- ಗಾಂಧಿ-ಸಿದ್ಧಾರೂಢರ ಭೇಟಿಗೆ ನೂರಾ ಮೂರು ವರ್ಷ - ನವೆಂಬರ್ 12, 2023
- ಕುವೆಂಪು ಕನಸಿನ ಸಚಿವ ಮಂಡಲ - ಡಿಸಂಬರ್ 29, 2021
- ನಕ್ಷತ್ರಗಳ ನೆಲದ ನಂಟು - ಅಕ್ಟೋಬರ್ 29, 2021
(ಸಪ್ಟೆಂಬರ್ ೭,.೨೦೨೧. ರಂದು ಬರೆದ ಕವಿತೆ.)
ಇರಲೇಬೇಕು ಗಗನದ ನಕ್ಷತ್ರಗಳಿಗೆ
ನೆಲದ ನಂಟು
ನೆಲದ ಮೇಲಿನ ನಕ್ಷತ್ರಗಳು
ಮುಂದೆ ಹೊಳೆಯಲುಂಟು
ಮೇಲಿನ ನಕ್ಷತ್ರಗಳನು
ನೋಡಿ ಕರೆಯುವ ಕೈಗಳು
ನೆಲದಲ್ಲಿಯೆ ಮಿನುಗುವ ನಕ್ಷತ್ರ
ನಡೆಯುವ ವಿಸ್ಮಯ ವಿಚಿತ್ರ
ಕುಣಿವ ನೆಲ ಉಣ್ಣುವ ನೆಲ
ದುಡಿವ ಛಲ ಕುಡಿವ ಜಲ ಉಸಿರು ಬಲ
ನನ್ನ ಜನ ನನ್ನ ಭಾಷೆ
ಕನ್ನಡ ಕರ್ನಾಟಕ ವೆಂದರೆ ನನ್ನ ಬಲ
ಕುವೆಂಪು ವಿಶ್ವ ಪ್ರಜ್ಞೆ ಯ ಬೆಳಗುವ ಸೂರ್ಯ
ಕನ್ನಡ ಜಗದ ಮಿತ್ರ
ಮುತ್ತುರಾಜ ಈ ನೆಲದ ರಾಜ ನಕ್ಷತ್ರ
ಪುನೀತ್ ನೆಂಬ ರಾಜಕುಮಾರ
ಕವಿರಾಜಮಾರ್ಗ ದ ನೃಪತುಂಗ
ನಾಡೋಜ ಪಂಪ.. ರಾಘವಾಂಕ
ಮಹಾಕವಿ ಕುಮಾರವ್ಯಾಸರ
ಮಾಡಿ ಪರಕಾಯದ ಪಾತ್ರ
ಆಗಲಿ ಕನ್ನಡ ಮಣ್ಣಿನ ನೆಲದ ನಕ್ಷತ್ರ
ಆಗ ನೀನೇ ರಾಜಕುಮಾರ
ಕನ್ನಡ ನಿಜ ಕುವರ..
ನಟಸಾರ್ವಭೌಮ ಡಾ ರಾಜಕುಮಾರ್ ರವರ ಪುತ್ರ ಪುನೀತ್ ರಾಜ್ ಕುಮಾರ್ ರವರ ಅಕಾಲಿಕ ನಿಧನ ಅಪಾರ ಆಘಾತ ತಂದಿದೆ. ಕನ್ನಡದ ನಿಜ ಅಭಿಮಾನಿಯಾಗಿದ್ದ ಪುನೀತ್ ರಾಜ್ ಕುಮಾರ್ ರವರು ತಮ್ಮ ಅನೇಕ ಚಿತ್ರಗಳಲ್ಲಿ ಮಾನವೀಯ ಮೌಲ್ಯಗಳ ಸಂದೇಶ ವುಳ್ಳ ಪಾತ್ರ ಗಳನ್ನು ಲೀಲಾಜಾಲವಾಗಿ ಅಭಿನಯಿಸಿ ಜನರ ಮನ ಗೆದ್ದ ನವ ರಾಜಕುಮಾರ್ ರಾಗಿದ್ದರು. ಚಲನಚಿತ್ರಗಳಲಿ ನಟನೆ ಮತ್ತು ಗಾಯನ ಮೂಲಕ ಡಾ ರಾಜಕುಮಾರ್ ರವರ ಕಲಾ ಪರಂಪರೆಯನ್ನು ಮುಂದುವರೆಸಿದ ನೈಜ ಪ್ರತಿಭಾವಂತ ಕಲಾವಿದರಾಗಿದ್ದ ಪುನೀತ ರಾಜಕುಮಾರ್ ರವರು..ಜನಪ್ರಿಯ ತಾರಮೌಲ್ಯದ ನಕ್ಷತ್ರ ವಾಗಿದ್ದರೂ ತಮ್ಮ ವಿನಮ್ರ ನಡುವಳಿಕೆ ಗಳಿಂದ ಜನಸಾಮಾನ್ಯರ ತಾರೆಯಾಗಿದ್ದರು. ತಮ್ಮ ಸ್ವಯಾರ್ಜಿತ ಗಳಿಕೆಯಲ್ಲಿ ಅನಾಥಾಶ್ರಮ ಕನ್ನಡ ಶಾಲೆಗಳು ವೃದ್ದಾಶ್ರಮಗಳು.. ಕನ್ನಡದ ಯುವಕರು ಐ ಎ ಎಸ್ ತರಬೇತಿ ಪಡೆಯಲು ಡಾ ರಾಜಕುಮಾರ್ ಅಕ್ಯಾಡೆಮಿ ಮತ್ತು ಸಂಗೀತ ಕಾರ್ಯಕ್ರಮಗಳಿಗೆ ಬೆನ್ನಲುಬಾಗಿದ್ದರು… ಇದಕ್ಕಿಂತ ತಮ್ಮ ಸುಸಂಸ್ಕೃತ ನಡುವಳಿಕೆ ಯಿಂದ ಕೋಟ್ಯಾಂತರ ಅಭಿಮಾನಿಗಳ ನ್ನು ಗಳಿದ್ದರು.. ಅವರ ಅಗಲಿಕೆ ಕನ್ನಡ ದ ಚಲನಚಿತ್ರ ದಂತ ಸಾಂಸ್ಕೃತಿಕ ರಂಗ ಬಹಳ ಆಘಾತ ಅನುಭವಿಸುತ್ತಿದೆ. .ಮುಂದೆ ನನ್ನ ಮಾತು ಗಳಿಲ್ಲ.. ಬರೆಯಲು ಆಗುತ್ತಿಲ್ಲ.. ಅವರ ಬಗ್ಗೆ ನಾನು ಸಪ್ಟ್ಂಬರ್ 7ರಂದು..ಕವಿತೆ ಬರೆದಿದ್ದೆ.. ಅವರಿಗೆ ನನ್ನ ಅಂತಿಮ ಪ್ರಣಾಮಗಳು.. ರವೀಂದ್ರನಾಥ ದೊಡ್ಡಮೇಟಿ
ಹುಬ್ಬಳ್ಳಿ
9739222210
ಹೆಚ್ಚಿನ ಬರಹಗಳಿಗಾಗಿ
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ
ಕರ್ಪೂರಿ ಠಾಕೂರ್
ಕನ್ನಡ ನಾಟ್ಯ ರಂಗ