- ಕರ್ಪೂರಿ ಠಾಕೂರ್ - ಮಾರ್ಚ್ 3, 2024
- ಗಝಲ್ ಲೋಕದಲ್ಲೊಂದು ಸುತ್ತು - ಮಾರ್ಚ್ 25, 2023
- ಬಿ. ಜಿ. ಎಲ್. ಸ್ವಾಮಿ ಮತ್ತು ಹೀಗೊಂದು ಪ್ರಣಯ ಪ್ರಸಂಗ - ನವೆಂಬರ್ 5, 2022
ಸಿಡ್ನಿ ಪಾಟಿಯೆಯ್ ಎಂಬ ಸ್ಟಾರ್ ಇನ್ಸ್ಪಿರೇಷನ್
ವಿಶ್ವದ ಸಿನೆಮಾ ಜಗತ್ತಿನಲ್ಲಿ ಹಾಗೂ ಅಮೆರಿಕದ ಹಾಲಿವುಡ್ ಸಿನಿಮಾ ರಂಗದ ದಿಗ್ಗಜ, ಕಪ್ಪುವರ್ಣೀಯ ನಟ, ಆಸ್ಕರ್ ಪ್ರಶಸ್ತಿಯ ವಿಜೇತ, ೯೪ ವರ್ಷದ ಸಿಡ್ನಿ ಪೊಯ್ಟಿಯೈಯ್ ೬, ಜನವರಿ, ೨೦೨೨ ರಂದು ಹಾಲಿವುಡ್ ನ ತಮ್ಮ ಬವೆರ್ಲಿ ಹಿಲ್ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ.
ಸಿಡ್ನಿ ಪೊಯ್ಟಿಯೈಯ್ ಬದುಕಿದಷ್ಟು ಸಮಯ ಕಪ್ಪು-ಬಿಳಿಯರ ಮಧ್ಯೆಯ ವರ್ಣಭೇದ ನೀತಿಯ ವಿರುದ್ಧ ಮೆಟ್ಟಿನಿಂತು, ಹೋರಾಡಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ‘ಲಿಲೀಸ್ ಆಫ್ ದಿ ಫೀಲ್ಡ್’ ಚಿತ್ರದ ಪಾತ್ರದ ನಿರ್ವಹಣೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು.
ಜೊತೆಗೆ ಜನಾಂಗೀಯ ಅಡೆ-ತಡೆಗಳನ್ನು ಸಂಯಮ, ಶಾಂತಿಯಿಂದ ಎದುರಿಸಿ, ತಮ್ಮ ಸ್ವಂತ ಪ್ರತಿಭೆಯಿಂದ ಆಸ್ಕರ್ ಪ್ರಶಸ್ತಿ ಪಡೆದ ,ಮೊಟ್ಟ ಮೊದಲ ಅಮೇರಿಕನ್ ಕಪ್ಪುವರ್ಣೀಯ ಕಲಾವಿದ ; ಇದಲ್ಲದೆ, ನಾಗರಿಕ ಹಕ್ಕುಗಳ ಚಳುವಳಿಯ ಸಮಯದಲ್ಲಿ ಹೊಸ ಪೀಳಿಗೆಗೆ ಸ್ಫೂರ್ತಿ ನೀಡಿದ ಮಹಾನ್ ಕಲಾವಿದರೂ ಆಗಿದ್ದರು.
ನನಗೇಕೆ ಹಾಲಿವುಡ್ ನ ಅತ್ಯಂತ ಪ್ರಿಯ-ಸಾಧಕ ನಟ ಡಾ. ಸಿಡ್ನಿ ಪಾಟಿಯೆಯೈ ಇಷ್ಟವಾಗುತ್ತಾರೆ ?
೧೯೬೮ ರಲ್ಲಿ ಬೆಂಗಳೂರಿನಲ್ಲಿ ನನ್ನ ವಿದ್ಯಾಭ್ಯಾಸ ಮುಗಿಸಿ ಬೊಂಬಾಯಿನಲ್ಲಿ ತಳವೂರುತ್ತಿದ್ದ ಸಮಯ. ನನ್ನ ಓದಿಗೆ ತಕ್ಕ ನೌಕರಿ ಆಗ ಸುಲಭವಾಗಿ ಸಿಗುತ್ತಿತ್ತು. ಮಾಯಾನಗರಿಯೆಂದು ನಾವೆಲ್ಲಾ ಕರೆಯುವ ಪ್ರಮುಖ ಆಕರ್ಷಣೆಗಳಲ್ಲಿ ಸಿನಿಮಾ ವೀಕ್ಷಿಸುವುದೂ ಒಂದಾಗಿತ್ತು. ಅದರಲ್ಲೂ ಬೊಂಬಾಯಿನ ಕೋಟೆ ವಲಯದಲ್ಲಿ ‘ಸ್ಟೀರಿಯೋ ಫೋನಿಕ್ ಸೌಂಡ್ ಸಿಸ್ಟಮ್ ತಂತ್ರಜ್ಞಾನ’ದಲ್ಲಿ ಹಲವಾರು ಹಾಲಿವುಡ್ ಚಿತ್ರಗಳನ್ನು ನೋಡಿದ್ದೆ. ಹಾಲಿವುಡ್ ನ ನನ್ನ ಗಮನವನ್ನು ಸೆಳೆದ ಹಲವು ಚಿತ್ರಗಳಲ್ಲಿ “Guess Who’s Coming to Dinner” , ಅತ್ಯಂತ ಮುದಕೊಟ್ಟ ಚಿತ್ರ. ನಮ್ಮ ಭಾರತೀಯ ಚಿತ್ರದ ತರಹವೇ ಮದುವೆ , ಅದಕ್ಕೆ ಪೂರ್ವಸಿದ್ಧತೆ, ಹುಡುಗ-ಹುಡುಗಿ ಭೇಟಿಯಾಗುವ ಸಂಭ್ರಮ, ಇತ್ಯಾದಿಗಳ ಸಹಜ ಚಿತ್ರಣ, ನನಗೆ ಬಹಳವಾಗಿ ಹಿಡಿಸಿತು.
ಅಮೇರಿಕನ್ ಇಂಗ್ಲೀಷ್ ಭಾಷೆಯ ತೊಡಕು ನನಗೆ ಯಾವ ತೊಂದರೆಯನ್ನೂ ಮಾಡಲಿಲ್ಲ. ನನ್ನ ಮಟ್ಟಿಗೆ ಹೇಳಬೇಕೆಂದರೆ, ಸಿಡ್ನಿಯವರ ಪಾತ್ರವನ್ನು ನೋಡಿದ ನನಗೆ ಒಂದು ಬಹು ದೊಡ್ಡ ಹಾಗೂ, ಅತ್ಯಂತ ಹೊಸ ಅನುಭವವೇ ಆಗಿತ್ತು. ಅಮೇರಿಕಾದಲ್ಲಿ ಕಪ್ಪು ಜನಾಂಗೀಯವಾದ, ಅಸಮಾನತೆಯ ವಾತಾವರಣವಿರುವುದನ್ನು ಓದಿದ್ದೆ. ಅಲ್ಲದೆ ನ್ಯೂಯಾರ್ಕ್ ನಗರದ ಘೆಟ್ಟೋ ಗಳಲ್ಲಿ ವಾಸಿಸುತ್ತಿದ್ದ ನಿಗ್ರೋಗಳು, ಕೇವಲ ಕೆಲವೇ ಡಾಲರ್ ಗಳಿಗೆ ಕಗ್ಗೊಲೆ ಮಾಡಿದ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಓದಿದ್ದೆ ; ಮತ್ತು ಹಲವರಿಂದ ತಿಳಿದಿದ್ದೆ ಸಹಿತ. ನಾನು ನೋಡಿದ ಕೆಲವು ಹಾಲಿವುಡ್ ಚಲನ ಚಿತ್ರಗಳಲ್ಲೂ ನಿಗ್ರೋಗಳ ಬಗ್ಗೆ ಒಳ್ಳೆಯ ಅಭಿಪ್ರಾಯವಿರಲೇ ಇಲ್ಲವೆಂಬುದು ನನ್ನ ಅನಿಸಿಕೆ. ಆಗ ಇವುಗಳ ಬಗ್ಗೆ ವಿಶೇಷವಾಗಿ ಏನೇನೂ ತಿಳಿಯದ ನಾನು, ಗೊಂದಲಕ್ಕೆ ಈಡಾಗಿದ್ದೆ. ಶತಮಾನಗಳಿಂದ ನಾಗರಿಕ ಹಕ್ಕುಗಳಿಂದ ವಂಚಿತರಾಗಿದ್ದ ನಿಗ್ರೋ ಜನಾಂಗ, ತೀವ್ರವಾದ ಅಸಮಾನತೆಗಳಿಗೆ ಒಳಗಾಗಿ ಶೋಷಿತರಂತೆ ಅನುಭವಿಸುತ್ತಿದ್ದ ಕ್ರೌರ್ಯ ಪರಿಸ್ಥಿತಿ, ಅನಾದರಣೆ, ಮೊದಲಾದವುಗಳು ಅವರನ್ನು ಬಹಳ ಕೆಟ್ಟದಾಗಿ ವರ್ತಿಸಲು ಪ್ರೇರೇಪಿಸಿರಬಹುದು !
ನಾನು ಪ್ರಸ್ತಾಪಿಸುತ್ತಿರುವ ಡಾ/ಸರ್. ಸಿಡ್ನಿ ಪಾಟಿಯೆಯೈ, ೬ ಅಡಿ ಎರಡೂವರೆ ಅಂಗುಲ ಎತ್ತರದ, ೮೫ ಕಿ.ಗ್ರಾಂ. ತೂಕದ ಕಾಡು ಕಪ್ಪಾಗಿದ್ದರೂ, ಒಂದು ನಮೂನೆಯ ವಿಶೇಷ ಆಕರ್ಷಕ ವ್ಯಕ್ತಿತ್ವವುಳ್ಳ ಮೇರು ನಟ. ಸಿಡ್ನಿ ಒಬ್ಬ ಸ್ಪುರದ್ರೂಪಿಯೆಂದೇ ನನ್ನ ಅನಿಸಿಕೆ ; ತೀರಾ ಕಡಿಮೆ ಮಾತು, ನಿಲ್ಲುವ, ಬಾಗುವ, ನೋಡುವ, ವಿಷಯಗಳಿಗೆ ಸಮಚಿತ್ತದಿಂದ, ಗಾಂಭೀರ್ಯದಿಂದ ಸ್ಪಂದಿಸುವ, ಹಾಗೂ ನಿತ್ಯಜೀವನದಲ್ಲಿ ಉದಾತ್ತ ಧ್ಯೇಯವನ್ನು ಮೈಗೂಡಿಸಿಕೊಂಡಿರುವ ಕಪ್ಪು-ವರ್ಣಿಯ ಭೇದ ನೀತಿಯನ್ನು ತನ್ನದೇ ರೀತಿಯಲ್ಲಿ ಖಂಡಿಸುವ, ತನ್ನ ವಿಭಿನ್ನ ಶೈಲಿಯ ಅಭಿನಯಗಳಿಗೆ ಆಫ್ರಿಕನ್-ಅಮೆರಿಕನ್ನರಿಗೆ ಮಾತ್ರ ಮೀಸಲಾಗದೆ, ಬಿಳಿಯ ಮತ್ತು ಭಾರತೀಯ ಸಿನಿಮಾ ವೀಕ್ಷಕರ ಮನಸೆಳೆಯುವಲ್ಲಿ ಸಿದ್ಧಿಗಳಿಸಿದ, ತಮ್ಮ ೯೪ ವರ್ಷಗಳ ಸುದೀರ್ಘ ಜೀವನದಲ್ಲಿ ಯಾವ ಹೆಚ್ಚಿನ ವಿವಾದಗಳ ಸುಳಿಯಲ್ಲೂ ಸಿಕ್ಕದೆ ಗಟ್ಟಿಯಾಗಿ ನೆಲದಮೇಲೆ ತಳವೂರಿ ನಿಂತ ಧೀಮಂತ ವ್ಯಕ್ತಿ.
ಸಿಡ್ನಿಯವರ ಒಟ್ಟಾರೆ ವ್ಯಕ್ತಿತ್ವ, ನನ್ನನ್ನು ಬಹಳ ಸೆಳೆದಿತ್ತು. ಅಮೇರಿಕನ್ ಕಪ್ಪು ಸಮಾಜದಲ್ಲಿ ಹೊಸ ವ್ಯವಸ್ಥೆಯೊಂದರ ಆರಂಭಿಕರೆಂದು ಅವರನ್ನು ಹೇಳಬಹುದು. ಕೇವಲ ನಟರಾಗಿ ಅಂತಹದೇ ಪಾತ್ರಗಳನ್ನು ಆರಿಸಿಕೊಂಡು ಮುಂದೆ ಸಾಗಿದ್ದು ಒಂದಾದರೆ, ಜೀವನದಲ್ಲೂ ಎಲ್ಲೂ ಕಪ್ಪು-ಬಿಳುಪು ಸಮುದಾಯಗಳ ಬಗ್ಗೆ ಅಂತಹ ಅಹಿತಕರ ಸನ್ನಿವೇಶಗಳಿಗೆ ತಮ್ಮನ್ನು ತೆರೆದುಕೊಳ್ಳದೇ ಬ್ರಿಟನ್ ರಾಣಿ ಎಲಿಝಬೆತ್-೨ ರವರಿಂದ ಸರ್ ಪದವಿ ಗಿಟ್ಟಿಸಿಕೊಳ್ಳುವುದರಲ್ಲಿ ಅರ್ಥವನ್ನು ಕಂಡುಕೊಂಡವರು ಅವರು. (ಬಾಲ್ಯದಲ್ಲಿ ಅವರ ತಂದೆತಾಯಿಗಳು ವಾಸಿಸುತ್ತಿದ್ದ ಬಹಾಮಾ ದ್ವೀಪ ಸ್ತೋಮ, ವರ್ಷ ೧೯೭೩ ರ ವರೆವಿಗೂ, ಸುಮಾರು ೩೨೬ ವರ್ಷಗಳ ಕಾಲ, ಬ್ರಿಟಿಷ್ ಸಾಮ್ರಾಜ್ಯದ ಅಧೀನದಲ್ಲಿತ್ತು)
ವಿಶ್ವದಾದ್ಯಂತದ ಹಾಲಿವುಡ್ ನಿನಿಮಾ ನೋಡುಗರೆಲ್ಲರ ಒಟ್ಟಾರೆಯ ಅಭಿಪ್ರಾಯಗಳನ್ನು ಗಮನಿಸಿದರೆ, ಅಲ್ಪನಾದ ನನ್ನ ಅನುಭವಕ್ಕೆ ಅವು ವಿರುದ್ಧವಾಗಿಲ್ಲವೆನ್ನುವುದು ಗಮನಿಸಬೇಕಾದ ಸಂಗತಿ. ಡಾ. ಸಿಡ್ನಿ ಪಾಟಿಯೆಯೈ, ಶತಮಾನದಲ್ಲಿ ಹುಟ್ಟುವ ಒಬ್ಬ ಅಸಾಮಾನ್ಯ ಕಪ್ಪುತಾರೆ ! ತನ್ನ ವ್ಯಕ್ತಿತ್ವ ಹಾಗೂ ಸದ್ವರ್ತನೆಗಳಿಂದ ತಮ್ಮ ಕಪ್ಪು ಹುಟ್ಟುವಿಕೆಯಬಗ್ಗೆ ಅಸಹ್ಯಪಡದೆ, ತನ್ನಿಂದ ಬದಲಾವಣೆಮಾಡಲಾಗುವ ವಿಷಯಗಳನ್ನು ಸ್ವೀಕರಿಸುತ್ತಾ, ತನಗೆ ಸಾಧ್ಯವಾದಷ್ಟನ್ನು ತನ್ನ ಕಪ್ಪು ಆಫ್ರಿಕನ್-ಅಮೇರಿಕನ್ ಜನಾಂಗೀಯರ ಏಳಿಗೆಗಾಗಿ ದುಡಿದು, ತಾವೇ ಒಂದು ಹೊಸಮಾರ್ಗವನ್ನು ದರ್ಶಾಯಿಸಿ, ಹೆಚ್ಚು ಭಾಂಗಣ, ಗದ್ದಲವಿಲ್ಲದೆ ಜೀವಿಸಿದ್ದರು. ಡಾ. ನೆಲ್ಸನ್ ಮಂಡೇಲಾ (೧೯೧೮-೨೦೧೩), ಡಾ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ (೧೯೨೯-೧೯೬೮), ತರಹದ ಬಹು ದೊಡ್ಡ ಪ್ರಮಾಣದ ಆಂದೋಲನಗಳನ್ನು ಮಾಡಲು ಅವರಿಂದ ಸಾಧ್ಯವಾಗದಿದ್ದರೂ ಸಹಿತ, ತಮ್ಮ ಅಭಿನಯ ವಲಯದಲ್ಲಿ ಮಾಡಬಹುದಾದದ್ದನ್ನು ಮಾಡಿ, ತಮ್ಮ ಜನ್ಮವನ್ನು ಸಾರ್ಥಕ ಪಡಿಸಿಕೊಂಡರು.
ಚಿತ್ರದ ಬಗ್ಗೆ
ಈ ಚಿತ್ರ ಮತ್ತು ಸಿಡ್ನಿ ಅಭಿನಯಿಸಿರುವ ಹಲವಾರು ಚಿತ್ರಗಳನ್ನು ಸುಪ್ರಸಿದ್ಧ ಹಾಲಿವುಡ್ ಚಿತ್ರ ನಿರ್ಮಾಪಕ, ‘ಸ್ಟಾನ್ಲಿ ಕ್ರಾಮರ್ ‘ನಿರ್ದೇಶಿಸಿರುತ್ತಾರೆ. ಅವರು ‘ಸಂದೇಶ ಬೀರುವ ಚಿತ್ರಗಳ ’ ನಿರ್ಮಾಣದಲ್ಲಿ ಹೆಸರಾದವರು. ಆ ದಾರಿಯಲ್ಲಿ ಅಂತರ-ಜನಾಂಗೀಯ ವಿವಾಹದ ಅನಿವಾರ್ಯತೆ, ಮತ್ತು ಸಾಧ್ಯತೆಗಳನ್ನು ಪ್ರತಿಪಾದಿಸುವ ಚಿತ್ರವಾಗಿದೆ.
ನಾನು ಇಲ್ಲಿ ಹೇಳಬಯಸುತ್ತಿರುವ ‘ಗೆಸ್ ಹೂಸ್ ಕಮಿಂಗ್ ಟು ಡಿನ್ನರ್’, ಎನ್ನುವ ಹಾಲಿವುಡ್ ಚಿತ್ರದಲ್ಲಿ ಕಪ್ಪುವರ್ಣಿಯನೊಬ್ಬನನ್ನು ಒಬ್ಬ ಬಿಳಿಯ ಯುವತಿ ಪ್ರೀತಿಸಿ ಮದುವೆಯಾಗುವ ಪ್ರಸಂಗದ ಆಧಾರದ ಮೇಲೆ ಚಿತ್ರ ಮುಂದುವರೆಯುತ್ತದೆ. ಈ ತಥ್ಯವುಳ್ಳ ಹಾಲಿವುಡ್ ಚಲನ ಚಿತ್ರ, ನಾನೇ ಏಕೆ ? ೧೯೬೦-೭೦ ರ ದಶಕದಲ್ಲಿ ಬೇರೆಯವರ ಊಹೆಗೂ ನಿಲುಕದ ವಿಷಯವಾಗಿತ್ತು.
ಸ್ಪೆನ್ಸರ್ ಟ್ರೇಸಿ (ಹುಡುಗಿಯ ತಂದೆ) ಡಾ. ಪ್ರೆಂಟಿಸ್ ನನ್ನು (ಮದುವೆಯಾಗುವ ಹುಡುಗ) ಈ ತರಹದ ಅಂತರ-ವರ್ಣಿಯ ವಿವಾಹ ಅನೇಕ ಅಡೆ-ತಡೆಗಳಿಗೆ ಎಡೆಮಾಡಿಕೊಡುತ್ತದೆ ; ‘ನಿಮ್ಮ ಮಗಳನ್ನು ನಾನು ಬಹಳವಾಗಿ ಪ್ರೀತಿಸುತ್ತೇನೆ’, ಎಂದು ಪ್ರಾರಂಭಮಾಡುವ ಪ್ರೆಂಟಿಸ್, ಮತ್ತು ಸ್ಪೆನ್ಸರ್ ಟ್ರೇಸಿಯವರ ಸಂಭಾಷಣೆ ಕೆಳಗೆ ಕಂಡಂತೆ ಮುಂದುವರೆಯುತ್ತದೆ. ‘ಮುಂದೆ ಜನಿಸುವ ನಿಮ್ಮ ಮಕ್ಕಳ ಭವಿಷ್ಯದ ವಿಚಾರವೇನು’ ? ‘ಅದರ ಬಗ್ಗೆ ನೀವಿಬ್ಬರೂ ಯೋಚಿಸಿದ್ದೀರಾ ‘? ಎಂದು ಟ್ರೇಸಿಯವರು ಪ್ರಶ್ನಿಸಿದಾಗ, ಪ್ರೆಂಟಿಸ್ ‘ಹೌದು’. ‘ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿರುವುದರಿಂದ ಜನರ ನಿಂದೆಯನ್ನು ಸಮರ್ಥವಾಗಿ ಎದುರಿಸುತ್ತೇವೆ. ಮಕ್ಕಳ ಬಗ್ಗೆ ನಾನು ಅಮೇರಿಕಾದ ಸೆನೆಟ್ ನ ಸೆಕ್ರೆಟರಿಯನ್ನಾಗಿ ಮಾಡಲು ಆಶೆಪಟ್ಟರೆ, ನಿಮ್ಮ ಪುತ್ರಿ, ಇನ್ನೂ ಒಂದುಹೆಜ್ಜೆ ಮುಂದೆ ಹೋಗಿ, ಅಮೇರಿಕಾದ ಅಧ್ಯಕ್ಷರನ್ನಾಗಿ ಮಾಡುವ ಮಹದಾಶೆಯನ್ನು ವ್ಯಕ್ತಪಡಿಸಿದಳು ; ಇದಲ್ಲದೆ ಅಮರಿಕದ ರಾಜಕೀಯವಲಯವನ್ನು ಬಣ್ಣದಿಂದ ಕಲಾತ್ಮಕವಾಗಿಸುವುದು ಅವರ ಇಚ್ಚೆಯಾಗಿರುತ್ತದೆ”. ಎಂದಾಗ, ಸ್ಪೆನ್ಸರ್ ಟ್ರೇಸಿಯವರು, ಸಮಾಧಾನದ ಉಸಿರನ್ನು ಬಿಡುತ್ತಾರೆ.
-ಎಚ್. ಆರ್. ಎಲ್ . ,ಲೇಖಕರು
ಆರಂಭಿಕ ಜೀವನ :
ಸಿಡ್ನಿ ಪಾಟಿಯೆಯೈ ಅವರು ಫೆಬ್ರವರಿ ೨೦, ೧೯೨೭ ರಂದು ಅಮೇರಿಕ ಸಂಯುಕ್ತ ಸಂಸ್ಥಾನದ ಫ್ಲೋರಿಡ ರಾಜ್ಯದ ಮಿಯಾಮಿಯಲ್ಲಿ ಜನಿಸಿದರು. ಬಹಾಮಿಯ ದ್ವೀಪ ಸಮೂಹಗಳ ವಾಸಿಯಾಗಿದ್ದರೂ, ಕ್ಯಾಟ್ ಐಲೆಂಡ್ ನಲ್ಲಿ ಹೊಲವನ್ನು ಹೊಂದಿದ್ದ ಬಹಮಿಯನ್ ರೈತರಾದ ಎವೆಲಿನ್ ಮತ್ತು ರೆಜಿನಾಲ್ಡ್ ಜೇಮ್ಸ್ ಪಾಟಿಯೆಯೈ ರವರಿಗೆ ಜನಿಸಿದ ಏಳು ಮಕ್ಕಳಲ್ಲಿ,ಸಿಡ್ನಿ ಕೊನೆಯವರಾಗಿದ್ದರು. ರೈತ-ಬಡತನ, ನಮ್ಮದೇಶದಲ್ಲಿದ್ದಂತೆಯೇ ಬಹಾಮಾ ದ್ವಿಪದಲ್ಲೂ ಇತ್ತು. ಹಾಗಾಗಿ ಸಿಡ್ನಿಯವರನ್ನು ಶಾಲೆಗೆ ಕಳಿಸಲು ಅವರ ಪೋಷಕರಿಗೆ ಸಾಧ್ಯವಾಗುತ್ತಿರಲಿಲ್ಲ. ತಂದೆಯವರು ಟೊಮ್ಯಾಟೊ ಮತ್ತು ಇತರ ಕೃಷಿ ಉತ್ಪನ್ನಗಳನ್ನು ಸಗಟು ವ್ಯಾಪಾರಿಗಳಿಗೆ ಮಾರಾಟ ಮಾಡಲು ಅಮೇರಿಕಾದ ಪ್ಲಾರಿಡಾ ರಾಜ್ಯದ ಮಿಯಾಮಿಗೆ ವಾರಾಂತ್ಯದಲ್ಲಿ ಹೋಗುತ್ತಿದ್ದರು. ಸಿಡ್ನಿಯವರ ತಂದೆ ನಸ್ಸೌನಲ್ಲಿ ಕ್ಯಾಬ್ ಡ್ರೈವರ್ ಆಗಿಯೂ ಕೆಲಸ ಮಾಡುತ್ತಿದ್ದರು. ಅವರು ಮಿಯಾಮಿಯಲ್ಲಿ ವ್ಯಾಪಾರ ಮಾಡಲು ಹೋದಾಗ, ಸಿಡ್ನಿಯವರು ಅನಿರೀಕ್ಷಿತವಾಗಿ ಜನಿಸಿದರು ; ಸಿಡ್ನಿಯ ಜನನವು ಮೂರು ತಿಂಗಳ ಅವಧಿಗೆ ಮುಂಚೆಯೇ, ಆಗಿದ್ದರಿಂದ ತಾಯಿಯ ಗರ್ಭದಲ್ಲಿ ಸಂಪೂರ್ಣವಾಗಿ ಮಗುವಿನ ರೂಪಗೊಳ್ಳಲ್ಲಿಲ್ಲವಾದ ಕಾರಣ, ಅವರು ಬದುಕುಳಿಯುವ ನಿರೀಕ್ಷೆ ಇರಲಿಲ್ಲ. ಮಗುವನ್ನು ಆಸ್ಪತ್ರೆಯೊಂದರಲ್ಲಿ ಸೇರಿಸಿ ಶುಶ್ರೂಷೆ ಮಾಡಲು ಸಿಡ್ನಿಯ ಹೆತ್ತವರು ತಿಂಗಳಗಟ್ಟಲೆ ಮಿಯಾಮಿಯಲ್ಲಿ ಇರಬೇಕಾಯಿತು. ಅಸ್ಪತ್ರೆಯಲ್ಲಿ ಸಕ್ಷಮ ವೈದ್ಯಕೀಯ ನೆರವು ಪಡೆದು ಹೊರಗೆ ಬಂದನಂತರ, ಪಾಟಿಯೆಯೈ ಬ್ರಿಟಿಷ್ ಕ್ರೌನ್ ವಸಾಹತಾಗಿದ್ದ ಬಹಾಮಾಸ್ ಗೆ ಹೋಗಿ ಅಲ್ಲಿ ಮನೆಯಲ್ಲಿ ಬೆಳೆದರು. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಗು ಜನಿಸಿದ್ದರಿಂದ, US ಪೌರತ್ವ ಸಿಗಲು ಕಷ್ಟವಾಗಲಿಲ್ಲ.
ನಸ್ಸೌಗೆ ತೆರಳಿದ ರೆಜಿನಾಲ್ಡ್ ಜೇಮ್ಸ್, ಅಲ್ಲಿ ಅವರು ಆಧುನಿಕ ಜಗತ್ತಿಗೆ ತೆರೆದುಕೊಂಡರು. ತಮ್ಮ ಜೀವಮಾನದ ಮೊಟ್ಟಮೊದಲ ಆಟೋಮೊಬೈಲ್ ನೋಡಿದರು. ವಿದ್ಯುತ್, ಕೊಳಾಯಿಯಲ್ಲಿ ಕುಡಿಯುವ ನೀರಿನ ವಿತರಣೆ, ಶೈತ್ಯೀಕರಣ ಮತ್ತು ಚಲನ ಚಿತ್ರಗಳನ್ನು ಕಣ್ಣಾರೆ ಕಂಡು ಅನುಭವಿಸಿದರು ಸಹಿತ. ಮೂಲತಃ ಅವರು ಕ್ಯಾಥೋಲಿಕ್ ಕ್ರಿಶ್ಚಿಯನ್ ಮತಸ್ತರಾಗಿದ್ದರೂ ದೇವತಾವಾದಕ್ಕೆ ಹತ್ತಿರವಾದ ದೃಷ್ಟಿಕೋನಗಳೊಂದಿಗೆ ಅಜ್ಞೇಯತಾವಾದಿಯಾಗಿದ್ದರು.
ಸಿಡ್ನಿಗೆ ವಯಸ್ಸು ಹದಿನೈದಾಗಿದ್ದಾಗ, ಅವರ ಪೋಷಕರು ತಮ್ಮ ಹಿರಿಯ ಮಗನ ಮನೆಗೆ ಹೋಗಿರಲು ಮಿಯಾಮಿಗೆ ಕಳುಹಿಸಿಕೊಟ್ಟರು. ಅಲ್ಲಿ ತನ್ನ ಸಹೋದರನ ದೊಡ್ಡ ಕುಟುಂಬದೊಂದಿಗೆ, ಇದ್ದಾಗ, ‘ಜಿಮ್ ಕ್ರೌ ಯುಗದ ಫ್ಲೋರಿಡಾ ರಾಜ್ಯದಲ್ಲಿನ ವರ್ಣಭೇದ ನೀತಿ’ಗೆ ಹೊಂದಿಕೊಳ್ಳಲು ಸಿಡ್ನಿಗೆ ಸಾಧ್ಯವಾಗಲಿಲ್ಲ. ಹದಿನಾರನೇ ವಯಸ್ಸಿನಲ್ಲಿ, ಅವರು ನ್ಯೂಯಾರ್ಕ್ ನಗರಕ್ಕೆ ತೆರಳಿ, ಡಿಶ್‌ವಾಶಿಂಗ್ ಮತ್ತು ಹಲವಾರು ಚಿಕ್ಕ-ಪುಟ್ಟ ನೌಕರಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಸಿಡ್ನಿ ಪಾಟಿಯೆಯೈ ತಮ್ಮ ಮೊದಲ ಆಡಿಷನ್ ನಲ್ಲಿ ಅನುಭವಿಸಿದ ಕಟು-ಅನುಭವವನ್ನು ಅವರ ಬಾಯಿನಲ್ಲಿಯೇ ಕೇಳೋಣ :
“ಮೊದಲನೆಯದಾಗಲಿ ನಿಜಹೇಳಬೇಕೆಂದರೆ, ನಟನಾಗುವ ಇಚ್ಛೆ ಅಷ್ಟೇನೂ ತೀವ್ರವಾಗಿರಲಿಲ್ಲ. ನಾನು ನ್ಯೂಯಾರ್ಕ್ ನ ಹಾರ್ಲೆಮ್ ನಲ್ಲಿ ‘ಆಮ್ಸ್ಟರ್ ಡ್ಯಾಮ್ಸ್ನನ್ಯೂಸ್’ ಎಂಬ ಪತ್ರಿಕೆಯನ್ನು ನೋಡಿದಾಗ, ಅದರಲ್ಲಿ ‘ನಾಟಕದಲ್ಲಿ ಅಭಿನಯಿಸಲು ನಟರು ಬೇಕಾಗಿದ್ದಾರೆ’, ಎಂಬ ಒಂದು ಜಾಹಿರಾತು ಕಾಣಿಸಿತು. ನಾನು ಕೂಡಲೇ ‘ಅಮೇರಿಕನ್ ನಿಗ್ರೋ ಥಿಯೇಟರ್’ ಒಳಗೆ ಹೋಗಿ ಆಡಿಷನ್ ಗೆ ವಿಚಾರಿಸಿದಾಗ, ಒಬ್ಬ ಆಫ್ರಿಕನ್- ಅಮೆರಿಕನ್ ಠೊಣಪ, ನನಗೆ ನಾಟಕದ ಸ್ಕ್ರಿಪ್ಟ್ ಕೊಟ್ಟು, ಓದಲು ಆಜ್ಞಾಪಿಸಿದ. ಆತನೇ ಥಿಯೇಟರ್ ನ ಸಹ-ಸ್ಥಾಪಕ, ‘ಫ್ರೆಡ್ರಿಕ್ ಓ ನೀಲ್’ ಎಂದು ನಂತರ ತಿಳಿಯಿತು. ನಾನು ಸ್ಟೇಜಿನ ಮೇಲೆ ಹೋಗಿ ‘ಸ್ಕ್ರಿಪ್ಟ್’ ಓದಿದಾಗ, ನನ್ನ ಕೆರೆಬಿಯನ್ ಉಚ್ಚಾರಣೆ ಅಲ್ಲಿನ ಸಭಿಕರಿಗೆ ಅರ್ಥವಾಗದೇ ಒಂದೇ ಸಮನೆ ಕೂಗಿದರು. ನನಗೆ ಇನ್ನೂ ಭಯವಾಗಿ ಓದಲು ಹೋಗಿ, ತಡವರಿಸಿದಾಗ ಓನಿಲ್ ರ ಕೋಪ ನೆತ್ತಿಗೇರಿತು. ತಕ್ಷಣವೇ ಅವರು ಸ್ಟೇಜ್ ಮೇಲೆ ಬಂದು, ಕೋಪದಿಂದ ನನ್ನ ಶರ್ಟ್ ನ ಕುತ್ತಿಗೆಯ ಕಾಲರ್ ಹಿಡಿದು, ಥಿಯೇಟರ್ ದ್ವಾರದಿಂದ ನನ್ನನ್ನು ಹೊರಗೆ ನೂಕಿದರು”.
ಫ್ರೆಡರಿಕ್ ಓನಿಲ್ ಹೇಳಿದ ಮಾತುಗಳು ಹೀಗಿದ್ದವು :
“ನಮ್ಮೆಲ್ಲರ ಸಮಯ ಹಾಳ್ಮಾಡ್ಬ್ಯಾಡ ಮಗ, ಗೊತ್ತಾಯ್ತಾ ? ಇದೆಲ್ಲಾ ನಿನ್ನಂತವನಿಗೆ ಆಗ್ಹೋಗದ ಮಾತು. ನನ್ಮಾತ್ ಕೇಳ್ಕ ; ನಿನ್ಡಿಶ್ ವಾಶಿಂಗ್ ಕೆಲ್ಸನೇ ಮುಂದ್ವರಸ್ ಕೊಂಡ್ಹೋಗಪ್ಪ” ಎಂದು ಹೀನಾಯವಾಗಿ ಮಾತಾಡಿದರು. ‘ನೀವು ಮಾತಾಡ್ತಿರೋದು ಸರಿಯಿಲ್ಲ’ ಅಂತ ಮನಸ್ಸಿನಲ್ಲಿ ಅನ್ನಿಸತೊಡಗಿತು. ನನಗೋ ರೋಮರೋಮದಲ್ಲಿ ನನ್ನ ಬಗ್ಗೆ ಪ್ರೀತಿ, ಆತ್ಮವಿಶ್ವಾಸವಿತ್ತು. “ನಾನು ಆ ಕ್ಷಣದಲ್ಲಿ ನಟನಾಗಬೇಕೆಂದು ನಿರ್ಧರಿಸಿದೆ. ನನ್ನನ್ನು ಕತ್ತುಹಿಡಿದು ಬಾಗಿಲಿನಿಂದ ಹೊರಗೆ ನೂಕಿದ ಧಾಂಡಿಗನಿಗೆ ಬುದ್ಧಿಕಲಿಸುವೆನೆಂದು ಪ್ರತಿಜ್ಞೆ ಮಾಡಿದೆ.”
ನಾಟಕದ ಸ್ಕ್ರಿಪ್ಟ್ ನಿರರ್ಗಳವಾಗಿ ಓದಲು ಅಸಮರ್ಥತೆಯಿಂದಾಗಿ ಅಮೇರಿಕನ್ ನೀಗ್ರೋ ಥಿಯೇಟರ್‌ನೊಂದಿಗಿನ ಅವನ ಮೊದಲ ಆಡಿಷನ್ ವಿಫಲವಾಗಿತ್ತು ನಂತರ, ಒಬ್ಬ ಹಿರಿಯ ಸಹೃದಯಿ ಯಹೂದಿ ಹೋಟೆಲ್ ಮಾಣಿಯವರು ಪ್ರತಿ ರಾತ್ರಿಯೂ ಹಲವಾರು ವಾರಗಳವರೆಗೆ ಅವನೊಂದಿಗೆ ಕುಳಿತು, ವೃತ್ತಪತ್ರಿಕೆಯನ್ನು ಬಳಸುವ ಮೂಲಕ ಅವನ ಓದುವಿಕೆ-ಬರೆಯುವಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತಾರೆ. ಯುರೋಪಿನಲ್ಲಿ ನಡೆಯುತ್ತಿದ್ದ ವಿಶ್ವ ಸಮರ-೨ ರ ಸಮಯದಲ್ಲಿ, ನವೆಂಬರ್ ೧೯೪೩ ರಲ್ಲಿ, ಅವರು ಅಮೆರಿಕನ್ ಸೈನ್ಯಕ್ಕೆ ಸೇರಿಕೊಂಡರು. ಆದರೆ ಅಲ್ಲಿ ಸರಿಹೋಗದೆ, ಡಿಸೆಂಬರ್ ೧೯೪೪ ರಲ್ಲಿ ಆ ನೌಕರಿಯನ್ನು ಬಿಟ್ಟರು. ಸೈನ್ಯವನ್ನು ಬಿಟ್ಟ ನಂತರ, ನ್ಯೂಯಾರ್ಕ್ ನಗರದಲ್ಲಿ ಅಮೆರಿಕನ್ ನೀಗ್ರೋ ಥಿಯೇಟರ್ ನಲ್ಲಿ ಯಶಸ್ವಿ ಆಡಿಷನ್‌ನಲ್ಲಿ ಪಾತ್ರವನ್ನು ಪಡೆಯುವವರೆಗೂ ಡಿಶ್‌ವಾಶರ್ ಆಗಿಯೇ ಕೆಲಸ ಮಾಡುತ್ತಿದ್ದರು.
ಹೇಗಾದರೂ ಮಾಡಿ, ಪುನಃ ಅಮೇರಿಕನ್ ನಿಗ್ರೋ ಥಿಯೇಟರ್ ನ ಆಡಿಷನ್ ನಲ್ಲಿ ಸಿದ್ಧಿಪಡೆಯುವುದಾಗಿ ಸಿಡ್ನಿ ಪಾಟಿಯೆಯೈ ಅವರ ಒಳ ಮನಸ್ಸು ಕೂಗಿ ಹೇಳುತ್ತಿತ್ತು. ಈ ಬಾರಿ ಹೇಗೋ ಸಿಡ್ನಿಗೆ ನ್ಯೂಯಾರ್ಕ್ ನಲ್ಲಿ ಅಮೇರಿಕನ್ ನೀಗ್ರೋ ಥಿಯೇಟರ್‌ಗೆ ಸೇರಿದರು. ಹಿಂದೆ ಅವರಿಗೆ ಕೊಟ್ಟ ಕಥಾವಿವರಣೆ ಮತ್ತು ಉಚ್ಚಾರಣೆ ಪ್ರೇಕ್ಷಕರಿಗೆ ಹಿಡಿಸದೆ ತಿರಸ್ಕರಿಸಲ್ಪತ್ತಿದ್ದ ನೆನೆಪು ಇತ್ತು. ಆ ಸಮಯದಲ್ಲಿ ಕಪ್ಪು ಅಭಿನೇತನಿಗೆ ಹಾಡಲೂ ಸಾಧ್ಯವಾಗಿರಲಿಲ್ಲ. ಸಿಡ್ನಿಯವರ ನಟನಾ ಕೌಶಲ್ಯವನ್ನು ಪರಿಷ್ಕರಿಸಲು ಅವರ ಬಹಮಿಯನ್ ಉಚ್ಚಾರಣೆಯನ್ನು ನಿರ್ಧರಿಸಿ ಮುಂದಿನ ಆರು ತಿಂಗಳುಗಳನ್ನು ನಾಟಕೀಯ ಯಶಸ್ಸನ್ನು ಸಾಧಿಸಲು ಒಬ್ಬ ಹಿರಿಯ ವೈಟರ್ ಸಹಾಯ ಪಡೆದು ಇಂಗ್ಲಿಷ್ ಓದುವುದು ಬರೆಯುವುದು ಮಾತಾಡುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ರೇಡಿಯೊನಲ್ಲಿ ಪ್ರಮುಖ ನಿರೂಪಕರಾಗಿ ಕೆಲಸಮಾಡುತ್ತಿದ್ದ ಮೇರು ವ್ಯಕ್ತಿತ್ವದ ನಾರ್ಮನ್ ಬ್ರೋಕನ್‌ಶೈರ್‌ನ ನಂತರ ಅವರು ತಮ್ಮದೇ ಆದ ಭಾಷಣ ಮಾದರಿಯನ್ನು ರೂಪಿಸಿಕೊಂಡರು. ರಂಗಭೂಮಿಯಲ್ಲಿನ ಅವರ ಎರಡನೇ ಪ್ರಯತ್ನದಲ್ಲಿ, ತಮ್ಮ ಸಹಜತೆ, ಅಪೂರ್ವವಾದ ಅಭಿನಯ ಕೌಶಲಗಳಿಂದ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದರು, ಮತ್ತು ಬ್ರಾಡ್‌ವೇ ನಿರ್ಮಾಣದ ಲೈಸಿಸ್ಟ್ರಾಟಾ ಎಂಬ ಗ್ರೀಕ್ ನಾಟಕದಲ್ಲಿ ಅನಾಯಾಸವಾಗಿ ಪ್ರಮುಖ ಪಾತ್ರವನ್ನು ಗಳಿಸಿದರು, ಹೀಗೆಯೇ ಮುಂದುವರೆದು, ಅನ್ನಾ ಲುಕಾಸ್ಟಾಗೆ ಅಂಡರ್‌ಸ್ಟಡಿ ಮಾಡಲು ಆಹ್ವಾನವನ್ನು ಪಡೆದರು. ೧೯೪೭ ರಲ್ಲಿ, ಸಿಡ್ನಿ ಪಾಟಿಯೆಯೈ, ‘ಕಮಿಟಿ ಫಾರ್ ದ ನೀಗ್ರೋ ಇನ್ ದಿ ಆರ್ಟ್ಸ್‌ನ ಸ್ಥಾಪಕ ಸದಸ್ಯ’ರಾದರು. ಈ ಸಂಸ್ಥೆಯಲ್ಲಿ ಭಾಗವಹಿಸುವವರು ವರ್ಗ ಮತ್ತು ಜನಾಂಗೀಯ ಶೋಷಣೆಯ ಎಡಪಂಥೀಯ ವಿಶ್ಲೇಷಣೆಗೆ ಬದ್ಧರಾಗಿದ್ದರು.
೧೯೫೦ ರ ದಶಕ :
೧೯೪೯ ರ ಕೊನೆಯ ವೇಳೆಗೆ, ಸಿಡ್ನಿ ಪಾಟಿಯೆಯೈ ವೇದಿಕೆಯಲ್ಲಿ ಪ್ರಮುಖ ಪಾತ್ರಗಳ ನಡುವೆ ಆಯ್ಕೆ ಮಾಡಬೇಕಾಗಿತ್ತು ಮತ್ತು ನೋ ವೇ ಔಟ್ (೧೯೫೦) ಚಿತ್ರದಲ್ಲಿ ಡ್ಯಾರಿಲ್ ಎಫ್. ಝಾನುಕ್‌ಗೆ ಕೆಲಸ ಮಾಡುವ ಪ್ರಸ್ತಾಪವನ್ನು ನೀಡಬೇಕಾಯಿತು. ‘ನೋ ವೇ ಔಟ್’ನಲ್ಲಿ ಕಕೇಶಿಯನ್ ಧರ್ಮಾಂಧನಿಗೆ ಚಿಕಿತ್ಸೆ ನೀಡುವ ವೈದ್ಯನಾಗಿ (ಸ್ನೇಹಿತನಾದ ರಿಚರ್ಡ್ ವಿಡ್‌ಮಾರ್ಕ್ ನಿರ್ವಹಿಸಿದ) ಅವರ ಅಭಿನಯವು ಗಮನಕ್ಕೆ ಬಂದಿತು ಮತ್ತು ಹೆಚ್ಚಿನ ಪಾತ್ರಗಳನ್ನು ಗಳಿಸಲು ನೆರವಾಯಿತು ; ಪ್ರತಿಯೊಂದೂ ಹೆಚ್ಚಿನ ಆಫ್ರಿಕನ್-ಅಮೇರಿಕನ್ ನಟರಿಗಿಂತ ಹೆಚ್ಚು ಆಸಕ್ತಿಕರ ಮತ್ತು ಹೆಚ್ಚು ಪ್ರಮುಖವಾಗಿದೆ. ಸಮಯವನ್ನು ನೀಡಲಾಯಿತು. ೧೯೫೧ ರಲ್ಲಿ, ಅವರು ‘ಆಫ್ರಿಕನ್-ಅಮೆರಿಕನ್ ನಟ ಕೆನಡಾ ಲೀ’ ಅವರೊಂದಿಗೆ ಕ್ರೈ, ದಿ ಬಿಲವ್ಡ್ ಕಂಟ್ರಿಯ ಚಲನಚಿತ್ರ ಆವೃತ್ತಿಯಲ್ಲಿ ನಟಿಸಲು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಿದರು. ‘ಬ್ಲ್ಯಾಕ್‌ಬೋರ್ಡ್ ಜಂಗಲ್’ನಲ್ಲಿ (೧೯೫೫) ಸರಿಪಡಿಸಲಾಗದ ಹೈಸ್ಕೂಲ್ ತರಗತಿಯ ಸದಸ್ಯನಾದ, ಗ್ರೆಗೊರಿ ಡಬ್ಲ್ಯೂ ಮಿಲ್ಲರ್‌ನ ಪಾತ್ರದಲ್ಲಿ ಪಾಟಿಯೆಯೈರವರ ಮತಭೇದ ಮುಂದುವರೆಯಿತು. ಆದರೆ ಮಾರ್ಟಿನ್ ರಿಟ್ ಅವರ ೧೯೫೭ ‘ಎಡ್ಜ್ ಆಫ್ ದಿ ಸಿಟಿ’ಯಲ್ಲಿನ ಅವರ ಅಭಿನಯವನ್ನು ಚಿತ್ರೋದ್ಯಮವು ನಿರ್ಲಕ್ಷಿಸಲು ಸಾಧ್ಯವಾಗಲಿಲ್ಲ. ಇದು ಅವರಿಗೆ ನೀಡಿದ ಸ್ಟಾರ್ಡಮ್ ಕಡೆಗೆ ಸಮರ್ಥನೆಯಾಗಿತ್ತು.
ಬ್ಲ್ಯಾಕ್‌ಬೋರ್ಡ್ ಜಂಗಲ್’ (೧೯೫೫) ಚಿತ್ರದಲ್ಲಿ ಹೈಸ್ಕೂಲ್ ವಿದ್ಯಾರ್ಥಿಯಾಗಿ ತಮ್ಮ ಅದ್ಭುತ ಚಲನಚಿತ್ರ ಪಾತ್ರವನ್ನು ಗಳಿಸಿದರು. ೧೯೫೮ ರಲ್ಲಿ, ಒಂಬತ್ತು ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಗಳನ್ನು ಪಡೆದ ‘ದಿ ಡಿಫಿಯಂಟ್ ಒನ್ಸ್’ ನಲ್ಲಿ ‘ಸಿಡ್ನಿ’ ಮತ್ತು ‘ಟೋನಿ ಕರ್ಟಿಸ್’ ಅವರೊಂದಿಗೆ ‘ಚೈನ್ಡ್-ಟುಗೆದರ್’ ತಪ್ಪಿಸಿಕೊಂಡ ಅಪರಾಧಿಗಳಾಗಿ ನಟಿಸಿದರು; ಇಬ್ಬರು ನಟರೂ ಅತ್ಯುತ್ತಮ ನಟನಿಗಾಗಿ ನಾಮನಿರ್ದೇಶನಗಳನ್ನು ಪಡೆದರು, ಸಿಡ್ನಿ ಪಾಟಿಯೆಯೈ ಮೊಟ್ಟಮೊದಲ ಕಪ್ಪು ನಟನಾಗಿದ್ದರು. ಅವರಿಬ್ಬರೂ BAFTA ಗಳಿಗೆ ಅತ್ಯುತ್ತಮ ನಟ ನಾಮ ನಿರ್ದೇಶನಗಳನ್ನು ಹೊಂದಿ ಪ್ರಯತ್ನಿಸಿದಾಗ ಪಾಟಿಯೆಯೈ ಗೆದ್ದರು. ೧೯೬೪ ರಲ್ಲಿ, ಅವರು ‘ಲಿಲೀಸ್ ಆಫ್ ದಿ ಫೀಲ್ಡ್’ (೧೯೬೩) ಗಾಗಿ ಅತ್ಯುತ್ತಮ ನಟನೆಗಾಗಿ ಅಕಾಡೆಮಿ ಪ್ರಶಸ್ತಿ ಮತ್ತು ‘ಗೋಲ್ಡನ್ ಗ್ಲೋಬ್ ಅವಾರ್ಡ’ನ್ನೂ ಗೆದ್ದರು, ಜರ್ಮನ್ ಮಾತನಾಡುವ ಸನ್ಯಾಸಿನಿಯರ ಗುಂಪಿಗೆ ಪ್ರಾರ್ಥನಾ ಮಂದಿರವನ್ನು ನಿರ್ಮಿಸಲು ಸಹಾಯ ಮಾಡುವ ‘ಹ್ಯಾಂಡಿಮ್ಯಾನ್’ ಆಗಿ ಅಭಿನಯಿಸಿದರು.
ಗುಡ್-ಬೈ, ಮೈ ಲೇಡಿ (೧೯೫೬) ನಲ್ಲಿ ನಿರ್ದೇಶಕ ವಿಲಿಯಂ ವೆಲ್‌ಮನ್‌ಗಾಗಿ ಕೆಲಸ ಮಾಡುವುದನ್ನು ಸಿಡ್ನಿ ಪಾಟಿಯೆಯೈ ಆನಂದಿಸಿದರು. ವೆಲ್‌ಮನ್ ದೊಡ್ಡ ಹೆಸರಾಗಿದ್ದರು, ಅವರು ಈ ಹಿಂದೆ ಪ್ರಸಿದ್ಧ ರಾಕ್ಸಿ ಹಾರ್ಟ್ (೧೯೪೨) ಅನ್ನು ಜಿಂಜರ್ ರೋಜರ್ಸ್‌ನೊಂದಿಗೆ ಮತ್ತು ಮ್ಯಾಜಿಕ್ ಟೌನ್ (೧೯೪೭) ಜೇಮ್ಸ್ ಸ್ಟೀವರ್ಟ್ ಅವರೊಂದಿಗೆ ನಿರ್ದೇಶಿಸಿದ್ದರು. ಈ ಪ್ರತಿಭಾವಂತ ನಿರ್ದೇಶಕರಲ್ಲಿ ಕಂಡ ಅದ್ಭುತ ಮಾನವೀಯತೆಯನ್ನು ಸಿಡ್ನಿ ಪಾಟಿಯೆಯೈ ಮರೆಯದೆ ನೆನಪಿಟ್ಟುಕೊಂಡರು. ೧೯೭೧ ರಲ್ಲಿ ಜೋಸೆಫ್ ಸಾರ್ಜೆಂಟ್‌ನಿಂದ ಚುಕ್ಕಾಣಿ ಹಿಡಿದಾಗ ವೆಲ್‌ಮನ್‌ರನ್ನು ಪ್ರೇರೇಪಿಸಿದಕ್ಕಾಗಿ ಸಿಡ್ನಿ ಪಾಟಿಯೆಯೈ ಶ್ಲಾಘಿಸಿದರು. ೧೯೫೮ ರಲ್ಲಿ ಸಿಡ್ನಿಪಾಟಿಯೆಯೈ ನಿರ್ದೇಶಕ ಸ್ಟಾನ್ಲಿ ಕ್ರಾಮರ್ ಅವರ ‘ದಿ ಡಿಫೈಂಟ್ ಒನ್ಸ್’ ನಲ್ಲಿ ಟೋನಿ ಕರ್ಟಿಸ್ ಜೊತೆಗೆ ನಟಿಸಿದರು. ಈ ಚಲನಚಿತ್ರವು ವಿಮರ್ಶಾತ್ಮಕ ಮತ್ತು ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡಿತು, ಅಲ್ಲದೆ ಮೀಡಿಯಾ ಪಾಟಿಯೆಯೈ ಮತ್ತು ಕರ್ಟಿಸ್ ಇಬ್ಬರ ಅಭಿನಯವನ್ನು ಮುಕ್ತ ಕಂಠದಿಂದ ಪ್ರಶಂಸಿಸಲಾಯಿತು. ಚಲನಚಿತ್ರವು ೮ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಗಳನ್ನು ಗಳಿಸಿತು. ಇದರಲ್ಲಿ ‘ಅತ್ಯುತ್ತಮ ಚಿತ್ರ’ ಮತ್ತು ‘ಅತ್ಯುತ್ತಮ ನಟ ನಾಮನಿರ್ದೇಶನಗಳು’ ಎರಡೂ ತಾರೆಗಳಿಗೆ,ವಹಿಸಿಕೊಡಲಾಗಿತ್ತು. ಸ್ಪರ್ಧೆಯಲ್ಲಿ ಸಿಡ್ನಿ ಪಾಟಿಯೆಯೈ ಅತ್ಯುತ್ತಮ ನಟನಾಗಿ ಸ್ಪರ್ಧಾತ್ಮಕ ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೊದಲ ಕಪ್ಪು ಪುರುಷ ನಟರೆಂದು ಹೆಸರುಗಳಿಸಿದರು. ಸಿಡ್ನಿ ಪಾಟಿಯೆಯೈ ಅವರು ಅತ್ಯುತ್ತಮ ನಟನಿಗಾಗಿ ಬ್ರಿಟಿಷ್ ಅಕಾಡೆಮಿ ಚಲನಚಿತ್ರ ಪ್ರಶಸ್ತಿಯನ್ನೂ ಗಳಿಸಿದರು.
‘ಪೊರ್ಗಿ ಮತ್ತು ಬೆಸ್’ (೧೯೫೯), ‘ಎ ರೈಸಿನ್ ಇನ್ ದಿ ಸನ್’ (೧೯೬೧), ಮತ್ತು ‘ಎ ಪ್ಯಾಚ್ ಆಫ್ ಬ್ಲೂ’ (೧೯೬೫) ಚಿತ್ರಗಳಿಗಾಗಿ ಸಿಡ್ನಿ ಪಾಟಿಯೆಯೈ ಜನ ಮೆಚ್ಚುಗೆಯನ್ನು ಪಡೆದರು. ೧೯೬೭ ರಲ್ಲಿ ಅವರು ಅಭಿನಯಿಸಿದ ಮೂರೂ ಚಲನಚಿತ್ರಗಳು ಯಶಸ್ಸಿನ ಶಿಖರವನ್ನು ತಲುಪಿದವು. ಇವು ಜನಾಂಗ ಮತ್ತು ಜನಾಂಗದ ಸಂಬಂಧಗಳ ಸಮಸ್ಯೆಗಳನ್ನು ದರ್ಶಾಯಿಸುತ್ತವೆ. ‘ಟು ಸರ್ ವಿತ್ ಲವ್, ಗೆಸ್ ಹೂಸ್ ಕಮಿಂಗ್ ಟು ಡಿನ್ನರ್, ಮತ್ತು ‘ಇನ್ ದಿ ಹೀಟ್ ಆಫ್ ದಿ ನೈಟ್’, ಆ ವರ್ಷದ ಅತ್ಯುತ್ತಮ ಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖಪಾತ್ರವನ್ನು ವಹಿಸಿದ್ದವು. ಕೊನೆಯ ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ಅವರು ಗೋಲ್ಡನ್ ಗ್ಲೋಬ್ ಮತ್ತು BAFTA ನಾಮನಿರ್ದೇಶನಗಳನ್ನು ಪಡೆದರು. ಮುಂದಿನ ವರ್ಷದ ಸಮೀಕ್ಷೆಯಲ್ಲಿ ಅವರು ‘ಅಮೆರಿಕಾದ ಟಾಪ್ ಬಾಕ್ಸ್ ಆಫೀಸ್ ತಾರೆ’ಯಾಗಿ ಆಯ್ಕೆಯಾದರು. ೧೯೭೦ ರ ದಶಕದ ಆರಂಭದಲ್ಲಿ, ಪಾಟಿಯೆಯೈ ಇತರ ಚಲನಚಿತ್ರಗಳ ಜೊತೆಗೆ ರಿಚರ್ಡ್ ಪ್ರಯರ್ ಮತ್ತು ಜೀನ್ ವೈಲ್ಡರ್ ನಟಿಸಿದ ‘ಸ್ಟಿರ್ ಕ್ರೇಜಿ ‘(೧೯೮೦) ಸೇರಿದಂತೆ, ಹಲವಾರು ಹಾಸ್ಯ ಚಲನಚಿತ್ರಗಳನ್ನು ನಿರ್ದೇಶಿಸಿದರು. ಇದಾದ ನಂತರ, ಸುಮಾರು ಒಂದು ದಶಕದ ನಂತರ, ಅವರು ಟೆಲಿವಿಷನ್ ಮತ್ತು ಚಲನಚಿತ್ರಕ್ಕೆ ಮರಳಿದರು, ‘ಶೂಟ್ ಟು ಕಿಲ್’ (೧೯೮೮) ಮತ್ತು ‘ಸ್ನೀಕರ್ಸ್’ (೧೯೯೨) ನಲ್ಲಿ ಅಭಿನಯಿಸಿದರು.
೧೯೫೯ ರಲ್ಲಿ ‘ಎಥೆಲ್ ಬ್ಯಾರಿಮೋರ್ ಥಿಯೇಟರ್’ನಲ್ಲಿ ‘ಬ್ರಾಡ್‌ವೇ ವೇದಿಕೆ’ಯಲ್ಲಿ ‘ರೂಬಿಡೀ’ ಜೊತೆಗೆ ‘ಎ ರೈಸಿನ್ ಇನ್ ದಿ ಸನ್’ನ ಪ್ರಥಮ ನಿರ್ಮಾಣದಲ್ಲಿ ಸಿಡ್ನಿ ಪಾಟಿಯೆಯೈ ನಟಿಸಿದರು. ಈ ನಾಟಕವನ್ನು ಲಾಯ್ಡ್ ರಿಚರ್ಡ್ಸ್ ನಿರ್ದೇಶಿಸಿದರು. ಈ ನಾಟಕವು ಸುಪ್ರಸಿದ್ಧವಾದ ‘ಬಿಳಿಯ ಬ್ರಾಡ್‌ವೇ ಪ್ರೇಕ್ಷಕರಿಗೆ ಕರಿಯರ ಜೀವನದ ವಿವರಗಳನ್ನು ಪರಿಚಯಿಸಿತು’. ಆದರೆ ನಿರ್ದೇಶಕ ರಿಚರ್ಡ್ಸ್, ಹೆಚ್ಚಿನ ಸಂಖ್ಯೆಯ ಕಪ್ಪು ಜನರನ್ನು ಸೆಳೆಯುವ ಮೊದಲ ನಾಟಕ ಎಂದು ಗಮನಿಸಿದರು. ಈ ನಾಟಕವು ೧೯೮೩ ರಲ್ಲಿ ನ್ಯೂಯಾರ್ಕ್ ಟೈಮ್ಸ್‌ನ ವಿಮರ್ಶಕ ಫ್ರಾಂಕ್ ರಿಚ್ ಅವರೊಂದಿಗಿನ ಅಮೆರಿಕನ್ ಥಿಯೇಟರ್‌ನ ಒಂದು ಅದ್ಭುತ ಭಾಗವಾಗಿತ್ತು, ‘ಎ ರೈಸಿನ್ ಇನ್ ದಿ ಸನ್’ “ಅಮೆರಿಕನ್ ರಂಗಭೂಮಿಯನ್ನು ಶಾಶ್ವತವಾಗಿ ಬದಲಾಯಿಸಿತು”. ಅವರ ಅಭಿನಯಕ್ಕಾಗಿ ಅವರು ಪ್ಲೇ ನಾಮನಿರ್ದೇಶನದಲ್ಲಿ ಅತ್ಯುತ್ತಮ ನಟನಿಗಾಗಿ ಟೋನಿ ಪ್ರಶಸ್ತಿಯನ್ನು ಪಡೆದರು. ಅದೇ ವರ್ಷ ಪಾಟಿಯೆಯೈ ಪೋರ್ಗಿ ಮತ್ತು ಬೆಸ್ (೧೯೫೯) ಚಲನಚಿತ್ರ ರೂಪಾಂತರದಲ್ಲಿ ಡೊರೊಥಿ ಡ್ಯಾಂಡ್ರಿಡ್ಜ್ ಜೊತೆಗೆ ನಟಿಸಿದರು. ಅವರ ಅಭಿನಯಕ್ಕಾಗಿ, ಪಾಟಿಯೆಯೈ ೧೯೬೦ ರ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮನಿರ್ದೇಶನವನ್ನು ಪಡೆದರು.
೧೯೬೦ ರ ದಶಕ
ನಟರಾದ ಹ್ಯಾರಿ ಬೆಲಾಫೊಂಟೆ, ಮತ್ತು ಚಾರ್ಲ್ಟನ್ ಹೇಸ್ಟನ್ ಜೊತೆಯಲ್ಲಿ ಸಿಡ್ನಿ ಪಾಟಿಯೆಯೈ, ೧೯೬೩ ಮಾರ್ಚ್‌ನಲ್ಲಿ ವಾಷಿಂಗ್ಟನ್ ನಗರಕ್ಕೆ ಹೋಗಿ, ಉದ್ಯೋಗಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಕಪ್ಪು ಆಫ್ರಿಕನ್-ಅಮೆರಿಕನ್ನರ ಪರವಾಗಿ ಹೋರಾಡಿದರು.
೧೯೬೭ ರಲ್ಲಿ :
೧೯೬೧ ರಲ್ಲಿ, ಸಿಡ್ನಿ ಪಾಟಿಯೆಯೈ, ‘ಎ ರೈಸಿನ್ ಇನ್ ದಿ ಸನ್’ ಚಿತ್ರದ ರೂಪಾಂತರದಲ್ಲಿ ನಟಿಸಿದರು, ಇದಕ್ಕಾಗಿ ಅವರು ಮತ್ತೊಂದು ‘ಗೋಲ್ಡನ್ ಗ್ಲೋಬ್ ಪ್ರಶಸ್ತಿ ನಾಮನಿರ್ದೇಶನ’ ವನ್ನು ಪಡೆದರು. ೧೯೬೧ ರಲ್ಲಿ, ಸಿಡ್ನಿಯವರು ‘ಪ್ಯಾರಿಸ್ ಬ್ಲೂಸ್’ನಲ್ಲಿ ‘ಪಾಲ್ ನ್ಯೂಮನ್’, ‘ಜೋನ್ನೆ ವುಡ್‌ವರ್ಡ್’, ‘ಲೂಯಿಸ್ ಆರ್ಮ್‌ಸ್ಟ್ರಾಂಗ್’ ಮತ್ತು ‘ಡಯಾನ ಕ್ಯಾರೊಲ್’ ಜೊತೆಗೆ ನಟಿಸಿದರು. ಈ ಚಲನಚಿತ್ರವು ಆ ಕಾಲದ ಅಮೆರಿಕನ್ ವರ್ಣಭೇದ ನೀತಿ, ಪ್ಯಾರಿಸ್‌ನಲ್ಲಿ ಕಪ್ಪು ಜನರನ್ನು ಮುಕ್ತವಾಗಿ ಒಪ್ಪಿಕೊಳ್ಳುವುದಕ್ಕೆ ವಿರುದ್ಧವಾಗಿತ್ತು. ೧೯೬೩ ರಲ್ಲಿ ಅವರು ‘ಲಿಲೀಸ್ ಆಫ್ ದಿ ಫೀಲ್ಡ್’ ಚಿತ್ರದಲ್ಲಿ ನಟಿಸಿದರು. ಈ ಪಾತ್ರಕ್ಕಾಗಿ, ಅವರು ಅತ್ಯುತ್ತಮ ನಟನಿಗಾಗಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದರು ಮತ್ತು ಪ್ರಶಸ್ತಿಯನ್ನು ಗೆದ್ದ ಮೊದಲ ಕಪ್ಪು ಆಫ್ರಿಕನ್ ಅಮೆರಿಕನ್ನರಾದರು. ಈ ಗೌರವದಿಂದ ಅವರಿಗೆ ಬಹಳ ಆತ್ಮವಿಶ್ವಾಸ ಮತ್ತು ತೃಪ್ತಿದೊರಕಿತು. ನಟರಾದ ಹ್ಯಾರಿ ಬೆಲಾಫೊಂಟೆ ಮತ್ತು ಚಾರ್ಲ್ಟನ್ ಹೆಸ್ಟನ್ ಜೊತೆಯಲ್ಲಿ ೧೯೬೩ ಮಾರ್ಚ್‌ನಲ್ಲಿ ವಾಷಿಂಗ್ಟನ್‌ನಲ್ಲಿ ಜೊತೆಸೇರಿ ಕಪ್ಪು ವರ್ಣಿಯರ ಹಕ್ಕಿಗಾಗಿ ಹೋರಾಡಿದರು.
೧೯೬೪ ರಲ್ಲಿ, ಸಿಡ್ನಿ ಪಾಟಿಯೆಯೈ ಸಂಯೋಜಕ ಫ್ರೆಡ್ ಕಾಟ್ಜ್ ಅವರೊಂದಿಗೆ ‘ಸಿಡ್ನಿ ಪಾಟಿಯೆಯೈ ಮೀಟ್ಸ್ ಪ್ಲೇಟೋ’ ಎಂಬ ಆಲ್ಬಂ ಅನ್ನು ರೆಕಾರ್ಡ್ ಮಾಡಿದರು, ಇದರಲ್ಲಿ ಸಿಡ್ನಿ ಪಾಟಿಯೆಯೈ ಪ್ಲೇಟೋನ ಬರಹಗಳ ಭಾಗಗಳನ್ನು ಓದುತ್ತಾರೆ. ಅವರು ಶೀತಲ ಸಮರದ ನಾಟಕ ದಿ ಬೆಡ್‌ಫೋರ್ಡ್ ಘಟನೆಯಲ್ಲಿ (೧೯೬೫) ಚಲನಚಿತ್ರದ ನಿರ್ಮಾಪಕ ರಿಚರ್ಡ್ ವಿಡ್‌ಮಾರ್ಕ್, ಬೈಬಲ್‌ನ ಮಹಾಕಾವ್ಯ ಚಲನಚಿತ್ರ, ‘ದಿ ಗ್ರೇಟೆಸ್ಟ್ ಸ್ಟೋರಿ ಎವರ್ ಟೋಲ್ಡ್’ (೧೯೬೫) ಚಾರ್ಲ್ಟನ್ ಹೆಸ್ಟನ್ ಮತ್ತು ಮ್ಯಾಕ್ಸ್ ವಾನ್ ಸಿಡೋವ್ ಜೊತೆಗೆ ಮತ್ತು ‘ಎ ಪ್ಯಾಚ್ ಆಫ್ ಬ್ಲೂ’ (೧೯೬೫) ಸಹ ಪ್ರದರ್ಶಿಸಿದರು. ಎಲಿಜಬೆತ್ ಹಾರ್ಟ್‌ಮನ್ ಮತ್ತು ಶೆಲ್ಲಿ ವಿಂಟರ್ಸ್ ನಟಿಸಿದ್ದಾರೆ.
೧೯೬೭ ರಲ್ಲಿ, ‘ಟು ಸರ್, ವಿತ್ ಲವ್’, ‘ಇನ್ ದಿ ಹೀಟ್ ಆಫ್ ದಿ ನೈಟ್’, ಮತ್ತು ‘ಗೆಸ್ ಹೂಸ್ ಕಮಿಂಗ್ ಟು ಡಿನ್ನರ್’ ಎಂಬ ಮೂರು ಜನಪ್ರಿಯ ಚಿತ್ರಗಳ ಮೂಲಕ ಅವರು ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಯಶಸ್ಸನ್ನು ಸಾಧಿಸಿದರು. ಆ ವರ್ಷ ಅವರ ವೃತ್ತಿಜೀವನದ ಯಶಸ್ಸಿನ ಶಿಖರವಾಗಿತ್ತು. ‘ಟು ಸರ್, ವಿತ್ ಲವ್’ ನಲ್ಲಿ, ಸಿಡ್ನಿ ಪಾಟಿಯೆಯೈ ಲಂಡನ್‌ನ ‘ಈಸ್ಟ್ ಎಂಡ್‌ನಲ್ಲಿರುವ ಮಾಧ್ಯಮಿಕ ಶಾಲೆ’ಯಲ್ಲಿ ಶಿಕ್ಷಕನಾಗಿ ನಟಿಸುತ್ತಾರೆ. ಈ ಚಿತ್ರವು ನಗರದೊಳಗಿನ ಶಾಲೆಯಲ್ಲಿನ ಸಾಮಾಜಿಕ ಮತ್ತು ಜನಾಂಗೀಯ ಸಮಸ್ಯೆಗಳೊಂದಿಗೆ ವ್ಯವಹರಿಸುತ್ತದೆ. ಚಿತ್ರವು ಮಿಶ್ರಪ್ರತಿಕ್ರಿಯೆಯನ್ನು ಪಡೆಯಿತು; ಆದಾಗ್ಯೂ, ಸಿಡ್ನಿ ಪಾಟಿಯೆಯೈ ಅವರ ಅಭಿನಯಕ್ಕಾಗಿ ಪ್ರಶಂಸಿಸಲ್ಪಟ್ಟರು, ಟೈಮ್ ಬರವಣಿಗೆಯ ವಿಮರ್ಶಕ, “ದುರ್ಬಲ ಕ್ಷಣಗಳನ್ನು ಸಹ ಸಿಡ್ನಿ ಪಾಟಿಯೆಯೈ ಸುಂದರವಾಗಿ ಉಳಿಸಿಕೊಂಡು ಸಾಗುತ್ತಾರೆ “ ಅವರು ತಮ್ಮ ಪಾತ್ರವನ್ನು ಸೂಕ್ಷ್ಮವಾದ ಸಂದರ್ಭಗಳಲ್ಲಿಯೂ ರಚನಾತ್ಮಕವಾಗಿ ನಿರ್ವಹಿಸುವುದನ್ನು ಅಭ್ಯಾಸಮಾಡಿದ್ದಾರೆ !
‘ನಾರ್ಮನ್ ಜೆವಿಸನ್’ ಅವರ ರಹಸ್ಯ ನಾಟಕ, ‘ಇನ್ ದಿ ಹೀಟ್ ಆಫ್ ದಿ ನೈಟ್’ನಲ್ಲಿ, ಸಿಡ್ನಿ ಫಿಲಡೆಲ್ಫಿಯಾದ ಪೊಲೀಸ್ ಪತ್ತೇದಾರ ‘ವರ್ಜಿಲ್ ಟಿಬ್ಸ್’ ಪಾತ್ರವನ್ನು ನಿರ್ವಹಿಸಿದರು, ಅವರು ರಾಡ್ ಸ್ಟೀಗರ್ ನಿರ್ವಹಿಸಿದ ಜನಾಂಗೀಯ ಪೂರ್ವಾಗ್ರಹಗಳೊಂದಿಗೆ ಅಮೇರಿಕಾದ ದಕ್ಷಿಣಭಾಗದ ಮಿಸ್ಸಿಸ್ಸಿಪ್ಪಿ ರಾಜ್ಯದಲ್ಲಿ ನಡೆದ ಕಗ್ಗೊಲೆಯ ತನಿಖೆ ಮಾಡುತ್ತಾರೆ. ಈ ಚಲನಚಿತ್ರವು ವಿಮರ್ಶಾತ್ಮಕ ಯಶಸ್ಸನ್ನು ಗಳಿಸಿತು, ದಿ ನ್ಯೂಯಾರ್ಕ್ ಟೈಮ್ಸ್‌ನ ಬೋಸ್ಲೆ ಕ್ರೌಥರ್ ಇದನ್ನು “ನಾನು ಇದುವರೆಗೂ ನೋಡಿದ ಚಿತ್ರಗಳಲ್ಲಿ ಇದು ಅತ್ಯಂತ ಪ್ರಭಾವಶಾಲಿ ಚಲನಚಿತ್ರ” ವೆಂದು ಕರೆದರು. ರೋಜರ್ ಎಬರ್ಟ್ ಇದನ್ನು ೧೯೬೭ ರ ಅವರ ಮೊದಲ ಹತ್ತು ಚಲನಚಿತ್ರಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿ ಕಾಣಿಸುತ್ತಾರೆ. ‘ಆರ್ಟ್ ಮರ್ಫಿ ಆಫ್ ವೆರೈಟಿ’ ಯು ಅತ್ಯುತ್ತಮವಾದ ಸಿಡ್ನಿ ಪಾಟಿಯೆಯೈ ಮತ್ತು ಅತ್ಯುತ್ತಮವಾದ ಸ್ಟೈಗರ್ ಪ್ರದರ್ಶನಗಳು ‘ಒಂದು ಬಗೆಯ ಸ್ಕ್ರಿಪ್ಟ್ ಸೇರಿದಂತೆ, ಗಮನಾರ್ಹ ನ್ಯೂನತೆಗಳನ್ನು ನಿವಾರಿಸಿವೆ’, ಎಂದು ಭಾವಿಸಿದರು. ಸಿಡ್ನಿ ಪಾಟಿಯೆಯೈ ಅವರ ಅಭಿನಯಕ್ಕಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮತ್ತು ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ ನಾಮನಿರ್ದೇಶನವನ್ನು ಪಡೆದರು.’ In the heat of the night’, ‘Philadelphia Detectives’, ಶತಮಾನಗಳಿಂದ ಕಪ್ಪು ಜನ ಸಮುದಾಯ ಅನುಭವಿಸುತ್ತಿರುವ ಯಾತನೆ, ಅವಮಾನ ಭಾವನೆಗಳನ್ನು ಹಿಡಿದೆತ್ತಿ ಹೊರಗೆಸೆಯುವ ಪಾತ್ರ ಎಷ್ಟು ಅದ್ಭುತವಾಗಿ ಮಾಡಿದ್ದಾರೆ ! ಸಹೋದ್ಯೋಗಿಗಳು ಅನುಮಾನದಿಂದ ನೋಡಿದಾಗ, ರೇಸಿಸಂ ಪ್ರತಿಭಟಿಸಿದ್ದು ನನ್ನ ಹೆಸರು ‘Mr. Tibbs’ ಎಂದು ಗಟ್ಟಿಯಾಗಿ ಬಿರುಸಿನಿಂದ ಕೂಗಿ ತಮ್ಮ ಆತ್ಮ ಘನತೆಯನ್ನು ಸ್ಪಷ್ಟಪಡಿಸಿ ಹೇಳುವಾಗ, ಸಿಡ್ನಿ ಪಾತ್ರದೊಳಗೆ ಹೊಕ್ಕಿದ್ದು ಅದರಲ್ಲೇ ಜೀವಿಸಿದ್ದರೆಂದು ಚಲನ ಚಿತ್ರತಜ್ಞರ ಅಂಬೋಣ !.
ಹಾಲಿವುಡ್ ನ ಸುಪ್ರಸಿದ್ದ ಚಿತ್ರ ನಿರ್ಮಾಪಕ, ನಿರ್ದೇಶಕ, ಸ್ಟಾನ್ಲಿ ಕ್ರಾಮರ್‌ನ ಸಾಮಾಜಿಕ ನಾಟಕ ಗೆಸ್ ಹೂಸ್ ಕಮಿಂಗ್ ಟು ಡಿನ್ನರ್‌ನಲ್ಲಿ, ಸಿಡ್ನಿ ಪಾಟಿಯೆಯೈ ಎನ್ನುವ ಕಪ್ಪು ಯುವಕನನ್ನು ಇಷ್ಟಪಟ್ಟು ಮದುವೆಯಾಗುವ ಬಿಳಿಯ ಯುವತಿಯಾಗಿ ಕ್ಯಾಥರೀನ್ ಹೌಟನ್ ನಟಿಸಿದ್ದಾರೆ. ಕ್ಯಾಥರೀನ್ ಹೆಪ್‌ಬರ್ನ್ ಮತ್ತು ಸ್ಪೆನ್ಸರ್ ಟ್ರೇಸಿ ಮದುವೆಯಾಗುವ ಹುಡುಗಿಯ ತಂದೆತಾಯಿಗಳು. ಮಗಳು ತನ್ನ ಹೆತ್ತವರನ್ನು ಭೇಟಿಯಾಗಲು ಅವಳು ಆರಿಸಿಕೊಂಡಿರುವ ಪ್ರಿಯಕರನನ್ನು ತನ್ನ ಮನೆಗೆ ಆಹ್ವಾನಿಸಿ ಪರಿಚಯಿಸುವ ದೃಶ್ಯ ಚಲನಚಿತ್ರದಲ್ಲಿ ಒಂದು ಮಹತ್ವದ ತಿರುವನ್ನು ನೀಡುತ್ತದೆ. ಯುನೈಟೆಡ್ ಸ್ಟೇಟ್ಸ್‌ನ ಹೆಚ್ಚಿನ ರಾಜ್ಯಗಳಲ್ಲಿ ಅಂತರ್ಜಾತಿ ವಿವಾಹವು ಐತಿಹಾಸಿಕವಾಗಿ ಕಾನೂನು ಬಾಹಿರವಾಗಿರುವುದರಿಂದ ಅಂತರ್ಜನಾಂಗೀಯ ವಿವಾಹವನ್ನು ಸಕಾರಾತ್ಮಕ ಬೆಳಕಿನಲ್ಲಿ ಚಿತ್ರಿಸುವ ಸಮಯದಲ್ಲಿ ಚಲನಚಿತ್ರವು ಅಪರೂಪದ ಚಲನಚಿತ್ರಗಳಲ್ಲೊಂದಾಗಿದೆಯೆಂದು ಪರಿಗಣಿಸಲ್ಪಟ್ಟಿದೆ. ಇಂತಹ ವಿವಾಹ ಆಗಿನ ಸಂದರ್ಭದಲ್ಲಿ ೧೭ ರಾಜ್ಯಗಳಲ್ಲಿ ಕಾನೂನುಬಾಹಿರವಾಗಿತ್ತು-ಬಹುತೇಕ ದಕ್ಷಿಣದ ರಾಜ್ಯಗಳು-ಜೂನ್ ೧೨, ೧೯೬೭ ರವರೆಗೆ, ಚಲನಚಿತ್ರವು ಬಿಡುಗಡೆಯಾಗುವ ಆರು ತಿಂಗಳ ಮೊದಲು. ಚಿತ್ರವು ವಿಮರ್ಶಾತ್ಮಕ ಮತ್ತು ಆರ್ಥಿಕ ಯಶಸ್ಸನ್ನು ಕಂಡಿತು. ತನ್ನ ಚಲನಚಿತ್ರ ವಿಮರ್ಶೆಯಲ್ಲಿ, ರೋಜರ್ ಎಬರ್ಟ್ ರವರು, ಸಿಡ್ನಿಯವರ ಪಾತ್ರವನ್ನು “ಉದಾತ್ತ,ಗಂಭೀರ, ಶ್ರೀಮಂತ, ಬುದ್ಧಿವಂತ, ಸುಂದರ, ನೈತಿಕ ವೈದ್ಯಕೀಯ ತಜ್ಞ” ಎಂದು ವಿವರಿಸಿದರು, ಮತ್ತು ಚಲನಚಿತ್ರವು “ಭವ್ಯವಾದ ಮನರಂಜನೆಯ ದೃಶ್ಯಕಾವ್ಯವೆಂದು ಶ್ಲಾಘಿಸಿದರು. ಈ ಸುಂದರ ದೃಶ್ಯ ಪ್ರಹಸನ ನಿಮ್ಮನ್ನು ನಗಲು ಮತ್ತು ಅಳಲು ಪ್ರಚೋದಿಸುತ್ತದೆ.” ಚಿತ್ರದಲ್ಲಿ ಡಾ. ಪ್ರೆಂಟಿಸ್ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಲು ಸಿಡ್ನಿ ಪಾಟಿಯೆಯೈ ಎರಡು ಪ್ರತ್ಯೇಕ ಡಿನ್ನರ್ ಪಾರ್ಟಿಗಳಲ್ಲಿ ಸ್ಪೆನ್ಸರ್ ಟ್ರೇಸಿ ಮತ್ತು ಕ್ಯಾಥರಿನ್ ಹೆಪ್‌ಬರ್ನ್‌ಗಾಗಿ ಆಡಿಷನ್ ಮಾಡಬೇಕಾಗಿತ್ತು.
ಗೆಸ್ ಹೂಸ್ ಕಮಿಂಗ್ ಟು ಡಿನ್ನರ್‌ನಲ್ಲಿನ ಸಿಡ್ನಿ ಪಾಟಿಯೆಯೈ ಅವರ ಪಾತ್ರದಂತಹ ಯಾವುದೇ ಲೈಂಗಿಕತೆ ಅಥವಾ ವ್ಯಕ್ತಿತ್ವ ದೋಷಗಳನ್ನು ಹೊಂದಲು ಅನುಮತಿಸದ ಅತಿ-ಆದರ್ಶವಾದಿಯಾದ ಆಫ್ರಿಕನ್-ಅಮೇರಿಕನ್ ಪಾತ್ರಗಳಾಗಿ ಟೈಪ್‌ಕಾಸ್ಟ್ ಮಾಡಲ್ಪಟ್ಟಿದ್ದಕ್ಕಾಗಿ ಸಿಡ್ನಿಯವರು ಮೀಡಿಯಾದ ಟೀಕೆಗಳಿಗೆ ಗುರಿಯಾದರು. ಪೊಯಿಟಿಯರ್ ಈ ತರಹದ ಚಿತ್ರ ನಿರ್ಮಾಣದಲ್ಲಿ ಆಗುವ ವಿರೋಧಗಳ ಬಗ್ಗೆ ಸಾಕಷ್ಟು ಗಮನಿಸಿದ್ದರು. ಅವರು ಹೆಚ್ಚು ವೈವಿಧ್ಯಮಯ ಪಾತ್ರಗಳನ್ನು ಮಾಡ ಬಯಸಿದ್ದರು; ಆದರೆ ಆ ಸಮಯದಲ್ಲಿ ಅಮೆರಿಕಾದ ಚಲನಚಿತ್ರೋದ್ಯಮದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಆಫ್ರಿಕನ್ ಮೂಲದ ಏಕೈಕ ಪ್ರಮುಖ ನಟನಾಗಿದ್ದರಿಂದ, ಹಳೆಯ ಸ್ಟೀರಿಯೊಟೈಪ್‌ಗಳನ್ನು ಸವಾಲು ಮಾಡುವ ಮೂಲಕ ತನ್ನ ಪಾತ್ರಗಳೊಂದಿಗೆ ಒಂದು ಉದಾಹರಣೆಯನ್ನು ಹೊಂದಿಸಲು ಅವನು ಬಾಧ್ಯತೆ ಹೊಂದಿದ್ದರು. ಉದಾಹರಣೆಗೆ, ೧೯೬೬ ರಲ್ಲಿ, ಒಥೆಲೋದ NBC ದೂರದರ್ಶನ ನಿರ್ಮಾಣದಲ್ಲಿ ನಾಯಕನಾಗಿ ನಟಿಸುವ ಅವಕಾಶವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದರು.
ಸಿಡ್ನಿ ಫಿಲಡೆಲ್ಫಿಯಾದ ನಗರದ ಪೊಲೀಸ್ ಪತ್ತೇದಾರಿ ವರ್ಜಿಲ್ ಟಿಬ್ಸ್ ಪಾತ್ರವನ್ನು ನಿರ್ವಹಿಸಿದರು, ಅವರು ರಾಡ್ ಸ್ಟೀಗರ್ ನಿರ್ವಹಿಸಿದ ಜನಾಂಗೀಯ ಪೂರ್ವಾಗ್ರಹಗಳೊಂದಿಗೆ ಮಿಸ್ಸಿಸ್ಸಿಪ್ಪಿಯಲ್ಲಿ ಆಳವಾದ ದಕ್ಷಿಣದಲ್ಲಿ ನಡೆದ ಕೊಲೆಯನ್ನು ತನಿಖೆ ಮಾಡುತ್ತಾರೆ. ಈ ಚಲನಚಿತ್ರವು ವಿಮರ್ಶಾತ್ಮಕ ಯಶಸ್ಸನ್ನು ಗಳಿಸಿತು, ದಿ ನ್ಯೂಯಾರ್ಕ್ ಟೈಮ್ಸ್‌ನ ಬೋಸ್ಲೆ ಕ್ರೌಥರ್ ಇದನ್ನು “ನಾನು ಬಹಳ ಸಮಯದಿಂದ ನೋಡಿದ ಅತ್ಯಂತ ಪ್ರಭಾವಶಾಲಿ ಚಲನಚಿತ್ರ” ವೆಂದು ಕರೆದರು. ರೋಜರ್ ಎಬರ್ಟ್ ಇದನ್ನು ೧೯೬೭ ರ ಅವರ ಮೊದಲ ಹತ್ತು ಚಲನಚಿತ್ರಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆಯೆಂದು ತೀರ್ಪಿತ್ತರು. ಆರ್ಟ್ ಮರ್ಫಿ ಆಫ್ ವೆರೈಟಿಯು ಅತ್ಯುತ್ತಮವಾದ ಸಿಡ್ನಿಪಾಟಿಯೆಯೈ ಮತ್ತು ಅತ್ಯುತ್ತಮವಾದ ಸ್ಟೈಗರ್ ಪ್ರದರ್ಶನಗಳು ಅಸಮವಾದ ಸ್ಕ್ರಿಪ್ಟ್ ಸೇರಿದಂತೆ ಗಮನಾರ್ಹ ನ್ಯೂನತೆಗಳನ್ನು ನಿವಾರಿಸಿವೆ, ಎಂದು ಭಾವಿಸಿದರು. ಸಿಡ್ನಿ ಪಾಟಿಯೆಯೈ ಅವರ ಅಭಿನಯಕ್ಕಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮತ್ತು ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ ನಾಮನಿರ್ದೇಶನವನ್ನು ಪಡೆದರು.
೧೯೭೦ ರ ದಶಕ :
೧೯೭೦ ರ ದಶಕದಲ್ಲಿ ಸಿಡ್ನಿ ಪಾಟಿಯೆಯೈ ಹಲವಾರು ಆರ್ಥಿಕವಾಗಿ ಯಶಸ್ವಿ ಹಾಸ್ಯ ಚಲನಚಿತ್ರಗಳನ್ನು ನಿರ್ದೇಶಿಸಿದರು. ‘ಅಪ್‌ಟೌನ್ ಸ್ಯಾಟರ್ಡೇ ನೈಟ್’ನಲ್ಲಿ (೧೯೭೪) ಬಿಲ್ ಕಾಸ್ಬಿ ಮತ್ತು ಹ್ಯಾರಿ ಬೆಲಾಫೊಂಟೆ ನಟಿಸಿದ ಮೂರು ಚಲನಚಿತ್ರಗಳನ್ನು ಅವರು ನಿರ್ದೇಶಿಸಿದರು. ಅವರು ‘ಲೆಟ್ಸ್ ಡು ಇಟ್ ಎಗೇನ್’ (೧೯೭೫), ಮತ್ತು ‘ಎ ಪೀಸ್ ಆಫ್ ದಿ ಆಕ್ಷನ್’ (೧೯೭೭) ನಲ್ಲಿ ಕಾಸ್ಬಿಯನ್ನು ನಿರ್ದೇಶಿಸಿದರು. ಸಿಡ್ನಿ ಪಾಟಿಯೆಯೈ ನಿರ್ದೇಶಿಸಿದ ಅತ್ಯಂತ ಯಶಸ್ವಿ ಹಾಸ್ಯ ಚಲನಚಿತ್ರವು ರಿಚರ್ಡ್ ಪ್ರಯರ್-ಜೀನ್ ವೈಲ್ಡರ್ ಹಾಸ್ಯಸನ್ನಿವೇಶಗಳು ಸ್ಟಿರ್ ಕ್ರೇಜಿ (೧೯೮೦) ಆಗಿ ಕೊನೆಗೊಂಡಿತು, ಇದು ಹಲವಾರು ವರ್ಷಗಳ ಕಾಲ ಆಫ್ರಿಕನ್ ಮೂಲದ ವ್ಯಕ್ತಿಯೊಬ್ಬನಿಂದ ನಿರ್ದೇಶಿಸಲ್ಪಟ್ಟ ಅತಿ ಹೆಚ್ಚು ಗಳಿಕೆಯ ಚಲನಚಿತ್ರವಾಗಿತ್ತು.
‘ಹೀಟ್ ಆಫ್ ದಿ ನೈಟ್’ನಲ್ಲಿ ಅವರ ಅತ್ಯಂತ ಯಶಸ್ವಿ ಪಾತ್ರವಾದ ವರ್ಜಿಲ್ ಟಿಬ್ಸ್, ಫಿಲಡೆಲ್ಫಿಯಾ, ಪೆನ್ಸಿಲ್ವೇನಿಯಾದ ಪತ್ತೇದಾರಿ ಕಾಣಿಸಿಕೊಂಡರು, ಅವರ ನಂತರದ ವೃತ್ತಿಜೀವನವು ಎರಡು ಚಲನ ಚಿತ್ರಗಳ ವಿಷಯವಾಗಿತ್ತು. ‘ದೆ ಕಾಲ್ ಮಿ ಟಿಬ್ಸ್’ ! (೧೯೭೦) ಮತ್ತು ‘ದಿ ಆರ್ಗನೈಸೇಶನ್’ (೧೯೭೧)
೧೯೭೨ ರಲ್ಲಿ ಅವರು ತಮ್ಮ ಮೊದಲ ಚಲನಚಿತ್ರ ನಿರ್ದೇಶನವನ್ನು ಮಾಡಿದರು, ವೆಸ್ಟರ್ನ್ ಬಕ್ ಮತ್ತು ಪ್ರೀಚರ್, ಇದರಲ್ಲಿ ಹ್ಯಾರಿ ಬೆಲಾಫೊಂಟೆ ಮತ್ತು ರೂಬಿ ಡೀ ಜೊತೆಗೆ ಪೊಯ್ಟಿಯರ್ ಸಹ ನಟಿಸಿದ್ದಾರೆ. ಪಾಯಿಟಿಯರ್ ಮೂಲ ನಿರ್ದೇಶಕ ಜೋಸೆಫ್ ಸಾರ್ಜೆಂಟ್ ಅನ್ನು ಬದಲಾಯಿಸಿದರು. ಮುಂದಿನ ವರ್ಷ, ಅವರು ತಮ್ಮ ಎರಡನೇ ಚಿತ್ರವಾದ ‘ಎ ವಾರ್ಮ್ ಡಿಸೆಂಬರ್’ ಎಂಬ ಪ್ರಣಯ ನಾಟಕವನ್ನು ನಿರ್ದೇಶಿಸಿದರು. ಎಸ್ತರ್ ಆಂಡರ್ಸನ್ ಜೊತೆಗೆ ಸಿಡ್ನಿ ಪಾಟಿಯೆಯೈ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.
೧೯೭೪ ರಲ್ಲಿ ಬ್ರಿಟನ್ನಿನ ರಾಣಿ ಎಲಿಜಬೆತ್-೨ ರಿಂದ ಸಿಡ್ನಿ ಪಾಟಿಯೆಯೈರಿಗೆ ‘ನೈಟ್‌ಹುಡ್’ ನೀಡಲಾಯಿತು. ೧೯೮೨ ರಲ್ಲಿ, ಅವರು ‘ಗೋಲ್ಡನ್ ಗ್ಲೋಬ್’ ಮತ್ತು ‘ಸೆಸಿಲ್ ಬಿ. ಡೆಮಿಲ್ಲೆ ಪ್ರಶಸ್ತಿ’ಯನ್ನೂ ಪಡೆದರು. ೧೯೯೫ ರಲ್ಲಿ, ಅವರು ‘ಕೆನಡಿ ಸೆಂಟರ್ ಗೌರವ’ವನ್ನು ಪಡೆದರು. ೧೯೯೭ ರಿಂದ ೨೦೦೭ ರವರೆಗೆ ಅವರು ಜಪಾನ್‌ಗೆ ಬಹಮಿಯನ್ ರಾಯಭಾರಿಯಾಗಿದ್ದರು. ೧೯೯೯ ರಲ್ಲಿ, ಅವರು ಅಮೇರಿಕನ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ “೧೦೦ ಇಯರ್ಸ್…೧೦೦ ಸ್ಟಾರ್ಸ್” ಪಟ್ಟಿಯಲ್ಲಿ ಪುರುಷ ನಟರಲ್ಲಿ ೨೨ ನೇ ಸ್ಥಾನವನ್ನು ಪಡೆದರು, ಹಾಗೂ ‘ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಲೈಫ್ ಅಚೀವ್‌ಮೆಂಟ್ ಪ್ರಶಸ್ತಿ’ಯನ್ನು ಪಡೆದರು. ೨೦೦೨ ರಲ್ಲಿ, ಅವರಿಗೆ ಗೌರವ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಯಿತು, ಅವರ “ಕಲಾವಿದರಾಗಿ ಮತ್ತು ಅತ್ಯುತ್ತಮ ಮಾನವರಾಗಿ ಗಮನಾರ್ಹ ಸಾಧನೆಗಳನ್ನು” ಗುರುತಿಸಿ. ೨೦೦೯ ರಲ್ಲಿ, ಅಧ್ಯಕ್ಷ ಬರಾಕ್ ಒಬಾಮಾ ರವರಿಂದ ‘ಯುನೈಟೆಡ್ ಸ್ಟೇಟ್ಸ್‌ನ ಅತ್ಯುನ್ನತ ನಾಗರಿಕ ಗೌರವವಾದ ಪ್ರೆಸಿಡೆನ್ಶಿಯಲ್ ಮೆಡಲ್ ಆಫ್ ಫ್ರೀಡಮ್’ ಅನ್ನು ಪಡೆದರು. ೨೦೧೬ ರಲ್ಲಿ, ಚಲನಚಿತ್ರದಲ್ಲಿನ ಅತ್ಯುತ್ತಮ ಜೀವಮಾನದ ಸಾಧನೆಗಾಗಿ ಅವರಿಗೆ BAFTA ಫೆಲೋಶಿಪ್ ನೀಡಲಾಯಿತು.
ಸಿಡ್ನಿ ಪಾಟಿಯೆಯೈ ರವರು ಅಭಿನಯ ಕೃಷಿಯಿಂದ ವಿರಾಮ ಪಡೆದ ವರ್ಷಗಳು, ೧೯೮೫ ರ ಬಳಿಕ :
೧೯೮೫ ರಲ್ಲಿ ಅವರು ‘ಫಾಸ್ಟ್ ಫಾರ್ವರ್ಡ್’ ಚಿತ್ರವನ್ನು ನಿರ್ದೇಶಿಸಿದರು. ಮತ್ತು ಕೌಟುಂಬಿಕ ಹಾಸ್ಯ ಚಿತ್ರವಾದ ‘ಘೋಸ್ಟ್ ಡ್ಯಾಡ್’ (೧೯೯೦) ನಲ್ಲಿ ಕಾಸ್ಬಿ ಅವರನ್ನು ನಿರ್ದೇಶಿಸಲು, ಮತ್ತೆ ಸೇರಿಕೊಂಡರು.
೧೯೮೮ ರಲ್ಲಿ, ಸಿಡ್ನಿ ಪಾಟಿಯೆಯೈ, ಟಾಮ್ ಬೆರೆಂಜರ್ ಅವರೊಂದಿಗೆ ‘ಶೂಟ್ ಟು ಕಿಲ್’ನಲ್ಲಿ ನಟಿಸಿದರು. ೧೯೯೨ ರಲ್ಲಿ, ಅವರು ರಾಬರ್ಟ್ ರೆಡ್‌ಫೋರ್ಡ್ ಮತ್ತು ಡ್ಯಾನ್ ಅಕ್ರೊಯ್ಡ್ ಅವರೊಂದಿಗೆ ‘ಸ್ನೀಕರ್ಸ್’ ನಲ್ಲಿ ನಟಿಸಿದರು. ೧೯೯೭ ರಲ್ಲಿ, ಅವರು ರಿಚರ್ಡ್ ಗೆರೆ ಮತ್ತು ಬ್ರೂಸ್ ವಿಲ್ಲೀಸ್ ಅವರೊಂದಿಗೆ ‘ದಿ ಜಕಾಲ್’ ನಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದರು. ೧೯೯೦ ರ ದಶಕದಲ್ಲಿ, ಅವರು ಹಲವಾರು ಉತ್ತಮ ಸ್ವೀಕರಿಸಿದ ದೂರದರ್ಶನ ಚಲನಚಿತ್ರಗಳು ಮತ್ತು ಕಿರುಸರಣಿಗಳಾದ ‘ಸೆಪರೇಟ್ ಬಟ್ ಈಕ್ವಲ್ ‘(೧೯೯೧), ‘ಟು ಸರ್, ಲವ್’ (೧೯೯೬), ‘ಮಂಡೇಲಾ ಮತ್ತು ಡಿ ಕ್ಲರ್ಕ್’ (೧೯೯೭), ಮತ್ತು ‘ದಿ ಸಿಂಪಲ್ ಲೈಫ್ ಆಫ್ ನೋಹ್ ಡಿಯರ್‌ಬಾರ್ನ್’ (೧೯೯೯) ನಲ್ಲಿ ನಟಿಸಿದರು) ಅವರು ಪ್ರತ್ಯೇಕವಾಗಿ ‘ಈಕ್ವಲ್ ಮತ್ತು ಮಂಡೇಲಾ’ ಮತ್ತು ‘ಡಿ ಕ್ಲರ್ಕ್’ ಅವರ ಕೆಲಸಕ್ಕಾಗಿ ‘ಎಮ್ಮಿ ನಾಮನಿರ್ದೇಶನ’ಗಳನ್ನು ಪಡೆದರು ; ಜೊತೆಗೆ ‘ಗೋಲ್ಡನ್ ಗ್ಲೊಬ್ ಅವಾರ್ಡ್’ ಸಹಿತ.
ಪ್ರಶಸ್ತಿ, ಸನ್ಮಾನಗಳು :
೧೯೭೪ ರಲ್ಲಿ ಇಂಗ್ಲೆಂಡ್ ನ ರಾಣಿ ಎಲಿಝಬೆತ್- ೨ ರವರಿಂದ ನೈಟ್ ಹುಡ್ ಪ್ರಶಸ್ತಿ ದೊರೆಯಿತು.
೧೯೮೨ ರಲ್ಲಿ, Golden Globe Cecil B. DeMille Award.
೧೯೯೫ ರಲ್ಲಿ the Kennedy Center Honor.
೧೯೯೭-೨೦೦೭ ವರೆಗೆ, ಬಹಾಮಿಯದ ಜಪಾನ್ ರಾಯಭಾರಿ
೧೯೯೯ ರಲ್ಲಿ ೨೨ ಶ್ರೇಯಾಂಕಿಗ ಅಭಿನೇತ “೧೦೦ ವರ್ಷಗಳು …೧೦೦ ಸ್ಟಾರ್ಸ್ ” ಅಮೇರಿಕನ್ ಫಿಲಂ ಇನ್ಸ್ಟಿ ಟ್ಯೂಟ್ ವರದಿಪತ್ರ.
೨೦೦೦ ದಲ್ಲಿ Screen Actors Guild Life Achievement Award.
೨೦೦೨ ರಲ್ಲಿ, he was given an Honorary Academy Award, in recognition of his “remarkable accomplishments as an artist and as a human being”.
೨೦೦೯ ರಲ್ಲಿ the Presidential Medal of Freedom, the highest civilian honor in the United States. In 2016, he was awarded the BAFTA Fellowship for outstanding lifetime achievement in film.
ಪಾಟಿಯೆಯೈ ರವರ ಕೆಲವು ಮಹತ್ವದ ಚಿತ್ರಗಳು :
- Guess Who’s Coming to Dinner: Starz
- *A Raisin in the Sun: Amazon Prime Video
- *Porgy and Bess: Roku (via Free Movie Classics)
- *In the Heat of the Night: Cinemax, Pluto TV, Roku Channel
- *To Sir, with Love: Amazon Prime Video
- *They Call Me Mister Tibbs!: Tubi (free)
- *Blackboard Jungle: Amazon Prime Video
- *The Organization: Tubi (free)
- *The Wilby Conspiracy: Tubi (free)
- *No Way Out: Amazon Prime Video, Criterion Channel
- *Duel at Diablo: Tubi (free)
- *Sneakers: Amazon Prime Video, Cinemax app
- *A Patch of Blue: Amazon Prime Video
- *The Last Brickmaker in America: Tubi (free)
- *The Slender Thread: Amazon Prime Video
- *Lilies of the Field: Amazon Prime Video, Tubi
- *The Defiant Ones: Amazon Prime Video
- *Paris Blues: Tubi (free)
- *Buck and the Preacher: Amazon Prime Video, Starz app
ವಿವಾಹ :
೧. ಪಾಟಿಯೆಯೈಯವರ ಮೊದಲ ಹೆಂಡತಿ ಜುವಾನಿತ ಹಾರ್ಡಿ (ಏಪ್ರಿಲ್ ೨೯, ೧೯೫೦-೧೯೬೫) ೧೯೫೬ ರಲ್ಲಿ ನ್ಯೂಯಾರ್ಕ್ ನ ವೆಸ್ಟ್ ಚೆಸ್ಟರ್ ನ ಮೌಂಟ್ ವರ್ನನ್ ನಲ್ಲಿ ನೆಲೆಸಿದರು.
೨. ೧೯೫೯ ರಲ್ಲಿ ಪಾಟಿಯೆಯೈ, ಡೈಯಾನ ಕೆರೋಲ್, ಎಂಬ ನಟಿಯಜತೆ ವಿವಾಹ-ರಹಿತ ಸಂಬಂಧವಿಟ್ಟುಕೊಂಡರು. ಹೀಗೆ ಅವರಿಬ್ಬರು ೯ ವರ್ಷಗಳ ಕಾಲ ಜೊತೆಗಿದ್ದು ಆಮೇಲೆ ಬೇರೆಯಾದರು.
೩. ಸಿಡ್ನಿ ಪಾಟಿಯೆಯೈ ಕೆನೆಡಿಯನ್ ನಟಿ, ಚಿತ್ರ ನಿರ್ಮಾಪಕಿ ಜೋವಾನ ಶಿಮ್ಕಸ್ (೩೦, ಅಕ್ಟೊಬರ್, ೧೯೪೩) ರನ್ನು ಜನವರಿ, ೨೩, ೧೯೭೬ ರಲ್ಲಿ ಮದುವೆಯಾದರು. ವಿವಾಹಕ್ಕೆ ಮೊದಲು ಅವರಿಬ್ಬರೂ ಜತೆಯಾಗಿ ‘The Lost Man’ ಎಂಬ ಚಿತ್ರದಲ್ಲಿ ಪಾತ್ರವಹಿಸಿದ್ದರು. ಸಿಡ್ನಿ ಮರಣದವರೆಗೆ, ೪೬ ವರ್ಷ ಜೊತೆಗೆ ಸಂಸಾರ ನಡೆಸಿದರು. ಮೊದಲ ಪತ್ನಿಯಿಂದ ೪ ಹೆಣ್ಣು ಮಕ್ಕಳು. ೧. ಬೆವರ್ಲಿ, ೨. ಪಮೇಲಾ ೩. ಶೆರ್ರಿ, ೪. ಜಿನ. ಎರಡನೇ ಪತ್ನಿ : ಇಬ್ಬರು ಹೆಣ್ಣು ಮಕ್ಕಳು. ೧. ಅನೀಕ ೨. ಸಿಡ್ನಿ ತಮಿಲಾ.
ಒಟ್ಟಾರೆ ಸಿಡ್ನಿ ಪಾಟಿಯೆಯೈ ರವರ ಮಕ್ಕಳು :
೬ ಹೆಣ್ಣುಮಕ್ಕಳು. ೮ ಮೊಮ್ಮಕ್ಕಳು, ೩ ಮರಿ ಮೊಮ್ಮಕ್ಕಳು.
ಬಹಾಮಾ ದ್ವೀಪವನ್ನು ಚಂಡಮಾರುತ ಆಗಾಗ ತಲೆದೋರಿ ದ್ವಿಪದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿ ಅಲ್ಲಿನ ಜನ, ಮತ್ತು ಜಾನವರುಗಳಿಗೆ ಜೀವಹಾನಿ ಮಾಡುತ್ತಿತ್ತು. ಹಾಗೆ ಒಮ್ಮೆ ಅಲೆಗಳು ಅಪ್ಪಳಿಸಿದಾಗ ಸೆಪ್ಟೆಂಬರ್, ೨೦೧೯ ರಲ್ಲಿ , ಪರಿವಾರದ ೨೩ ಜನ ಸಮುದ್ರದ ಪಾಲಾಗಿದ್ದರು.
‘ದ ಗ್ಲೋರಿ ಆಫ್ ಲವ್’ : ‘ಗೆಸ್ ಹೂ ಈಸ್ ಕಮಿಂಗ್ ಟು ಡಿನ್ನರ್ ಚಿತ್ರದ ಮುಖಗೀತೆ ‘ :
ಫ್ರಾಂಕ್ ಡಿ. ವಾಲ್ ರವರ ಸಂಗೀತ ಸಂಯೋಜನೆ, ಮತ್ತು ಜಾಕೆಲಿನ್ ಫ್ಯಾಂಟೇನ್ ರವರು ಹಾಡಿದ ಅದ್ಭುತ, ಮೈನವಿರೇಳಿಸುವ ಗೀತೆ, ಚಿತ್ರದ ಮೊದಲಿಂದ ಕೊನೆಯವರೆಗೆ ಪ್ರತಿಧ್ವನಿಸುತ್ತಾ ಮನರಂಜನೆಯ ಸಾಧನವಾಗಿ ಸಿನಿಮಾ ಪ್ರೇಕ್ಷಕರನ್ನು ಸಂತೋಷದಿಂದ ಸಮಾಧಿಸ್ಥಿತಿಗೆ ಕರೆದುಕೊಂಡು ಹೋಗುತ್ತದೆ.
“You’ve got to give a little, take a little,
And let your poor heart break a little.
That’s the story of, that’s the glory of love.
You’ve got to laugh a little, cry a little,
Until the clouds roll by a little.
That’s the story of, that’s the glory of love.
As long as there’s the two of us,
We’ve got the world and all its charms.
And when the world is through with us,
We’ve got each other’s arms.
You’ve got to win a little, lose a little,
Yes, and always have the blues a little.
That’s the story of, that’s the glory of love.
That’s the story of, that’s the glory of love”.
Source : http://www.metrolyrics.com/thats-the-story-of-love-lyrics-ted-nugent.html
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ