- ನ್ಯಾನೊ ಕಥೆಗಳು - ಸೆಪ್ಟೆಂಬರ್ 10, 2021
[ ಸಂಪದಾ ಪಾಟಗಾವಕರ ಅವರ ಮರಾಠಿ ‘ಅಲಕ’ ಕಥೆಗಳ ಕನ್ನಡ ಅನುವಾದ]
೧] ಅಮ್ಮನ ಅಭಿಪ್ರಾಯ
ತಾಯಿಯ ಮನೆ ತಮಗೆ ಸಿಗಬೇಕೆಂಬ ದೂರಾಸೆಯಿಂದ ಸಹೋದರರು, ಅಮ್ಮನ ಪಾಲನೆಯನ್ನು ಮಾಡುವ ಅಧಿಕಾರಕ್ಕಾಗಿ ಅಮ್ಮನಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಆಗ ತಾಯಿಯ ಅಭಿಪ್ರಾಯ ಹೀಗಿತ್ತು, ‘ಯಾರು ನನ್ನ ಮೂರು ಔಷಧಿಯ ಹೆಸರನ್ನು ತಡವಾಡದೆ ಒಂದು ನಿಮಿಷದ ಒಳಗೆ ಹೇಳುವರು ಅವರ ಜೊತೆ ನನ್ನ ಸಂಸಾರ.’ ಇದನ್ನು ಕೇಳಿದ ಪುತ್ರರು ನಾಚಿಕೆಯಿಂದ ತಲೆ ತಗ್ಗಿದರು.
೨] ತಾಯಿಯ ವಾತ್ಸಲ್ಯ
ವಿದ್ಯಾಭ್ಯಾಸಕ್ಕಾಗಿ ಹೊರನಾಡಿನಲ್ಲಿ ಹೋದ ಬುದ್ದಿವಂತ ಮಗ ತಮ್ಮ ಅಮ್ಮನಿಗೆ ಒಂದು ಪತ್ರವನ್ನು ಬರೆದನು. ‘ಅಮ್ಮ, ಇಲ್ಲಿಯ ಭೋಜನವ್ಯವಸ್ಥೆ ತುಂಬಾ ಚೆನ್ನಾಗಿದೆ. ಚಿಂತೆ ಮಾಡಬೇಡಾ.’ ಪತ್ರವನ್ನು ಓದಿ ತಮ್ಮ ಒಂದು ವೇಳೆಯ ಊಟವನ್ನು ಅಮ್ಮ ತ್ಯಜಿಸಿದಳು. ಯಾಕೆಂದರೆ … ಪತ್ರದ ಅಂತ್ಯದಲ್ಲಿ ಪುತ್ರನ ಕಣ್ಣೀರಿಂದ ಒಂದೆರಡು ಶಬ್ದಗಳು ಹಾಳಾಗಿತ್ತು.
೩] ಅಜ್ಜನ ಕೋಲುದಂಡೆ
ಅಜ್ಜನ ಕೋಲುದಂಡೆಯನ್ನು ಸೆಳೆದು ಹೋದ ಮೊಮ್ಮಗಳಿಗೆ ಜನರು ಹೇಳಿದರು, ‘ನಿಧಾನವಾಗಿ ಹೋಗು ಮಗಳೇ, ಅಜ್ಜ ಬೀಳಬಹುದು.’ ಅಜ್ಜ ನಗುತ್ತಾ ಹೇಳಿದರು, ‘ಯಾಕೆ ನಾನು ಬೀಳಬೇಕು? ನನ್ನೊಡನೆ ಎರಡೇರಡು ಕೋಲುದಂಡೆ ಇರುವಾಗ.’
೪] ಮಾವಿನ ಮರ
ಮಾವಿನ ಮರದ ಮೇಲೆ ಏರಿ ಕಳವು ಮಾಡಿದ ಮಕ್ಕಳನ್ನು ಕಾವಲುಗಾರನು ಕೋಲಿನಿಂದ ಹೊಡೆದು, ಆ ಮಕ್ಕಳನ್ನು ಮರಕ್ಕೆ ಹಗ್ಗದಿಂದ ಕಟ್ಟಿಹಾಕಿದನು. ಆ ನಂತರ ಏನಾಯಿತು ಯಾರಿಗೂ ಗೊತ್ತಾಗಲಿಲ್ಲ, ಆ ಮರದಲ್ಲಿ ಎಂದಿಗೂ ಮಾವಿನ ಹಣ್ಣು ಹುಟ್ಟಲಿಲ್ಲ.
೫] ಮಗಳ ವಾತ್ಸಲ್ಯ
ತಂದೆ ಹೋದಮೇಲೆ ಸಹೋದರರು ಆಸ್ತಿ ಹಂಚಿಕೊಂಡರು. ಆಗ ತಾಯಿಯನ್ನು ಮನೆಗೆ ಕರೆದುಕೊಂಡು ಹೋಗುವಾಗ, ಮಗಳು ಹೇಳತಾಳೆ, ‘ನನ್ನ ಅದೃಷ್ಟ ಎಷ್ಟು ಚೆನ್ನಾಗಿದೆ, ನನ್ನೊಡನೆ ನನ್ನ ಭವಿಷ್ಯನೆ ಬಂತು’.
೬] ಪಿತ್ರಾರ್ಜಿತ ಸಂಪತ್ತು
ನಿನ್ನೆ ಮಗ ಹೇಳಿದ, ‘ಅಪ್ಪ, ನಾನು ನಿಮ್ಮನ್ನು ಯಾವಾಗಲು ಕೂಡಾ ಬಿಟ್ಟುಹಾಕುವುದಿಲ್ಲ. ಕಾರಣ, ನೀವೂ ಸಹ ನಿಮ್ಮ ಪಾಲಕರನ್ನು ಬಿಟ್ಟುಹಾಕಿರಲಿಲ್ಲ.’ ನನಗೆ ಪಿತ್ರಾರ್ಜಿತ ಆಸ್ತಿ ಸಿಕ್ಕಿದ ಹಾಗೆಯೇ ಆಯಿತು.
೭] ನಾದಿನಿಯ ನುಡಿ
ಬಹಳ ದಿನಗಳ ನಂತರ, ತವರು ಮನೆಗೆ ಬಂದ ನಾದಿನಿ, ‘ಅತ್ತಿಗೆ, ಎಷ್ಟು ಅಕ್ಕರೆಯಿಂದ ನನ್ನ ಸೇವೆ ಮಾಡುತ್ತಿದ್ದಿರಿ.’ ಅದಕ್ಕೆ ಅತ್ತಿಗೆ ಉತ್ತರಿಸಿದ್ದಳು, ‘ನೀವು ತವರು ಮನೆಗೆ ಸುಖವಾಗಿ ಇರಲು ಬರುತ್ತಿರಿ. ಟಿ.ವಿ. ಸೀರಿಯಲ್ ನ ನಾದಿನಿಯ ಹಾಗೆ ವರ್ತಿಸಲು ಅಲ್ಲ, ಹಾಗೂ ಜಗಳ ಮಾಡಿ ಪ್ರೇರೇಪಿಸಲೂ ಕೂಡಾ ಅಲ್ಲ.’ ಅಷ್ಟೊತ್ತಿಗೆ ಟಿ.ವಿ. ನಡೆಯುವುದು ನಿಂತು ಹೋಯಿತು.
೮] ಉಡುಗೊರೆ
ಅನಾರೋಗದಿಂದ ಅವಳ ಗಂಡನು ಆಸ್ಪತ್ರೆಯಲ್ಲಿ ಸೇರಿಕೊಂಡನು. ಗಂಡನ ಗೆಳೆಯ ಭೇಟಿಯಾಗಲು ಬಂದನು. ಹೋಗುವಾಗ ಅವಳ ಕೈಯಲ್ಲಿ ೫೦೦೦ ರೂಪಾಯಿಯ ಪಾಕೀಟು ಕೊಟ್ಟನು. ‘ಇದು ಉಡುಗೊರೆ, ನಿಮ್ಮ ಮದುವೆಗೆ ಕೊಡುವುದು ಉಳಿದಿತ್ತು; ಈಗ ಕೊಡ್ತಾ ಇದ್ದೇನೆ. ನನ್ನ ಗೆಳೆಯ ಗುಣಮುಖರಾದ ಮೇಲೆ ನೀವು ನಿಮಗಾಗಿ ಒಂದು ಒಳ್ಳೆ ಸೀರೆ ತೆಗೆದುಕೊಳ್ಳಿರಿ’. ಆಗ ಅವಳ ಮನಸಿಗೆ ಎನ್ನಿಸಿತು, ‘ಅಷ್ಟೆಲ್ಲ ಉಡುಗೊರೆ ನನಗೆ ಸಿಕ್ಕಿತು, ಆದರೆ ಅದರ ಎದುರಿಗೆ ಈಗ ಬಂದ ಉಡುಗೊರೆ ಎಷ್ಟು ಮಹತ್ವದು. ಬಾಕಿ ಎಲ್ಲ ಸಪ್ಪೆ ಸಪ್ಪೆ.
೯] ಒಳ್ಳೆ ವಿಚಾರದ ಪ್ರತಿಫಲ
ಚುರಮುರಿ ತಿನ್ನುವ ಆಸೆ ದೂರವಿಡಿಸಿ ಅವಳಿಗೆ ತಲುಪ ಬೇಕ್ಕಿತ್ತು, ಕಾರಣ ಅತ್ತೆಗೆ ಮಂದಿರಕ್ಕೆ ಹೋಗಲು
ತಡವಾಗತಾ ಇತ್ತು. ಬೇಗ ಬೇಗ ಓಡಿ ಓಡಿ ಮನೆ ಸೇರಿದಳು. ಸೊಸೆಯನ್ನು ನೋಡಿದ ತಕ್ಷಣ, ಅತ್ತೆ ಹೇಳಿದರು, ‘ಬಹಳ ದಿನಗಳ ನಂತರ ಚುರಮುರಿ ತಿನ್ನುವ ಆಸೆ ಆಯಿತು. ಇವತ್ತು ಮಾವಿನ ಕಾಯಿ ಹಾಕಿ ಮಾಡಿದ್ದೇನೆ, ತಿಂದಿಕೋ ಬೇಗನೆ.’
೧೦] ಮಲ್ಲಿಗೆಯ ಪರಿಮಳ
ಸಂಜೆ ಸುಮತಿಬಾಯಿ ದೇವರ ಕೋಣೆಯಲ್ಲಿ ಜಪಮಾಲೆ ತೆಗೆದು ಕುಳಿತ್ತಿದ್ದಳು. ಆಫಿಸಿನಿಂದ ಬಂದ ಮಗನನ್ನು ನೋಡಿದಳು. ಅವನ ಹಿಂದೆ ಮಲ್ಲಿಗೆಯ ಪರಿಮಳದ ಭಾಸವಾಗಿ ಅನುಭವಿಸಿ ಸುಮತಿಬಾಯಿ, ತಮ್ಮ ಸೊಸೆ ಇರಬಹುದೆಂದು ಎಣಿಸಿ, ಕಣ್ಣುಗಳನ್ನು ಬಹು ಬಿಗಿಯಾಗಿ ಮುಚ್ಚಿದಳು. ಸ್ವಲ್ಪ ಹೊತ್ತು ಆದ ಮೇಲೆ ಕಣ್ತೆರೆದು ನೋಡಿದಳು… ತಮ್ಮ ಉಡಿತುಂಬ ‘ಮಲ್ಲಿಗೆ’. ಅವಳ ಗರ್ಭಕೋಶ ಇನ್ನೂ ಸುಗಂಧಿಯಾದುದು. ದೇವರ ಮಂಟಪದಲ್ಲಿದ್ದ ತುಂಟ ಕೃಷ್ಣ ನಸುನಗುತ್ತಿದ್ದ.
ಹೆಚ್ಚಿನ ಬರಹಗಳಿಗಾಗಿ
ಎಸಳು 3 ಮುಂಬಾ ಆಯಿಯ ಮಡಿಲಲ್ಲಿ
ಗೌರವ ಸಂಪಾದಕರ ಮಾತು – ಡಾ. ಜಿ. ಎನ್. ಉಪಾಧ್ಯ
ಬರ್ಮಾ ದೇಶದ ರಾಮಾಯಣ