- ನಮ್ಮಲ್ಲೇ ಇಹುದೇ ನಮ್ಮ ಸುಖ! - ಜನವರಿ 28, 2024
- ಅವಳು - ಡಿಸಂಬರ್ 31, 2023
- ಪಯಣ - ಅಕ್ಟೋಬರ್ 17, 2023
ಗೊತ್ತಿಲ್ಲದೇ ನಡೆದಿಹ ಈ ಪ್ರತಿ ನಡಿಗೆಯು
ತಲುಪುವುದೆಲ್ಲಿ ನಾ ಕಾಣೆ
ಒಲವಿನ ಒಡಲಲಿ ಬಂಧಿಯಾಗಿರುವೆ
ಚಳಿಯಲ್ಲೂ ಬೆವರುತ್ತ ಕರಗುತಿರುವೆ…
ಅಂಗೈ ಮೇಲೆ ಆಸರೆ ನೀಡಿದೆ
ಒಂಟಿತನದ ನೋವ ಮರೆಸಿದೆ
ಇನಿಯ ನೀ ಇರಲಾರದೆ
ಅರಿಯೆ ನಾ ಹೇಗಿರುವೆ
ಮನಸ್ಸು ಮತ್ತೆ ವಾಲಿದೆ
ಎನ್ನ ಮಾತು ಕೇಳದೆ…
ಸಮಯವದು ಸಾಗುತಿದೆ ಬಹಳ
ಮೂಡಿರುವ ಮೋಹವದು ಬಹುವಿರಳ..
ಅದರುತಿದೆ ಅಂತಃಕರಣ ಚಿತ್ತವ ತಿಳಿಯಲು
ನಾಚುತಿವೆ ಕಂಗಳು ಮುನ್ನುಡಿಯ ಹೇಳಲು
ನಿನ್ನ ಸ್ಪರ್ಶದ ಸಂಚಲನ
ನಲುಗಿಸಿದೆ ಇನ್ನೂ ನನ್ನನು
ನಿನ್ನ ನುಡಿಗಳ ಸಂಕಲನ
ಪಿಸುಗುಡುತ ರಚಿಸಿದೆ ಕವನ
ನೂತನ ಸೆಳೆತವಿದು ಎನಗೆ
ಏನು ಹೇಳಲಿ ಕೊನೆಗೆ
ನೆಪವಾದೆ ನೀ ನನ್ನ ನಲಿವಿಗೆ
ನೆನೆವಾಗ ಆ ನಿನ್ನ ಕಿರುನಗೆ
ಸಹಚರವಿದು ಸದ್ದಿಲ್ಲದೆ ಸಾಗಲಿ
ಗುನುಗುತ ಹೆಜ್ಜೆ ಹಾಕುತಲಿ…
ಗುರುತುಗಳ ಈ ಪಯಣ
ತಲುಪುವುದೆಲ್ಲಿ ನಾ ಕಾಣೆ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ