ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

created by Polish

ಗಝಲ್ ಲೋಕದಲ್ಲೊಂದು ಸುತ್ತು

ಎಚ್ಚಾರೆಲ್

ಗಝಲ್  ವ್ಯಾಖ್ಯಾನ,  ಹಾಗೂ ಹಿಂದಿ ಫಿಲಂ ನ  ಶೆಹನ್ ಶಾ-ಎ-ಗಝಲ್  ಎಂಬ ಶಕ್ಸಿಯತ್ ~ ತಲತ್  ಮೆಹಮೂದರೂ  !

ಶೆಹನ್ ಶಾ-ಎ-ಗಝಲ್~ ತಲತ್  ಮೆಹಮೂದ್ ‘ಗಮ್ ಕೀ ಅಂಧೇರಿ ರಾತ್ ಮೇ ದಿಲ್ ಕೋ ನಾ ಬೇಕರಾರ್ ಕರ್‘   ಗೀತೆ ೧೯೬೩ ರಲ್ಲಿ ” ಸುಶೀಲಾ” ಎಂಬ ಹಿಂದಿ ಚಿತ್ರದಲ್ಲಿ ತಲತ್ ಮೆಹಮೂದ್, ಮೊಹಮ್ಮದ್ ರಫಿ, ಹಾಗೂ  ಮತ್ತಿತರು ಜೊತೆಗೂಡಿ ಹಾಡಿದ ಗೀತೆಯನ್ನು ನನ್ನ ಮೊಬೈಲ್ ಫೋನ್ ನಲ್ಲಿ ನೋಡಿ ಮನಸ್ಸು ಪುಳಕಿತಗೊಂಡಿತ್ತು.  ನಾನು ಮೊದಲಿನಿಂದಲೂ ಈ ತರಹದ ಗಝಲ್ ಗಳನ್ನು ಕೇಳ್ತಾ ಬಂದಿದ್ದೇನೆ.  ಒಮ್ಮೆ ನನಗೆ ತಿಳಿದ ಗಜಲ್ ಹಾಡುಗಾರರ  ಕೊಡುಗೆಯ ಬಗ್ಗೆ ಹಾಗೂ ಕನ್ನಡಭಾಷೆಯಲ್ಲೂ ಗಝಲ್ ಹಾಡುಗಳು ಬಳಕೆಯಲ್ಲಿವೆಯೇ ? ಎಂದು ತಿಳಿಯುವ ಮತ್ತು ಅವುಗಳ ಬಗ್ಗೆ ಬೆಳಕುಚೆಲ್ಲುವ ಒಂದು ಲೇಖನ, ನನ್ನ ಕೈಯಿಂದಲೇ ಆಗಬೇಕೆನ್ನುವ ತುಡಿತ ಶುರುವಾಯಿತು. 

‘ಗಮ್ ಕೀ ಅಂಧೇರಿ ರಾತ್ ಮೇ, ದಿಲ್ ಕೋ ನಾ ಬೇಕರಾರ್ ಕರ್’ 
‘ಸುಬಹ್ ಜರೂರ್ ಆಯೆಗೀ, ಸುಬಹ್ ಕಾ ಇಂತಜಾರ್ ಕರ್’
‘ಗಮ್ ಕೀ ಅಂಧೇರಿ ರಾತ್ ಮೇ’
ದರ್ದ್ ಹೈ ಸಾರೀ ಜಿಂದಗೀ, ಜಿಸ್ಕಾ ಕೊಯಿ ಸಿಲಾ ನಹೀ;
ದಿಲ್ ಕೋ ಫರೇಬ್ ದೀಜಿಯೇ, ಔರ್ ಯೆ ಹೋಸಲಾ ನಹೀ;
ಔರ್ ಯೇ ಹೊಸಲಾ ನಹೀಖುದ್ ಸೆ ತೋ ಬದ್ಗುಮಾ ನಾ ಹೊ,
ಖುದ್ ಪೇ ತೋ ಯೇತ್ಬಾರ್ ಕರ್;ಸುಬಹ್ ಜರೂರ್ ಆಯೆಗೀ, ಸುಬಹ್ ಕಾ ಇಂತಜಾರ್ ಕರ್;
ಗಮ್ ಕೀ ಅಂಧೇರಿ ರಾತ್ ಮೇ;
ಖುದ್ ;ಹೀ ತಡಪ್ ಕೆ ರಹ್ ಗಯೆ,
ದಿಲ್ ಕೀ ಸದಾ ಸೆ ಕ್ಯಾ ಮಿಲಾ ಆಗ್ ಸೆ ಖೇಲ್ ತೇ ರಹೇ,
ಹಮ್ಕೋ ;ವಫಾ ಸೆ ಕ್ಯಾ ಮಿಲಾ;
ಹಮ್ಕೋ ವಫಾ ಸೆ ಕ್ಯಾ ಮಿಲಾ;
ದಿಲ್ ಕೀ ಲಗೀ ಬುಝಾ ನಾ ದೆ,
ದಿಲ್ ಕೀ ಲಗೀ ಸೆ ಪ್ಯಾರ್ ಕರ್ಸುಬಹ್ ಜರೂರ್ ಆಯೆಗೀ,
ಸುಬಹ್ ಕಾ ಇಂತಜಾರ್ ಕರ್ ;
ಗಮ್ ಕೀ ಅಂಧೇರಿ ರಾತ್ ಮೇ ದಿಲ್ ಕೋ ನಾ ಬೇಕರಾರ್ ಕರ್;
ಸುಬಹ್ ಜರೂರ್ ಆಯೆಗೀ, ಸುಬಹ್ ಕಾ ಇಂತಜಾರ್ ಕರ್ ;
ಗಮ್ ಕೀ ಅಂಧೇರಿ ರಾತ್ ಮೇ

The Hindu

‘ಟ್ಯಾಕ್ಸಿ ಡ್ರೈವರ್’  ಚಿತ್ರದಲ್ಲಿ ತಲತ್ ಮೆಹಮೂದ್ ರವರು,  ನಟ, ದೇವಾನಂದರಿಗೆ ಹಾಡಿದ ಹಾಡು :

ಜಾಯೆ ತೊ ಜಾಯೆ ಕಹಾ 

ಸಮ್ಝೇಗ ಕೌನ್ ಯಹಾ 

ದರ್ದ್-ಭರೇ ದಿಲ್ ಕೀ ಜುಬಾನ್ ?ಜಾಯೆ ತೊ ಜಾಯೆ ಕಹಾ ಮಾಯೂಸಿಯೊಂ ಕಾ ಮಜ್ಮಾ ಹೈ ಜೀಲೇ ಕ್ಯಾ ರಹ್ ಗಯಾ ಹೈ ಇಸ್ ಜಿಂದಗೀ ಮೇ ?ರೂಹ್ ಮೇ ಗಮ್, ದಿಲ್ ಮೇ ಧುವಾ  
ಜಾಯೆ ತೊ ಜಾಯೆ ಕಹಾ ಸಮ್ಝೇಗ ಕೌನ್ ಯಹಾ ದರ್ದ್-ಭರೇ ದಿಲ್ ಕೀ ಜುಬಾನ್ ?ಜಾಯೆ ತೊ ಜಾಯೆ ಕಹಾಗಜಲ್ ಬಗ್ಗೆ ನನ್ನದೇ ಆದ ರೀತಿಯಲ್ಲಿ ಒಂದು ಲೇಖನ ಬರೆಯುವ ಹುಚ್ಚು ಮನಸ್ಸಿನಲ್ಲಿ ಮೊಳೆತಿತ್ತು  :ಇಂದು ೨೦೨೩ ರ ಮಾರ್ಚ್ ತಿಂಗಳ ಮೊದಲ ವಾರ; ಗಝಲ್ ಬಗ್ಗೆ ಅರಿಯುವ ಉತ್ಕಟ ಪ್ರೀತಿ ತಲೆಯಲ್ಲಿ ಹುಟ್ಟಿದ್ದು ಈವತ್ತೇ ! ನಾನು ತಲತ್ ಮೆಹಮೂದ್  ತಮ್ಮ ಚಿತ್ರಗೀತೆಗಳನ್ನು ಪೇಶ್ ಮಾಡುತ್ತಿದ್ದ ಪರಿಯನ್ನು ಕೇಳಿ ಅರಿತಿದ್ದೆ. ೧೯೬೭ ರಲ್ಲಿ  ಬೊಂಬಾಯಿಗೆ ಆಗತಾನೇ ಪಾದಾರ್ಪಣೆ ಮಾಡಿದ್ದೆ.  ಇನ್ನೂ ಬ್ಯಾಚೆಲರ್ ಆಗಿದ್ದ ಸಮಯ.  ದಾದರ್ ನಲ್ಲಿ ವಾಸಿಸುತ್ತಿದ್ದೆ.  ರೂಮಿನ ನನ್ನ ಸಹ-ವಾಸಿ ಗೆಳೆಯನ ಜತೆ ಹಲವಾರು ಬಾರಿ ಮುಂಬಯಿನ ಕೋಟೆ ಪ್ರದೇಶದ ಪ್ರತಿಷ್ಠಿತ ಸಭಾಗೃಹಗಳಲ್ಲಿ ಟಿಕೆಟ್ ಖರೀದಿಸಿ, ಗಜಲ್ ಆನಂದವನ್ನೂ ಪಡೆದಿದ್ದೇನೆ. ಒಮ್ಮೆ ಗಜಲ್ ಗೀಳು ಹತ್ತಿದಮೇಲೆ ಇನ್ನೂ ಕೆಲವು ಗಾಯಕರ ಕಾರ್ಯಕ್ರಮಗಳಿಗೆ ಹೋದದ್ದೂ ಇದೆ. ಬಹುಶಃ ನನ್ನ ಬಹಳ ಕಾಲದ  ಕನಸು ಇಂದು ನನಸಾಯಿತೆಂದು ಭಾವಿಸುತ್ತೇನೆ. 

ಬೊಂಬಾಯಿಗೆ ಬಂದ ಹೊಸದರಲ್ಲಿ ‘ನನ್ನ ಹಿರಿಯ ಗೆಳೆಯ ವಿಕಾಸ್ ಮೋಹಿತೆ’ಯವರನ್ನು  ಗಜಲ್ ಬಗ್ಗೆ ಮಾಹಿತಿ ವಿಚಾರಿಸಿದಾಗ,  ಗಜಲ್ ನ ಕಲ್ಪನಾ ವಿಲಾಸಕ್ಕೆ ಮನಸೋತಿದ್ದ ವಿಕಾಸ್, ಗಜಲ್ ನ್ನು ವರ್ಣಿಸಿದ ಪರಿ-ವಿವರಿಸಿದ  ರೀತಿ, ಅನನ್ಯ ; ಅವರ ಅನುಭವದ ನುಡಿಗಳು ನನ್ನ ಮೈ-ಮನಗಳನ್ನು ‘ಜುಂ’ ಎನ್ನಿಸಿತ್ತು. ಅತಿಯಾದ ಮೆಚ್ಚುಗೆ ಹೊಗಳಿಕೆ, ಧನ್ಯತೆಗಳನ್ನು ಕಂಡು ನಾನು ತತ್ತರಿಸಿಹೋಗಿದ್ದೆ !

* ಗಜಲ್ ಎಂದರೆ…ಮೇಘ ಮಳೆಯ ಹನಿಸುವ ಮುನ್ನ ಮಣ್ಣಿನಿಂದ ಹೊಮ್ಮಿದ ಘಮ !

* ಗಜಲ್ ಎಂದರೆ… ಮೊಲೆ ಉಂಡು ಆಕಳಿಸಿ ಅಮ್ಮನ ಮಡಿಲಲ್ಲಿ ಮಲಗಿದ ಮಗುವಿನ ಕಿರು ನಗು !

* ಗಜಲ್ ಎಂದರೆ… ಕುಣಿಯುವ ಹೆಜ್ಜೆಗಳ ಗೆಜ್ಜೆಯಿಂದ ಅಗಲಿದ ‘ಘಲ್’ ಎಂಬ ಒಂಟಿ ಸದ್ದು!

* ಗಜಲ್ ಎಂದರೆ… ಆಕಾಶ ಬಳಸಿ ಹಾರಿದ ಹಕ್ಕಿಯ ರೆಕ್ಕೆಯಿಂದ ಕಳಚಿ ಗಾಳಿಗಾನದಿ ತೇಲುವ ಹಗುರ ಗರಿಯ ಪರವಶತೆ !

* ಗಜಲ್ ಎಂದರೆ…ಕಡಲ ಅಲೆಗಳೆಲ್ಲ ಒಂದೊಂದಾಗಿ ಸರತಿಲಿ ಓಡಿಬಂದು ತೀರಕ್ಕೆ ಮುತ್ತಿಟ್ಟು ಕಳೆದುಹೋಗುವ ಸಂಭ್ರಮ !

* ಗಜಲ್ ಎಂದರೆ… ಫಕೀರನೊಬ್ಬನ ಬಿಳಿಗಡ್ಡದ ಮೇಲೆ ಮೈಮರೆತು ಕೂತ ಚಿಟ್ಟೆಯ ಧ್ಯಾನ.

ಈ ಮಾತುಗಳನ್ನು ಹೇಳುವಾಗ ಮೋಹಿತೆಯವರ ಕಣ್ಣಿನಲ್ಲಿ ಮಿಂಚು ಕೋರೈಸುತ್ತಿತ್ತು. ಅಂದರೆ ಅವರು ಸಂಪೂರ್ಣವಾಗಿ ಭಾವ ಪರವಶತೆಯನ್ನು ಮುಟ್ಟಿದ್ದರು. 

ಹತ್ತಾರು ಗಜಲ್ ಗಾಯಕರೆಂದೇ  ನಮ್ಮ ದೇಶದಲ್ಲಿ ಹೆಸರುಮಾಡಿದವರಿದ್ದರೂ ಅನೇಕ ಸಂಗೀತ ಕಲಾವಿದರು, ಸಿನಿಮಾ ಸಂಗೀತ ಗಾಯಕರು, ಕೆಲವು ನಟರೂ ಈ ವಲಯದಲ್ಲಿ ಸೇರಿರುವುದನ್ನು ಗಮನಿಸಿದರೆ ಗಜಲ್ ಹಾಡುಗಾರಿಕೆಯ  ಜನಪ್ರಿಯತೆ, ಆತ್ಮೀಯತೆ,ಮತ್ತು ವ್ಯಾಪ್ತಿಯಬಗ್ಗೆ ಬಹಳ ಮಾಹಿತಿಗಳು ಉಪಲಬ್ಧವಾಗುತ್ತವೆ. ಅದರ ಜೊತೆಗೆ ಕೆಲವು ಭಿನ್ನಾಭಿಪ್ರಾಯಗಳೂ ಇಲ್ಲದಿಲ್ಲ. ಈ ಲೇಖನದಲ್ಲಿ ಪ್ರಮುಖವಾಗಿ  ೪೦ ರ ದಶಕದ ಅತ್ಯಂತ ಜನಪ್ರಿಯ ಶಾಯಿರ್, ತಲತ್ ಮೆಹಮೂದ್ ರವರ ಗಾಯಕಿಗಳನ್ನು  ಪ್ರಸ್ತುತಪಡಿಸುವುದಾಗಿದೆ.  

ಭಾರತೀಯ ಪ್ರಸಿದ್ಧ ಗಜಲ್ ಗಾಯಕರು :

100 Best Ghazals Ever: Download MP3. 1-click downloads. Updated 2021

ಭಾರತೀಯ ಸುಪ್ರಸಿದ್ಧ ಗಜಲ್ ಗಾಯಕರ ಹೆಸರುಗಳನ್ನು ದಾಖಲಿಸುವುದಾದರೆ,  ಗುಲಾಮ್ ಅಲಿ, ತಲತ್ ಮೆಮೂದ್,  ನೂರ್ ಜೆಹಾನ್,  ಸಂಪೂರಣ್ ಸಿಂಗ್ ಕಾಲ್ರಾ ಗುಲ್ಜಾರ್ , ಪಂಕಜ್ ಉಧಾಸ್,  ಕೆ. ಎಲ್. ಸೈಗಲ್, ಬೇಗಂ ಅಖ್ತರ್, ಜಗ್ ಜಿತ್ ಸಿಂಗ್, ಚಿತ್ರ ಸಿಂಗ್,   ಮನ್ನಾಡೆ,  ಹರಿಹರನ್, ಚಂದನ್ ದಾಸ್, ಅನೂಪ್ ಜಲೋಟಾ,  ಭೂಪಿಂದರ್ ಸಿಂಗ್, ತಲತ್ ಅಜೀಜ್, ರೂಪ್ ಕುಮಾರ್ ರಾಥೋಡ್, ನುಸ್ರತ್ ಫತೇ ಆಲಿ ಖಾನ್, ಮೊಹಮ್ಮದ್ ರಫಿ, ಆಸಾದ್ ಅಮಾನತ್ ಆಲಿ ಖಾನ್, ಮುಕೇಶ್, ಸುರಯ್ಯಾ, ಪೆನಾಜ್ ಮಸಾನಿ, ಮುಂತಾದವರು.  

ಗಜಲ್ ವಿಷಯಗಳು ಪ್ರತಿಪಾದಿಸುವ  ಪ್ರೀತಿ, ಆಳವಾದ ಅರ್ಥದೊಂದಿಗೆ ಜನರ ಭಾವನೆಗಳನ್ನು ಅಭಿವ್ಯಕ್ತಿಸುವಲ್ಲಿ ಸಮರ್ಥವಾಗಿವೆ. ಅಂತಹ ಹಲವು ಗಜಲ್ ಗಾಯಕರ ಪೈಕಿ ಕೆಲವೇ ಕೆಲವು ಗಜಲ್ ಗಾಯಕರ ವಿವರಗಳನ್ನು ಇಲ್ಲಿ ದಾಖಲಿಸಲು ಸಾಧ್ಯವಾಯಿತು.   ಅದರಲ್ಲಿಯೂ ನಾನು ಆರಿಸಿಕೊಂಡ ವ್ಯಕ್ತಿ, ‘ಜನಾಬ್  ತಲತ್ ಮೆಮೂದ್‘ (A gentleman) ಎಂದು ದಿಲೀಪ್ ಕುಮಾರ್ ರಂತಹ ಮೇರು ಅಭಿನಯಕರ್ತರಿಂದ ಶಭಾಷ್ಗಿರಿ ಪಡೆದು, ಅತ್ಯಂತ ಜನಪ್ರಿಯತೆಯ ಶಿಖರದಲ್ಲಿ ಹಲವು ದಶಕಗಳ ಕಾಲ, ‘ರಾಜ್’ ಮಾಡಿದ ವ್ಯಕ್ತಿ. 

 ಗಝಲ್ ಮಾಂತ್ರಿಕ ತಲತ್ ಮಹಮೂದ್, ಮತ್ತು ಅವರ ಹೆಂಡತಿ ‘ನಸರಿನ್ ತಲತ್ ಮಹಮೂದ್ 

ತಲತ್  ಮೆಹಮೂದ್  ರವರ ಜೀವನ ಚರಿತ್ರೆ :

ನನ್ನ ಪ್ರೀತಿಯ ಗಜಲ್ ಗಾಯಕರಲ್ಲೊಬ್ಬರಾಗಿದ್ದ  ತಲತ್ ಮೆಹಮೂದ್ ರವರು (೨೪, ಫೆಬ್ರವರಿ, ೧೯೨೪-೯, ಮೇ, ೧೯೯೮)  ಉತ್ತರ ಪ್ರದೇಶದ ಲಖ್ನೋ ನಗರದಲ್ಲಿ ೧೯೨೪ ರಲ್ಲಿ ಜನಿಸಿದರು. ಅವರ ಅಬ್ಬಾ ಮನ್ಸೂರ್ ಮೊಹಮ್ಮದ್ ರಿಗೆ ಜನಿಸಿದ ೬ ಮಕ್ಕಳಲ್ಲಿ ಒಬ್ಬರು. ಹಳೆಯ ಸಂಪ್ರದಾಯಸ್ತ ಕುಟುಂಬದಿಂದ ಬಂದ ಅವರಿಗೆ ಮನೆಯಲ್ಲಿ ಹಾಡುಗಾರಿಕೆ, ಸಿನಿಮಾ ಮೊದಲಾದವುಗಳಲ್ಲಿ  ಆಸಕ್ತಿಯಿಲ್ಲದೆ  ಅದಕ್ಕೆ ಪ್ರೋತ್ಸಾಹಕೊಡುತ್ತಿರಲಿಲ್ಲ.  ಅದಕ್ಕೆ ವಿರುದ್ಧವಾದ ಮನೋಧರ್ಮ ಹೊಂದಿದ್ದ ತಲತ್  ರಿಗೆ, ಸಂಗೀತದಲ್ಲಿ ಅಪಾರ ಆಸಕ್ತಿ. ರಾತ್ರಿಯೆಲ್ಲಾ ‘ಮುಶೈರ್’ನಲ್ಲಿ ಭಾಗವಹಿಸುತ್ತಿದ್ದರು. ತಂದೆಯವರು ಮಗನ ಪ್ರೀತಿಗಾಗಿ, ಪಂಡಿತ್. ಎಸ್. ಸಿ. ಆರ್. ಭಟ್ ಎಂಬ ಗುರುಗಳಿಂದ ಶಾಸ್ತ್ರೀಯ ಸಂಗೀತವನ್ನು ಕಲಿಸಲು ಏರ್ಪಾಡು ಮಾಡಿದರು. ಹೀಗೆಯೇ ಮುಂದುವರೆದು, ‘ಮಾರಿಸ್ ಕಾಲೇಜ್ ಆಫ್ ಮ್ಯೂಸಿಕ್’ ಎಂಬ ಕಾಲೇಜಿಗೆ ದಾಖಲು ಮಾಡಿದರು. ಅದೇ  ಕಾಲೇಜ್ಬೆಳೆದು ಮುಂದೆ ‘ಭಾಟ್ಖಂಡೆ ಮ್ಯೂಸಿಕ್ ಕಾಲೇಜ್‘ ಹೆಸರು ಪಡೆಯಿತು. ೧೯೩೦ ರಲ್ಲಿ ತಮ್ಮ ಕೆರಿಯರ್ ಶುರುಮಾಡಿದರು. 

ಅವರ ಸಂಗೀತವನ್ನು ಹಾಡುತ್ತಿದ್ದ ವಿಷಯ ಹೇಗೋ ಲಖ್ನೋ ಆಕಾಶವಾಣಿಯ ನಿರ್ದೇಶಕರ ಕಿವಿಗೆ ಬಿದ್ದು ಅವರಿಗೆ ಹಾಡಲು ಆಹ್ವಾನಿಸಿದರು.  ೧೯೩೯ ರಲ್ಲಿ ತಮ್ಮದೇ ಆದ ಶೈಲಿಯಲ್ಲಿ ಆಕಾಶವಾಣಿಯ ಜನಪ್ರಿಯ ಕಾರ್ಯಕ್ರಮಗಳಾಗಿದ್ದ ‘ದಾಗ್’, ‘ಮಿ. ಜಿಗರ್‘ಗಳಿಗೆ ಹಾಡಿದರು. ೧೯೪೧  ರಲ್ಲಿ ಎಚ್. ಎಂ. ವಿ. ರೆಕಾರ್ಡಿಂಗ್ ಸಂಸ್ಥೆ, ಅವರ ಕೆಲವು ಹಾಡುಗಳನ್ನು ಧ್ವನಿ ಮುದ್ರಿಸಿತು. ಶಾಸ್ತ್ರೀಯ ಸಂಗೀತದ ಆಧಾರದ ಮೇಲೆ ಹಾಡಿದ ‘ಸಪ್ನೋಂ ಕಿ ಸುಹಾನಿ ದುನಿಯಾ ಕೋ’ ಶಿಕಸ್ತ್ ಚಿತ್ರಕ್ಕೆ ಅಳವಡಿಸಲಾಯಿತು.  ‘ಲಾಗೇ ತೋಸೆ ನೈನಾ’ ಎಂಬ ಗೀತೆಯನ್ನು  ‘ಚಾನ್ದೀ ಕೆ ದಿವಾರೆ’ ಚಿತ್ರಕ್ಕಾಗಿ ಹಾಡಿದರು. ನೋಡಲು ಸ್ಪುರದ್ರೂಪಿಯಾಗಿದ್ದ  ತಲತ್ ರು   ೧೯೪೪ ರಲ್ಲಿ ‘ತಸ್ವೀರ್ ತೆರೆ ದಿಲ್ ಮೇರಾ ಬೆಹ್ಲಾಜೊತೆಯಲ್ಲಿ ನ ಸಕೆಗಾ’ ಎಂಬ ಹಾಡಿನೊಂದಿಗೆ ಒಂದು ಫಿಲಂ ನಲ್ಲಿಯೂ  ಅಭಿನಯಮಾಡಿದರು.  ಕಲ್ಕತ್ತಾ ನಗರದಲ್ಲಿದ್ದಾಗ, ಒಟ್ಟು ೧೬ ಚಿತ್ರಗಳಲ್ಲಿ ಅಭಿನಯಿಸಿದ್ದರು. ಅವುಗಳಲ್ಲಿ ಬಂಗಾಳಿ ಹಾಡುಗಳಿಗೇ ಆದ್ಯತೆಯಿತ್ತು.

ಹೀಗೆ ನಟನೆ, ಹಾಡುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ  ತಲತ್ ರವರು  ೧೯೪೧ ರ ಹೊತ್ತಿಗಾಗಲೇ  ಮನೆ-ಮನೆಗಳಲ್ಲಿ  ಪ್ರಸಿದ್ಧರಾಗಿದ್ದರು. ‘ಸಬ್ ದಿನ್ ಏಕ್ ಸಮಾನ್ ನಹೀ ಥಾ, ಬನ್ ಜಾವೂಂಗಾ  ಕ್ಯಾ ಸೆ ಕ್ಯಾ ಮೈ, ಇಸ್ ಕಾ ತೋ ಕುಛ್ ಧ್ಯಾನ್ ನಹಿ ಥಾ ‘, ಕಲ್ಕತ್ತನಗರದ ಎಚ್. ಎಂ. ವಿ. ಶಾಖೆ, ಅವರ ಹಾಡುಗಳನ್ನು ಧ್ವನಿಮುದ್ರಿಸಿತು. ಫಯ್ಯಾಜ್ ಹಶ್ಮಿಯವರು ಬರೆದ ಗೀತೆಯನ್ನು ತಲತ್ ರವರು ಹಾಡುವ ಸಂದರ್ಭದಲ್ಲಿ, ಸಂಗೀತ ರಚನಾಕಾರ ಸುಭಾಷ್ ದಾಸ್ ಗುಪ್ತ,  ಮತ್ತೊಬ್ಬ ಗಾಯಕ ಪಂಕಜ್ ಮಲ್ಲಿಕ್, ಉಪಸ್ಥಿತರಿದ್ದರು. ಬಂಗಾಳಿ ಹಾಡುಗಳಿಗೆ ಬಹಳಷ್ಟು ಬೇಡಿಕೆಯಿದ್ದ ಆ ಕಾಲಘಟ್ಟದಲ್ಲಿ ತಲತ್, ಬಂಗಾಳಿ ಭಾಷೆ ಕಲಿಯಲು ಆರಂಭಿಸಿದರು. 

“ಸಿನಿಮಾಕ್ಕಲ್ಲದ ಆಲ್ಬಮ್ ಹಾಡುಗಾರಿಕೆಯ  ಕಾಂಟ್ರಾಕ್ಟ್” ನಲ್ಲಿ ಒಂದು ಹಾಡಿಗೆ ೩೦ ರೂಪಾಯಿನಂತೆ ಹಣ ದೊರೆಯುತ್ತಿತ್ತು.  ೧೯೪೨ ರಲ್ಲಿ ಕಲ್ಕತ್ತಾದಿಂದ ಮಾರಿಸ್ ಕಾಲೇಜಿನಲ್ಲಿ ತಮ್ಮ ಕಲಿಕೆಯನ್ನು  ಮುಗಿಸಲು ಲಖ್ನೌ ಗೆ  ಹೋದರು.  ಆಸಮಯದಲ್ಲಿ ಮುಂಚೂಣಿಯಲ್ಲಿದ್ದ ಗಾಯಕಿಯರ ಹೆಸರುಗಳು :  ಗಂಗೂ ಬಾಯಿ ಹಾನಗಲ್, ಫಯಾಜ್ ಖಾನ್, ಮತ್ತು ರೋಷನಾರಾ ಬೇಗಂ ಮೊದಲಾದ ಕಲಾಕಾರರ ಗಾಯಕಿಯನ್ನು ಕೇಳಿದರು. ಶಿಕ್ಷಣ ಮುಗಿದು ಕಲ್ಕತ್ತಕ್ಕೆ ೧೯೪೪ ರಲ್ಲಿ ವಾಪಾಸ್ ಹೋಗಿದ್ದು,  ಕೆ. ಎಲ್ ಸೈಗಲ್ ರನ್ನು ಭೆಟ್ಟಿಯಾಗುವ ಪರಮೋದ್ದೇಶದಿಂದ.  ನಂತರ ಮುಂದಿನ ದಿನಗಳಲ್ಲಿ  ಅವರು  ಬೊಂಬಾಯಿಗೆ ಹೋಗಿದ್ದರೂ, ಆಗಾಗ  ಕಲ್ಕತ್ತಾಕ್ಕೆ ಬರುತ್ತಲೇ ಇದ್ದರು. ಮೊದಲು ಹಿಂದೊಮ್ಮೆ ಪರಿಚಯವಾಗಿದ್ದ ಪಂಕಜ್ ಮಲ್ಲಿಕ್ ಭೇಟಿ ಮಾಡಿದರು. ಪಂಕಜ್ ಇವರನ್ನು ಮರೆತಿರಲಿಲ್ಲ. ದೋ ನೈನಾ ಮತ್ವಾರೆ, ಎಂಬ ಹೆಸರಾಂತ ಸೈಗಲ್ ಹಾಡುಗಾರಿಕೆಯನ್ನು ರೆಕಾರ್ಡ್ ಮಾಡುವ ಸಮಯದಲ್ಲಿ ಅವರು ತಲತ್ ರನ್ನು ಆಹ್ವಾನಿಸಿದ್ದರು. ಈ ಘಟನೆ ತಮ್ಮ ಜೀವನದಲ್ಲಿ  ಮರೆಯಲಾರದ ಘಟನೆಯಾಗಿತ್ತೆಂದು  ಮುಂದೆ ಇಂಟರ್ವ್ಯೂ ಒಂದರಲ್ಲಿ  ಕೇಳುಗರ ಮುಂದೆ ತಲತ್ ಮೆಹಮೂದ್ ರವರು  ಹೇಳಿಕೊಂಡಿದ್ದಾರೆ.

೧೯೪೯ ರಲ್ಲಿ ತಲತ್ ರವರು,  ಬೊಂಬಾಯಿಗೆ ಪಾದಾರ್ಪಣೆ ಮಾಡಿದರು. ಅನಿಲ್ ಬಿಸ್ವಾಸ್ ರ ಸಂಗೀತ ನಿರ್ದೇಶನದಲ್ಲಿ ‘ಆರ್ಜೂ‘ ಚಿತ್ರದಲ್ಲಿ  (೧೯೫೦) ಹಾಡಿದ್ದರು.  ೧೯೭೧ ರಲ್ಲಿ  ಲಕ್ಷ್ಮಿಕಾಂತ್ ಪ್ಯಾರೇಲಾಲ್, ಸಂಗೀತ ನಿರ್ದೇಶಕರು ಲತಾ ದೀದಿಯ ಜೊತೆ ಹಾಡಿಸಿದ್ದ  ‘ಒಹ್  ದಿನ್  ಯಾದ್ ಕರೋ’,  ಈ  ಹಿಂದಿ ಚಿತ್ರದ ಹಾಡೇ ಅವರು ಹಾಡಿದ  ಕೊನೆಯ ಗೀತೆಯಾಗಿತ್ತು.  ಕಾಲಾನುಕ್ರಮದಲ್ಲಿ ತಲತ್ ರು,  ಒಂದು ಉರ್ದು ಫಿಲಂ ನಲ್ಲೂ ಕೆಲಸಮಾಡಿದರು.  ೨೦೧೬ ರಲ್ಲಿ ಭಾರತ ಸರಕಾರ  ತಲತ್ ರವರ ಗೌರವಾರ್ಥವಾಗಿ ಒಂದು  ಅಂಚೆ ಚೀಟಿ ಯನ್ನು ಹೊರತಂದರು. ೧೯೪೧ ರಲ್ಲಿ ತಮ್ಮ ಕರಿಯರ್  ನ  ಮೊತ್ತ ಮೊದಲ ಗೀತೆಹಾಡಿದ್ದರು.  ಒಟ್ಟಾರೆ ೧೨ ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದರು ಸುಪ್ರಸಿದ್ಧ ಅಭಿನೇತ್ರಿ/ಗಾಯಕಿ  ಸುರಯ್ಯಾ, ಮಾಲ ಸಿನ್ಹ, ನೂತನ್ ಒಟ್ಟಿಗೆ ಅಭಿನಯಿಸಿದ್ದರು. ೪ ದಶಕಗಳ  ಸಮಯದಲ್ಲಿ ತಲತ್ ರವರು ೧೨ ಭಾಷೆಗಳಲ್ಲಿ ಹಾಡಿದ ಒಟ್ಟು  ಗೀತೆಗಳು : ೭೫೦.  (೧೯೪೦-೧೯೮೦)  ೧೯೪೦  ರಲ್ಲೇ ತಲತ್ ಮಹಮೂದ್, ಆಕಾಶವಾಣಿ  ಲಖನೌ, ಮತ್ತು ಲಾಹೋರ್  ಕೇಂದ್ರದಲ್ಲಿ ಹಾಡಲು ಆರಂಭಿಸಿದ್ದರು. 

ತಲತ್ ಮೆಹಮೂದರು ಸ್ಪಷ್ಟ ಉಚ್ಚಾರಣೆಯಿಂದ ಬಂಗಾಳಿ ಹಾಡುಗಳನ್ನು ಸೊಗಸಾಗಿ ಹಾಡುತ್ತಿದ್ದರು. ಇದನ್ನು ಕೇಳುಗರು ಆಸಕ್ತಿ ತೋರಿಸಿದರೂ,  ಚಿತ್ರ ನಿರ್ಮಾಪಕರ್ಯಾರೂ ಅವರನ್ನು  ಆಹ್ವಾನಿಸುತ್ತಿರಲಿಲ್ಲ.  ಎಂ. ಪಿ. ಪ್ರೊಡಕ್ಷನ್  ಕಂಪೆನಿಯವರು ೧೯೪೫ ರಲ್ಲಿ ಬಿಡುಗಡೆಯಾದ ತಮ್ಮ ಚಲನಚಿತ್ರ ರಾಜಲಕ್ಷ್ಮಿಯಲ್ಲಿ ಹಾಡುವ ಜತೆಗೆ ನಟಿಸಲೂ ಆಹ್ವಾನಿಸಿದರು. ಇದು   ‘ತಲತ್ ಮೆಹಮೂದ್,  ನಾಯಕಿ ಕಾನನ್ ದೇವಿ’ಯವರ ಜತೆ ಅಭಿನಯಿಸಿದ  ಮೊದಲನೆಯ ಚಿತ್ರವಾಗಿತ್ತು.  ೨ ಸೋಲೋ ಹಾಡುಗಳನ್ನು ಹಾಡಿದ್ದರು- ಅವುಗಳೆಂದರೆ, ಹೃದಯವನ್ನು  ಜಾಗೃತಗೊಳಿಸುವ ‘ಜಾಗೊ ಮುಸಾಫಿರ್ ಜಾಗೊ’; ‘ಖೊಲೊ ಮನ್ ಕಾ ದ್ವಾರ್‘ಮೊದಲ ಚಿತ್ರದ ಗೀತೆ. ಎರಡನೆಯ ಗೀತೆ, ‘ಜಗ್ ಸೆ, ಕುಛ್ ಆಸ್ ನಹಿ’,  ೨೧ ವರ್ಷದ ಆಗತಾನೆ  ಪಾದಾರ್ಪಣೆ ಮಾಡಿದ ಹೊಸ ಗಾಯಕನೊಬ್ಬನಿಗೆ ಇದೊಂದು ದೊಡ್ಡ ಸಾಧನೆಎಂದೇ ಕೆಲವರು ಅಭಿಪ್ರಾಯ ಪಟ್ಟಿದ್ದರು.

‘ತಲತ್ ಮೆಹಮೂದ್’  ಮಾರನೆಯ ವರ್ಷ,  ತಮ್ಮ ಆಪ್ತ ಸ್ನೇಹಿತನ ಮಾತಿನ ಆಧಾರದ ಮೇಲೆ,  ತಮ್ಮ ಹೆಸರನ್ನು ‘ತಪನ್ ಕುಮಾರ್’ ಎಂದು ಬದಲಾಯಿಸಿಕೊಂಡರು. “ಆಯೇ ರಿಮ್ ಜಿಮ್ ಬೋರೋ ಶಾಯ್”  ಹಾಡುಗಳು ಜನರಿಗೇನೋ  ಇಷ್ಟವಾಯಿತು. ಆದರೆ, ತಲತ್ ಮೊಹಮ್ಮದರ ನಟನೆ ಪ್ರೇಕ್ಷಕರಿಗೆ  ಹಿಡಿಸಲಿಲ್ಲ.  ಹೀಗಾಗಿ,  ಮತ್ತೆ ತಮ್ಮನ್ನು ‘ತಲತ್’ ಎಂದೇ  ಕರೆದುಕೊಳ್ಳಲು ಆರಂಭಿಸಿದರು. ಆದರೆ,  ತಲತ್ ಮೆಹಮೂದ್ ರ ಫಿಲಂ ಗಾಗಿಯೇ  ಹಾಡದ ಕೆಲವು ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆದೊರೆಯಿತು.  ೧೯೪೦ ರ ದಶಕದ ‘ತಸ್ವೀರ್ ತೇರಿ ದಿಲ್ ಮೇರಾ ಬೆಹ್ಲಾ ನ ಸಕೆಗೀ’, ‘ನಿಗಾಹೋನ್ಕೋ ಚುರಾಕರ್ ರೆಹ್ ಗಯೇ ಹೈ; ಮೈ ತೇರಿ ಛಬಿ ಬನಾವುಂಗಾ’,  ಗೀತೆಗಳಲ್ಲದೆ ಅವರದೇ ನಿರ್ಮಿತ, ‘ಹೋಟೋನ್ಸೆ ಗುಲ್ ಫಿಶಾನ್ ಹೈ, ವೋಹ್, ಆಂಖೊನ್ಸೆ ಅಶ್ಕ್ಬಾರ್ ಹುಂ’. ಈ ಎರಡೂ  ತರಹದ ವಿಶಿಷ್ಟ ಕೊಡುಗೆಗಳು ಸಿನಿಮಾಕ್ಕೆ ಮತ್ತು ಸಿನಿಮಾವಲ್ಲದ ವೃತ್ತಿಜೀವನದುದ್ದಕೂ ಹೆಸರು ಬದಲಾಯಿಸಿದ ಮೇಲೂ, ಅವರ ಝಾತಿ ಜಿಂದಗಿಯಲ್ಲಿ ಗಮನಾರ್ಹ ಉನ್ನತಿ ಏನೂ ಆಗಲಿಲ್ಲ. ಕೊನೆಗೆ ೧೯೪೯ ರಲ್ಲಿ ಅವರು ನಿರ್ಣಯಿಸಿದ್ದು ಪುನಃ  ಮುಂಬಯಿಗೆ ಹೋಗಿ, ತಮ್ಮ ನೌಕರಿ ಹುಡುಕುವ  ಪ್ರಯತ್ನವನ್ನು  ಮುಂದುವರೆಸುವುದೆಂದು. 

ಬೊಂಬಾಯಿಗೆ ಹೋದಾಗಿನ  ಪರಿಸ್ಥಿತಿ ಅನುಕೂಲವಾಗಿತ್ತು.  ಅನಿಲ್ ಬಿಸ್ವಾಸ್, ನೌಶಾದ್, ಶ್ಯಾಮ್ ಸುಂದರ್, ಖೇಮ್ ಚಂದ್ ಪ್ರಕಾಶ್, ಬುಲೋ ಸಿ. ಇರಾನಿ, ಲಚ್ಚಿರಾಮ್, ಹಫೀಜ್ ಖಾನ್, ಸ್ನೇಹಾಲ್ ಭಟ್ಕರ್, ಮತ್ತು ಎಸ್. ಮೊಹಿಂದರ್, ಎಲ್ಲರೂ ಯುವ ತಲತ್ ರನ್ನು ಆಹ್ವಾನಿಸಿ ಬರಮಾಡಿಕೊಂಡರು.  ಅನಿಲ್ ಬಿಸ್ವಾಸ್ ಮತ್ತು ಸಿ ರಾಮಚಂದ್ರ ಬಹಳ ಪ್ರೀತಿಯನ್ನು ತೋರಿಸಿದರು.  ೧೯೪೯ ರ ಮುಂಬಯಿಯ ಫಿಲಂ ವಲಯ, ದಲ್ಲಿ ಮೊಹಮ್ಮದ್ ರಫಿ,  ಮುಕೇಶ್ ರಂತಹ  ಹೊಸ ಪ್ರತಿಭೆಗಳು,  ತಮ್ಮ ಪ್ರಭಾವವನ್ನು ಬೀರಿದರು. ಶಂಶಾದ್ ಬೇಗಂ, ಲತಾ, ಸುರೈಯ್ಯ, ಆಗಲೇ ಹೆಸರುಮಾಡಿದ್ದ ಕಲಾವಿದರು.  ಮನ್ನಾಡೆ ಮತ್ತು ಆಶಾ ಭೋಸ್ಲೆ ಇನ್ನೂ  ಭದ್ರ ಹೆಜ್ಜೆ ಇಟ್ಟಿರಲಿಲ್ಲ.  ಚಿತ್ರ ಸಂಗೀತ ರಚನೆಯಲ್ಲಿ ಅನಿಲ್ ಬಿಸ್ವಾಸ್, ನೌಶಾದ್, ಹುಸ್ನ್ ಲಾಲ್ ಭಗತ್ರಾಮ್ ಖೇಮ್ ಚಂದ್ ಪ್ರಕಾಶ್, ಸಿ. ರಾಮಚಂದ್ರ, ಎಸ್. ಡಿ. ಬರ್ಮನ್, ಶಂಕರ್ ಅಂಡ್ ಜೈಕಿಶನ್, ತಮ್ಮ ಪ್ರೌಢಿಮೆಯನ್ನು  ತೋರಿಸಿದ್ದರು. ಚಿತ್ರ ನಿರ್ದೇಶಕ  ಖಯ್ಯಾಮ್ ಸಹಾ ಪ್ರಯತ್ನಿಸುತ್ತಿದ್ದರು. ರಾಜಿಂದರ್ ಕೃಷನ್, ಶಕೀಲ್ ಶೈಲೇಂದ್ರ, ಮತ್ತು ಹಜರತ್, ಮಜ್ರು ಸುಲ್ತಾನ್ ಪುರಿ, ರಾಜ ಮೆಹದಿ ಆಲಿ ಖಾನ್, ಮೊದಲಾದವರು  ‘ಅಂದಾಜ್’, ‘ಬರ್ಸಾತ್’, ‘ಏಕ್ ಥಿ ಲಡ್ಕಿ’ ‘ಮಹಲ್’, ಮೊದಲಾದ ಚಿತ್ರಗಳಿಗೆ  ಒಳ್ಳೆಯ ಸಂಗೀತವನ್ನು ಕೊಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದರು. ಸಿನಿಮಾ ಸಂಗೀತವನ್ನು ಪ್ರೀತಿಸುವವರ ಸಂಖ್ಯೆ ಹೆಚ್ಚಾಗುತ್ತಿತ್ತು. ಒಳ್ಳೆಯ ಸಂಗೀತಗಾರರ ಅವಶ್ಯಕತೆಯೂ  ಹೆಚ್ಚಾಯಿತು. ಕಿಶೋರ್ ಕುಮಾರ್, ಹೇಮಂತ್ ಕುಮಾರ್, ಒ. ಪಿ. ನಯ್ಯರ್, ಸಲೀಲ್ ಚೌಧರಿ, ಮತ್ತು ಮದನ್ ಮೋಹನ್, ಸಾಹಿರ್ ಲುಧಿಯಾನ್ವಿ, ಮತ್ತು ಕೈಫಿ ಆಜ್ಮಿ, ತಲತ್ ತಮ್ಮ ಒಳ್ಳೆಯ ಕಂಠಶ್ರೀ ಮತ್ತು ಹಾಡುಗಳಿಂದ, ಸಂಗೀತ ನಿರ್ದೇಶನದಿಂದ  ಎಲ್ಲರ ಗಮನ ಸೆಳೆದಿದ್ದರು.  

ಅನಿಲ್ ಬಿಸ್ವಾಸ್ ರ,  “ಆಯೇ ದಿಲ್ ಮುಝೆ ಐಸೀ ಜಗಹ್ ಲೇ ಚಲ್ ಜಹಾ ಕೋಯೀ ನ ಹೋ” ಎಂಬ ಗೀತೆಯನ್ನು ಚಿತ್ರ  “ಆರ್ಜೂ”  ಗಾಗಿ ತಲತ್ ಹಾಡಿದ್ದರು. ಖರೆ ಎಂದರೆ,  ಆ ಗಜಲ್ ಗೆ  ದಿಲೀಪ್ ಕುಮಾರ್ ಅಭಿನಯಿಸಿದ್ದರು ಸಹಿತ.  ಈಗ ತಲತ್ ಮಹಮೂದ್ ಎಲ್ಲರ ಗಮನಕ್ಕೆ ಬಂದಿದ್ದರು. ಅನೇಕ ನಟರು ತಮಗೆ ಕಂಠದಾನ ಮಾಡಲು ಅರಿಕೆ ಮಾಡಿಕೊಂಡರು. ಅವರ ಪಿಸುಗುಟ್ಟುವ ಗಾಯನ ಶೈಲಿಯ ಮಿಠಾಸ್, ಮಧುರ- ಮೃದು-ಧ್ವನಿತರಂಗಗಳನ್ನು ಮೆಚ್ಚಿದವರು ಹಲವಾರು ಮಂದಿ. ಇನ್ನೊಂದು ವಿಷಯವೆಂದರೆ, ಸಿನಿಮಾಕ್ಕಾಗಿಯೇ ಹಾಡದೆ, ಹಾಗೆಯೇ  ರೆಕಾರ್ಡ್ ಮಾಡಿದ,  ಫಯ್ಯಾಸ್ ಹಶ್ಮಿ ಮತ್ತು ಸಂಗೀತ ನಿರ್ದೇಶಕ ಕಮಲ್ದಾಸ್ ಗುಪ್ತ ರಚಿಸಿದ ಹಾಡುಗಳು ಎಲ್ಲರಿಗೂ ಪ್ರಿಯವಾದವು. 

ಹಿಂದಿ  ಚಿತ್ರರಂಗಕ್ಕೆ ಲಗ್ಗೆಹಾಕಿದ  ತಲತ್  ಮೆಹಮೂದ್ ಛಾಪಿನ ಗೀತೆಗಳೆಂದು ಕರೆಯಲಾಗುವ ಮಕ್ಮಲ್ ವಸ್ತ್ರದ ತರಹ ಜಾರಿಕೆಯ  ನುಣುಪು, ಬೆಣ್ಣೆಯ ತರಹದ ಮೃದುತ್ವದ  ಲೇಪನದ  ಧ್ವನಿಯನ್ನು ತಮ್ಮ ಪ್ರಿಯತಮೆಯ ಕಿವಿಯಲ್ಲಿ ಉಸುರುತ್ತಿರುವರೋ ಎನ್ನುವ ಭಾವ ಅವರ ಹಾಡುಗಾರಿಕೆಯ ಹೆಚ್ಚುಗಾರಿಕೆಯೆಂದು ಗಜಲ್ ಸಂಗೀತವನ್ನು ತಿಳಿದವರು  ಹೇಳುವುದುಂಟು. ಇಷ್ಟು ಮಾರ್ದವತೆ, ವಿರಹ, ಕಂಪನ, ಶೋಕ ಸಂದೇಶ, ಮಾನಸಿಕ ತಲ್ಲಣ, ಮೊದಲಾದ ಹೃದಯದ  ಸಂವೇದನೆಗಳನ್ನು ಪಿಸುಮಾತಿನಲ್ಲಿ  ಉಸಿರುಸುವ  ಪರಿ, ಬೇರೆ ಇನ್ನಾವ ಗಾಯಕರಲ್ಲೂ  ಕಾಣಲಾಗದೆನ್ನುವುದು ಗಜಲ್ ತಜ್ಞರ ಅಂಬೋಣವಾಗಿದೆ.  ತಲತ್ ರವರ ಹಾಡುಗಳನ್ನು ಕೇಳಿದನಂತರ ಬೇರೆಯವರ ಹಾಡುಗಳಿಗೆ ಹೋಲಿಸಿದರೆ, ಅದರ ಗುಟ್ಟು ಗೊತ್ತಾಗುತ್ತದೆ. ಮುಂದೆ ಹಿಂದಿ ಫಿಲಂ ಸಿನಿ-ಸಂಗೀತ ಗಾಯಕ, ಮುಕೇಶ್ ತಮ್ಮ ದನಿಯಲ್ಲಿ ಆ ಮಾಧುರ್ಯವನ್ನು ತುಂಬಲು ಪ್ರಯತ್ನಿಸಿ, ಮೊದಲು ತಮ್ಮ ಗುರು ಕೆ. ಎಲ್ ಸೈಗಲ್ ರನ್ನು ಅನುಕರಿಸಿ ನಂತರ ತಮ್ಮದೇ ರೀತಿಯಲ್ಲಿ ಹಾಡುವ ಜಾಡನ್ನು ಕಂಡುಕೊಂಡರು.  ಇಂಗ್ಲೀಷ್ ಕವಿ ಶೆಲ್ಲಿಯವರು ಒಂದು ಸಂದರ್ಭದಲ್ಲಿ  ಹೇಳುವಂತೆ, “The pleasure that is in sorrow is sweeter than the pleasure of pleasure itself”   ಎನ್ನುವುದು ತಲತ್ ಹಾಡುವ ಗೀತೆಗಳಲ್ಲಿ ಪ್ರತಿಧ್ವನಿಸುತ್ತದೆ. ಶೆಲ್ಲಿಯಿಂದ ಪ್ರೇರಣೆ ಪಡೆದ ಗಾಯಕರಲ್ಲಿ ಶೈಲೇಂದ್ರ ಒಬ್ಬರು. ಅದರ ಒಂದು ಝಲಕ್ ನ್ನು  ಪತಿತ ಚಿತ್ರದ ಗೀತೆಯಲ್ಲಿ ಕಾಣಬಹುದು.  “Our sweetest songs are those that tell of saddest thoughts”, ಇದು ತಲತ್ ರವರ ಹೃದಯಾಂತರಾಳದಿಂದ ಭುಗಿಲೆದ್ದು ಅವರ ಕಂಠದಿಂದ ಹೊರಹೊಮ್ಮುತ್ತದೆಂದು ರಸಿಕರ ಅಂಬೋಣವಾಗಿದೆ. 

“ ದೇವ್ ಆನಂದ್  ಮತ್ತು ಉಷಾ ಕಿರಣ್”ಅಭಿನಯಿಸಿದ ಚಿತ್ರದಲ್ಲಿ ತಲತ್  ಅವರಿಗೆ ಒದಗಿಸಿದ ಗೀತೆ, ನಾಯಕ ನಟ ದುರಾಸೆಯ ಸ್ವಭಾವದ  ನಾಯಕಿಯ ಮನಸ್ಸನ್ನು ಸಮಾಧಾನ ಮಾಡುವ ಪರಿಯದ್ದು. ಅದನ್ನು ಸುಂದರವಾಗಿ ನಿರೂಪಿಸಿದ್ದು ತಲತ್ ಮೆಹಮೂದ್ ರವರ ಹಾಡಿನ ವೈಖರಿಯಲ್ಲದೆ ಮತ್ತೇನು ?  

ತಲತ್ ಮೊಹಮದ್  ಮತ್ತೆ ಮತ್ತೆ ಗಝಲ್ ರಾಜನೆಂದು ಪ್ರಸಿದ್ಧಿಗಳಿಸಿದ ಸುಮಧುರ ಸಂವೇದನೆಗಳನ್ನೆಲ್ಲಾ  ಹೊಯ್ದು ಹಾಡಿದ ಗಾಯನಕ್ಕೆ ಒಂದು ಮಹತ್ವವನ್ನು ತಂದು ಕೊಟ್ಟಿದ್ದಾರೆ. 

ಸುಜಾತ ಚಿತ್ರದ  “ಜಲ್ ತೇ ಹೈ ಕಿಸ್ ಕೆ ಲಿಯೇ; ತೇರಿ ಆಂಖೊಮ್ ಕೆ ದಿಯೆ ”  ಮನಕಲಕುವ ರಚನೆ, ಅದ್ಭುತವಾಗಿ ತಮ್ಮ ಮೆಲು ದನಿಯಲ್ಲಿ  ಹಾಡಿ ಸನ್ನಿವೇಶದ ಮಹತ್ವವನ್ನು ಮೇರುಮಟ್ಟಕ್ಕೆ ಕೊಂಡೊಯ್ದು  ಅಮರವಾಗಿಸಿದ್ದಾರೆ. ಹಾಡುವಾಗ  ಹಾರ್ಮೋನಿಯಂ ತಮ್ಮ ಜತೆಗೂಡುವುದು,  ಹಲವಾರು ಬಾಲಿವುಡ್ ಗಳ ಸಂಗೀತಕಾರರ  ‘ಆದತ್’ ಎಂದು ಹೇಳಬಹುದು. ಮಜ್ರೂ  ಸುಲ್ತಾನ್ ಪುರಿಯವರ ಕೃತಿಗಳಲ್ಲಿ ಆ ಮಟ್ಟದ ಭಾವೋದ್ವೇಗ ಸ್ಥಿತಿಯನ್ನು ನಾವು ಕೇಳಬಹುದು. 

ಅದೇ ತರಹ, ಎಸ್. ಡಿ. ಬರ್ಮನ್ ನೀಡಿದ ರಚನೆಯಲ್ಲಿ ಸಾಹಿರ್ ಲುಧಿಯಾನ್ವಿಯವರ  ಬರಹದ, ಸುಂದರ ರಚನೆಯನ್ನು ತಮ್ಮ ಅನೌಖ ದನಿಯಲ್ಲಿ ಹಾಡಿದ ಶ್ರೇಯಸ್ಸು ತಲತ್ ರವರಿಗೆ ಸೇರಬೇಕು. ಹಿಂದಿ ಮತ್ತು ಉರ್ದು ಭಾಷೆಗಳನ್ನು ಆರಾಧಿಸುತ್ತಿದ್ದ ತಲತ್ ರವರು, ಕಾಲದ  ಹೃದಯಾಂತರಾಳದಲ್ಲಿ ಇಳಿದು ತಮ್ಮ ದನಿಯಲ್ಲಿ ಮೃದುವಾದ  ಸಂವೇದನೆಗಳನ್ನು  ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದರು.  ಇನ್ನೊಂದು ವಿಷಯವೆಂದರೆ, ಅವರು ಫಿಲಂಗಳಿಗಾಗಿಯೇ  ಹಾಡದ ಹಲವಾರು ಪ್ರೈವೇಟ್  ಗೀತೆಗಳು ಒಂದು ವಿಕ್ರಮವನ್ನೇ ಸಾಧಿಸಿವೆ. ಮೃದು ಮಧುರ ಕಂಪನದಿಂದ  ಕೂಡಿದ ಶಾಸ್ತ್ರೀಯ ಶೈಲಿಯಲ್ಲದ  ಸರಳ ಗಜಲ್ಸ್, ಮುಂದೆ ಜಗ್ ಜಿತ್ ಸಿಂಗ್, ಪಂಕಜ್ ಉಧಾಸ್ ಮತ್ತು ಚಂದನ್ ದಾಸ್ ಮೊದಲಾದವರು ತಲತ್ ಶೈಲಿಯನ್ನೇ ಆಧರಿಸಿ ಮುಂದುವರೆದರು. ವಿಶಿಷ್ಠ ಭಾವೋದ್ವೇಗವನ್ನು ಅವರು  ಹಾಡಿದ  ಗಜಲ್ ಗಳಲ್ಲಿ ಗುರುತಿಸಬಹುದು. 

“ತಸ್ವೀರ್ ತೇರಿ ದಿಲ್ ಮೇರಾ ಬೆಹ್ ಲಾ ನ  ಸಕೇಗ” ಎಂಬ ಗೀತೆ, ಫಯಾಜ್ ಹಶ್ಮಿ ರಚಿಸಿದ ಗೀತೆ, ಕಮಲ್ ದಾಸ್ ಗುಪ್ತ ಸಂಗೀತ ಅಳವಡಿಸಿದ್ದರು. ೧೯೪೦ ರ ದಶಕದ ಆಕಾಶವಾಣಿ ಗೀತೆಗಳನ್ನು ಕೇಳುಗರ ಮನಸ್ಸಿನ ಮೇಲೆ ಅದ್ಭುತ ಪರಿಣಾಮ ಮಾಡಿದ್ದರು. ಅನೇಕ ಬಂಗಾಳಿ ಗೀತೆಗಳನ್ನು ಹಾಡಿದ್ದರು. ಬೊಂಬಾಯಿಗೆ ಪಾದಾರ್ಪಣೆ ಮಾಡಿದ ಸಮಯದಲ್ಲಿ ಹಿಂದಿ  ಫಿಲಂ ಇಂಡಸ್ಟ್ರಿಯಲ್ಲಿ “ಏಕ್ ಬಡಾ ಹಲ್ ಚಲ್ ಮಚಾ ದಿಯಾ” ಎನ್ನುವ ತರಹದ ಸಂವೇದನೆಯನ್ನು ಉಂಟು ಮಾಡಿದರು. ಸಂಗೀತದ ಉತ್ಕೃಷ್ಟ, ಮೇರು ಕಲಾವಿದರನ್ನು ಮತ್ತು  ಸಾಮಾನ್ಯ ಜನರ ಆಸಕ್ತಿಗಳನ್ನೂ ಗಮನದಲ್ಲಿಟ್ಟುಕೊಂಡು ಹಾಡಿದ ಗೀತೆಗಳು, ಹಾಗೂ ಗಝಲ್ ಗಳನ್ನು  ಇಂದಿಗೂ  ಮರೆಯಲು ಸಾಧ್ಯವಿಲ್ಲ.  

ಹಿಂದಿ ಫಿಲಂ ಲೈನ್ ನಲ್ಲಿ  ಶ್ರೇಷ್ಠ ನಟ ದಿಲೀಪ್ ಕುಮಾರ್ ಮೊದಲುಗೊಂಡು  ಎಲ್ಲರೂ  ತಲತ್ ಮಹ್ಮೂದರನ್ನು  ಒಬ್ಬ “ಜಂಟಲ್ ಮನ್ “ಎಂದೇ  ಸಂಬೋಧಿಸಿ ಗೌರವಿಸುತ್ತಿದ್ದರು. ಕೇವಲ ಅವರ ಸೂಟು-ಬೂಟ್ ಉಡುಪನ್ನು  ನೋಡಿ ಈ ಮಾತು ಹೇಳಿದ್ದಲ್ಲ. ತಮ್ಮ ಹಾವ-ಭಾವ ಮತ್ತು ನಡವಳಿಕೆಗಳಿಂದಲೂ ಅವರು ಬಹಳ ಮೃದುಸ್ವಭಾವದ ಯಾರನ್ನೂ ನೋಯಿಸದ ಮನಸ್ಥಿತಿಯವರಾಗಿದ್ದರು.  ಎನ್ನುವುದು ಎಲ್ಲರ ಗಮನಕ್ಕೆ ಬಂದಿದೆ,  ಗರಿಮಾಸದ ಸೂಟ್ ಉಟ್ಟು, ಮಿರುಗುಟ್ಟುವ ಶೂ ತೊಡುತ್ತಿದ್ದರು. ಅವರು ಹಾಡುತ್ತಿದ್ದ ಯಾವುದೇ  ಹಾಡಿನಲ್ಲಿ, ನವಿರು, ತಾಜಾಪನ್, ಅಪ್ನಾಪನ್, ಮಾರ್ದವತೆ  ಎದ್ದು ತೋರುತ್ತಿತ್ತು, ಎನ್ನುವುದನ್ನು  ನೆನೆಪಿಸಿಕೊಂಡರೆ, ಅವರು ಹಾಡಿದ ಪ್ರತಿ ಚಿತ್ರಗೀತೆಯೂ ಒಂದು ವಿಶೇಷ ಛಾಪನ್ನು ಸಿನಿ-ರಸಿಕರಮೇಲೆ, ಇಲ್ಲವೇ ಕೇಳುಗರಮೇಲೆ ಪರಿಣಾಮಬೀರಿರುವುದು ವಿದಿತವಾಗುತ್ತದೆ. 

ತಲತ್ ಮೆಹಮೂದ್ ಹಾಡಿದ ಗೀತೆಗಳು ಹಾಗು ಫಿಲಂ ಗಳು :

‘ಸಪ್ನೋಂ ಕಿ ಸುಹಾನಿ ದುನಿಯಾ ಕೋ’  (ಶಿಕಸ್ತ್ ), 

‘ಹಮ್ಸೆ  ಆಯಾ ನ ಗಯಾ (ದೇಖ್ ಕಬೀರಾ ರೋಯಾ), 

 ‘ಜಾಯೆ ತೊ ಜಾಯೆ ಕಹಾಂ’ (ಟ್ಯಾಕ್ಸಿ ಡ್ರೈವರ್ ),

 “ತಸ್ವೀರ್ ಹು” (ಬರಾದಾರಿ ), 

“ಸಿನೇಮೇ ಸುಲಗ್ತೆ ಹೈ ಆರ್ಮಾನ್” (ತಾರಾನಾ)

‘ಶಾಮ್-ಎ-ಗಮ್ ಕಿ ಕಸಮ್’ (ಫುಟ್ ಪಾತ್ ), 

“ಮೇರಿ ಯಾದ್ ಮೇ ತುಮ್ ನಾ ” ( ಮಧೋಶ್), 

‘ಫಿರ್ ವೊಹಿ ಶಾಮ್ ವೊಹೀ ಗಮ್ ’ (ಜಹಾನಾರಾ ),

ಆಯೆ ಮೇರೇ ದಿಲ್ ಔರ್ ಚಲ್’ (ದಾಗ್ ),

‘ಜಿಂದಗಿ ದೇನೇ ವಾಲೆ ಸನ್’ (ದಿಲ್ ಎ-ನಾದಾನ್ )

ಮಧುರ ಗೀತೆಗಳನ್ನು ಆಸ್ವಾದಿಸುವ ಜನರಿದ್ದ ಕಾಲದಲ್ಲಿ, ಮೃದು ಕಂಠಕ್ಕೆ ಬಹಳ ಆದ್ಯತೆ ಇತ್ತು.        

ಅವರು ಹಾಡಿದ ಯುಗಳ ಹಿಟ್ ಗೀತೆಗಳು :

ಇತ್ನಾ  ನ  ಮುಜ್ ಸೆ ತು ಪ್ಯಾರ್ ಬಢಾ (ಛಾಯ)

ದಿಲ್ -ಎ-ನಾದಾನ್   ತುಝೆ ಹುವಾ ಕ್ಯಾ ಹೈ (ಮಿರ್ಜಾ ಗಾಲಿಬ್),  

ಕೆಹ್ತಾ ಹೈ ದಿಲ್ ತುಮ್ ಹೊ ಮೇರೇ ಲಿಯೇ (ಮೆಮ್ ಸಾಹಿಬ್) 

ಪ್ಯಾಸ್ ಕುಚ್ ಔರ್ ಭೀ ಬಢಾದಿ (ಲಾಲಾ ರುಖ್) 

“ಪ್ಯಾರ್ ಪರ್ ಬಸ್ ತೊ ನಹೀ ಹೈ”(ಸೋನೇ ಕಿ ಚಿಡಿಯಾ) ಲತಾ ಮಂಗೇಶ್ಕರ್, ಸುರಯ್ಯಾ, ಮತ್ತು ಆಶಾ. ಭೋಸ್ಲೆ  ಹಾಡಿದ ಗೀತೆಗಳು ರಸಿಕರ ಮನಸ್ಸಿನಲ್ಲಿ ಮನೆಮಾಡಿವೆ. 

ಲಾಲಾ ರುಖ್, ಸೋನೇ ಕಿ ಚಿಡಿಯ, ದಿಲ್ ಎ -ನಾದಾನ್,  ಡಾಕ್ ಬಾಬು,  ರಫ್ತಾರ್,  ಗಾವ್ ಕಿ ಕಹಾನಿ, ಮತ್ತು ಅನೇಕ ಚಿತ್ರಗಳು.

ಹಿಂದಿಚಿತ್ರದ ಮೇರು ಬಹುಮುಖ ವ್ಯಕ್ತಿತ್ವದ ಗಾಯಕ/ಗೆಳೆಯ. ಮೊಹಮ್ಮದ್ ರಫಿಯವರು  ನಿಧನರಾದಾಗ, ‘ಓ  ಖುದಾ ಅವರ ಬದಲು ನನ್ನ ಪ್ರಾಣ ತೆಗೆದುಕೊಂಡಿದ್ದರೆ ಚೆನ್ನಾಗಿತ್ತು;  ನನಗಿಂತ  ಮಹತ್ವದ ಗಾಯಕ  ರಫಿಯವರ ಹಾಡಿನ ಕೊಡುಗೆಯ ಅವಶ್ಯಕತೆ ಬಹಳವಿದೆ’ ಎಂದು ತಲತ್ ಪ್ರತಿಕ್ರಿಯಿಸಿದ್ದರು. ಈ ಇಬ್ಬರು ಮೇರು ಕಲಾವಿದರು ಒಟ್ಟಾಗಿ ಸುಶೀಲ ಚಿತ್ರದಲ್ಲಿ’ ಗಮ್ ಕಿ ಅಂಧೇರಿ ರಾತ್ ಮೇ‘ ದನಿ ಸೇರಿಸಿದ್ದರು. 

ತಲತ್ ಮೆಹಮೂದ್  ತಮ್ಮ ಬಾಲ್ಯದ ದಿನಗಳು :

‘ತಲತ್ ಮೆಹ್ಮೂದ್’ ತಮ್ಮ ಊರಿನ ಶಾಲೆಯ ಸಮಾರಂಭವೊಂದರಲ್ಲಿ ಹಾಡಿದಾಗ, ಅರ್ಧಹಾಡನ್ನು  ಹಾಡಿದ ಮೇಲೆ ಮುಂದೆ ಹಾಡಲು  ಮರೆತಿದ್ದ ಸಂಗತಿಯನ್ನು ನೆನೆಸಿಕೊಳ್ಳುತ್ತಾರೆ.  ಮುಂದೆ  ಮುಂಬಯಿಯ  ಹಿಂದಿ ಚಿತ್ರರಂಗಕ್ಕೆ ಬಂದು ಸೇರಿ ಶೆಹನ್ ಶಾ ಎ-ಗಝಲ್- ಎಂದು  ಹೆಸರುಮಾಡಿದರು.   ತಲತ್  ಮಹಮದ್  ಜನಿದ್ದು ಲಖನೌ ನಗರದಲ್ಲಿ ೨೪, ಫೆಬ್ರವರಿ ೧೯೨೪ ರಂದು. ಅವರ  ಸ್ಕೂಲಿಂಗ್ ಎಲ್ಲ ಆಲಿಘಡ್ ನಲ್ಲಿ ಜರುಗಿತು. ಮನೆಯಲ್ಲಿ ಬಿಜಿನೆಸ್ ವಾತಾವರಣ  ಪರಿವಾರದಲ್ಲಿ ಯಾರಿಗೂ ಸಂಗೀತದ ಬಗ್ಗೆ ಆಸಕ್ತಿ ಇರಲಿಲ್ಲ. ಆದರೆ ಹುಡುಗ ತಲತ್ ಮಹಾಮೂದರಿಗೆ  ಸಂಗೀತವೆಂದರೆ ಪ್ರಾಣ. ಇದನ್ನುಸೂಕ್ಷ್ಮವಾಗಿ  ಗಮನಿಸಿದ ಅವರ ‘ಬುವಾ’ (ತಂದೆಯವರ ತಂಗಿ) ಅವರ ಮನೆಯವರನ್ನು ಸಮಝಾಯಿಶಿ ಒಂದು ‘ಗ್ರಾಮಫೋನ್’ ತರಿಸಿಕೊಟ್ಟರು. ಬಾಲಕ ತಲತ್ ಗೆ  ಸ್ವರ್ಗವೇ ಕೈಗೆ ಸಿಕ್ಕಹಾಗಾಯಿತು. ದಿನ-ರಾತ್ರಿಯೆನ್ನದೆ ಹಾಡುಗಳನ್ನು ಕೇಳಿ ಆನಂದಿಸಿದರು. 

ಆದಿನಗಳಲ್ಲಿ ‘ಕುಂದನ್ ಲಾಲ್  ಸೈಗಲ್’ ರ  ಹಾಡುಗಳು ಎಲ್ಲೆಲ್ಲೂ ಪ್ರಚಲಿತದಲ್ಲಿತ್ತು. ಅವರ ಗೀತೆಗಳನ್ನು ಗ್ರಾಮಫೋನ್ ನಲ್ಲಿ ಕೇಳಿ,  ಅವರ  ತರಹವೇ ಹಾಡಲು ಅನುಕರಣೆ ಮಾಡಿ ಹಾಡಲು ಪ್ರಯತ್ನಿಸುತ್ತಿದ್ದರು.  ಹೆಚ್ಚು ಕಡಿಮೆ ಸೈಗಲ್ ರಂತೆಯೇ ಹಾಡುತ್ತಿದ್ದುದನ್ನು ಅವರ ಗೆಳೆಯರು ಗುರುತುಹಚ್ಚಿದರು. ಒಮ್ಮೆ ಆಲಿಘಡ್ ನಲ್ಲಿ ಅವರು ಓದುತ್ತಿದ್ದ ಶಾಲೆಯಲ್ಲಿ ಒಂದು ಹಾಡಿನ ಕಾರ್ಯಕ್ರಮದ ಆಯೋಜನೆಯಾಯಿತು.  ಅದರಲ್ಲಿ ಭಾಗವಹಿಸಿದ  ತಲತ್, ‘ಯಹೂದಿ ಕಿ ಲಡ್ಕಿ’ ಎಂಬ  ಫಿಲಂ ನಲ್ಲಿ ಸೈಗಲ್ ಹಾಡಿದ್ದ ಗೀತೆಯನ್ನೇ ಹಾಡಿದರು. ಗಾಲಿಬ್ ರಚಿಸಿದ ಹಾಡನ್ನು ಪೂರ್ತಿಯಾಗಿ ಹಾಡಲು ಮರೆತು, ಅರ್ಧದಲ್ಲಿಯೇ ಸ್ಟೇಜ್ ನಿಂದ ಕೆಳಗಿಳಿದರು. ಅವರ  ಗೆಳೆಯರೆಲ್ಲಾ ಆಡಿಕೊಂಡು ನಕ್ಕಿದ್ದನ್ನು ಅವರು ಎಂದೂ ಮರೆಯಲಿಲ್ಲ. ಈ ಅನುಭವ  ಅವರಿಗೆ ಒಂದು ತರಹದ ಬುದ್ಧಿಯನ್ನು ಕಲಿಸಿತು. ಯಾವುದೇ ಸಾಧನೆಮಾಡಲು ಪರಿಶ್ರಮ ಅತ್ಯಗತ್ಯ, ತೀವ್ರವಾಗಿ ಅಭ್ಯಾಸ ಮಾಡುವ ಜುನೂನನ್ನು  ಮೈಗೂಡಿಸಿಕೊಳ್ಳುವ ಅಗತ್ಯ ಮನಗಂಡರು. ಮುಂದೆ ಹೈಸ್ಕೂಲ್ ವಿದ್ಯಾಭ್ಯಾಸ ಮುಂದುವರೆಸುವ ಗೀಳಿಗೆ ಹೋಗದೆ ಸಂಗೀತ ಕಲಿಕೆಯ ಮೇಲೆಯೇ  ತಮ್ಮ ಎಲ್ಲಾ ಒತ್ತಡವನ್ನು ಹಾಕುತ್ತಿದ್ದರು. ಪುನಃ ಅವರು ಲಕ್ನೋ ನಗರಕ್ಕೆ ಹೋಗಿ ‘ಮಾರಿಸ್ ಸಂಗೀತ ಕಾಲೇಜ್’  ನಲ್ಲಿ ಸೇರಿಕೊಂಡರು. ಆ ಕಾಲೇಜಿನ ಶಿಕ್ಷಣ ಸಮಿತಿ ಯಾವುದೇ ವಿದ್ಯಾರ್ಥಿಗೆ ಕಾಲೇಜಿಗೆ ಸೇರಲು  ಹಲವಾರು ಮೌಖಿಕ ಪ್ರಶ್ನೆಗಳನ್ನು ಕೇಳಿ ಸಂವಾದದ ಮುಖೇನ  ಆ ವಿದ್ಯಾರ್ಥಿ ನಿಜವಾಗಿಯೂ ಹಾಡುಗಾರಿಕೆಯಲ್ಲಿ ಪ್ರಶಿಕ್ಷಣ ಪಡೆಯಲು ಯೋಗ್ಯನೇ ? ಮೂಲತಃ ಹಾಡುವ ಕ್ಷಮತೆ ಇದೆಯೇ ?   ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ‘Selection Committee’ ಯವರು ಒಂದು ರಾಗದ ಬಗ್ಗೆ ಪ್ರಶ್ನಿಸಿದಾಗ, ತಲತ್ ಒಂದು ಸುದೀರ್ಘವಾದ  ಆಲಾಪನೆಯನ್ನು  ಮಾಡಿ ಎಲ್ಲರನ್ನೂ ಚಕಿತಗೊಳಿಸಿದರು. ಚುನಾವಣಾ  ಸಮಿತಿಯವರು ತಲೆತೂಗಿ, ತಕ್ಷಣವೇ ಕಾಲೇಜಿಗೆ ಭರ್ತಿಯಾಗಲು ಅನುಮತಿ ಕೊಟ್ಟುಬಿಟ್ಟರು. ಈ ತರಹದ ಸುದ್ದಿಗಳು ಹೆಸರಾಂತ ಎಚ್. ಎಂ. ವಿ. ರೆಕಾರ್ಡಿಂಗ್ ಕಂಪೆನಿಯವರ ಕಿವಿಗೂ  ಮುಟ್ಟಿತು. ಆಗಿನ್ನೂ ತಲತ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಾಲವದು. ಆಗಲೇ ಅವರು  ತಮ್ಮ ಸ್ಟುಡಿಯೋಗೆ  ತಲತ್ ರವರನ್ನು  ಕರೆಸಿ ೪-೫ ಗಜಲ್ ಗೀತೆಗಳನ್ನು  ಹಾಡಲು ಹೇಳಿದರು. (ಒಂದು ಗಜಲ್ ಗೆ ೩೦ ರೂಪಾಯಿನಂತೆ, ಹಣವೂ ದೊರೆಯಿತು) 

ಮುಂದೆ ಇದೇ ವಿದ್ಯಾ ಸಂಸ್ಥೆ  “ಭಟ್ಖಂಡೆ ಮ್ಯೂಸಿಕ್ ಅಕಾಡೆಮಿ” ಎನ್ನುವ ಹೆಸರಿನಲ್ಲಿ ಮುಂದುವರೆಯಿತು ಅಲ್ಲಿ ಸ್ವಲ್ಪ ಕಾಲ ಹಾಡುಗಾರಿಕೆಯನ್ನು  ಅಭ್ಯಾಸ ಮಾಡಿದ ತರುವಾಯ, ಅವರು ಕಲ್ಕತ್ತ ನಗರಕ್ಕೆ ಹೋದರು. ಆ ದಿನಗಳಲ್ಲಿ ಕಲ್ಕತ್ತ ನಗರ,  ಕಲೆ, ಸಾಹಿತ್ಯ, ಅಭಿನಯ, ಮೊದಲಾದ ಲಲಿತ ಕಲೆಗಳಿಗೆ  ಒಂದು ಹಬ್ (ಪ್ರಮುಖ ಕೇಂದ್ರ)  ವೆಂದು  ಹೆಸರು ಗಳಿಸಿತ್ತು. ಅಲ್ಲದೆ ತಲಕ್ ಮಹಮದ್ ರ ಆರಾಧ್ಯ ಗುರು,  ಕೆ. ಎಲ್. ಸೈಗಲ್ ರೂ ಕಲ್ಕತ್ತಾನಗರದಲ್ಲೇ  ವಾಸವಾಗಿದ್ದರು. ಅವರನ್ನು ಭೇಟಿಯಾಗುವುದು  ತಲತ್ ಮೆಹಮೂದ್  ಅವರ ಪರಮೋದ್ದೇಶವಾಗಿತ್ತು.  ಹೀಗೆಯೇ ಫಿಲಂ, ಲೈನ್ ನಲ್ಲಿ ತಲಕ್  ಬಗ್ಗೆ  ಆಗುತ್ತಿದ್ದ ಪ್ರಚಾರದ ಸುದ್ದಿ ಅವರ ಕಿವಿಗೂ  ತಲುಪಿತು. ಜನಪ್ರಿಯ ಗಾಯಕ  ಸೈಗಲ್  ರನ್ನು ಭೆಟ್ಟಿಯಾಗಲು ತೊಂದರೆಯೇನು ಆಗಲಿಲ್ಲ. 

ಹೀಗೆ ತಲತ್ ರವರ ಜೀವನದ ಎರಡನೆಯ ಇನ್ನಿಂಗ್ಸ್ ಶುರುವಾಯಿತು :

ಮೊದಲು ತಮ್ಮಮನೆಯವರು ನಾಮಕರಣ ಮಾಡಿದ ಹೆಸರು,  ‘ತಲತ್ ಮೆಮೂದ್’ ಎಂಬ ತಮ್ಮ ಹೆಸರನ್ನು ‘ತಪನ್ ಕುಮಾರ್’  ಎಂದು ಬದಲಾಯಿಸಿಕೊಂಡರು. ಅವರಿಗೆ  ಎಚ್. ಎಂ ವಿ ಕಂಪೆನಿಗೆ  ಒಂದು ಅಲ್ಬಮ್ ಗೆ ಕಂಠದಾನ ಮಾಡಲು ಕರೆಬಂದಾಗ,  ಕಮಲ್ ದಾಸ್ ಗುಪ್ತರವರು ಹೆಸರನ್ನು  ಬದಲಾಯಿಸಲು ಸಲಹೆ ಮಾಡಿದರು. ಆಗ ತಲತ್ ಮೆಹಮೂದ್  ರವರು  ತಮ್ಮ ಧ್ವನಿಯನ್ನು ನೀಡಿ  ಸಹಕರಿಸಿದರು.  ಸಂಗೀತ  ಗುರುವೆಂದು ಜೀವನದಲ್ಲಿ ಆಗಿಬಂದ  ಕಮಲ್ ದಾಸ್ ಗುಪ್ತ, ಹೇಮಂತ್ ಚಟರ್ಜಿ ಎನ್ನುವ ಬಂಗಾಳಿ ಕಲಾವಿದನ ಹೆಸರನ್ನು  ಹೇಮಂತ್ ಕುಮಾರ್  ಎಂದು ಹೆಸರು ಬದಲಾಯಿಸಿ  ಪರಿಚಯಿಸಿದವರು.  ಬಂಗಾಳಿ ಭಾಷೆಯ ಶಬ್ದಗಳನ್ನು ಸ್ಪಷ್ಟವಾಗಿ ಕಲಿಯಲು ಹೇಳಿ, ಹಾಡುವಾಗ ಗಟ್ಟಿಯಾಗಿ ಪದಗಳನ್ನು ಹೇಳುವಂತೆ ಆದೇಶಿಸಿದರು. ಈ ಪದ್ಧತಿಯನ್ನು ಅನುಸರಿಸಿ ತಲತ್ ಬಂಗಾಳಿ ಹಾಡುಗಳನ್ನು ಬಹಳ ಸುಶ್ರಾವ್ಯವಾಗಿ ಹೇಳುವರೆಂಬ ಹೆಗ್ಗಳಿಕೆಗೆ ಪಾತ್ರರಾದರು. ನೋಡಲು ಸ್ಪುರದ್ರೂಪಿಯಾಗಿದ್ದ  ಅವರಿಗೆ,  ನಟಿಸಲು ಆಹ್ವಾನವೂ ದೊರಕಿತು. ಸಹಜವಾಗಿ  ನಟನೆಗೆ ಹಾಡುಗಾರಿಕೆಗಿಂದ  ಬಹಳ ಮಹತ್ವವಿತ್ತು.  ಅವರು  ಅಭಿನಯಿಸಿದ ಮೂರು  ಚಿತ್ರಗಳಲ್ಲಿ  ೧೯೪೫ ರಲ್ಲಿ ಬಿಡುಗಡೆಯಾದ ರಾಜಲಕ್ಷ್ಮಿ, ೧೯೪೭ ರ  ತುಮ್ ಔರ್ ಮೈ’  ಚಿತ್ರದಲ್ಲಿ ಹೆಸರಾಂತ ನಟಿ,  ಕಾನನ್ ದೇವಿ ಜತೆಯಲ್ಲಿ ಅಭಿನಯಿಸಿದ್ದರು. ನಿಧಾನವಾಗಿ  ಬಾಂಗ್ಲಾ ಹಾಡಿನ ಗೀಳಿನಿಂದ  ಹೊರಗೆ ಬಂದು,  ಕಲ್ಕತ್ತನಗರಕ್ಕೆ ವಿದಾಯ ಹೇಳಿ  ೧೯೪೯ ರಲ್ಲಿ ಬೊಂಬಾಯಿಗೆ ಬಂದರು.

ಬೊಂಬಾಯಿನಲ್ಲಿ  ಅನಿಲ್ ಬಿಸ್ವಾಸ್  ತಮ್ಮ “ಆರ್ಜು” ಎನ್ನುವ ಚಿತ್ರದಲ್ಲಿ ಬ್ರೇಕ್ ಕೊಟ್ಟರು. ಆ ಚಿತ್ರದ ನಾಯಕ ದಿಲೀಪ್  ಕುಮಾರ್, ನಾಯಕಿ  ಕಾಮಿನಿ ಕೌಶಲ್ ಅಭಿನಯಿಸಿದ್ದರು.  ಆ ಚಿತ್ರಕ್ಕೆ  ಮಜರೂ ಸುಲ್ತಾನ್ ಪುರಿಯವರು ರಚಿಸಿದ  ಹಿಟ್ ಹಾಡುಗಳಿದ್ದವು. “ಏ ದಿಲ್ ಮುಝೆ, ಐಸಿ ಜಗಹ್ ಲೇ ಚಲ್  ಜಹಾ ಕೊಯಿ ನಹಿ ಹೊ.” ಆಗಿನ ಕಾಲದಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕರಾಗಿದ್ದ , ಖೇಮ್ ಚಂದ್ ಪ್ರಕಾಶ್, ಬುಲೇಸಿ ಇರಾನಿ.  ಶ್ಯಾಮ್ ಸುಂದರ್, ನೌಶಾದ್ ಆಲಿ, ಶಂಶಾದ್ ಬೇಗಂ, ಮಿಲ್ತೆ ಹಿ ದಿಲ್ ಹುವಾ, ಮೊದಲಾದ ಸಂಗೀತ ನಿರ್ದೇಶಕರು ೧೯೫೦ ಆಕರ್ಷಿಸಿತ್ತು. ಹಾಡುಗಾರಿಕೆಯ ಜೊತೆಗೆ ನಟನೆಗೂ ಬೆಲೆಬಂತು. ಫಿಲಂ, ನಿರ್ಮಾತ ನಿರ್ದೇಶಕ,  ಎ ಆರ್ ಕರ್ದಾರ್, ನಿರ್ಮಿಸಿದ “ದಿಲ್ ನಾದಾನ್” ಗುಲಾಮ್ ಮೊಹ್ಮದ್ ಸಂಗೀತವಿದ್ದಾಗ್ಯೂ ಗಲ್ಲ ಪೆಟ್ಟಿಗೆಯಲ್ಲಿ “ಫ್ಲಾಪ್” ಆಯಿತು. ೫ ವರ್ಷಗಳ ಅವಧಿಯಲ್ಲಿ ೮ ಚಿತ್ರಗಳು ನಿರ್ಮಾಣವಾದವು. ಆದರೆ  ಯಾವುದೂ ಬಾಕ್ಸ್ ಆಫೀಸಿನಲ್ಲಿ ಚೆನ್ನಾಗಿ ಓಡಲಿಲ್ಲ. ಇದರ ತರುವಾಯ ತಲತ್ ಮೆಹಮೂದ್ ರವರು  ಅನೇಕ ನಟರಿಗೆ ಕಂಠದಾನದ  ಕೆಲಸವನ್ನು ಒಪ್ಪಿಕೊಂಡರು. 

ತಲತ್ ಮೆಹಮೂದರು ಪ್ರೇಮಿಸಿ  ಮದುವೆಯಾದರು   :

ಬಾಂಗ್ಲಾ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಲತಿಕಾ ಮಲ್ಲಿಕ್ ಕಲ್ಕತ್ತಾದಲ್ಲಿ ಪರಿಚಯವಾಗಿ ಪ್ರೇಮಿಸಿದರು. ಆಕೆ ಬಂಗಾಳಿ ಕ್ರಿಶ್ಚಿಯನ್ ಪರಿವಾರಕ್ಕೆ ಸೇರಿದವಳು ಮುಸಲ್ಮಾನ್ ಜಾತಿಯವರಾದ ತಲತ್ ಆಕೆಯನ್ನು ಮದುವೆಯಾಗುವುದು ಸ್ವಲ್ಪ ಕಷ್ಟವೇ ಆಗಿತ್ತು. ತಲತ್  ರ ತಂದೆ ಮತ್ತು ಮನೆಯವರು ಮೊದಲು ಈ ವಿವಾಹಕ್ಕೆ ಒಪ್ಪಿಗೆ ಕೊಡಲಿಲ್ಲ. ೨೦ ಫೆಬ್ರವರಿ, ೧೯೫೧ ರಂದು ಗುಟ್ಟಾಗಿ  ಮದುವೆಯಾದರು.  ವಿವಾಹ ಜೀವನ ನಡೆಸುತ್ತಿದ್ದಾಗ,  ಈ ವಿಷಯ ಲಖ್ನೌ ನಲ್ಲಿದ್ದ ಆವರ ಮನೆಯವರಿಗೆ ತಿಳಿಯಿತು. ತಂದೆಯವರು ಇಷ್ಟುಹೊತ್ತಿಗೆ ಮಗನ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದರು. ಸೊಸೆಯ ಹೆಸರನ್ನು ‘ಸಬೀನಾ’ ಎಂದು ಬದಲಾಯಿಸಿ ಇಸ್ಲಾಮ್ ಧರ್ಮವನ್ನು ತನ್ನ ಜೀವನದಲ್ಲಿ ಅನುಸರಿಸಿದರೆ ಮಾತ್ರ,  ತಮ್ಮ ಆಕ್ಷೇಪಣೆ ಏನೂ  ಇಲ್ಲವೆಂದು ಹೇಳಿ ಅವರನ್ನು ಸ್ವೀಕರಿಸಿದರು. ವಿವಾಹದ ನಂತರ  ಆಕೆ ತನ್ನ ಹೆಸರನ್ನು ‘ನಸರಿನ್ ತಲತ್ ಮಹಮೂದ್ ‘ಎಂದು ಬದಲಾಯಿಸಿಕೊಂಡಳು. ತಲತ್ ಮೆಹಮೂದ್ . ಈ ದಂಪತಿಗಳಿಗೆ ಖಾಲಿದ್ (೧೯೫೩) ಎಂಬ ಮಗ, ಮತ್ತು ಸಬೀನ (೧೯೫೯)  ಎಂಬ ಮಕ್ಕಳಾದರು.  

ಆ ಹೊತ್ತಿಗಾಗಲೇ ಶಮ್ಮಿ ಕಪೂರ್ ರವರ  ‘ಯಾಹೂ ದೌರ್’ ಶುರುವಾಗಿತ್ತು.

ತ್ವರಿತಗತಿಯ ಹಾಡುಗಳು ಫಿಲಂ ರಂಗದಲ್ಲಿ ಬರಲು ಶುರುವಾಗಿತ್ತು. ಆ ಸಮಯದಲ್ಲಿ  ಶಮ್ಮಿ ಕಪೂರ್ ರವರ ಭೇಟಿಯೂ ಆಯಿತು. ಶಮ್ಮಿಯವರು ತಲತ್ ರಿಗೆ  “ಹಾಡುವುದು  ಮತ್ತು ನಟನೆ ಎರಡನ್ನೂ ಒಟ್ಟಾಗಿ ಬೆರೆಸದೆ  ;  ಕೇವಲ  ಹಾಡುಗಾರಿಕೆಯ ಮೇಲೆಯೇ  ಹೆಚ್ಚು ಒತ್ತು ಕೊಡಲು” ಬುದ್ಧಿ  ಹೇಳಿದರು.  ೧೯೬೦  ನಂತರ ತಲತ್ ಮೆಹಮೂದ್  ಕೇವಲ ಹಾಡಿನಮೇಲೆಯೇ ಹೆಚ್ಚು  ಗಮನವನ್ನು ಕೊಟ್ಟು ಸಿದ್ಧಿಪಡೆದರು.  ಪಾಶ್ಚಿಮಾತ್ಯ ಸಂಗೀತ ಪದ್ಧತಿಯನ್ನು ಅನುಕರಿಸಿ ಹಾಡಿದ Rock-n-Roll ಗೀತೆಗಳು ತಲತ್ ರವರಿಗೆ   ಇಷ್ಟವಾಗುತ್ತಿರಲಿಲ್ಲ. ಆದರೆ ಆ ಸಮಯದ  ಸಿನಿ-ರಸಿಕರು  ತಮಗೆ ಪ್ರಿಯವಾದ ವೇಗದ ಹಾಡುಗಳನ್ನೇ  ಆಯ್ಕೆಮಾಡಲು ಹೊರಟಾಗ, ತಲತ್ ರವರ  ಶೈಲಿಯ ಹಾಡಿನ ಬೇಡಿಕೆಗಳು  ಕಡಿಮೆಯಾಗತೊಡಗಿತು. ಸಂಗೀತ ನಿರ್ದೇಶಕರು ಅವರನ್ನು ಕಡೆಗಣಿಸಲು ಶುರುಮಾಡಿದರು.  ಅಷ್ಟು ಹೊತ್ತಿಗೆ  ಉರ್ದು ಶಾಯಿರಿಗಳನ್ನೂ  ಹಾಗೂ ಎಲ್ಲಾ ತರಹದ ಹಾಡುಗಳನ್ನು ಅತ್ಯಂತ ಭವ್ಯವಾಗಿ ಹಾಡುತ್ತಿದ್ದ “ಯುವ ಮೊಹಮ್ಮದ್ ರಫಿಯವರ ಜಾದು” ಎಲ್ಲರನ್ನೂ ಸಂಮೋಹಿತಗೊಳಿಸಿತ್ತು  

೧೯೫೦ ರಿಂದ ೧೯೬೦ ರ ವರೆಗೆ ಸುಮಾರು ಹತ್ತು ವರ್ಷಗಳು  ಬಿಡುವಿಲ್ಲದೆ ಹಾಡುಗಳನ್ನು ಹಾಡಿ  ಪ್ರಸಿದ್ಧರಾಗಿದ್ದ ‘ತಲತ್’ ರವರಿಗೆ  ಕೆಲಸದ ಬೇಡಿಕೆಗಳು ನಿಧಾನವಾಗಿ  ಬಹಳ ಕಡಿಮೆಯಾಗುತ್ತಾ ಬಂದು  ಕೊನೆಗೆ ನಿಂತೇ ಹೋಯಿತು. ಚಿತ್ರ ನಿರ್ಮಾಪಕ,  ಓಂ ಪ್ರಕಾಶ್,  ಹಾಗೂ ಬಾಲ್ಯದ ಗೆಳೆಯ  ಮದನ್ ಮೋಹನ್ ಸಂಗೀತದ ಮಾಲಾಸಿನ್ಹ, ಭರತ್ ಭೂಷಣ್  ಅಭಿನಯದ “ಜಹನಾರ ಫಿಲಂ” ನಲ್ಲಿ ಅವಕಾಶ ಸಿಕ್ಕಿತು. ಅದರಲ್ಲಿ  ಹಲವಾರು ಗಜಲ್ ಗಳಿದ್ದವು.  ಮದನ್ ಮೋಹನ್,  ರಫಿಯವರ ಬದಲು ತಲತ್ ಮೆಹಮೂದರ  ಹೆಸರನ್ನು ಸೂಚಿಸಿದರು. ಸಿನಿಮಾ, ಗಲ್ಲ ಪೆಟ್ಟಿಗೆಯಲ್ಲಿ ಸೋಲು ಅನುಭವಿಸಬೇಕಾಯಿತು. ಈ ದಿಟ್ಟ ಬದಲಾವಣೆಯಿಂದ  ಇಬ್ಬರೂ ಬಹಳ ನಷ್ಟವನ್ನು ಅನುಭವಿಸಬೇಕಾಯಿತು.

೧೯೬೦ ನಲ್ಲಿ ದಿಲೀಪ್, ವಹಿದಾ ರೆಹ್ಮಾನ್,  ಮನೋಜ್ ಕುಮಾರ್ ನಟಿಸಿದ  ‘ಆದ್ಮಿ’, ಚಿತ್ರದಲ್ಲಿ  ರಫಿ, ತಲತ್, ‘ಕೈಸಿ ಹೋತ ಯಹ್  ಬಹಾರೊಮ್ಕಿ ರಾತ್,‘ ಎನ್ನುವ ಗೀತೆ ಹಾಡಿದಾಗ,  ಮನೋಜ್ ಕುಮಾರ್ ರವರಿಗೆ ತಲತ್ ಮೆಹಮೂದರ ಹಾಡಿದ  ಶೈಲಿ ಯಾಕೋ ಸರಿಬರಲಿಲ್ಲ.  ಪುನಃ  ಮಹೇಂದ್ರ ಕಪೂರ್  ಜತೆ ರೆಕಾರ್ಡ್ ಮಾಡಬೇಕಾಯಿತು. ಗೌರವ, ಆತ್ಮ ಸಮ್ಮಾನ್,  ಗಳ ಮಧ್ಯೆ ತೊಳಲುತ್ತಿದ್ದ ತಲತ್ ಮೆಹಮೂದ್,  ಚಿತ್ರರಂಗ ಬಿಟ್ಟು ‘ಮ್ಯೂಸಿಕಲ್ ಷೋ’ ಮುಂತಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಪ್ರಾರಂಭಿಸಿದರು.  ಯಾವ  ‘ಫಿಲಂ ಫೇರ್ ಅವಾರ್ಡ್’ ಗಳೂ ಅವರಿಗೆ ದಕ್ಕಲಿಲ್ಲ.  ಹೆಸರಾಂತ ನಿರ್ಮಾಪಕ ನಿರ್ದೇಶಕ ಬಿಮಲ್  ರಾಯ್  ರವರ ‘ಸುಜಾತ’  ಚಿತ್ರ, ಎಸ್. ಡಿ. ಬರ್ಮನ್ ಸಂಗೀತ, ಮಜ್ರು ಸುಲ್ತಾನ್ ಪುರಿ ರಚಿಸಿದ “ಜಲ್ತೆ  ಹೈ ಜಿಸ್ಕೆ ಲಿಯೇ” ಬಹಳ ಹೆಸರು ಮಾಡಿದ ಗೀತೆಗಳಲ್ಲೊಂದು. 

ಜಲ್ತೆ  ಹೈ ಜಿಸ್ಕೆ ಲಿಯೇ 

ತೇರಿ ಆಂಖೊಮ್ ಕೆ ದಿಯೆ, 

ಡೂಂಡ್ ಲಾಯಾ ಹೂ

ವಹೀ ಗೀತ್ ಮೈ ತೆರೆಲಿಯೇ

ಗಜಲ್ ಕಿಂಗ್~  ತಲತ್ ಮೆಹಮೂದರು 

ದೇಶ-ವಿದೇಶಗಳಲ್ಲಿ ಪ್ರವಾಸಮಾಡಿ,  ಭಾರತೀಯ ಗಝಲ್ ಗಾಯಕರ ಮಾನ-ಸನ್ಮಾನಗಳನ್ನು ಹೆಚ್ಚಿಸಿದರು :

ತಲತ್ ಮೆಹಮೂದ್, ತಮ್ಮ ಅಂತಿಮ  ದಿನಗಳಲ್ಲಿ ಸಿದ್ಧಪಡಿಸಿದ  ‘Soundtrack recording’ (೧೯೮೫) ನ ಗಝಲ್ ಪ್ರಸ್ತುತಿಯ  ವಿವರಗಳು  ಹೀಗಿವೆ :  ‘ತಲತ್’ ರವರು ‘ಹೇಮ್ಲತಾ’ ರವರೊಂದಿಗೆ ಹಾಡಿದ “ಮೇರೇ ಶಾರಿಕ್-ಎ-ಸಫರ್,  ಗೀತೆಯನ್ನು  ‘ವಾಲೀ-ಎ-ಅಝಮ್ ಅಹ್ಮದ್ ವಾಸಿ’ ಯವರು ರಚಿಸಿದ್ದರು ಹಾಗೂ ಚಿತ್ರಗುಪ್ತ ಅವರು ಸಂಗೀತ ನಿಯೋಜಿಸಿದ್ದರು.  ೧೯೫೬ ರಲ್ಲಿ ತಲತ್ ಮೆಹಮೂದ್ ಪೂರ್ವ ಆಫ್ರಿಕಾ, ಅಮೇರಿಕ ಸಂಯುಕ್ತ ಸಂಸ್ಥಾನ , ಬ್ರಿಟನ್, ವೆಸ್ಟ್ ಇಂಡೀಸ್ ಮೊದಲಾದ ದೇಶಗಳಲ್ಲಿ ತಮ್ಮ ಗಜಲ್ ಸಂಗೀತದ ಸುಧೆಯನ್ನು ಅಲ್ಲಿನ ಭಾರತೀಯ ಗಜಲ್ ಪ್ರೇಮಿಗಳ ಸಂಘಗಳಲ್ಲಿ ಯಶಸ್ವಿಯಾಗಿ  ಉಣಬಡಿಸಿ ಬಂದ, ಪ್ರಥಮ ಭಾರತೀಯ ಗಝಲ್ ಗಾಯಕರ ಪಂಕ್ತಿಯಲ್ಲಿ ಮೊದಲಿಗರಾದರು.  

‘ಲಂಡನ್ ನ ಪ್ರತಿಷ್ಠಿತ ರಾಯಲ್ ಅಲ್ಬರ್ಟ್ ಹಾಲ್’ ‘ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್’ ನಲ್ಲಿ ಹಾಗು ವಿಸ್ಟ್ ಇಂಡೀಸ್ ನ ಒಂದು ಮಹತ್ವದ ಸಭೆಯಲ್ಲಿ ಅವರ ಗಜಲ್ ಕಾರ್ಯಕ್ರಮಗಳು ಕಿಕ್ಕಿರಿದ ಸಂಗೀತ ಪ್ರಿಯರ ಸಮ್ಮುಖದಲ್ಲಿ ಜರುಗಿದವು. ಹೀಗೆಯೇ ಅವರ ಸಂಗೀತ  ಪಯಣ,  ಯೂರೋಪಿನ ನೆದರ್ಲೆಂಡ್ ದೇಶದಲ್ಲಿ ಪ್ರಸ್ತುತಿಮಾಡುವವರೆವಿಗೂ ಎಡೆ-ತಡೆಯಿಲ್ಲದೆ ಜರುಗಿತ್ತು 

ತಲತ್ ಮೆಹಮೂದರ ಈ ಪ್ರಯತ್ನವನ್ನು ಹೊಗಳಿ ಆನಂದಿಸಿದ ರಸಿಕರು, ಅವರನ್ನು ತಲತ್ ಸಾಹೇಬ್ “A Trailblazer'” ಎಂದು ಬಣ್ಣಿಸಿದರು  :

೧೯೬೦ ರಲ್ಲಿ ತಲತ್ ಮೆಹಮೂದ್ ಖಾಸಗಿಯಾಗಿ ಢಾಕಾನಗರದಲ್ಲಿ  ತಮ್ಮ ಗಝಲ್  ಪ್ರಸ್ತುತಿಯನ್ನು ಮಾಡಿದ್ದರು :

ಢಾಕಾ ನಗರದಲ್ಲಿ ಒಂದು “ಬಂಗಾಳಿ  ಗಜಲ್ ಕಾರ್ಯಕ್ರಮ” ವನ್ನು ಆಯೋಜಿಸಲು ತಲತ್ ರವರನ್ನು ಕರೆದುಕೊಂಡು ಹೋದವರು ಚಿತ್ರ ನಿರ್ದೇಶಕ, ಏಹ್ತೆ ಶಾಮ್ ಎನ್ನುವವರು. ಚಿತ್ರ “ರಾಜಧಾನಿಕ್ ಬೂಕೆ” ಎಂದು. ಸಂಗೀತ ನಿರ್ದೇಶಕ : ರೊಬಿ ಘೋಸ್ ಎಂದು , ರಚನೆ : ಕೆ . ಜಿ. ಮುಸ್ತಾಫಾ ಎಂದು.  ಗೀತೆಯ ಮುಖಡ  ಈ ರೀತಿಯಿತ್ತು ” ತೊಮಾರೆ ಲೆಗೆಛೆ  ಎತೋ ಜೆ ಭಾಲೊ “.. (ಕನ್ನಡದಲ್ಲಿ ಅರ್ಥ,  “ನೀವು ತುಂಬಾ ಚೆನ್ನಾಗಿರುತ್ತೀರಿ”) ಎಂದು

ನಿಧನ :

ತಲತ್ ಮೆಹಮೂದ್ ರವರು,  ೯ ಮೇ,  ೧೯೯೮ ರಲ್ಲಿ ಹಿಂದಿ ಚಿತ್ರರಂಗಕ್ಕೆ, ದೇಶಕ್ಕೆ ‘ಅಲ್ಬಿದಾ’ ಹೇಳಿ ಹೊರಟೇ ಹೋದರು. ೨೦೧೮ ರಲ್ಲಿ ನವದೆಹಲಿಯಲ್ಲಿ ತಲತ್ ಮೆಹಮೂದ್ ರ ‘ಜಶ್ನ್-ಏ-ತಲತ್’ ಎಂಬ ಅವರ ‘೨೦ ನೆಯ ಮರಣ ಸ್ಮರಣ ಕಾರ್ಯಕ್ರಮದ  ಆಯೋಜನೆ’ಯನ್ನು  ಅವರ ಅಣ್ಣನ ಮೊಮ್ಮಗಳು ‘ಸಹಾರ್ ಜಮಾನ್’  ಆಯೋಜಿಸಿದ್ದಳು.  (ಹೆಸರಾಂತ,  ಟೆಲಿವಿಷನ್ ಕಾರ್ಯಕ್ರಮ ನಿರೂಪಕಿ)

ಕೆಳಗೆ ನಮೂದಿಸಿದ ಜನಪ್ರಿಯ ಹಿಂದಿ ನಟರಿಗೆ ಕಂಠದಾನ ಮಾಡಿದ ಶ್ರೇಯಸ್ಸು ತಲತ್ ಮೆಹಮೂದ್ ರವರದು :

ದೇವ್ ಆನಂದ್ :  ಜಾಯೆತೊ ಜಾಯೇ ಕಹಾ,  ಮಾಂದ್  ಹೈ ಸಬ್ ಸೆ ಮಧುರ್ ಮೊ ಗೀತ್, ಮತ್ತು ಆ ತೇರಿ ತಸ್ವೀರ್ ಬನಾ ಲೂ

ರಾಜ್ಕಪೂರ್ :  ದಿಲ್ ಮತ್ವಾಲಾ  ಲಾಖ್ ಸಂಭಾಲಾ, ಮೈ ದಿಲ್ ಹೂ ಇಕ್ ಅರ್ಮಾನ್ ಭರಾ ಹಾಗೂ ತುಮ್ ಕೋ ಫುರ್ಸತ್ ಹೊ ಮೇರಿ ಜಾನ್ ತೊ ಇಧರ್ ದೇಖ್ ತೊಲೊ 

ದಿಲೀಪ್  ಕುಮಾರ್ :   ಆಯೆ ಮೇರೇ ದಿಲ್ ಕಹೀ ಔರ್ ಚಲ್,   ಹಾಗೂ ಯೇ ಹವಾ ಯೇ ರಾತ್ ಯೇ ಚಾಂದ್ನಿ 

ಅಶೋಕ್ ಕುಮಾರ್ :   ಕಿಸೀ ಸೂರತ್ ಲಾಗಿ ದಿಲ್ಕಿ ಬೆಹೆಲ್ ಜಾಯೇ ತೊ ಅಚ್ಛಾ ಹೊ  ಮತ್ತು ಸಬ್ -ಕುಛ್ ಲುಟಾ ಕೆ ಹೋಶ್ ಮೇ  ಆಯೆ ತೊ ಕ್ಯಾ ಕಿಯಾ    

ಶಮ್ಮಿ ಕಪೂರ್ :   ಚಲ್ ದಿಯಾ ಕಾರ್ವಾನ್ ಮತ್ತು ಆಯೆ ಘಮ್ -ಎ-ದಿಲ್ ಕ್ಯಾ    

ಭರತ್ ಭೂಷಣ್ : ಫಿರ್ ಮುಝೆ  ದೀದಾ-ಎ-ತರ್ ಯಾದ್ ಆಯಾ,  ಮತ್ತು  ‘ಫಿರ್ ವಹೀ ಶಾಮ್’    ಸುನಿಲ್ ದತ್, ಕರಣ್ ದೇವನ್, ಮನೋಜ್ ಕುಮಾರ್, ಪ್ರದೀಪ್ ಕುಮಾರ್, ತಮ್ಮ ನಟನೆಗೂ, 

ದಿಲ್-ಎ-ನಾದಾನ್ ,  (೧೯೫೩ ನಲ್ಲಿ ಶ್ಯಾಮ ಮತ್ತು ಪೀಸ್ ಕನ್ವಲ್ ಜತೆ)

ಡಾಕ್ ಬಾಬು  (೧೯೫೪ ರಲ್ಲಿ ನಾದಿರಾ ಜೊತೆ ),

ವಾರಿಸ್  (೧೯೫೪, ಸುರಯ್ಯಾ ಮತ್ತು ನಾದಿರಾ ಒಟ್ಟಿಗೆ)

ರಫ್ತಾರ್  (೧೯೫೫, ನಾದಿರಾ ಜತೆ),

ದಿವಾಲಿ ಕೀ ರಾತ್ (೧೯೫೬ ರೂಪಮಾಲಾ ಜತೆ )

ಏಕ್ ಗಾವ್ ಕಿ ಕಹಾನಿ (೧೯೫೭, ಮಾಲಾ ಸಿನ್ಹಾ ಜತೆ) 

ಲಾಲಾ ರುಖ್  (1958, ಶ್ಯಾಮ ಜತೆ ), ಮಾಲಿಕ್  (೧೯೫೮, ಸುರಯ್ಯಾ ಜತೆ ), 

ಸೋನೇ ಕಿ ಚಿಡಿಯಾ  (೧೯೫೮, ನೂತನ್ ಜತೆ ) 

‘ದಿಲ್-ಎ-ನಾದಾನ್’ :

ತಲತ್ ಮೆಹಮೂದ್ ನಟಿಸಿದ ಈ ಫಿಲಂ ನ ಕತೆ ಈ ರೀತಿಯಿದೆ. ಲಖನೌ  ನಗರದ ಒಬ್ಬ ಪ್ರಸಿದ್ಧ ಪಿಟೀಲುವಾದಕನ ಜೀವನವನ್ನು ಬಿಂಬಿಸುವ ಒಂದು  ಪಾತ್ರವನ್ನು ನಿರ್ವಹಿಸಬೇಕಾಗಿ ಬಂತು.  ಅವನ ತಂದೆಗೆ ತನ್ನ ಮಗ ಪಿಟೀಲು ಬಾರಿಸುವುದು, ಹಾಡುವುದು ಯಾವುದೂ ಇಷ್ಟವಿಲ್ಲ; ಇದನ್ನು ವಿರೋಧಿಸಿದ  ಮಗ ಊರನ್ನು ತ್ಯಜಿಸಿ,  ಬೊಂಬಾಯಿಗೆ ಹೋಗುತ್ತಾನೆ. ಅಲ್ಲಿನ ಮ್ಯೂಸಿಕ್ ಶಾಪ್ ಒಂದರ  ಮಾಲೀಕನ ಜತೆ  ಸ್ನೇಹ ಬೆಳಸಿ ಅವನಿಂದ  ನೆರವು ಪಡೆಯುತ್ತಾನೆ. ಆತನ ಮಗಳು ಪೀಸ್ ಕನ್ವಲ್  ಜತೆ ಪ್ರೀತಿ ಬೆಳೆದು  ಹಾಡು ಹಾಡಲು ಪಿಯಾನೋ ಬಜಾಯಿಸಲೂ ಕಲಿಯುತ್ತಾನೆ.  ಸಂಗೀತ ನಿರ್ದೇಶಕನಾಗಿ  ಆ ಕ್ಷೇತ್ರದಲ್ಲಿ  ಎತ್ತರಕ್ಕೆ ಬೆಳೆಯುತ್ತಾನೆ.  ಆಗ ಕನ್ವಲ್ ತನ್ನ  ಸೋದರಿಯ ಜತೆ  ವಿವಾಹವಾಗಲು ಬೇಡಿದ ಮಾತುಗಳು ಅವರಿಗೆ ಬೇಸರವನ್ನು ತರುತ್ತದೆ. ಪ್ರೀತಿಸಿದ ಹುಡುಗಿಯನ್ನು ಬಿಟ್ಟು ಆಕೆಯ ಸೋದರಿಯ ಜತೆ ವಿವಾಹ ಮಾಡಿಕೊಳ್ಳುವ  ಅರ್ಥಹೀನವಿಚಾರ ಅವರಿಗೆ ಸರಿಬೀಳುವುದಿಲ್ಲ.  ಆದರೆ ವಿವಾಹ ಮಾಡಿಕೊಳ್ಳದಿದ್ದರೆ, ಆಕೆ  ತಾನು  ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸುತ್ತಾಳೆ. ಆಗ ನಿಜವಾಗಿ  ‘ದರ್ದ್ಭರಿ ಗಾನ’ಕ್ಕೆ ಅವಕಾಶವಾಗುತ್ತದೆ.  ಕತೆ ಹೀಗೆಯೇ ಮುಂದುವರೆಯುತ್ತದೆ.  

ಪ್ರಶಸ್ತಿ :

೧೯೯೨ ನಲ್ಲಿ ಭಾರತ ಸರ್ಕಾರ, ‘ಪದ್ಮಭೂಷಣ ಪ್ರಶಸ್ತಿ’ ನೀಡಿ ಗೌರವಿಸಿತು. 

ಗಜಲ್ ಮೂಲತ: ಅರಬ್ಬೀ ಶಬ್ದ. ಒಬ್ಬ ವ್ಯಕ್ತಿ ತನ್ನ  ಪ್ರೇಯಸಿಯೊಡನೆ/ಪ್ರಿಯತಮನೊಡನೆ, ಅವನ/ಆಕೆಯ ಎದುರಿಗೆ ಇಲ್ಲವೇ ಪರೋಕ್ಷವಾಗಿ  ಪ್ರೇಮ, ಮೋಹ, ಅನುರಾಗ ಮನಸ್ಸಿನ ತಲ್ಲಣಗಳನ್ನು ತೋಡಿಕೊಳ್ಳುವ ಪರಿಯಾಗಿದೆ.  ಗಜಲ್ ಉರ್ದು ಕಾವ್ಯದ ತಿರುಳೆಂದು ಹೇಳಬಹುದು. ತಲೆಬರಹವಿಲ್ಲದ ಗಜಲ್ ಗೇಯತೆಯುಳ್ಳ ಕಾವ್ಯ ಪ್ರಕಾರ. ಇದನ್ನು ಭಾವಪೂರ್ಣವಾಗಿ ಹಾಡಬಹುದು. ಗಜಲ್‌ನ ಅತ್ಯಂತ ಪ್ರಮುಖ ವೈಶಿಷ್ಟ್ಯತೆ ಎಂದರೆ,  ಮೃದು, ಮಧುರ ಭಾವ, ಹಾಗೂ ಶಬ್ದಗಳು,  ಉರ್ದುವಿನಲ್ಲಿರುವಷ್ಟು ಮಧುರ ಭಾವದ, ಮೃದು ಶಬ್ದಗಳು ಕನ್ನಡಲ್ಲಿ ದೊರೆಯಲಾರವು, ಎನ್ನುವ ಅಪವಾದವಿತ್ತು. ಆದರೆ ಅದನ್ನು ಕನ್ನಡದ ಜಾಯಮಾನಕ್ಕೆ ಹೊಂದಿಸಿದವರು ‘ಶಾಂತರಸರು’. ಒಟ್ಟಿನಲ್ಲಿ  ಗಜಲ್‌ನ್ನು ಗಜಲ್ ಎಂದಷ್ಟೆ ಕರೆಯಬಹುದು. 

ಅಮೀರ್ ಖುಸ್ರೋ :

ಎಂಬ ಕವಿ, ಉರ್ದು ಕಾವ್ಯಕ್ಕೆ, ಅದರಲ್ಲೂ ಮುಖ್ಯವಾಗಿ ಗಜಲ್ ಪ್ರಕಾರಕ್ಕೆ ಸಂಗೀತದ ಮೆರುಗನ್ನು ನೀಡಿದನಲ್ಲದೆ, ಭಾರತದ ಹಿಂದೂಸ್ತಾನಿ ಸಂಗೀತಕ್ಕೆ `ಖಯಾಲ್~, `ತರಾನಾ~ ಮುಂತಾದ ಅನೇಕ ರಾಗಗಳನ್ನೂ, ತಬ್ಲಾ, ಸಿತಾರ್ ಮುಂತಾದ ವಾದ್ಯಗಳನ್ನೂ  ಪರಿಚಯಿಸಿದ.  ಉರ್ದು ಕಾವ್ಯ ಪ್ರಕಾರವನ್ನು ಮೊಗಲ್ ಚಕ್ರವರ್ತಿಗಳ  ಆಸ್ಥಾನದಿಂದ ಮುಕ್ತಗೊಳಿಸಿ, ಜನರೆಡೆಗೆ ತರುವುದರಲ್ಲಿ ಯಶಸ್ವಿಯಾದವನೆಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.  ಹಾಗೆಯೇ  ಸೂಫಿ ಸಂತ ಕವಿಗಳದೂ  ಬಹುಮುಖ್ಯ ಕೊಡುಗೆಯಿದೆ. ಸರಳ ಗಜಲ್‌ಗಳ ಮೂಲಕ ಅಲೌಕಿಕ ಪ್ರೇಮ, ವಿರಹ, ತ್ಯಾಗ, ನಿಷ್ಕಲ್ಮಷ ಬದುಕಿನ ವಿವಿಧ ಆಯಾಮವನ್ನು, ಅಧ್ಯಾತ್ಮವನ್ನು ಜನರಿಗೆ ಮನಮುಟ್ಟುವಂತೆ ಹೇಳುವ ಮೂಲಕ ಈ ಪ್ರಕಾರವನ್ನು ಸೂಫಿ ಕವಿಗಳು ಜನಪ್ರಿಯಗೊಳಿಸಿದರು. ಹೀಗೆ  ಅದರ  ಕಡೆಗೆ ಆಕರ್ಷಿತರಾಗಿ  ಧಾವಿಸಿದವರು ಅನೇಕ ಮಂದಿ. ಉದಾಹರಣೆಗೆ, ಹಿಂದಿ ಚಲನಚಿತ್ರ ರಂಗದ   ನಾಜಿರುದ್ದೀನ ಶಾ,  ಓರ್ವ ನಟನಾಗಿಯೂ ಒಳ್ಳೆಯ ಶಾಯರಿ,  ಎಂದು ಹೆಸರುಗಳಿಸಿದ್ದಾನೆ. 

ಗಜಲ್ ಪ್ರಿಯರಲ್ಲಿ ಒಬ್ಬನಾದ ನನ್ನ ಅನಿಸಿಕೆಗಳು :  (ಎಚ್ಚಾರೆಲ್)

ಗಜಲ್ ಎಂದರೆ ಎ ಬಿ. ಸಿ. ಡಿ ಅರಿಯದ ನಾನು, ೧೯೬೭ ರಲ್ಲಿ ಬೊಂಬಾಯಿಗೆ ಪಾದಾರ್ಪಣೆ ಮಾಡಿದನಂತರ ಕೆಲವು ಗೆಳೆಯರ ಸಹವಾಸದಿಂದಾಗಿ ಗಜಲ್ ಕೇಳುವ ಹುಚ್ಚನ್ನು ಬೆಳೆಸಿಕೊಂಡೆ. ನಂತರ ಲತಾದೀದಿಯವರ  ಹಾಡುಗಾರಿಕೆಯಲ್ಲಿ ಮಿಂದೆದ್ದ ನಂತರ ಈ ಹುಚ್ಚು ಕ್ರಮವಾಗಿ ನಿಂತು, ಕೊನೆಗೆ ‘ಜಗ್ಜಿತ್ ಸಿಂಗ್’ ರವರ ಗಜಲ್ ಕಾರ್ಯಕ್ರಮಗಳನ್ನು ಕೇಳಿದ ಮೇಲೆ, ಮತ್ತೆ ಭಾವತಲ್ಲಣ ಶುರುವಾಗಿ ಕೊನೆಗೆ ಈ ಲೇಖನ ಬರೆಯಲು ಪ್ರೇರಣೆ ಸಿಕ್ಕಿತೆಂದು ನನ್ನ ಅನಿಸಿಕೆ. 

ಗಜಲ್ ಗೊಯಿ, ಕೇವಲ ಉರ್ದು, ಫಾರಸಿ ಭಾಷೆಗಳಿಗೆ ಸೀಮಿತವೇ ಅಥವಾ ಅದರ ವ್ಯಾಪ್ತಿ ಭಾರತೀಯ ಭಾಷೆಗಳಲ್ಲಿ ಹಾಸು-ಹೊಕ್ಕಿದೆಯೇ ? ಎನ್ನುವ ಮಾತನ್ನು ಇಲ್ಲಿ ವಿಶ್ಲೇಷಿಸಬೇಕಾದ ಸಂಗತಿಗಳಲ್ಲೊಂದು. ಮೇರು ಗಜಲ್ ಗಾಯಕರ ಕೃಷಿಯನ್ನು ದಾಖಲಿಸುತ್ತಾ  ಎಲ್ಲಾರು ಸಂಭ್ರಮದಿಂದ ಬಳಸಲು ಹಾತೊರೆಯುವ “ಗಜಲ್ ಗಾಯನದ ಬಗ್ಗೆ ಒಂದು  ಚಿಕ್ಕ ಒಳನೋಟ”ವನ್ನು ಹಿಡಿದಿಡುವ ಪ್ರಯತ್ನವೇ ಈ ಲೇಖನ.  

ಕನ್ನಡ ಹಿರಿಯ ಗಜಲ್ ಗಾಯಕ, ಶಾಂತರಸರು :

ಪದೇ ಪದೇ ಹೇಳುವಂತೆ, ಉರ್ದು ಕಾವ್ಯದ ರಾಣಿ,ಕಾವ್ಯದ ಕೆನೆ; ಘನತೆ, ಗೌರವ,ಯೆನ್ನುವ ‘ಗಜಲ್’ ಪ್ರತಿಷ್ಠೆಗಳ ಪ್ರತೀಕ ಪ್ರೇಮ ಸಾಮ್ರಾಜ್ಞಿ, ರಸಜಲಧಿ, ಬದುಕಿನ ರುಚಿ  ಆತ್ಮಾನಂದದ ತಂಬೆಳಕು”  ಗಜಲ್ ಅತ್ಯುತ್ತಮವೂ ಸುಖತಮವೂ ಆದ ಮನಸ್ಸಿನ ಸೌಂದರ್ಯಯೋಗಿ. ಜೀವಮಾನದ ಸುಖತಮವಾದ ಅತ್ಯುತ್ತಮ ಮುಹೂರ್ತಗಳಲ್ಲಿ ಹಾಡುವ ಆತ್ಮ ಗೀತಾಂಜಲಿಯಾಗಿದೆ. ನಮ್ಮ ಹೃದಯವನ್ನು ವಿಕಸಿತವಾಗುವಂತೆ ಮಾಡಿ ಜಗತ್ತನ್ನು ನಮಗೆ ಒಲಿಸುತ್ತದೆ. ಅದರ ದಿವ್ಯ ಸ್ಪರ್ಶದಿಂದ ಸರ್ವವೂ ಮನೋಹರವಾಗಿ ಪರಿಣಮಿಸುತ್ತದೆ. ಮಿಂಚಿ ಮಾಯವಾಗುವ ಪರಮಾನಂದವನ್ನು ಅವಿಚ್ಛಿನ್ನವಾಗುವಂತೆ ಮಾಡುತ್ತದೆ. ಕೊನೆಯಲ್ಲಿ ಗಜಲ್ ಸಾಹಿತ್ಯ ಸ್ವರೂಪವೂ ಗಂಭೀರ ಎಳೆಯೂ  ಆಗಿದೆ ಎನ್ನುತ್ತಾರವರು. 

ಮೂಲತಃ ಗಜಲ್  ಫಾರಸಿ  ಭಾಷೆಯ ಒಂದು ಅದ್ಭುತ ಪ್ರಕಾರವೆನ್ನುವ ವಾದಕ್ಕೆ ಎರಡು ಮಾತಿಲ್ಲ. ಆದರೆ ಭಾರತೀಯ ಸಂಗೀತಾಸಕ್ತರೂ  ತಮ್ಮ ತಮ್ಮ  ಭಾಷೆಗಳಲ್ಲಿ ಉದಾ : ಸಿಂಧಿ, ಗುಜರಾತಿ, ಪಂಜಾಬಿ, ಹಿಂದಿ,ಉರ್ದು, ಮರಾಠಿ, ಕನ್ನಡ ಹಾಗೂ ಇನ್ನಿತರ ಭಾಷೆಗಳಲ್ಲಿಯೂ  ಗಜಲ್ ಪ್ರಕಾರದಲ್ಲಿ   ಸಮೃದ್ಧ ಕಾವ್ಯ ಕೃಷಿಗೆ ಕಾರಣವಾಗಿದ್ದಾರೆ ಎನ್ನುವುದು ನಂಬಲರ್ಹವಾದ ಹೇಳಿಕೆಯಾಗಿದೆ.  ಇದು ತನ್ನದೇ ಆದ ಲಯ, ನಿಯಮ ಹಾಗೂ ಲಕ್ಷಣಗಳನ್ನು ಹೊಂದಿದೆ.  ಇದರ ಬಗ್ಗೆ  ಶಾಂತರಸ, ಜಂಬಣ್ಣ ಅಮರಚಿಂತ, ಸಿದ್ದರಾಮ ಹಿರೇಮಠ, ಚಿದಾನಂದ ಸಾಲಿ, ಗಿರೀಶ್ ಜಕಾಪುರೆ, ಶ್ರೀದೇವಿ ಕೆರೆಮನೆ, ಅಲ್ಲಗಿರಿರಾಜ,  ಮುಂತಾದ ಗಜಲ್ ಕಾರರು ಮುಕ್ತವಾಗಿ  ಚರ್ಚಿಸಿದ್ದರಾದರೂ ‘ಸಮಗ್ರ ಆಕರ ಗ್ರಂಥ’ ದ ಕೊರತೆ’, ನವ-ಉತ್ಸಾಹಿ ಗಜಲ್ ಸಂಗೀತಜ್ಞರನ್ನು ತೀವ್ರವಾಗಿ ಕಾಡುತ್ತಿದೆಯೆಂದು ಅನೇಕ ಫನ್ ಕಾರರೂ ಅಭಿಪ್ರಾಯಪಟ್ಟಿದ್ದಾರೆ. 

ಅಂತೆಯೇ ಇಂದು ‘ಗಜಲ್ ಗೋಯಿ’ ತುಂಬಾ ಸವಾಲಿನಿಂದ ಕೂಡಿದೆ. “ಗಜಲ್ ಸುಮ್ಮನೆ ಎಲ್ಲರಿಗೂ ಒಲಿಯುವುದಿಲ್ಲ. ಇಷ್ಟಬಂದಂತೆ  ಬರೆಯಲು ಇದು ಮುಕ್ತ ಛಂದವೂ ಅಲ್ಲ.  ಇಲ್ಲಿ ನಿಯೋಜಿತವಾದ ಛಂದಸ್ಸು,  ಹಲವಾರು ಪ್ರಕಾರದ ವೃತ್ತಗಳೂ  ಇವೆ.  ಹೊಸಪೀಳಿಗೆಯ  ಗಝಲ್ ರಚನಾಕಾರರು ಇವೆಲ್ಲವನ್ನೂ  ಸರಿಯಾಗಿ ಗಮನಿಸುತ್ತಿಲ್ಲ. ” ( ಶ್ರೀಮತಿ ಪ್ರಭಾವತಿ ಎಸ್. ದೇಸಾಯಿ : ಭಾವಗಂಧಿ: ಪು- ೧೨) ವೆಂದು  ಗಿರೀಶ್ ಜಕಾಪುರೆಯವರು ಆತಂಕ ವ್ಯಕ್ತಪಡಿಸಿದ್ದಾರೆ. ಕನ್ನಡ ಸಾರಸ್ವತ ಲೋಕದಲ್ಲಿ ಇಂದು ಗಜಲ್ ಪರಂಪರೆ ಹುಲುಸಾಗಿ ಬೆಳೆಯುತ್ತಿದೆಯಾದರೂ ಛಂದೋ ನಿಯಮವನ್ನು ಪಾಲಿಸದೆ ಕುರುಡು-ಕುರುಡಾಗಿ  ಮುನ್ನುಗ್ಗುತ್ತಿರುವುದು, ಆತಂಕದ ಜೊತೆಗೆ ವಿಷಾದವನ್ನು ಮೂಡಿಸುತ್ತಿದೆ. ಈ ಬಗ್ಗೆ ಕವಿ ಮಜಹರ್ ಇಮಾಮ್  ತಮ್ಮ  ಒಂದು ಷೇರ್ ನಲ್ಲಿ  ಹೀಗೆ  ವ್ಯಕ್ತಪಡಿಸಿದ್ದಾರೆ. 

“ಕೆಹ್ನೇ  ಕೊ ಯೆ ಗಜಲ್ ಹೈ ;  ಕ್ಯಾ ಗಜಲ್ ಹೈ ಜಿಸೆ

ನಜ್ಮ್ ಕಹಾ ನ ಜಾಯೆ, ನ ತರಾನಾ ಕಹಾ ಜಾಯೆ”

ಮೇಲಿನ ವಾಕ್ಯದಲ್ಲಿ  ಕೇವಲ ‘ಗಜಲ್’ ಎನ್ನುವ ಶಿರೋನಾಮ ಹೊತ್ತ ಗಝಲ್ ನಲ್ಲಿ ಗುಣ-ವಿಶೇಷಣಗಳಾವುವೂ ಕಂಡು ಬರದ  ಕಾವ್ಯದ ಬಗ್ಗೆ ಬರೆಯುತ್ತಾ,  ಇಂತಹ ರಚನಾ ವಿಧಾನ,  ಸಲ್ಲದೆಂದು ಖಂಡಿಸಿದ್ದಾರೆ.

ಗಜಲ್ ನ ಮೊದಲ ಷೇರ್ ಗೆ ‘ಮತ್ಲಾ’, ಅಥವಾ   ಆರಂಭ, ಎನ್ನುವರು.  ಎರಡೂ ಮಿಸರೈನ್ ನಲ್ಲಿ ಕಾಫಿಯಾ, ರದೀಫ್ ಬರಲೆಬೇಕು. ಆದರೆ ದುರಂತವೆಂದರೆ ಕೆಲವು ಗಜಲ್ ಕಾರರು ಪ್ರಯೋಗ, ಸಂಶೋಧನೆ, ಎಂದು ಹೇಳುವ ಅವರ  ಪ್ರಯತ್ನದ ಹೆಸರಿನಲ್ಲಿ ಗಜಲ್ ನ ಆರಂಭದ ಷೇರ್ ನ ಎರಡು ಮಿಸರೈನ್ ನಲ್ಲಿ ಕಾಫಿಯಾ, ರದೀಫ್ ಬಳಸದೇ, ಅದರ ಸಾನಿ ಮಿಸ್ರಾದಲ್ಲಿ ಮಾತ್ರ ಬಳಸುತಿದ್ದಾರೆ. ಇದರಿಂದ ಗಜಲ್ ನ ಮೂಲ ಲಕ್ಷಣ ‘ಮತ್ಲಾ’ ವನ್ನೇ ಕಡೆಡಣಿಸುತ್ತಿರುವುದು ವಿಷಾದನೀಯ. ಮತ್ತೆ. ಮುಂದುವರಿದು ಹೇಳುವುದಾದರೆ,   ಗಜಲ್ ಅನ್ನು ತಿರುಚಿ   ಮುರಿದು ಕಟ್ಟುವ ಭರದಲ್ಲಿ ಗಜಲ್ ಗೆ ಅಪಚಾರವೆಸಗುತಿದ್ದಾರೆ..!!  ಗಜಲ್ ನ ಷೇರ್ ನ ಮಿಸರೈನ್ ಸಮವಾಗಿರಬೇಕು. ಇದು ಸಂಗೀತಕ್ಕೆ ತುಂಬಾ ಅವಶ್ಯಕ. ಕಾರಣ, ಗಜಲ್ ಮೂಲತಃ ಹಾಡುಗಬ್ಬ. ಒಂದು ಮಿಸ್ರಾ ಉದ್ದವಿದ್ದರೆ, ಮತ್ತೊಂದು ಮಿಸ್ರಾ ಚಿಕ್ಕದಿರುವುದು ಗಜಲ್ ನ ಲಕ್ಷಣವಲ್ಲ. ಇದರಕಾರರ ವಾಕ್ಯಗಳು  ಮಾಡದೆ ಆದರ ಕಡೆಗೆ  ಗಮನ ಕೊಡಬೇಕಿದೆ. ದುರಂತವೆಂದರೆ ಕೆಲವು ತಪ್ಪುಗಳೆ ಮುಂದೆ ಗಜಲ್ ಪ್ರಕಾರಗಳಾಗಿವೆ..!! 

ಇನ್ನೂ ಮುಂದುವರೆದು ಹೇಳುವುದಾದರೆ, ಗಜಲ್ ನಲ್ಲಿ ಮಾತ್ರೆಗಳ ಬಳಕೆ ನಮ್ಮಿಂದ ಎಷ್ಟೋ ಗಾವುದ  ದೂರವೇ ಉಳಿದಿದೆ. ಈ ಹಿನ್ನೆಲೆಯಲ್ಲಿ ನಾವು ಮೊದಲು ಗಜಲ್ ಕಾವ್ಯ ಕನ್ನಿಕೆ ಯಾರನ್ನು ಪ್ರೀತಿಸಬೇಕಾಗಿದೆ, ಗಜಲ್ ಪರಂಪರೆಯನ್ನು ಅಧ್ಯಯನ ಮಾಡಬೇಕಿದೆ. ಗಜಲ್ ರಚನೆಗಿಂತಲೂ ಮುಂಚೆ ಗಜಲ್ ನ ಕುರಿತು ಆಳವಾದ ಮತೆ ಗಂಭೀರವಾದ ಅಧ್ಯಯನದ ಅವಶ್ಯಕತೆಯನ್ನು ಅಲ್ಲಗಳೆಯುವಂತಿಲ್ಲ. 

ಗಝಲ್ ಮತ್ತು ಅವುಗಳ ಪ್ರಸ್ತುತಿಯನ್ನು ಹಾಡಿ  ಹೊಗಳಿದ ಗಜಲ್ ಪ್ರಿಯ ಫನ್ಕಾರರ ವಾಕ್ಯಗಳು : 

ಗಝಲ್ ರಚನೆ, ಮತ್ತು ಮೆಹ್ಫಿಲ್ ಗಳಲ್ಲಿ ಪೇಶ್ ಮಾಡುವ ವಿಧಾನಗಳು, ಮತ್ತು ಮುಂದಿನದಿನಗಳಲ್ಲಿ ಗಝಲ್ ಕ್ರಮಿಸುವ ಹಾದಿಯ ಬಗ್ಗೆ ಅದೆಷ್ಟೋ ವಿಚಾರಗಳು ಇಂಟರ್ನೆಟ್ ನಲ್ಲಿ ರಾಶಿರಾಶಿಯ ಬಣವೆಯಿಂದ ಸರಿಸಿ,  ಇಣುಕಿನೋಡುವ ಒಂದು ಪ್ರಯತ್ನವನ್ನು ನಾನು ಮಾಡಿದ್ದೇನೆ. ಅವುಗಳ ದಾಖಲಾತಿಗಳನ್ನು ಕೆಳಗೆ ದಾಖಲಿಸಿದ್ದೇನೆ.  

ಪ್ರತಿಯೊಬ್ಬ ಗಝಲ್ ರಚನಾಕಾರನೂ/ಕಾರಳೂ ಗಝಲ್ ಆವೃತ್ತಿಯನ್ನು ಮನಸಾರೆ, ಹೃದಯದಾಳದಿಂದ ಸ್ವಾಗತಿಸುವುದು ಗಮನಾರ್ಹ ಸಂಗತಿ.  ತೀರಾ ಸಾಮಾನ್ಯವಾದ ಶೇರ್ ಗಳನ್ನೂ ದಿನನಿತ್ಯ ಜೀವನದಲ್ಲೂ ಏನಾದರೊಂದು ಸನ್ನಿವೇಶದಲ್ಲಿ ಪೇಶ್ ಮಾಡಿ “ವಾಹ್ ವಾ” ಗಿಟ್ಟಿಸುವುದು ತೀರಾ ಸಾಮಾನ್ಯವಾದ ಸಂಗತಿ ಎಂಬುದಕ್ಕೆ ಎರಡು ಮಾತಿಲ್ಲ. ಹೇಗೆ ಹಲವಾರು ಮಂದಿ ಮುಂದಿನ ಪ್ಯಾರಗಳಲ್ಲಿ ತಮ್ಮ ಅನಿಸಿಕೆಗಳನ್ನು ಅಭಿವ್ಯಕ್ತಿಸಿದ್ದಾರೆಂಬುದನ್ನು ನೋಡೋಣ.        

೧. ‘ಗಜಲ್’ ಎಂದರೆ ಒಂದು ಅರ್ಥ ನಲ್ಲೆಯೊಂದಿಗೆ ಸಂವಾದ, ಮತ್ತೊಂದು ಅರ್ಥ : ಸಿಕ್ಕಿಬಿದ್ದ ಜಿಂಕೆಯ ಆಕ್ರಂದನ. ಈ ಎರಡೂ ಅರ್ಥಗಳ ಭಾವನಾ ವಿಶೇಷಗಳೂ ಗಜಲ್ ಪ್ರಕಾರದೊಳಗೆ ಆಳವಾಗಿ ಬೇರೂರಿವೆ. ಈ ಕಾರಣಕ್ಕಾಗಿಯೇ “ಗಜಲ್ ಎಂದರೆ ಪ್ರೇಮಗೀತೆ ಯಷ್ಟೇ ಎನ್ನುವ  ತಪ್ಪು ಕಲ್ಪನೆ ವ್ಯಾಪಕವಾಗಿ ಹರಡಿರುವುದು ಮಿಥ್ಯಸಂಗತಿ ” (ಡಿ. ಆರ್. ನಾಗರಾಜ್ (ಸಂ) ; ಉರ್ದು ಸಾಹಿತ್ಯ ; ಪು- XXVI) ಎಂಬ ಡಿ. ಆರ್. ನಾಗರಾಜ್ ರವರ ಮಾತು ಉಲ್ಲೇಖನೀಯವಾಗಿದೆ.  ಪ್ರೇಮವೆನ್ನುವುದು ಒಂದು ಭಾಷೆ, ಅಥವಾ ಒಂದು ನಿರ್ದಿಷ್ಟ ಮನಸ್ಥಿತಿ. ಅಲ್ಲಿ ಎಲ್ಲ ವಸ್ತುಗಳು, ತಾತ್ವಿಕ ಸಂಗತಿಗಳು, ಅನುಭವಗಳು ಶೋಧನೆಗೆ ಒಳಗಾಗುತ್ತವೆ. ಈ ಹಿನ್ನೆಲೆಯಲ್ಲಿ “ವಿಶ್ವದಲ್ಲಿರುವುದು ಕೇವಲ  ವಿರಹದ ನೋವೊಂದೆ ಅಲ್ಲ, ಇನ್ನೆಷ್ಟೋ ನೋವುಗಳಿವೆ” ಎಂಬ ಫೈಜ್ ಅಹ್ಮದ್ ಫೈಜ್ ರವರ ಹೇಳಿಕೆ ಮಹತ್ವವನ್ನು ಪಡೆದುಕೊಳ್ಳುತ್ತದೆ.

೨. ಉರ್ದು ಗಜಲ್ ಪರಂಪರೆಗಂತೂ  ಅದರ  ಹೆಮ್ಮೆಯ ವಾರಸುದಾರರೆಂದೇ  ಗುರುತಿಸಿಕೊಂಡು ಪ್ರಖ್ಯಾತರಾಗಿರುವ   ‘ಮಿರ್ಜಾ ಗಾಲಿಬರು ಉಲ್ಲೇಖನೀಯರು’.  ಗಾಲಿಬ್ ರ ಉರ್ದು ‘ದಿವಾನ್’ ದಲ್ಲಿ ಹತ್ತು ಹಲವು ವೈವಿಧ್ಯಮಯ ವಿಷಯಗಳ ಸಂಗಮವಿದೆ. ಉದಾಹರಣೆಗೆ :

೩. ಹಿರಿಯ ತಲೆಗಳು ಮಾತ್ರ ಗಜಲ್ ಎಂದರೆ ಪ್ರೀತಿ, ಪ್ರೇಮ, ಪ್ರಣಯ, ವಿರಹ, ಭಕ್ತಿ, ಅಧ್ಯಾತ್ಮಗಳನ್ನೇ ಕುರಿತು ಬರೆಯಬೇಕು ಎನ್ನುತ್ತಾರೆ.  ‘ಗಜಲ್ ಕಾವ್ಯದ ಮೂಲ ದ್ರವ್ಯ ಪ್ರೇಮ.’ ಈ ಪ್ರೇಮವೆಂಬುದು ಧ್ಯಾನವಾಗುವುದು ಸಂಕಲ್ಪದಿಂದ, ಕೈವಲ್ಯದಿಂದ, ನಿಷ್ಕಾಮ ಕರ್ಮವಾಗಿಸಿ ಬಯಕೆಯನ್ನು ಗೆದ್ದ ಬುದ್ಧನಂತಾದಾಗ ಮಾತ್ರ ಸಾಧ್ಯವಾಗುವಂಥದ್ದು. ಪ್ರೇಮದ ಪರಾಕಾಷ್ಠೆಯ ನಿಮಿತ್ತ ಅದುವೆ. ಅನುರಾಗ ಆರಾಧನೆಯಾಗುವ ಅವಿನಾಭಾವ ದೈವತ್ವವನ್ನು ಮೈಗೂಡಿಸಿಕೊಳ್ಳುವ ಸಿದ್ಧಿಯಂಥದ್ದು. ಪದಗಳ ವರ್ಣನೆಗೆ ದಕ್ಕದ, ಅರ್ಥಕ್ಕೆ ತೆರೆದುಕೊಳ್ಳದ, ಅನುಭವವನ್ನು ಹಂಚಿಕೊಳ್ಳಲಾಗದ, ಆಸ್ವಾದಿಸಿಯೇ ತೃಪ್ತರಾಗುವಂತಹ ಅಂತರ್ಮುಖಿ ಸಂವಾದ. ಮೌನದಿ ಅರಳುವ ಮುಗುಳ್ನಗೆ ಎಂದಷ್ಟೇ ವ್ಯಾಖ್ಯಾನಿಸಬಹುದು. ಅದಕ್ಕೆ ಸಂಬಂಧಿಸಿದ…. ಮೃದು – ಮಧುರ ಅನುಭೂತಿ, ಲಾಲಿತ್ಯ, ವಿರಹ ವೇದನೆ, ತುಡಿತ ತುಹಿನ ಗಾನ, ಅಪಾರ ಹಂಬಲ, ಸಂಭ್ರಮಗಳನ್ನು ಸಾಕ್ಷಾತ್ಕರಿಸಿದಂತೆ ಜೀವನಾನುಭವದ ಮೂಲಕ, ಅನುಭಾವಿಕ ಗಝಲ್ಗಳನ್ನು ರಚಿಸುವ ಅನನ್ಯ ಕ್ರಮ ಜಾರಿಯಲ್ಲಿಡಬೇಕಾದ ಅನಿವಾರ್ಯತೆ ಇದೆ. ‘ನಶೆಯ ಕಾವ್ಯ’ ಎಂದು ಹೆಸರಾಗಿರುವ  ಗಜಲ್ ಗಳಲ್ಲಿ ಒಂದು ತೆರನಾದ  ಉನ್ಮಾದತೆ, ಉದ್ರಿಕ್ತತೆಯನ್ನು ತರಬೇಕಾಗುತ್ತದೆ. 

೪. ಗಜಲ್ ಗಳಲ್ಲಿ ಒಂದು ರೀತಿಯ ನಶೆಗೀಡು ಮಾಡಬಲ್ಲ ಮಾದಕತೆ ಇದೆ ! ಇಲ್ಲದಿದ್ದರೆ ಎಲ್ಲಾ ಗಜಲ್ ಗಳಿಗೆ ಓದುಗನಿಗೆ ಅಮಲೇರಿಸಿ, ನಶೆಗೀಡುಮಾಡಬಲ್ಲ ಶಕ್ತಿ ಎಲ್ಲಿಂದ ಬರಬೇಕು ? ಸುಜ್ಞಾನಭರಿತವಾದ ಮಾದಕತೆ ಗಜಲ್‌ ಗಳ ರಸಗಂಧಸಿದ್ಧಿಯಿಂದ ಸವಿಯಲು ಮಾತ್ರ ಸಾಧ್ಯವಾಗುವಂಥದ್ದು. ಗಜಲ್‌ ಗಳು ಮೇಲ್ನೋಟಕ್ಕೆ ಶಾಂತವಾದ ಕಡಲಿನೋಪಾದಿಯಲ್ಲಿ ಕಂಡರೂ ಸಹ, ಅಂತರಾಳದಲ್ಲಿ ಭೋರ್ಗರೆಯುತ್ತಿರುವ ಸೂಚನೆ ದಕ್ಕುತ್ತದೆ. ಹಾಗೆಯೇ, ಧ್ಯಾನಿಸಿದಂತೆ ಬರೆದಿರುವ ಗಜಲ್ ಗಳಿಗೆ… ಮೋಹಿಸುವ ಶಕ್ತಿಯಿದೆ, ಭಾವಪರವಶಗೊಳಿಸುವ ಯುಕ್ತಿಯಿದೆ, ಆಧ್ಯಾತ್ಮಿಕ ಒಲವಿನ ಮಾರ್ಗದ ಮುಕ್ತಿಯಿದೆ  ; ಹಾಗೂ ವೈರಾಗ್ಯಭಾಗ್ಯ ಸುಖದ ಅನುರಕ್ತಿಯಿದೆ. ಇದಿಷ್ಟೇ ಅಲ್ಲದೆ,  “ಯಾರೂ ಕಾಣದ್ದನ್ನು ಕಾಣಿಸುವ, ಕೇಳದ್ದನ್ನೂ ಕೇಳಿಸುವ, ಗಜಲ್ ಎಂದರೆ ಹೀಗಿರಬೇಕು, ಎಂಬ ಭಾಷ್ಯ ಬರೆಸಿಕೊಳ್ಳುವ ಬೌದ್ಧಿಕ ಪಕ್ವತೆ ಇದೆ”. 

೫. ಗಜಲ್ ಗಳ ಮದಿರೆಯ ಗುಟುಕುಗಳನ್ನು ಒಂದೊಂದಾಗಿ ಹೀರುತ್ತಾ ಹೋದಂತೆ… ಅವುಗಳ ಆಳ, ವಿಸ್ತಾರ ಸುಲಭಕ್ಕೆ ಎಟುಕುವುದಿಲ್ಲ. ವಿಷಯದಿಂದ ವಿಷಯಕ್ಕೆ ಪದಗಳ ಮುಖೇನ ಅವಿಚ್ಛಿನ್ನ ನಂಟು ಬೆಸೆಯುತ್ತ ಆರಂಭ ಮತ್ತು ಅಂತ್ಯದ ಸುಳಿವನ್ನು ಬಿಟ್ಟುಕೊಡದಂತೆ, ಹೆಜ್ಜೆಗುರುತು ಬಿಡದೆ ಹಕ್ಕಿ ಆಗಸಕ್ಕೆ ಹಾರಿದಂತೆ ಭಾಸವಾಗಬೇಕು. ಕಾವ್ಯ ಇರಬೇಕಾದದ್ದೆ ಹೀಗೆ ! ‘ಇತಿಯಲ್ಲಿ ಸಮಷ್ಟಿಯನ್ನು ಕಾಣಿಸುವ ಹಾಗೇ, ತನ್ನ ಮಿತಿಗಳನ್ನು ಮೀರಿ ಅಪರಿಮಿತ ಅನುಭವಕ್ಕೆ ತೆರೆದುಕೊಳ್ಳುವ ಹಾಗೇ, ಶೂನ್ಯದಲ್ಲಿ ಭವಿಷ್ಯವನ್ನು ಸಾಕ್ಷಾತ್ಕರಿಸುವಂತೆ, ಅಮಲಿನಲ್ಲೂ ಅಂತಃಪ್ರಜ್ಞೆಯನ್ನು ಜಾಗೃತವಾಗಿಸುವಂತೆ.’  ಎಂದು ರಸಪ್ರಜ್ಞರು ಬಣ್ಣಿಸುವುದುಂಟು.  

೬. ಗಜಲ್ ಎಂಬುದು ಮೋಹಕ ಕಾವ್ಯ, ಪ್ರೇಮ ಎಂಬ ಮದಿರೆಯ ದ್ರವ್ಯ, ಹೆಂಗೆಳೆಯರ ಪಿಸುನುಡಿ, ಮೋಹನ ಮುರಲಿಯ ಮಧುರ ಗಾನ, ನೊಂದ ಮನದ ವೇದನೆಯ ಭಾವ ತರಂಗ, ಅದರ ಲಾಲಿತ್ಯಕ್ಕೆ,  ವೈಯಾರಕ್ಕೆ, ಮೈಮಾಟಕ್ಕೆ, ಸೌಂದರ್ಯಕ್ಕೆ ವಶವಾಗದವರಿಲ್ಲ… ಮಾರುಹೋಗದವರಿಲ್ಲ, ವಾಹ್… ವಾಹ್… ಅನ್ನದವರಿಲ್ಲ. ಗಜಲ್ ಎಂದರೇನೆ ಪ್ರೇಮದ ಪಾರಮಾರ್ಥಿಕತೆ, ಕವಿಯ ಆತ್ಮ ಸಾಂಗತ್ಯತೆ, ಧ್ಯಾನಸ್ಥ ಮನಸ್ಸಿನ ಸದೃಶ್ಯಾ, ಸುಂದರ ಕಣ್ಣಿನ ಹೊಳಪಿನ ಬೆಳಗು, ಗಾಯಗೊಂಡ ಜಿಂಕೆಯ ಆರ್ತನಾದ…. “ಗಜಲ್ ಎಂದರೆ ಎಲ್ಲವೂ ಹೌದು, ಏನೆಂದರೆ ಏನೂ ಅಲ್ಲ” ಎನ್ನಬಹುದಾಗಿದೆ.  ಗಜಲ್‌ ಗಳಲ್ಲಿ ಅನವಶ್ಯಕವಾಗಿ, ಅಲಂಕಾರಿಕವಾಗಿ ಏತೇಚ್ಛವಾಗಿ ಉರ್ದು, ಹಿಂದಿ ಪದಗಳ ಬಳಕೆ  ಹೆಚ್ಚುತ್ತಿರುವ ಸಮಯದಲ್ಲಿ ಇತರೆ ಭಾಷೆಯ ಪದಗಳ ಬಳಕೆ, ಕನ್ನಡ ಭಾಷೆಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿದೆ. ಗಜಲ್ ಶಾಂತರಸರಾದಿಯಾಗಿ ಕನ್ನಡ ಸ್ವಾರಸ್ವತ ಲೋಕಕ್ಕೆ ಬಂದಿದೆಯಾದರೂ ಸಹ, ಇನ್ನೂ ಪೂರ್ಣ ಪ್ರಮಾಣದಲ್ಲಿ ಕನ್ನಡ ಭಾಷೆಯ ವರ್ಚಸ್ಸಿಗೆ ಒಲಿದಿಲ್ಲ ! ಉರ್ದು ಹಾಗೂ ಹಿಂದಿ ಭಾಷೆಯ ದಟ್ಟವಾದ ಪ್ರಭಾವ ಕನ್ನಡದ ಗಜಲ್ ಕಾರರ ಮೇಲಿರುವುದನ್ನು ಕಾಣಬಹುದಾಗಿದೆ. ಅನೇಕರು ಉರ್ದು ಭಾಷೆಯ ಮೋಹಕ್ಕೆ ಒಳಗಾಗಿ, ಅದರ ನೆರಳಲ್ಲಿ, ಅವರದೆ ಭಾಷೆಯಲ್ಲಿ ಹೇಳಬೇಕೆಂದರೆ ‘ಬೇಷುಮಾರ್’ ಆಗಿ ಉರ್ದು ಪದಗಳನ್ನು ಬಳಸಿರುವುದನ್ನು ಕಾಣುತ್ತೇವೆ. ಅದು ಕವಿಯ ಸ್ವಾತಂತ್ರವೆಂದು ಭಾವಿಸಿದರೂ ಸಹ, ಬಳಕೆ ಒಂದು ಮಿತಿಯಲ್ಲಿರಬೇಕಾದ ಅವಶ್ಯಕತೆ ಇದೆ.

ಗಜಲ್ ಕಾವ್ಯ ರಚನೆಗೆ ಸಂಬಂಧಿಸಿದಂತೆ ಹಲವಾರು ದ್ವಂದ್ವಗಳು  ಮತ್ತು ವಿರೋಧಾಭಾಸಗಳು :

ಸರಸ್ವತಲೋಕದಲ್ಲಿ ಅನೇಕ ವಿರೋಧಾಭಾಸಗಳು ಮನೆಮಾಡಿದ್ದು, ಬಗೆಹರಿಯದ ಗೊಂದಲಗಳಾಗಿ ಪರಿಣಮಿಸಿರುವುದು, ಕನ್ನಡ ಗಜಲ್ ಸಾಹಿತ್ಯದ ಬೆಳವಣಿಗೆಗೆ ಮಾರಕವಾಗಿದೆ ಎನ್ನಬಹುದು. ಗಜಲ್ ಗಳ ರಚನ ಕ್ರಮಗಳನ್ನು ಗಮನಿಸಿದಾಗ… ‘ಮತ್ಲಾ ಮತ್ತು ಮಕ್ತಾ’ಗಳಿಗೆ ಅದರದೇ  ಆದ ಪ್ರಾಮುಖ್ಯತೆ ಇದೆ. ಒಂದು ಗಜಲ್ ನ  ಅಡಿಪಾಯವಾದರೆ, ಮತ್ತೊಂದು ಛಾವಣಿ. ‘ಕಾಫಿಯಾಗಳು’ ಆಧಾರ ಸ್ತoಭಗಳೆಂದು ಹೇಳಬಹುದು. ಮತ್ಲಾಗಳನ್ನು ಸಶಕ್ತವಾಗಿ ಕಟ್ಟಲ್ಪಡದೆ ತೀರ ಕಳಪೆಯಾಗಿ ರಚಿಸಲ್ಪಡುತ್ತಿರುವುದು ಹಾಗೂ ಮಕ್ತಾದಲ್ಲಿ ಹಿಡಿದಿಡಬೇಕಾದ ಒಟ್ಟು ಸಾರಾಂಶ ಮಾಯವಾಗುತ್ತಿರುವುದು, ಹಾಗೂ  ಗಜಲ್ಗಳ ಜೀವಾಳವಾದ ಕಾಫಿಯಾಗಳನ್ನು ತರದೇ ಇರುವುದು ಅನಾರೋಗ್ಯಕಾರಿ ಬೆಳವಣಿಗೆಗೆ ಸಾಕ್ಷಿಯಾಗಿವೆ.

ಗಜಲ್ ನಲ್ಲಿ ʼರದೀಫ್ʼ ಎಂಬುದು ತೂಕದ ಬೊಟ್ಟಿದ್ದಂತೆ. ಗಜಲಿನ ಸೌಂದರ್ಯ  ಹೆಚ್ಚಿಸುವ, ಲಯ ತಂದು ಕೊಡುವ, ಗೇಯತೆಯಾಗಿಸುವಲ್ಲಿ ಸಹಕಾರಿಯಾಗುವ ಗಜಲ್ ಗೆ ಒಂದು ಮೆರಗು ಪ್ರಸಾದಿಸುವ ಆಭರಣ ಎಂದು ಹೇಳಬಹುದು. ನಮ್ಮಲ್ಲಿ ಬಹುತೇಕ ಗಜಲ್ಗಳಲ್ಲಿ ಬೇರೆ ಬೇರೆ ರದೀಫ್ ಗಳನ್ನು ಬಳಸುವ ವಿಪುಲ ಅವಕಾಶಗಳಿದ್ದರೂ ಸಹ ಗಜಲ್ಕಾರರು ಕೇವರ ಸಖಿ, ಸಾಕಿ ಮತ್ತು ಗಾಲಿಬ್ ಗೆ ಮಾತ್ರ ಜೋತುಬೀಳುವುದು, ಬಳಸಿದ ರದೀಫ್ ಗಳನ್ನೆ ಮತ್ತೆ ಮತ್ತೆ ಬಳಸಿ ಕ್ಲಿಷೆಯಾಗಿಸುತ್ತಿರುವುದು,  ಅದರಲ್ಲೂ ಹಲವರಂತೂ  ಗಝಲ್ ಗಳಲ್ಲಿ ಗಾಲಿಬ್ ಮತ್ತು ಸಾಕಿಯನ್ನು ವಿನಾಕಾರಣ, ಪ್ರಯತ್ನಪೂರ್ವಕವಾಗಿ ಎಳೆದು ತಂದಂತೆ ಭಾಸವಾಗುತ್ತದೆ. ರದೀಫನ್ನು ಗಜಲ್ ಗಳಲ್ಲಿ ಅವಶ್ಯಕತೆಗೆ ತಕ್ಕಂತೆ ಮಾತ್ರ ಬಳಸಬೇಕಾಗುತ್ತದೆ ಎಂದು ಗಜಲ್ ಧರ್ಮ ಹೇಳುತ್ತದೆ. ಇಲ್ಲದಿದ್ದರೆ ಅದಕ್ಕೆ ಯಾವ ಅರ್ಥವೂ, ವಿಶೇಷತೆಯೂ, ಮೌಲ್ಯವೂ ದಕ್ಕದೆ ಕೇವಲ ಅನಾಥ ಪದವಾಗಿ ಮಿಗಿಲುವ ಸಾಧ್ಯತೆಗಳೇ ಹೆಚ್ಚು ಎನ್ನಬಹುದು.

ಗಜಲ್ ನಲ್ಲಿ ಕಾವ್ಯನಾಮವಾಗಿ ಬಳಸಲ್ಪಡುವ ‘ತಕಲ್ಲೂಸ್ ನಾಮ’ಕ್ಕೆ ಅದರದೇ ಆದಂತಹ ಒಂದು ಮಹತ್ವವಿದೆ. ತಕಲ್ಲೂಸ್ ನಾಮಕ್ಕೆ ನಿರೂಪಕನ, ನಿರ್ದೇಶಕನ ಕಾರ್ಯಕ್ಷಮತೆ ಇದೆ. ಅಷ್ಟೇ ಅಲ್ಲದೆ ಅದರಿಂದ ಲಿಪಿಕಾರ-ಕವಿ ಯಾರೆಂದು, ತಿಳಿಯುತ್ತಲ್ಲದೆ, ಗಜಲಿಗೊಂದು ಅಸ್ತಿತ್ವ ಸಿದ್ಧಿಸುತ್ತದೆ.

ಗಜಲ್ ಕಾವ್ಯದಲ್ಲಿ ಮಿಸ್ರಗಳು ಸ್ವಾತಂತ್ರವಾಗಿರಬೇಕೆಂಬ ಕಾರಣಕ್ಕೆ ಸಾಲುಗಳು, ಕೆಲವೆಡೆ ಕೇವಲ ಹೇಳಿಕೆಗಳಾಗಿ ರೂಪುಗೊಳ್ಳುತ್ತಿವೆ. ಆದರೆ ಹೇಳಿಕೆಗಳು ಎಂದಿಗೂ  ಗಜಲ್ಗಳಾಗುವುದಿಲ್ಲ ಎಂಬುದು ಅನುಭವಿ ಗಜಲ್ ಕಾರರ ಕಾಳಜಿಯಾಗಿದೆ. ಕಾವ್ಯದ ಭಾಷೆ ವಾಚ್ಯತೆಯನ್ನು ಪಡೆದುಕೊಳ್ಳುತ್ತಿದೆ.  ಅಲ್ಲಲ್ಲಿ ನಿಯಮಗಳ ಬಳಕೆ ಮಾಡದಿರುವುದು ಮತ್ತು ಗಜಲ್ ಚೌಕಟ್ಟಿನ ಎಲ್ಲೆ ಮೀರಿ  ಸೀಮೋಲ್ಲಂಘನೆ ಆಗುವುದು ಸಹ ಗೋಚರಿಸುತ್ತದೆ. 

ದರ್ದ್ ಹೈ ಸಾರಿ ಜಿಂದಗಿ 

ಜಿಸ್ ಕಾ ಕೊಯಿ ಸಿಲಾ ನಹೀ 

ದಿಲ್ ಕೋ ಫರೇಬ್ ದೀಜಿಯೆ 

ಔರ್ ಯೇ ಹೋಸಲಾ ನಹೀ 

‌ಗಝಲ್ ಎಂದು ನಾವೆಲ್ಲಾ ಆಸಕ್ತಿಯಿಂದ ಕೇಳುವ ಹಾಡಿನ ಧಾಟಿಯ  ಮೂಲ, ಫಾರಸಿ ಜಾನಪದವೆಂಬ  ಅಭಿಪ್ರಾಯವಿದೆ. ಗಝಲ್  ಅಂದರೆ ಫಾರಸಿ ಭಾಷೆಯಲ್ಲಿ ಜಿಂಕೆ ಎನ್ನುವ ಅರ್ಥವಿದೆ. ಸ್ವಚ್ಛಂದವಾಗಿ ಕಾಡಿನಲ್ಲಿ  ಓಡಾಡುವ  ಜಿಂಕೆ ಸೆರೆಸಿಕ್ಕಾಗ ಹೊರಡಿಸುವ ಅರ್ತನಾದವೇ ಕರುಣಾರಸ, ತಲ್ಲಣಗಳಗೊಂಡ `ಗಜಲ್~ ಎಂದು ಕೆಲವರು  ಆರ್ಥೈಸುತ್ತಾರೆ. ಗಜಲ್ ಎಂದಾಕ್ಷಣವೇ ನಮ್ಮಲ್ಲಿ ರಸಿಕರು ಎಂದು ಕರೆಸಿಕೊಳ್ಳಲು ಇಚ್ಛಿಸುವರು, ಅದರಲ್ಲೂ ಮುಸಲ್ಮಾನ್ ಬಾಂಧವರು ಹೆಮ್ಮೆಯಿಂದ ಕಣ್ಣರಳಿಸಿ ಮಾತನಾಡುವರು. ಒಂದೇ ಒಂದು ಶೈರಿ ಹೇಳಿದರಂತೂ ಅದರಲ್ಲಿ ಅರ್ಥವಿರಲಿ ಇಲ್ಲದಿರಲಿ, ಏನೋ ಸಾಧನೆ, ಸಾರ್ಥಕತೆ, ಅವರ ಮುಖದಲ್ಲಿ ಮೂಡುವ ಮಿಂಚನ್ನು ನೋಡೇ ತಿಳಿಯಬೇಕು. 

ಇಷ್ಟಕ್ಕೂ ಗಝಲ್  ಪದದ ಅರ್ಥವೇನೆಂದು  ಸ್ವಲ್ಪ ಅವಲೋಕಿಸಿದರೆ,  ನಮಗೆ ಗೋಚರಿಸುವುದು, ಶೃಂಗಾರ, ಪ್ರೇಮ, ವಿರಹ, ಅಗಲುವಿಕೆಗಳು ಇತ್ಯಾದಿ. 

ಉತ್ತಮವಾದ  ಗಜಲ್, ರೂಪಗೊಳ್ಳಬೇಕಾದರೆ, ಸಾಮಾನ್ಯವಾಗಿ ಐದು ನಿಯಮಗಳನ್ನು ಹೊಂದಿರಲೇಬೇಕೆಂಬ ಮಾತಿದೆ. 

೧. ಮಟ್ಲಾ: ಇದು ಗಜಲ್‌ನಲ್ಲಿ ಮೊದಲ ಶೇರ್ ಆಗಿದೆ

೨. ರಾಡಿಫ್: ಇದು ಪಲ್ಲವಿ ಪದ ಅಥವಾ ನುಡಿಗಟ್ಟು.

೩. ಖಾಫಿಯಾ: ಗಜಲ್‌ನಲ್ಲಿ ಪ್ರಾಸಬದ್ಧ ಮಾದರಿ

೪. ಮಕ್ತಾ: ಇದು ಗಜಲ್‌ನ ಕೊನೆಯ ದ್ವಿಪದಿ

೫. ಬೆಹರ್: ಇದು ಅದೇ ಮೆಟ್ರಿಕ್ ಮಾದರಿ ಮತ್ತು ಪಠ್ಯಕ್ರಮದ ಎಣಿಕೆಯನ್ನು ಅನುಸರಿಸುತ್ತದೆ. 

ರದೀಫ್:- ಗಜಲ್ ಕಾವ್ಯದಲ್ಲಿ ಬರುವ ಒಂದೇ ತರಹದ ಅಕ್ಷರಗಳ ಗುಂಪಾಗಿದ್ದು ಕಾಫಿಯಾದ ಮುಂದೆ ಬರುವ ಪದವಾಗಿದೆ. ಇದು ಎಲ್ಲಾ ದ್ವಿಪದಿಗಳಲ್ಲಿ ಪುನರಾವರ್ತಿತವಾಗಿ ಬಂದು ಗಜಲ್ ಕಾಂತಿ ಮತ್ತು ರಮ್ಯತೆ ಸೌಂದರ್ಯವನ್ನ  ಹೆಚ್ಚಿಸುತ್ತದೆ.

‘ರದೀಫ್’ ಗಜಲ್ ಗೆ ಗೇಯತೆಯನ್ನು ನೀಡುತ್ತದೆ. ಲಾಲಿತ್ಯ ಹೆಚ್ಚಿದಷ್ಟು ಭಾವ ತೀವ್ರತೆ ಉದಯಿಸಿ ಸಂಗೀತದ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಆದರೆ ಅದರ ಬಳಕೆ ಮಾತ್ರ ಔಚಿತ್ಯದಿಂದ ಕೂಡಿರಬೇಕು. ಅದು ಅನಗತ್ಯವಾಗಿರದೆ ಇಡೀ ಗಜಲ್ ಗೆ ಮೆರುಗು ನೀಡುವಂತಿರಬೇಕು. ಆದರೆ ಗಜಲ್ ಗಳಲ್ಲಿ ರದೀಫ್ ಗಳ ಆಯ್ಕೆಯ ಬಗ್ಗೆಯೇ ಸಾಕಷ್ಟು ಗೊಂದಲಗಳಿವೆ. ರದೀಫ್ ಗಳು ಸಹೃದಯ ಓದುಗರನ್ನು ಯೋಚನೆಗೆ ಹಚ್ಚುವಂತಿರಬೇಕು. ಸಖಿ, ಸಖಾ, ಗೆಳೆಯ, ಗೆಳತಿ, ಮಿತ್ರ, ಸಾಕಿ, ಗಾಲಿಬ್, ನಾವು, ನೀವು… ಇಂತಹ ರದೀಫ್ ಗಳನ್ನು ಹೇರಳವಾಗಿ ಬಳಸಲಾಗುತ್ತಿದೆ. ಇದರಿಂದ ಕೆಲವೊಮ್ಮೆ ಗಜಲ್ ನ ಧ್ವನಿಯ ರಸಭಂಗವಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ..! ರದೀಫ್ ನ ಬಳಕೆ ಪ್ರತಿ ಗಜಲ್ ನಲ್ಲಿಯೂ ಭಿನ್ನವಾಗಿರಬೇಕು. ಇಲ್ಲದಿದ್ದರೆ ಅದು ಕೇವಲ ‘ಏಕತಾನತೆ’ಯನ್ನು ಉಂಟು ಮಾಡುತ್ತದೆಯಷ್ಟೇ..! ರದೀಫ್… ಇಡೀ ಗಜಲ್ ಗೆ ದಿಕ್ಸೂಚಿಯಾಗಿ ಕೆಲಸ ಮಾಡುತ್ತದೆ. ಯಾವ ರದೀಫ್ ಕೂಡ ಒತ್ತಾಯಪೂರ್ವಕವಾಗಿ ಬರಬಾರದು, ಉಸಿರಿನಂತೆ ಸರಳವಾಗಿ, ಸುಲಲಿತವಾಗಿ ಬರಬೇಕು ; ಬರದೇ ಇದ್ದರೂ ನಡೆದೀತು! ಏಕೆಂದರೆ ಗಜಲ್ ಗೆ ರದೀಫ್ ಅನಿವಾರ್ಯವಲ್ಲ, ಅವಶ್ಯಕತೆಯಷ್ಟೆ. ಇದನ್ನು ಗಜಲ್ ಛಂದಶಾಸ್ತ್ರಜ್ಞರಾದ ಅಲ್ಲಾಮ ಅಖ್ಲಾಕ್ ದೆಹಲವಿಯವರು ತಮ್ಮ ‘ಘನ ಶಾಯರಿ’ ಕೃತಿಯಲ್ಲಿ ರದೀಫ್ ಕುರಿತು ಹೀಗೆ ಹೇಳಿದ್ದಾರೆ. “ರದೀಫ್ ಇಲ್ಲದಿದ್ದರೂ ನಡೆದೀತು, ಕಾಫಿಯಾ ಇಲ್ಲದಿದ್ದರೆ ಅದು ಗಜಲ್ ಆಗುವುದಿಲ್ಲ”. ಇದೇ ಅರ್ಥದ ಮಾತುಗಳನ್ನು ಮಮ್ತಾಜ್ ಉರ್ರಷಿದ್ ರವರು ತಮ್ಮ ‘ಇಲ್ಮ್ ಕಾಫಿಯಾ’ ಪುಸ್ತಕದಲ್ಲಿ ಹೇಳಿದ್ದಾರೆ. ಇದು ‘ಕವಾಫಿ’ ಯ ಮಹತ್ವ, ಅನಿವಾರ್ಯತೆಯನ್ನು ಸಾರುತ್ತದೆ. ಗಜಲ್ ಗೋ ರದೀಫ್ ಬಳಸುವುದಕ್ಕಿಂತ ಮುಂಚೆ ಅದರ ಪ್ರಕಾರ, ಅದರ ಅರ್ಥ, ಸಾಧ್ಯತೆಗಳನ್ನು ಅರಿಯುವ ಪ್ರಯತ್ನ ಮಾಡಬೇಕು. ರದೀಫ್ ನಲ್ಲಿ ಚೋಟಿ ರದೀಫ್, ಮಜಲಿ ರದೀಫ್ ಹಾಗೂ ಲಂಬಿ ರದೀಫ್ ಎಂಬ ಮೂರು ಪ್ರಕಾರಗಳಿವೆ. ರದೀಫ್ ಇಲ್ಲದೆ ಗಜಲ್ ಗಳ ಸೃಷ್ಟಿಕಾರ್ಯ ನಡೆದಿದೆ. ಫಿರಾಖ್ ಮತ್ತು ಅಲ್ಲಮಾ ಇಕ್ಬಾಲ್ ರಂತಹ ಮಹಾಕವಿಗಳು ರದೀಫ್ ರಹಿತ ಗಜಲ್ ಗಳನ್ನು ರಚಿಸಿದ್ದಾರೆ. ಇದಕ್ಕೆ ಗೈರ್ ಮುರದ್ದಫ್ ಗಜಲ್/ಕಾಫಿಯಾನ ಗಜಲ್ ಎಂದು ಕರೆಯುತ್ತಾರೆ.

ರಾಯಚೂರು ಹೆಂಮರಾಳು “‘ಸತ್ಯ ಸ್ನೇಹ ” ವೆಂಬ ಸಾಹಿತ್ಯ ‘ಪ್ರಕಾಶನವನ್ನು ಪ್ರಾರಂಭಿಸಿದ್ದಾರೆ. ಹಲವು ಗಝಲ್, ರುಬಾಯಿ, ಫರ್ದ್ ಗಳನ್ನು ಉರ್ದುವಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.  ೧೯೯೫ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮತ್ತೊಬ್ಬ ಗಜಲ್ ಕೃಶಿಕಾರ  ಶಾಂತರಸರು, ೪೬ ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವರು  ಪಠ್ಯ ಪುಸ್ತಕ ಕಮಿಟಿಯಲ್ಲೂ ಇದ್ದು  ಸೇವೆ ಸಲ್ಲಿಸಿದ್ದಾರೆ

ಸಾಮಾನ್ಯವಾಗಿ ಯಾವುದೇ ಕಾವ್ಯ ಪ್ರಕಾರವು ಪದಗಳ ಪುನರಾವರ್ತನೆಯನ್ನು ಬಯಸುವುದಿಲ್ಲ. ಒಂದು ವೇಳೆ ಒಂದೇ ಶಬ್ದಕ್ಕೆ ಬೇರೆ ಬೇರೆ ಅರ್ಥಗಳಿದ್ದರೆ ಬಳಸಬಹುದು. ಇದೇನು ಲಿಖಿತ ನಿಯಮವಲ್ಲ, ಇದೊಂದು ಅಧ್ಯಾಹಾರ !  (ವ್ಯಾಕರಣದಲ್ಲಿ ಬಿಟ್ಟುಹೋಗಿರುವುದನ್ನು ಸೇರಿಸುವ ಪ್ರಕ್ರಿಯೆ) ಇದಕ್ಕೆ ಶಬ್ದಸಂಪತ್ತು, ಅಧ್ಯಯನ, ಅಧ್ಯಾಪನಗಳ  ಅವಶ್ಯಕತೆ ಇದೆ.

ಈ ರೀತಿಯಲ್ಲಿ “ಗಜಲ್ ಮಧುಶಾಲೆ” ಯಲ್ಲಿ ಹಲವಾರು ಸಂದೇಹ, ಸವಾಲುಗಳು ಇವೆ. ಇವುಗಳನ್ನು ಮೆಟ್ಟಿ ನಿಲ್ಲಬೇಕಾದರೆ ಗಜಲ್ ಪರಂಪರೆಯ ಪರಿಚಯ ಅಗತ್ಯವೆನಿಸುತ್ತದೆ. ಗಜಲ್ ರಚಿಸುವುದಕ್ಕಿಂತ  ಮುಂಚೆ ನಾವು ಗಜಲ್ ಛಂದಸ್ಸು, ಆಶಯಗಳನ್ನು ಕುರಿತು ಅರಿಯಬೇಕಿದೆ. ಗಜಲ್ ಬರಹ, ಕೇವಲ ಮನೋರಂಜನೆಯ ಸರಕಲ್ಲ ; ಸಮಯ ಕೊಲ್ಲುವ ಅಸ್ತ್ರವೂ  ಅಲ್ಲ. ಅಸಲ್ ಗೆ  ಅದೊಂದು ಧ್ಯಾನ ಬಯಸುವ ಅನುಪಮ ಸಾಹಿತ್ಯ ರೂಪ. ಇದಕ್ಕೆ ಬದ್ಧತೆ ಹಾಗೂ ಪ್ಯಾಷನ್ ಬೇಕು. ಈ ಹಿನ್ನೆಲೆಯಲ್ಲಿ ‘ಋಷಿಯಾಗದವನು ಕವಿಯಾಗಲಾರ’ ಎಂಬ ವಾಕ್ಯ ಸಾರ್ವತ್ರಿಕವೆನಿಸುತ್ತದೆ. ಈ ಸೂಕ್ಷ್ಮತೆಯನ್ನು ಅರಿತು ಕವಿ,  ರಕೀಬ್ ಮುಕ್ತಾರ್ ಅವರು ಈ ರೀತಿಯಲ್ಲಿ ಹೇಳಿದ್ದಾರೆ.

“ಗಜಲ್ ಗಜಲ್ ಮೆ ಬಡಾ ಫರ್ಕ್ ಹೈ ಮೇರೆ ಭಾಯಿ,

ಕಹೀ ಉತಾರೀ ಗಯೀ ಹೈ ;  ಕಹೀ ಬನಾಯೀ ಗಯೀ ಹೈ”

ಮುಷಾಯಿರಾ ಸಂಸ್ಕೃತಿ, ಹಾಗೂ ಶಾಸ್ತ್ರೀಯ ಅಧ್ಯಯನದ ಕೊರತೆ : (ಮೇಫಿಲ್ , ಮುಶಾಯ್ರಿ, poetic symposium)

ತರಹಿ ಗಜಲ್:-

ತರಹಿ ಎಂದರೆ ತರಹ ಧಾಟಿ ಶೈಲಿ ಎಂದರ್ಥ. ಅಂದರೆ ಕವಿಯು ತನಗಿಷ್ಟದ ಬೇರೊಬ್ಬ ಕವಿಯ ಗಜಲ್ ನ ಒಂದು ಮತ್ಲಾ ಅಥವಾ ಮಿಸ್ರ ಆರಿಸಿಕೊಂಡು ಮೂಲ ಕವಿಯ ಮಾದರಿಯಲ್ಲೇ ಬರೆಯುವುದನ್ನು ತರಹಿ ಗಜಲ್ ಎಂದು ಕರೆಯುತ್ತಾರೆ.

‘ತರಹೀ ಗಜಲ್’ ಗಜಲ್ ನ ಪ್ರಕಾರಗಳಲ್ಲಿ ತುಂಬಾ ಪ್ರಮುಖವೆನಿಸುತ್ತದೆ. “ಹಿಂದಿ, ಉರ್ದುವಿನ ‘ತರಹ’, ‘ಇಸ್ ತರಹ’, ಎಂಬ ಶಬ್ಧಗಳಿಂದ ‘ತರಹೀ’ ಎಂಬ ಪದ ಹುಟ್ಟಿದೆ. ಕನ್ನಡದಲ್ಲಿ ಇವುಗಳಿಗೆ ಸಂವಾದಿಯಾಗಿ ‘ಇಂತಹ’, ‘ಇದರಂತಹ’, ಎಂಬ ಶಬ್ದಗಳನ್ನು ಬಳಸಲಾಗುತ್ತದೆ. ಅಂದರೆ ಮಾದರಿಯಾಗಿ ನೀಡಲಾಗಿರುವ ಮಿಸ್ರಾದಂತಹ ಜಮೀನನ್ನು ಬಳಸಿ ಬರೆಯುವ ಗಜಲ್ ಗಳಿಗೆ ‘ತರಹೀ ಗಜಲ್’ ಎನ್ನುತ್ತಾರೆ. (ಗಿರೀಶ್ ಜಕಾಪುರೆ: ನಿನ್ನ ಮರೆಯುವ ಮಾತು: ಪು-xiii ) ತರಹೀ ಗಜಲ್ ಬರೆಯುವ ಗಜಲ್ ಕಾರರು ತಾವು ಪರರ ಯಾವ ಮಿಸ್ರಾ ಪಡೆಯಬೇಕು, ಪಡೆದಂತಹ ಮಿಸ್ರಾವನ್ನು ತಮ್ಮ ಗಜಲ್ ನಲ್ಲಿ ಎಲ್ಲಿ ಬಳಸಬೇಕು ಎಂಬುದು ಬಹು ಚರ್ಚೆಯ ವಿಚಾರ. “ಮತ್ಲಾದ ಊಲಾ ಮಿಸ್ರಾ ಮತ್ತು ಸಾನಿ ಮಿಸ್ರಾಗಳಲ್ಲಿ ಹೆಚ್ಚಾಗಿ ಸಾನಿ ಮಿಸ್ರಾ ಆಯ್ದುಕೊಂಡಿರುವ ಉದಾಹರಣೆಗಳು ಹೆಚ್ಚಾಗಿವೆ” ಎನ್ನುತ್ತಾರೆ ಗಿರೀಶ್ ಜಕಾಪುರೆ. (ಗಿರೀಶ್ ಜಕಾಪುರೆ : ನಿನ್ನ ಮರೆಯುವ ಮಾತು : ಪು-xv ) ತೆಗೆದುಕೊಂಡ ‘ಸಾನಿ ಮಿಸ್ರಾ’ ವನ್ನು ತರಹೀ ಗಜಲ್ ಬರೆಯುವ ‘ಗಜಲ್ ಗೋ’ ತಮ್ಮ ಗಜಲ್ ನಲ್ಲಿಯೂ ‘ಸಾನಿ ಮಿಸ್ರಾ’ ವನ್ನಾಗಿಯೇ ಬಳಸಬೇಕು ಎನ್ನಲಾಗುತ್ತಿದೆ. ಇನ್ನೂ ಷೇರ್ ನಿಂದ ತರಹೀ ಮಿಸ್ರಾ ಆಯ್ದುಕೊಳ್ಳಬೇಕಾದರೆ ‘ಸಾನಿ ಮಿಸ್ರಾ’ ವನ್ನೇ ಆಯ್ದುಕೊಳ್ಳಬೇಕಾಗುತ್ತದೆ. ಇಷ್ಟಾಗಿಯೂ ಕೆಲವು ಸಂದೇಹಗಳು ಮನದಲ್ಲಿ ಉಳಿಯುತ್ತವೆ. ಇವುಗಳಿಗೆ ಪರಿಹಾರ ದೊರೆಯಬೇಕಾದರೆ ನಮ್ಮಲ್ಲಿ ‘ಮುಶಾಯಿರಾ’ ಸಂಸ್ಕೃತಿಯು ಬೆಳೆಯಬೇಕು ; ಹಾಗೂ ಗಜಲ್ ಕುರಿತು ಶಾಸ್ತ್ರೀಯ ಅಧ್ಯಯನ ನಡೆಯಬೇಕು.

ನಾವು ಹೇಳುವ ಯಾವುದೇ ‘ಷೇರ್’ ಗಜಲ್ ನ  ಒಂದು ಪ್ರತ್ಯೇಕ  ಅಂಗವಿದ್ದಂತೆ. ಗಜಲ್ ನ ಪ್ರತಿಯೊಂದು  ಅದು ತನ್ನಷ್ಟಕ್ಕೆ ತಾನು ಅರ್ಥವುಳ್ಳ ಸಂಪೂರ್ಣ ಘಟಕ. ಈ ಅರ್ಥದಲ್ಲಿ ಪ್ರತಿ ಗಜಲ್ ತನ್ನ ‘ಅಶ್ಅರ್’ ನಷ್ಟು ಸ್ವತಂತ್ರ ಕಾವ್ಯಗಳಾಗಿರುತ್ತವೆ. ಇದೊಂದು ಬೇರೆ ಬೇರೆ ಹೂಗಳ ಸುಂದರ ಗುಲ್ದಸ್ತವಿದ್ದಂತೆ,  ಗಜಲ್ ನ ಪ್ರತಿ ಷೇರ್ ನ ‘ಮಿಸರೈನ್’ ಸ್ವತಂತ್ರವಾಗಿರಬೇಕು, ಒಂದಕ್ಕೊಂದು ಬೆಸೆದುಕೊಂಡಿರಬಾರದು. ಅವು ಪೂರಕವಾಗಿ ಇಲ್ಲವೆ ವಿರುದ್ಧವಾಗಿಯಾದರೂ ಇರಬಹುದು. ಎರಡು ಮಿಸರೈನ್ ಪರಸ್ಪರ ಬೆಸೆದುಕೊಂಡರೆ ಅದು ಒಂದು ‘ಮಿಸ್ರಾ’ ಆಗುತ್ತದೆಯೆ ಹೊರತು ಷೇರ್ ಆಗುವುದಿಲ್ಲ. ಒಂದು ಘಟಕಕ್ಕೂ ಮತ್ತೊಂದು ಘಟಕಕ್ಕೂ ನೇರ ನಿರಂತರತೆ ಇರುವುದಿಲ್ಲ. ಆದರೆ ಅಲ್ಲಿರುವುದು ಮೂಲತಃ ಭಾವನಾತ್ಮಕ ಐಕ್ಯತೆ, ವಾತಾವರಣದ ಐಕ್ಯತೆ. ವಸ್ತುವೊಂದು ತನ್ನ ಬೌದ್ಧಿಕ ತರ್ಕದಲ್ಲಿ ಬೆಳೆಯುತ್ತ ಹೋಗುವುದಿಲ್ಲ. ಬದಲಾಗಿ ಭಾವನಾ ವಾತಾವರಣದಲ್ಲಿ ಸಾಮ್ಯವಿರುವ, ಪರಸ್ಪರ ಅಖಂಡವಾಗಿ ಬೆರೆಯಬಲ್ಲ ಭಾವಗಳು ಬೆರೆತು, ಒಂದು ವಿಶಿಷ್ಟ ಅನುಭವ ಸೃಷ್ಟಿಯಾಗುತ್ತದೆ. “ತುಂಬಾ ಚೆಲ್ಲಾಪಿಲ್ಲಿಯಾಗಿ ಚೆದುರಿದಂತೆ ಕಾಣುವ ಘಟಕಗಳನ್ನು ದಾಟಿ ಅದರ ಭಾವ ಸ್ಥಿತಿಗಳಿಗೆ ಸ್ಪಂದಿಸುವ ಪ್ರಯತ್ನ ಮಾಡಿದಾಗ ಗಜಲ್ ಗಳ ತೀವ್ರಾನುಭವ ಸಾಧ್ಯವಾಗುತ್ತದೆ”. (ಡಿ. ಆರ್. ನಾಗರಾಜ್ (ಸಂ); ಉರ್ದು ಸಾಹಿತ್ಯ ; ಪು – XXVI ) ಎಂಬ ಡಿ. ಆರ್. ನಾಗರಾಜ್ ಅವರ ಮಾತು ಸತ್ಯವಾಗಿದೆ. ಗಜಲ್ ನ ಸಮಗ್ರ ಅನುಭವ ಒಂದು ಇಡೀ ಸಂಸ್ಕೃತಿಯ ಮುಖ್ಯ ವಿವರಗಳ ತಿಳುವಳಿಕೆಯನ್ನು ನೀಡುತ್ತದೆ. 

ಭಾಷೆಯ ದೃಷ್ಟಿಯಿಂದ ಗಜಲ್ ನ್ನು ಪರಾಮರ್ಶಿಸಿ ಅವಲೋಕಿಸಿದರೆ, ಅದರ  ಉದ್ದಕ್ಕೂ ದ್ವಿಭಾಷಾ ಅಂದರೆ ಕನ್ನಡ-ಉರ್ದುಭಾಷೆಗಳ ಮಿಲನದಲ್ಲಿ ನಿಂತು ತಮ್ಮ ಅಭಿವ್ಯಕ್ತಿಯನ್ನು ರೂಪಿಸಿಕೊಳ್ಳಬೇಕಾಗಿ ಬರುವ ಪ್ರಕ್ರಿಯೆಯನ್ನು ಮನಗಾಣುತ್ತೇವೆ. ನಮ್ಮ ಕನ್ನಡ ಗಜಲ್ ಕಾರರು ತಮ್ಮ ಗಜಲ್ ನಲ್ಲಿ ಉರ್ದುವನ್ನು ಎಷ್ಟರಮಟ್ಟಿಗೆ ತಮ್ಮ ಗಜಲ್ ಭಾಷೆಯೊಳಗೆ ಅಳವಡಿಸಿಕೊಳ್ಳಬೇಕು ಎನ್ನುವ ಸಂಘರ್ಷ ಮತ್ತು ವಿವೇಚನೆ ತುಂಬಾ ಪ್ರಮುಖವೆನಿಸುತ್ತದೆ. ಸ್ವಂತಿಕೆ ಮತ್ತು ಅನ್ಯದ ನಡುವಣ ಸಂಘರ್ಷವನ್ನು ನಾವು ಇಲ್ಲಿ ಅವಲೋಕಿಸಬಹುದು. ಕನ್ನಡ ಗಜಲ್ ಗಳಲ್ಲಿ ಉರ್ದು ಭಾಷೆಯ ಪದಗಳನ್ನು ಬಳಸುವ ಬಗ್ಗೆ ದೀರ್ಘ ಚರ್ಚೆ ಸಾಗುತ್ತಿದೆ. ಉದಾಹರಣೆಗೆ,  ಗೋರೀ , ಫಕೀರ್, ಕಫನ್’, ದಫನ್, ದರ್ದ್, ಜನಾಜ, ಡೋಲಿ, ನಸೀಬ್, ಗರೀಬ್, ಜನ್ನತ್…. ಮುಂತಾದ ಶಬ್ದಗಳ ಬಳಕೆಯನ್ನು ಯಥೇಚ್ಛವಾಗಿ ಕಾಣುತ್ತೇವೆ.  ಯಾವುದೇ ಭಾಷೆ ನಿಂತ ನೀರಲ್ಲವಲ್ಲ  ; ವಿಕಸಿತವಾಗಬೇಕು ಎನ್ನುವುದು ಸತ್ಯವಾದರೂ,  ಎಷ್ಟು ಬೇಕೋ ಅಷ್ಟನ್ನು ಮಾತ್ರ  ಬಳಸಬೇಕು. ಈ ಬಹು-ಸೂಕ್ಷ್ಮಗಳನ್ನು  ನಮ್ಮ ಕನ್ನಡದ  ಮುತ್ಸದ್ಧಿಗಳಾದ  ನಯಸೇನ, ಮುದ್ದಣ್ಣನಂತಹ ಕವಿಗಳು ಸಾಂದರ್ಭಿಕವಾಗಿ ಎಚ್ಚರಿಸುತ್ತle ಬಂದಿದ್ದಾರೆ. ಯಾವುದೇ ಸಾಹಿತ್ಯ ರೂಪದಲ್ಲಿಯೂ ಅನ್ಯಭಾಷೆಯ ಪದಗಳನ್ನು ಅನಗತ್ಯವಾಗಿ ಬಳಸುವುದು ತಪ್ಪು…! ಯಾವ ಪದಗಳಿಗೆ ಸಂವಾದಿಯಾಗಿ ಬೇರೆ ಪದಗಳು ಇಲ್ಲವೊ, ಯಾವ ವಿಷಯ ವಸ್ತು ಅನ್ಯ ಭಾಷೆಯ ಪದಗಳನ್ನು ಬಯಸುತ್ತದೆಯೊ ಅಲ್ಲಿ ಅತಿಯಾಗಿ ಅರ್ಥಕೆಡೆಸದಂತೆ ಗಮನವಿಟ್ಟು ಬಳಸಬೇಕೆನ್ನುವ ವಿಷಯ ಪ್ರತಿಪಾದಕರ ಅನಿಸಿಕೆಗೆ  ಎರಡು ಮಾತಿಲ್ಲ.  ಈ ಪ್ರತಿಕ್ರಿಯೆಗೆ ನಿಮ್ಮದೇನು ಉತ್ತರ ಕೊನೆಯಲ್ಲಿ ತಿಳಿಸಿ ; ಅದು ದಾಖಲಾದರೆ  ಒಳ್ಳೆಯದು.  

ಸಾಂಪ್ರದಾಯಿಕ ಗಜಲ್ ಲಯಬದ್ಧ ರಚನೆಯೊಂದಿಗೆ ಐದರಿಂದ ಹದಿನೈದು ಜೋಡಿಗಳನ್ನು ಒಳಗೊಂಡಿದೆ. ಪ್ರತಿಯೊಂದು ಸಾಲು ಒಂದೇ ಉದ್ದವಾಗಿರಬೇಕು. ಜೋಡಿಗಳು ಆಲೋಚನೆಗಳಲ್ಲಿ ಭಿನ್ನವಾಗಿರಬಹುದು. ಮೊದಲ ದ್ವಿಪದಿಯನ್ನು ಮಟ್ಲ ಎಂದು ಕರೆಯಲಾಗುತ್ತದೆ, ಇದು ಕವನಗಳ ಸಂಗ್ರಹವಾಗಿದೆ. ಅಪರೂಪದ ಸಂದರ್ಭಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮಟ್ಲಾ ಇರಬಹುದು. ಇದು ಗಜಲ್‌ನ ಒಟ್ಟಾರೆ ಚಿತ್ರ ಮತ್ತು ಮನಸ್ಥಿತಿಯನ್ನು ನೀಡುತ್ತದೆ. ಎರಡು ಮಟ್ಲಗಳು ಇದ್ದಾಗ ಎರಡನೆಯದನ್ನು ಮಟ್ಲಾ-ಎ-ಸಾನಿ ಎಂದು ಕರೆಯಲಾಗುತ್ತದೆ.

ಕೊನೆಯ ದ್ವಿಪದಿಯನ್ನು ‘ಮಕ್ತಾ’ ಎಂದು ಕರೆಯಲಾಗುತ್ತದೆ. ಮಕ್ತಾ ಬಹಳ ಆಸಕ್ತಿಯನ್ನು ಹುಟ್ಟಿಸುವ ತರಹವಿರುತ್ತದೆ. ಇಲ್ಲಿ ಕವಿಯು ತನ್ನೊಂದಿಗೆ ಅಥವಾ ಇತರರೊಂದಿಗೆ ಮಾತನಾಡುವಾಗ ಗಜಲ್‌ಗೆ ವೈಯಕ್ತಿಕ ಉಲ್ಲೇಖವನ್ನು ನೀಡಬಹುದು. ಗಜಲ್‌ನಲ್ಲಿನ ಮತ್ತೊಂದು ಪ್ರಮುಖ ನಿಯಮ ಅಥವಾ ವೈಶಿಷ್ಟ್ಯವೆಂದರೆ ರಾಡಿಫ್  ವ್ಯವಸ್ಥೆ  ಅಂದರೆ ಎಲ್ಲಾ ದ್ವಿಪದಿಗಳಲ್ಲಿನ ಎರಡನೇ ಸಾಲು ಒಂದೇ ಪದಗಳೊಂದಿಗೆ ಕೊನೆಗೊಳ್ಳಬೇಕು. ಗಜಲ್‌ಗೆ ಯಾವುದೇ ನಿರ್ದಿಷ್ಟ ವಿಷಯ ಅಥವಾ ನಿರಂತರತೆಯ ಅಗತ್ಯವಿಲ್ಲ.

ಪ್ರತಿಯೊಂದು ಶೆರ್ ತನ್ನದೇ ಆದ ಅರ್ಥ ಮತ್ತು ವ್ಯಾಖ್ಯಾನಗಳನ್ನು ಹೊರಹೊಮ್ಮಿಸುವ  ಶಕ್ಯತೆಯನ್ನು  ಹೊಂದಿದೆ. ಗಜಲ್ ಹಿಂದೂಸ್ತಾನಿ ಸಂಗೀತದ ‘ದಾದ್ರಾ‘ಮತ್ತು ‘ಠುಮ್ರಿ’ಯನ್ನು ಹೋಲುತ್ತದೆ. ಕುತೂಹಲವೆಂದರೆ, ಗಜಲ್ ಪ್ರೀತಿ, ಪ್ರತ್ಯೇಕತೆ, ‘ಪ್ರೀತಿಯನು ಅಭಿವ್ಯಕ್ತಿಸುವ ಪಾಗಲ್ಪನ್’  (ಹುಚ್ಚುತನದಂತಹ ಕೆಲವು ಸಾಮಾನ್ಯ ವಿಷಯಗಳನ್ನು ಹೊಂದಿದೆ ಸಹಿತ)

ಕನ್ನಡದ ಗಝಲ್ ಲೇಖಕರು ಈ  ಗಝಲ್  ಮಾಧ್ಯಮವನ್ನು ಕಾಣುವ ರೀತಿ ಅನನ್ಯವಾದದ್ದು  :

ಮೂಲತ: ಉರ್ದು ಕಾವ್ಯ ಪ್ರಕಾರವಾದ ಗಜಲ್‌ನ್ನು ಕನ್ನಡಕ್ಕೆ ಭಾಷೆಯಲ್ಲಿ ಗಜಲ್ ಸಾಹಿತ್ಯವನ್ನು ರಚಿಸುವ ಶಾಂತರಸರು, “ಗಜಲ್  ಪಿತಾಮಹ” ಎಂಬ ಗೌರವಕ್ಕೆ ಪಾತ್ರರಾದರು.  ಹೀಗೆ ನಿರಂತರ ಅಧ್ಯಯನ ಮಾಡಿ ಗಜಲ್ ಬಗ್ಗೆ ಸಂಪೂರ್ಣ ಅರಿತುಕೊಂಡು ಕನ್ನಡದಲ್ಲಿ ಮೊದಲ ಬಾರಿಗೆ ಪರಿಶುದ್ಧ ಗಜಲ್ ಸಂಗ್ರಹ ಪ್ರಕಟವಾದುದು ೨೦೦೨ ರಲ್ಲಿ ಶಾಂತರಸರ ಮಗಳು ಎಚ್.ಎಸ್.ಮುಕ್ತಾಯಕ್ಕನವರು ’ನಲವತ್ತು ಗಜಲುಗಳು’. ಎನ್ನುವ ಹೆಸರಿನಲ್ಲಿ ಪ್ರಕಟಿಸಿದರು. ತದನಂತರ  ‘ಶಾಂತರಸರ ಗಜಲ್ ಮತ್ತು ಬಿಡಿ ದ್ವಿಪದಿ’ ಎಂಬ ಸಂಗ್ರಹ ೨೦೦೪ ರಲ್ಲಿ ಪ್ರಕಟವಾಯಿತು.

ಶಾಂತರಸರು ಹೈದ್ರಾಬಾದ್ ನಿಜಾಮನ ಆಡಳಿತಕ್ಕೆ ಒಳಪಟ್ಟ ಪ್ರದೇಶ ರಾಯಚೂರಿನ ಹೆಂಬೇರಾಳು ಅದಕ್ಕೆ ಸೇರಿದವರು . ಶಾಂತರಸರು ಉರ್ದು ಮಾಧ್ಯಮದಲ್ಲಿ ಶಿಕ್ಷಣ ಪಡೆದು ಪದವಿಯನ್ನೂ ಗಳಿಸಿದರು. ಹೀಗಾಗಿ ಅವರು ಉರ್ದು- ಉರ್ದು ಕೃತಿಗಳನ್ನು ಅಧ್ಯಯನ ಮಾಡಿ ಆ ಭಾಷೆಯಳ್ಳಿಪ್ರಕಾಂಡ ಪಂಡಿತರಾದರು.  ಉರ್ದು ಭಾಷೆಯ  ಹೆಸರಾಂತ ಕೃತಿ  ’ಉಮ್ರಾವ್ ಜಾನ್ ಅದಾ’ ಎಂಬ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದರು. ಇದಕ್ಕೆ ಅವರು ಬಹಳಷ್ಟು ಅಧ್ಯಯನ ಮಾಡಬೇಕಾಯಿತು. 

ಶಾಂತರಸರು ಉರ್ದು ಕಾವ್ಯ ಪ್ರಕಾರವಾದ ಗಜಲ್ ಗೆ  ಮಾರುಹೋಗಿ ಅದನ್ನು ಕನ್ನಡಕ್ಕೆ ತರಬೇಕೆಂಬ ತುಡಿತ ಶುರುವಾಯಿತದಾದರೂ, ಯಾಕೋ ಆತ್ಮ ಸ್ಥೈರ್ಯ ಬರಲಿಲ್ಲ. ಯಾಕೆಂದರೆ ಅದರ ಅಂತ:ಸತ್ವವೇ ಹಾಗಿತ್ತು.  ಕೃತಿ ರಚನೆಯ ನಂತರ ಅವರು ಹೇಳುವುದು ಹೀಗೆ  “ನನ್ನ ಗಜಲ್‌ಗಳು ಸಂಪೂರ್ಣ ಉರ್ದು ಗಜಲ್‌ಗಳ ಅನುಕರಣೆ ಅಲ್ಲ,  ಉರ್ದು ಗಜಲಿನ ಪರಂಪರೆ, ರಚನೆ, ಅದರ ಅಂತ:ಸತ್ವ ಇವುಗಳನ್ನುಳಿಸಿಕೊಂಡು,  ಕನ್ನಡ ಜಾಯಮಾನಕ್ಕೆ ತಕ್ಕಂತೆ ಗಜಲ್‌ಗಳನ್ನು ರಚಿಸಿದ್ದೇನೆಂದು  ವಿನಮ್ರವಾಗಿ ಹೇಳಬಯಸುತ್ತೇನೆ’ “ ಎಂದಿದ್ದಾರೆ.

ಶಾಂತರಸರ ಮಗಳು, ಎಚ್.ಎಸ್.ಮುಕ್ತಾಯಕ್ಕನವರ ಗಜಲ್ ಸಂಗ್ರಹ ಪ್ರಕಟವಾದ ನಂತರ ಗಜಲ್ ಬರೆಯುವ ಹೊಸ  ಲೇಖಕರಿಗೆ ಒಂದು  ನಿರ್ದಿಷ್ಟ ಮಾರ್ಗದ  ಅರಿವಾಯಿತು.  ಗಜಲ್‌ಗೆ ಕನ್ನಡ ಕಾವ್ಯ ಪ್ರಕಾರಗಳಲ್ಲಿ ಒಂದು ಗಟ್ಟಿಯಾದ ನೆಲೆ, ಸಾಹಿತ್ಯ ಸಮ್ಮೇಳನಗಳಲ್ಲಿ ಒಂದು ಗೋಷ್ಠಿಯಾಗುವಷ್ಟು ಗೌರವ,  ಅದಕ್ಕೂ ಪ್ರತ್ಯೇಕವಾದ ಒಂದು ವೇದಿಕೆ ಸಿಗತೊಡಗಿದನಂತರ ಅದರ ಕಾರ್ಯ ವೈಖರಿ ಬದಲಾಯಿತು. ಅದುವರೆಗೂ ಅತ್ಯಂತ ಗೌರವಯುತ ಸ್ಥಾನ ಹೊಂದಿದ್ದ ಗಜಲ್ ಯಾರ ಯಾರದೋ ಕೈಗೆ ಸಿಕ್ಕು, ನಲುಗಿ ಗಜಲ್‌ನ ಅಂತ:ಸತ್ವವನ್ನೇ ಗಾಳಿಗೆ ತುರಿದಂತಾಗಿ ಅದು ತನ್ನ ನೈಜತೆಯನ್ನು ಕಳೆದುಕೊಂಡಿತು.

ಗಜಲ್ ಸಾವಿರ- ಸಾವಿರ ಸಂಖ್ಯೆಗಳಲ್ಲಿ ಕೇವಲ ದಾಖಲೆಗಾಗಿ ಬರೆಯುವುದಲ್ಲ, ಅದೊಂದು ಮಧುರವಾದ ಹೃದಯದ ನಿವೇದನೆ. ನಮ್ಮೊಳಗನ್ನು, ನಮ್ಮೊಳಗಿನ ಪ್ರೇಮವನ್ನು, ನಮ್ಮೊಳಗಿನ ನೋವನ್ನು, ನಮ್ಮೊಳಗಿನ ಕಾಣ್ಕೆಯನ್ನು ಅಭಿವ್ಯಕ್ತಿಗೊಳಿಸುವ ಒಂದು ಸುಂದರ ಮಾಧ್ಯಮ. ಗಜಲ್ ಪ್ರೇಮದೊಂದಿಗೇ ದೈವತ್ವಕ್ಕೇರುವ, ದೈವತ್ವದೊಂದಿಗೆ ಅನುಸಂಧಾನ ಏರ್ಪಡಿಸುವ ಒಂದು ಮಾಧ್ಯಮ. ಅದೊಂದು ಉರ್ದು ಭಾಷೆಯಿಂದ  ಕನ್ನಡಕ್ಕೆ ಬಂದ ಒಂದು ಮಧುರ ಉಡುಗೊರೆ. ಆದರೆ ಈ ತರಹದ ಸಂವೇದನೆಗಳು ಯಾರಿಗೆ ಬೇಕಿದೆ ? ‘ಕಟ್ಟೆಯ ಮೇಲೆ ಕುಳಿತು ಅವಸರಕ್ಕೆ ಹಗ್ಗ ಹೊಸೆದಂತೆ ಹೊಸೆದು-ಹೊಸೆದು, ಗಜಲ್‌ಗಳೆಂಬ ಹಣೆಪಟ್ಟಿ ಅಂಟಿಸುವುದು ಸಲ್ಲದು’,  ಎನ್ನುವ ಆತಂಕದ ಮಾತನ್ನು ಹಿರಿಯ ಗಜಲ್ ಲೇಖಕರ ಬಾಯಿನಿಂದ ಕೇಳಿ ಬೇಸರವಾಯಿತು. 

ಇದರ ಬಗ್ಗೆ ವ್ಯಾಪಕವಾದ ಒಳನೋಟಗಳ ಹುಡುಕಾಟದ ಮಾಹಿತಿಗಳಿಗಾಗಿ ಶಾಂತರಸರ ’ಗಜಲ್ ಮತ್ತು ಬಿಡಿ ದ್ವಿಪದಿ’ ಕೃತಿ, ಹಾಗೂ  ಎಚ್.ಎಸ್.ಮುಕ್ತಾಯಕ್ಕನವರ ’ನಲವತ್ತು ಗಜಲುಗಳು’, ಓದುವುದು ಅನಿವಾರ್ಯವಾಗಿದೆ.  ಪ್ರಪ್ರಥಮ ಬಾರಿಗೆ ಗಜಲ್ ಎಂದರೇನು ? ಅದರ ರಚನೆ ಹೇಗೆ ? ಎಷ್ಟು ಪ್ರಕಾರಗಳಿವೆ, ಎನ್ನವ ಎಲ್ಲ ಪ್ರಶ್ನೆಗಳಿಗೂ ಉತ್ತರ ಈ ಕೃತಿಗಳಲ್ಲಿ ದೊರೆಯುತ್ತದಲ್ಲದೆ ಕನ್ನಡದಲ್ಲಿ ಗಜಲ್‌ಗಳನ್ನು ಹೇಗೆ ಬರೆಯಬೇಕೆಂಬುದಕ್ಕೆ ಅವೇ ‘ಆಕರಗ್ರಂಥ’ ಗಳಾಗಿವೆ.  “ಆದರೆ ನಂತರ ಬಂದ ಕೃತಿಗಳಲ್ಲಿ ಅನೇಕ ಕವಿಗಳು ಶಾಂತರಸ ಹಾಗೂ ಮುಕ್ತಾಯಕ್ಕನವರ ’ಗಜಲ್ ರಚನೆ’ ಕುರಿತ ವಿವರಗಳನ್ನು ಅನಾಮತ್ತು ಎತ್ತಿ,  ಕಾಪಿ ಮಾಡಿ ತಾವೇ ಅದನ್ನು ಅಧ್ಯಯನ ಮಾಡಿ ಬರೆದವರೆಂಬಂತೆ ಬಿಂಬಿಸಿಕೊಂಡಿದ್ದಾರೆ. ಅವರದೆಲ್ಲ ಈ ಕೃತಿಗಳ ಕಾಪಿ ಪೇಸ್ಟ್ ಹೊರತು ತಮ್ಮದೇ ಆದ, ನುರಿತ ಅಧ್ಯಯನದ ಮಾತುಗಳಲ್ಲ”  ಎಂಬುದನ್ನು ಗಜಲ್ ಬಲ್ಲ ಮುತ್ಸದ್ಧಿಗಳು ಒತ್ತಿ ಹೇಳುತ್ತಾರೆ.  

ಶಾಂತರಸರು, (ಸೆಪ್ಟೆಂಬರ್ ೭, ೧೯೨೪- ೧೩ ಎಪ್ರಿಲ್ ೨೦೦೮) 

ಶಾಂತರಸ ಅವರು ಜನಿಸಿದ್ದು ದಿನಾಂಕ 7 ಎಪ್ರಿಲ್ 1924ರಲ್ಲಿ ರಾಯಚೂರು ಜಿಲ್ಲೆಯ ಹೆಂಬೇರಾಳ ಎಂಬ ಚಿಕ್ಕಹಳ್ಳಿಯಲ್ಲಿ.  ತಂದೆ ಚನ್ನಬಸಯ್ಯನವರು ಕನ್ನಡ ಮತ್ತು ಸಂಸ್ಕೃತ ಪಂಡಿತರಾಗಿದ್ದರು. ಶಾಂತರಸ ಎಂಬುದು ಅವರ ಕಾವ್ಯನಾಮ. ಅವರ ತೊಟ್ಟಿಲ  ಹೆಸರು ಶಾಂತಯ್ಯ.  ಇವರು ರಾಯಚೂರಿನಲ್ಲಿ “‘ಸತ್ಯ ಸ್ನೇಹ “‘ಪ್ರಕಾಶನವನ್ನು ಪ್ರಾರಂಭಿಸಿದ್ದಾರೆ. ಹಲವು ಗಝಲ್, ರುಬಾಯಿ, ಫರ್ದ್ ಗಳನ್ನು ಉರ್ದುವಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

೧.  ಮಾನಸಗಳ್ಳಿ ಬಯಲು

೨. ಗಜಲ್ ಮತ್ತು ದ್ವಿಪದಿ

೩. ಸಮಗ್ರ ಕಾವ್ಯ

ಶಾಂತರಸರು  ೪೬ ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಇವರು ೧೯೯೫ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಪಠ್ಯ ಪುಸ್ತಕ ಕಮಿಟಿಯಲ್ಲೂ, ಸೇ ೧೯೭೦ ರಲ್ಲಿ ಲಂಕೇಶ ‘ಅಕ್ಷರ ಹೊಸಕಾವ್ಯ’, ೧೯೭೧ರಲ್ಲಿ ಬುದ್ಧಣ ಹಿಂಗಮಿರೆಯವರ ‘ಹೊಸಜನಾಂಗದ ಕವಿತೆ’ಗಳಲ್ಲಿ ಹೈದರಾಬಾದ್ ಕರ್ನಾಟಕದ ಕವಿಗಳಿಗೆ ಪ್ರಾತಿನಿಧ್ಯ ದೊರೆಯಲಿಲ್ಲವೆಂದು ಪ್ರತಿಭಟಿಸಿ,  ಸ್ವಂತ ಹಣದಿಂದ ೨೭ ಕವಿಗಳ ೧೬೨ ಕವಿತೆಗಳ ಸಂಕಲನ ‘ಬೆನ್ನಹಿಂದಿನ ಬೆಳಕು’ ಕೃತಿಯನ್ನು (೧೯೭೨) ಪ್ರಕಟಿಸಿ,  ಹೊಸ ಚರ್ಚೆಗೆ ನಾಂದಿ ಹಾಡಿದರು.

ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗಲೇ,  ಗಜಲ್‌ಗಳ ಬಗ್ಗೆ ಆಸಕ್ತಿ ಬೆಳೆದು, ದೀರ್ಘ ಅಧ್ಯಯನ ನಡೆಸಿ, ಕವಿ ಮನೋಧರ್ಮದ ತತ್ತ್ವದರ್ಶನ ಮೂಡಿಸಲು ೧೯೮೦ ರಿಂದಲೂ ಗಜಲ್‌ಗಳನ್ನು ಬರೆಯತೊಡಗಿದರು. ಪರ್ಶಿಯನ್ ಮೂಲದ ಗಜಲ್‌ಗಳಂತೆ ವ್ಯಕ್ತಿ-ಪ್ರಶಂಸೆ, ದಾರ್ಶನಿಕತೆ, ಪ್ರೇಮೋಲ್ಲಾಸ, ಉದ್ದೀಪನೆ, ವಿರಹತಾಪ, ಶೃಂಗಾರ-ಭಕ್ತಿ ಮುಂತಾದವುಗಳನ್ನು ತಂದು ಕನ್ನಡದ ಗಜಲ್‌ಗಳಿಗೆ ಹೊಸ ಆಯಾಮ ತೋರಿದರು.

“ಜಿಗಿದು ಹೋದವು ತಾರೆ,  ಎಂದೋ ನೀಲಾಂಬರದ ಅಂಗಳಕೆ

ಯಾರು ತರುವರು ಮರಳಿ,  ಈ ನೆಲಕೆ ರಂಗೋಲಿ ಹಾಕಲಿಕೆ”

ಹೀಗೆ ಗಜಲ್‌ಗಳ ಆಂತರ್ಯ, ಬಾಹ್ಯಬಂಧ, ರೂಪಗಳೊಂದಿಗೆ ಸಮಗ್ರವಾಗಿ ಅರಿತಿದ್ದರು. ಇವರ ಗಜಲ್‌ ಪರಂಪರೆಯನ್ನು ಅವರ  ಮಗಳಾದ ಎಚ್.ಎಸ್. ಮುಕ್ತಾಯಕ್ಕನವರು ಮುಂದುವರೆಸಿದ್ದಾರೆ. ಮುಕ್ತಾಯಕ್ಕನವರ  ಮೊದಲ ಕೃತಿ (೧೯೬೧) ಹರಿಹರನ ಮಲಹರಣನ ರಗಳೆಯನ್ನು ಗೀತನಾಟಕವಾಗಿ ಪರಿವರ್ತಿಸಿದ ಕೃತಿ,  “ಸತ್ಯಸ್ನೇಹಿ” (ಸಿಂಪಿ ಲಿಂಗಣ್ಣನವರ ಅರವಿಂದ ಗ್ರಂಥಮಾಲೆಯಿಂದ ಪ್ರಕಟಿತ). ನಂತರದ ನಾಟಕದ ಕೃತಿಗಳು ‘ನಂಜುನೊರೆವಾಲು’‘ಮರೆಯಾದ ಮಾರಮ್ಮ’ (ಗೊರೂರರ ಕಥೆಯನ್ನು ಆಧರಿಸಿದ್ದು ; ಆರ್.  ನಾಗೇಶ್‌ರವರ ನಿರ್ದೇಶನಲ್ಲಿ ಪ್ರಯೋಗಗೊಂಡಿದೆ) ಮತ್ತು “ಶರಣ ಬಸವೇಶ್ವರ” (ರೇಡಿಯೋ ನಾಟಕ).

ನಿಧನ :

ಹಿರಿಯ ಕವಿ ಶಾಂತರಸ ಹೆಂಬೆರಳು, ಭಾನುವಾರ ಸಂಜೆ  ೬.೩೦ ಕ್ಕೆ ಗುಲ್ಬರ್ಗದ ತಮ್ಮ ಪುತ್ರನ ಮನೆಯಲ್ಲಿ ನಿಧನರಾದರು. ಅವರು ಸ್ವಲ್ಪಕಾಲದಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮಕ್ಕಳು : ಪುತ್ರರಾದ ಡಾ.ದೇವರಾಜ್,  ಬಸವ ಪ್ರಭು,  ಹೆಣ್ಣು ಮಕ್ಕಳು :  ಕವಯಿತ್ರಿ ಎಚ್.ಎಸ್.ಮುಕ್ತಾಯಕ್ಕ,  ಹಾಗೂ ಭಾರತಿ. 

ಶಾಂತರಸ ಅವರು ಹಲವು ಗಝಲ್, ರುಬಾಯಿ, ಫರ್ದ್ ಗಳನ್ನು ಉರ್ದುವಿನಿಂದ ಕನ್ನಡಕ್ಕೆ ಅನುವಾದಿಸಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದರು.  ಅವರ ತಂದೆ ಚನ್ನಬಸಯ್ಯ ಹಿರೇಮಠ,  ಕನ್ನಡ ಮತ್ತು ಸಂಸ್ಕೃತ ಪಂಡಿತರಾಗಿದ್ದರು. ಶಾಂತರಸರು ರಾಯಚೂರಿನಲ್ಲಿ ಸತ್ಯ ಸ್ನೇಹಿ ಪ್ರಕಾಶನವನ್ನು ಪ್ರಾರಂಭಿಸಿದ್ದರು. ರಾಯಚೂರಿನ ಹಮ್‌ದರ್ದ್ ಸೊಸೈಟಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ,  ೧೯೮೧  ರಲ್ಲಿ ಅದೇ ಸಂಸ್ಥೆಯ ಜೂನಿಯರ್ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತರಾಗಿದ್ದರು.  ೧೯೯೫ ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಪಠ್ಯಪುಸ್ತಕ ಸಮಿತಿಯಲ್ಲೂ ಶಾಂತರಸರು ಸೇವೆ ಸಲ್ಲಿಸಿದ್ದಾರೆ. 

ಶಾಂತರಸ ಅವರ ಕೃತಿಗಳು : ಕವನ ಸಂಕಲನ

ಕೊಂಡಿ : 

ಶಾಂತರಸರ ಮೇಲೆ ನಿರ್ಮಿಸಿದ ಒಂದು ಯೂಟ್ಯೂಬ್, ರ್. ವಾಲಿಯವರಿಂದ 

ನಿನ್ನ ಮನಸ್ಸು ನಿನ್ನದಲ್ಲ ; ಯಾಕೆ ಒಣ ಧಿಮಾಕು 

ನಿನ್ನ ಕಣ್ಣು ನಿನ್ನದಲ್ಲ ; ಯಾಕೆ ಒಣ ಧಿಮಾಕು 

ಬಗೆಯಲೊಂದು  ಕನಸು ಹುಟ್ಟಿಜೀವ ಜೀವ ಹೆಣೆವ, 

ಲೋಕವನ್ನು ಕಟ್ಟಲಿಲ್ಲ ; ಯಾಕೆ ಒಣ ಧಿಮಾಕು 

ಹಸಿವಿನಿಂದ ಸೊರಗಿದೊಡಲ ಕಣ್ಣಲಡಗಿ ನಿಂತ; 

ಭಾಷೆಯನ್ನು  ಓದಲಿಲ್ಲ ; ಯಾಕೆ ಒಣ ಧಿಮಾಕು 

ತತ್ವ ನುಡಿವೆ ಶಾಸ್ತ್ರ ಬರೆವೆ, ಜನರ ಮನದ ಮಾತ 

ಒಂದು ಕ್ಷಣವೂ ಗ್ರಹಿಸಲಿಲ್ಲ ; ಯಾಕೆ ಒಣ ಧಿಮಾಕು 

ಒಂದೇ ಒಂದು ಮಾತಿನಿಂದ ಜೀವ ಉಳಿಯುವಾಗ,

ಬಿಗಿದ ತುಟಿಯ ಬಿಚ್ಚಲಿಲ್ಲ ; ಯಾಕೆ ಒಣ ಧಿಮಾಕು 

ಓದಿ ಓದಿ ಪದವಿ ಪಡೆದೆ ರಾಶಿ ರಾಶಿ ಬರೆದೆ 

ನಿನ್ನ ನೀನೆ ತಿಳಿಯಲಿಲ್ಲ ; ಯಾಕೆ ಒಣ ಧಿಮಾಕು 

ಹಳ್ಳಿ ಬಿಟ್ಟು ದಿಲ್ಲಿ  ಸೇರಿ ಕುರ್ಚಿ ಹಿಡಿದು ಕುಳಿತೆ 

ಕುರ್ಚಿ ಬೆಲೆಯ ಪಡೆಯಲಿಲ್ಲ ; ಯಾಕೆ ಒಣ ಧಿಮಾಕು 

ಜಾತಿ ಭಾವ ಸಲ್ಲದೆಂದು ಸ್ವಾಮಿಗಳನ್ನು ಬೈದೆ 

ರಾತ್ರಿ ಕಾಲ ಹಿಡಿದೆಯಲ್ಲ ; ಯಾಕೆ ಒಣ ಧಿಮಾಕು 

ಹುಟ್ಟು ಸಾವು ತಿಳಿಯದಿದ್ದರೇನು ‘ಅರಸ’ ಇರಲಿ 

ಊಟವೇಕೆ ತಿಳಿಯಲಿಲ್ಲ ; ಯಾಕೆ ಒಣ ಧಿಮಾಕು 

ಗಜಲ್ ಕಾವ್ಯದಲ್ಲಿ ಸರ್ವೆ ಸಾಮಾನ್ಯವಾಗಿ ಬಳಕೆಯಾಗುವ, ಈಗಾಗಲೇ ಸವಕಲಾಗಿರುವ, ಕ್ಲಿಷೆಯ ಹಣೆಪಟ್ಟಿ ಅಂಟಿಕೊಂಡಿರುವ ಪ್ರೇಮ, ಶರಾಬ್, ಮಧುಬಟ್ಟಲು, ಮೈಖಾನೆ, ಸಖಿ, ಸಾಕಿ, ಗಾಲಿಬ್ ಇತ್ಯಾದಿ ಇಂತಹ ಪದಗಳನ್ನು ಅವಶ್ಯಕತೆಗನುಸಾರವಾಗಿ ಸೂಕ್ತವಾಗಿ ಬಳಸಿ, ಎಲ್ಲಿಯೂ ಜಿಜ್ಞಾಸೆ ಮೂಡಿಸದ ಹಾಗೆ ಬಳಸುವ ಕ್ರಮದಿಂದ ಗಜಲ್ ಗಳಿಗೆ ಹೆಚ್ಚು ಮೆರಗು ತರಬಹುದಾಗಿದೆಯಾದರೂ, ಗಜಲ್ ಎಂದರೆ ಇಷ್ಟೇ ಪದಗಳ ಬಳಕೆಯಷ್ಟೇ ಎಂದು ದಿಕ್ಕು ತಪ್ಪುತ್ತಿರುವ ಅನವಶ್ಯಕವಾಗಿ ಈ ತೆರನಾದ ಪದಗಳ ಅವಿರತ ಬಳಕೆಯನ್ನು ಕಾಣುತ್ತಿದ್ದೇವೆ. 

ಎಷ್ಟೋ ವರ್ಷಗಳ ನಂತರ  ಇತ್ತೀಚೆಗಷ್ಟೇ ನನ್ನ ಹಳೆಯ ದೋಸ್ತ್,  ವಿಕಾಸ್  ಮೋಹಿತೆಯವರ ಭೇಟಿಯಾಯಿತು. ಅವರು ಅವಸರದಲ್ಲಿದ್ದರು. ಮೋಟಾರ್ ಸೈಕಲ್ ಮೇಲೆಕುಳಿತಿದ್ದ ಅವರು ನನ್ನ  ಹತ್ತಿರಕ್ಕೆ ಬಂದು ಗಾಡಿಯನ್ನು ನಿಲ್ಲಿಸಿ, ನನ್ನ ಮುಖ ಕಣ್ಣುಗಳನ್ನೇ ನುಂಗುವಂತೆ ನೋಡಿದರು ; ಅವರ  ಮುಖ ಕಾಂತಿಯಿಂದ  ಮಿಂಚುತ್ತಿತ್ತು. ಆದರೆ ಅವರ ಗಜಲ್ ಖಯ್ಯಾಲಿ ಎಳ್ಳಷ್ಟೂ ಕಡಿಮೆಯಾಗಿರಲಿಲ್ಲ ಎನ್ನುವುದು ಅವರು ಗಜಲ್ ಬಗ್ಗೆ ಗುನುಗುಟ್ಟುತ್ತಾ ಹೇಳಿದ ವಾಕ್ಯಗಳಿಂದ ಮನದಟ್ಟಾಯಿತು. (ಮಹಾರಾಷ್ಟ್ರೀಯನ್ನರಾದ ಮೋಹಿತೆಯವರು ಈಗ ಅಲ್ಪ-ಸ್ವಲ್ಪ ಕನ್ನಡದಲ್ಲಿ  ಮಾತಾಡಲು ಕಲಿತಿದ್ದಾರೆ)  ದಶಕಗಳ ಹಿಂದೆ ಗಜಲ್ ಬಗ್ಗೆ ನನಗೆ ಪ್ರೀತಿಯಿಂದ ಹೇಳುತ್ತಿದ್ದ ಅವರ ಸುವಿಚಾರಗಳು ಮತ್ತೆ ಪ್ರತಿಧ್ವನಿಸಿದವು :

ಗಜಲ್ ಎಂದರೆ… ದೀಪದ ಬೆಳಕಿನ ವ್ಯಾಮೋಹಕೆ ಮನಸೋತು ಸುಟ್ಟು ಸತ್ತು ಸ್ವರ್ಗ ಸೇರಿದ ಪತಂಗದ ವಿಷಾದ ಕನಸು !

ಗಜಲ್ ಎಂದರೆ… ಆಗತಾನೆ ಅರಳಿದ ಹೂವಿನ ಮೇಲೆ ಸುರ್ಮ ಹಚ್ಚಿದ ಕಣ್ಣಿಂದ ಜಾರಿಬಿದ್ದ ಕಪ್ಪು ಕಂಬನಿ !

ಗಜಲ್ ಎಂದರೆ… ಅಂತರಾಳದ ನೋವ್ವು ತಾಕಿ ಚದುರಿದ ಸುಂದರ ಹೂದಾನಿಯ ಒಡಪು !

ಗಜಲ್ ಎಂದರೆ…ಮಾಯೆಯ ನೋಟದಿಂದ ಛಿದ್ರವಾದ ಕನ್ನಡಿಯ ಚೂರು ! 

ಗ -ಜ-ಲ್- ಎಂದರೆ… ಎಲ್ಲವೂ ಹೌದು, ಅಸದ್-  ಏನೆಂದರೆ ಏನೂ ಅಲ್ಲ !

ಹಳೆಯ ಮಿತ್ರ  ವಿಕಾಸ್ ಮೋಹಿತೆ,  ಮೋಟಾರ್ ಸೈಕಲ್ ನ್ನು ಸ್ಟಾರ್ಟ್ ಮಾಡಿ, ಹಿಂದಿರುಗಿ ನೋಡುತ್ತಾ,   “ಟಾಟಾ, ಬೈ ಬೈ   ವೆಂಕಟ್ ” ಎಂದು ರಾಗವಾಗಿ ಹೇಳುತ್ತಾ, ಹೊರಟೇ  ಬಿಟ್ಟರು. 

ಉಲ್ಲೇಖನೀಯ ಗ್ರಂಥಗಳು :

೦೧. ಬಿ. ಎ. ಸನಾದಿ (ಅನು) : ಮಿರ್ಜಾ ಗಾಲಿಬ್ : ೧೯೯೩

೦೨. ಶಾಂತರಸ : ಗಜಲ್ ಮತ್ತು ಬಿಡಿ ದ್ವಿಪದಿ : ೨೦೦೪

೦೩. ಡಿ. ಆರ್. ನಾಗರಾಜ್ : ಉರ್ದು ಸಾಹಿತ್ಯ : ೨೦೧೫

ಶಿಕ್ರಾನ್ ಶರ್ಫುದ್ದೀನ್ ಎಂಬ ಗಝಲ್ ಪರಿಣಿತರ ಮಾತುಗಳಲ್ಲಿ ಹಲವಾರು ಗಜಲ್ ಗಳಿಗೆ ಸಂಬಂಧಿಸಿದ  ಪದ ಗುಚ್ಛಗಳನ್ನು ಕಾಣಬಹುದು :

ಗಜಲ್ ಒಂದು ಅರೇಬಿಕ್ ಪದ ಗಜಲ್ ಎಂದರೆ ಆಳವಾದ ಭಾವನೆ, ಪ್ರೇಮಿಗಳ ಸಂವಾದ, ದಂಪತಿಗಳ ಮಾತುಕತೆ, ಭಾವುಕ ಜೀವಿಗಳ ಸೂಕ್ಷ್ಮ ಸಂವೇದನೆ, ಪ್ರೇಮಿಗಳ ಜುಗಲ್ ಬಂದಿ, ವಿರಹ ವೇದನೆ ಪ್ರೇಮ ನಿವೇದನೆ, ಪ್ರೀತಿಸುವ ಹೃದಯಗಳ ಚಡಪಡಿಕೆ. ಗಜಲ್ ಗಳು ಒಂದೇ ವಿಷಯ ಒಂದೇ ತರಹದ ದೃಷ್ಟಿಕೋನ ಇಟ್ಟುಕೊಂಡು ಮಾತನಾಡದೇ ಸಾವಿರಾರು ಚಿಂತನೆಗಳಿಂದ ಹತ್ತು ಹಲವು ವಿಚಾರಗಳನ್ನ ಪ್ರತಿಪಾದಿಸುತ್ತವೆ. ಬದುಕಿನ ಎಲ್ಲಾ ರಂಗಗಳ ಹೂರಣದಿಂದ ಸಾಮಾಜಿಕ ಕಳಕಳಿ ಮತ್ತು ವಿಶ್ವಮಾನವತೆಯ ತುಡಿತದಿಂದ ಭೂತ ಭವಿಷ್ಯತ್ವ ವರ್ತಮಾನಗಳ ಬೆಳಕಿನಿಂದ ಮಾತನಾಡುತ್ತವೆ. 

ಗಜಲ್ ಗಳ ಪ್ರಕಾರಕ್ಕೆ ಹೊಗುವ ಮೊದಲು ಗಜಲ್ ಅಂಶಗಳ ಬಗ್ಗೆ ತಿಳಿದುಕೊಂಡರೆ ಗಜಲ್ ಪ್ರಕಾರಗಳನ್ನ ಸುಲಭವಾಗಿ ಅರ್ಥಮಾಡಿಕೊಳ್ಳ ಬಹುದು. (ಮಿಸ್ರ, ಮತ್ಲಾ, ಶೇರ್, ಕಾಫಿಯ, ರವಿ, ರದೀಫ್, ಮಕ್ತಾ, ಬೆಹರ್ ಇವು ಗಜಲ್ ಅಂಶಗಳು)

ಮಿಸ್ರ:– ಇದು ಗಜಲ್ನ ಚರಣ ಕವಿಯು ಹೇಳಬೇಕಾದ ವಸ್ತು ವಿಷಯವು ಸಂಪೂರ್ಣ ವಾಕ್ಯ ಸಂದೇಶದೊಂದಿಗೆ ಅರ್ಥಪೂರ್ಣವಾಗಿ ಬಿಂಬಿತವಾಗುವ ಪಂಕ್ತಿಯನ್ನು ಮಿಸ್ರ ಎನ್ನುತ್ತಾರೆ.

ಮತ್ಲಾ:- ಇದು ಗಜಲ್ನನ ಆರಂಭಿಕ ದ್ವಿಪದಿಯಾಗಿದ್ದು ಇದರ ನಿಜವಾದ ಅರ್ಥವು ಉದಯ ಅಥವಾ ಪ್ರಾರಂಭವಾಗುತ್ತದೆ.

ಶೇರ್:- ಇದೊಂದು ಗಜಲ್ನಲ್ಲಿ ಬರುವ ದ್ವಿಪದಿಯಾಗಿದೆ. ಎರಡು ವಾಕ್ಯ ಅಥವಾ ಮಿಸ್ರಗಳಿಂದ ಒಂದು ಶೇರ್ ಆಗುತ್ತದೆ.

ಕಾಫಿಯಾ:- ಈ ಪದವು ‘ಕಪೂ’ ಎಂಬ ಧಾತುವಿನಿಂದ ಉತ್ಪತ್ತಿಯಾಗಿದೆ. ಬೇರೆ ಬೇರೆ ಅರ್ಥ ಸಂದೇಶ ಕೊಡುವ ಸ್ಥಾಯಿಯಲ್ಲದ ಅಕ್ಷರಗಳ ಗುಂಪಿನ ಒಂದು ಪ್ರಾಸಕ್ಕೆ ಕಾಫಿಯ ಎಂದು ಕರೆಯುತ್ತಾರೆ. ಒಂದು ಗಜಲ್ ಪಕ್ವತೆ ಮತ್ತು ಗೇಯತೆ ಕಾಣಲು ಕಾಫಿಯ ಕೇಂದ್ರಬಿಂದು ಆಗಿದೆ ಇದನ್ನು ಗಜಲ್ನ ಹೃದಯ ಹಾಗು ಗಜಲ್ನ ಉಸಿರೆಂದು ಪರಿಣಿತರು ವ್ಯಾಖ್ಯಾನಿಸಿದ್ದಾರೆ. ಗಜಲ್ ಆಗಲು ಕಾಫಿಯಾ ಅತೀ ಮುಖ್ಯವಾಗಿದೆ.

ರವಿ:- ಕಾಫಿಯಾ ಗುಣ ಲಕ್ಷಣಗಳ ಮತ್ತು ಅದರ ಅಂಶವನ್ನು ಅರ್ಥೈಸುವ ನೆಲೆ ಬೆಲೆಯನ್ನು ಎತ್ತಿ ತೋರಿಸುವ ಕಾಫಿಯಾದ ಕೊನೆಯದಾದ ದಿಟವಾದ ಸ್ಥಿರವಾದ ಅಕ್ಷರವೇ ರವಿ. ಗಜಲ್ ಆಗಲು ಕಾಫಿಯಾ ಎಷ್ಟು ಮುಖ್ಯವೋ ಕಾಫಿಯ ಆಗಲು ರವಿಯು ಅಷ್ಟೇ ಮುಖ್ಯ.

ರದೀಫ್:- ಗಜಲ್ ಕಾವ್ಯದಲ್ಲಿ ಬರುವ ಒಂದೇ ತರಹದ ಅಕ್ಷರಗಳ ಗುಂಪಾಗಿದ್ದು ಕಾಫಿಯಾದ ಮುಂದೆ ಬರುವ ಪದವಾಗಿದೆ. ಇದು ಎಲ್ಲಾ ದ್ವಿಪದಿಗಳಲ್ಲಿ ಪುನರಾವರ್ತಿತವಾಗಿ ಬಂದು ಗಜಲ್ ಕಾಂತಿ ಮತ್ತು ರಮ್ಯತೆ ಸೌಂದರ್ಯವನ್ನ ಹೆಚ್ಚಿಸುತ್ತದೆ.

ಮಕ್ತಾ:- ಇದರ ಅರ್ಥ ಮುಕ್ತಾಯ ಮತ್ತು ಸಂಪೂರ್ಣಗೊಳಿಸುವುದು‌ ಗಜಲ್ ಕಾವ್ಯದಲ್ಲಿ ಮತ್ಲಾ ಪ್ರಾರಂಭವಾದರೆ ಮಕ್ತಾದಲ್ಲಿ ಪೂರ್ಣಗೊಳ್ಳುತ್ತದೆ. ಒಂದು ಗಜಲ್ನ‌ ಕೊನೆಯ ದ್ವಿಪದಿಯಲ್ಲಿ ಕವಿಯ ಹೆಸರು ಅಥವಾ ಕಾವ್ಯನಾಮ ಇರುತ್ತದೆ.

ಬೆಹರ್:- ಒಂದು ಸಂಪೂರ್ಣ ಗಜಲ್ನ ಚರಣ ಅಥವಾ ದ್ವಿಪದಿಗಳನ್ನು ಮಾತ್ರಾಗಣಗಳ ಮೂಲಕ ಅಳೆಯುವಂತಹ ಪಾರದರ್ಶಕ ಸಾಧನವನ್ನು ಬೆಹರ್ ಎಂದು ಕರೆಯುತ್ತಾರೆ.

ಗಜಲ್ ಪ್ರಕಾರಗಳು :

ಗಜಲ್ ಗಳಲ್ಲಿ ಇಂತಿಷ್ಟೇ ಪ್ರಕಾರಗಳಿವೆಯೆಂದು ನಿಖರವಾಗಿ ಹೇಳಲಾಗದಿದ್ದರೂ ಉರ್ದು, ಫಾರ್ಸಿ, ಕನ್ನಡ ಗಜಲ್ಕಾರರ ಮಾಹಿತಿಯನ್ನ ಆಧರಿಸಿ ಹತ್ತೊಂಬತ್ತು ಪ್ರಕಾರದ ಗಜಲ್ಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ.

ಮುರದ್ದಫ್ ಗಜಲ್:-

ಗಜಲ್ನ ಎಲ್ಲಾ ನಿಯಮಗಳಿಂದ ಪ್ರತಿಯೊಂದು ದ್ವಿಪದಿಯಲ್ಲಿ ಕ್ರಮಬದ್ಧವಾಗಿ ಸಮಾನ ತೂಕ ಸಮಾನ ಮಾತ್ರಾಗಣದಿಂದ ಪುನರಾವರ್ತಿತ ಪದ ರದೀಫ್ ಮತ್ತು ಒಳಪ್ರಾಸ ಕಾಫಿಯಾಗಳು ಹೊಂದಿರುವ ಗಜಲ್ಗಳಿಗೆ ಮುರದ್ದಫ್ ಗಜಲ್ಗಳೆಂದು ಕರೆಯುತ್ತಾರೆ.

ಗೈರ್ ಮುರದ್ದಫ್ ಗಜಲ್:-

ಇದರಲ್ಲಿ ರದೀಪ್ ಇರುವುದಿಲ್ಲ ಆದರೆ ಒಂದು ಮುರದ್ದಫ್ ಗಜಲ್ನನಲ್ಲಿ ಇರುವ ಎಲ್ಲಾ ನಿಯಮಗಳು ಇರುತ್ತವೆ. ಇದನ್ನು “ ಮುಕಪ್ಫ” ಗಜಲ್ ಎಂತಲೂ ಕರೆಯುತ್ತಾರೆ.

ಮುಸಲ್ ಸಲ್ ಗಜಲ್:-

ಇದರ ಅರ್ಥ ಒಂದೇ ವಿಷಯದ ಬಗ್ಗೆ ಪ್ರಸ್ತಾಪಮಾಡಿ ಬರೆಯುವುದೆಂದರ್ಥ.

ಗೈರ್ ಮುಸಲ್ ಸಲ್ ಗಜಲ್:-

ಈ ಗಜಲ್ನ ಎಲ್ಲಾ ದ್ವಿಪದಿಗಳು ಮೂಲ ನಿಯಮಗಳೊಂದಿಗೆ ಬೇರೆ ಬೇರೆ ವಿಷಯಗಳಿಂದ ಓದುಗರನ್ನು ಸೆಳೆಯುತ್ತದೆ. ಒಂದು ದ್ವಿಪದಿ ಹೃದಯದ ಬಗ್ಗೆ ಹೇಳಿದರೆ ಮತ್ತೊಂದು ಪ್ರೇಮದ ಬಗ್ಗೆ ಹೇಳುತ್ತದೆ.

ಆಜಾದ್ ಗಜಲ್:-

ಇದರ ಹೆಸರೇ ಸೂಚಿಸಿದ ಹಾಗೆ ಸ್ವತಂತ್ರವಾದ ಗಜಲ್ ಆಗಿದೆ. ಇದರಲ್ಲಿ ಚರಣಗಳು ಸಮನಾಗಿ ಇರುವುದಿಲ್ಲ ಆದರೆ ಎಲ್ಲಾ ಮೂಲ ಗಜಲ್ ನಿಯಗಳು ಇರುತ್ತವೆ.

ಜುಲ್ ಕಾಫಿಯ ಗಜಲ್:-

ಜುಲ್ ಕಾಫಿಯ ಎಂದರೆ ಎರಡೆರಡು ಕಾಫಿಯಗಳನ್ನು ಅಳವಡಿಸಿ ಬರೆಯುವುದು. ಜುಲ್ ಎಂದರೆ ದ್ವೀತಿಯ ಎಂಬ ಅರ್ಥ ಬರುತ್ತದೆ. ಒಂದು ಕಾಫಿಯಾ ಮುಂದೆ ಮತ್ತೊಂದು ಕಾಫಿಯಾ ಬರುವ ಗಜಲ್ ಗಳನ್ನು ಜುಲ್ ಕಾಫಿಯಾ ಗಜಲ್ಗಳೆಂದು ಕರೆಯುತ್ತಾರೆ.

ಸೆಹ್ ಗಜಲ್:-

ಸೆಹ್ ಎಂಬ ಉರ್ದುಪದದ ಅರ್ಥ ಸಹಿಸು ಸೈರಿಸು ಎಂದು. ಒಂದು ಗಜಲ್ ತನ್ನ ಜೊತೆಗೆ ಮೂರು ನಾಲ್ಕು ಗಜಲ್ಗಳನ್ನು ಸೇರಿಸಿಕೊಂಡು ಒಂದೇ ಗಜಲ್ ಆಗಿ ಪರಿವರ್ತನೆಯಾಗಿ ಹೋಗುತ್ತದೆ. ಇದು ಏಳನೆಯ ಶತಮಾನದಲ್ಲಿ ರಚಿತವಾದ “ಖಸೀದಾ” ಮಾದರಿಯನ್ನು ಅವಲಂಬಿಸಿದೆ ಎನ್ನಬಹುದು.

ಹುಸ್ನ್ – ಎ – ಮತ್ಲಾ ಗಜಲ್:-

ಹುಸ್ನ್ ಎಂದರೆ ಸೌಂದರ್ಯ ಅರ್ಥಾತ್ ಒಂದು ಗಜಲ್ನ ಅಂದ ಚೆಂದ ರಮ್ಯತೆಯನ್ನು ಹೆಚ್ಚಿಸುವ ಮತ್ಲಾ ಆಗಿದೆ. ಒಂದು ಗಜಲ್ನ ಮೊದಲ ದ್ವಿಪದಿ ಮತ್ಲಾ ಆಗಿದ್ದು ಎರಡನೇ ದ್ವಿಪದಿ ಸಮತೋಲಿತ ಕಾಫಿಯಾ ರಧೀಫ್ಗಳಿಂದ ಮತ್ಲಾ ಆಗಿ ಕಂಗೊಳಿಸಿದರೆ ಅಂತಹ ಗಜಲ್ ಗಳನ್ನು ಹುಸ್ನ್ ಎ ಸಾನಿ ಗಜಲ್ ಎಂದು ಕರೆಯುತ್ತಾರೆ.

ಮತ್ಲಾ –ಎ- ಸಾನಿ ಗಜಲ್:-

ಒಂದು ಗಜಲ್ ನಲ್ಲಿ ಎಲ್ಲಾ ನಿಯಮಗಳೊಂದಿಗೆ ಆರಂಭದ ಮೂರು ದ್ವಿಪದಿಗಳು ಮತ್ಲಾ ಆಗಿದ್ದರೆ ಇಂತಹವುಗಳು ಮತ್ಲಾ ಎ ಸಾನಿ ಗಜಲ್ ಆಗಿರುತ್ತವೆ.

ಆ್ಯಂಟಿ ಗಜಲ್:-

ಇದೊಂದು ಲಾವಣಿಯ ರೂಪದಲ್ಲಿ ಬಿಂಬಿತವಾಗುವ ಗಜಲ್ ದೇಶ ಭಕ್ತಿ ನೆಲದ ಸೊಗಡು, ವೀರಪುರುಷ ವೀರವನಿತೆಯರ ಮಹತ್ವವನ್ನು ಸಾರುವ ಮೂಲಕ ಗಜಲ್ ಹೇಳುತ್ತದೆ.

ಫನ್ನಿ ಗಜಲ್:-

ಹೆಸರೇ ಸೂಚಿಸುವಂತೆ ಇದು ಒಂದು ಹೊಸ ಪ್ರಕಾರದ ಹಾಸ್ಯ ಮಿಶ್ರಿತವಾದ ಗಜಲ್ ಆಗಿದೆ.

ನಜರಿ ಗಜಲ್:-

ನಜರ್ ಎಂದರೆ ದೃಷ್ಟಿ ನಜರಿ ಎಂದರೆ ದೃಷ್ಟಿಕೋನ. ಈ ಪ್ರಕಾರದ ಗಜಲ್ ಗಳು ಓದುಗರ ಭಾವನೆ ಆಸಕ್ತಿಯನ್ನು ಕೇಂದ್ರೀಕೃತವಾಗಿ ಇಟ್ಟುಕೊಂಡು ಮನಸುಗಳಿಗೆ ಎಟುಕುವಂತೆ ನೇರವಾಗಿ ಓದಿಸಿಕೊಂಡು ಹೋಗುತ್ತವೆ.

ಸಿಯಾಸಿ ಗಜಲ್:-

ಸಿಯಾಸತ್ ಎಂದರೆ ಉರ್ದು ಪದದ ಅರ್ಥ ರಾಜಕೀಯ. ಈ ಪ್ರಕಾರದ ಗಜಲ್ ಗಳಲ್ಲಿ ರಾಜಕೀಯ ವಿಚಾರಗಳ ಬಗ್ಗೆ ಪ್ರಸಕ್ತ ಕಾಲಘಟ್ಟ ಸಾಂದರ್ಭಿಕ ಚಿತ್ರಣ ಪ್ರತಿಬಿಂಬಿಸುವ ಕಾವ್ಯ ಪ್ರಕಾರವಾಗಿದೆ.

ಝೆನ್ ಗಜಲ್:-

ಇದು ಬೌದ್ಧಧರ್ಮದ ತತ್ವ ಸಿದ್ಧಾಂತ ನಂಬಿಕೆಗಳನ್ನು ಆಧ್ಯಾತ್ಮಿಕ ಸಂದೇಶಗಳಿಂದ ತಿಳಿ ಹೇಳುವ ಗಜಲ್ ಆಗಿದೆ.

ಜಿನ್ ಸಿ ಗಜಲ್:-

ಇದು ಲೈಂಗಿಕ ವಿಷಯಗಳ ಬಗ್ಗೆ ಮಾತನಾಡುವ ಗಜಲ್ ಎಂದು ಹೇಳಲಾಗಿದೆ. ಆದರೂ ಇಂತಹ ಗಜಲ್ ಬರೆಯುವಾಗ ಕವಿಯು ಒಂದು ಸಭ್ಯತೆಯ ದಾಯರೆಯಲ್ಲಿ ಬರೆಯುವುದು ಅವಶ್ಯಕವಾಗಿದೆ.

ಸೂಫಿ ಗಜಲ್:-

ಪ್ರೇಮ ಮತ್ತು ಭಕ್ತಿ ಆದ್ಯಾತ್ಮದ ತಳಹದಿಯ ಮೇಲೆ ಜಗತ್ತು ತಿರುಗುತಿದೆ ಎಂಬ ಸತ್ಯವನ್ನು ಪ್ರತಿಪಾದಿಸುವ ಪರಸ್ಪರ ಪ್ರೀತಿ ಸ್ನೇಹ ಮಾನವತೆಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಶೇರ್ ಗಳನ್ನು ಈ ಗಜಲ್ ಉದ್ದಕ್ಕೂ ಕಾಣಬಹುದು. ವಿಶ್ವಮಾನವ ಸಂದೇಶಗಳನ್ನು ಸಾರುವಂತಹ‌ ಅನುಭವ ಅನುಭಾವದಿಂದ ಆಧ್ಯಾತ್ಮಿಕ ಬೆಳಕನ್ನು ಚೆಲ್ಲುವ ಗಜಲ್ಗಳನ್ನು ಸೂಫಿ ಗಜಲ್ಗಳೆಂದು ಕರೆಯಲಾಗುತ್ತದೆ.

ರೀಖ್ತ ಗಜಲ್:-

ಇದು ಫಾರ್ಸಿ ಅರೇಬಿಕ್ ಮತ್ತು ನಾಗರಿ ‌ಭಾಷೆಗಳ ಮಿಶ್ರಿತ ಕಾವ್ಯ ಪ್ರಕಾರವಾಗಿದ್ದು ಉರ್ದು, ಹಿಂದಿ ಪ್ರಾರಂಭಿಕ ಹಂತದ ಗಜಲ್ ಎಂದು ಹೇಳಲಾಗಿದೆ.

ತರಹಿ ಗಜಲ್:-

ತರಹಿ ಎಂದರೆ ತರಹ ಧಾಟಿ ಶೈಲಿ ಎಂದರ್ಥ.ಹೆಚ್ಚಿನ  ಕವಿಯು ತನಗಿಷ್ಟದ ಬೇರೊಬ್ಬ ಕವಿಯ ಗಜಲ್ ನ ಒಂದು ಮತ್ಲಾ ಅಥವಾ ಮಿಸ್ರ ಆರಿಸಿಕೊಂಡು ಮೂಲ ಕವಿಯ ಮಾದರಿಯಲ್ಲೇ ಬರೆಯುವುದನ್ನು ತರಹಿ ಗಜಲ್ ಎಂದು ಕರೆಯುತ್ತಾರೆ.

ಜದೀದ್ ಗಜಲ್:-

ತನ್ನ ಮೂಲ ಸ್ವರೂಪವನ್ನ ಕಳೆದುಕೊಳ್ಳದೆ ಲಯ ಭಾವಗಳೊಂದಿಗೆ ಹೊಸತನವನ್ನು ಪಡೆದುಕೊಂಡು ಸಾಂದರ್ಭಿಕ ಸನ್ನಿವೇಶಗಳನ್ನು ನವ-ನವೀನ ಸಂಶೋಧನೆಗಳೊಂದಿಗೆ ರೂಪಕ,ಪ್ರತಿಮೆ, ಹೋಲಿಕೆ, ಗಳಿಂದ ಬಿತ್ತರಿಸಲ್ಪಡುವ ಗಜಲ್ ಗಳಿಗೆ ‘ಜದೀದ್ ಗಜಲೆ’ ಗಳೆಂದು ಕರೆಯಲಾಗುತ್ತದೆ‌. 

ಇವಿಷ್ಟು ಗಜಲ್ ಪ್ರಕಾರಗಳು. ಇಲ್ಲಿ ಇನ್ನೂ ಹೆಚ್ಚಿನ ವಿವರವಾಗಿ ಉದಾಹರಣೆಗಳ ಮೂಲಕ ಹೇಳಲಾಗಿಲ್ಲ. ಈಗಾಗಲೇ ಲೇಖನದ ಉದ್ದ ಹೆಚ್ಚಾಗಿಹೋಯಿತು.  ಬದಲಾಗಿ, ನಮ್ಮ ತಿಳುವಳಿಕೆಗಾಗಿ ಕೇವಲ ಪ್ರಕಾರಗಳ ಬಗ್ಗೆ ಮಾಹಿತಿ ನೀಡಿರಿವುದಾಗಿದೆ. ಹೆಚ್ಚಿನ ಆಸಕ್ತಿ ಉಳ್ಳವರು ಈ ಎಲ್ಲಾ ಪ್ರಕಾರಗಳನ್ನೂ ವಿಸ್ತಾರವಾಗಿ ಅಭ್ಯಾಸ ಮಾಡಬಹುದು. ಅಂತರ್ಜಾಲದಲ್ಲಿಯೂ ಸಾಕಷ್ಟು ಮಾಹಿತಿಗಳು ದೊರೆಯುತ್ತವೆ. 

ಕೃಪೆ:

“ನೂರ್ – ಏ – ತಬಸ್ಸುಮ್” ಪುಸ್ತಕದ ಮುನ್ನುಡಿಯಿಂದ

ಯು ಸಿರಾಜ್ ಅಹಮದ್ ಸೊರಬ.

ಸಾಹಿತಿ, ಗಜಲ್ ಕವಿ.

(ಇಂಟರ್ನೆಟ್ ಮತ್ತು ಹಲವು ಮೂಲಗಳಿಂದ)

-ಎಚ್ಚಾರೆಲ್