ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರಿಯದರ್ಶಿನಿ ಟೆಂಗಳಿ
ಇತ್ತೀಚಿನ ಬರಹಗಳು: ಪ್ರಿಯದರ್ಶಿನಿ ಟೆಂಗಳಿ (ಎಲ್ಲವನ್ನು ಓದಿ)

ಧರೆಗೆ ಬೀಳಲೋ, ಬೇಡವೋ
ಎನ್ನುವ ದ್ವಂದ್ವದಲ್ಲಿ..
ಬಾನಲ್ಲಿ ಹನಿಯೊಂದು ಮೂಡಿದೆ…
ಅಕ್ಷಿಯಿಂದ ಜಾರಿ,
ಜಗತ್ ಜಾಹೀರು ಮಾಡಲೋ ಬೇಡವೋ
ಎನ್ನುವ ಹಿಂಜರಿಕೆಯಲಿ
ಕಣ್ಣಂಚಲಿ ಹನಿಯೊಂದು ಮೂಡಿದೆ
ಈ ಕಣ್ಣಂಚಿನ ಹನಿ,
ಆ ಬಾನಿನ ಮಳೆ ಹನಿಗೆ ಕರೆಮಾಡಿ,
ಬರುವದಾದರೆ ಧುಮ್ಮಿಕ್ಕುವ
ಜಲಪಾತದಂತೆ ರಭಸವಾಗಿ ಬಾ…
ನೀನು ಬಂದಿರುವೆಯೆಂದು ಭಾಸವಾಗುವದು ಇಳೆಗೆ…
ಹಾಗೆಯೇ ನನ್ನ ಕಣ್ಣಂಚಿನಲ್ಲಿರುವ
ಹನಿಗಳೂ ನಿನ್ನೊಂದಿಗೆ
ಸರಾಗವಾಗಿ
ಜಾರಿ ಬಿಡುವವು ಇಳೆಗೆ
ಯಾರಿಗೂ ತಿಳಿಯದಂತೆ !!!
ಎಂದು ಹೇಳಿತಂತೆ…

–0-0-0–

ಸದ್ದಿಲ್ಲದೆ ತಂಗಾಳಿ ಮೆಲ್ಲಗೆ
ಹೆಜ್ಜೆಯ ಹಾಕಿದೆ
ಮೆಲ್ಲುಸಿರ ಹಾಕಿ, ಮಾತೊಂದು
ಅಧರಗಳ ಬಳಿ ಬಂದು ಮೌನವಾಗಿದೆ
ಲಜ್ಜೆಯಿಂದ ಮೋಡವದು
ಅಲ್ಲಲ್ಲಿ ಲ​ಜ್ಜೆಯಿಂದಿಣುಕಿ
ಮಳೆಹನಿಯಾಗುತಿದೆ
ಬಯಕೆಯೊಂದು ಮಿಂಚುಹುಳಗಳಂತೆ
ಸಿಹಿಯಾದ ಸವಾಲೊಂದನು ಎಸೆದಿದೆ
ಮಾಡುವದೇನೀಗ ಹೇಳದೇ
ಮೆಲ್ಲುಸಿರ ಹಾಕಿ, ಮಾತೊಂದು
ಅಧರಗಳ ಬಳಿ ಬಂದು ಮೌನವಾಗಿದೆ…

–0-0-0–