ಮುವತ್ತೈದರ ಹರೆಯದ ಪ್ರತಿಭೆ ವಿಶ್ವನಾಥ್ ಬಿ ಮಣ್ಣೆ ಅವರು ನೆಲಮಂಗಲ ತಾಲ್ಲೂಕಿನ ಮಣ್ಣೆ ಗ್ರಾಮದವರು.
ಪಕ್ಷಿವೀಕ್ಷಣೆ, ಪೋಟೋಗ್ರಫಿ, ಕನ್ನಡ ಪುಸ್ತಕಗಳ ಓದು ವಿಶ್ವನಾಥ್ ಅವರ ನೆಚ್ಚಿನ ಹವ್ಯಾಸಗಳು.ಕನ್ನಡದಲ್ಲಿ ಪಕ್ಷಿಗಳನ್ನು ಪರಿಚಯಿಸುವ ಪುಸ್ತಕವೊಂದನ್ನು ಪ್ರಕಟಿಸಬೇಕು ಅನ್ನೋ ಗುರಿ ಇದೆ.ಉಳಿದಂತೆ ಪರಿಸರ, ವನ್ಯಜೀವಿಗಳ ಬಗ್ಗೆ ಅಧ್ಯಯನ ಮಾಡ್ತಿದ್ದಾರೆ. ತಮಗೆ ತಿಳಿದಿರುವಷ್ಟರ ಮಟ್ಟಿಗೆ ಇತರರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ವಿಶ್ವನಾಥ್ ಅವರು ಕಳಿಸಿದ ಅಪರೂಪದ ಚಿತ್ರಗಳು ನಸುಕಿ’ನ ಓದುಗರಿಗಾಗಿ…
ಹತ್ತಿರ ಹತ್ತಿರ ಹೋದಷ್ಟೂ ಪೋಟೋ ಗುಣಮಟ್ಟ ಹೆಚ್ಚು ಇರುತ್ತೆ ಅನ್ನೋದನ್ನು ಗಮನದಲ್ಕಿಟ್ಕೊಂಡು ಹತ್ತಿರ ಹೋಗ್ತಿದ್ದ ನನಗೆ ತನ್ನ ಹರಿತವಾದ ದಂತಪಕ್ತಿ ತೋರಿದ ಶ್ವಾನರಾಯ ಈತ.
ತೋಟದ ಓತಿ, ಒಮ್ಮೆ ವ್ಯಕ್ತಿಯೊಬ್ಬನಿಗೆ ಹೊಂದಿಕೊಂಡು ಬಿಟ್ರೆ ಎಷ್ಟು ಬೇಕಾದ್ರೂ ಪೋಟೋ ತೆಗೆದುಕೊಳ್ಳಬಹುದು ಅಳ್ಳಾಡೋದೇ ಇಲ್ಲ.
ಎಲ್ರೂ ಸೇಬು, ಕಿತ್ತಳೆ, ದ್ರಾಕ್ಷಿಯನ್ನು ವಸ್ತುವನ್ನಾಗಿಟ್ಟು ಹೆಚ್ಚು ಪೋಟೋ ತೆಗಿತಾರೆ, ನಾನು ನಮ್ಮ ತೋಟದ ಹಲಸನ್ನೇ ವಸ್ತುವನ್ನಾಗಿಸಿಕೊಂಡು ಪೋಟೋ ತೆಗೆದಿದ್ದೇನೆ.
ಪುದೀನಾ ಹೂ…
ಪುದೀನಾ ಬೆಳೆದು, ಬಲಿತು ಹೂ ಬಿಟ್ಟಂತಹ ಸಂದರ್ಭದಲ್ಲಿ ತೆಗೆದದ್ದು.ಅಪರೂಪದಲ್ಲಿ ಕೆಲವರನ್ನು ಬಿಟ್ರೆ (ರೈತರನ್ನು) ಬೇರೆಯವರು ಹೆಚ್ಚಾಗಿ ನೋಡಿರಲು ಸಾಧ್ಯವಿಲ್ಲ ಅನ್ನೋದು ನನ್ನ ಭಾವನೆ.
ಮಳ್ಳಿ ಮಳ್ಳಿ ಮಿಂಚುಳ್ಳಿ…ಇದು ಮಿಂಚುಳ್ಳಿಗಳಲ್ಲೇ ಸುಂದರವಾದ ಬಣ್ಣದ ಹಾಗೂ ಅತಿ ಚಿಕ್ಕ ಮಿಂಚುಳ್ಳಿ(small blue kingfisher). ಇದೂ ಹೆಲಿಕಾಪ್ಟರ್ನಂತೆ ನಿಂತಲ್ಲಿಯೇ ರೆಕ್ಕೆ ಬಡಿದುಕೊಂಡು ನಿಂತು ಮೀನು ಬೇಟೆಯಾಡುತ್ತದೆ
ಸಂಬರಕಾಗೆ, ಕೆಂಬೂತ
Greater coucal
ಮಣ್ಣೆ, ಬೆಂಗಳೂರು ಗ್ರಾಮಾಂತರ.
ವಿಶ್ವನಾಥ್ ಅವರ ಫ಼ೇಸ್ಬುಕ್
ಹೆಚ್ಚಿನ ಬರಹಗಳಿಗಾಗಿ
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ
ಕರ್ಪೂರಿ ಠಾಕೂರ್
ಕನ್ನಡ ನಾಟ್ಯ ರಂಗ