ಇತ್ತೀಚಿನ ಬರಹಗಳು: ಜಬೀವುಲ್ಲಾ ಎಂ. ಅಸದ್ (ಎಲ್ಲವನ್ನು ಓದಿ)
- ಮೈಖೇಲ್ ಜಾಕ್ಸನ್ ಎಂಬ ಲೋಕ ಕಂಡ ಮಾಂತ್ರಿಕ - ಡಿಸಂಬರ್ 21, 2021
- ಪ್ರೀತಿ ಹಂಚುತ ಸಾಗು - ನವೆಂಬರ್ 24, 2021
- ನನ್ನ ಕವಿತೆಗಳಿಗೊಂದಷ್ಟು ಜಾಗ ನೀಡಿ - ನವೆಂಬರ್ 3, 2021
ಖ್ವಾಜಾ ನಿನ್ನ ಗಲಿಯಲಿ
ಕಾಯುತ್ತಿದ್ದಾನೆ
ಆಶೀಕ್
ಪ್ರೀತಿಯಲಿ
ಮಾಷುಕಳ ಬರುವಿಕೆಗಾಗಿ
ಮಾಲಿಕ್
ಧ್ಯಾನದ ರೀತಿಯಲಿ
ಕಂಗಳಲ್ಲಿ ಸಂಭ್ರಮದ
ತಾರೆಗಳ ಬೆಳಗಿ
ಕರದಲ್ಲಿ ಗುಲಾಬಿ ಗುಲ್ದಸ್ತ
ಹಿಡಿದು ಸಾಗಿ
ಚಿಗುರು ಮೀಸೆಯಂಚಲಿ
ಮುಗುಳ್ನಗೆಯೊಂದು ಬೀಗಿ
ಇರುಳಿಡಿ ಶಮಾ ಹೊತ್ತಿಸಿ
ಕೂತು ಕನವರಿಸಿ
ಪರವಾನನಾಗಿ, ಮಸ್ತಾನಿಗಾಗಿ
ನೆನಪುಗಳೊಂದಿಗೆ
ಕೂಡಿ ಕರಗಿ
ಶ್ರಾವಣದ ಮೊದಲ ಮಳೆಗೆ
ಬಿದ್ದು ಹೊಮ್ಮಿದ
ಮಣ್ಣಿನ ಸುಗಂಧ ಇಳೆಗೆ
ಅದ್ದಿ ಹೃದಯದ ಭಾವಗಳ ತೀಡಿ ತಿದ್ದಿ
ಕನಸಿ, ಕಾತರಿಸಿ
ಅಂಗೈ ಮೇಲೆ
ಮದರಂಗಿ ಬಳಸಿ
ಗಝಲೊಂದನ್ನು ರಚಿಸಿ
ಖ್ವಾಜಾ ನಿನ್ನ ಗಲಿಯಲಿ
ಕಾಯುತ್ತಿದ್ದಾನೆ
ಆಶೀಕ್
ಹುಚ್ಚನಂತೆ,
ಎಂದಿಗೂ ಬಾರದವಳಿಗಾಗಿ…
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ