕೆ ಸೀಮಿತವಾಗಿರಲಿಲ್ಲ. ದ ಆಫ್ರಿಕಾದಲ್ಲಿಯೂ ದಕ್ಷಿಣ ಆಫ್ರಿಕಾ ಸರ್ಕಾರದ ವರ್ಣಭೇದ ನೀತಿ ಜನರಿಗೆ ಉಸುರು ಕಟ್ಟುವಂತೆ ಮಾಡಿತ್ತು.  ದಕ್ಷಿಣ ಆಫ್ರಿಕದ ಸರ್ಕಾರದ ವರ್ಣಭೇದ ನೀತಿಯ ವಿರುದ್ಧ  ಡಾ. ನೆಲ್ಸನ್ ಮಂಡೇಲಾ (South African apartheid) ನಾಯಕರಾಗಿ ಹೋರಾಡಿದರು.  ಆಫ್ರಿಕದ  ರಾಬೆನ್ ದ್ವಿಪದ ಜೈಲಿನಲ್ಲಿ ಅವರನ್ನು  ೧೯೬೪ ನೇ ವರ್ಷದಲ್ಲಿ ಬಂಧಿಸಲಾಗಿತ್ತು ೨೭ ವರ್ಷಗಳ ಕಾರಾಗೃಹ ವಾಸದ ನಂತರ,  ಫೆಬ್ರವರಿ, ೧೧, ೧೯೯೦ ರಲ್ಲಿ ಅವರನ್ನು  ಬಿಡುಗಡೆ ಮಾಡಲಾಯಿತು.  ಈಗ ಈ ಕಾರಾಗೃಹ ರಾಷ್ಟ್ರೀಯ  ವಿಶ್ವ ಹೆರಿಟೇಜ್ ಸೈಟ್ ಎಂದು ಹೆಸರುವಾಸಿಯಾಗಿದೆ.  

  • ಮೊಘಲರ ಸಾಮ್ರಾಟನೊಬ್ಬ  ಅಧಿಕಾರ ಲಾಲಸೆಯಿಂದ ತನ್ನ ಅಣ್ಣನ ತಲೆಯನ್ನೇ ಕತ್ತರಿಸಿ ತಂದೆಗೆ ಉಡುಗೊರೆಯಾಗಿ ಇತ್ತ ಘೋರ ನಾಚಿಗೆಗೇಡಿನ ಘಟನೆ ಚರಿತ್ರೆಯಲ್ಲಿ ದಾಖಲಿಸಲ್ಪಟ್ಟಿದೆ.
  • ಛತ್ರಪತಿಯೊಬ್ಬರ ಮಗನಿಗೆ ಅತ್ಯಂತ ಘೋರ ಚಿತ್ರಹಿಂಸೆ ಮಾಡಿದ್ದಲ್ಲದೆ ಅವನ ದೇಹವನ್ನು ತುಂಡು ತುಂಡು ಮಾಡಿ ನಾಯಿಗಳಿಗೆ ಉಣಿಸಿದ ಚಕ್ರವರ್ತಿಯೋರ್ವನ ಕತೆಯನ್ನು ನಾವು ಇತಿಹಾಸದಲ್ಲಿ ಓದಿದ್ದೇವೆ.
  • ಹಾಗೆ ದಾಳಿಮಾಡಲು ಬಂದ ಅನೇಕರು, ನಮ್ಮ ದೇಶದ ನಾಗರಿಕರನ್ನು ಮತಾಂತರಗೊಳಿಸುವುದು ಸ್ತ್ರೀಯರಮೇಲೆ ಅತ್ಯಾಚಾರಗಳು, ದೇವಾಲಯಗಳನ್ನು ನಾಶಗೊಳಿಸುವುದು, ಸಂಸ್ಕೃತಿಯ ನಾಶ, ಹಿಂದುಗಳಿಗೆ ಹೆಚ್ಚಿನ ತೆರಿಗೆಗಳನ್ನು ವಿಧಿಸುವುದು ಮೊದಲಾದವುಗಳನ್ನು ಸಾಮಾನ್ಯವೆನ್ನುವಂತೆ ನಡೆಸಿಕೊಂಡಿದ್ದಾರೆ.
  • ಅಂಡಮಾನ್ ನ ಸೆಲ್ಯುಲರ್ ಜೈಲ್ ನಲ್ಲಿ ಸೆರೆಯಾಳಾಗಿ ತಂದು ಬಂದಿಯಾಗಿಟ್ಟ ಕೈದಿಗಳಿಗೆ ವಿಧಿಸುತ್ತಿದ್ದ ಅತ್ಯಂತ ಕ್ರೂರ ಹಾಗೂ ಅಮಾನವೀಯ ಕೃತ್ಯಗಳು, ಎಂದೆಂದೂ ಮರೆಯಲಾರದ ಮಾಯದ ಗಾಯಗಳ ಉದಾಹರಣೆಗಳಾಗಿವೆ. ಅವನ್ನು ನಾವು ಸೆಲ್ಯುಲರ್ ಜೈಲಿನಲ್ಲಿ ಇಂದಿಗೂ ಕಾಣಬಹುದು
  • ಬ್ರಿಟಿಷರು ಪಂಜಾಬ್ ಪ್ರಾಂತ್ಯದಲ್ಲಿ ಭಾರತೀಯ ಸ್ವಾತಂತ್ರ್ಯ ಚಳುವಳಿಕಾರರನ್ನು, ಸಾಮಾನ್ಯ. ಜನರನ್ನು ಬಹಳ ಹೀನಾಯವಾಗಿ ಹಿಂಸಿಸಿ, ಅವರ ಕಗ್ಗೊಲೆ ಮಾಡಿದ್ದಾರೆ. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಇದರ ಚಿಕ್ಕ ಉದಾಹರಣೆಗಳಲ್ಲೊಂದು.
  • ೧೮೧೩-೧೪ ರಲ್ಲಿ ಬ್ರಿಟಿಷ್ ಸೈನ್ಯ ಅಮೇರಿಕಾದ ವಾಷಿಂಗ್ಟನ್ ನಗರಕ್ಕೆ ನುಗ್ಗಿ ‘White House’ ಸೇರಿದಂತೆ ಹಲವಾರು ಕಟ್ಟಡಗಳಿಗೆ ಬೆಂಕಿ ಹಚ್ಚಿ ನಾಶಮಾಡಿದರು. ನೂರಾರು ಅಮೇರಿಕನ್ ನಾಗರಿಕರನ್ನು ಗುಂಡಿಟ್ಟು ಕೊಂದರು. ಆಗ ಅಮೆರಿಕಾದ ೪ ನೆಯ ಅಧ್ಯಕ್ಷ ಜೇಮ್ಸ್ ಮ್ಯಾಡಿಸನ್, ಈ ಸುದ್ದಿಯ ಸುಳಿವನ್ನು ಮೊದಲೇ ತಿಳಿದು, ಅವರು ತಲೆ ತಪ್ಪಿಸಿಕೊಂಡು ವಾಷಿಂಗ್ಟನ್ ನಿಂದ ಎಲ್ಲೋ ಹೊರಟುಹೋದರು. ಆದರೆ ಅವರ ಪತ್ನಿ ರೋಸ್, ವೈಟ್ ಹೌಸ್ ನಲ್ಲೆ ಕೊನೆಯವರೆಗೂ ಇದ್ದು, ಜಾರ್ಜ್ ವಾಷಿಂಗ್ಟನ್ ರ ಫೋಟೋವನ್ನು ಸುರಕ್ಷಿತವಾಗಿ ಸಾಗಿಸಿದನಂತರ ತಮ್ಮ ಪತಿಯನ್ನು ಹುಡುಕಿಕೊಂಡು ಹೊರಟರು.

ನಾನು ಹಿಂದಿ  ಚಲನ ಚಿತ್ರದಲ್ಲಿ  ಸೆಲ್ಯುಲರ್ ಜೈಲ್ ಮತ್ತು ಅಲ್ಲಿನ ಬಂದಿಗಳಿಗೆ  ವಿಧಿಸುತ್ತಿದ್ದ ಯಮಯಾತನೆಗಳನ್ನು ನೋಡಿದ ಜ್ಞಾಪಕ.  ಅಂಥ ಕಗ್ಗತ್ತಿಲಿನ  ಕಪ್ಪು, ಇಕ್ಕಟ್ಟಿನ  ಕೊಂಪೆಯಲ್ಲಿ ಹತ್ತಾರು ವರ್ಷ, ಜೀವಾವಧಿ ಶಿಕ್ಷೆ ಅನುಭವಿಸಿದ ತಮ್ಮ ದೇಶದ ಸ್ವಾತಂತ್ರ್ಯ ಸೇನಾನಿಗಳ ಅವಸ್ಥೆ ಹೇಗಿರಬಹುದು ? ಸ್ನಾನವಿಲ್ಲ, ಟಾಯ್ಲೆಟ್ ಇಲ್ಲ. ಯಾರಜೊತೆಯೂ ಮಾತಾಡುವಂತಿಲ್ಲ. ಮೇಲಾಗಿ ಏಕೆ ಈ ಶಿಕ್ಷೆ ? ನಮ್ಮ ದೇಶಕ್ಕೆ ಹೊರಗಡೆಯಿಂದ ಬಂದು ನಮ್ಮನ್ನೆಲ್ಲಾ  ಚಿತ್ರಹಿಂಸೆಗೆ ಒಳಪಡಿಸಿದ  ನೋವನ್ನು ನಾವು ಸಹಿಸಬೇಕೆ ? ಇವನ್ನು ನೆನೆಸಿಕೊಂಡರೆ ಅಸಹ್ಯ ವೇದನೆಯಾಗುತ್ತದೆ. ಇಲ್ಲಿಯೇ ಗತಿಯೇನು ? ಇವನ್ನು ಕಣ್ಣಾರೆ ಕಾಣುವ ತವಕ ಬಹಳ ದಿನಗಳಿಂದ ನನ್ನ ಮನಸ್ಸಿನಾಳದಲ್ಲಿತ್ತು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಬಲಿದಾನಮಾಡಿದ. ಸಹಸ್ರಾರು ಜನಗಳು ಅವರದೇ ರೀತಿಯಲ್ಲಿ ಯೋಗದಾನ ಮಾಡಿದ್ದಾರೆ. ಮಹಾತ್ಮಾ ಗಾಂಧಿ, ಜವಾಹರ್ಲಾಲ್ ನೆಹರು, ವಲ್ಲ ಭಭಾಯಿ ಪಟೇಲ್, ಸುಭಶ್ ಚಂದ್ರ ಬೋಸ್,  ಮೊದಲಾದ ಪ್ರಮುಖ ನಾಯಕರ ಹಿಂದೆ  ವೀರ್ ಸಾವರ್ಕರ್, ಮಾಡಿದ್ದಾರೆ. ಚಾರಿತ್ರ್ಯಲ್ಲಿ ದಾಖಲಾಗದ ಮಹಾ ಮಹಿಮರು ಅದೆಷ್ಟೋ ಮಂದಿ. ಸೆಲ್ಯೂಯರ್ ಜೈಲ್ ನಲ್ಲಿ ನೋಡಲು ಬರುವ ಹಹುಪಾಲು ಜನ ತಮ್ಮ ಮನೆಯ ಹಿರಿಯರು (ಅಜ್ಜ, ಚಿಕ್ಕಪ್ಪ, ದೊಡ್ಡಪ್ಪ, ಮೊದಲಾದ ತಮ್ಮಂತೆಯೇ  ಭಾರತದ ಸತ್ಪ್ರಜೆಗಳು;  ಶಿಕ್ಷೆಗೆ ಒಳಗಾಗಿ ಜೀವ ತೆತ್ತವರನ್ನು ಚಿತ್ರಗಳನ್ನು ನೋಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬರುತ್ತಾರೆ. ಅವರ ಅಳಲು, ಬಿಸಿಕಣ್ಣಿರು, ಮತ್ತು ಹೃದಯದ ವೇದನೆಯನ್ನು ಅರಿಯುವುದು ಮುಖ್ಯ.

ಇಲ್ಲಿನ ಪ್ರತಿಯೊಂದು ದ್ವೀಪಗಳೂ ಅವುಗಳದೇ ಆದ ಹಲವಾರು  ದಾರುಣ ಕತೆಗಳಿವೆ.  ಅಲ್ಲಿಗೆ ಹೋಗಿ ಅಧ್ಯಯನ  ಮಾಡಿದರೇನೇ  ನೈಜತೆ ಅರಿವಾಗುವುದು. ಅದಕ್ಕಾಗಿ ನಾನು ಆಫೀಸಿನ ಕೆಲಸದ ಸಮಯದ ಬಳಿಕ ಕೆಲವು ಸ್ನೇಹಿತರ ಜೊತೆಯಲ್ಲಿ ದ್ವಿಪದ ಎಲ್ಲಾ ಕಡೆಗಳಲ್ಲೂ ರಾತ್ರಿಯವರೆಗೂ ಸುತ್ತಾಡುತ್ತಿದ್ದೆ.  ಅಲ್ಲಿನ ಭೂಗೋಳ, ಕಾಡು, ನದಿ, ಬೆಟ್ಟ, ಕಾಲುವೆ, ಹವಾಮಾನ, ಜನಜೀವನ, ಎಲ್ಲವನ್ನೂ ಸರಿಯಾಗಿ ಅನುಭವಿಸಿಯೇ ಅರ್ಗತಮಾಡಿಕೊಳ್ಳಬೆನ್ನಿಸಿತು. ಲೈಬ್ರೆರಿಯಲ್ಲಿ  ಅವಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಓದಿದೆ.

ಎಚ್ಚಾರೆಲ್  :
ನಿಮ್ಮ ಅರಿಯುವ  ಆದ್ಯತೆಗಳನ್ನು ಹೇಗೆ ಆರಿಸಿಕೊಂಡಿರಿ ? ಆ ಆಸಕ್ತಿಗಳನ್ನು  ಎಷ್ಟು ಕಾಲ ಜೀವಂತವಾಗಿಟ್ಟುಕೊಂಡಿರಿ ?

ಶ್ರೀಧರ್ : 
ನನಗೆ ಇಂದಿಗೂ ಚಾರಿತ್ರ್ಯಕ  ಹಿನ್ನೆಲೆಯನ್ನು ನೋಡಿದರೆ,  ಅತಿ ಬಲವಂತರಾಗಿರುವವರು  ಬೇರೆ ರಾಷ್ಟ್ರಗಳ ಮೇಲೆ ಮಾಡಿದ ಅತ್ಯಾಚಾರ, ಹಾಗೂ  ಅವರ ನಾಗರಿಕ ಹಕ್ಕುಗಳನ್ನು ನುಚ್ಚುನೂರುಮಾಡಿ ಅವರನ್ನು ಪ್ರಾಣಿಗಳಿಗಿಂತಲೂ ಕ್ರೂರವಾಗಿ ಹಿಂಸಿಸಿದ ಘಟನೆಗಳಿಂದ ನನ್ನ ಮನಸ್ಸು ಬಹಳ ನೊಂದಿದೆ.

ಬ್ರಿಟಿಷರು,  ದಕ್ಷಿಣ ಆಫ್ರಿಕದ ನಾಯಕ ಡಾ. ನೆಲ್ಸನ್ ಮಂಡೇಲಾ ಅವನ್ನು  ೨೭ ವರ್ಷಗಳ ಜೈಲುವಾಸದಲ್ಲಿಟ್ಟು ಹಿಂಸಿಸಿದರು.  ಜೈಲಿನಿಂದ ಹೊರಗೆ ಬಿಡುಗಡೆಯಾಗಿ ಬಂದಾಗ ಅವರು ತಮ್ಮ ಯವ್ವನವನ್ನು  ಕಳೆದುಕೊಂಡಿದ್ದರು. ಆದರೂ ಅವರು ತಮ್ಮ ಜೀವನಾ ಶಕ್ತಿಯನ್ನು ಕಳೆದುಕೊಂಡಿರಲಿಲ್ಲ.  ಅಮೇರಿಕನ್ನರು ಬ್ರಿಟನ್ ನಿಂದ  ಸ್ವಾತಂತ್ರ್ಯ ವನ್ನು ಗಳಿಸಲು ಪಟ್ಟ ಹೋರಾಟ, ಅಮೆರಿಕನ್ನರು ಮತ್ತು ಕೆನಡಾ ಜನರು ತಮ್ಮ ಸ್ವಾತಂತ್ರ್ಯಕ್ಕಾಗಿ ಸೆಣೆಸಿದ  ಹೋರಾಟಗಳೆಲ್ಲವನ್ನೂ  ಓದಿದ  ನನ್ನ ಮನಸ್ಸಿನಲ್ಲಿ ಕ್ರೋಧದ ಕಿಡಿಗಳು ಚಿಟುಗುಟ್ಟುತ್ತಿದ್ದವು.  ಹಾಗೆಯೇ ಅಧ್ಯಯನ ಮಾಡುತ್ತಾ ಮಾಡುತ್ತಾ, ಮಾನವ ಸ್ವಭಾವದ ಬಲಹೀನತೆಗಳು ಅರ್ಥವಾಗತೊಡಗಿದವು.  ಇದೇ ಕಾರಣಕ್ಕೆ ಸರಳವಾಗಿ ತಮ್ಮ ಪಾಡಿಗೆ ತಾವಿದ್ದ ಸಾಧುವಾದ ಭಾರತೀಯರ ಮೇಲೆ ಒಬ್ಬರಾದ ಮೇಲೆ ಒಬ್ಬರು ಮೊಘಲರಿಂದ, ಯುರೋಪಿಯನ್ನರು ಆಕ್ರಮಣಮಾಡಿ, ನಮ್ಮ ಅಸ್ತಿತ್ವಕ್ಕೆ ಸಂಚುಕಾರ ಕಲ್ಪಿಸಿದರು. ಇದು ಮಾನವತೆಯ ವಿರುದ್ಧ ಮಾಡಿದ  ಅತ್ಯಾಚಾರ. ಹೀಗಾಗಿ, ನನಗೆ ಇತಿಹಾಸ ಬಹಳ ಆಸಕ್ತಿಯ ವಿಷಯವಾಯಿತು. ಸಮಯ ಸಿಕ್ಕಾಗ, ‘ನೆಟ್’ ನಲ್ಲೂ ವಿಶ್ವ ಇತಿಹಾಸದ ಪುಟಗಳನ್ನು ತಿರುವು ಹಾಕುವ  ಕೆಲಸ ಮಾಡುತ್ತಿದ್ದೇನೆ. ಹೀಗೆ ಮಾಡುತ್ತಾ ನನಗೆ ನಮ್ಮ ಕರ್ನಾಟಕದ ಚರಿತ್ರೆಯೇ ಸರಿಯಾಗಿ ಗೊತ್ತಿಲ್ಲ ಎನ್ನುವ ಅರಿವಾದಾಗ, ವೇದನೆಯಾಯಿತು. ನನ್ನ ಒಳ ಮನಸ್ಸು ಜಾಗೃತ ವಾಯಿತು. ನನ್ನ  ಉಳಿದ ಜೀವನವನ್ನು  ಸಂಸ್ಕೃತಿ, ಕಲೆ, ನೃತ್ಯ, ಸಾಹಿತ್ಯ, ಅಧ್ಯಾತ್ಮ, ಪ್ರಾಚೀನ ಕಾವ್ಯಗಳು, ವೇದ, ಉಪನಿಷತ್ತು, ಗೀತೆ,  ಹೊಸಭಾಷೆಗಳನ್ನು ಕಲಿಯುವುದರಲ್ಲಿ  ವಿನಿಯೋಗಿಸಬೇಕು ಎಂದು ಮನಸ್ಸು ಮಾಡಿದೆ.

ಹಬ್ಬ-ಹರಿದಿನಗಳು  : ದೀಪಾವಳಿ, ದಸರ, ಹೊಸವರ್ಷ ಆಚರಣೆ, ಭರ್ಜರಿಯಾಗಿರುತ್ತದೆ. ದ್ವೀಪಗಳನ್ನೆಲ್ಲಾ ವಿದ್ಯುತ್ ದೀಪಗಳಿಂದ ಸುಂದರವಾಗಿ ಅಲಂಕರಿಸಲ್ಪಟ್ಟಿರುತ್ತದೆ. ದುರ್ಗಾ ಪೂಜೆ, ಆರತಿಗಳ ನಂತರ, ಪ್ರತಿ  ದಿನವೂ  ‘ಖಿಚಡಿ’ ಪ್ರಸಾದವನ್ನು ಎಲ್ಲರಿಗೂ ಹಂಚುತ್ತಾರೆ. ಇದು ಹಬ್ಬ ಮುಗಿಯುವರೆಗೂ ನಡೆಯುತ್ತದೆ.  ದುರ್ಗಾ ದೇವಿಯ ಮೂರ್ತಿಗಳು ದ್ವಿಪದ ಎಲ್ಲಾ ಕಡೆಗಳಲ್ಲೂ ಪೂಜೆಗೊಳ್ಳುತ್ತವೆ. ಉತ್ತಮವಾದ ಶುದ್ಧ  ನಲ್ಲಿ ನೀರಿನ ವ್ಯವಸ್ಥೆ, ವಿದ್ಯುತ್ ಕಡಿತವಿಲ್ಲದಿರುವ ವ್ಯವಸ್ಥೆ, ಎಲ್ಲರಿಗೂ ಮುದಕೊಡುವ ಸಂಗತಿ. ವಿದ್ಯುತ್ ತಯಾರಿಸಲು  ಡೀಸೆಲ್ ಜನರೇಟರ್ ಗಳನ್ನು ಬಳಸುತ್ತಾರೆ. ಬೆಂಗಳೂರಿನವನಾದ ನನಗೆ ಇದು ಬಹಳ ಆಶ್ಚರ್ಯ ತಂದಿತು. ವಾರದಲ್ಲಿ ಹಲವು ಬರಿ ವಿದ್ಯುತ್ ಕಡಿತದ ಸಂದರ್ಭಗಳು ಬೆಂಗಳೂರಿನಲ್ಲಿ ತೀರಾ ಸಾಮಾನ್ಯ. 

ನಾನು  ಅಂಡಮಾನ್ ನಲ್ಲಿದ್ದಾಗ ಖಾಸಗಿಯಾಗಿ ೪ ಹೋಟೆಲ್ ಗಳಿದ್ದವು. ಪ್ರವಾಸೋದ್ಯಮ  ಈಗ ಬಹಳ ಸೌಲಭ್ಯಗಳನ್ನು  ವಿಸ್ತರಿಸಿದೆ.

  • ಅನ್ನಪೂರ್ಣ,
  •  ಬ್ಲೂ ಸಿ,
  •  ಐಸಿ ಸ್ಪೈಸಿ,
  • ಕಟ್ಟಾ ಬೊಮ್ಮನ್,
  • ಪ್ರಭಾ

ನನ್ನ ರೂಮ್ ಹತ್ತಿರದ ಪರಿಸರ : ಮಳೆಗಾಲದಲ್ಲಿ ಹಾವುಗಳು ಮತ್ತು ೧.೫ ಸೆಂಟಿಮೀಟರ್ ಉದ್ದದ ಸೆಂಟಿಪೇಡ್ ಹರಿದಾಡುತ್ತಿರುತ್ತವೆ. ನನ್ನ ರೂಮಿನಲ್ಲಿ ಮೊದಲು ಅವನ್ನು ನೋಡಿದಾಗ ಮುಜುಗರವಾಯಿತು. ನಂತರ ಅದು ಅಭ್ಯಾಸವಾಗಿಹೋಯಿತು.

ಎಚ್ಚಾರೆಲ್ : 
ಅಲ್ಲಿ ದೇವಸ್ಥಾನಗಳಿವೆಯೇ ? ಬ್ಯಾಂಕ್ ವ್ಯವಸ್ಥೆ ಹೇಗಿದೆ ?  ATM Counters ನೋಡಿದಿರಾ ?

ಶ್ರೀಧರ್ :   
ದೇವಾಲಯಗಳು  ಹಲವಾರಿವೆ. ಮುಖ್ಯವಾದದ್ದು,  ಮರುಗನ್ ಮಂದಿರ, ಸಾಯಿ ದೇವಸ್ಥಾನ, ಇಸ್ಕಾಂ ದೇವಸ್ಥಾನ, ತಿರುಪತಿ ಬಾಲಜಿ ಮಂದಿರ, ಗುರುದ್ವಾರ, ರಾಮಕೃಷ್ಣ ಮಠ ಮೊದಲಾದವುಗಳು.

SBI ATM : ಭಾರತೀಯ ಸ್ಟೇಟ್ ಬ್ಯಾಂಕ್ ಎಟಿಮ್ ಎಲ್ಲಾ ಕಡೆ ಕಾಣುತ್ತವೆ. ಫೋನ್ ನೆಟ್ ವರ್ಕ್ ಗಳಿವೆ. ಪೋರ್ಟ್ ಬ್ಲೇರ್ ನಲ್ಲಿ ಪ್ರಮುಖ ಮಾರುಕಟ್ಟೆ ಎಂದರೆ, ಎಂ. ಜಿ. ರೋಡ್  ನಲ್ಲಿರುವ ಅಬರ್ ದೀನ್ ಬಜಾರ್. ಅಲ್ಲಿಂದ  ಎಲ್ಲ ಕಡೆಗೆ ಹೋಗಲು ಅನುಕೂಲವಿದೆ  ಲೋಕಲ್ ಜೆಟ್ಟಿ ಇದೆ. ಏರ್ ಪೋರ್ಟ್ ಸುಮಾರು ೩ ಕಿ ಮೀ. ದೂರ. ದೊಡ್ಡ ಬಸ್ ಸ್ಟಾಂಡ್, ಟ್ಯಾಕ್ಸಿ ಸ್ಟಾಂಡ್ ಇವೆ. ಸಿ ಪ್ಲೇನ್ ಹೆಲಿಕಾಪ್ಟರ್ ಸರ್ವಿಸ್ ವ್ಯವಸ್ಥೆ ಇತ್ತು ಹ್ಯಾವ್ ಲಾಕ್, ಮತ್ತು ಇತರ ದ್ವೀಪಗಳಿಗೆ ಇತ್ತು.  ಸ್ವಲ್ಪ ಬೆಲೆ ಜಾಸ್ತಿ ಆದರೂ ಬಹಳ ಉತ್ತಮ ಸೇವೆ  ದೊರೆಯುತ್ತದೆ.

ಊಟ ತಿಂಡಿಗಳು : ಮಾಂಸಾಹಾರಿಗಳಿಗೆ ಅಂಡಮಾನ್ ಒಂದು ಸ್ವರ್ಗದ ತರಹ, ಎಲ್ಲ ಕಡೆ ತರಹಾವರಿ ಮೀನಿನ ಸ್ವಾದಿಷ್ಟ  ಖಾದ್ಯಗಳು  ದೊರೆಯುತ್ತವೆ. ಮೀನು ಹಿಡಿಯುವುದಕ್ಕೆ ಅನುಮತಿಯಿಲ್ಲದಿದ್ದರೂ, ಇಲ್ಲಿನ ಮೀನುಗಳು ಅತಿ ದೊಡ್ಡವು; ಮತ್ತು ವೈವಿಧ್ಯತೆ ಹೆಚ್ಚು.

ಮಳೆಗಾಲದಲ್ಲಿ  : (Mid April to August)  ಅತಿ ಹೆಚ್ಚು ಮಳೆ. ಸೆಪ್ಟೆಂಬರ್ ವರೆಗೆ ಸಾಮಾನ್ಯ. ಬೇರೆ ಸಮಯದಲ್ಲಿ ದಿನಕ್ಕೊಮ್ಮೆ ಮಳೆ ಬರುತ್ತಲೇ ಇರುತ್ತದೆ. ,ಚಂಡಮಾರುತದ ಸಮಯದಲ್ಲಿ ೩-೪ ದಿನಗಳ ಕಾಲ ಮಳೆ ಸುರಿಯುತ್ತಿರುತ್ತದೆ.

ಎಚ್ಚಾರೆಲ್ :  
ಅಂಡಮಾನ್ ನಿಕೋಬಾರ್ ದ್ವೀಪಗಳನ್ನು ವೀಕ್ಷಿಸಲು ಹೋಗುವ Tourists  ಗಳಿಗೆ ಏನು ಹೇಳಲು ಬಯಸುತ್ತೀರಿ ?

ಶ್ರೀಧರ್ :
ಕೇವಲ ನಾನು ಅಲ್ಲಿ ೩ ವರ್ಷಗಳ ಕಾಲ ಇದ್ದೆ ಎನ್ನುವ ಕಾರಣಕ್ಕೆ ನನಗೆ ಅನೇಕ  ಪ್ರಶ್ನೆಗಳನ್ನು  ಕೇಳುತ್ತಿದ್ದೀರಿ ಅನ್ನಿಸುತ್ತೆ. ಸತ್ಯವಾಗಿಯೂ ಬೇರೆ  ಸ್ಥಳಗಳಿಗೆ  ಹೋಲಿಸಿದರೆ ಇದೊಂದು ಪುಣ್ಯ ಕ್ಷೇತ್ರ. ಆದ್ದರಿಂದ ಇಲ್ಲಿಗೆ  ಯಾತ್ರಿಗಳಾಗಿ ಬನ್ನಿ.  ದೇವರ ದರ್ಶನ ಭಾಗ್ಯವನ್ನು ಗಳಿಸಿದಿರಿ ಎನ್ನುವ ಮನಸ್ಥಿತಿಯಲ್ಲಿ ಹೋಗಿ ಬನ್ನಿ. ಸೆಲ್ಯುಲರ್ ಜೈಲನ್ನು  ಅಮೂಲಾಗ್ರವಾಗಿ ವೀಕ್ಷಿಸಿ, ಮರೆಯದೆ  ಚಾಟಿಯಿಂದ ಕೈದಿಗಳ  ಬೆನ್ನಿಗೆ ಹೊಡೆಯುವ ಮಾದರಿಯನ್ನು ತಪ್ಪದೆ ವೀಕ್ಷಿಸಿ. ಅದನ್ನು ಸಾಧ್ಯವಾದಾಗಲೆಲ್ಲ ಗೆಳೆಯರಿಗೆ, ಮಕ್ಕಳಿಗೆ  ಚೆನ್ನಾಗಿ ವಿವರಿಸಿ, ಸಾರ್ಥಕತೆಯನ್ನು ಪಡೆಯಿರಿ.  ಅದರ ಜೊತೆಗೆ, ಬೇರೆ ಯಾವ Tourist Resorts ಗಳಲ್ಲೂ ಊಹಿಸಲಾಗದ ಹಲವಾರು Water sports ಗಳನ್ನು ಆನಂದಿಸಿ. ನಮ್ಮದೇಶಕ್ಕೆ  ಸ್ವಾತಂತ್ರ್ಯ ಸುಲಭವಾಗಿ ದೊರೆಯಲಿಲ್ಲ. ಅದಕ್ಕ ತಮ್ಮ ಜೀವವನ್ನೇ ತೆತ್ತ, ತಮ್ಮ ಆಶೆ ಆಕಾಂಕ್ಷೆ ಉತ್ತಮ ಜೀವನದ ಕಲ್ಪನೆ ಮೊದಲಾದವುಗಳನ್ನು  ತ್ಯಾಗ ಮಾಡಿದ ನಮ್ಮವರೇ ಆದ ಹಿರಿಯ ಭಾರತೀಯರಿಗೆ ನಮನಗಳನ್ನು ಸಲ್ಲಿಸಿ. ಇಂದು ಸ್ವಚ್ಛಂದವಾಗಿ ನಾವೆಲ್ಲ ಸಂಚರಿಸುತ್ತಿರುವುದು  ಅವರೆಲ್ಲರ  ತ್ಯಾಗ, ಬಲಿದಾನಗಳ   ಫಲವೇ ಆಗಿದೆ. ಇದನ್ನು ನಮ್ಮ ಮಕ್ಕಳಿಗೆ ಕತೆಯ ರೂಪದಲ್ಲಿ  ಅರ್ಥೈಸಿ ಹೇಳಿ ; ಅವರನ್ನು ಪ್ರೋತ್ಸಾಹಿಸಿ. ಸ್ವಾತಂತ್ರ್ಯ ಮಹೋತ್ಸವ, ಗಣರಾಜ್ಯ ಮಹೋತ್ಸವಗಳಲ್ಲಿ  ನಿಮ್ಮ ಅನುಭವಗಳನ್ನು ಸರಿಯಾದ ರೀತಿಯಲ್ಲಿ ಪ್ರಸ್ತುತಪಡಿಸಿ ಎಲ್ಲಾ ವರ್ಗದ ನಾಗರಿಕರಿಗೆ ಒಮ್ಮೆ ಅಂಡಮಾನ್ ನಿಕೋಬಾರ್ ದ್ವೀಪಗಳನ್ನು ನೋಡಿಬರಲು ಪ್ರೇರೇಪಿಸಿ ! ಇದು ೨೦೨೧ ರ ಸ್ವಾತಂತ್ರ್ಯ ದಿನಾಚರಣೆಯ  ಅಮೂಲ್ಯ ಸಂದೇಶಗಳಲ್ಲೊಂದು.

ಜೈ ಭಾರತ್

ಅಂಡಮಾನ್ ನಲ್ಲಿ ಸೆಲ್ಯುಲರ್ ಜೈಲಿನ ಮುಂಭಾಗ, ಮತ್ತು ರಾತ್ರಿಯ ದೃಶ್ಯ.(ಶ್ರೀಧರ್ ಸೆಲ್ಯುಲರ್ ಜೈಲಿನ ಮುಂದೆ)

ಪರ್ಯಟಕರಿಗೆ, ಸೆಲ್ಯುಲರ್ ಜೈಲ್ ನಲ್ಲಿ ರಾತ್ರಿ, Sound and Light ನ ನೆರವಿನಿಂದ ಒಂದು ವೃತ್ತ ಚಿತ್ರವನ್ನು ತೋರಿಸುವ ವ್ಯವಸ್ಥೆ ಮಾಡಿದ್ದಾರೆ. ಅನೇಕ  ಮಹತ್ವದ ಚಾರಿತ್ರಿಕ  ಮಾಹಿತಿಗಳಿಂದ ಕೂಡಿರುವ ಈ ವೃತ್ತಚಿತ್ರವನ್ನು ಖಂಡಿತ ಪ್ರತಿಯೊಬ್ಬ ಭಾರತೀಯನು ನೋಡಬೇಕು. ತನ್ನ ಪರಿವಾರದ ಮಕ್ಕಳಿಗೆ ಅವುಗಳ ಮಹತ್ವಗಳನ್ನು ವಿವರಿಸಿ ಪ್ರೋತ್ಸಾಹಿಸಬೇಕು. 


ಸೆಲ್ಯುಲರ್ ಜೈಲಿನ  ಒಂದು
ಕೈದಿಗಳ ಸೆಲ್ ನಲ್ಲಿ

ಸೆಲ್ಯುಲರ್ ಜೈಲಿನ ಒಂದು ವಿಭಾಗ

ಸಮುದ್ರದ ತಟದಲ್ಲಿ ಧ್ಯಾನ