ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಈ 'ಏಕಾಕಿ'ಯಾದ ಸಾಧನೆ ಹೊಸ ಹೊಸ ಭರವಸೆಗಳನ್ನು ಹುಟ್ಟಿಸಿದ್ದು ದಿಟವೇ... ಕೋವಿಡ್-೧೯ ತರುವಾತದ ಜಗತ್ತು, ಅದರ ಜೊತೆಗೆ ಎರವಲು ಬಂದ ಕೊರತೆಗಳು, ಅನಿರ್ದಿಷ್ಟತೆಗಳು ಯಾವುದೇ ಕಲೆಯ ಸೃಷ್ಟಿಗೆ, ಅಭಿವ್ಯಕ್ತಿ ಮಾಧ್ಯಮಗಳ ಕ್ರಿಯಾಶೀಲತೆಗೆ ಯಾವತ್ತೂ ಅಡ್ಡಿಯಾಗಲಾರವು ಅಂಬುದನ್ನು ಈ ಅರ್ಜುನ್ ಸುಬ್ರಮಣ್ಯ ಎಂಬ ಒಬ್ಬ ಪ್ರತಿಭೆ ಸಾರಿ ಸಾರಿ ಹೇಳುತ್ತಿರುವುದು ಬಹು ಮುಖ್ಯ ಅಲ್ಲವೇ.. ?

ಅರ್ಜುನ ಸುಬ್ರಮಣ್ಯ ಎಂಬ ಕ್ರಿಯಾಶೀಲ ಹುಡುಗ ಇದೀಗ ಒಂದು ವಿಶಿಷ್ಟ ಪ್ರಯೋಗದೊಂದಿಗೆ ಸಂಚಲನ ಸೃಷ್ಟಿಸಿದ್ದಾನೆ. ಒಬ್ಬ, ಒಬ್ಬನೇ ಒಬ್ಬ, ಒಂದು ಇಡಿಯ ಸಿನೇಮಾಮಾಡಲು ಸಾಧ್ಯವೇ ಎಂಬ ಪ್ರಶ್ನೆಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟಿದ್ದಾನೆ.. ಒಂದು ಕೆನನ್ (Canon) ೬೦೦ ಡಿ ಹಾಗೂ ವಿವೊ ೧೧ ಪ್ರೊ ಮೊಬೈಲ್ ಬಳಸಿ ಕೇವಲ ಎಂಟು ಸಾವಿರ ರೂಪಾಯಿಗಳಲ್ಲಿ ಒಬ್ಬನೇ ಎಲ್ಲ ವಿಭಾಗಗಳಲ್ಲೂ ತೆಗೆದ ಚಿತ್ರ ‘ಏಕಾಕಿಯಾದ’ ಇಂದು ವಿಶ್ವದಾದ್ಯಂತ ಅಂತರ್ಜಾಲ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.ಅಂದ ಹಾಗೆ, ಈ ಮೇಲಿನ ಬಂಡವಾಳದ ಜತೆಗೆ, ಪ್ರಮುಖವಾಗಿ ಬೇಕಿದ್ದು ಕ್ರಿಯೇಟಿವಿ, ಆತ್ಮ ವಿಶ್ವಾಸ ಮತ್ತು ಶ್ರಮದ ಬೆವರು ಕೂಡ.. ಅಂದ ಹಾಗೆ, ಈ ಮೇಲಿನ ಬಂಡವಾಳದ ಜತೆಗೆ, ಪ್ರಮುಖವಾಗಿ ಬೇಕಿದ್ದು ಕ್ರಿಯೇಟಿವಿ, ಆತ್ಮ ವಿಶ್ವಾಸ ಮತ್ತು ಶ್ರಮದ ಬೆವರು ಕೂಡ.. ಇನ್ನೊಂದ್ ಸ್ಪೆಷಾಲಿಟಿ ಅಂದ್ರೆ, ಈ ಚಿತ್ರ ಗಿನ್ನೆಸ್ ಗೆ ಸೇರ್ಪಡೆಯಾಗುವ ಎಲ್ಲ ಲಕ್ಷಣಗಳನ್ನೂ ಹೊಂದಿದೆ.. ಇನ್ನು, ಅರ್ಜುನ್ ಸುಬ್ರಮಣ್ಯ ಅವರ ಬಗ್ಗೆ ಹಾಗೂ ಹಿನ್ನೆಲೆಯನ್ನು ಸ್ವಲ್ಪ ತಿಳಿಯೋಣ. ಇವರು ಸುಚಿತ್ರ ಫಿಲಂ ಸೊಸೈಟಿ ಯಲ್ಲಿ , ನೀನಾಸಂ ನ ಮಂಜುನಾಥ್ ಬಡಿಗೇರ್ ರ ಶಿಬಿರದಲ್ಲಿ ಪಳಗಿದವರು.. ರವಿಚಂದ್ರನ್ ರ “ಕ್ರೇಜಿ ಸ್ಟಾರ್’ ಚಿತ್ರದ ಕಲಾ ಹಾಗೂ ನಿರ್ದೇಶನ ದಲ್ಲಿ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಇದೆ.ಕ್ರೇಝಿ ಲೋಕ,ಬೀರ್ಬಲ್ ಟ್ರಿಲೋಜಿ , ಡೇವಿಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ ೬ ಶಾರ್ಟ್ ಫಿಲಂಸ್, ಒಂದು ಟೆಲಿ ಫಿಲಂ ಹಾಗೂ ಅನೇಕ ಆಲ್ಬಮ್ ಹಾಗೂ ಜಾಹಿರಾತು ವೀಡಿಯೊ ಗಳಲ್ಲೂ ತಮ್ಮ ಕೈ ಚಳಕವನ್ನು ಪ್ರದರ್ಶಿಸಿದ್ದಾರೆ.

“ಏಕಾಕಿಯಾದ’ ಚಿತ್ರದ ರೂವಾರಿ ಅರ್ಜುನ್ ಸುಬ್ರಮಣ್ಯ

ಈ ‘ಏಕಾಕಿ’ಯಾದ ಸಾಧನೆ ಹೊಸ ಹೊಸ ಭರವಸೆಗಳನ್ನು ಹುಟ್ಟಿಸಿದ್ದು. ಕೋವಿಡ್-೧೯ ತರುವಾತದ ಜಗತ್ತು, ಅದರ ಜೊತೆಗೆ ಎರವಲು ಬಂದ ಕೊರತೆಗಳು, ಅನಿರ್ದಿಷ್ಟತೆಗಳು ಯಾವುದೇ ಕಲೆಯ ಸೃಷ್ಟಿಗೆ, ಅಭಿವ್ಯಕ್ತಿ ಮಾಧ್ಯಮಗಳ ಕ್ರಿಯಾಶೀಲತೆಗೆ ಯಾವತ್ತೂ ಅಡ್ಡಿಯಾಗಲಾರವೋ ಅಂಬುದನ್ನು ಈ ಅರ್ಜುನ್ ಸುಬ್ರಮಣ್ಯ ಎಂಬ ಒಬ್ಬ ಪ್ರತಿಭೆ ಸಾರಿ ಸಾರಿ ಹೇಳುತ್ತಿರುವುದು ಬಹು ಮುಖ್ಯ ಅಲ್ಲವೇ.. ?ಹೀಗೊಂದು ಭರವಸೆದಾಯಕ, ಸ್ಫೂರ್ತಿ ದಾಯಕ, ಅನುರಕರಣೀಯ ಪ್ರಯತ್ನಕ್ಕೆ ಹ್ಯಾಟ್ಸ್ ಆಫ್ ಹೇಳುತ್ತಾ , ಅರ್ಜುನ್ ರಿಗೆ ಅಭಿನಂದನೆ ಹಾಗೂ ಶುಭಾಶಯಗಳನ್ನು ಕೋರುತ್ತಾ ಚಿತ್ರ ನಿಮಗಾಗಿ, ಲಾಕ್ ಡವ್ನ್ ಗೋಡೆಗಳ ಮುರಿದು ಬಂದಿದೆ ‘ಏಕಾಕಿ’ ಯಾಗಿ..!

ಈ ಚಿತ್ರದ ಲಿಂಕ್ ನಮ್ಮ ನಸುಕು.ಕಾಮ್ ನಲ್ಲಿ ಕೂಡ ದೊರೆಯಲಿದೆ. ಇಲ್ಲಿ ಕೆಳಗೆ ಕ್ಲಿಕ್ ಮಾಡಿ..