- ಪತ್ತಂಗಿ ಎಸ್ ಮುರಳಿ ಆಯ್ದ ೧೦ ಚುಟುಕುಗಳು - ಸೆಪ್ಟೆಂಬರ್ 8, 2022
- ಪತ್ತಂಗಿ ಚುಟುಕು - ಜುಲೈ 4, 2021
- ಎರಡು ಚುಟುಕುಗಳು - ಮೇ 15, 2021
ಶ್ರೀ ಪತ್ತಂಗಿ ಎಸ್ ಮುರಳಿ ಅವರು ಕನ್ನಡ ಹನಿಗಾರಿಕೆಯಲ್ಲಿ ಶ್ರದ್ಧೆಯಿಂದ ಕೃಷಿ ಮಾಡುತ್ತಿರುವವರು. ಅವರೇ ಸ್ವತಃ ಆಯ್ದ ಹತ್ತು ಚುಟುಕುಗಳು ನಿಮ್ಮ ಓದಿಗಾಗಿ.
1.ಬಳಕೆ – ಪತ್ತಂಗಿ ಎಸ್. ಮುರಳಿ
ವೈದ್ಯರು
ಚೂರಿ ಹಾಕುವುದು
ಆರೋಗ್ಯದ ವೃದ್ದಿಗೆ
ಹಂತಕನು
ಚೂರಿ ಚುಚ್ಚುವುದು
ಆಯಸ್ಸಿನ ರದ್ದಿಗೆ.
2. ಕ್ರೆಡಿಟ್ಟು – ಸಮುದ್ರವಳ್ಳಿ ವಾಸು
ನನ್ನ ಕವನಗಳಂತೆಯೇ
ನನ್ನಾಕೆಗೂ ಸೇರಲಿ
ಅದರ ಕ್ರೆಡಿಟ್ಟು
ತೆಪ್ಪಗಿಲ್ಲವೇ ಪಾಪ!
ನನ್ನ ಪಾಡಿಗೆ ನನ್ನ
ಸುಮ್ಮನೆ ಬಿಟ್ಟು.
3. ಅವಮಾನ – ಬಿ. ಶೃಂಗೇಶ್ವರ
‘ಅವ’ ಹೋದಮೇಲೂ
ಮಾನ ಉಳಿದಿದ್ದರೆ
ಅದು ವ್ಯಾಕರಣ
‘ಮಾನ’ ಹೋದಮೇಲೂ
‘ಅವ’ ಉಳಿದಿದ್ದರೆ
ಅದು ರಾಜಕಾರಣ!
4. ಪರದೆ – ಕುವರ ಯಲ್ಲಪ್ಪ
ವಿಶ್ವಖ್ಯಾತ ಸಿನಿಮಾಗಳು
ತನ್ನೊಳು ಮೆರೆದಾಡಿದರೂ
ಬೀಗುವುದಿಲ್ಲ ಪರದೆ;
ನವರಸಗಳು ಹರಿದಾಡಿದರೂ
ಮತ್ತೆ ನಿಂತಿತು ಬರಿದೆ.
ಕುವರ ಯಲ್ಲಪ್ಪ
5. ಗಣಪನ ಇಲಿ: – ಡಾ. ಬೆಮೆಲ್ ಸೆಲ್ವಕುಮಾರ್
ಹಿಂದಿನ ಕಾಲದ
ಮೂಷಿಕವೂ ಸಹ
ಗಣಪನಂತೆಯೇ ಅಂತೆ
ಅತಿ ಡೊಳ್ಳು..
ಗಣಪನ ಹೊತ್ತೂ ಹೊತ್ತು
ಈಗಿವೆ ಈಗ, ಕುಳ್ಳು!
ಡಾ. ಬೆಮೆಲ್ ಸೆಲ್ವಕುಮಾರ್
6. ದೃಷ್ಟಿ: – ವಿನೋದ್ ಕುಮಾರ್ ಬಿ.
ಪುಟಾಣಿ ಫ್ರಾಕು
ಚೂಡಿ ದಾರ
ದೊಡ್ಡ ಸೀರೆ
ಎಲ್ಲವೂ ಸಹ
ಮಾಂಸದ ಮೇಲಿನ
ಹೊದಿಕೆಗಳೇ
ಅತ್ಯಾಚಾರಿಯ ಕಣ್ಣಿಗೆ.
7. ತೆರಿಗೆ : ಮಹಾಂತೇಶ್ ಮಾಗನೂರ
ಕಪ್ಪು ಹಣದಿಂದ ಕಟ್ಟುವರು
ನಮ್ಮ ನಾಯಕರು
ಒಂದರ ಮೇಲೊಂದು ಉಪ್ಪರಿಗೆ;
ಬಡಪಾಯಿ ದುಡಿಯುವ ವರ್ಗ
ಬರುವ ಬೆಳ್ಳಗಿನ ಆದಾಯಕ್ಕೆ
ಕಟ್ಟುವರು ತೆರಿಗೆ.
ಮಹಾಂತೇಶ್ ಮಾಗನೂರ
8- ಕಿತಾಪತಿಗಳು : ಕೆ. ಕೆ. ಮಾನಸ
ಮನೆಗಳ ಕಟ್ಟುತ್ತಾರೆ
ಸಾಲ ಸೋಲ ಮಾಡಿ
ಮನಗಳ ಕೆಡವುತ್ತಾರೆ
ಕಿವಿಯೂದಿ ನಾನಾ ಚಾಡಿ.
ಕೆ. ಕೆ. ಮಾನಸ
9. ನುಂಗೋದು: – ಎನ್. ಶೇಖರ್ ಬತ್ತದನದಿ
ಕಲ್ಲಿನ ಬಟ್ಟು
ತೂಕವನ್ನಷ್ಟೇ
ನುಂಗುತ್ತೆ
ಹಲ್ಲಿನ ಸೆಟ್ಟು
ವಯಸ್ಸನ್ನೂ
ನುಂಗುತ್ತೆ.
ಎನ್. ಶೇಖರ್ ಬತ್ತದನದಿ
10. ಗಳಿಕೆ – ಸಮ್ಮೋದ ವಾಡಪ್ಪಿ
ನಿನ್ನೆಯ ಲೆಕ್ಕ ಹಾಕುತ್ತಿದ್ದೆ
ಇಂದು ಕಳೆದುಹೋಗಿತ್ತು
ನಾಳೆ ಎಂಬುದನ್ನು ಕೂಡಿಸಲು
ನಾಳೆ ಇಂದಾಗಿ ಬದಲಾಗಿತ್ತು
ಲೆಕ್ಕ ನಾಳೆ ನಿನ್ನೆಯ ಮಧ್ಯೆ ತಪ್ಪಿತ್ತು
ಇಂದು ಎಂಬುದು ಶೂನ್ಯವಾಗಿತ್ತು.
ಸಮ್ಮೋದ ವಾಡಪ್ಪಿ.
ಹೆಚ್ಚಿನ ಬರಹಗಳಿಗಾಗಿ
ಪ್ರೀತಿ
ಬಾ ವರ್ಷಧಾರೆ…
ಮತ್ತೆ ಮಳೆಯಾಗಿದೆ