ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗೌರವ ಸಂಪಾದಕರ ಮಾತು – ಡಾ. ಜಿ. ಎನ್.‌ ಉಪಾಧ್ಯ

ಡಾ. ಜಿ.ಎನ್. ಉಪಾಧ್ಯ
ಇತ್ತೀಚಿನ ಬರಹಗಳು: ಡಾ. ಜಿ.ಎನ್. ಉಪಾಧ್ಯ (ಎಲ್ಲವನ್ನು ಓದಿ)

ಮಹಾರಾಷ್ಟ್ರದ ಮಹಾಪರ್ವ ಗಣೇಶೋತ್ಸವದ ಈ ಶುಭ ಸಂದರ್ಭದಲ್ಲಿ ನಸುಕು ಮುಂಬೈ ಮಹಾ ಸಂಚಿಕೆಯ ಮೂರನೆಯ ಎಸಳು ʻಮುಂಬಾ ಆಯಿಯ ಮಡಿಲಲ್ಲಿʼ ಬಿಡುಗಡೆಯಾಗುತ್ತಿರುವುದು ತುಂಬ ಸಂತೋಷದ ಸಂಗತಿ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗಣೇಶೋತ್ಸವ ಜನರಲ್ಲಿ ಭಾವೈಕ್ಯ ಉಂಟುಮಾಡಿದ್ದು ಚಾರಿತ್ರಿಕ ಸಂಗತಿ. ಇದೀಗ ಸ್ವಾತಂತ್ರ್ಯ ಸಂಭ್ರಮದ ಅಮೃತ ಗಳಿಗೆ. ಕಳೆದ ಏಳೂವರೆ ದಶಕಗಳಲ್ಲಿ ನಾವು ಸಾಧಿಸಿದ ಸಾಧನೆಯ ಆತ್ಮಾವಲೋಕನಕ್ಕೂ ಇದು ಸಕಾಲ. ಈ ಎಸಳು ಸ್ತ್ರೀ ಶಕ್ತಿಯ ಪ್ರತೀಕ. ಹೊರ ನಾಡಾದ ಮುಂಬೈಯಲ್ಲಿ ಕನ್ನಡ ಮಹಿಳೆಯರ ಸಾಹಸ ಸಾಧನೆಯ ದರ್ಶನ ಇಲ್ಲಿದೆ. ನಸುಕು ಸಂಪಾದಕರಾದ ವಿಜಯ ಅವರ ಪ್ರೀತಿ ವಿಶ್ವಾಸ ದೊಡ್ಡದು. ಈ ಸಂಚಿಕೆಯ ಮೂಲಕ ಅನೇಕ ಹೊಸ ಲೇಖಕರ ಪ್ರತಿಭೆ ಲೋಕ ಮುಖಕ್ಕೆ ತಿಳಿಯುವಂತಾಗಿದೆ. ಸಾಹಿತ್ಯ ವಲಯವಾಗಿ ಮುಂಬೈ ಇನ್ನೂ ತನ್ನತನವನ್ನು ಉಳಿಸಿಕೊಂಡು ಬಂದಿರುವುದಕ್ಕೆ ಇಲ್ಲಿನ ವೈವಿಧ್ಯಮಯವಾದ ಬರವಣಿಗೆ ಸಾಕ್ಷಿ. ಮುಂಬಾ ಆಯಿಯ ಮಡಿಲಲ್ಲಿ ಕನ್ನಡ, ಕನ್ನಡಿಗರು ಸದಾ ಸುರಕ್ಷಿತವಾಗಿರಲಿ ಎಂಬುದು ನಮ್ಮ ಆಶಯ. ಈ ಸಂಚಿಕೆಯನ್ನು ಸರ್ವಾಂಗ ಸುಂದರವಾಗಿ ರೂಪಿಸಿಕೊಟ್ಟ ನಸುಕು ಬಳಗಕ್ಕೆ ಇಪ್ಪತ್ತು ಲಕ್ಷ ಮುಂಬೈ ಕನ್ನಡಿಗರ ಪರವಾಗಿ ಅನಂತ ವಂದನೆಗಳು. ಕೊರೊನಾ ಕಾಟ ತಪ್ಪಲಿ ಎಲ್ಲೆಡೆ ಶಾಂತಿ ನೆಮ್ಮದಿ ನೆಲೆಸಲಿ ಎಂದು ಸಿದ್ಧಿವಿನಾಯಕನಲ್ಲಿ ಪ್ರಾರ್ಥಿಸೋಣ. ಚೌತಿ ಹಬ್ಬದ ಶುಭಾಶಯಗಳೊಂದಿಗೆ

ಡಾ. ಜಿ. ಎನ್.‌ ಉಪಾಧ್ಯ

ಗೌರವ ಸಂಪಾದಕರು, ನಸುಕು ಮಹಾ ಸಂಚಿಕೆ, ಮುಂಬಯಿ

ಡಾ. ಜಿ. ಎನ್.‌ ಉಪಾಧ್ಯ